365. ಮಿಥುನ (1980)




ಮಿಥುನ ಚಿತ್ರದ ಹಾಡುಗಳು
  1. ಕರುಣಾಳು ಬಾ ಬೆಳಕೆ 
  2. ಕಣ್ಣಲ್ಲೇ ನೀ ಕರೆದೇ 
  3. ಉಕ್ಕಿ ಉಕ್ಕಿ ಹರಿದಿದೆ ನೋಡೀಗ 
  4. ತಂಟೆ ಮಾಡೋ ತುಂಟಿ 
  5. ಕಾಣದ ದಾರಿಗೆ ಕವಿದಿದೆ 
ಮಿಥುನ (1980)
ಸಂಗೀತ: ವಿಜಯಭಾಸ್ಕರ್ ಚಿತ್ರಗೀತೆ : ದೊಡ್ಡರಂಗೇಗೌಡ ಗಾಯನ: ವಾಣಿ ಜಯರಾಂ

ಆಆಆ... ಓಓಓಓಓ
ಕರುಣಾಳು ಬಾ ಬೆಳಕೇ
ಮಸುಕಿದಿ ಮಬ್ಬಿನಲಿ
ಕರುಣಾಳು ಬಾ ಬೆಳಕೇ
ಮಸುಕಿದಿ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ
ಮನೆದೂರ ಕನಿಕರಿಸಿ
ಕೈ ಹಿಡಿದು ನಡೇಸನ್ನನು
ಕರುಣಾಳು ಬಾ ಬೆಳಕೇ... ಬೆಳಕೇ
--------------------------------------------------------------------------------------------------------------------------

 ಮಿಥುನ (1980) 
ಸಂಗೀತ: ವಿಜಯಭಾಸ್ಕರ್ ಚಿತ್ರಗೀತೆ : ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ.ಬಿ, ವಾಣಿ ಜಯರಾಂ

ಗಂಡು : ಕಣ್ಣಲ್ಲೇ ನೀ ಕರೆದೇ ನಿನ್ನಲ್ಲೇ ನಾ ಬೆರೆತೆ
            ಹೇಗೋ ನೀ ನನ್ನ ಬಾಳಲ್ಲಿ ಹೊಸ ಹೊಸ ಅನುಭವ
            ಇನಿದಾದ ಸಂಗೀತ ತಂದೆ.. ಇನಿದಾದ ಸಂಗೀತ ತಂದೆ
ಹೆಣ್ಣು : ಕಣ್ಣಲ್ಲೇ ನೀ ಕರೆದೇ ನಿನ್ನಲ್ಲೇ ನಾ ಬೆರೆತೆ
          ಹೇಗೋ ನೀ ನನ್ನ ಬಾಳಲ್ಲಿ ಹೊಸ ಹೊಸ ಅನುಭವ
          ಇನಿದಾದ ಸಂಗೀತ ತಂದೆ.. ಇನಿದಾದ ಸಂಗೀತ ತಂದೆ

ಹೆಣ್ಣು : ಮೊಗ್ಗು ಹೂವಾಗಿ ಅರಳುತ ನಗುತ ಸ್ನೇಹ ಸೌರಭ ತಂತು
ಗಂಡು   ಹಿಗ್ಗು ಹೊನಲಾಗಿ ನಲಿಯುತ ಕುಣಿದು ಪ್ರೇಮದಲೆಯಾಗಿ ಬಂತು
           ಬಯಕೆ ಗರಿಬಿಚ್ಚಿ ಮುಗಿಲಲ್ಲಿ ಹಾರಾಡಿದೆ 
ಹೆಣ್ಣು :  ಲಜ್ಜೆ ಮೊಗ ಮುಚ್ಚಿ ಧರೆಯತ್ತ ತಾ ನೋಡಿದೆ
            ಮೈಯೆಲ್ಲ ಮಿಂಚಂತೆ ಏಕೋ ಏನೋ 
ಗಂಡು : ಕಣ್ಣಲ್ಲೇ ನೀ ಕರೆದೇ   ಹೆಣ್ಣು : ನಿನ್ನಲ್ಲೇ ನಾ ಬೆರೆತೆ

ಗಂಡು : ಹೀಗೆ ನಾವೆಂದು ಹಾಯಾಗಿ ಇರುವ ಕಾಲದೋಟವ ಮರೆತು 
ಹೆಣ್ಣು : ರಾಗಲಯದಂತೆ ಒಂದಾಗಿ ಮಿಡಿವ ಉಸಿರು ಉಸಿರಲಿ ಕಲೆತು 
          ನೋಡಾ... ಹೊಸಲೋಕ ನಮಗಿಲ್ಲಿ ಕರೆ ನೀಡಿದೆ 
ಗಂಡು : ಯಾವ ತಡೆಯಿಲ್ಲ ನಿಮಗಿಲ್ಲಿ ಬಾ ಎಂದಿದೆ 
            ಬೇರಾರು ಇಲ್ಲಿಲ್ಲ ನಾನು ನೀನು 
ಹೆಣ್ಣು : ಕಣ್ಣಲ್ಲೇ ನೀ ಕರೆದೇ ನಿನ್ನಲ್ಲೇ ನಾ ಬೆರೆತೆ
ಗಂಡು : ಹೇಗೋ ನೀ ನನ್ನ ಬಾಳಲ್ಲಿ ಹೊಸ ಹೊಸ ಅನುಭವ
ಹೆಣ್ಣು :  ಇನಿದಾದ ಸಂಗೀತ ತಂದೆ
ಗಂಡು : ಇನಿದಾದ ಸಂಗೀತ ತಂದೆ
--------------------------------------------------------------------------------------------------------------------------

ಮಿಥುನ (1980)
ಸಂಗೀತ: ವಿಜಯಭಾಸ್ಕರ್ ಚಿತ್ರಗೀತೆ : ದೊಡ್ಡರಂಗೇಗೌಡ ಗಾಯನ: ವಾಣಿ ಜಯರಾಂ


ತಂಟೆ ಮಾಡೋ ತುಂಟಿ ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ
ಕಾಡಬೇಡ ತುಂಟಿ ಓಡಬೇಡ ತುಂಟಿ ನೀನೇ ಬಲು ಘಾಟಿ 
ತಂಟೆ ಮಾಡೋ ತುಂಟಿ ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ
ಕಾಡಬೇಡ ತುಂಟಿ ಓಡಬೇಡ ತುಂಟಿ ನೀನೇ ಬಲು ಘಾಟಿ
ತಂಟೆ ಮಾಡೋ ತುಂಟಿ ತಂಟೆ ಮಾಡೋ ತುಂಟಿ
ನಮ್ಮ ಪುಟ್ಟಿ ಬಲು ಚೂಟಿ

ಮೌನ ದಾಟಿ ಮಾತು ಮಿತಿ ಬರುವಾಗ
ಆಸೆ ಗಂಗೆ ತುಂಗೆ ತುಂಬಿ ಹರಿವಾಗ 
ಅಕ್ಕರೆ ತೊರೆಯಲಿ ಸಕ್ಕರೆ ಬೆರೆಯಲಿ 
ಏನೋ ಆವೇಶ
ತಂಟೆ ಮಾಡೋ ತುಂಟಿ ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ 

ನೀನು ಬಂದು ಮುಂದೆ ನಿಂತು ನಗುವಾಗ 
ನೋವು ಮಾಗಿ ಪ್ರೀತಿ ಬೀಗಿ ಮರೆವಾಗ 
ಕರುಳಿನ ಮಿಡಿತಕೆ ಅರಿಯದ ತುಡಿತಕೆ 
ಏನೋ ಆನಂದ.... 
ತಂಟೆ ಮಾಡೋ ತುಂಟಿ ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ 
ತಂಟೆ ಮಾಡೋ ತುಂಟ ತಂಟೆ ಮಾಡೋ ತುಂಟ 
ನಮ್ಮ ಪುಟ್ಟ ಬಲು ಚೂಟಿ 
ಕಾಡಬೇಡ ತುಂಟ ಓಡಬೇಡ ತುಂಟ ನೀನೇ ಬಲು ಘಾಟಿ 




ತಂಟೆ ಮಾಡೋ ತುಂಟಬೇಡ ಬೇಡ ತುಂಟ
ನೀನೇ ಬಲು ಘಾಟಿ ಬಲು ಚೂಟಿ
ತಾಯ ನಂಬಿ ತೋಳ ತಬ್ಬಿ ಮಣಿವಾಗ
ನೂರು ರಾಗ ಸಾಗಿ ನಲ್ಮೆ ಸೆಳೆವಾಗ
ಮಮತೆಯ ಮಡಿಲಲಿ ನಲಿವಿನ ಕಡಲಲಿ
ಬಾಳೇ ಸಂತೋಷ
ತಂಟೆ ಮಾಡೋ ತುಂಟಿ ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ 
ಕಾಡಬೇಡ ತುಂಟಿ ಓಡಬೇಡ ತುಂಟಿ ನೀನೇ ಬಲು ಘಾಟಿ 


ತಂಟೆ ಮಾಡೋ ತುಂಟಿ ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ 
--------------------------------------------------------------------------------------------------------------------------

ಮಿಥುನ (1980)
ಸಂಗೀತ: ವಿಜಯಭಾಸ್ಕರ್ ಚಿತ್ರಗೀತೆ : ಆರ್.ಏನ್.ಜಯಗೋಪಾಲ್ ಗಾಯನ: ವಾಣಿ ಜಯರಾಂ

ಉಕ್ಕಿ ಉಕ್ಕಿ ಹರಿದಿದೆ ನೋಡೀಗ 
ಸೊಕ್ಕಿ ಸೊಕ್ಕಿ ತೂಗಿದೆ ಮೈಯಿಗ 
ನೋಡಲು ತುಂಬಿದೆ ಹೊಮ್ಮುತ ಚೆಲ್ಲಿದೆ 
ಮಧುವು ಹರೆಯವೂ ಹೀಗೇನೇ 
ಉಕ್ಕಿ ಉಕ್ಕಿ ಹರಿದಿದೆ ನೋಡೀಗ 
ಸೊಕ್ಕಿ ಸೊಕ್ಕಿ ತೂಗಿದೆ ಮೈಯಿಗ

ಹರೆಯಾ ಸಿಹಿ ಸಿಹಿ ಮಧುವೋ ಕಹಿ ಕಹಿ
ಹರೆಯಾ ಸಿಹಿ ಸಿಹಿ ಮಧುವೋ ಕಹಿ ಕಹಿ
ಗುಳ್ಳೆಯೋ ಸಾವಿರ ಕಣ್ಣಿಗೆ ಸುಂದರ 
ನಕ್ಕು ಒಂದು ಚಣ ಮಾಯ ಮರು ಚಣ 
ನಕ್ಕು ಒಂದು ಚಣ ಮಾಯ ಮರು ಚಣ 
ಇದುವೇ ಔವ್ವನ ಕಣಾ
ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯಿಗ

ಸುಖವ ಪಡು ಪಡು ಬಿಗುವಾ ಬಿಡು ಬಿಡು
ಸುಖವ ಪಡು ಪಡು ಬಿಗುವಾ ಬಿಡು ಬಿಡು 
ಸಾಗರಾ ಬಾಳಿದೆ ಈಜಲೂ ಮೋಜಿದೆ 
ತೇಲಿ ಅಲೆಯಲಿ ಮುಳಗಿ ಸುಖದಲಿ 
ತೇಲಿ ಅಲೆಯಲಿ ಮುಳಗಿ ಸುಖದಲಿ 
ಸಾರ ಸವಿ ಸವಿ ದಿನಾ 
ಉಕ್ಕಿ ಉಕ್ಕಿ ಹರಿದಿದೆ ನೋಡೀಗ 
ಸೊಕ್ಕಿ ಸೊಕ್ಕಿ ತೂಗಿದೆ ಮೈಯಿಗ 
ನೋಡಲು ತುಂಬಿದೆ ಹೊಮ್ಮುತ ಚೆಲ್ಲಿದೆ 
ಮಧುವು ಹರೆಯವೂ ಹೀಗೇನೇ 
ಉಕ್ಕಿ ಉಕ್ಕಿ ಹರಿದಿದೆ ನೋಡೀಗ 
ಸೊಕ್ಕಿ ಸೊಕ್ಕಿ ತೂಗಿದೆ ಮೈಯಿಗ 
--------------------------------------------------------------------------------------------------------------------------

ಮಿಥುನ (1980) - ಕಾಣದ ದಾರಿಗೆ ಕವಿದಿದೆ ಕತ್ತಲು
ಚಿತ್ರಗೀತೆ : ದೊಡ್ಡರಂಗೇಗೌಡ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಂ


ಕಾಣದ ದಾರಿಗೆ ಕವಿದಿದೆ ಕತ್ತಲು
ಬವಣೆಯ ನಡಿಗೆಗೆ ಬಡಿದಿದೆ ದಿಗಿಲು
ನೋವಿನ ಭಾವಕೆ ನಲುಗಿದೆ ಕರುಳು
ಬದುಕಿಗೆ ಮೂಡದೆ ಕಿರಣದ ಹಗಲು

ಯಾವುದೋ ಆಸೆಯ ಮಿನುಗಿಗೆ ನಲಿದೆ
ದಿನ ದಿನ ಅರಳುತ ಕೆರಳುತ ಬೆಳೆದೆ
ತೀರದ ದಾಹದ ಸೆಳೆತಕೆ ಕುಣಿದೆ
ಒಲುಮೆಯು ಹಾಡಲು ಅರಿಯದೆ ಓಡಿದೆ
ಕಾಣದ ದಾರಿಗೆ ಕವಿದಿದೆ ಕತ್ತಲು
ಬವಣೆಯ ನಡಿಗೆಗೆ ಬಡಿದಿದೆ ದಿಗಿಲು

ನೀತಿಯ ಮೀರಿದ ಗೆಳೆಯರ ಪೊರೆದೆ
ಒಳಿತಿನ ನಡತೆಯ ಇನಿಯನ ಪಡೆದೆ
ಯಾವುದು ನ್ಯಾಯವೋ ತಿಳಿಯದೆ ನಡೆದೆ
ಒಗಟಿನ ಜೀವನ ಅಳಲನು ನೀಡಿದೆ
ಕಾಣದ ದಾರಿಗೆ ಕವಿದಿದೆ ಕತ್ತಲು
ಬವಣೆಯ ನಡಿಗೆಗೆ ಬಡಿದಿದೆ ದಿಗಿಲು

ಬಾನಿನ ದೇವನೆ ಮಸುಕನು ಸರಿಸು
ಬೆಳಕನು ಕರುಣಿಸಿ ಬದುಕನು ನಗಿಸು
ಸಾವಿರ ಗೊಂದಲ... ತೊಲಗಿಸಿ ನಲಿಸು
ದಿನಕರ ತೇಜನೆ ಭರವಸೆ ಮೂಡಿಸು
ಕಾಣದ ದಾರಿಗೆ ಕವಿದಿದೆ ಕತ್ತಲು
ಬವಣೆಯ ನಡಿಗೆಗೆ ಬಡಿದಿದೆ ದಿಗಿಲು
ನೋವಿನ ಭಾರಕೆ ನಲುಗಿದೆ ಕರುಳು
ಬದುಕಿಗೆ ಮೂಡದೆ ಕಿರಣದ ಹೊನಲು
------------------------------------------------------------------------------------------------------------------------

No comments:

Post a Comment