349. ಏ.ಕೆ. ೪೭ (1999)

ಏ .ಕೆ.47 ಚಲನಚಿತ್ರದ ಹಾಡುಗಳು 
  1. ಕಡಲೋ ಕಣ್ಣ ಕಡಲೋ  
  2. ನಾನು ಕನ್ನಡದ ಕಂದ
  3. ಓ.. ಮೈ ಸನ್ 
  4. ಹೇ ರಾಮ್ ದಿಸ್ ಇಸ್ ಇಂಡಿಯಾ 
  5. ಯಾರೀ ಅಂಜುಬುರುಕೀ .. 
ಏ.ಕೆ. ೪೭ (1999) - ಕಡಲೋ ಕಡಲೋ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಹರಿಹರನ್ ಮತ್ತು ಚಿತ್ರ

ಕಡಲೋ ಕಡಲೋ ಕಣ್ ಕಡಲೋ ಮುಗಿಲೊ ಮುಗಿಲೋ ಮನ ಮುಗಿಲೋ
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು
ನುಡಿ ಮುತ್ತುದುರಿಸಬೇಡ ಪ್ರೇಮಪತ್ರ ರವಾನಿಸಬೇಡ
ನಿನ್ನ ಮುತ್ತಿನ ನಗುವೇ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ ಮುಗಿಲೊ ಮುಗಿಲೋ ಮನ ಮುಗಿಲೋ 

ಮನದ ಬನದ ಒಂಟಿ ಮರದ ಆಸೆ ರೆಂಬೆಗೆ 
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು ಹೊರಗೆ ಸಿಬಿರು
ನನ್ನೀ ಆಸೆಗೆ ಆತುರ ಕಾಣೆ ಅವಸರ ಕಾಣೆ
ಯಾಕೀ ಪ್ರೀತಿಗೆ ನಾನೂ ಹೆಣ್ಣೇ ಕಾಣದೇ? ನನಗೂ ಒಂದು ಮನಸಿದೆ
ತುಟಿಗಳು ಎರಡು ಭಯದಲಿ ನಿಂತು ಬಿಗಿಯಿತು ಬೀಗಗಳ
ನುಡಿಮುತ್ತುದುರಿಸಬೇಡ ನುಡಿಮುತ್ತುದುರಿಸಬೇಡ  
ನುಡಿ ಮುತ್ತುದುರಿಸಬೇಡ ಪ್ರೇಮಪತ್ರ ರವಾನಿಸಬೇಡ 
ನಿನ್ನ ಮುತ್ತಿನ ನಗುವೇ ಸಾಕು ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬೀಸಾಕು
ಕಡಲೋ ಕಡಲೋ ಕಣ್ ಕಡಲೋ ಮುಗಿಲೊ ಮುಗಿಲೋ ಮನ ಮುಗಿಲೋ 

ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನಿನ್ನದು
ಎಷ್ಟೇ ಜನುಮ ಆದರೂ ಪಡೆಯೋ ಶಪಥ ನನ್ನದು
ಕಡಲಿಗೆ ಎರಡೂ ತೀರವಿದೆ ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
ಗೆಳತಿಯರನು ಕೇಳಬೇಡ ಮೇಘದೂತರ ಕಳಿಸಲುಬೇಡ
ನಿನ್ನ ತಣ್ಣನೆ ನಗುವೇ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ ಮುಗಿಲೊ ಮುಗಿಲೋ ಮನ ಮುಗಿಲೋ 
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು 
ಕಡಲಲ್ಲೋ ಮುಗಿಲಲ್ಲೋ ನೀ ನನ್ನ ಬದುಕಿಸು
ನುಡಿ ಮುತ್ತುದುರಿಸಬೇಡ ಪ್ರೇಮಪತ್ರ ರವಾನಿಸಬೇಡ 
ನಿನ್ನ ಮುತ್ತಿನ ನಗುವೇ ಸಾಕು ಆ ನಗುವಲಿ ಒಪ್ಪಿಗೆ ಹಾಕು 
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೋ ಕಡಲೋ ಕಣ್ ಕಡಲೋ ಮುಗಿಲೊ ಮುಗಿಲೋ ಮನ ಮುಗಿಲೋ 
------------------------------------------------------------------------------------------------------------------------

ಏ.ಕೆ. ೪೭ (1999) - ನಾನು ಕನ್ನಡದ ಕಂದ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ :ಕೆ.ಜೆ.ಏಸುದಾಸ

ಅಮ್ಮಾ... ಅಮ್ಮಾ...
ನಾನು ಕನ್ನಡದ ಕಂದ, ಬಂದೆ ಶಾಂತಿಯ ಮಣ್ಣಿಂದ
ನಾನು ಕನ್ನಡದ ಕಂದ, ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ, ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು, ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶ್ರುತಿ ತಪ್ಪಲು ಬಿಡೆನು

ಎದೆ ಹಾಲುಂಡು ಎದೆ ಬಗೆದವರ
ಕ್ಷಮಿಸುವುದುಂಟೆ, ಬೆಳೆಸುವುದುಂಟೆ
ಬೇಲಿಗೆ ಮದ್ದು ಹಾಕದೆ ಇದ್ರೆ
ನೆರಳಿನ ಮರವು ಉಳಿಯುವುದುಂಟೆ
ಅಮ್ಮಾ... ಅಮ್ಮಾ...
ನಾನು ಕನ್ನಡದ ಕಂದ, ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ, ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು, ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು

ಜಾತಿಗಳಿಲ್ಲ ವರ್ಣಗಳಿಲ್ಲ, ಪ್ರೀತಿ ಪತಾಕೆ ಜಯಹೆ ನಿನಗೆ
ಶಾಂತಿಯ ಧ್ವಜವೆ ಕೀರ್ತಿಯ ಭುಜವೆ
ಧರ್ಮದ ಚಕ್ರ ವಂದನೆ ನಿನಗೆ
ಅಮ್ಮಾ...
ನಾನು ಕನ್ನಡದ ಕಂದ ಬಂದೆ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ
ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು
ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು
------------------------------------------------------------------------------------------------------------------------

ಏ.ಕೆ. ೪೭ (1999) - ಓ ಮೈ ಸನ್
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ :ಎಸ್.ಪಿ.ಬಿ.

ಓ ಮೈ ಸನ್ ಅಮ್ಮನ ಆಸೆಯ, ಆರತಿ ಆಗು ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು ನಾಡಿನ, ಒಳ್ಳೆಯ ಪ್ರಜೆಯಾಗು
ಓ ಮೈ ಸನ್ ಅಮ್ಮನ ಆಸೆಯ, ಆರತಿ ಆಗು ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು ನಾಡಿನ, ಒಳ್ಳೆಯ ಪ್ರಜೆಯಾಗು

ಯಾರು ಹೆತ್ತರಯ್ಯ ಇಂತ ಕಂದನನ್ನು ಅಂತ ಲೋಕ ಮೆಚ್ಚಬೇಕು ನಿನ್ನನ್ನು
ನಮ್ಮ ಆಶಾ ಗೋಪುರದ ಕಳಶವಾಗು 
ವಿದ್ಯೆ ಎಂಬ ಖಡ್ಗ ಒಂದು ತಂದೆ ಕೊಡುಗೆ ವಿನಯ ಎಂಬ ಅಸ್ತ್ರ ಒಂದು ತಾಯ ಕೊಡುಗೆ
ಧ್ರೋಹಿ ಎಂಬ ಪಟ್ಟದಿಂದ ದೂರವಾಗು
ಕೋಪವೆ ಹಿಂಸೆಗೆ ಕಾರಣ ಸಹನೆಯೆ ಬಾಳಿಗೆ ಭೂಷಣ
ಆವೇಶವನು ಜಯಿಸು ಓಂ ಸಹನ ಭವತು ಜಪಿಸು
ಓ ಮೈ ಸನ್  ಅಮ್ಮನ ಆಸೆಯ, ಆರತಿ ಆಗು ಅಪ್ಪನ ಆಸೆಯ, ಆಗಸವಾಗು
ಒಳ್ಳೇ ಜನರಲೊಂದಾಗು ನಾಡಿನ, ಒಳ್ಳೆಯ ಪ್ರಜೆಯಾಗು

ನಿನ್ನ ಬಾಳಿಗೊಂದು ಪುಟ್ಟ ಗುರಿಯಿರಲಿ ಸರಳ ರೇಖೆಯಲ್ಲಿ ದಿಟ್ಟ ನಡೆಯಿರಲಿ
ಅಕ್ಕ ಪಕ್ಕ ನೋಡದಂತೆ ನೀನು ಸಾಗು
ನಿನಗೆ ಮಾತ್ರವಲ್ಲ ನಿನಗಾಗೊ ನೋವು ಪಾಲುದಾರರಯ್ಯ ನೋವಿನಲ್ಲು ನಾವು
ನೋವು ನೀಡದಂತೆ ಮುದ್ದು ಮಗನಾಗು
ಆತುರ ಪಟ್ಟರೆ ಆಪತ್ತು ಮಾನವೆ ಸಜ್ಜನ ಸಂಪತ್ತು
ಅಹಂಕಾರವನು ತ್ಯಜಿಸು ಓಂ ಶಾಂತಿ ಶಾಂತಿ ಜಪಿಸು
ಓ ಮೈ ಸನ್ ಕನ್ನಡ ತಾಯಿಗೆ ಆರತಿ ಆದೆ ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ ನಮ್ಮ ಎದೆಗೆ ಹಾಲೆರೆದೆ

ನನ್ನ ಮನೆ ನನ್ನ ಮಗ ಅಂದೆ ನಾನು ನಮ್ಮ ನಾಡೆ ನನ್ನ ಮನೆ ಅಂದೆ ನೀನು
ನಿನ್ನ ಮನೆಯಲ್ಲಿ ನೀ ಚಿರಾಯು ಆದೆ
ಹಿಂಸೆಯನ್ನು ಸಹಿಸಬೇಕು ಅಂದೆ ನಾನು ಸಹಿಸುವುದೆ ಅಪರಾಧ ಎಂದೆ ನೀನು
ಒಪ್ಪಿಕೊಂಡೆ ಕಿರಿಯರಿಗೆ ಗುರುವಾದೆ
ಸಾವಿರ ಎರಡು ಸಾವಿರ ವರ್ಷದ ಮಹಾ ಮನ್ವಂತರ
ಈ ಧರೆಯು ಕಾಣಲಿದೆ ಅಲ್ಲಿ ನಿನ್ನ ಮಾತು ಫಲಿಸಲಿದೆ
ಓ ಮೈ ಸನ್ ಕನ್ನದ ತಾಯಿಗೆ ಆರತಿ ಆದೆ ಭಾರತ ಮಾತೆಯ ಕೀರುತಿ ಆದೆ
ನಾಡೆ ಮೆಚ್ಚುವ ಮಗನಾದೆ ನಮ್ಮ ಎದೆಗೆ ಹಾಲೆರೆದೆ
------------------------------------------------------------------------------------------------------------------------

ಏ.ಕೆ. ೪೭ (1999) - ಹೇ ರಾಮ್ ದಿಸ್ ಇಸ್ ಇಂಡಿಯಾ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ :ಹರಿಹರನ

ಹೇ.. ರಾಮ್ ದಿಸ್ ಇಸ್ ಇಂಡಿಯಾ ದಿಸ್ ಇಸ್ ಇಂಡಿಯಾ 
ಹೇ.. ರಾಮ್ ದಿಸ್ ಇಸ್ ಇಂಡಿಯಾ ದಿಸ್ ಇಸ್ ಇಂಡಿಯಾ 
ಅಶಾಂತಿಯ ಜ್ವಾಲೇ ಹತಾಶೆಯ ಲಾವಾ ಆಕ್ರೋಶದ ಕೂಗು ಅಜ್ಞಾನದ ರಾಡಿ 
ಬಾರೋ ರಾಮ ನೋಡೋ ರಾಮ ವಿಧಿಸೋ ನಮಗೆ ನೀತಿ ನೇಮಾ 
ಹೇ.. ರಾಮ್ .. ಹೇ.. ರಾಮ್ 

ಝಣ ಝಣ ಝಣ ಹಣದ ಢಮರಲೀ ಮಾರ್ಮರಿಸಿದೇ 
ಬಡವರಳನು ಅಣು ವೇಗದ ಬಾಳ ತಾಳಕೆ ತಾನೂದಿದೇ ಕಲ್ಕಿ ಕೊಳಲು 
ಹಿಂದು ಮುಸ್ಲಿಂ ಪಾರ್ಸಿ ಕ್ರೈಸ್ತ ಒಡೆದ ಮನಸ್ಸಗಳೂ 
ಬೆರೆಯದ ಬೆಸೆಯದ ನದಿಗಳು ಅಳಿಯದ ಉಳಿಯದ ಬೇರುಗಳೂ 
ಸ್ವಾತಂತ್ರ್ಯವೆಂದೂ ಜೀತದಾ ಪಾಡು ನೋಡು ನೋಡು ಬಾ 
ನಾಳೇ ಗೀತೆಯಲಿ ಭೀಕ್ಷಕರ ಹಾಡೂ ಕೇಳು ಬಾ ಕೇಳು ಬಾ 
ಬಾರೋ ಪ್ರೇಮ ... ಹೇ.. ರಾಮ್ ದಿಸ್ ಇಸ್ ಇಂಡಿಯಾ ದಿಸ್ ಇಸ್ ಇಂಡಿಯಾ 
ಲಂಚಾವತಾರ ಆ ರಾಜಕೀಯ ಸ್ವದೇಶ ದ್ರೋಹ ದಾರಿದ್ರ್ಯ ಪೀಡೆ 
ಬಾರೋ ರಾಮ ನೋಡೋ ರಾಮ ವಿಧಿಸೋ ನಮಗೆ ನೀತಿ ನೇಮಾ 
ಹೇ.. ರಾಮ್ .. ಹೇ.. ರಾಮ್ 

ಈ ಬೆತ್ತಲೇ ರಾಜ್ಯದೊಳಗೆ ಮೈ ಮುಚ್ಚಿದವ ಚೋರನಾಗುವ 
ಈ ಕತ್ತಲೆ ಕೂಪದೊಳಗೇ ಬೆಳಕಿನಿತ್ತವ ದ್ರೋಹಿಯಾಗುವ 
ಅವನ ದೂಷಿಸಿ ಇವನ ದ್ವೇಷಿಸಿ ಫಲವೇ ಇಲ್ಲಿಲ್ಲಾ 
ಎಲ್ಲಗು ಎಲ್ಲಗು ನರಿಗಳೇ ಕನಸಿನ ಕಣಿವೆಯ ಕುರಿಗಳೇ 
ಮಗದೊಮ್ಮೆ ನೀನು ಅವತಾರವೆತ್ತಿ ಧರೆಯ ದುಃಖ ನೀಗೂ 
ನರನಾಗಿ ಬರುವೇ ವನವಾಸ ಪಡೆವೆ ಪರಶುರಾಮನಾಗೂ ಶಿಕ್ಷಿಸೋ.. ರಕ್ಷಿಸೋ... 
ಹೇ.. ರಾಮ್ ದಿಸ್ ಇಸ್ ಇಂಡಿಯಾ ದಿಸ್ ಇಸ್ ಇಂಡಿಯಾ 
ಭೀಕಾರೀ ದೇಶ ಸಮೃದ್ಧ ವೇಷ ನಸಾತ ಧರ್ಮಿ ಬಾಳೆಲ್ಲ ಘೋರ 
ಬಾರೋ ರಾಮ ತಾರೋ ರಾಮ ವಿಧಿಸೋ ನಮಗೆ ನೀತಿ ನೇಮ ಹೇ.. ರಾಮ್ .. ಹೇ.. ರಾಮ್ 
------------------------------------------------------------------------------------------------------------------------

ಏ.ಕೆ. ೪೭ (1999) - ಯಾರೀ ಅಂಜುಬುರುಕೀ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ :ರಾಜೇಶ್ ಕೃಷ್ಣನ, ಚಿತ್ರಾ

ಗಂಡು : ಹೇ..ಹೇಹೇ.. ಹೇ.. ಹೆಹೆ..   
            ಯಾರೀ ಅಂಜುಬುರುಕೀ ಯಾರೀ ಚೆಂಗುಲಾಬೀ ಈ ಟ್ರಾಫಿಕ್ ತೋಟದಲ್ಲಿ 
            ಯಾರೀ ಅಂಜುಬುರುಕೀ ಯಾರೀ ಪ್ರೇಟ್ಟಿ ಬೇಬೀ ಈ ಕಾಂಕ್ರೀಟ್ ಕಾಡಿನಲ್ಲಿ 
            ಯಾರೀ ಅಂಜುಬುರುಕೀ ಯಾರೀ ಚೆಂಗುಲಾಬೀ ಈ ಟ್ರಾಫಿಕ್ ತೋಟದಲ್ಲಿ 
            ಯಾರೀ ಚಂದ್ರಮುಖೀ ಈ ಫುಟಪಾತ್ ಸಂತೆಯಲ್ಲಿ ಈ ಕ್ಲಾಸಿಕ್ ತೋಟದಲ್ಲಿ 
ಹೆಣ್ಣು : ಅಮ್ಮಾ ತುಳಸೀ ತಾಯೇ ತುಳಸೀ ನಮ್ಮ ಮನ ಮನೆ ಕಾಯಮ್ಮ ಶ್ರೀ ತುಳಸೀ 

ಗಂಡು : ಯಾರೀ ಅಂಜುಬುರುಕೀ ಯಾರೀ ಕನ್ನಡತೀ ಈ ಹಿಂದಿ ಲೋಕದಲ್ಲಿ 
            ಯಾರೀ ಅಂಜುಬುರುಕೀ ಯಾರೀ ಹಾಡುಗಾತೀ  ಈ ಪಾಪ್ ಸಾಂಗ್ ಮಧ್ಯದಲ್ಲಿ 
            ಹೃದಯದಾ ನನ್ನ ಟೇಪ್ ರಿಕಾರ್ಡರ್ ಚಲಿಸದೇ ಅವಳ ಕಂಠದ ರಾಗ ಮುದ್ರಣ ಮಾಡಿದೇ 
            ಅವಳ ಕಣ್ಣೀನ ಕ್ಯಾಮರ ನನ್ ಫೋಟೋ ತೆಗೆದ ಹಾಗಿದೇ 
            ಯಾರೀ ಅಂಜುಬುರುಕೀ ಯಾರೀ ಸರಳ ಸುಂದರೀ ನಮ್ಮ ಪಕ್ಕದ ಮನೆಯಲ್ಲಿ 

ಗಂಡು : ಮನಸೂ ಸೆಳೆಯೋ ಮುಖಪುಟದ ಕಾದಂಬರೀ 
            ಒಂದೇ ಉಸಿರಿನಲ್ಲಿ ಓದಿ ಬಿಡುವಂಥ ಕುತೂಹಲ 
            ಕೈಗೇ ಸಿಗದಂತಾಗಿದೇ ಅದು ಗಾಜಿನ ಮನೆಯಲ್ಲಿದೇ 
            ಯಾರೀ ಅಂಜುಬುರುಕೀ ಯಾರೀ ಹೊನ್ನ ಜಿಂಕೇ ನನ್ ಕಣ್ಣಿನ ಕಾಡಿನಲ್ಲಿ 
            ಯಾರೀ ಅಂಜುಬುರುಕೀ ಯಾರೀ ಅನುಸೂಯೇ ಈ ಜಲಸಿ ಲೋಕದಲ್ಲಿ       
            ಕೆಂಪು ಸೂರ್ಯನ ತಿಲಕ ಮಾಡಿ ತಂದರೆ ನಿನ್ನ ಹಣೆಗೆ ಇಡುವೆನೆಂದೂ ಅಂದರೇ 
            ಹೂಂ ಅನ್ನತ್ತಾಳೋ.. ಹೂಂ ಹೂಂ ಅನ್ನುತ್ತಾಳೋ          
            ಯಾರೀ ಅಂಜುಬುರುಕೀ ಯಾರೀ ಮೌನ ಗೌರೀ ನನ್ ಹಾರ್ಟಿನ್ ಕೋರ್ಟಲ್ಲಿ 
            ಯಾರೀ ಅಂಜುಬುರುಕೀ ಯಾರೀ ವಿನಯವತೀ ನನ್ ಪಕ್ಕದ ಸೂರಿನಲ್ಲಿ 
            ಓಹ್ ... ಹೇ.. ಹೇ.. ಹೇ.. ಹೇ..  ಹೇ.. ಹೇ..  
            ಓಹ್ ... ಹೇ.. ಹೇ.. ಹೇ.. ಹೇ..  ಹೇ.. ಹೇ..  
------------------------------------------------------------------------------------------------------------------------

No comments:

Post a Comment