369. ಶಿಕಾರಿ (೧೯೮೧)


ಶಿಕಾರಿ ಚಲನಚಿತ್ರದ ಹಾಡುಗಳು 
  1. ಕನವರಿಸು ವಯಸಿರಲು ಬಯಕೆಗಳೇ ಬಲು ಸೊಗಸು
  2. ನನ್ನ ಜೊತೆಗೆ ನೀನಿರಲು ಸಂಜ್ಞೆಯಲೇ ಕಣ್ಣುಗಳು
  3. ಪ್ರೀತಿಸಿದೆ ಪ್ರೇಮಿಸಿದೆ ಏತಕೋ ನಾನರಿಯೆ
  4. ಈ ದಾಹ ಈ ಮೋಹ ಮೆರೆಯ ಮೀರಿದಂಥ ಆವೇಶ  ಏನೇನೋ ಆದೇಶ...
ಶಿಕಾರಿ (೧೯೮೧)......ಕನವರಿಸು ವಯಸಿರಲು
ಸಂಗೀತ : ಇಳಯರಾಜಾ ಸಾಹಿತ್ಯ : ಗೀತಪ್ರಿಯ  ಗಾಯನ : ಎಸ್.ಪಿ.ಬಿ, ಎಸ್.ಜಾನಕಿ


ಹೆಣ್ಣು : ಕನವರಿಸು ವಯಸಿರಲು ಬಯಕೆಗಳೇ ಬಲು ಸೊಗಸು
ಗಂಡು : ಈ ಆಸೆ ಸಾಕಲ್ಲವೇ ಹೊಸ ಆನಂದ ಬೇಕಲ್ಲವೇ  ಅದಕೇ ದಿನವೂ ಇದುವೇ ಬಯಕೆ
ಹೆಣ್ಣು :  ಕನವರಿಸು ವಯಸಿರಲು

ಹೆಣ್ಣು : ಕಳವಳ ಏಕೋ ಕಾಣೆ ಕನಸಿನಲಿ (ಲಲಲಾ) ತಿಳಿಸದೆ ಬರುವೆಯ ಕನಸಿನಲಿ ಲಲಲಾ)
          ನೆನೆಯುತ ನಾಚಿ ಕರಗಿದೆ ನಾ ಮಿಲನದ ಆಸೆ ಕೆಣಕಲು ನೀ
ಗಂಡು : ನೋಟ ಸೊಗಸಿನದೇ (ಆ) ಆಟ ವಯಸಿನದೇ  (ಆ) ಹೇಳೇ ನನ ಹುಡುಗಿ ಬಲುಕಾಟ ಕನಸಿನದೇ
ಹೆಣ್ಣು : ಈ ನೋಟ ಆ ನೋಟ ಒಂದಾಗೋ ಚೆಲ್ಲಾಟ  ಈ ನೋಟ ಬೇಕೆಂದು ಎಂದೆಂದೂ ನನ್ನಾಟ
          ಕನವರಿಸು ವಯಸಿರಲು ಲಲಲಾ) ಬಯಕೆಗಳೇ ಬಲು ಸೊಗಸು ಲಲಲಾ)
ಗಂಡು : ಈ ಆಸೆ ಸಾಕಲ್ಲವೇ (ಆ) ಹೊಸ ಆನಂದ ಬೇಕಲ್ಲವೇ (ಆ) ಅದಕೇ ದಿನವೂ ಇದುವೇ ಬಯಕೆ

ಗಂಡು :  ವಿರಹದ ಬೇಗೆ ದೂರ ಸರಿಯದಿಯೇ (ಆಆಆ )ಪ್ರಣಯದ ನೌಕೆ ತೀರ ಸೇರಬಲ್ಲದೇ (ಆಆಆ )
            ತಣಿಸದೇ ದುಂಬಿ ಪ್ರತಿಫಲಕೆ ಮಿಲನದ ಗೀತೆ ಪ್ರತಿಸ್ವರಕೆ
ಹೆಣ್ಣು : ಏನೂ ತಿಳಿಸದೆಯೇ (ಪಾಪಾಪ ) ಬರುವಾಗ ಹೊಸ ಹರೆಯ (ಪಾಪಾಪ )
          ನೋಡಿ ನಲಿನಲಿಸು (ಪಾಪಾಪ ) ಈ ನೋಟ ಬಲು ಸುಖವೇ(ಪಾಪಾಪ )
ಗಂಡು :  ಆಗಾಗೋ ಆನಂದ ಅಲ್ಲೋಲ ಕಲ್ಲೋಲ  ಬಾಳಲ್ಲಿ ಎಂದೆಂದೂ ಬೇಕೆಂದು ನನ್ನಾಸೆ
ಹೆಣ್ಣು : ಕನವರಿಸು ವಯಸಿರಲು (ಲಲಲಲ ) ಬಯಕೆಗಳೇ ಬಲು ಸೊಗಸು (ಲಲಲಲ )
ಗಂಡು : ಈ ಆಸೆ ಸಾಕಲ್ಲವೇ (ಆ) ಹೊಸ ಆನಂದ ಬೇಕಲ್ಲವೇ ಆಹ್) ಅದಕೇ ದಿನವೂ ಇದುವೇ ಬಯಕೆ (ಆ)
            ಪಾಪಪ್ಪಾ (ಆ) ಪಾಪಪ್ಪಾ (ಆ) ಪಾಪಪ್ಪಾ (ಆ) ಪಾಪಪ್ಪಾ ಪಾಪಪ್ಪಾ (ಆ)ಆ)
-----------------------------------------------------------------------------------------------------------------

ಶಿಕಾರಿ (೧೯೮೧).......ನನ್ನ ಜೊತೆಗೆ ನೀನಿರಲು
ಸಂಗೀತ : ಇಳಯರಾಜಾ  ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ  ಗಾಯನ : ಎಸ್.ಜಾನಕಿ

ಆಆಆ... ಆಆಆ.... ಯಾಕ್ ಹೋಗ್ತೀರಿ ? ಅಹ್ಹಹ್ಹ..
ನಗೆಯು ಬರುತಿದೆ ನನಗೇ ನಗೆಯೂ ಬರುತಿದೆ.. ಅಹ್ಹಹ್ಹಹಹ
ಆಯ್ ನೌ ಯುವರ್ ಚಾಯ್ಸ್ ಕಮ್ ಆನ್ ಫ್ರೆಂಡ್ಸ್ ನೌ ಲಿಸನ್
ಲಾ ಲಲ್ಲಲಾ...  ತತ ತರತತಾ
ನನ್ನ ಜೊತೆಗೆ ನೀನಿರಲು ಸನ್ನೆಯಲೇ ಕಣ್ಣುಗಳು
ನುಡಿದಾಗ ಅನುರಾಗ
ನುಡಿದಾಗ ಅನುರಾಗ ಹರೆಯದ ಮನಸೊಂದೆ ಕನಸೊಂದೆ ಎಂದೆಂದೂ
ನನ್ನ ಜೊತೆಗೆ ನೀನಿರಲು ಸನ್ನೆಯಲೇ ಕಣ್ಣುಗಳು

ಒಲವಿರಲಿ ಅನುದಿನವು ನಿನಗಾಗಿ ತನುಮನವು
ಒಲವಿರಲಿ ಅನುದಿನವು ನಿನಗಾಗಿ ತನುಮನವು
ನೋಡಿದಾಗಲೇ ಜೋಡಿಗಳನು
ನೋಡಿದಾಗಲೇ ಜೋಡಿಗಳನು ಹಾಡುವಾಸೆ ಕೂಡುವಾಸೆ ಮೂಡಿತಲ್ಲ ನಿನ್ನಲ್ಲೇ
ನನ್ನ ಜೊತೆಗೆ ನೀನಿರಲು ಸನ್ನೆಯಲೇ ಕಣ್ಣುಗಳು

ಜೊತೆಯಲ್ಲೇ ಕುಣಿಯೋಣ ಮೈಮರೆತು ನಲಿಯೋಣ
ಜೊತೆಯಲ್ಲೇ ಕುಣಿಯೋಣ ಮೈಮರೆತು ನಲಿಯೋಣ
ಅರಿತಾಗಲೇ ಬೆರೆತಾಗಲೇ
ಅರಿತಾಗಲೇ ಬೆರೆತಾಗಲೇ ಹೂವು ಗಂಧದಂತೆ ಒಂದಾಗೇ ನಿನ್ನಲ್ಲೇ
ಕಮ್ ಆನ್ ಕ್ಲ್ಯಾಪ್ಸ್
ನನ್ನ ಜೊತೆಗೆ ನೀನಿರಲು ಸನ್ನೆಯಲೇ ಕಣ್ಣುಗಳು
ನುಡಿದಾಗ ಅನುರಾಗ
ನುಡಿದಾಗ ಅನುರಾಗ ಹರೆಯದ ಮನಸೊಂದೆ ಕನಸೊಂದೆ ಎಂದೆಂದೂ
-------------------------------------------------------------------------------------------------------------------------

ಶಿಕಾರಿ (೧೯೮೧)......ಪ್ರೀತಿಸಿದೆ ಪ್ರೇಮಿಸಿದೆ
ಸಂಗೀತ : ಇಳಯರಾಜಾ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ    ಗಾಯನ : ಎಸ್.ಪಿ.ಬಿ 

ಪ್ರೀತಿಸಿದೆ ಪ್ರೇಮಿಸಿದೆ ಏತಕೋ ನಾನರಿಯೆ
ಪ್ರೇಮದ ಆ ಭಾವವೂ ಮೂಡಿದಲ್ಲೇ ಬಾಡಿದೆ
ಪ್ರೀತಿಸಿದೆ ಪ್ರೇಮಿಸಿದೆ ಏತಕೋ ನಾನರಿಯೆ

ಚೆಲುವನು ಕಂಡು ನಂಬಿದೆ ಅಂದು ಒಲವಿನ ಬೆಳಕೆಂದು...
ಜೀವನ ಪಥವ ತೋರಲು ಬಂದ ಜೀವದ ಜೊತೆಯೊಂದು
ಪ್ರೀತಿಯ ಮಾತು ಎದೆಯಲೇ ಹುದುಗಿ ಕವಿಯಿತು ಇರುಳಿಂದು... ಕವಿಯಿತು ಇರುಳಿಂದು
ಪ್ರೀತಿಸಿದೆ ಪ್ರೇಮಿಸಿದೆ ಏತಕೋ ನಾನರಿಯೆ

ಕಂಡಿತು ಕವಿದಾ ಮೋಡದ ನಡುವೆ ಬಣ್ಣದ ಗೆರೆಯೊಂದು...
ಕಾಮನಬಿಲ್ಲು ಹಿಡಿಯಲು ಹೋದೆ ಬಾಳಿನ ಗುರಿಯೆoದು
ಕರಗಿತು ಕನಸು ಮುದುಡಿತು ಮನಸು ವ್ಯಥೆಯೇ ಜೊತೆಯಿಂದು... .ಹ್ಹಾ .. ವ್ಯಥೆಯೇ ಜೊತೆಯಿಂದು
ಪ್ರೀತಿಸಿದೆ ಪ್ರೇಮಿಸಿದೆ ಏತಕೋ ನಾನರಿಯೆ
ಪ್ರೇಮದ ಆ ಭಾವವೂ ಮೂಡಿದಲ್ಲೇ ಬಾಡಿದೆ
ಪ್ರೀತಿಸಿದೆ ಪ್ರೇಮಿಸಿದೆ ಏತಕೋ ನಾನ್...
-------------------------------------------------------------------------------------------------------------------------

ಶಿಕಾರಿ (೧೯೮೧)...... ಈ ದಾಹ ಈ ಮೋಹ ಮೆರೆಯ ಮೀರಿದಂಥ ಆವೇಶ  ಏನೇನೋ ಆದೇಶ
ಸಂಗೀತ : ಇಳಯರಾಜಾ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ


ಹೆಣ್ಣು : ಆಆಆ... ಆಆಆ... ತರರರ ತರರರರಾ
          ಈ ದಾಹ ಈ ಮೋಹ ಮೆರೆಯ ಮೀರಿದಂಥ ಆವೇಶ  ಏನೇನೋ ಆದೇಶ
         ರಂಗಿನಾ ಲೋಕಕೆ ಸಂಕೋಚ ಸಂತೋಷ
         ರಂಗಿನಾ ಲೋಕಕೆ ಸಂಕೋಚ ಸಂತೋಷ
        ಈ ದಾಹ ಈ ಮೋಹ ಮೆರೆಯ ಮೀರಿದಂಥ ಆವೇಶ  ಏನೇನೋ ಆದೇಶ...

ಕೋರಸ್ : ಲಲಲಲಾ ಲಲಲಲಾ ಲಲಲಲಾ ಲಲಲಲಾ ಲಲ ಲಲ ಲಾಲಾ ...
ಹೆಣ್ಣು : ಮುಖದ ತೆರೆಯ ತೆರೆವಾ ಸಮಯ ಆಸೇ ಕಣ್ಣಲ್ಲಿ ತೇಲಾಡಿದೇ
ಕೋರಸ್ : ಲಾಲಲಲಾ..  ಲಾಲಲಲಾ..  .
ಹೆಣ್ಣು : ಕೆಣಕೋ ನಯನ ಕುಣಿಯೇ ತನನಾ ಏಕೋ ಮೇಯ್ಯೆಲ್ಲಾ ಒಲಾಡಿದೇ
          ಪ್ರೇಮಾ ಬಾನದೇ ತೆರೆದ ಮೇಲೆ ಜೀವ ಹಾಯಾಗಿದೇ
          ಲೀಲೆ ಪ್ರೇಮ ಲೀಲೆ ಬೇಕೂ ಈ ಲೋಕದಾ...  ಆಟಕೆ  
        ಈ ದಾಹ ಈ ಮೋಹ ಮೆರೆಯ ಮೀರಿದಂಥ ಆವೇಶ ಏನೇನೋ ಆದೇಶ...

ಕೋರಸ್ : ಅಹ್ಹಹ್ಹಹಾಹಾ ಅಹ್ಹಹ್ಹಹಾಹಾ ಆಆಆ ಆಆಆ
ಹೆಣ್ಣು : ನಲಿವ ಮನಕೇ ಒಲಿವ ಛಲಕೇ  ಇನ್ನೂ ನೋಟವೂ ಸಾಕಾಗಿದೇ ... 
ಕೋರಸ್ : ಲಾಲಲಲಾ..  ಲಾಲಲಲಾ..  .
ಹೆಣ್ಣು : ಸುಖದ ಕಡೆಗೇ ನಡೆವ ಮನಕೇ ಇಂದೂ ಆಟವೂ ಬೇಕಾಗಿದೇ 
          ಮೋಹಗೊಂಡೇ ನನ್ನಲ್ಲಿ ಚಿಮ್ಮಿ ಮೈಯ್ಯೂ  ಜುಮ್ಮೆ ಎಂದಿದೇ  
          ರಾಜ ನನ್ನ ರೋಜ ಪ್ರೀತಿಯೊಂದೇನೇ ನಾ ಬೇಡುವೇ 
          ಈ ದಾಹ ಈ ಮೋಹ ಮೆರೆಯ ಮೀರಿದಂಥ ಆವೇಶ  ಏನೇನೋ ಆದೇಶ
         ರಂಗಿನಾ ಲೋಕಕೆ ಸಂಕೋಚ ಸಂತೋಷ
        ಈ ದಾಹ ಈ ಮೋಹ ಮೆರೆಯ ಮೀರಿದಂಥ ಆವೇಶ  ಏನೇನೋ ಆದೇಶ...
--------------------------------------------------------------------------------------------------------------------------

No comments:

Post a Comment