346. ಅಸಂಭವ (1986)


ಅಸಂಭವ ಚಿತ್ರದ ಹಾಡುಗಳು 
  1. ಜೀವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೋ 
  2. ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
  3. ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ 
  4. ಚಿನ್ನ ಚೀನಾ ಬೇಡ ಚಿನ್ನ ಯಾಕೆ ಹೀಗೆ ಕಾಡ್ತಿ ನನ್ನ 
  5. ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ 
  6. ನಿನ್ನ ಹೊತ್ತುವಳು ಹೊತ್ತು ಹೆತ್ತವಳು 
ಅಸಂಭವ (1986) - ಜೀವ ಬಂದ ಬೊಂಬೆಯೊ 
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್  ಗಾಯನ: ಕೆ.ಜೆ.ಯೇಸುದಾಸ್, ವಾಣಿ ಜಯರಾಂ

ಗಂಡು: ಜೇವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೊ
           ನಿನ್ನ ಕಣ್ಣ ಮಿಂಚಲಿ ನನ್ನೆದೆ  ಹಾಡಿದೆ ಪ್ರೇಮದೆ ಈ ದಿನ
ಹೆಣ್ಣು: ಸುತ್ತಮುತ್ತ ಎಲ್ಲೆಡೆ ನಿನ್ನ ರೂಪ ಕಂಡೇ ನಾ
         ನಿನ್ನ ನಗೆ ಅಲೆಯಲಿ ಈ ಮನ ಹಾಡುತ ತೇಲಿದೆ ಈ ದಿನ

ಗಂಡು: ನೀ ಯಾವುದೋ ಶಿಲ್ಪಿಯ ಕಲ್ಪನೆ ಈ ದೇವಿಗೆ ಮಾಡುವೆ ವಂದನೆ
ಹೆಣ್ಣು: ನೀ ವೈಣಿಕ ನಾ ವೀಣೆಯೊ ನೀ ಮೀಟಿದೆ ನಾ ಹಾಡಿದೆ
ಗಂಡು: ನಂಗಾಗಿ ಹುಟ್ಟಿ ನೀ ಬಂದೆಯೊ ಹೂಮಾಲೆ ಕಟ್ಟಿ ನೀ ತಂದೆಯೊ
ಹೆಣ್ಣು: ತಂದೆ ನಾನು ನನ್ನನೆ
ಗಂಡು: ಜೇವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೊ
ಹೆಣ್ಣು: ನಿನ್ನ ನಗೆ ಅಲೆಯಲಿ ಈ ಮನ  ಹಾಡುತ ತೇಲಿದೆ ಈ ದಿನ

ಹೆಣ್ಣು: ನೀ ಧೈರ್ಯದೆ ಗೆದ್ದೆಯೋ ನನ್ನನೇ ನಾ ಆ ಕ್ಷಣ ಸೇರಿದೆ ನಿನ್ನನೇ
ಗಂಡು: ನಾ ಬಂಧಿಯು ಆ ಕಣ್ಣಲಿ ಮನೆ ಮಾಡಿದೆ ನೀ ನನ್ನಲಿ
ಹೆಣ್ಣು: ನೀನಾದೆ ದೀಪ ಈ ಬಾಳಿಗೆ ನೀತಂದೆ ಗೀತೆ ಈ ಹಾಡಿಗೆ
ಗಂಡು: ನೀನೇ ಪ್ರೀತಿ ಪಲ್ಲವಿ
ಹೆಣ್ಣು: ಸುತ್ತಮುತ್ತ ಎಲ್ಲೆಡೆ ನಿನ್ನ ರೂಪ ಕಂಡೆ ನಾ
ಗಂಡು: ನಿನ್ನ ಕಣ್ಣ ಮಿಂಚಲಿ ನನ್ನೆದೆ ಹಾಡಿದೆ ಪ್ರೇಮದೆ ಈ ದಿನ
------------------------------------------------------------------------------------------------------------------------

ಅಸಂಭವ (1986) - ಯಾರಿಗೆ ಬಂತು? ಎಲ್ಲಿಗೆ ಬಂತು?
ಸಾಹಿತ್ಯ : ಸಿದ್ಧಲಿಂಗಯ್ಯ ಸಂಗೀತ : ಶಂಕರ್-ಗಣೇಶ್ ಗಾಯನ : ರಮೇಶ್, ಕೋರಸ್ 


ಗಂಡು : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
           ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
           ಜನಗಳ ತಿನ್ನುವ ಬಾಯಿಗೆ ಬಂತು ಲೂಟಿಗಾರರ ಜೇಬಿಗೆ ಬಂತು
           ಜನಗಳ ತಿನ್ನುವ ಬಾಯಿಗೆ ಬಂತು ಲೂಟಿಗಾರರ ಜೇಬಿಗೆ ಬಂತು
           ಮಹಡಿಮನೆಗಳ ಸಾಲಿಗೆ ಬಂತು  ಕೋಟ್ಯಾಧೀಶರ ಕೋಣೆಗೆ ಬಂತು
           ನಲವತ್ತೇಳರ ಸ್ವಾತಂತ್ರ್ಯ
ಕೋರಸ್ : ನಲವತ್ತೇಳರ ಸ್ವಾತಂತ್ರ್ಯ
               ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
                ನಲವತ್ತೇಳರ ಸ್ವಾತಂತ್ರ್ಯ

ಗಂಡು : ಪೋಲೀಸರ ಬೂಟಿಗೆ ಬಂತು  ಮಾಲೀಕರ ಚಾಟಿಗೆ ಬಂತು
            ಪೋಲೀಸರ ಬೂಟಿಗೆ ಬಂತು  ಮಾಲೀಕರ ಚಾಟಿಗೆ ಬಂತು
            ಬಂದೂಕದ ಗುಂಡಿಗೆ ಬಂತು  ನಲವತ್ತೇಳರ ಸ್ವಾತಂತ್ರ್ಯ
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ


               ನಲವತ್ತೇಳರ ಸ್ವಾತಂತ್ರ್ಯ

ಗಂಡು : ಅಧಿಕಾರ ಗದ್ದುಗೆ ಮೇಲೆ ವರ್ಷಗಟ್ಟಲೇ ಚರ್ಚೆಗೇ ಕೂತು  
           ಅಧಿಕಾರ ಗದ್ದುಗೆ ಮೇಲೆ ವರ್ಷಗಟ್ಟಲೇ ಚರ್ಚೆಗೇ ಕೂತು 
           ಬಡವರ ಬೆವರ ರಕ್ತವ ಕುಡಿದು ಹೇಳಲೇ ಇಲ್ಲ ಸ್ವಾತಂತ್ರ್ಯ 
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಹ್ಹಾ


               ನಲವತ್ತೇಳರ ಸ್ವಾತಂತ್ರ್ಯ


ಗಂಡು : ಸಾವಿರಾರು ಜನ ಗೋರಿಯಾದರು ಲಕ್ಷ ಲಕ್ಷ ಜನ ಗಲ್ಲಿಗೇರಿದರು
            ರೈತ ಕಾರ್ಮಿಕನು ರಕ್ತವ ಕೊಟ್ಟನು 
           ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ
           ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ
           ಗೋಳಿನ ಕಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ
          ನಲವತ್ತೇಳರ ಸ್ವಾತಂತ್ರ್ಯ 
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ


               ನಲವತ್ತೇಳರ ಸ್ವಾತಂತ್ರ್ಯ


-------------------------------------------------------------------------------------------------------------------------

ಅಸಂಭವ (1986) - ನಿನ್ನಂಥ ಕತೆಗಾರ ಯಾರಿಲ್ಲ
ಸಂಗೀತ : ಶಂಕರ್-ಗಣೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್  ಗಾಯನ : ಕೆ.ಜೆ.ಏಸುದಾಸ್

ದೈವ ಎನ್ನುವುರು ಉಂಟು, ಕಲ್ಲು ಎನ್ನವುರು ಉಂಟು
ಕಂಡು ಕಾಣದಂತೆ ತಿಳಿದು ತಿಳಿಯದಂತೆ...ಹೇಹೇ...
ನೀ ಇರುವೇ... ಓ... ಅಹ್ಹಹ  ನೀ  ಬಲು ಜಾಣನು
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, 

ಮೈಮುಚ್ಚೆ ಗೆಣ್ಣೂದ್ದ ಬರೀ ಬಟ್ಟೆಗೆ ಕಡು ಹೆಣುಗಾಟ ಬಾಳೆಲ್ಲಾ ಇಲ್ಲೀ ... 
ಹಸಿದಾಗ ಗತಿಯಿಲ್ಲ ಹಿಡಿ ಕೂಳಿಗೆ ಈ ನಡುಬೀದಿ ಮನೆಯಂತೇ ಇಲ್ಲೀ 
ನಿಂಗೇತಕೆ ಇಂಥ ಚೆಲ್ಲಾಟವೂ ಕಣ್ಣೀರನು ಕಂಡು ಉಲ್ಲಾಸವೂ
ಇದಕ್ಕಿಂತ ಅನ್ಯಾಯ ಬೇರಿಲ್ಲವೋ
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, 

ಎಲ್ಲಾರು ಕೊನೆಯಲ್ಲಿ ಬರುವಲ್ಲಿಗೆ ನೀ ನನ್ನೇಕೆ ಮೊದಲಿಲ್ಲಿ ಬಿಟ್ಟೇ 
ನಿನ್ನಂತೆ ನನ್ನನ್ನು ಶಿಲೆ ಮಾಡದೇ ನೀ ನಂಗೇಕೇ ಹೃದಯವ  ಕೊಟ್ಟೇ
ತಾಯೆನ್ನುವಾ ಪ್ರೀತಿ ಪ್ರತಿರೂಪವಾ ನಾ ಕಾಣದೇ  ಹೋದೇ ಆ ದೈವವಾ
ನನ್ನಲ್ಲಿ ನಿನಗಿಂತ ಛಲವೇತಕೋ..
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ಆಆಆಅ.... ಲಲಲಲಲ... ಲಾರರಿರ ಲಲಲಲಲ 
--------------------------------------------------------------------------------------------------------------------------

ಅಸಂಭವ (1986) - ಚಿನ್ನ ಚಿನ್ನ ಬೇಡ ಚಿನ್ನ ಯಾಕೆ ಹೀಗೆ ಕಾಡ್ತಿ ನನ್ನ 
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ರಮೇಶ ವಾಣಿಜಯರಾಂ 

ಗಂಡು : ಹೊಯ್ ಚಿನ್ನ ಚಿನ್ನ (ಹ್ಹಾ )  ಬೇಡ ಚಿನ್ನ  (ಹ್ಹಾ ) ಯಾಕೆ ಹೀಗೆ (ಹ್ಹೂಂ ) ಕಾಡ್ತಿ ನನ್ನ (ಆಹಾ)
            ಹೃದಯವಿದು ಕರಗದು ಈ ಗೋಳಿನಲಿ ನೆಂಟತನ ಹೇಳದಿರು ನನ್ನ ಬಳಿ 
            ಕೂಲಿ ಕೊಟ್ಟು ತಾಳಿ ಕಟ್ಟು ಅನ್ನೋ ಹೆಣ್ಣು ನೀನೇನಾ 
           ಆಸೆ ಪಟ್ಟು ನೀತಿ ಕೆಟ್ಟು ನೊಂದು ಗಂಡು ನಾನೇನು 
ಹೆಣ್ಣು : ಬೇಡ ಬೇಡ (ಹ್ಹಾ)  ಹಾಗನ್ಬೇಡ (ಹೊಯ್) ನಾನೇ ಹೆಂಡತಿ (ಹ್ಹಹ್ಹ) ನೀನೇ ಗಂಡ (ಹ್ಹ) 
          ಓ ಗೆಳೆಯಾ ಈ ಹೃದಯ ಸೆಳೆದಿರುವೇ ನಿನಗಾಗಿ ಹಗಲಿರುಳು ಜಪಿಸಿರುವೇ 
          ನೆಂಟತನ ಬೇಡವೆನ್ನೋ ತುಂಟತನ ನಿಂಗೇಕೆ 
          ಆಸೆ ಪಡೋ ಹೆಣ್ಣಾ ದೂಡೋ ಕಲ್ಲು ಮನ ಹೀಗೆಕೆ 

ಗಂಡು : ಬೇಡ ನಂಗೇ ಜೋಡಿ ಕೈಗೇ ಹಾಕೋ ಬೇಡಿ..  ಅಹ್ಹಹ್ಹಹ್ಹಾ  
           ಬೇಡ ನಂಗೇ ಜೋಡಿ ಕೈಗೇ ಹಾಕೋ ಬೇಡಿ.
           ಸ್ವಚ್ಛಂದ ಹಾರೋ ಹಕ್ಕಿ ನಾ ನಿನ್ನ ಕಾಟಕ್ಕೆ ಸಿಕ್ಕಿ... ಅಹ್ಹಹ್ಹ      
           ಆಗೋಲ್ಲ ನಿನ್ನಯ ಗಂಡ ಈ ನಿನ್ನ ಯತ್ನವು ದಂಡ 
ಹೆಣ್ಣು : ಸಂಗಾತಿ ನಾ ನಿನ್ನಾ ಬಾಳಿಗೆ (ಅಹ್ಹಹ್ಹ) ನಾ ಕಾದಿಹ ಇದೋ ತಾಳಿಗೇ 
          ಮೀಸೆ ಹೊತ್ತ ಗಂಡೇ ನಿಂಗೆ ಆಸೆ ಇಲ್ಲವೇ 
ಗಂಡು : ಹೇ ಚಿನ್ನ ಚಿನ್ನ (ಹ್ಹಾ )  ಬೇಡ ಚಿನ್ನ  (ಹ್ಹಾ ) ಯಾಕೆ ಹೀಗೆ (ಹ್ಹೂಂ ) ಕಾಡ್ತಿ ನನ್ನ (ಆಹಾ)
ಹೆಣ್ಣು : ಬೇಡ ಬೇಡ (ಹೊಯ್)  ಹಾಗನ್ಬೇಡ (ಹ್ಹಾ ) ನಾನೇ ಹೆಂಡತಿ (ಹ್ಹಹ್ಹ) ನೀನೇ ಗಂಡ (ಹ್ಹಹೊಯ್  ) 

ಹೆಣ್ಣು : ಬ್ರಹ್ಮ ಎಂದೋ ನನ್ನ ನಿನ್ನ ಜೋಡಿ ಮಾಡಿ ಬಿಟ್ಟ ಚೆನ್ನ ಈಗ ಬೇಡ ಎಂದರಾಯಿತೇ.. ಅಹ್ಹಹ್  
 ಗಂಡು : ಗಂಟು ಬಿದ್ದೆಯಲ್ಲೇ ನೀನು ಅಂಟು ಜಾಡ್ಯದಂತೆ ಇನ್ನು ಮದುವೆ  ಅಂದ್ರೆ ಸುಮ್ಮನಾಯಿತೇ .. ಹ್ಹ 
ಹೆಣ್ಣು : ಏಕೇ ಇಂಥ ಕೋಪ ಹ್ಹಾ... ಹೆಣ್ಣೇ ಮನೆಗೇ ದೀಪ 
ಗಂಡು : ಏಕೆ ಆಸೆ ನನ್ನಲ್ಲಿ ಗಂಡೇ ಇಲ್ವೇ ಊರಲ್ಲಿ 
ಹೆಣ್ಣು : ಇದ್ರೇ ಮನಸು ಕಟ್ಟು ತಾಳಿ ಮಾತನಾಡದೇ 
ಗಂಡು : ಚಿನ್ನ ಚಿನ್ನ (ಹ್ಹ) ಆಯ್ತು ಇನ್ನಾ (ಹ್ಹೂಂ) ನೀನೇ ಹೆಂಡ್ತಿ (ಅಹ್ಹಹ್ ) ನಾನೇ ಗಂಡ (ಆಹ್ಹಾ)
ಹೆಣ್ಣು : ಓ ಗೆಳೆಯಾ ಈ ಹೃದಯ ಸೆಳೆದಿರುವೇ (ಅಹ್ಹಹ್ಹ) ನಿನಗಾಗಿ ಹಗಲಿರುಳು ಜಪಿಸಿರುವೇ 
ಗಂಡು : ಮಾತು ಕೊಟ್ಟು ತಾಳಿ ಕಟ್ಟೋ ಮುಗ್ದ ಗಂಡು ನಾನಮ್ಮಾ 
ಹೆಣ್ಣು : ಆಸೆ ಪಟ್ಟು ಹಿಡಿದು ಪಟ್ಟು ಗೆದ್ದ ಹೆಣ್ಣು ನಾನಯ್ಯ
ಹೆಣ್ಣು : ಹ್ಹಾ... (ಹ್ಹಾ)  ಒಹೋ (ಹೇಹೇ)  
--------------------------------------------------------------------------------------------------------------------------

ಅಸಂಭವ (1986) - ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ ಕಣೆ ನೋಡು ಬಾ
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ರಮೇಶ,  ವಾಣಿಜಯರಾಂ

ಗಂಡು : ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ ಕಣೆ ನೋಡುಬಾ...
           ಮಂಗಳೂರ ಮಲ್ಗೆ ಸೊಂಪಾಗೈತೆ ತಂಪಾಗ ನಕ್ಕು ಹತ್ರಾ ಬಾ..
           ರಾತ್ರಿ ಹೀಗೆ ಜಾರೋಗತೈತೆ...  ರಾಂಗ್ ಮಾಡಬೇಡ ಬೇಗ ಬಾ.. ಅಹ್ಹಹ್ಹ
ಹೆಣ್ಣು : ಹುಬ್ಳಿ ಸೀರೆ ರವಿಕೆ ಖಣ ಯಾಕೆ ತಂದೆ ನಂಗೊತ್ತು...
          ಮಂಗಳೂರು ಮಲ್ಲಿಗೇ ಮೂಡಿಸಿ ನನ್ನಾ ತಾಜಾ ಮಾಡೋ ಮಸಲತ್ತು
          ರಾತ್ರಿಯೆಲ್ಲ ಒಂಟಿಯಾಗಿ...  ಇರಬೇಕು ನೀನು ಈವತ್ತು...

ಗಂಡು : ನಾ ನಿನ್ನ ಕಂಡಾಗ ನನ್ನಾಸೆ ಕರೆದಿದೆ ನಿನ್ನಿಂದ ಒಂದನ್ನ ಕೇಳೋಕೆ ಬಯಸಿದೆ
ಹೆಣ್ಣು : ನೀನಾಡೋ ಮಾತನೆಲ್ಲ ನಾ ಬಲ್ಲೆ...  ಹೀಗೇಕೆ ಕಾದು ನಿಲ್ಲೂ ನೀ ಇಲ್ಲೇ
ಗಂಡು : ಈ ಜೀವ ನಿಲ್ಲೋದಿಲ್ಲ ಈ ದೇಹ ತಾಳೋದಿಲ್ಲ
           ಈ ದೂರ ಬೇಕಾಗಿಲ್ಲ ನೀನಿಲ್ದೆ ಬಾಳೇ ಇಲ್ಲ
ಹೆಣ್ಣು : ಮತ್ತೇಕೆ ನೀನು ಹೀಗೆ ಮಾಡಿದೆ ಮರ್ಯಾದೆ ಹೋಗೋ ಹಾಗೆ ಆಡಿದೆ
ಗಂಡು : ಹುಬ್ಳಿ ಸೀರೆ (ಹ್ಹ) ರವಿಕೆ ಖಣ (ಹ್ಹೂಹೂ ) ತಂದೀವ್ನಿ ಕಣೆ ನೋಡುಬಾ...
           ಮಂಗಳೂರ ಮಲ್ಗೆ ಸೊಂಪಾಗೈತೆ ತಂಪಾಗ ನಕ್ಕು ಹತ್ರಾ ಬಾ..
ಹೆಣ್ಣು : ರಾತ್ರಿಯೆಲ್ಲ ಒಂಟಿಯಾಗಿ...  ಇರಬೇಕು ನೀನು ಈವತ್ತು... ಹೂ....  

ಹೆಣ್ಣು  ನೀ ತಂದ ಮಲ್ಲಿಗೆ ಹೂವು ಇಲ್ಲೆಲ್ಲಾ ಉದುರಿದೆ ನಿನ್ನಾಟ ಕೆನ್ನೇಲಿ ಕೆಂಪನು ತಂದಿದೆ
ಗಂಡು :  ಹೀಗೇನೆ ನಮ್ಮಾಟ ಸಾಗಲಿ ನಮಗಾಗಿ ಕಾಲದೋಟ ನಿಲ್ಲಲಿ
ಹೆಣ್ಣು  :  ಈ ತೋಳು ಕೇಳೋದಿಲ್ಲ ಈ ಹೂವು ತಾಳೋದಿಲ್ಲ
            ಈ ದಾಹ ತಿರೋದಿಲ್ಲ ಇನ್ನಂತೂ ನಿದ್ದೆ ಇಲ್ಲ
ಗಂಡು : ಅಮ್ಮಯ್ಯ ಹೌದು ನಾನು ಒಪ್ಪುವೆ ಬಾ ನೀನು ಒಮ್ಮೆ ನಾ ಅಪ್ಪುವೇ
ಹೆಣ್ಣು : ಹುಬ್ಳಿ ಸೀರೆ (ಹೊಯ್ ಹೊಯ್ )  ರವಿಕೆ ಖಣ (ಹ್ಹಾ ಹ್ಹಾ) ಯಾಕೆ ತಂದೆ ನಂಗೊತ್ತು...
          ಮಂಗಳೂರು ಮಲ್ಲಿಗೇ ಮೂಡಿಸಿ ನನ್ನಾ ತಾಜಾ ಮಾಡೋ ಮಸಲತ್ತು... ಅಹ್ಹಹ್ಹಹ್ಹಹ್ಹ...
ಗಂಡು : ರಾತ್ರಿ ಹೀಗೆ ಜಾರೋಗತೈತೇ ...  ರಾಂಗ್ ಮಾಡಬೇಡ ಬೇಗ ಬಾ..
ಇಬ್ಬರು : ಲಲಲಲ್ಲಲಲಾ  ಲಲಲಲ್ಲಲಲಾ  ಲಲಲಲ್ಲಲಲಾ  ಅಹ್ಹಹ್ಹಹ್ಹ
--------------------------------------------------------------------------------------------------------------------------

ಅಸಂಭವ (1986) - ನಿನ್ನ ಹೊತ್ತವಳು ಹೊತ್ತು ಹೆತ್ತವಳು
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಸುಶೀಲಾ

ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದೇ ಕಾಮ ರೂಪಿ
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದೇ ಕಾಮ ರೂಪಿ
ಅಬಲೆ ಹೆಣ್ಣಾ ಕೋಪ ನಿನ್ನಾ ಸುಡುವ ಶಾಪ
ಅಬಲೆ ಹೆಣ್ಣಾ ಕೋಪ ನಿನ್ನಾ ಸುಡುವ ಶಾಪ
ಎಚ್ಚರ ಬರದಿರು ಹತ್ತಿರ ಈ ಕಾಳಿಯು ಕುಡಿವಳು ನೆತ್ತರ

ಹೆಣ್ಣಿನ ಮೋಹದಲಿ ಆ ರಾವಣ ಹಾಳಾದ ಕಾಮದ ದಾಹದಲಿ ಆ ಇಂದ್ರನು ತಾ ಬಿದ್ದ
ಹೆಣ್ಣಿನ ಮೋಹದಲಿ ಆ ರಾವಣ ಹಾಳಾದ ಕಾಮದ ದಾಹದಲಿ ಆ ಇಂದ್ರನು ತಾ ಬಿದ್ದ
ನಾರಿ ಒಲಿದರೆ ಸಂಗಾತಿ ಆಗುವಳು ಅವಳು ಮುನಿದರೆ ಹೆಮ್ಮಾರಿ ಆವಳು
ನೀ ಬಯಸೋ ಹೆಣ್ಣಿನ ಅಂಗ ನೀ ಹುಟ್ಟಿದೆ ಅಲ್ಲೇ ತಿಳಿಯೋ
ಆ ಮರ್ಮ ಸ್ಥಾನವೇ ಜಗದಾ ನಿಜ ಜನ್ಮ ಸ್ಥಾನವು ತಿಳಿಯೋ
ಹೆಣ್ಣಿನ ನರ್ತಕೇ ಜ್ವಾಲೇ ಪ್ರಳಯಾಗ್ನಿಯೂ ಆಗಿದೆ ಇಲ್ಲಿ
ಎಚ್ಚರ ಬರದಿರು ಹತ್ತಿರ ಈ ಕಾಳಿಯು ಕುಡಿವಳು ನೆತ್ತರ
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದ ಕಾಮ ರೂಪಿ

ಸೊಕ್ಕಿದ ರಕ್ಕಸರ ಕೊಂದಳು ರಣಚೆಂಡಿ ರುಂಡದ  ಮಾಲೆಯನೇ ಅಣಿದಳು ಚಾಮುಂಡಿ 
ಸೊಕ್ಕಿದ ರಕ್ಕಸರ ಕೊಂದಳು ರಣಚೆಂಡಿ ರುಂಡದ  ಮಾಲೆಯನೇ ಅಣಿದಳು ಚಾಮುಂಡಿ 
ಆ ದಿವ್ಯ ಶಕ್ತಿಯ ಪ್ರತಿರೂಪ ನಾನೀಗ ನಿನ್ನಂಥ ಪಾಪಿಯ ಕೊನೆಯೆಂದು ನೋಡಿಕೋ 
ಈ ಶಕ್ತಿಯ ನಿಜ ಅವತಾರ ಲಯ ಸೃಷ್ಟಿಗೆ ಇದು ನಾಂದಿ 
ಈ ಕೋಪದ ತಾಪಕ್ಕೆ ಸಿಕ್ಕಿ ನೀನಾಗುವೆ ಹಿಡಿ ಬೂದಿ  
ಸಾವೋ ಒಂದೇ ಸತ್ಯ ಆಸೆ ಎಂದೂ ಮಿಥ್ಯ 
ಕೊಲ್ಲುವೇ ನಿನ್ನನ್ನೂ ಕೊಲ್ಲುವೇ ಕುಡಿಯುವೆ ನೆತ್ತರ ಕುಡಿಯುವೇ 
--------------------------------------------------------------------------------------------------------------------------

No comments:

Post a Comment