343. ಸಾಕು ಮಗಳು (1963)



ಸಾಕು ಮಗಳು ಚಿತ್ರದ ಹಾಡುಗಳು 
  1. ಕೇಳಿದ ಮಾತೇ ಕೇಳಿ 
  2. ಒಂದೇ ಒಂದು ಹೊಸ ಹಾಡು 
  3. ಜೀವನ ರಾಗ 
  4. ಬಾ ಬೇಗ ಮನಮೋಹನ 
  5. ನಾನು ಅಂಧಳಾದೇ 
  6. ಎಲ್ಲಿ ಹೊಂಬೆಳಕೆಲ್ಲಿ 
  7. ನಾನು ಅಂಧಳಾದೆ (ಪಿ.ಲೀಲಾ )

ಸಾಕು ಮಗಳು (1963)
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ  ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಜಾನಕಿ, ಘಂಟಸಾಲ


ಹೆಣ್ಣು : ಜೀವನ ರಾಗ ಈ ಅನುರಾಗ  ಮಧುರಾನಂದವಿದೆ
          ಬಾಳಿನ ಸ್ವರ್ಗವಿದೆ ಬಾಳಿನ ಸ್ವರ್ಗವಿದೆ
ಗಂಡು : ಹೂಂ ಹೂಂ ಹೂಂ ಹೂಂ
ಹೆಣ್ಣು : ಜೀವನ ರಾಗ ಈ ಅನುರಾಗ  ಮಧುರಾನಂದವಿದೆ
           ಬಾಳಿನ ಸ್ವರ್ಗವಿದೆ

ಹೆಣ್ಣು : ಹೃದಯಗಳಲ್ಲಿ ಸ್ವಪ್ನವಿದೆ (ಹೂಂ ಹೂಂ)  ಲೋಕದೆ ಎಂದೂ ಸತ್ಯವಿದೆ
          ಹೃದಯಗಳಲ್ಲಿ ಸ್ವಪ್ನವಿದೆ  ಲೋಕದೆ ಎಂದೂ ಸತ್ಯವಿದೆ
          ಸೌಖ್ಯವಿದೆ ಸಂತಸದೆ  ಅಮೃತ ಶಾಂತಿ ಇದೆ
          ಅಮೃತ ಶಾಂತಿ ಇದೆ (ಹೂಂ ಹೂಂ )
           ಜೀವನ ರಾಗ ಈ ಅನುರಾಗ ಮಧುರಾನಂದವಿದೆ
           ಬಾಳಿನ ಸ್ವರ್ಗವಿದೆ

ಹೆಣ್ಣು : ಕಿರುನಗು ಚಿಮ್ಮಲಿ ಚೆಂದುಟಿಯ  ಮುದ್ದು ಮಾತಿನ ಆರತಿಯ
          ಕಿರುನಗು ಚಿಮ್ಮಲಿ ಚೆಂದುಟಿಯ  ಮುದ್ದು ಮಾತಿನ ಆರತಿಯ
          ಕೋರಿಕೆಯೊ ಕಾಣಿಕೆಯೊ ಕೋರಿಕೆಯೊ ಕಾಣಿಕೆಯೊ
           ಪ್ರೇಮದ ಗೀತೆಗಳು ಪ್ರೇಮದ ಗೀತೆಗಳು (ಹೂಂ ಹೂಂ)
          ಜೀವನ ರಾಗ ಈ ಅನುರಾಗ ಮಧುರಾನಂದವಿದೆ
          ಬಾಳಿನ ಸ್ವರ್ಗವಿದೆ  ಬಾಳಿನ ಸ್ವರ್ಗವಿದೆ
          (ಹೂಂ ಹೂಂ) ಹೂಂ (ಹೂಂ ಹೂಂ) ಹೂಂ (ಹೂಂ ಹೂಂ)
------------------------------------------------------------------------------------------------------------------------

ಸಾಕು ಮಗಳು (1963) - ಒಂದೇ ಒಂದು ಹೊಸ ಹಾಡು

ಚಿತ್ರಗೀತೆ : ಕಣಗಾಲ್ ಪ್ರಭಾಕರ ಶಾಸ್ತ್ರಿ  ಸಂಗೀತ: ಟಿ ಜಿ ಲಿಂಗಪ್ಪ  ಗಾಯನ: ಎಸ್ ಜಾನಕಿ, ಪಿ.ಬಿ.ಎಸ್


ಆಹಾ..ಒಹೋ..ಹೂಂಹೂಂ   (ಆಹಾ..ಒಹೋ..ಹೂಂಹೂಂ  )
ಆಹಾ..ಒಹೋ.. ಹೂಂಹೂಂ (ಆಹಾ..ಒಹೋ..ಹೂಂಹೂಂ  )
ಗಂಡು :ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು
ಹೆಣ್ಣು : ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು
ಗಂಡು : ಹೃದಯ ವೀಣೆ             ಹೆಣ್ಣು : ನುಡಿಸಿ ಹಾಡೊ
ಇಬ್ಬರು : ಮಧುರ ಸ್ನೇಹದ ಹೊಸ ಹಾಡು
             ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು

ಹೆಣ್ಣು : ಕಣ್ಣು ಕಣ್ಣು ಕರೆದಂತೆ ಮಾತು ಮನಸು ಬೆರೆತಂತೆ (ಆಹಾ..ಒಹೋ..ಹೂಂಹೂಂ)
           ಕಣ್ಣು ಕಣ್ಣು ಕರೆದಂತೆ ಮಾತು ಮನಸು ಬೆರೆತಂತೆ
ಗಂಡು : ತುಂಗ ಭದ್ರ ಸಂಗಮದಂತೆ,
           ತುಂಗ ಭದ್ರ ಸಂಗಮದಂತೆ ನಾನು ನೀನು ಕಲೆತಂತೆ 
          ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು

ಗಂಡು :  ಒಲವೆ ನಮ್ಮ ಒಲಿದಂತೆ ಕಲ್ಲು ಕಥೆಯ ಉಳಿದಂತೆ (ಆಹಾ..ಒಹೋ..ಹೂಂಹೂಂ)
            ಒಲವೆ ನಮ್ಮ ಒಲಿದಂತೆ ಕಲ್ಲು ಕಥೆಯ ಉಳಿದಂತೆ
ಹೆಣ್ಣು :  ಹಾಲಾಹಲವೆ ಹಾಲಾದಂತೆ
           ಹಾಲಾಹಲವೆ ಹಾಲಾದಂತೆ ನೆಲವೇ ನಮ್ಮ ಕಂಡಂತೆ
ಇಬ್ಬರು : ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು
             ಹೃದಯ ವೀಣೆ ನುಡಿಸಿ ಹಾಡೊ
              ಮಧುರ ಸ್ನೇಹದ ಹೊಸ ಹಾಡು
             ಒಂದೇ ಒಂದು ಹೊಸ ಹಾಡು ಎಂದೂ ಮರೆಯದ ಈ ಹಾಡು
--------------------------------------------------------------------------------------------------------------------------

ಸಾಕು ಮಗಳು (1963)
ಸಂಗೀತ: ಟಿ.ಜಿ.ಲಿಂಗಪ್ಪ  ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ  ಹಾಡಿದವರು: ಘಂಟಸಾಲ, ಕೋರಸ್ 

ಗಂಡು : ಕೇಳಿದ ಮಾತೇ ಕೇಳಿ ಇದು ಕೇಳಿದ ಮಾತೇ ಕೇಳಿ
            ಅರೇ .. ಆದರೂ ಹೇಳುವೇ ಕೇಳೀ...
ಕೋರಸ್ : ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
               ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಗಂಡು : ಕೇಳಿದ ಮಾತೇ ಕೇಳಿ ಇದು ಕೇಳಿದ ಮಾತೇ ಕೇಳಿ
           ಅರೇ.. ಆದರೂ ಹೇಳುವೇ ಕೇಳೀ...
ಕೋರಸ್ : ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
               ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ

ಗಂಡು : ದುಬಾರಿ ವೆಚ್ಚದ ಜೋಬಲಿ ತಾನೇ
            ದುಡ್ಡಿನ ಝಣ ಝಣ ಜಮಾವಣೆ....
ಕೊರಸ : ಇದು ಹೌದು ಅಣ್ಣಾ ಕನ್ನಡ ಜಾಣ
ಗಂಡು : ಅಲ್ಲಾ ಅಂದೋನೆ ಎಮ್ಮೆ ಕೋಣ..
           ದುಬಾರಿ ವೆಚ್ಚದ ಜೋಬಲಿ ತಾನೇ
           ದುಡ್ಡಿನ ಝಣ ಝಣ ಜಮಾವಣೆ....
           ಸೇದೋ ಭಾವಿ ಬಳಿಸಲು ತಾನೇ
           ಚಿನ್ನದಿ ಉಕ್ಕುವ ಜಲ ಸೋನೇ
           ಕೇಳಿದ ಮಾತೇ ಕೇಳಿ ಇದು ಕೇಳಿದ ಮಾತೇ ಕೇಳಿ
           ಅರೇ .. ಆದರೂ ಹೇಳುವೇ ಕೇಳೀ...
ಕೋರಸ್ : ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
              ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ

ಗಂಡು : ಸಿಕ್ಕೋ ತನಕ ತರಬೇಕು ಬಡಬಗ್ಗರಿಗೆ ಕೊಡಬೇಕು
           ಸಿಕ್ಕೋ ತನಕ ತರಬೇಕು ಬಡಬಗ್ಗರಿಗೆ ಕೊಡಬೇಕು
          ನನ್ನದೆಂಬುದು ಎಂದಿಗೂನಾಸ್ತಿ
          ಗುಟ್ಕಾ ಯಸ್ವಾಹ್ ಸ್ಥಿರ ಆಸ್ತಿ
ಗಂಡು : ಕೇಳಿದ ಮಾತೇ ಕೇಳಿ ಇದು ಕೇಳಿದ ಮಾತೇ ಕೇಳಿ
            ಅರೇ .. ಆದರೂ ಹೇಳುವೇ ಕೇಳೀ...
ಕೋರಸ್ : ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
              ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ

ಗಂಡು : ಹಲವು ಮಾದರಿ ಹೆಣ್ಣು ಬೊಂಬೆಗಳ 
            ಹಲವು ಮಾದರಿ ಹೆಣ್ಣು ಬೊಂಬೆಗಳ ಆ.. ಬ್ರಹ್ಮಯ್ಯ ಸೃಷ್ಟಿಸಿದ
ಕೋರಸ್ : ಬಲ್ ಭಲೇ ಬೋಂಬೆಗಳ ಸೃಷ್ಟಿಸಿದ
ಗಂಡು : ಪೌಡರ್ ಲಿಪಸ್ಟಿಕ್ ಹಚ್ಚೋ ನಿಮಿಷ... ಹೊಯ್
            ಪೌಡರ್ ಲಿಪಸ್ಟಿಕ್ ಹಚ್ಚೋ ನಿಮಿಷ
           ಏನೋ ಅರ್ಜೆಂಟ್ ಮೈಮರೆನ್
ಗಂಡು : ಕೇಳಿದ ಮಾತೇ ಕೇಳಿ ಇದು ಕೇಳಿದ ಮಾತೇ ಕೇಳಿ
            ಅರೇ .. ಆದರೂ ಹೇಳುವೇ ಕೇಳೀ...
ಕೋರಸ್ : ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
               ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಗಂಡು : ಕೇಳಿದ ಮಾತೇ ಕೇಳಿ ಇದು ಕೇಳಿದ ಮಾತೇ ಕೇಳಿ
            ಅರೇ .. ಆದರೂ ಹೇಳುವೇ ಕೇಳೀ...
ಕೋರಸ್ : ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
              ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
--------------------------------------------------------------------------------------------------------------------------

ಸಾಕು ಮಗಳು (1963)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಪಿ.ಲೀಲಾ


ಬಾ ಬೇಗ ಮನಮೋಹನ
ಬಾ ಬೇಗ ಮನಮೋಹನ ಸ್ವಾಮಿ
ಬಾ ಬೇಗ ಮನಮೋಹನ... ಸ್ವಾಮಿ
ಬಾ ಬೇಗ ಮನಮೋಹನ
ತುಂಬು ಹುಣ್ಣಿಮೆಯಂತೇ ದುಂಬಿ ಹಂಬಲದಂತೆ
ಬಾ ಬೇಗ ಮನಮೋಹನ

ಕಾಮಿನಿಯ ಕೈಪಿಡಿದು ಮೋಹದನ ನಗೆ ಬೀರಿ...
ಕಾಮಿನಿಯ ಕೈಪಿಡಿದು ಮೋಹದ ನಗೆ ಬೀರಿ...
ಆಡಿದ ಮಾತು ಏನಾಯಿತೊ...
ಮೈಮರೆತು ಶೃಂಗಾರ ಕಥೆಯಾಯಿತೊ
ಮೈಮರೆತು ಶೃಂಗಾರ ಕಥೆಯಾಯಿತೊ
ರಮಣಿಯೊಡನೆ ಒಲಿದವೇಳೆ ಮರೆಯದೇ
ಸುಮದ ಮೇಲೆ ಅನಲ ತಾರೆ ಸುರಿಯಲಿ
ಬಾ ಬೇಗ ಮನಮೋಹನ

ತಿಂಗಳ ಬೆಳಕೆಲ್ಲಾ ಬೇಸಿಗೆ ಬಿಸಿಲಾಯ್ತು
ತಣ್ಣನೆ ಗಾಳಿ ಬಿಸಿಯಾಯ್ತು...
ತಿಂಗಳ ಬೆಳಕೆಲ್ಲಾ ಬೇಸಿಗೆ ಬಿಸಿಲಾಯ್ತು
ತಣ್ಣನೆ ಗಾಳಿ ಬಿಸಿಯಾಯ್ತು...
ಮದನನು ಇದ ನೋಡಿ ಹೃದಯದ ಒಡನಾಡಿ
ಮದನನು ಇದ ನೋಡಿ ಹೃದಯದ ಒಡನಾಡಿ
ಮೊದಲೇ ಬಾಡಿದ ಹೂವಾಯಿತೇ
ಚಿನ್ನಾಣೆ ಈ ಬಾಧೇ ನಾ ತಾಳೇನು
ಚಿನ್ನಾಣೆ ಈ ಬಾಧೇ ನಾ ತಾಳೇನು
ರಮಣಿಯೊಡನೆ ಒಲಿದವೇಳೆ ಮರೆಯದೇ
ಸುಮದ ಮೇಲೆ ಅನಲ ತಾರೆ ಸುರಿಯಲಿ
ಬಾ ಬೇಗ ಮನಮೋಹನ
ತುಂಬು ಹುಣ್ಣಿಮೆಯಂತೇ ದುಂಬಿ ಹಂಬಲದಂತೆ
ಬಾ ಬೇಗ ಮನಮೋಹನ ಸ್ವಾಮಿ
ಬಾ ಬೇಗ ಮನಮೋಹನ
ಸಸಸ ಸ ಪದನಿ ಸ ದನಿಪಮ ಪದನಿ ಮಪದರಿ
ನಿದನಿ ಪದ ಮಪದ ನಿಸಗನಿಸರಿ ನಿಗಪಮ ಮಗರಿಸ ಸನಿದಪ ಗರಿಸ ಸರಿ
ಗಗನಿ ಗಗನಿ ದರನಿ ಪದನಿಸ ಮಮಪ ಮಮಪ ಗಗಮ ರಿಸ ಪಪದನಿ
ರಿರಿರಿ ಸಸನಿರಿ
--------------------------------------------------------------------------------------------------------------------------

ಸಾಕು ಮಗಳು (1963)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಪಿ.ಸುಶೀಲಾ


ನಾನು ಅಂಧಳಾದೇ ನೀನು ಮೂಗನಾದೇ
ಬದುಕೆಲ್ಲಾ ಬೇವಾದ ಬೆಲ್ಲಾದಾ ಹಾಗೇ... ಬೆಲ್ಲಾದಾ ಹಾಗೇ
ನಾನು ಅಂಧಳಾದೇ ನೀನು ಮೂಗನಾದೇ
ಬದುಕೆಲ್ಲಾ ಬೇವಾದ ಬೆಲ್ಲಾದಾ ಹಾಗೇ... ಬೆಲ್ಲಾದಾ ಹಾಗೇ
ಕಣ್ಣಿಗೆ ಕಣ್ಣಾದ ಸ್ವಾಮಿಯು ನೀ ತಾನೇ
ಬೆನ್ನಿಗೆ ಬೆನ್ನಾದ ಸಾಕ್ಷಿಯು ನೀ ತಾನೇ
ಕಣ್ಣಿಗೆ ಕಣ್ಣಾದ ಸ್ವಾಮಿಯು ನೀ ತಾನೇ
ಬೆನ್ನಿಗೆ ಬೆನ್ನಾದ ಸಾಕ್ಷಿಯು ನೀ ತಾನೇ
ನೀ ನಡೆದಾಡೋ ಜಾಡನು ತಿಳಿದು ನಡೆವೇ ನಾನು
ನೀ ನಡೆದಾಡೋ ಜಾಡನು ತಿಳಿದು ನಡೆವೇ ನಾನು
ನಿನ್ನಡಿಗಳ ಹೂವಾಗಿ ಬದುಕಿ ಬಾಳ್ವೆ ನಾನು..
ಬದುಕಿ ಬಾಳ್ವೆ ನಾನು
-------------------------------------------------------------------------------------------------------------------------

ಸಾಕು ಮಗಳು (1963)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಪಿ.ಸುಶೀಲಾ, ಟಿ.ಜಿ.ಲಿಂಗಪ್ಪ


ಹೆಣ್ಣು : ನಾನು ಅಂಧಳಾದೇ ನೀನು ಮೂಗನಾದೇ
          ಬದುಕೆಲ್ಲಾ ಬೇವಾದ ಬೆಲ್ಲಾದಾ ಹಾಗೇ... ಬೆಲ್ಲಾದಾ ಹಾಗೇ
          ನಾನು ಅಂಧಳಾದೇ ನೀನು ಮೂಗನಾದೇ
          ಬದುಕೆಲ್ಲಾ ಬೇವಾದ ಬೆಲ್ಲಾದಾ ಹಾಗೇ... ಬೆಲ್ಲಾದಾ ಹಾಗೇ
ಹೆಣ್ಣು : ಹುಣ್ಣಿಮೆ ಚಂದ್ರಮನ ಹೊನ್ನಿನ ಸಂಜೆಯನು
           ಹೂವಿನ ಹೃದಯದಲಿ ಹೊಮ್ಮಿದ ಜೇನನ್ನು
           ಹುಣ್ಣಿಮೆ ಚಂದ್ರಮನ ಹೊನ್ನಿನ ಸಂಜೆಯನು
          ಹೂವಿನ ಹೃದಯದಲಿ ಹೊಮ್ಮಿದ ಜೇನನ್ನು
          ಮನದಾನಾದೆ ಮನದಲ್ಲಿ ಮರುಗುತಿರುವೆ ನಾನು
          ಮನದಾನಾದೆ ಮನದಲ್ಲಿ ಮರುಗುತಿರುವೆ ನಾನು
          ಮನಗೊಂಡರೂ ಮಾತಿಲ್ಲದೇ ಕೊರುಗುತಿರುವೆ ನೀನು
          ಕೊರುಗುತಿರುವೆ ನೀನು
ಗಂಡು : ಹೋಹೋಹೋ ..ಹೋಹೋಹೋ ... ಹೋಹೋಹೋ
ಹೆಣ್ಣು : ನಾನು ಅಂಧಳಾದೇ ನೀನು ಮೂಗನಾದೇ
           ಬದುಕೆಲ್ಲಾ ಬೇವಾದ ಬೆಲ್ಲಾದಾ ಹಾಗೇ... ಬೆಲ್ಲಾದಾ ಹಾಗೇ

ಹೆಣ್ಣು : ಕಣ್ಣಿಗೆ ಕಣ್ಣಾದ ಸ್ವಾಮಿಯು ನೀ ತಾನೇ
           ಬೆನ್ನಿಗೆ ಬೆನ್ನಾದ ಸಾಕ್ಷಿಯು ನೀ ತಾನೇ
          ಕಣ್ಣಿಗೆ ಕಣ್ಣಾದ ಸ್ವಾಮಿಯು ನೀ ತಾನೇ
          ಬೆನ್ನಿಗೆ ಬೆನ್ನಾದ ಸಾಕ್ಷಿಯು ನೀ ತಾನೇ
         ನೀ ನಡೆದಾಡೋ ಜಾಡನು ತಿಳಿದು ನಡೆವೇ ನಾನು
         ನೀ ನಡೆದಾಡೋ ಜಾಡನು ತಿಳಿದು ನಡೆವೇ ನಾನು
         ನಿನ್ನಡಿಗಳ ಹೂವಾಗಿ ಬದುಕಿ ಬಾಳ್ವೆ ನಾನು..
         ಬದುಕಿ ಬಾಳ್ವೆ ನಾನು
ಗಂಡು : ಹೋಹೋಹೋ ..ಹೋಹೋಹೋ ... ಹೋಹೋಹೋ
ಹೆಣ್ಣು : ನಾನು ಅಂಧಳಾದೇ ನೀನು ಮೂಗನಾದೇ
         ಬದುಕೆಲ್ಲಾ ಬೇವಾದ ಬೆಲ್ಲಾದಾ ಹಾಗೇ... ಬೆಲ್ಲಾದಾ ಹಾಗೇ
         ನಾನು ಅಂಧಳಾದೇ ನೀನು ಮೂಗನಾದೇ
         ಬದುಕೆಲ್ಲಾ ಬೇವಾದ ಬೆಲ್ಲಾದಾ ಹಾಗೇ... ಬೆಲ್ಲಾದಾ ಹಾಗೇ
-------------------------------------------------------------------------------------------------------------------------

ಸಾಕು ಮಗಳು (1963)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಘಂಟಸಾಲ

ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ... ಎಲ್ಲಿ... ಹೊಂಬೆಳಕೆಲ್ಲಿ...
ನನ್ನ ಬದುಕು ಬಾಳ್ವೆಯ ಬೆಳಗೋ ಮುಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ... ಎಲ್ಲಿ... ಹೊಂಬೆಳಕೆಲ್ಲಿ...
ಮಂಜಿನ ಹನಿಗೆ ಮುತ್ತೆಂದು ಕೊಂಡೇ
ಸಂಜೆಯ ಕನಸು ನಿಜವೆಂದು ಕೊಂಡೇ
ಮಂಜಿನ ಹನಿಗೆ ಮುತ್ತೆಂದು ಕೊಂಡೇ
ಸಂಜೆಯ ಕನಸು ನಿಜವೆಂದು ಕೊಂಡೇ
ಬಲು ಮೋಜಿನ ನಗೆ ನೋವಿನ ಗಾಜಿನ ಮನೆಯಲ್ಲೇ
ಬಲು ಮೋಜಿನ ನಗೆ ನೋವಿನ ಗಾಜಿನ ಮನೆಯಲ್ಲೇ
ಆತ್ಮಶಾಂತಿ ಬಯಸಿ ಬಯಸಿ ಆರ್ತನಾದೆನೇ
ಆತ್ಮಶಾಂತಿ ಬಯಸಿ ಬಯಸಿ ಆರ್ತನಾದೆನೇ
ಎಲ್ಲಿ... ಹೊಂಬೆಳಕೆಲ್ಲಿ... ಎಲ್ಲಿ... ಹೊಂಬೆಳಕೆಲ್ಲಿ...

ನನ್ನವರೆಲ್ಲಾ ತೊರೆದಂತಾದೆನೇ
ಮಾನವ ಜಾತಿಗೆ ನಾ ಹೊರೆಯಾದೆನೇ
ನನ್ನವರೆಲ್ಲಾ ತೊರೆದಂತಾದೆನೇ
ಮಾನವ ಜಾತಿಗೆ ನಾ ಹೊರೆಯಾದೆನೇ
ಕಣ್ಣೀರಾ ಕಡಲಿನಾ ಹರಿಗೋಲಾದೆನೇ
ಕಣ್ಣೀರಾ ಕಡಲಿನಾ ಹರಿಗೋಲಾದೆನೇ
ನವ್ಯ ಕಾಂತಿ ಕಾಣದಾಗಿ ನೊಂದೆನೇ
ಭವ್ಯ ಶಾಂತಿ ಬಯಸಿ ಬಯಸಿ ಬಂದೇನೇ
ಎಲ್ಲಿ... ಹೊಂಬೆಳಕೆಲ್ಲಿ... ಎಲ್ಲಿ... ಹೊಂಬೆಳಕೆಲ್ಲಿ...
ನನ್ನ ಬದುಕು ಬಾಳ್ವೆಯ ಬೆಳಗೋ ಮುಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...
-------------------------------------------------------------------------------------------------------------------------

No comments:

Post a Comment