368. ಶೃತಿ ಸೇರಿದಾಗ (1987)



ಶೃತಿ ಸೇರಿದಾಗ ಚಿತ್ರದ ಹಾಡುಗಳು 
  1. ಬೊಂಬೆ ಆಟವಯ್ಯಾ ಇದು ಬೊಂಬೆ ಆಟವಯ್ಯಾ 
  2. ಕನಸಲ್ಲಿ ಬಂದವನಾರೇ 
  3. ರಾಗ ಜೀವನ ರಾಗ 
  4. ನಗಲಾರದೇ ಅಳಲಾರದೇ 
  5. ಹೊನ್ನಿನ ತೇರಿನಲಿ 
  6. ಶೃತಿ ಸೇರಿದೆ ಹೀತವಾಗಿದೆ 
ಶೃತಿ ಸೇರಿದಾಗ (1987) - ಕನಸಲ್ಲಿ ಬಂದವನಾರೇ.......
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಜಾನಕಿ

ಆ.......ಆ.......ಕನಸಲ್ಲಿ ಬಂದವನಾರೇ..ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ......{ಪಲ್ಲವಿ}

ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾ ಕರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....{ಪಲ್ಲವಿ}

ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ....{ಪಲ್ಲವಿ}
-------------------------------------------------------------------------------------------------------------------------

ಶೃತಿ ಸೇರಿದಾಗ (1987) - ರಾಗ ಜೀವನ ರಾಗ, ರಾಗ ಜೀವನ ರಾಗ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್

ರಾಗ ಜೀವನ ರಾಗ, ರಾಗ ಜೀವನ ರಾಗ
ಪ್ರೇಮ ಸುಮವು ಅರಳಿದಾಗ ಮೋಹದ ರಾಗಒಲಿದ ಜೀವ ಸೇರಿದಾಗ ಮೌನವೆ ರಾಗ
ರಾಗ ಜೀವನ ರಾಗ, ರಾಗ ಜೀವನ ರಾಗ

ಕಂಗಳು ಬೆರೆತಾಗ ಆ ಅನುರಾಗ
ಹಾಡಿತು ಕಿವಿಯಲ್ಲಿ ಪ್ರೇಮದ ರಾಗ
ಎದೆಯಲಿ ಆನಂದ ತುಂಬಲು ಆಗ
ಎದೆಯಲಿ ಆನಂದ ತುಂಬಲು ಆಗ
ದಿನವೂ ದಿನವೂ ನೂರು ಹೊಸ ರಾಗ
ರಾಗ ಜೀವನ ರಾಗ, ರಾಗ ಜೀವನ ರಾಗ

ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಸೇರುವ ಕಾತರ ಮೂಡಿತು ಬೇಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಪ್ರೇಮದ ನುಡಿಯೆಂದೂ ಸವಿಯಾದ ರಾಗ
ಪ್ರೀತಿಯ ಹಾಡೆಲ್ಲ ಹಿತವಾದ ರಾಗ
ಸರಸದ ನುಡಿಯೆಂದೂ ಸವಿಯಾದ ರಾಗ
ಪ್ರಣಯದ ಹಾಡೆಲ್ಲ ಹಿತವಾದ ರಾಗ
ಬಿಸಿಲೆಲ್ಲ ಆಗ ಬೆಳದಿಂಗಳಾಗಿ
ಅನುಕ್ಷಣ ಹೊಸತನ ಚಿಗುರುವುದಾಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ರಾಗ ಜೀವನ ರಾಗ, ರಾಗ ಜೀವನ ರಾಗ
ಪ್ರೇಮ ಸುಮವು ಅರಳಿದಾಗ ಮೋಹದ ರಾಗ
ಒಲಿದ ಜೀವ ಸೇರಿದಾಗ ಮೌನವೆ ರಾಗ
ರಾಗ ಜೀವನ ರಾಗ, ರಾಗ ಜೀವನ ರಾಗ
------------------------------------------------------------------------------------------------------------------------

ಶೃತಿ ಸೇರಿದಾಗ (1989) - ಶೃತಿ ಸೇರಿದೆ ಹಿತವಾಗಿದೆ
ಸಾಹಿತ್ಯ: ಚಿ||ಉದಯಶಂಕರ್ ಗಾಯನ: ಡಾ||ರಾಜ್, ಎಸ್.ಜಾನಕಿ ಸಂಗೀತ: ಟಿ.ಜಿ.ಲಿಂಗಪ್ಪ


ಶೃತಿ ಸೇರಿದೆ ಹಿತವಾಗಿದೆ ಮಾತೆಲ್ಲವು ಇಂಪಾಗಿದೆ

ಹೊಸ ರಾಗದ ಲತೆಯಲ್ಲಿ  ಹೊಸ ಪಲ್ಲವಿ ಹೂವಾಗಿದೆ
ಹೊಸ ಆಸೆಯ ಕಂಪಿಂದ  ಹೊಸ ಪ್ರೇಮವು ಸವಿಯಾಗಿದೆ
ಹೊಸ ನೋಟವು ಕಣ್ತುಂಬಿ ಹೊಸ ರೀತಿಯು ತಂಪಾಗಿದೆ
ಬದುಕೆಲ್ಲ ಹಸಿರಾಗಿ ಒಲವೊಂದೆ ಉಸಿರಾಗಿ
ಶೃತಿ ಸೇರಿದೆ ಹಿತವಾಗಿದೆ  ಮಾತೆಲ್ಲವು ಇಂಪಾಗಿದೆ

ಮಳೆಗಾಲವು ಬಂದಾಗಿದೆ ನೆಲವೆಲ್ಲ ಹಸಿರಾಗಿದೆ
ಚಳಿಗಾಲವ ಕಂಡಾಗಿದೆ  ಮಂಜಿನ ತೆರೆ ಹಾಸಿದೆ
ಋತುಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ
ಹೊಸದೊಂದು ಮೊಗ್ಗಾಗಿ  ಸಂಸಾರದ ಬೆಳಕಾಗಿ
ಶೃತಿ ಸೇರಿದೆ ಹಿತವಾಗಿದೆ  ಮಾತೆಲ್ಲವು ಇಂಪಾಗಿದೆ
-------------------------------------------------------------------------------------------------------------------------

ಶ್ರುತಿ ಸೇರಿದಾಗ (೧೯೮೭) - ನಗಲಾರದೇ....  ಅಳಲಾರದೇ....  ತೊಳಲಾಡಿದೆ ಜೀವ....
ರಚನೆ: ಚಿ. ಉದಯಶಂಕರ್  ಸಂಗೀತ: ಟಿ. ಜಿ. ಲಿಂಗಪ್ಪ   ಗಾಯಕ: ಡಾ. ರಾಜಕುಮಾರ್

ನಗಲಾರದೇ....  ಅಳಲಾರದೇ....  ತೊಳಲಾಡಿದೆ ಜೀವ....
ನಗಲಾರದೇ....  ಅಳಲಾರದೇ....  ತೊಳಲಾಡಿದೆ ಜೀವ.... 
ಬರಿಮಾತಲೀ ಹೇಳಲಾರದೇ ಮನದಾಳದ ನೋವ

ದಿನಕೊಂದು ಬಣ್ಣ, ಕ್ಪಣಕೊಂದು ಬಣ್ಣ, ಏನೇನೋ ವೇಷ ಮಾತಲ್ಲಿ ಮೋಸ
ದಿನಕೊಂದು ಬಣ್ಣ, ಕ್ಪಣಕೊಂದು ಬಣ್ಣ, ಏನೇನೋ ವೇಷ ಮಾತಲ್ಲಿ ಮೋಸ
ಆ ಮಾತನ್ನೆಲ್ಲ ನಿಜವೆಂದು ನಂಬಿ
ಆ ಮಾತನ್ನೆಲ್ಲ ನಿಜವೆಂದು ನಂಬಿ  
ಮನದಾಸೆಯೇ... ಮಣ್ಣಾಯಿತೇ...
ಮನದಾಸೆಯೆ ಮಣ್ಣಾಯಿತೆ ಮನ ನೆಮ್ಮದಿ ದೂರಾಯಿತೇ.... 
ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ

ನಿಜವಾದ ಪ್ರೇಮ, ನಿಜವಾದ ಸ್ನೇಹ, ಅನುರಾಗವೇನೋ ಬಲ್ಲೋರು ಇಲ್ಲ
ನಿಜವಾದ ಪ್ರೇಮ, ನಿಜವಾದ ಸ್ನೇಹ, ಅನುರಾಗವೇನೋ ಬಲ್ಲೋರು ಇಲ್ಲ
ಬಾಳಲ್ಲೆ ನಟನೆ ಹೀಗೇಕೊ ಕಾಣೆ 
ಬಾಳಲ್ಲೆ ನಟನೆ ಹೀಗೇಕೊ ಕಾಣೆ 
ಬದುಕಲ್ಲಿಯೇ... ಹುಡುಗಾಟವೇ...
ಬದುಕಲ್ಲಿಯೆ ಹುಡುಗಾಟವೆ ಈ ಆಟಕೆ ಕೊನೆಯಿಲ್ಲವೇ
ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ
ಬರಿಮಾತಲೀ ಹೇಳಲಾರದೇ ಮನದಾಳದ ನೋವ .... 
--------------------------------------------------------------------------------------------------------------------------

ಶ್ರುತಿ ಸೇರಿದಾಗ (೧೯೮೭) - ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ
ರಚನೆ: ಚಿ. ಉದಯಶಂಕರ್  ಸಂಗೀತ: ಟಿ. ಜಿ. ಲಿಂಗಪ್ಪ   ಗಾಯಕ: ಡಾ. ರಾಜಕುಮಾರ್

ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ
ನೀ ಸೂತ್ರಧಾರಿ, ನಾ ಪಾತ್ರಧಾರಿ, ದಡವ ಸೇರಿಸಯ್ಯ
ಬೊಂಬೆಯಾಟವಯ್ಯ

ಯಾವ ಕಾಲಕೆ, ಯಾವ ತಾಳಕೆ... ಆಆಆ
ಯಾವ ಕಾಲಕೆ, ಯಾವ ತಾಳಕೆ ಏಕೆ ಕಳಿಸುವೆಯೊ ನಾ ಅರಿಯೇ
ಯಾರ ಸ್ನೇಹಕೆ, ಯಾರ ಪ್ರೇಮಕೆ ಯಾರ ನೂಕುವೆಯೊ ನಾ ತಿಳಿಯೇ
ನೆಡೆಸಿದಂತೆ ನೆಡೆವೇ, ನುಡಿಸಿದಂತೆ ನುಡಿವೇ
ವಿನೋದವೋ, ವಿಷಾದವೋ, ತರುತ, ಇರುವೆ, ದಿನವು
ಬೊಂಬೆಯಾಟವಯ್ಯ

ಯಾರ ನೋಟಕೆ, ಕಣ್ಣ ಬೇಟೆಗೆ 
ಯಾರ ನೋಟಕೆ, ಕಣ್ಣ ಬೇಟೆಗೆ ಸೋತು ಸೊರಗುವೆನೊ ನಾ ಅರಿಯೇ
ಯಾವ ಸಮಯಕೆ, ಯಾರ ಸರಸಕೆ 
ಯಾವ ಸಮಯಕೆ, ಯಾರ ಸರಸಕೆ ಬೇಡಿ ಕೊರಗುವೆನೊ ನಾ ತಿಳಿಯೇ
ಕವಿತೆ ನುಡಿಸಿಬಿಡುವೇ, ಕವಿಯ ಮಾಡಿ ನಗುವೇ
ಸಂಗೀತವೋ, ಸಾಹಿತ್ಯವೋ, ಸಮಯ, ನೋಡಿ, ಕೊಡುವೆ
ಬೊಂಬೆಯಾಟವಯ್ಯ, ಸನಿದಪ ಬೊಂಬೆಯಾಟವಯ್ಯ,
ರೀಗ ರೀಗ ರಿಸ ನೀಸ ನೀಸ ನಿಸದ ಸಸ ನಿನಿ ದದ
ಪಪ ಮಪದನಿ ಬೊಂಬೆಯಾಟವಯ್ಯ
ಸಾಸಾ ನಿರಿಸ ನಿರಿಸ ನಿರಿಸ ನಿರಿಸ ನಿನಿಸ ನಿನಿ ಸಸ ನಿನಿ ದದ ಮಮದಾ
ಆಆಆಆಆಅ..... ಗಾಗಾಗ ರಿಗಾಗಾಗ ರಿಸಾರಿಗ ಆಆಆಆ... (ಕೆಮ್ಮು)
ಹೆಣ್ಣು : ರೀಗ ಸಾರಿಗ ರಿಗ ಸಾರಿಗ
ಗಂಡು : ಗಾಗಾಗಗಗ ಗಾಗರಿಸ ಸಾರಿಗ
ಹೆಣ್ಣು: ಗಾಗ ಪದರಿ ಗಮ ಗಮ
ಗಂಡು : ರಿರಿ ಗರಿಸ ರಿಗರಿಗ
ಹೆಣ್ಣು : ಸಾಸ ಸರಿನಿ     ಗಂಡು : ನಿನಿ ನಿಸದ
ಹೆಣ್ಣು : ಗಾ ದನಿಪ        ಗಂಡು : ಪ ಪದಮ
ಹೆಣ್ಣು : ಗಮಪ ಮಪದ     ಗಂಡು : ಪದ ನಿದನಿಸ
ಹೆಣ್ಣು: ಗರಿಸ     ಗಂಡು : ನಿಸನಿ
ಹೆಣ್ಣು : ಪನಿದ    ಗಂಡು : ರಿಸಪ
ಹೆಣ್ಣು : ಪದನಿ ದನಿಸ ಗಮಪ ಮಪದ
ಗಂಡು : ಸನಿ  ದನಿದ ನಿದನಿದ ಸನಿದಪ ಮಪ ದಪದ ಸನಿದಪ ಪದನಿ
ಬೊಂಬೆಯಾಟವಯ್ಯ ... ಇದು ಬೊಂಬೆಯಾಟವಯ್ಯಾ..
ನೀ ಸೂತ್ರಧಾರಿ, ನಾ ಪಾತ್ರಧಾರಿ, ದಡವ ಸೇರಿಸಯ್ಯ
ಬೊಂಬೆಯಾಟವಯ್ಯ ... ಇದು ಬೊಂಬೆಯಾಟವಯ್ಯಾ..
------------------------------------------------------------------------------------------------------------------------

ಶ್ರುತಿ ಸೇರಿದಾಗ (೧೯೮೭) - ಹೊನ್ನಿನಾ ತೇರಿನಲಿ ಬಾಲ ಬಾಸ್ಕರ ಬಂದು
ಸಂಗೀತ: ಟಿ. ಜಿ. ಲಿಂಗಪ್ಪ  ರಚನೆ: ಚಿ. ಉದಯಶಂಕರ್ ಗಾಯಕ: ಎಸ್.ಜಾನಕೀ 

ಹೊನ್ನಿನಾ ತೇರಿನಲಿ ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ ಬೆಳಕ ಚೆಲ್ಲಿರುವ
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ

ನಂದಿ ಭೃಂಗಿಗಳೆಲ್ಲ ಬಾಗಿಲಲಿ ನಿಂತಿಹರು
ಋಷಿ ಮುನಿಗಳೆಲ್ಲರು ಕಾಣ ಬಂದಿಹರು
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ಹೊನ್ನಿನಾ ತೇರಿನಲಿ ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ ಬೆಳಕ ಚೆಲ್ಲಿರುವ

ಗಿರಿರಾಜನ ಕುವರಿ ಕಾಲ ಬಳಿ ನಿಂತಿಹಳು
ಪಾದಗಳ ಪೂಜಿಸಲು ಪುಷ್ಪಗಳ ತಂದಿಹಳು
ಬೆಳಗಾಯಿತೇಳಯ್ಯ ಶಶಿ ಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ಹೊನ್ನಿನಾ ತೇರಿನಲಿ ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ ಬೆಳಕ ಚೆಲ್ಲಿರುವ 
--------------------------------------------------------------------------------------------------------------------------

No comments:

Post a Comment