344. ಮರಳು ಸರಪಣಿ (1979)


ಮರಳು ಸರಪಣಿ ಚಿತ್ರದ ಹಾಡುಗಳು 
  1. ಜೀವನದಾ ಪಯಣದಲಿ ನೀ ಬಂದೆ 
  2. ಮೈಸೂರು ಮಲ್ಲಿಗೆ ಅಂದವೇ ಅಂದ 
  3. ನೀನಿರದೇ ನಾನಿಲ್ಲವೋ 
  4. ಎಂದೆಂದು ನೀ ನಗುತಾ ಇರೂ 
 ಮರಳು ಸರಪಣಿ (1979) - ಜೀವನದಾ ಪಯಣದಲಿ ನೀ ಬಂದೆ 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇ ಗೌಡ  ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಹೆಣ್ಣು : ಜೀವನದಾ ಪಯಣದಲಿ ನೀ ಬಂದೆ ಸಾವಿರದ ಸಂತೋಷ ಸಿರಿ ತಂದೆ
         ಸಂಗಾತಿ ನೀನಾದೆ, ಸಂಚಾರಿ ನಾನಾದೆ ಇಂದೇ.. ನೀ ನನ್ನ ಬೆಳಕಾದೆ
ಗಂಡು : ಜೀವನದಾ ಪಯಣದಲಿ ನೀ ಬಂದೆ ಸಾವಿರದ ಸಂತೋಷ ಸಿರಿ ತಂದೆ

ಹೆಣ್ಣು : ಆಆಆ.. ಲಲ್ಲಲ್ಲಲಾ ಆ.. ನಿನ್ನಾಸೆ ಮೂಡಿ ನನ್ನಾಸೆ ಕೂಡಿ ಹೊಸ ಹಾದಿ ತುಳಿದೆ
         ತನು ಓಲಾಡಿ ಮನ ತೇಲಾಡಿ ಆನಂದ ತುಂಬಿದೆ
ಗಂಡು : ಆಆಆ.. ಲಲ್ಲಲ್ಲಲಾ ಆ.. ನೀನ್ಯಾರೋ ಏನೊ ನಾನ್ಯಾರೋ ಏನೊ
           ಸಿಹಿ ಸ್ನೇಹ ಪಡೆದೆ ಉತ್ಸಾಹವೇನೋ ಉಲ್ಲಾಸವೇನೋ ನೀ ನನ್ನ ಸೇರಿದೆ 
ಹೆಣ್ಣು :  ಹೊಮ್ಮಿದ ಪ್ರೇಮದ
ಇಬ್ಬರು : ಹೊಮ್ಮಿದ ಈ ಪ್ರೇಮದ ಬಾಳ ನೌಕೆ ತೇಲಿ ಸಾಗಿದೆ
ಗಂಡು : ಜೀವನದಾ ಪಯಣದಲಿ ನೀ ಬಂದೆ 
ಹೆಣ್ಣು : ಸಾವಿರದ ಸಂತೋಷ ಸಿರಿ ತಂದೆ

ಹೆಣ್ಣು : ಆಆಆ... ಲಲ್ಲಲ್ಲಲಾ 
ಗಂಡು : ಆ.. ಹೊಂಬಾಳೆ ಹಾಸಿ ತಂಗಾಳಿ ಬೀಸಿ ಹೂವು ಗಂಧ ತರಲಿ
ಹೆಣ್ಣು :  ನಗೆ ಹಾರೈಸಿ ಬಗೆ ಪೂರೈಸಿ ಸಂದೇಶ ಸಾರಲಿ
ಗಂಡು : ಆಆಆ... ಲಲ್ಲಲ್ಲಲಾ 
ಹೆಣ್ಣು : ಆ... ಒಂದಾದ ಪ್ರೀತಿ ರಂಗಾದ ರೀತಿ ನಲ್ಮೆ ಕೂಡಿ ಬರಲಿ
ಗಂಡು : ಮುಂದಾಗಿ ಗಮನ ಒಂದಾಗಿ ಪಯಣ ಎಂದೆಂದೂ ಸಾಗಲಿ 
ಹೆಣ್ಣು : ಬಾಳಿನಾ      ಗಂಡು : ಬಂಧನ
ಇಬ್ಬರು : ಬಾಳಿನಾ ಈ ಬಂಧನ ಜೀವ ಭಾವ ಸೇರಿದಂತಿದೆ
ಹೆಣ್ಣು : ಜೀವನದಾ 
ಗಂಡು : ಪಯಣದಲಿ ನೀ ಬಂದೆ ಸಾವಿರದ 
ಹೆಣ್ಣು : ಸಂತೋಷ ಸಿರಿ ತಂದೆ
ಗಂಡು : ಸಂಗಾತಿ ನೀನಾದೆ ಸಂಚಾರಿ ನಾನಾದೆ ಇಂದೇ ನೀ ನನ್ನ ಬೆಳಕಾದೆ
ಇಬ್ಬರು : ಜೀವನದಾ ಪಯಣದಲಿ ನೀ ಬಂದೆ ಸಾವಿರದ ಸಂತೋಷ ಸಿರಿ ತಂದೆ
ಗಂಡು : ಆಹಾಹಾ.. (ಆಹಾಹಾ..) ಲಾಲಾಲಾ (ಲಾಲಾಲಾ )
----------------------------------------------------------------------------------------------------------------------

ಮರಳು ಸರಪಣಿ (೧೯೭೯) - ಮೈಸೂರ ಮಲ್ಲಿಗೆ ಅಂದವೆ ಅಂದ 
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ವಾಣಿ ಜಯರಾಮ್

ಮೈಸೂರ ಮಲ್ಲಿಗೆ ಅಂದವೆ ಅಂದ
ಸಂತೋಷ ಬಾಳಿಗೆ ಚಂದವೆ ಚಂದ
ಕಲೆಯುವ ನಲಿಯುವ ಕುಣಿಯುವ ತಣಿಯುವ ಎಲ್ಲಾ ಸ್ನೇಹದಿಂದ
ಮೈಸೂರ ಮಲ್ಲಿಗೆ ಅಂದವೆ ಅಂದ
ಸಂತೋಷ ಬಾಳಿಗೆ ಚಂದವೆ ಚಂದ

ಇಂದೇನೆ ಶೃಂಗಾರ ಸಮಯ ಹೊಂದೋಣ ಉಲ್ಲಾಸ ಹೃದಯ
ಇಂದೇನೆ ಶೃಂಗಾರ ಸಮಯ ಹೊಂದೋಣ ಉಲ್ಲಾಸ ಹೃದಯ
ದ್ವೇಷ ಅಸೂಯೆ ಕಹಿಯ ಮರೆಯೋಣ ಹಿಂದಾದ ಕಥೆಯ
ನಡೆಯೋಣ ಉನ್ಮಾದ ನಡೆಯ ನುಡಿಯೋಣ ಸುಮ್ಮಾನ ನುಡಿಯ
ಸೇರೋಣ ಸಮ್ಮೋಹ ಸೆಲೆಯ ಹೀರೋಣ ಸಲ್ಲಾಪ ಸುಧೆಯ
ಅರಿತರೆ ಬೆರೆತರೆ ಆನಂದ
ಮೈಸೂರ ಮಲ್ಲಿಗೆ ಅಂದವೆ ಅಂದ
ಸಂತೋಷ ಬಾಳಿಗೆ ಚಂದವೆ ಚಂದ
ಕಲೆಯುವ ನಲಿಯುವ ಕುಣಿಯುವ ತಣಿಯುವ ಎಲ್ಲಾ ಸ್ನೇಹದಿಂದ
ಮೈಸೂರ ಮಲ್ಲಿಗೆ ಅಂದವೆ ಅಂದ
ಸಂತೋಷ ಬಾಳಿಗೆ ಚಂದವೆ ಚಂದ

ಇಂಪಾದ ಸಂಗೀತ ಮಿಡಿದು, ಸೊಂಪಾದ ಸಂಬಂಧ ಪಡೆದು...
ಇಂಪಾದ ಸಂಗೀತ ಮಿಡಿದು, ಸೊಂಪಾದ ಸಂಬಂಧ ಪಡೆದು
ಕಂಪಾದ ಸೌಗಂಧ ಹರಿದು, ಈ ಮಾದ ಎಂದೆಂದು ಹೊಸದು ಮೈತುಂಬೂ
ಕಣ್ತುಂಬ ಮತ್ತೇರಿ ಮಣಿದು, ಮುತ್ತಂತ ಈ ವೇಳೆ ತೊರೆದು
ನಿಂತಾಗ ಈ ಮೋಜು ಸಿಗದು ಅರಿತರೆ ಬೆರೆತರೆ ಆನಂದ
ಮೈಸೂರ ಮಲ್ಲಿಗೆ ಅಂದವೆ ಅಂದ
ಸಂತೋಷ ಬಾಳಿಗೆ ಚಂದವೆ ಚಂದ
ಕಲೆಯುವ ನಲಿಯುವ ಕುಣಿಯುವ ತಣಿಯುವ ಎಲ್ಲಾ ಸ್ನೇಹದಿಂದ
ಮೈಸೂರ ಮಲ್ಲಿಗೆ ಅಂದವೆ ಅಂದ
ಸಂತೋಷ ಬಾಳಿಗೆ ಚಂದವೆ ಚಂದ
--------------------------------------------------------------------------------------------------------------------------

ಮರಳು ಸರಪಣಿ (1979) - ನೀನಿರದೇ ನಾನಿಲ್ಲವೋ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ ಹಾಡಿದವರು: ಎಸ್.ಜಾನಕಿ


ನೀನಿರದೇ ನಾನಿಲ್ಲವೋ ನಾನಿರದೇ ನೀನಿಲ್ಲವೋ
ನೀನಿರದೇ ನಾನಿಲ್ಲವೋ ಇನ್ನೂ ನಾನಿರದೇ ನೀನಿಲ್ಲವೋ
ನಾನು ನೀನಲ್ಲಿ ನೀನೂ ನನ್ನಲ್ಲಿ 
ಹೇಗೋ ನನ್ನಾಸೇ ನಿನ್ನಾಸೇ ಒಂದಾದವೋ  ಆಆಆ.... ಹೇ....  
ನೀನಿರದೇ ನಾನಿಲ್ಲವೋ ಇನ್ನೂ ನಾನಿರದೇ ನೀನಿಲ್ಲವೋ
ಹರೆಯದ ವ್ಯಾಮೋಹ ಬೇಡಿದೆ ನಿನ್ನ ಸ್ನೇಹ 
ಮೈಯಲ್ಲೂ ಮನದಲ್ಲೂ ಕಾಡಿದೆ ಕಡು ದಾಹ 
ಹರೆಯದ ವ್ಯಾಮೋಹ ಬೇಡಿದೆ ನಿನ್ನ ಸ್ನೇಹ 
ಮೈಯಲ್ಲೂ ಮನದಲ್ಲೂ ಕಾಡಿದೆ ಕಡು ದಾಹ 
ಈ ಕೋಪ ನಾ ತಾಳಲಾರೆ ನೀ ಕರೆದೇ ನಾ ಬಾಳಲಾರೆ 
ಬಾನಾಡಿ ನಾವಾಗಿ ಬಾನಲ್ಲಿ ಹಾರಾಡಿ ಒಂದಾಗಿ ಬೇರೆಯೋಣವೋ 
ನೀನಿರದೇ ನಾನಿಲ್ಲವೋ ಇನ್ನೂ ನಾನಿರದೇ ನೀನಿಲ್ಲವೋ 
ನಾನು ನೀನಲ್ಲಿ ನೀನೂ ನನ್ನಲ್ಲಿ 
ಹೇಗೋ ನನ್ನಾಸೇ ನಿನ್ನಾಸೇ ಒಂದಾದವೋ  ಹೇ....  ಆಆಆ.... ಅಹ್ಹಹ್ಹಹ 
ನೀನಿರದೇ ನಾನಿಲ್ಲವೋ ಇನ್ನೂ ನಾನಿರದೇ ನೀನಿಲ್ಲವೋ 

ಅರಳಿದ ಹೂವಾಗಿ ಕಾದಿಹೇ ನೀನಗಾಗಿ 
ತೆರೆಯಲ್ಲೂ ಮರೆಯಲ್ಲೂ ಕಾತರ ಬಲುವಾಗಿ 
ಅರಳಿದ ಹೂವಾಗಿ ಕಾದಿಹೇ ನೀನಗಾಗಿ 
ತೆರೆಯಲ್ಲೂ ಮರೆಯಲ್ಲೂ ಕಾತರ ಬಲುವಾಗಿ 
ಈ ಮೌನ ನಾ ಸಹಿಸಲಾರೆ ನೀ ನಗದೇ ನಾ ನಲಿಯಲಾರೆ 
ನೋವೆಲ್ಲಾ ನಲಿವಾಗಿ ನಲಿವೆಲ್ಲಾ ಒಲವಾಗಿ ನಿನ್ನಿಂದ ಆನಂದವೋ 
ನೀನಿರದೇ ನಾನಿಲ್ಲವೋ ಇನ್ನೂ ನಾನಿರದೇ ನೀನಿಲ್ಲವೋ 
ನಾನು ನೀನಲ್ಲಿ ನೀನೂ ನನ್ನಲ್ಲಿ 
ಹೇಗೋ ನನ್ನಾಸೇ ನಿನ್ನಾಸೇ ಒಂದಾದವೋ   ಆಆಆ...ಹೇ.... 
ನೀನಿರದೇ ನಾನಿಲ್ಲವೋ ಇನ್ನೂ ನಾನಿರದೇ ನೀನಿಲ್ಲವೋ 
ಆಹಾ ಅಹ್ಹ ಅಹ್ಹ ಲಲಲಲ್ಲಲಲವೋ 
--------------------------------------------------------------------------------------------------------------------------

ಮರಳು ಸರಪಣಿ (1979) - ಎಂದೆಂದೂ ನೀ ನಗುತಾ ಇರೂ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ: ಎಸ್.ಜಾನಕಿ, ಎಸ್ಪಿಬಿ, ರಾಜೇಶ್ವರೀ 


ಮಂಜುಳಾ : ಎಂದೆಂದೂ ನೀ ನಗುತಾ ಇರು ಬಾಳ ನಂದನವ ಹೂವಾಗಿರು
ಎಲ್ಲರು :  ಎಂದೆಂದೂ ನೀ ನಗುತಾ ಇರು ಬಾಳ ನಂದನವ ಹೂವಾಗಿರು

ಮಲ್ಲೇಶ : ಆಕಾಶದಲ್ಲಿ ಆ ಸೂರ್ಯ ಚಂದ್ರರೂ ಹೊಳೆವಂತೆ ನಿನ್ನ ಹಿರಿಮೆ ತೋರು
              ಸಿರಿಯು ಬಂದಾಗ ಮರೆಯದೆ ಇರು ಉಪಕಾರ ಮಾಡಿದವರ ಮರೆಯದೆ ಇರು
ನವನೀತ : ಅಳಲು ಕಂಡಾಗ ಅಳುಕದೆ ಇರು ಸಮರಸ ನೀ ಹೊಂದಿ ಶಾಂತಿಯಿಂದಿರೂ
ಮಂಜುಳಾ : ನೀತಿ ಬಿಡದೇ ನೀನು ನಿತ್ಯ ನೇಮದಿಂದರು ಪ್ರೀತಿಯೊಂದೇ ಬಾಳಿನ ಗುರು
                   ಎಂದೆಂದೂ ನೀ ನಗುತಾ ಇರು ಬಾಳ ನಂದನವ ಹೂವಾಗಿರು

ಮಂಜುಳಾ : ನೀನು ನಕ್ಕಾಗ ನೋವು ಮರೆವುದು ನಿನ್ನೊಡನೆ ಕಲೆತಾಗ ಮನವು ತಣಿವುದು
ನವನೀತ : ನೀನು ಅತ್ತಾಗ ಕರಳು ಕೊರೆವುದು ನೀನೆದುರು ನಿಂತಾಗ ನಲ್ಮೆ ಕರೆವುದು
ಮಲ್ಲೇಶ : ನಮ್ಮ ವಂಶ ಜ್ಯೋತಿ ಬೆಳಗಿ ಕೀರ್ತಿಯಿಂದಿರೂ ಉಷಾಕಿರಣ ಕಾಂತಿಯಾಗಿರು
ಮಂಜುಳಾ : ಎಂದೆಂದೂ ನೀ ನಗುತಾ ಇರು ಬಾಳ ನಂದನವ ಹೂವಾಗಿರು
ಎಲ್ಲರು :  ಎಂದೆಂದೂ ನೀ ನಗುತಾ ಇರು ಬಾಳ ನಂದನವ ಹೂವಾಗಿರು
--------------------------------------------------------------------------------------------------------------------------

No comments:

Post a Comment