348. ಹೂಮಳೆ (೧೯೯೮)

ಹೂಮಳೆ ಚಲನಚಿತ್ರದ ಹಾಡುಗಳು 
  1. ಝುಂ ಝುಂ ಝುಂ ಝೇಂಕಾರವ..
  2. ಹೂಮಳೆ ಹೂಮಳೆ ಹೂಗಳಾ ಸುರಿಮಳೆ
  3. ಓ ಮಹನೀಯರೇ ಓ ಮಹಿಳೆಯರೇ 
  4. ಹೆಣ್ಣಿಗೊಂದು ಗಂಡು ಬೇಕು 
  5. ಪ್ರೀತಿಯ ಗೆಲ್ಲಲು ರಾಜಾಧಿರಾಜರು 
  6. ನನ್ನ ಮುದ್ದು ರಂಭೆ ಬಾರೆ 
ಹೂಮಳೆ (೧೯೯೮) - ಝುಂ ಝುಂ ಝುಂ ಝೇಂಕಾರವ..
ಸಂಗೀತ: ಇಳಯರಾಜ, ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ, ಗಾಯನ: ಚರಣಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ,

ಗಂ: ಝುಂ ಝುಂ ಝುಂ ಝುಂ ಝೇಂಕಾರವ ಗುಂ ಗುಂ ಗುಂ ಗುಂ ಗುಂಜಾರವ
ಹೆ: ಝುಂ ಝುಂ ಝುಂ ಝುಂ ಝೇಂಕಾರವ ಗುಂ ಗುಂ ಗುಂ ಗುಂ ಗುಂಜಾರವ
ಗಂ: ಈ ಭೂಮಿಗೂ ಆ ಆಕಾಶಕೂ ಏಕ ರೂಪಾಗಿ ತಾಕಿದೆ ನಾಕವಿನ್ನೇಕೆ ಬೇಕಿದೆ
ಹೆ: ಝುಂ ಝುಂ ಝುಂ ಝುಂ ಝೇಂಕಾರವ ಗುಂ ಗುಂ ಗುಂ ಗುಂ ಗುಂಜಾರವ

ಪ್ರಣಯ ಗಂಗೆ ಸಲಿಲ ಪೂರ್ಣ ಆಪೋಷಣ ಹಸಿರು ಧರೆಯ ಒಲವ ಗಿರಿಯ ಆರೊಹಣ
ಗಂ: ಓ.. ಓ... ಬಾ ಎರಿ ಬಾ ತೆಲಿ ಬಾ.. ಮಿಲನಕೆ ಬಾ.. ಎರಿ ಬಾ ತೆಲಿ ಬಾ ಹಾರಿ ಬಾ..
ಹೆ: ಝುಂ ಝುಂ ಝುಂ ಝುಂ ಝೇಂಕಾರವ ಗುಂ ಗುಂ ಗುಂ ಗುಂ ಗುಂಜಾರವ
ಝುಂ ಝುಂ ಝುಂ ಝುಂ ಝೇಂಕಾರವ ಗುಂ ಗುಂ ಗುಂ ಗುಂ ಗುಂಜಾರವ
ಗಂ: ಈ ಭೂಮಿಗೂ ಆ ಆಕಾಶಕೂ ಹೆ: ಏಕ ರೂಪಾಗಿ ತಾಕಿದೆ ನಾಕವಿನ್ನೇಕೆ ಬೇಕಿದೆ
ಗಂ: ಝುಂ ಝುಂ ಝುಂ ಝುಂ ಝೇಂಕಾರವ ಗುಂ ಗುಂ ಗುಂ ಗುಂ ಗುಂಜಾರವ

ಗಂ: ಗಂಧದಿ ಮಿಂದಂತ ಮಿಂಚನೆ ರೂಪದಲ್ಲಿ ರಂಭೆಯ ಗೆಲ್ಲುವ ಕಂಚನೆ
ಹೆ: ನಾ ಚಂದಿರ ನಕ್ಷತ್ರ ಲೋಕದ ನೆಂಟಳು ಆದರೂನು ಪ್ರೀತಿಯ ಹಂಬಲದೊಂಟಿಯು
ಗಂ: ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ... ಏಕಾಂತವೇಕೆ ಸಖಿ ನಾನೇ ಜೊತೆಯಾಗುವೆ
ಹೆ: ನಾನಿರುವೆ ನಿನಗಾಗಿ.. ಗಂ: ಓ... ನೀನಿರುವೆ ನನಗಾಗಿ.. ಹಾಯಾಗಿ ಹಾಡುತಾಡುತಾ ಆಲಾಪ..
ಹೆ: ಝುಂ ಝುಂ ಝುಂ ಝುಂ ಝೇಂಕಾರವ ಗಂ: ಝುಂ ಝುಂ ಝುಂ ಝುಂ ಝೇಂಕಾರವ
ಹೆ: ಗುಂ ಗುಂ ಗುಂ ಗುಂ ಗುಂಜಾರವ ಗಂ: ಗುಂ ಗುಂ ಗುಂ ಗುಂ ಗುಂಜಾರವ
ಹೆ: ಈ ಭೂಮಿಗೂ ಆ ಆಕಾಶಕೂ ಗಂ: ಏಕ ರೂಪಾಗಿ ತಾಕಿದೆ ನಾಕವಿನ್ನೇಕೆ ಬೇಕಿದೆ
ಹೆ: ಝುಂ ಝುಂ ಝುಂ ಝುಂ ಝೇಂಕಾರವ ಗುಂ ಗುಂ ಗುಂ ಗುಂ ಗುಂಜಾರವ
----------------------------------------------------------------------------------------------------------------------

ಹೂಮಳೆ (೧೯೯೮) - ಹೂಮಳೆ ಹೂಮಳೆ...
ಸಂಗೀತ: ಇಳಯರಾಜ, ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್  ಗಾಯನ: ಡಾ||ರಾಜ್ ಕುಮಾರ್

ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
ಮೇಘ ಮಿಂಚುಗಳ ಮಾಲೆಯೋ
ಸಪ್ತವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ

ಮಾಘ ಫಾಲ್ಗುಣ ಚೈತ್ರ ವೈಶಾಖ ಮಾಸ
ಸಿಹಿ ವಸಂತ ಬಾರೊ ಶೃಂಗಾರ ತಾರೊ
ತಾಯಿ ಭೂರಮೆ ನಿನಗೆ ನೂರಾರು ರೂಪ
ನಾವು ಮನುಜರಮ್ಮ ಬೇಕೊಂದು ದೀಪ
ಮಾಗಿ ಕಾಲದಲ್ಲಿ ಮೂಕವಾದೆ ಮೌನಿ ಕೋಗಿಲೇ
ಮಾಗಿ ಕಾಲದಲ್ಲಿ ಮೂಕವಾದೆ ಮೌನಿ ಕೋಗಿಲೆ
ಈಗ ಏಕೆ ಹಾಡಿದೆ.. ಏನ್ ಆಶ್ಚರ್ಯವ ನೋಡಿದೆ..
ಒಹೊಹೊ... ಒಹೊ... ಒಹೊ... ಹೊ... ಹೊ...
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
ಮೇಘ ಮಿಂಚುಗಳ ಮಾಲೆಯೋ

ಸಪ್ತವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಬಾಳು ಎಂದರೇನು ನಾಳೆಗಳ ಧ್ಯಾನ
ನಾಳೆ ಎಂದರೇನು ನಿನ್ನೆಗಳ ಮೌನ
ಆಸೆ ದೋಣಿಯಲ್ಲಿ ಸಾಗರದ ಯಾನ
ಜೋಡಿ ಸೇರಿದಾಗ ಸುಲಭ ಪ್ರಯಾಣ
ನಾಳೆಗಾಗಿ ಬಾಳ ಬೇಕು ಕೇಳು ನೊಂದ ಜೀವವೇ
ನಾಳೆಗಾಗಿ ಬಾಳ ಬೇಕು ಕೇಳು ನೊಂದ ಜೀವವೆ
ರಾತ್ರಿ ಜಾರಿ ಹೋಗಲಿ ಶುಭ ಸೂರ್ಯೋದಯವಾಗಲಿ
ಒಹೊಹೊ... ಒಹೊ... ಒಹೊ... ಹೊ...
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
ಮೇಘ ಮಿಂಚುಗಳ ಮಾಲೆಯೋ
ಸಪ್ತವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳಾ ಸುರಿಮಳೆ
ಹೂಮಳೆ ಹೂಮಳೆ ಓಲವಿನ ಹೊಸ ಮಳೆ
---------------------------------------------------------------------------------------

ಹೂಮಳೆ (೧೯೯೮) - ಓ ಮಹನೀಯರೇ ಓ ಮಹಿಳೆಯರೇ 
ಸಂಗೀತ: ಇಳಯರಾಜ, ಸಾಹಿತ್ಯ: ಕೆ.ಕಲ್ಯಾಣ, ಗಾಯನ: ಚರಣ, ಮಂಜುಳಾ, ರಾಜು ಅನಂತಸ್ವಾಮಿ 

---------------------------------------------------------------------------------------

ಹೂಮಳೆ (೧೯೯೮) - ಹೆಣ್ಣಿಗೊಂದು ಗಂಡು ಬೇಕು 
ಸಂಗೀತ: ಇಳಯರಾಜ, ಸಾಹಿತ್ಯ: ಕೆ.ಕಲ್ಯಾಣ, ಗಾಯನ: ಚರಣ, ಚಂದ್ರಿಕಾ, ಜಯಶ್ರೀ, ಮಂಜುಳಾ, ನಾಗತಿಹಳ್ಳಿ, ರಾಜು 

---------------------------------------------------------------------------------------

ಹೂಮಳೆ (೧೯೯೮) - ಪ್ರೀತಿಯ ಗೆಲ್ಲಲು ರಾಜಾಧಿರಾಜರು 
ಸಂಗೀತ: ಇಳಯರಾಜ, ಸಾಹಿತ್ಯ: ಕೆ.ಕಲ್ಯಾಣ, ಗಾಯನ: ಇಳೆಯರಾಜ,  ನಾಗತಿಹಳ್ಳಿ ಚಂದ್ರಶೇಖರ

---------------------------------------------------------------------------------------

ಹೂಮಳೆ (೧೯೯೮) - ನನ್ನ ಮುದ್ದು ರಂಭೆ ಬಾರೆ 
ಸಂಗೀತ: ಇಳಯರಾಜ, ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ, ಗಾಯನ: ಚರಣ

---------------------------------------------------------------------------------------

No comments:

Post a Comment