357. ಬಾಳ ಬಂಧನ (1971)

ಬಾಳ ಬಂಧನ ಚಲನ ಚಿತ್ರದ ಹಾಡುಗಳು
  1. ಕಲಿಕೆಯೇ ಜಾಣ ಬಲ್ಲ ಕ್ರಮ ಕಲಿಕೆಯೇ ಜಾಣ ಬಲ್ಲ ಕ್ರಮ
  2. ನಮ್ಮ ಮನೆ ನಮ್ಮ ಮನೆ ನಂದ ಗೋಕುಲ ನಮ್ಮ ಮನೆ
  3. ನಿಜವನ್ನೇ ಹೇಳುವೆ ನಾನು, ಸತ್ಯವ ನುಡಿವ ಕನ್ನಡದವನು
  4. ಚಿನ್ನದಂಥ ನಾಡಿಗೆ ರನ್ನದಂಥ ರಾಜ
  5. ಬಾಚಿ ಬೈತಲೆ ನಯವಾಗಿ
  6. ಆಪತ್ಬಾಂಧವ ರಂಗಯ್ಯ
ಬಾಳ ಬಂಧನ (1971) - ಕಲಿಕೆಯೇ ಜಾಣ ಬಲ್ಲ ಕ್ರಮ ಕಲಿಕೆಯೇ ಜಾಣ ಬಲ್ಲ ಕ್ರಮ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಶೀ ಹಾಡಿದವರು: ಪಿ.ಸುಶೀಲಾ

ಕಲಿಕೆಯೇ ಜಾಣ ಬಲ್ಲ ಕ್ರಮ ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ ಜ್ಞಾನಿಗೇಕೀ ಶ್ರಮ ‌‌
ಕಲಿಕೆಯೇ ಜಾಣ ಬಲ್ಲ ಕ್ರಮ  ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ ಜ್ಞಾನಿಗೇಕೀ ಶ್ರಮ ‌‌

ಸಾವಿರ ಸುಮಗಳ ಸುಮಧುರ ಸಾರ   ಹನಿ ಹನಿ ಹವಣಿಸಿ ರಚಿಪ
ಸಾವಿರ ಸುಮಗಳ ಸುಮಧುರ ಸಾರ   ಹನಿ ಹನಿ ಹವಣಿಸಿ ರಚಿಪ
ಜೇನಿನ ಜಾಣ್ಮೆಯ ರಸ ಭಂಡಾರ  ಯಾವ ಶಾಲೆಯ ಶಿಲ್ಪ
ಯಾವ ಶಾಲೆಯ ಶಿಲ್ಪ
ಕಲಿಕೆಯೇ ಜಾಣ ಬಲ್ಲ ಕ್ರಮ  ಕಲಿಯದ ಉಲಿಯದ ಜ್ಞಾನಿಗೇಕೀ ಶ್ರಮ ‌‌

ತಾಪವ ನೀಗುವ ತಳಿರಿನ ತಂಪು           ಯಾವೆಡೆ ನೀಡುವ ಪಾಠ
ತಾಪವ ನೀಗುವ ತಳಿರಿನ ತಂಪು           ಯಾವೆಡೆ ನೀಡುವ ಪಾಠ
ಹೂವಿನ ಚೆಲುವಿದು ಸೋಲುವ ಕಣ್ಣಿಗು    ಏಕೆ ಕಲಿಕೆಯ ಕಾಟ
ಏಕೆ ಕಲಿಕೆಯ ಕಾಟ
ಕಲಿಕೆಯೇ ಜಾಣ ಬಲ್ಲ ಕ್ರಮ   ಕಲಿಯದ ಉಲಿಯದ ಜ್ಞಾನಿಗೇಕೀ ಶ್ರಮ ‌‌

ಅರ್ಥವಿಲ್ಲದ ತತ್ವ ಓದುವವ  ಪುಸ್ತಕ ಬದನೇಕಾಯಿ
ಅರ್ಥವಿಲ್ಲದ ತತ್ವ ಓದುವವ   ಪುಸ್ತಕ ಬದನೇಕಾಯಿ
ಹೂವಿನ ಮನಸಿನ ನಲ್ಲ ನನ್ನವ   ಮರುಳನಾದರೂ ಹಾಯಿ
ಮರುಳನಾದರೂ ಹಾಯಿ
ಕಲಿಕೆಯೇ ಜಾಣ ಬಲ್ಲ ಕ್ರಮ  ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ ಜ್ಞಾನಿಗೇಕೀ ಶ್ರಮ ‌‌
----------------------------------------------------------------------------------------------------------------------

ಬಾಳ ಬಂಧನ (1971) - ನಮ್ಮ ಮನೆ ನಮ್ಮ ಮನೆ ನಂದ ಗೋಕುಲ ನಮ್ಮ ಮನೆ
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ : ಕುರಾಶೀ   ಹಾಡಿದವರು: ಪಿ.ಸುಶೀಲಾ

ನಮ್ಮ ಮನೆ ನಮ್ಮ ಮನೆ ನಂದ ಗೋಕುಲ ನಮ್ಮ ಮನೆ
ನಮ್ಮ ಮನೆ ನಮ್ಮ ಮನೆ  ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
ನಮ್ಮ ಮನೆ ನಮ್ಮ ಮನೆ  ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ

ಒಲುಮೆಯ ಹಾಲಿನ ಚಿಲುಮೆ ತಾಯಿ  ಅಕ್ಕರೆ ತುಂಬಿದ ಸಕ್ಕರೆ ತಂದೆ
ಒಲುಮೆಯ ಹಾಲಿನ ಚಿಲುಮೆ ತಾಯಿ   ಅಕ್ಕರೆ ತುಂಬಿದ ಸಕ್ಕರೆ ತಂದೆ
ಮಕ್ಕಳು ಮರಿಗಳು ನಾವು  ಬಾಳೆ ಹಲಸಿನ ಮಾವು
ಮಕ್ಕಳು ಮರಿಗಳು ನಾವು  ಬಾಳೆ ಹಲಸಿನ ಮಾವು
ಸಿಹಿಯೇ ಎಲ್ಲಾ ಕಹಿ ಇಲ್ಲ ಕಸವಿಲ್ಲ
ನಮ್ಮ ಮನೆ ನಮ್ಮ ಮನೆ  ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ

ಹಿರಿಯರ ನುಡಿಯಲ್ಲಿ ಒಮ್ಮತ  ಕಿರಿಯದ ನಡೆಯಲ್ಲಿ ಸಮ್ಮತ
ಹಿರಿಯರ ನುಡಿಯಲ್ಲಿ ಒಮ್ಮತ   ಹಿರಿಯರ ನುಡಿಯಲ್ಲಿ ಒಮ್ಮತ
ಕಿರಿಯದ ನಡೆಯಲ್ಲಿ ಸಮ್ಮತ   
ಬೇವು ಬೆಲ್ಲ ಬಾಳು ಎಂಬುವ ಮಾತೇ ಸುಳ್ಳು
ಬೇವೇ ಇಲ್ಲಾ ಬದುಕೆಲ್ಲ ಬರಿ ಬೆಲ್ಲ
ನಮ್ಮ ಮನೆ ನಮ್ಮ ಮನೆ  ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
----------------------------------------------------------------------------------------------------------------------

ಬಾಳ ಬಂಧನ (1971) - ನಿಜವನ್ನೇ ಹೇಳುವೆ ನಾನು, ಸತ್ಯವ ನುಡಿವ ಕನ್ನಡದವನು 
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್

ನಿಜವನ್ನೇ ಹೇಳುವೆ ನಾನು, ಸತ್ಯವ ನುಡಿವ ಕನ್ನಡದವನು
ಥಳುಕೇನು ಮಾಡೋದಿಲ್ಲ, ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ ಪಾದ ಸಾಕ್ಷಿ
ನಿಜವನ್ನೇ ಹೇಳುವೆ ನಾನು, ಸತ್ಯವ ನುಡಿವ ಕನ್ನಡದವನು
ತಳುಕೇನು ಮಾಡೋದಿಲ್ಲ, ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ ಪಾದ ಸಾಕ್ಷಿ

ಮೇಜಿನ ಕೆಳಗೆ ಕೈಯ ನೀಡುವರು ಚಿಲ್ಲರೆ ಬುದ್ದಿ ಜನರು
ಇವರಿಗಿಂತಲು ತಿರುಪೆ ಎತ್ತೋ ಬಿಕ್ಷುಕ ಜನರೆ ಮೇಲು
ಲಂಚದ ಕೈಯಲಿ ಹಣ ನಿಲ್ಲೋಲ್ಲ, ದೇವರು ಇವರನು ಕ್ಷಮಿಸೋದಿಲ್ಲ
ಸುಳ್ಳೇನು ಹೇಳೋದಿಲ್ಲ, ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
ನಿಜವನ್ನೇ ಹೇಳುವೆ ನಾನು, ಸತ್ಯವ ನುಡಿವ ಕನ್ನಡದವನು

ಮುದ್ದು ಮಕ್ಕಳ ಜಗಳದಾಟಕೆ ಒದ್ದೇ ಬಿಡುವರು ದೊಡ್ಡವರು
ಸಣ್ಣ ಮಾತಿಗೆ ಗುದ್ದಾಡುತ್ತ ಅವರೇ ಗದ್ದಲ ಮಾಡುವರು
ಕತ್ತೆಯಂತೆ ಒದ್ದಾಡುವ ಜನರ, ದೇವರೆ ಕರುಣಿಸಿ ರಕ್ಷಿಸಬೇಕು
ಸುಳ್ಳೇನು ಹೇಳೋದಿಲ್ಲ, ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
ನಿಜವನ್ನೇ ಹೇಳುವೆ ನಾನು, ಸತ್ಯವ ನುಡಿವ ಕನ್ನಡದವನು

ಏನೂ ಓದದ ಅಂತಸ್ತಿಲ್ಲದ ನ್ನನ್ನನೇ ಒಲಿದೆ ನೀನು
ನಿನ್ನಯ ಕಾಲಿನ ಪುಣ್ಯವೊ ಏನೋ ಮನುಷ್ಯನಾದೆ ನಾನು
ಅಳುವೋ ನಗುವೋ ಏನೇ ಬರಲಿ, ನಿನ್ನೀ ಒಲವು ಎಂದೂ ಇರಲಿ
ಸುಳ್ಳೇನು ಹೇಳೋದಿಲ್ಲ, ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
ನಿಜವನ್ನೇ ಹೇಳುವೆ ನಾನು, ಸತ್ಯವ ನುಡಿವ ಕನ್ನಡದವನು
ತಳುಕೇನು ಮಾಡೋದಿಲ್ಲ, ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ, ಪಾದ ಸಾಕ್ಷಿ
--------------------------------------------------------------------------------------------------------------------------

ಬಾಳ ಬಂಧನ (1971) - ಚಿನ್ನದಂಥ ನಾಡಿಗೆ ರನ್ನದಂಥ ರಾಜ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ 

ಹೆಣ್ಣು : ಹೂಂಹೂಂಹೂಂಹೂಂ
          ಚಿನ್ನದಂಥ ನಾಡಿಗೆ ರನ್ನದಂಥ ರಾಜ
          ಚಿನ್ನದಂಥ ನಾಡಿಗೆ ರನ್ನದಂಥ ರಾಜ ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
          ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಗಂಡು : ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ ಹೂಂಹೂಂ ಏಳಿಗೆಯಿಲ್ಲ
ಇಬ್ಬರು : ಚಿನ್ನದಂಥ ನಾಡಿಗೆ ರನ್ನದಂಥ ರಾಜ

ಗಂಡು : ತಂದೆ ತಾಯಿ ಅಲ್ಲಗಳೆದ ಓದಿದ ಜಾಣ ತಾನೇ ಹಿರಿಯನಂತೆ ನಡೆದ ಓದದ ಕೋಣ
           ತಂದೆ ತಾಯಿ ಅಲ್ಲಗಳೆದ ಓದಿದ ಜಾಣ ತಾನೇ ಹಿರಿಯನಂತೆ ನಡೆದ ಓದದ ಕೋಣ
           ಕುದುರೆಗೆರಡು ಕೊಂಬು ಎಂದ ಮಾತಿನ ಮಲ್ಲ ಹೆಂಡಿರಾ ಗುಲಾಮರಾ ಹುಂಬರು ಎಲ್ಲ
           ಆ... ಹುಂಬರು ಎಲ್ಲ
ಹೆಣ್ಣು : ಚಿನ್ನದಂಥ ನಾಡಿಗೆ ರನ್ನದಂಥ ರಾಜ
ಇಬ್ಬರು : ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಗಂಡು : ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ.. ಹೂಂಹೂಂ ಏಳಿಗೆಯಿಲ್ಲಾ

ಗಂಡು : ರಾಜ ಒಂದು ನಾಯಿ ತಂದು ನೆರಳು ನೀಡಿದೆ ಅದನ್ನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
           ರಾಜ ಒಂದು ನಾಯಿ ತಂದು ನೆರಳು ನೀಡಿದೆ ಅದನ್ನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
          ಹೊತ್ತಿಗೂಟ ಸುತ್ತು ಕೆಲಸ ಅದರ ಪಾಲಿಗೆಅದರ ಎದೆಯ ಗುಡಿಯ ಪೂಜೆ ಎಲ್ಲ ಅವನ ಕಾಲಿಗೆ
          ಪೂಜೇ ಅವನ ಕಾಲಿಗೆ
ಹೆಣ್ಣು : ಚಿನ್ನದಂಥ ನಾಡಿಗೆ ರನ್ನದಂಥ ರಾಜ

ಗಂಡು : ತನ್ನದಾಗಿ ಕಂಡ ಸೊತ್ತು ತನ್ನದೇ ಏನೋ ಅನ್ಯರಲ್ಲಿ ಇಟ್ಟ ಕರುಣೆ ಕಣ್ಣುರಿಯೇನೋ
           ತನ್ನದಾಗಿ ಕಂಡ ಸೊತ್ತು ತನ್ನದೇ ಏನೋ ಅನ್ಯರಲ್ಲಿ ಇಟ್ಟ ಕರುಣೆ ಕಣ್ಣುರಿಯೇನೋ
           ಮುಪ್ಪಿನಲ್ಲಿ ಆದವರೇ  ಮಕ್ಕಳೇ ಕೇಳು ನೀತಿಗೆಟ್ಟ ಮಗನಿಗಿಂತ ನಾಯಿಯೇ ಮೇಲು
           ಒಂದು ನಾಯಿಯೇ ಮೇಲು
ಇಬ್ಬರು : ಚಿನ್ನದಂಥ ನಾಡಿಗೆ ರನ್ನದಂಥ ರಾಜ ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
             ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಗಂಡು : ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ ಹೂಂಹೂಂ ಏಳಿಗೆಯಿಲ್ಲಾ
------------------------------------------------------------------------------------------------------------------------

ಬಾಳ ಬಂಧನ (1971) - ಬಾಚಿ ಬೈತಲೆ ನಯವಾಗಿ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಶೀ ಹಾಡಿದವರು: ಪಿ.ಬಿ.ಎಸ್

ಬಾಚಿ ಬೈತೆಲೆ ನಯವಾಗಿ ತಿದ್ದಿ ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ ಬಾಚಿ ಕೊಂಡೆಯಾ ಬಲವಾಗಿ  ಹೇ....  ಮದುವೇ ಹೆಣ್ಣೇ ...
ಬಾಚಿ ಬೈತೆಲೆ ನಯವಾಗಿ ತಿದ್ದಿ ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ ಬಾಚಿ ಕೊಂಡೆಯಾ ಬಲವಾಗಿ... ಬಾಚಿ ಕೊಂಡೆಯಾ ಬಲವಾಗಿ

ಓ.. ಓ. ಓ ಓ ಓ ... 
ಕುಡಿಗಣ್ಣೋಟದ ಕುಣಿಕೆಯ ಬೀಸಿ...
ಕುಡಿಗಣ್ಣೋಟದ ಕುಣಿಕೆಯ ಬೀಸಿ ಸೆಳೆದು ಬಿಗಿದೇಯಾ ಅಳಿಯ ದೇವರ
ಕುಡಿಗಣ್ಣೋಟದ ಕುಣಿಕೆಯ ಬೀಸಿ ಸೆಳೆದು ಬಿಗಿದೇಯಾ ಅಳಿಯ ದೇವರ
ನಾಚಿಕೆ ಭಯಗಳ ಆಚೆಗೇ ದೂಡಿ ಪಳಗಿಸಿಕೊಂಡೆಯಾ ತಿಳಿ ನಗೆಯಲ್ಲಿ
ಏನು ಹೆಣ್ಣಮ್ಮಾ ಎಂಥಾ ಕಾಲ ಬಂತಮ್ಮಾ ಏನೂ ಗೊತ್ತಮ್ಮಾ ನನಗೂ ಎಲ್ಲ ಗೊತ್ತಮ್ಮಾ
ಬಾಚಿ ಬೈತೆಲೆ ನಯವಾಗಿ ತಿದ್ದಿ ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ ಬಾಚಿ ಕೊಂಡೆಯಾ ಬಲವಾಗಿ... ಬಾಚಿ ಕೊಂಡೆಯಾ ಬಲವಾಗಿ

ಉರಿಗಣ್ಣ ಇಲ್ಲದಾ ಬರಿ ಹಣೆ ನಿನ್ನದೂ ರೋಷ ವೇಷ ತಾಗಲಾರದು
ಉರಿಗಣ್ಣ ಇಲ್ಲದಾ ಬರಿ ಹಣೆ ನಿನ್ನದೂ ರೋಷ ವೇಷ ತಾಗಲಾರದು
ಮುಗಿಯಿತು ಎಲ್ಲಾ ಆಟ ಪಾಠ ಕಾದಿದೆ ಮುಂದೆ ಕಂದನ ಕಾಟ
ಲಾಲಿ ಕಂದಮ್ಮಾ ಉಳೊಳೊಳಾಯಿ ಲಾಲಿ ಕಂದಮ್ಮಾ
ಲಾಲಿ ಕಂದಮ್ಮಾ ಉಳೊಳೊಳಾಯಿ ಲಾಲಿ ಕಂದಮ್ಮಾ
ಬಾಚಿ ಬೈತೆಲೆ ನಯವಾಗಿ ತಿದ್ದಿ ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ ಬಾಚಿ ಕೊಂಡೆಯಾ ಬಲವಾಗಿ... ಬಾಚಿ ಕೊಂಡೆಯಾ ಬಲವಾಗಿ

ಗಂಡನ ಬೆಂಬಲ ಗಳಿಸಿದ ಮ್ಯಾಲೇ ತೌರ ಹಂಬಲ ತೊರುವೇ ಏನೂ
ಗಂಡನ ಬೆಂಬಲ ಗಳಿಸಿದ ಮ್ಯಾಲೇ ತೌರ ಹಂಬಲ ತೊರುವೇ ಏನೂ
ಜನ್ಮ ತಾಳಿದ ಮನೆತನ ಮರೆತು ಜಂಭದ ಕೋಳಿಯಾಗುವೇ ಏನೂ
ಕೋಪ ಏಕಮ್ಮಾ ಕೋಡು ಮೂಡಿತಮ್ಮಾ ಮಾತನಾಡಮ್ಮಾ ಬಿಂಕದ ಮೌನ ಗೌರಮ್ಮಾ
ಬಾಚಿ ಬೈತೆಲೆ ನಯವಾಗಿ ತಿದ್ದಿ ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ ಬಾಚಿ ಕೊಂಡೆಯಾ ಬಲವಾಗಿ... ಬಾಚಿ ಕೊಂಡೆಯಾ ಬಲವಾಗಿ
ಹೊಯ್ ಮದುವೇ ಹೆಣ್ಣೆ ... ಆಅ ... ಅಹ್ಹಹ್ಹಹ್ಹಹಹ.. ಹೂಂ ...  
--------------------------------------------------------------------------------------------------------------------------

ಬಾಳ ಬಂಧನ (1971) - ಆಪತ್ಭಾಂಧವ ರಂಗಯ್ಯ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ : ಕುರಾಶೀ ಹಾಡಿದವರು: ಕೆ.ಜೆ.ಏಸುದಾಸ್

ಆಪತ್ಭಾಂಧವ ರಂಗಯ್ಯಾ ..... ರಂಗಯ್ಯಾ ...   ರಂಗಯ್ಯಾ ... 
ಆಪತ್ಭಾಂಧವ ರಂಗಯ್ಯಾ ಬಾಗಿಲೂ ತೆರೆದಿದೇ ಬಾರಯ್ಯಾ
ಅಲ್ಲೇ ನಿಂತೇ ಏಕಯ್ಯಾ ನಡೆಮಡಿ ಹಾಕುವೇ ಬಾರಯ್ಯಾ
ಆಪತ್ಭಾಂಧವ ರಂಗಯ್ಯಾ ಬಾಗಿಲೂ ತೆರೆದಿದೇ ಬಾರಯ್ಯಾ
ಅಲ್ಲೇ ನಿಂತೇ ಏಕಯ್ಯಾ ನಡೆಮಡಿ ಹಾಕುವೇ ಬಾರಯ್ಯಾ .. ರಂಗಾ....  ಬಂದೆಯಾ

ಕಟ್ಟಿದೆ ನೂರೂ ಆಶಾ ಮಂದಿರ ಆಯಿತು ರಂಗಾ ಗಾಳಿಗೋಪುರ
ಅದೇನು ನಾನು ಭೂಮಿಗೇ ಭಾರ ಬೀಳುವ ಮುನ್ನ ಕೈ ಹಿಡಿ ಬಾರ..
ರಂಗಾ....  ಬಂದೆಯಾ ... ಆಪತ್ಭಾಂಧವ....  ರಂಗಯ್ಯಾ ....

ಸೇವಕನಾದೇ ಸ್ನೇಹಿತನಾದೇ ಮಂತ್ರಿಯೂ ಆದೇ ಸಲಹೆ ನೀಡಿದೇ
ಆತ್ಮದ ಬಂಧು ನೀನೇ ರಂಗ ಆಸರೇ ನಿನ್ನ ಸನ್ನಿಧಿ ಸಂಗ ರಂಗಾ... ಬಂದೆಯಾ...
ಆಪತ್ಭಾಂಧವ....  ರಂಗಯ್ಯಾ .... ರಂಗಯ್ಯಾ .... ರಂಗಯ್ಯಾ ....
ಪರಿತ್ರಾಣಾಯಾ ಸಾಧುನಾ ವಿನಾಶಾಯಚ ದೃಷ್ಯಕೃತ ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ
------------------------------------------------------------------------------------------------------------------------

No comments:

Post a Comment