341. ಮೋಡದ ಮರೆಯಲ್ಲಿ (1991)


ಮೋಡದ ಮರೆಯಲ್ಲಿ ಚಿತ್ರದ ಹಾಡುಗಳು
  1. ಮನದಲ್ಲಿ ಆಸೆಯೆ ಬೇರೆ ಬದುಕಲ್ಲಿ ನಡೆವುದೆ ಬೇರೆ
  2. ಜೀವ ನೀನು ದೇಹ ನಾನು ನೀನು ದೂರವಾದರೆ ಇರಲಾರೆನು
  3. ಬಾಳು ಉಯ್ಯಾಲೆಯಂತೆ ನಿನ್ನ ಮಾತು ಸಂಗೀತದಂತೆ
  4. ಎಂಥ ಚಿನ್ನದಂಥ ಹುಡುಗ ಅಂತಾರೆ
ಮೋಡದ ಮರೆಯಲ್ಲಿ (೧೯೯೧)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಡಾ.ರಾಜ್‌ಕುಮಾರ್


ಮನದಲ್ಲಿ ಆಸೆಯ ಬೇರೆ ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ ಮುಂದೇನೊ ಕಾಣಲಾರೆ
ಮನದಲ್ಲಿ ಆಸೆಯ ಬೇರೆ ಬದುಕಲ್ಲಿ ನಡೆವುದೆ ಬೇರೆ

ಹೆತ್ತೋಳ ಪ್ರೀತಿ ಕಂಡೆ   ನಿನ್ನ ತಂದೆ ದೇವರೆಂದೆ
ಆನಂದದಲ್ಲೆ ನೀ ತೇಲಿ ಹೋದೆ
ಮಳೆಬಿಲ್ಲ ಅಂದವನ್ನು, ಕಣ್ತುಂಬ ನೋಡುವಾಗ
ಮಿಂಚೊಂದು ಬಂದು, ಕಣ್ಣು ಕುಕ್ಕಿದಂತೆ
ಬಾಳೆಲ್ಲ ಇರುಳಾಯ್ತೆ ಕಣ್ಣೀರೆ ಗತಿಯಾಯ್ತೆ...
ಮನದಲ್ಲಿ ಆಸೆಯ ಬೇರೆ  ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ  ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ  ಮುಂದೇನೊ ಕಾಣಲಾರೆ
ಮನದಲ್ಲಿ ಆಸೆಯ ಬೇರೆ  ಬದುಕಲ್ಲಿ ನಡೆವುದೆ ಬೇರೆ

ಒಣ ಹುಲ್ಲ ರಾಶಿಮೇಲೆ  ಕಿಡಿಯೊಂದು ಹಾರಿದಾಗ
ಸುಳಿಗಾಳಿ ಬೀಸಿ ಜ್ವಾಲೆ ಮೂಡಿದಂತೆ
ನಸುಗೋಪ ಕಾಣಿಸಿಕೊಂಡು, ಕಡು ರೋಷವಾಯಿತೆ
ಅಪರಾಧಿಯಾಗಿ, ನೋಡುವಂತೆ ಮಾಡಿತೆ
ನಿನ್ನೋರೆ ನಿನ್ನಿಂದ ದೂರಾಗಿ ನಿಂತಾಯ್ತೆ
ಮನದಲ್ಲಿ ಆಸೆಯ ಬೇರೆ  ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ  ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ  ಮುಂದೇನೊ ಕಾಣಲಾರೆ
ಮನದಲ್ಲಿ ಆಸೆಯ ಬೇರೆ ಬದುಕಲ್ಲಿ ನಡೆವುದ ಬೇರೆ
--------------------------------------------------------------------------------------------------------------------

ಮೋಡದ ಮರೆಯಲ್ಲಿ (೧೯೯೧)  - ಜೀವ ನೀನು ದೇಹ ನಾನು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಾಲು ಮತ್ತು ಮಂಜುಳಾ ಗುರುರಾಜ್


ಹೆಣ್ಣು : ಜೀವ ನೀನು ದೇಹ ನಾನು ನೀನು ದೂರವಾದರೆ ಇರಲಾರೆನು
        ಜೀವ ನೀನು ದೇಹ ನಾನು   ನೀನು ದೂರವಾದರೆ ಇರಲಾರೆನು
        ನಿನ್ನ ಮನವ ಬಲ್ಲೆನು ನಿನ್ನ ಒಲವ ಬಲ್ಲೆನು ಎಂದಿಗೂ ನಿನ್ನಲ್ಲೇ ಬೆರೆತೆನು
        ಜೀವ ನೀನು ದೇಹ ನಾನು ನೀನು ದೂರವಾದರೆ ಇರಲಾರೆನು

ಹೆಣ್ಣು : ಮೋಡ ತೇಲಿ ಬಂದಾಗ ಆ ಸೂರ್ಯನೆ ಕ್ಷಣಕಾಲ ಮರೆಯಲಿ ಮಂಕಾಗನೆ
          ಮೋಡ ತೇಲಿ ಬಂದಾಗ ಆ ಸೂರ್ಯನೆ ಕ್ಷಣಕಾಲ ಮರೆಯಲಿ ಮಂಕಾಗನೆ
          ಗಾಳಿ ಬೀಸಿ ಬಂದಾಗ ಈ ತಣ್ಣನೆ,  ಧೂಳು ಸೋಕಿ ಬಾರದೆ ಆ ವೇದನೆ
         ಇನ್ನು ಏಕೆ ಯಾತನೆ ಹೇಳು ನೀನೇ ಈ ಮೌನ ನಾ ತಾಳೆನೇ
         ಜೀವ ನೀನು ದೇಹ ನಾನು  ನೀನು ದೂರವಾದರೆ ಇರಲಾರೆನು
ಗಂಡು : ನಿನ್ನ ಮನವ ಬಲ್ಲೆನು ನಿನ್ನ ಒಲವ ಬಲ್ಲೆನು ಎಂದಿಗೋ ನಿನ್ನಲ್ಲೇ ಬೆರೆತೆನು
         ಜೀವ ನೀನು ದೇಹ ನಾನು  ನೀನು ದೂರವಾದರೆ ಇರಲಾರೆನು

ಗಂಡು : ನಲ್ಲೆ ನಿನ್ನ ಮಾತೆಲ್ಲ ಸಂಗೀತವೇ ನೀನು ಜೊತೆಯಲ್ಲಿದ್ದರೆ ಸಂತೋಷವೇ
            ನಲ್ಲೆ ನಿನ್ನ ಮಾತೆಲ್ಲ ಸಂಗೀತವೇ  ನೀನು ಜೊತೆಯಲ್ಲಿದ್ದರೆ ಸಂತೋಷವೇ
ಹೆಣ್ಣು :  ನಂ ತಂ ನನ ನಂ ತಂ ನನ ನಂ ತಂ ನನ
ಗಂಡು: : ಆಆಆಆಆ...........ನಂ ತಂ ನನ ನಂ ತಂ ನನ ನಂ ತಂ ನನ
ಹೆಣ್ಣು :  ಆಆಆಆಆ.........           
ಇಬ್ಬರು :  ಆಆಆಆಆ...........
ಗಂಡು :  ತೇಲಿ ಹೋಗಿ ಕಾರ್ಮೋಡ ದೂರಾಯಿತು  ರವಿಯ ಕಾಂತಿ ಎಲ್ಲಡೆ ಚೆಲ್ಲಾಡಿತು
             ಜೇನಿನಂಥ ಮಾತಿಗೇ ಸೋತೆ ನಾನು ಚಿಂತೆ ದೂರವಾಯಿತು ಇನ್ನೂ
            ಜೀವ ನೀನು ದೇಹ ನಾನು
ಹೆಣ್ಣು : ನೀನು ದೂರವಾದರೆ ಇರಲಾರೆನು
ಗಂಡು : ನಿನ್ನ ಮನವ ಬಲ್ಲೆನು
ಹೆಣ್ಣು : ನಿನ್ನ ಒಲವ ಬಲ್ಲೆನು
ಇಬ್ಬರು : ಎಂದಿಗೂ ನಿನ್ನಲ್ಲೇ ಬೆರೆತೆನು
           ಜೀವ ನೀನು ದೇಹ ನಾನು ನೀನು ದೂರವಾದರೆ ಇರಲಾರೆನು
-----------------------------------------------------------------------------------------------------------------------

ಮೋಡದ ಮರೆಯಲ್ಲಿ (೧೯೯೧) - ಬಾಳು ಉಯ್ಯಾಲೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಾಲು ಮತ್ತು ಮಂಜುಳಾ ಗುರುರಾಜ್


ಗ : ಬಾಳು ಉಯ್ಯಾಲೆಯಂತೆ ಇನ್ನೂ ಮಾತು ಸಂಗೀತದಂತೆ
      ಮಾಮರ ತೂಗಿದೆ ಕೋಗಿಲೆ ಹಾಡಿದೆ ಹೀತ ತುಂಬಿದೆ ನಮಗೆ ಶುಭ ಕೋರಿ
ಹೆ  : ಬಾಳು ಉಯ್ಯಾಲೆಯಂತೆ ಇನ್ನೂ ಮಾತು ಸಂಗೀತದಂತೆ
      ಮಾಮರ ತೂಗಿದೆ ಕೋಗಿಲೆ ಹಾಡಿದೆ ಹೀತ ತುಂಬಿದೆ ನಮಗೆ ಶುಭ ಕೋರಿ
ಗ : ಬಾಳು ಉಯ್ಯಾಲೆಯಂತೆ ಇನ್ನೂ ಮಾತು ಸಂಗೀತದಂತೆ

ಗ : ಚೆಲುವಾದ ನಿನ್ನ ಈ ಕಣ್ಣು ನನ್ನ  ಕವಿಯಾಗಿ ಮಾಡಿದೆ ಪ್ರೇಮಲೋಕ ತೋರಿದೆ
     ಆಸೆ ನನ್ನ ಕಾಡಿದೆ ಮೋಹ ಮನವ ತುಂಬಿದೆ
     ಆಹಾ..  ಹಾಹಹಾ .. (ಆಆಆ) ಲಲ್ಲಲಲ್ಲಲಲ್ಲ (ಲಾಲಾಲಲಲ)
ಹೆ : ಸವಿಯಾದ ನಿನ್ನ ಈ ಮಾತು ಚೆನ್ನ ಹೇಳಲಾರದ ಬಯಕೆ ಎದೆಯಲ್ಲಿ ತಂದಿದೆ
     ಒಲವಿನ ಆಟ ಆಡು ಬಾ ಎಂದು ನಮ್ಮ ಕೂಗಿದೆ
ಹೆ  : ಬಾಳು ಉಯ್ಯಾಲೆಯಂತೆ ಇನ್ನೂ ಮಾತು ಸಂಗೀತದಂತೆ
ಗ : ಮಾಮರ ತೂಗಿದೆ ಕೋಗಿಲೆ ಹಾಡಿದೆ ಹೀತ ತುಂಬಿದೆ ನಮಗೆ ಶುಭ ಕೋರಿದೆ 
ಹೆ : ಬಾಳು ಉಯ್ಯಾಲೆಯಂತೆ ಇನ್ನೂ ಮಾತು ಸಂಗೀತದಂತೆ

ಕೋರಸ್ : ಲಲ್ಲಲಲ್ಲಲಲ್ಲ ಲಾಲಾಲಲಲ ಲಲ್ಲಲಲ್ಲಲಲ್ಲ ಲಾಲಾಲಲಲ
ಹೆ :  ಹೊಸದೊಂದು ಬೇಕು ಹೀತವಾಗಬೇಕು ಸುಖವನ್ನು ನೋಡಲು ಕನಸನು ಕಾಣಲು
      ಬೇಗ ಬಳಿಗೆ ಬಾರೆಯ ಹೇಳಬೇಕು ಓ ಗೆಳೆಯಾ
ಕೋರಸ್ :  ಲಲ್ಲಲಲ್ಲಲಲ್ಲ ಲಾಲಾ ಲ ಲ ಲ
ಗ :  ನೀ ಏನೇ ಹೇಳು ನೀ ಏನೇ ಕೇಳು ನನ್ನದೆಂಬುದೇನಿದೆ ಗೆಳತೀ  ಎಲ್ಲ ನಿನ್ನದೇ
       ಎಂದು ನಾನು ನಿನ್ನೊನೆ ಬದುಕು ಹಾಲು ಜೇನೇ
ಗ   : ಬಾಳು ಉಯ್ಯಾಲೆಯಂತೆ ಇನ್ನೂ ಮಾತು ಸಂಗೀತದಂತೆ
ಹೆ  : ಮಾಮರ ತೂಗಿದೆ (ಆಆ) ಕೋಗಿಲೆ ಹಾಡಿದೆ (ಆಆ) ಹೀತ ತುಂಬಿದೆ (ಆಆ) ನಮಗೆ ಶುಭ ಕೋರಿದೇ (ಆಆ)
        ಬಾಳು ಉಯ್ಯಾಲೆಯಂತೆ (ಆಆ) ಇನ್ನೂ ಮಾತು ಸಂಗೀತದಂತೆ (ಆಆ)
ಗ :    ಮಾಮರ ತೂಗಿದೆ (ಆಆ) ಕೋಗಿಲೆ ಹಾಡಿದೆ (ಆಆ) ಹೀತ ತುಂಬಿದೆ (ಆಆ) ನಮಗೆ ಶುಭ ಕೋರಿ (ಆಆ)
        ಬಾಳು ಉಯ್ಯಾಲೆಯಂತೆ (ಆಆ) ನಿನ್ನ ಮಾತು ಸಂಗೀತದಂತೆ (ಆಆ)
ಇಬ್ಬರು: ಬಾಳು ಉಯ್ಯಾಲೆಯಂತೆ (ಆಆ) ನಿನ್ನ ಮಾತು ಸಂಗೀತದಂತೆ (ಆಆ)
-------------------------------------------------------------------------------------------------------------------------

ಮೋಡದ ಮರೆಯಲ್ಲಿ (೧೯೯೧)  - ಎಂಥ ಚಿನ್ನದಂಥ ಹುಡುಗ ಅಂತಾರೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಶಿವರಾಜ್‌ಕುಮಾರ್, ಕೋರಸ್

ಗಂಡು : ಎಂಥ ಚಿನ್ನದಂಥ ಹುಡುಗ ಅಂತಾರೆ
            ಆಹಾ... ಎಂಥ ಚಿನ್ನದಂಥ ಹುಡುಗ ಅಂತಾರೆ ನನ್ನನೂ ಕಂಡಾಗ ಎಲ್ಲ ನನ್ನ ಕೂಗೋರೇ
ಕೋರಸ್ :  ಎಂಥ ಚಿನ್ನದಂಥ ಹುಡುಗ ಅಂತಾರೆ
                ಆಹಾ... ಎಂಥ ಚಿನ್ನದಂಥ ಹುಡುಗ ಅಂತಾರೆ ನಿನ್ನನೂ ಕಂಡಾಗ ಎಲ್ಲ ನಿನ್ನ ಕೂಗೋರೇ

ಕೋರಸ್ :  ಜಂಕನಕರ್ ಜಂಕನಕರ್ ಜಂಕನಕರ್ ಡಿಕೋ ಡಿಕೋ
                ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ಅಯ್ಯಾ ಅಯ್ಯಾ
ಗಂಡು : ತುಂಟನಾದರೇನು (ಆಆಆ) ನಾ ಹಾಡಿ ನಲಿದರೇನು
           ಆಹ್ಹಾ.. ತುಂಟನಾದರೇನು ನಾ ಹಾಡಿ ನಲಿದರೇನು ಕೇಡನ್ನೂ ಎಂದೂ ಮಾಡೆನು
          ಎಲ್ಲರಲಿ ಬೆರೆಯುವೆನು ಎಲ್ಲರನ್ನೂ ನಗಿಸುವನು ರೋಷವನು ನಾ ಕಾಣೆನು

ಗಂಡು : ಮನಸು ಬಂದರೇನು ನಾ ಕನಸು ಕಂಡರೇನು ದಿನವೆಲ್ಲ ನಾಳೆಯನು
            ನನ್ನವರ ನೋಡಿದರೆ ಸ್ನೇಹದಲ್ಲಿ ಸೇರಿದರೆ ಬೇಸರವ ನಾ ತುಂಬೆನು
            ಆಹಾಹಾ ಸರಸ ತರುತ ಹರುಷ ಕೊಡುವೆನು
ಕೋರಸ್ :  ಎಂಥ ಚಿನ್ನದಂಥ
ಗಂಡು : ಆಹಾ.. ಎಂಥ ಚಿನ್ನದಂಥ ಹುಡುಗ ಅಂತಾರೆ ನನ್ನನೂ ಕಂಡಾಗ ಎಲ್ಲ ನನ್ನ ಕೂಗೋರೇ.. ಯಾಹೂ... 

ಗಂಡು : ಬಾನ ಕಡೆಗೆ ಹಾರಿ (ಒಹೋಹೋಹೋ) ಆ ಮುಗಿಲ ಮೇಲೆ ತೇಲಿ ...
            ಬಾನ ಕಡೆಗೆ ಹಾರಿ ಆ ಮುಗಿಲ ಮೇಲೆ ತೇಲಿ ದಿನವೆಲ್ಲ ಸಂತಸದಲಿ
            ಆಟಗಳ ಆಡುತಲಿ ನೋಟಗಳ ನೋಡುತಲಿ ಕುಣಿದಾಡೋ ವಯಸ್ಸು ನನ್ನದೂ
ಕೋರಸ್ : ಓಹೋಹೋ.. ಓಹೋಹೋ... ಓಓಓಓಓ ...
ಗಂಡು : ಮೈಯ್ಯಲೊಂದು ಮಿಂಚು  ಈ ಕಣ್ಣಲೇನೋ ಸಂಚು  ಜೊತೆಗಾಗಿ ನಾ ಕಾಯುವೇ
            ಯೌವ್ವನವು ತುಂಬುತಿರೇ ಆಸೆಗಳು ಹೊಮ್ಮುತ್ತಿರೇ ಹಿತವನ್ನು ನಾ ಹುಡುಕುವೇ 
            ಒಹ್ಹೋಹೋ ನೆನಪಿನಲ್ಲೇ ಸುಖವ ಪಡೆವೆನು
           ಎಂಥ ಚಿನ್ನದಂಥ ಹುಡುಗ ಅಂತಾರೆ
ಕೋರಸ್ : ಆಹಾ.. ಎಂಥ ಚಿನ್ನದಂಥ ಹುಡುಗ ಅಂತಾರೆ ನಿನ್ನನೂ ಕಂಡಾಗ ಎಲ್ಲ ನಿನ್ನ ಕೂಗೋರೇ
           ಲಲಾ ಲಲಾ ಲ್ಲಲ್ಲಲ್ಲ ಲಲಾ ಲಲಾ ಲ್ಲಲ್ಲಲ್ಲ ಲಲಾ ಲಲಾ ಲ್ಲಲ್ಲಲ್ಲ ಲಲಾ ಲಲಾ ಲ್ಲಲ್ಲಲ್ಲ
--------------------------------------------------------------------------------------------------------------------------

No comments:

Post a Comment