360. ರಾಜ ನನ್ನ ರಾಜ (1976)



ರಾಜ ನನ್ನ ರಾಜ ಚಿತ್ರದ ಹಾಡುಗಳು 
  1. ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ 
  2. ನಿನ್ನದೇ ನೆನಪು ದಿನವೂ ಮನದಲ್ಲಿ 
  3. ನೂರು ಕಣ್ಣು ಸಾಲದು 
  4. ತನುವು ಮನವು ಇಂದು ನಿಂದಾಗಿದೆ 
  5. ಚಂದಿರ ಕಾಣದಿರಳು ನೀನಿರದೇ 
ರಾಜ ನನ್ನ ರಾಜ (1976) - ಕಲ್ಲೇಟಿಗಿಂತ ನಿನ್ನ ಕಣ್ಣೇಟು
ಹಾಡಿದವರು: ಎಸ್. ಜಾನಕಿ ಮತ್ತು ಡಾ|| ರಾಜ್ ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಜಿ. ಕೆ. ವೆಂಕಟೇಶ್

ಗಂಗಮ್ಮಽಽಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ...
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ
ನಡುಗಿದೆ ಗಡ ಗಡ ಗಂಗಮ್ಮ... ನನ್ನ ಎದೆಯಲ್ಲಿ ಢವ ಢವ ಢವ ಕೇಳಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಢವ
ಢವ ಢವ ಢವ ಢವ ಕೇಳಮ್ಮ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ...
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ  ಆಸೆಯು ಅತಿಯಾಗಿ ಚೆನ್ನಯ್ಯ
ನನ್ನ ಮೈಯೆಲ್ಲ ಝುಮ್ ಝುಮ್ ಝುಮ್ ಝುಮ್ ನೋಡಯ್ಯ
ನನ್ನ ಮೈಯೆಲ್ಲ ಝುಮ್ ಝುಮ್! ಝುಮ್ ಝುಮ್ ಝುಮ್ ಝುಮ್ ನೋಡಯ್ಯ!!

ತುಂಬಿದ ಯೌವ್ವನ ಭಾರಕೆ ನಿನ್ನ  ಬಳುಕುವ ನಡುವು ಉಳುಕುವ ಮುನ್ನ
ಮೆಲ್ಲಗೆ ಹತ್ತಿರ ಬಾರಮ್ಮ... ನಿನ್ನ ಬಿಟ್ಟಿರಲಾರೆ ನಾ ಗಂಗಮ್ಮ
ಗಗನದಿ ಸಿಡಿಲು ಕೇಳಿದ ನವಿಲು  ಗರಿಗಳ ಕೆದರಿ ಕುಣಿಯುವ ಹಾಗೆ
ಎದೆಯಲಿ ನಿನ್ನಾಸೆ ಚೆನ್ನಯ್ಯ... ನನ್ನ ಬಯಕೆಯ ತೀರಿಸು ಬಾರಯ್ಯ
ನಿನ್ನಾಟ ಬಯಲಾಗಿ ನಾನಿಂದು ಬೆರಗಾಗಿ.. ಆಸೆಯು ಅತಿಯಾಗಿ ಚೆನ್ನಯ್ಯ
ನನ್ನ ಮೈಯೆಲ್ಲ ಝುಮ್ ಝುಮ್ ಝುಮ್ ಝುಮ್ ನೋಡಯ್ಯ
ನನ್ನ ಮೈಯೆಲ್ಲ ಝುಮ್ ಝುಮ್! ಝುಮ್ ಝುಮ್ ಝುಮ್ ಝುಮ್ ನೋಡಯ್ಯ!!

ಮೋಡದ ಮರೆಯ ಚಂದಿರ ಚೆಂದ ಸೆರಗಿನ ಮರೆಯ ಚೆಲುವೆ ಅಂದ
ಮೆತ್ತಾನೆ ಹೂರಾಕಿ ಗಂಗಮ್ಮ ಹಾಸಿ ಮುತ್ತಿನ ಸರವ ಕೊಡುವೆ ಬಾರಮ್ಮ
ಹೂವಿನ ಹಾಗೆ ಮೈ ಅರುಳುತಿದೆ ಬಳಸಿದ ಉಡುಗೆ ಬಿಗಿಯಾಗುತಿದೆ
ಕಾಯನು ಈ ಬೇಗೆ ಚೆನ್ನಯ್ಯ ಇಂದೆ ಆಸರೆಯ ನೀಡು ಬಾರಯ್ಯ
ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ ನಡುಗಿದೆ ಗಡ ಗಡ ಗಂಗಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಕೇಳಮ್ಮ
ನನ್ನ ಎದೆಯಲ್ಲಿ ಢವ ಢವ ಢವ ಢವ
ಢವ ಢವ ಢವ ಢವ ಕೇಳಮ್ಮ
ಗಂಗಮ್ಮ       ಚೆನ್ನಯ್ಯ    ಏನಮ್ಮ   ಬಾರಯ್ಯ
-----------------------------------------------------------------------------------------------------------------------

ರಾಜ ನನ್ನ ರಾಜ (1976) - ನಿನದೇ ನೆನಪೂ ದಿನವೂ ಮನದಲ್ಲೀ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಪಿ.ಬಿ.ಶ್ರೀನಿವಾಸ್


ನಿನದೇ ನೆನಪೂ ದಿನವೂ ಮನದಲ್ಲೀ
ನೋಡುವಾ ಆಸೆಯೂ ತುಂಬಿದೇ ನನ್ನಲೀ... ನನ್ನಲೀ....ನಿನದೇ....

ತಂಗಾಳಿಯಲ್ಲಿ ಬೆಂದೇ ಏಕಾಂತದಲ್ಲಿ ನಾನೊಂದೇ
ಹಗಲಲಿ ತಿರುಗಿ ಬಳಲಿದೇ ಇರುಳಲಿ ಬಯಸಿ ಕೊರಗಿದೇ
ದಿನವೂ ನಿನ್ನ ನಾ ಕಾಣದೇ....ನಿನದೇ....

ಕಡಲಿಂದ ಬೇರೆಯಾಗಿ ತೇಲಾಡೊ ಮೋಡವಾಗೀ
ಕರಗುತ ಧರೆಗೆ ಇಳಿವುದೂ ಹರಿಯುತಾ ಕಡಲ ಬೆರೆವುದೂ
ನಮ್ಮೀ ಬಾಳಿನಾ ಬಗೆಯಿದೂ....ನಿನದೇ....

ಸೊಡರಲ್ಲಿ ಜ್ಯೋತಿಯಂತೇ ಒಡಲಲ್ಲಿ ಬಂದು ನೀ ನಿಂತೇ
ನೆನೆಯುತಾ ನಿನ್ನ ನೆನೆಯುತಾ ಚಿಂತೆಯ ಚಿತೆಯ ಬೆರೆಯುತಾ
ಕರಗೀ ಹೋದೆನೇ ನೋಯುತಾ....ನಿನದೇ....
---------------------------------------------------------------------------------------------------------------------

ರಾಜ ನನ್ನ ರಾಜ (1976) - ತನುವು ಮನವು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯಕರು : ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ


ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
ತನುವು ಮನವು ಇಂದು ನಿಂದಾಗಿದೆ

ಆ ಅನುದಿನವು ಅನು ಕ್ಷಣವು  ಜೊತೆಯಿರಲು ನೀನು... ನಲ್ಲ 
ಸರಸದಲಿ ಸುಖಪಡುವೆ  ನಾ ಕಾಲವೆಲ್ಲ
ಆ ಪ್ರೇಮದ ಕಾಣಿಕೆ ನೀಡುವೆ
ತನುವು ಮನವು ಇಂದು ನಿಂದಾಗಿದೆ ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
ತನುವು ಮನವು ಇಂದು ನಿಂದಾಗಿದೆ  

ಈ... ಯುಗ ಉರುಳಿ ಯುಗ ಬರಲಿ  ಪ್ರತಿ ಜನುಮದಲ್ಲೂ ... ನಲ್ಲೆ... 
ಬೆರೆತಿರುವ ಜೀವಗಳು ಎಂದೆಂದು ಒಂದು
ಈ ಮಾತಿನ ಮೋಡಿಗೆ ಸೋತೆನು
ತನುವು ಮನವು ಇಂದು ನಿಂದಾಗಿದೆ 

ಆ... ಮೋಡಗಳ ಮಿಂಚುಗಳ ಮಾಲೆಯನು ಹಾಕಿ.. ಇಂದು 
ಮಳೆ ಹನಿಯ ಸುರಿಸುತಲಿ ಹರಸುತಿದೆ ನೋಡು
ನಾ ಮರೆಯದ ರಾತ್ರಿ ಈ ವೇಳೆಯು
ತನುವು ಮನವು ಇಂದು ನಿಂದಾಗಿದೆ  ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ ಇದೇನೋ
ಇದೇನೋ ಇದೇನೋ ಇದೇನೋ
------------------------------------------------------------------------------------------------------------------------

ರಾಜ ನನ್ನ ರಾಜ (೧೯೭೬)
ರಚನೆ: ಚಿ. ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕರು: ಎಸ್. ಪಿ. ಬಾಲು, ಪಿ. ಬಿ. ಶ್ರೀನಿವಾಸ್


ಎಸ.ಪಿ:  ನೂರು ಕಣ್ಣು ಸಾಲದು
            ನೂರು ಕಣ್ಣು ಸಾಲದು ನಿನ್ನ ನೋಡಲು
            ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು
            ನೂರು ಕಣ್ಣು ಸಾಲದು ನಿನ್ನ ನೋಡಲು
           ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು
           ನೂರು ಕಣ್ಣು ಸಾಲದು

          ಯಾರ ಕನಸ ಕನ್ಯೆಯೊ ಶೃಂಗಾರ ಕಾವ್ಯವೋ
          ಯಾರ ಕನಸ ಕನ್ಯೆಯೊ ಶೃಂಗಾರ ಕಾವ್ಯವೋ 
         ಈ ಹೊಳೆವ ಕಣ್ಣ ನೋಟ, ಮುಂಗುರುಳ ತೂಗುವಾಟ
          ಈ ಚೆಲುವ ಮೈಯ್ಯ ಮಾಟ
          ಬಂಗಾರದ ಸಿಂಗಾರಿ ಕಂಡು ಮೂಕನಾದನು

ಪಿ.ಬಿ.:  ನೂರು ವರುಷವಾಗಲಿ ಮರೆಯಲಾರೆನು
           ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
          ನೂರು ವರುಷವಾಗಲಿ
          ಜನುಮ ಜನುಮದಲ್ಲು ನೀ ನನ್ನವಳೇನೆ
         ಜನುಮ ಜನುಮದಲ್ಲು ನೀ ನನ್ನವಳೇನೆ
         ಈ ನೋವ ತಿಳಿಯಲಾರೆ, ನೀ ನನ್ನ ಅರಿಯಲಾರೆ, ನೀ ಇರದೇ ಬಾಳಲಾರೆ
         ನಾ ಎಲ್ಲಿರಲಿ ನೀನೆ ನನ್ನ ಜೀವದ ಜೀವ
        ನೂರು ವರುಷವಾಗಲಿ ಮರೆಯಲಾರೆನು
        ಎಂದೆಂದು ನಿನ್ನ ಅಗಲಿ ನಾ ದೂರ ಹೋಗೆನು
       ನೂರು ವರುಷವಾಗಲಿ
--------------------------------------------------------------------------------------------------------------------------

ರಾಜ ನನ್ನ ರಾಜ (೧೯೭೬)
ರಚನೆ: ಚಿ. ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕರು: ಪಿ. ಬಿ. ಶ್ರೀನಿವಾಸ್


ಚಂದಿರನ ಕಾಣದಿರುಳು ನೀನಿರದೆ ನನ್ನ ಬಾಳು
ಮನಸಲಿ ಏನೋ ತಳಮಳ
ಹೃದಯದಿ ತುಂಬ ಕಳವಳ
ದಿನವೋ ನಿನ್ನದೇ ಹಂಬಲ
ನಿನದೇ ನೆನಪೂ ದಿನವೂ ಮನದಲ್ಲೀ
ನೋಡುವಾ ಆಸೆಯೂ ತುಂಬಿದೇ ನನ್ನಲೀ... ನನ್ನಲೀ....ನಿನದೇ....

ಸೊಡರಲ್ಲಿ  ಜ್ಯೋತಿಯಂತೆ ಒಡಲಲ್ಲಿ ಎಂದು ನೀ ನಿಂತೇ
ನೆನೆಯುತ ನಿನ್ನ ನೆನೆಯುತ
ಚಿಂತೆಯು ಚಿತೆಯು ಬೆರೆಯುತ
ಕರಗಿ ಹೋದೆನೇ ನೋಯುತ
ನಿನದೇ ನೆನಪೂ ದಿನವೂ ಮನದಲ್ಲೀ
ನೋಡುವಾ ಆಸೆಯೂ ತುಂಬಿದೇ ನನ್ನಲೀ... ನನ್ನಲೀ....ನಿನದೇ....
-------------------------------------------------------------------------------------------------------------------------


No comments:

Post a Comment