- ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ..
- ಓ ದ್ಯಾವ್ರೇ, ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
- ಓ ದ್ಯಾವ್ರೇ, ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ಕಥಾ ಸಂಗಮ (1976) - ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ..
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ..
ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ
ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ ಕಾರಣ ಹೆಣ್ಣಿನ ಅಂದ...
ಶಿಲ್ಪಿ ಜಕ್ಕಣ್ಣನ ಕಲೆಯ ಕಲ್ಪನೆಗೆ ಕಾರಣ ಹೆಣ್ಣಿನ ಅಂದ...
ಕವಿ ಮುದ್ದಣ್ಣನ ಕಾವ್ಯ ಮನೋರಮೆ ರಂಜಿಸೆ ಕಾರಣ ಹೆಣ್ಣಿನ ಅಂದ
ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ...
ರೋಮಾನ್ಸಿನ ರಾಜ ರೋಮಿಯೊ ಅಂದು ರೋಮಾಂಚಗೊಂಡ ಹೆಣ್ಣಿಂದ...
ರೋಮಾನ್ಸಿನ ರಾಜ ರೋಮಿಯೊ ಅಂದು ರೋಮಾಂಚಗೊಂಡ ಹೆಣ್ಣಿಂದ...
ಆದಿ ಪುರುಷ ಆಡಮ್ ತಿಂದ ಆದಿ ಫಲವನು ಹೆಣ್ಣಿಂದ...
ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ..
ಪ್ರೇಮಿ ಮಜೂನು ಪ್ರಣಯ ವಿಲಾಸವೂ ಅಮರತೇ ಹೊಂದಿತು ಹೆಣ್ಣಿಂದ
ಪ್ರೇಮಿ ಮಜೂನು ಪ್ರಣಯ ವಿಲಾಸವೂ ಅಮರತೇ ಹೊಂದಿತು ಹೆಣ್ಣಿಂದ
ಪ್ರೇಮದ ವೈಭವ ಸುಂದರ ಶಿಲ್ಪತಾಜಮಹಲ್ ಹೆಣ್ಣಿಂದ
ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ..
ಉಮರು ಖಯ್ಯಾಮನ ಕಾವ್ಯದ ನಿಶೆಗೆ ಕಾರಣ ಹೆಣ್ಣಿನ ಆನಂದ..
---------------------------------------------------------------------------------------------------------------------
ಓ ದ್ಯಾವ್ರೇ, ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ, ಓ ದ್ಯಾವ್ರೇ...
ಏ ಹೂವೇ ನಿನ್ನ ಚೆಲುವ ನಾ ಕಂಡೇ ಇಲ್ಲಾ
ಚೆಲುವು ರೂಪು ಅಂದರೇನೋ ನಂಗೇ ಗೊತ್ತೇ ಇಲ್ಲಾ
ನಿನ್ನ ಘಮ ಘಮ ನನ್ನ ಮನವ ತುಂಬೈತಲ್ಲಾ ತುಂಬೈತಲ್ಲಾ
ಓ ದ್ಯಾವ್ರೇ.. ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ಕಥಾ ಸಂಗಮ (1976) - ಓ ದ್ಯಾವ್ರೇ, ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಕಸ್ತೂರಿ ಶಂಕರ್

ಓ ಹೊಳೆಯೆ ನಿನ್ನ ಓಟ ನಾ ನೋಡಲಾರೆ
ಓ ಅಲೆಯೆ ನಿನ್ನ ಆಟ ನಾ ಕಾಣಲಾರೆ
ನಿಮ್ಮ ಸಂಗ ಆಡುವಾಗ ನನ್ನ ನಾ ಮರೆವೆ ನನ್ನ ನಾ ಮರೆವೆ
ಓ ದ್ಯಾವ್ರೇ.. ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ಓ ಮುಗಿಲೇ ನಿನ್ನ ಬಣ್ಣ ನಾನಿಂದು ಕಾಣೆ
ಏಳು ಬಣ್ಣ ಆಂತಾರೆ ನಾನೊಂದೂ ಕಾಣೆ
ಸೋನೆಯಲ್ಲಿ ತೋಯುವಾಗ ನನ್ನ ನಾ ಮರೆವೆ ನನ್ನ ನಾ ಮರೆವೆ
ಓ ದ್ಯಾವ್ರೇ.. ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ, ಕುಣಿವೆ ನಿನ್ನಾಣೆ ಕುಣಿವೆ ನಿನ್ನಾಣೆ
--------------------------------------------------------------------------------------------------------------------------
ಕಥಾ ಸಂಗಮ (1976) - ಓ ದ್ಯಾವ್ರೇ, ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಕಸ್ತೂರಿ ಶಂಕರ್
ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ
ಓ ದೊರೆಯೇ ನಿನ್ನ ಮಾತೇ ಜೇನ ಸವಿದಾಂಗೆ
ನಿನ್ನ ನಗೆಯಾ ಹೆಜ್ಜೇ ಸದ್ದೇ ಸಂಗೀತ ನಂಗೇ
ಓ ದೊರೆಯೇ ನಿನ್ನ ಮಾತೇ ಜೇನ ಸವಿದಾಂಗೆ
ನಿನ್ನ ನಗೆಯಾ ಹೆಜ್ಜೇ ಸದ್ದೇ ಸಂಗೀತ ನಂಗೇ
ನಿನ್ನ ಕೂಟ ಗಂಜಿ ಊಟ ಸಂಕ್ರಾತಿ ನನಗೇ.. ಸಂಕ್ರಾತಿ ನಂಗೇ ..
ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ಓ ಒಡೆಯಾ ತಾಳಿ ನನ್ನಾ ಬಾಳ ಕಣ್ಣಾಯ್ತು
ಏಳೂ ಜನ್ಮ ಕುರುಡಿಯಾದ್ರೂ ನೀನಿದ್ರೇ ಸಾಕೂ
ಓ ಒಡೆಯಾ ತಾಳಿ ನನ್ನಾ ಬಾಳ ಕಣ್ಣಾಯ್ತು
ಏಳೂ ಜನ್ಮ ಕುರುಡಿಯಾದ್ರೂ ನೀನಿದ್ರೇ ಸಾಕೂ
ಹಗಲೂ ಇರುಳೂ ಒಂದೇ ಕಂಡರೂ ನೀನೇ ನನ್ನ ಬೆಳಕೂ.. ನೀನೇ ನನ್ನ ಬೆಳಕೂ
ಓ ದ್ಯಾವ್ರೇ ನಿನ್ನ ಅಂದ ಚಂದವೇನೋ ಎಂದೂ ನಾ ಕಾಣೇ
ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ... ಹೂಂಹೂಂ ನಿನ್ನಾಣೆ. ಹೂಂಹೂಂ ನಿನ್ನಾಣೆ.
--------------------------------------------------------------------------------------------------------------------------
No comments:
Post a Comment