366. ಒಲವಿನ ಆಸರೆ (1988)

ಒಲವಿನ ಆಸರೆ ಚಿತ್ರದ ಹಾಡುಗಳು 
  1. ಕನಸಲೀ ಮನಸಲೀ ಒಲವಿನಾಸರೆ ಬಯಸುವೆ ನಾನು
  2. ಬಾ ರಾಜ ನನ್ನಾಸೆ ನೂರಾಗಿ ಕಣ್ಣತುಂಬಾ ಕನಸಾಗಿ ಓಲಾಡಿದೇ 
  3. ಸ್ವಪ್ನಸೌಧ ಬಿರಿದು 
  4. ರಾಮನಂತೇ ನೇಮ`ಹೊತ್ತ 
  5. ಸಾಹಸ ಸಿಂಹನು ಬಂದನು 
  6. ಸಾಹಸ ಸಿಂಹ ಎಂದಿಗೂ 
ಒಲವಿನ ಆಸರೆ (1988) - ಕನಸಲೀ ಮನಸಲೀ ಒಲವಿನಾಸರೆ ಬಯಸುವೆ ನಾನು
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ಹೆಣ್ಣು : ಆಆಆ...ಆಆಆ.ಆಆಆ ಆಆ ..
         ಕನಸಲೀ ಮನಸಲೀ ಒಲವಿನಾಸರೆ ಬಯಸುವೆ ನಾನು
         ಕನಸಲೀ ಮನಸಲೀ ಒಲವಿನಾಸರೆ ಬಯಸುವೆ ನಾನು
         ಹೃದಯದಾಸೆಯ ಹೂವು ಅರಳಿ ಒಲಿದ ಜೀವದ ಭಾವ ಕೆರಳಿ
         ಅನುದಿನ ಅನುಕ್ಷಣ ನನಗೆ ನೀನೆ ಸಂಗಾತಿ ಎಂದು
ಗಂಡು : ಕನಸಲೀ ಮನಸಲೀ ಒಲವಿನಾಸರೆ ಬಯಸುವೆ ನಾನು
ಹೆಣ್ಣು : ಒಲವಿನಾ                ಗಂಡು : ಆಸರೆ

ಹೆಣ್ಣು : ಆಆಆ....                ಗಂಡು : ಓಓಓಓಓ
ಹೆಣ್ಣು : ಸೂರ್ಯನಾಸರೆ ಬಾನಿನ ಚಂದ್ರಗೆ ಬಾನಿನಾಸರೆ ಭೂಮಿಯ ಚೆಲುವಿಗೆ
          ಸೂರ್ಯನಾಸರೆ ಬಾನಿನ ಚಂದ್ರಗೆ ಬಾನಿನಾಸರೆ ಭೂಮಿಯ ಚೆಲುವಿಗೆ
          ಎಂದಿಗೂ ನಿನಗೆ ನಾನು ಮುಂದಿಗೂ ನನಗೆ ನೀನು ಪ್ರಣಯದಾಸರೆ ಬಂಧವಾಗಿ
ಗಂಡು : ಕನಸಲೀ ಮನಸಲೀ          ಹೆಣ್ಣು : ಒಲವಿನಾಸರೆ ಬಯಸುವೆ ನಾನು
ಗಂಡು : ಒಲವಿನಾ                        ಹೆಣ್ಣು : ಆಸರೆ

ಹೆಣ್ಣು : ಗಾಮಮದಸ ದನಿಸದ  ಗಂಡು : ಮಾಗಗಮರಿ ನಿರಿಮಗ
ಗಂಡು : ರಾಗದಾಸರೆ ತಾಳದ ಗುನುಗಿಗೆ ಮಾತಿನಾಸರೆ ಮೌನದ ನಿಲುವಿಗೆ
           ರಾಗದಾಸರೆ ತಾಳದ ಗುನುಗಿಗೆ ಮಾತಿನಾಸರೆ ಮೌನದ ನಿಲುವಿಗೆ
           ಮರವನು ಬಳ್ಳಿ ಬೆಸೆದು ಹೆಣ್ಣನು ಗಂಡು ಒಲಿದು ಬಾಳಿಗಾಸರೆ ಪ್ರೀತಿ ಬೆಳೆದು
           ಕನಸಲೀ ಮನಸಲೀ ಒಲವಿನಾಸರೆ ಬಯಸುವೆ ನಾನು
          ಹೃದಯದಾಸೆಯ ಹೂವು ಅರಳಿ ಒಲಿದ ಜೀವದ ಭಾವ ಕೆರಳಿ
         ಅನುದಿನ ಅನುಕ್ಷಣ ನನಗೆ ನೀನೆ ಸಂಗಾತಿ ಎಂದು
ಹೆಣ್ಣು :  ಕನಸಲೀ ಮನಸಲೀ ಒಲವಿನಾಸರೆ ಬಯಸುವೆ ನಾನು
ಗಂಡು : ಒಲವಿನಾ                        ಹೆಣ್ಣು : ಆಸರೆ
ಹೆಣ್ಣು : ಒಲವಿನಾ                ಗಂಡು : ಆಸರೆ
--------------------------------------------------------------------------------------------------------------------------

ಒಲವಿನ ಆಸರೆ (1988) - ಬಾ ರಾಜ ನನ್ನಾಸೆ ನೂರಾಗಿ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗ ರಾವ್ ಹಾಡಿದವರು:  ವಾಣಿ ಜಯರಾಮ್ 

ಬಾ ರಾಜ ನನ್ನಾಸೆ ನೂರಾಗಿ ಕಣ್ಣತುಂಬಾ ಕನಸಾಗಿ ಓಲಾಡಿದೇ
ಈ ಸಂಜೆ ಸಲ್ಲಾಪ ಸಂತೋಷ ಸಂಗಾತಿ ಸಹವಾಸ ಬೇಕೆಂದಿದೆ
ಮೋಹ ಮೈತುಂಬಿ ದಾಹ ಕೈ ಬೀಸಿ ಕರೆದೂ ರಂಗೇರಿದೇ...
ಸಂಗ ಬೇಕೆಂದು ಸ್ನೇಹ ಬಾಯಾರಿ ಬಿರಿದೂ ಮಾತಾಡಿದೇ...
ಬಾ ರಾಜ ನನ್ನಾಸೆ ನೂರಾಗಿ ಕಣ್ಣತುಂಬಾ ಕನಸಾಗಿ ಓಲಾಡಿದೇ

ಹ್ಹಾ...ಆಆ.. ಹೂಂ...ಉಂ ..  ಅಹ್ಹಹ್ಹ 
ಶೃಂಗಾರ ರೋಮಾಂಚ ಕಾಣಲು ಜೀವನ ಹೂವಿನ ಹಾಸಿಗೆ ಮಾಡುತ ಸ್ವರ್ಗವ ಕಾಣುವಾ 
ಬಾಳೆಂಬ ರಂಪಾಟ ದೂಡಲು ಕಾಮನೆ ಲೋಕದ ಮೋಜಿನ ಮನ್ಮಥ ಲೀಲೆಯು ಬೇಡವೇ 
ನೀನೂ ಕಪ್ಪೆ ಹಾಗೇ ಎಲ್ಲಿ ನೀರೂ ಹಾರಲೂ ಮಿಲನ ಕಂಡು ಹಗಲು ಇರುಳೂ ಸುಖವ ಹೀರು    
ಬಾ ರಾಜ ನನ್ನಾಸೆ ನೂರಾಗಿ ಕಣ್ಣತುಂಬಾ ಕನಸಾಗಿ ಓಲಾಡಿದೇ 

ಹೂಂ ... ಹ್ಹ.. ಆನಂದ ಸೋಪಾನ ಏರಲೂ ತೀರದ ರಾಗದ ಜೇನನು ಹೀರುತ ಹಂಬಲ ತೋರುತಾ 
ನಿನ್ನೆಲ್ಲ ಸಂಕೋಚ ನೀಗುತ ಅಂದದ ಚೆಂದದ ಬಂಧವ ಕಾಣುವ ಮಿಂಚನು ಸೇರು ಬಾ 
ಎಂದೂ ತೇಪೆ ಹಾಕಿ ಆಟ ಆಡಿ ಕೂಡಲು ನನ್ನಾ ನೀನು ಅರಿತು ಬೆರೆತು ಜೊತೆಯ ಸೇರು 
ಬಾ ರಾಜ ನನ್ನಾಸೆ ನೂರಾಗಿ ಕಣ್ಣತುಂಬಾ ಕನಸಾಗಿ ಓಲಾಡಿದೇ
ಈ ಸಂಜೆ ಸಲ್ಲಾಪ ಸಂತೋಷ ಸಂಗಾತಿ ಸಹವಾಸ ಬೇಕೆಂದಿದೆ
ಮೋಹ ಆ... ಮೈತುಂಬಿ ದಾಹ  ಹೂಂ ... ಕೈ ಬೀಸಿ ಕರೆದೂ ರಂಗೇರಿದೇ...
ಬಾ ರಾಜ ನನ್ನಾಸೆ ನೂರಾಗಿ ಕಣ್ಣತುಂಬಾ ಕನಸಾಗಿ ಓಲಾಡಿದೇ
--------------------------------------------------------------------------------------------------------------------------

ಒಲವಿನ ಆಸರೆ (1988) - ಸ್ವಪ್ನ ಸೌಧ ಬಿರಿದು ಚೂರು ಚೂರು ಒಡೆದು
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗ ರಾವ್ ಹಾಡಿದವರು: ವಾಣಿ ಜಯರಾಮ್ 

ಸ್ವಪ್ನ ಸೌಧ ಬಿರಿದು ಚೂರು ಚೂರು ಒಡೆದು
ನಾನು ನೊಂದು ಬೆಂದೂ ಇಂದು ಅಳಲು ಸಿಂಧೂ... ಇಂದು ಅಳಲು ಸಿಂಧೂ
ಸ್ವಪ್ನ ಸೌಧ ಬಿರಿದು ಚೂರು ಚೂರು ಒಡೆದು
ನಾನು ನೊಂದು ಬೆಂದೂ ಇಂದು ಅಳಲು ಸಿಂಧೂ... ಇಂದು ಅಳಲು ಸಿಂಧೂ

ಆಸರೆಯ ಒಲವೂ ದೂರ ದೂರವಾಗಿ... ಅನುರಾಗ ನೌಕೆ ಎಲ್ಲೋ ಬೇರೆಯಾಗಿ
ಮರಭೂಮಿಯಲ್ಲಿ ಏಕಾಂಗಿಯಾದೇ...
ಆಸರೆಯ ಒಲವೂ ದೂರ ದೂರವಾಗಿ ಮರಭೂಮಿಯಲ್ಲಿ ಏಕಾಂಗಿಯಾದೇ...
ಆಸೆ ಹೊನಲು ಕರಗಿ ಕರಗಿ
ಸ್ವಪ್ನ ಸೌಧ ಬಿರಿದು ಚೂರು ಚೂರು ಒಡೆದು
ನಾನು ನೊಂದು ಬೆಂದೂ ಇಂದು ಅಳಲು ಸಿಂಧೂ... ಇಂದು ಅಳಲು ಸಿಂಧೂ

ಸಂಬಂಧ ಸೂತ್ರ ಹರಿದು ಒಂಟಿಯಾಗಿ... ನಂಬಿಕೆಯ ಪಾತ್ರ ಆದಲು ಬದಲು ಆಗೀ 
ಒಡಲಾಳ ಊರಿದು ಹೃದಯಾಗ್ನಿ ಕಂಡೇ 
ಸಂಬಂಧ ಸೂತ್ರ ಹರಿದು ಒಂಟಿಯಾಗಿ... ಒಡಲಾಳ ಊರಿದು ಹೃದಯಾಗ್ನಿ ಕಂಡೇ 
ನಿಂತ ನೆಲವೇ ಕುಸಿದೂ... ಕುಸಿದೂ .. 
ಸ್ವಪ್ನ ಸೌಧ ಬಿರಿದು ಚೂರು ಚೂರು ಒಡೆದು
ನಾನು ನೊಂದು ಬೆಂದೂ ಇಂದು ಅಳಲು ಸಿಂಧೂ... ಇಂದು ಅಳಲು ಸಿಂಧೂ
--------------------------------------------------------------------------------------------------------------------------

ಒಲವಿನ ಆಸರೆ (1988) - ರಾಮನಂತೇ ನೇಮ ಹೊತ್ತ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ.

ರಾಮನಂತೇ ನೇಮ ಹೊತ್ತ ಭೀಮನಂತೇ ಬಲವ ಹೊತ್ತ ನಾನೆಂದರೇ ಯಾರೂ ಗೊತ್ತಾ ಧೀಮಂತ ಜಯಂತ
ರಾಮನಂತೇ ನೇಮ ಹೊತ್ತ ಭೀಮನಂತೇ ಬಲವ ಹೊತ್ತ ನಾನೆಂದರೇ ಯಾರೂ ಗೊತ್ತಾ ಧೀಮಂತ ಜಯಂತ
ರೌಡಿಗಳಾ ಕೇಡಿಗಳಾ ಸದೆಬಡಿಯೋ ಶಕ್ತಿವಂತ.. ಹ್ಹಾಂ ..
ರೌಡಿಗಳಾ ಕೇಡಿಗಳಾ ಸದೆಬಡಿಯೋ ಶಕ್ತಿವಂತ..
ರಾಮನಂತೇ ನೇಮ ಹೊತ್ತ ಭೀಮನಂತೇ ಬಲವ ಹೊತ್ತ ನಾನೆಂದರೇ ಯಾರೂ ಗೊತ್ತಾ ಧೀಮಂತ ಜಯಂತ

ಧೀನರಿಗೆ ನಾನಾಗೀ ಪ್ರಾಣ ಎಂದೆಂದೂ ಕಾಯ್ತೆನೇ ಪ್ರಾಣ
ಹಾವಂಥ ಮಂದಿಗೇ ಹಾವಾಗಿ ಹೂವಂಥ ಜನರಿಗೇ ಹೂವಾಗೀ
ವಂಚಕರ ಹಂತಕರ ಪತ್ತೆ ಮಾಡೋ ಯುಕ್ತಿವಂತ.. ಅಹ್ಹಹ್ಹಹ್ಹಾ..
ವಂಚಕರ ಹ್ಹ.. ಹಂತಕರ ಹೇ... ಪತ್ತೆ ಮಾಡೋ ಯುಕ್ತಿವಂತ..
ರಾಮನಂತೇ ನೇಮ ಹೊತ್ತ ಭೀಮನಂತೇ ಬಲವ ಹೊತ್ತ ನಾನೆಂದರೇ ಯಾರೂ ಗೊತ್ತಾ ಧೀಮಂತ ಜಯಂತ

ಹ್ಹಾ... ಹೇ... ಹ್ಹೂ... ಹ್ಹಾ.... ಹಹ್ಹಹ್ಹಾ... ಹೇಹೇಹೇ... ಹಹ್ಹಹ್ಹಾ ... ಹ್ಹೂ..ಹ್ಹೂ
ಸ್ತ್ರೀಯರಿಗೇ ನಾನೆಂದೂ ಬಂಧೂ ಶರಣಾಗೋ ಕರುಣಾಳು ಸಿಂಧೂ
ರಾಧಾಂತ ಮಾಡೋರಿಗೆ ರುಧ್ರನಾಗಿ ಪ್ರೇಮಾಂಶೂ ನೀಡೋರಿಗೆ ಕೃಷ್ಣನಾಗಿ
ನೀತಿಯನೂ ಪ್ರೀತಿಯನೂ ಬಿಡದಂತ ಗುಣವಂತ.. ಹ್ಹಾ..
ನೀತಿಯನೂ ಪ್ರೀತಿಯನೂ ಬಿಡದಂತ ಗುಣವಂತ.. ಹ್ಹಾ..
ರಾಮನಂತೇ ನೇಮ ಹೊತ್ತ ಭೀಮನಂತೇ ಬಲವ ಹೊತ್ತ ನಾನೆಂದರೇ ಯಾರೂ ಗೊತ್ತಾ ಧೀಮಂತ ಜಯಂತ
ರಾಮನಂತೇ ನೇಮ ಹೊತ್ತ ಭೀಮನಂತೇ ಬಲವ ಹೊತ್ತ ನಾನೆಂದರೇ ಯಾರೂ ಗೊತ್ತಾ ಧೀಮಂತ ಜಯಂತ
ರೌಡಿಗಳಾ ಕೇಡಿಗಳಾ ಸದೆಬಡಿಯೋ ಶಕ್ತಿವಂತ..
ರೌಡಿಗಳಾ ಕೇಡಿಗಳಾ ಸದೆಬಡಿಯೋ ಶಕ್ತಿವಂತ..
ರಾಮನಂತೇ ನೇಮ ಹೊತ್ತ ಭೀಮನಂತೇ ಬಲವ ಹೊತ್ತ ನಾನೆಂದರೇ ಯಾರೂ ಗೊತ್ತಾ ಧೀಮಂತ ಜಯಂತ
ಹ್ಹಹ್ಹಹ್ಹ... ಹೇಹೇಹೇ... ಹ್ಹೂ... ಹ್ಹಹ್ಹಾ.... ಹಹ್ಹಾ... ಲಲಲ... ಹೇಹೇಹೇ... ಓಹೋಹೊಹೋ
--------------------------------------------------------------------------------------------------------------------------

ಒಲವಿನ ಆಸರೆ (1988) - ಸಾಹಸ ಸಿಂಹ ಎಂದಿಗೂ ನಾನೇ ಲವ್ವಲೀ ಹಾಡನ್ನ ಹಾಡೇ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ., 

ಸಾಹಸ ಸಿಂಹ ಎಂದಿಗೂ ನಾನೇ... ಹ್ಹಾಹ್ಹಾ... ಹ್ಹಾಹ್ಹಾ... ಒಹೋ.. ಒಹೋ..
ಲಲ್ಲಲ ಲಲ್ಲಲಲಾ  ಲಲ್ಲಲ ಲಲ್ಲಲಲಾ   ಲಲ್ಲಲ ಲಲ್ಲಲಲಾ  ಲಲ್ಲಲ
ಲಲಲರೀ ರೀರೀರಿರೀರೂರೂರು ರರರ ರರರರಾ... ಹ್ಹಹ್ಹಹ್ಹಹ್ಹಾ...   ಹ್ಹಾ.. ಹ್ಹಾ
ಸಾಹಸ ಸಿಂಹ... ಸಾಹಸ ಸಿಂಹ ಎಂದಿಗೂ ನಾನೇ ಲವ್ವಲೀ ಹಾಡನ್ನ ಹಾಡೇ
ಶೂರನೂ ನಾ ಹಮ್ಮಿರನೂ ನಾ ನಿನ್ನಯ ಮನ್ಮಥ ಕಾಣೇ
ಸೊಕ್ಕಿನ ಹಕ್ಕಿ ಪಕ್ಕಕ್ಕೆ ಸೆಳೆದು ಅಕ್ಕರೆಯಿಂದ ಹೂಕ್ಕವ ಹಿಡಿದು
ನಕ್ಕು ನಕ್ಕೂ ಲೆಕ್ಕ ಇಡದೇ ಮುತ್ತೂ ಕೊಡುವೇ ಇಂದೇನೇ
ಸಾಹಸ ಸಿಂಹ ಎಂದಿಗೂ ನಾನೇ ಲವ್ವಲೀ ಹಾಡನ್ನ ಹಾಡೇ
ಶೂರನೂ ನಾ ಹಮ್ಮಿರನೂ ನಾ ನಿನ್ನಯ ಮನ್ಮಥ ಕಾಣೇ
ಡಂಗರ ಡಾಂಗ ಡೀರ ಡಂಗರರ ಡಾಂಗ ಡಂಡರ ಡಿಂಗರ ಡಾಂಗರ  
ಡಂಗರ ಡಾಂಗ ಡೀರ ಡಂಗರರ ಡಾಂಗ ಡಂಡರ ಡಿಂಗರ ಡಾಂಗರ  
ಧೀನ್ ತಕತಕ್  ತಕತಕ್  ತಕತಕ್  ಧೀನನ್  ತಕತಕ

ಲಾರರಪ್ಪಾ ಲಾರರಪ್ಪಾ ಲಾರರಪ್ಪಾ ಲಾರರಪ್ಪಾ ಲಾರರಪ್ಪಾ ಲಾರರಪ್ಪಾ
ತುರುರೂರು ಹೇಹೇಹೇ ಜೂಜುಜು ಜೂಜುಜು ಜೂಜುಜು
ಬೆಡಗು ಬಿನ್ನಾಣ ಬಳು ಬಳುಕಿ ಉಬ್ಬಿ ನಡೆವೇ ನೀನು ಹೆಣ್ಣಾಗಿ ಹೀಗೇಕೇ ಕೊಬ್ಬಿ ಮೆರೆವೇ
ಆಸ್ತಿ ಅಂತಸ್ತೂ ಎಂದೇಕೇ ಬೊಬ್ಬೇ ಹೋಡೆವೇ ಇನ್ನೂ ಒಣಮಾತು ಎಷ್ಟೊಂದು ಹೀಗೇ ನುಡಿವೇ
ಅರೆರೆರೆರೇ.. ಜಗವನ್ನೂ ನೋಡಿ ಕಲಿಯೇ ಬಿಂಕ ಬಿಟ್ಟೂ ಬಳಿಗೇ ಬಾರೇ
ಒಲವನ್ನು ನೀಡಿ ನಗುತಾ ನನ್ನ ಜೋತೆಗೇ ಬೆರೆಯೇ ಬಾರೇ  
ಡಿಂಗರನಿಂಗ ಡಿಂಗನಾಂಗ ಡಿಂಗ್ ಡಾಂಗ ಡಿಂಗರನಿಂಗ ಡಿಂಗನಾಂಗ  
ಪೀಪೀಪ್ಪಿಪ್ಪಿ ಪೀಪಿ  ಪೀಪೀಪ್ಪಿಪ್ಪಿ ಪೀಪಿ  ಪೀಪೀಪ್ಪಿಪ್ಪಿ ಪೀಪಿ  
ಅರೆರೆರೆರೇ.. ಸಾಹಸ ಸಿಂಹ ಎಂದಿಗೂ ನಾನೇ ಲವ್ವಲೀ ಹಾಡನ್ನ ಹಾಡೇ 
ಶೂರನೂ ನಾ ಹಮ್ಮಿರನೂ ನಾ ನಿನ್ನಯ ಮನ್ಮಥ ಕಾಣೇ
ಧೀನ್ ತಕತಕ್  ತಕತಕ್  ತಕತಕ್  ಧೀನನ್  ತಕತಕ
ತುರುತ್ತೂತ್ತು ತುರುತ್ತೂತ್ತು ತುರುತ್ತೂತ್ತು ತುರುತ್ತೂತ್ತು
ತುರುತ್ತೂತ್ತು ತುರುತ್ತೂತ್ತು ತುರುತ್ತೂತ್ತು ತುರುತ್ತೂತ್ತು

ಗಮಪಪ ರಿಗಮಮ ಸರಿಗಗ ನಿಸರಿನಿ ಗಪದನಿ ಸರಿಸ
ರಪ್ಪಪಪ ರೂರುರೂತ್ತು  ರೂರುರೂತ್ತು  ರೂರುರೂತ್ತು  ತ್ತೂತ್ತೂತ್ತೂ
ಸೊಬಗಿ ನೀನಾಗಿ ಹುಸಿ ಕೋಪ ಏಕೇ ಹುಡುಗೀ ಸಲುಗೆ ಇರದಾಗ ಹುಡುಗಾಟ ತರವೇ ಹುಡುಗೀ
ಸ್ನೇಹ ಬಂದಾಗ ಸಹವಾಸ ಬೇಕೂ ಬೆಡಗಿ ಎಂದೂ ಅನುರಾಗ ಅರಿತಾಗ ಬದುಕು ಬೆಳಗಿ ಹೊಯ್..
ಮನಸಾರೇ ಕೂಡಿ ನಲಿಯೇ ರಾಗ ರಂಗೂ ಧಾರೇ ಧಾರೇ
ಹೃದಯಕ್ಕೇ ತಂಪು ನೀಡೂ ಆಸೇ ಹರಿದು ಸುಖದಾ ಸೂರೇ
ಡುಂಡುಂ ಡುಂಡುಂ ಡುಂಡುಂ ಡುಂಡುಂ
ಅರೆರೆ ಅರೆರೆರೆರೇ.. ಸಾಹಸ ಸಿಂಹ ಎಂದಿಗೂ ನಾನೇ ಲವ್ವಲೀ ಹಾಡನ್ನ ಹಾಡೇ 
ಶೂರನೂ ನಾ ಹಮ್ಮಿರನೂ ನಾ ನಿನ್ನಯ ಮನ್ಮಥ ಕಾಣೇ
ಸೊಕ್ಕಿನ ಹಕ್ಕಿ ಪಕ್ಕಕ್ಕೆ ಸೆಳೆದು ಅಕ್ಕರೆಯಿಂದ ಹೂಕ್ಕವ ಹಿಡಿದು
ನಕ್ಕು ನಕ್ಕೂ ಲೆಕ್ಕ ಇಡದೇ ಮುತ್ತೂ ಕೊಡುವೇ ಇಂದೇನೇ
ಸಾಹಸ ಸಿಂಹ ಎಂದಿಗೂ ನಾನೇ ಲವ್ವಲೀ ಹಾಡನ್ನ ಹಾಡೇ 
ಶೂರನೂ ನಾ ಹಮ್ಮಿರನೂ ನಾ ನಿನ್ನಯ ಮನ್ಮಥ ಕಾಣೇ
ಲೈಲಾಲಲೆ ಲೈಲಾಲರೇ ಲೈಲಾಲರಾಲ ಲಾಲಾ ರೂರಾರರೀ ರಾರಾರರೀ ರೂರುರೂರುರೂರು
--------------------------------------------------------------------------------------------------------------------------

ಒಲವಿನ ಆಸರೆ (1988) - ಸಾಹಸ ಸಿಂಹ ಬಂದನು ನೋಡೇ ಲವ್ವಲೀ ಮಾತನ್ನ ಆಡೇ
ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ.ರಂಗ ರಾವ್ ಹಾಡಿದವರು: ವಾಣಿ ಜಯರಾಮ್ , ಕೋರಸ್  

ಕೋರಸ್ :  ಲಲ್ಲಲ ಲಲ್ಲಲಲಾ  ಲಲ್ಲಲ ಲಲ್ಲಲಲಾ   ಲಲ್ಲಲ ಲಲ್ಲಲಲಾ  ಲಲ್ಲಲ
                ಲಲ್ಲಲ ಲಲ್ಲಲಲಾ  ಲಲ್ಲಲ ಲಲ್ಲಲಲಾ   ಲಲ್ಲಲ ಲಲ್ಲಲಲಾ  ಲಲ್ಲಲ .. ಅಹ್ಹಹ್ಹ
ಹೆಣ್ಣು : ಸಾಹಸ ಸಿಂಹ... ಸಾಹಸ ಸಿಂಹ ಬಂದನು ನೋಡೇ ಲವ್ವಲೀ ಮಾತನ್ನ ಆಡೇ
          ಶೂರನಿವ ಹಮ್ಮಿರನಿವ ಬಂದ ಮನ್ಮಥ ಹಾಡೇ
          ಮಲ್ಲರ ಮಲ್ಲ ಎಲ್ಲೆಯ ದಾಟಿ ಮೆಲ್ಲಗೆ ಬಂದು ಗಲ್ಲವ ಚಿವುಟೀ
         ಕಣ್ಣು ಹೊಡೆದೂ ಕೈಯ್ಯ ಹಿಡಿದೂ ಹೃದಯ ಕೊಡಲೂ ನಿಂತವನೇ
ಕೋರಸ್ : ಸಾಹಸ ಸಿಂಹ ಬಂದನು ನೋಡೇ ಲವ್ವಲೀ ಮಾತನ್ನ ಆಡೇ
               ಶೂರನಿವ ಹಮ್ಮಿರನಿವ ಬಂದ ಮನ್ಮಥ ಹಾಡೇ
               ಲಲಲ ಲಲಲ ಲಲಲ ಲಲಲಲಲಲ ಲಲಲಲಲಲ ಲಲಲಲಲಲ ಲಲಲ
ಹೆಣ್ಣು : ಗುಂತನಕ್ಕುಮ... ಗುಂತನಕ್ಕುಮ... ಗುಂತನಕ್ಕುಮ... ಗುಂತನಕ್ಕುಮ 

ಕೋರಸ್ :  ಲಲಲ ಲಲಲ ಲಲಲ ಲಲಲಲಲಲ ಲಲಲಲಲಲ ಲಲಲಲಲಲ ಲಲಲ
ಹೆಣ್ಣು : ಚೆಲುವೇ  ಅಂದಾಗ ದಿನದಿನವೂ ಸ್ನೇಹ ಬಯಸಿ ಧೀರ ಗಂಭೀರ ಕುವರ ಹೆಮ್ಮೆ ಮೆರೆಸಿ 
          ನಗುತ ಜೊತೆಯಾಗಿ ಕ್ಷಣಕ್ಷಣವೂ ಜೊಲ್ಲು ಸೂರಿಸಿ ಆಸೇ ಸಂತೋಷ ಸೊಂಪಾಗಿ ಸುಖವ ಅರಸೀ 
          ನಗತನ್ನೇ  ಹಾದಿ ಬಾದೂ ಮಾಡಲಾಚಿ ಓಡಿ ಬಂದ ಮನದನ್ನೇ ಹುಡುಕಿ ಹುಡುಕಿ ರಾಸಲೀಲೆ ಆಟ ತಂದ 
ಕೋರಸ್ : ನಗತನ್ನೇ  ಹಾದಿ ಬಾದೂ ಮಾಡಲಾಚಿ ಓಡಿ ಬಂದ (ಹ್ಹಹ್ಹ  ) 
               ಮನದನ್ನೇ ಹುಡುಕಿ ಹುಡುಕಿ ರಾಸಲೀಲೆ ಆಟ ತಂದ (ಆ.. )
               ಲೇಲೇಲೇಲೇಲೇಲೇಲೇಲೇ  ಲೇಲೇಲೇಲೇಲೇಲೇಲೇಲೇ ಲಾ...  
ಹೆಣ್ಣು : ಸಾಹಸ ಸಿಂಹ ಬಂದನು ನೋಡೇ ಲವ್ವಲೀ ಮಾತನ್ನ ಆಡೇ ಶೂರನಿವ ಹಮ್ಮಿರನಿವ ಬಂದ ಮನ್ಮಥ ಹಾಡೇ
          ತರಪ್ಪಪ್ಪ ತರಪ್ಪಪ್ಪ ತರಪ್ಪಪ್ಪ ತರಪ್ಪಪ್ಪ  ತೂರುತ್ತುತು ತೂರುತ್ತುತು ತೂರುತ್ತುತು ತೂರುತ್ತುತು 
ಕೋರಸ್ : ತೂರುತ್ತುತು ತೂರುತ್ತುತು ತೂರುತ್ತುತು ತೂರುತ್ತುತು 

ಕೋರಸ್ :  ಲಲಲ ಲಲಲ ಲಲಲ ಲಲಲಲಲಲ ಲಲಲಲಲಲ ಲಲಲಲಲಲ ಲಲಲ
ಹೆಣ್ಣು : ಹರೆಯ ಬಂದಾಗ ಹೊಸಹೊಸತು ಹೆಣ್ಣ ನೋಡಿ ಮೋಹ ಹೆಚ್ಚಾಗಿ ಮನ ತುಂಬಾ ಸುಸ್ತು ಆಗಿ 
          ಬಯಕೆ ಬೆಳೆದಾಗ ಎಡೆಬಿಡದೇ ತರ್ಲೆ ಮಾಡಿ  ಇಂದು ಸೌಂದರ್ಯ ಸಲ್ಲಾಪ ಚಹರೆ ತೀಡಿ 
          ಸೊಗಸನ್ನೇ ಹೀರ ಬಯಸಿ  ಪ್ರೀತಿ ತೋರಿ ಬಳಿಗೆ ಬಂದ ನಡುವನ್ನೇ ಸುತ್ತಿ ಬಳಸಿ ಪ್ರೇಮ ಪಾಠ ಹೇಳಿ ಬಂದ 
ಕೋರಸ್ : ಸೊಗಸನ್ನೇ ಹೀರ ಬಯಸಿ  ಪ್ರೀತಿ ತೋರಿ ಬಳಿಗೆ ಬಂದ (ಆ) 
                ನಡುವನ್ನೇ ಸುತ್ತಿ ಬಳಸಿ ಪ್ರೇಮ ಪಾಠ ಹೇಳಿ ಬಂದ (ಹ್ಹಾ... )
               ಲೇಲೇಲೇಲೇಲೇಲೇಲೇಲೇ  ಲೇಲೇಲೇಲೇಲೇಲೇಲೇಲೇ ಲಾ...  
ಹೆಣ್ಣು : ಸಾಹಸ ಸಿಂಹ ಬಂದನು ನೋಡೇ ಲವ್ವಲೀ ಮಾತನ್ನ ಆಡೇ
          ಶೂರನಿವ ಹಮ್ಮಿರನಿವ ಬಂದ ಮನ್ಮಥ ಹಾಡೇ
          ಮಲ್ಲರ ಮಲ್ಲ ಎಲ್ಲೆಯ ದಾಟಿ ಮೆಲ್ಲಗೆ ಬಂದು ಗಲ್ಲವ ಚಿವುಟೀ
         ಕಣ್ಣು ಹೊಡೆದೂ ಕೈಯ್ಯ ಹಿಡಿದೂ ಹೃದಯ ಕೊಡಲೂ ನಿಂತವನೇ 
ಕೋರಸ್ : ಸಾಹಸ ಸಿಂಹ ಬಂದನು ನೋಡೇ ಲವ್ವಲೀ ಮಾತನ್ನ ಆಡೇ (ಹ್ಹಾ) 
               ಶೂರನಿವ ಹಮ್ಮಿರನಿವ ಬಂದ ಮನ್ಮಥ ಹಾಡೇ  (ಹೇ.. ಅಹ್ಹಹ್ಹ )
               ಸಾಹಸ ಸಿಂಹ ಬಂದನು ನೋಡೇ ಲವ್ವಲೀ ಮಾತನ್ನ ಆಡೇ (ಅಹ್ಹ ಹ್ಹಾ) 
               ಶೂರನಿವ ಹಮ್ಮಿರನಿವ ಬಂದ ಮನ್ಮಥ ಹಾಡೇ  (ಆ  ) 
--------------------------------------------------------------------------------------------------------------------------

No comments:

Post a Comment