370. ಬಾಲ ನಾಗಮ್ಮ (1966)


ಬಾಲ ನಾಗಮ್ಮಾ ಚಿತ್ರದ ಹಾಡುಗಳು 
  1. ಬಂಗಾರ ಬೊಂಬೆಗಳೇ 
  2. ಈ ಅಂದದ ಸೃಷ್ಟಿಯ
  3. ಈ ಹೆಣ್ಣು ವಿಲಾಸ ನೋಡು 
  4. ಇಬ್ಬರ ಹೆಂಡಿರ ಕಾಟ 
  5. ಕಂದ ಕಣ್ಮಣಿಯೇ 
  6. ಕಾಲ ಬಂದಿತು ನಿನಗೆ 
ಬಾಲ ನಾಗಮ್ಮ (1966) - ಕಂದ ಕಣ್ಮಣಿಯೆ
ಚಿತ್ರಗೀತೆ : ಚಿ. ಉದಯಶಂಕರ್  ಸಂಗೀತ: ಎಸ್.ರಾಜೇಶ್ವರ ರಾವ್  ಗಾಯನ: ಎಲ್.ಆರ್.ಈಶ್ವರಿ

ಕಂದ ಕಣ್ಮಣಿಯೆ  ಅಮ್ಮನ ಅರಗಿಣಿಯೆ ಓ ರಾಜ
ಹೂವಿನ ಹಾಸಿಗೆಯ ಹಾಸುವೆನು
ತೂಗುವೆನು ಜೋ ಜೋ ಹಾಡುವೆನು
ಕಂದ ಕಣ್ಮಣಿಯೆ  ಅಮ್ಮನ ಅರಗಿಣಿಯೆ ಓ ರಾಜ

ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಕೊಡುವ ತಾರೆಗಳ ಆಡಲಿಕ್ಕೆ ಎನುತಿರುವ
ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ

ಅಮ್ಮನ ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಅಮ್ಮನು ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಮಗುವೆ ಶಂಕರನು ನಿನ್ನನು ತಾ ಪಾಲಿಸಲಿ
ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ
ಹೂವಿನ ಹಾಸಿಗೆಯ ಹಾಸುವೆನು  ತೂಗುವೆನು
ಜೋ ಜೋ ಹಾಡುವೆನು
ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ
ಆಆಆ... ಓಹೋಹೊಹೋ... ಹೂಂ ಹೂಂ ಹೂಂ
--------------------------------------------------------------------------------------------------------------------------

ಬಾಲ ನಾಗಮ್ಮ (1966) - ಈ ಹೆಣ್ಣಾ ವಿಲಾಸ ನೋಡು 
ಚಿತ್ರಗೀತೆ : ಚಿ.ಸದಾಶಿವಯ್ಯ ಸಂಗೀತ: ಎಸ್.ರಾಜೇಶ್ವರ ರಾವ್  ಗಾಯನ: ಎಲ್.ಆರ್.ಈಶ್ವರಿ

ಈ ಹೆಣ್ಣ ವಿಲಾಸ ನೋಡು ಈ ಕಣ್ಣ ಉಲ್ಲಾಸ ನೋಡು
ಈ ಹೆಣ್ಣ ವಿಲಾಸ ನೋಡು ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ
ಈ ಹೆಣ್ಣ ವಿಲಾಸ ನೋಡು ಈ ಕಣ್ಣ ಉಲ್ಲಾಸ ನೋಡು

ಜಗದಲಿ ನಾನೇ ಚೆಲುವಿನ ಬಾಲೇ
ಕಮಲದ ಹೂ ಮೊಗದವಳು
ಮುತ್ತಿನ ಮಾಲೆ ಕೊಡುವೆನು ನಲ್ಲ
ಹರುಷದಿ ನಿನ್ನ ತಣಿಸುವೆನು
ನಗುವ ಹೂವಿದೆ ಒಳಗೆ ಜೇನಿದೆ
ರಸಿಕ ನೀ ಬಾರೋ ಪ್ರಿಯಾ
ಈ ಹೆಣ್ಣ ವಿಲಾಸ ನೋಡು ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ

ನೂಲಿನ ಹೆಜ್ಜೆ ಕುಣಿಸುತ ಗೆಜ್ಜೆ 
ಮೊಗದಲಿ ಲಜ್ಜೆ ಆಸೆ ತೋರಿದೆ 
ಪ್ರಣಯದ ಗಾನ ಮಧುವಿನ ಪಾನ 
ಬಯಸಿದ ಹೆಣ್ಣು ಪ್ರೇಮದಿ ಕಾದಿದೆ 
ಬಳಿಗೆ ಬಾರಲೋ ಒಲವ ತೋರಲೋ 
ಸುಖವ ನೀಡುವೆ ಮನೋಹರ 
ಈ ಹೆಣ್ಣ ವಿಲಾಸ ನೋಡು ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ 
-------------------------------------------------------------------------------------------------------------------------

ಬಾಲ ನಾಗಮ್ಮ (1966) - ಈ ಹೆಣ್ಣಾ ವಿಲಾಸ ನೋಡು 
ಚಿತ್ರಗೀತೆ : ಚಿ.ಸದಾಶಿವಯ್ಯ ಸಂಗೀತ: ಎಸ್.ರಾಜೇಶ್ವರ ರಾವ್  ಗಾಯನ: ಎಲ್.ಆರ್.ಈಶ್ವರಿ, ಲತಾ 

ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು

ಪಂಜರದ ಅರಗಿಳಿಯ ಹಾರುತ ಹೋಗುವ ಕಾಲವಿದು
ಮನಸಿದು ಬಾನಾಡಿ ಓ.. ರಸಿಕಾ ಇದೆ
ಹಾಡಿ ಆಡಿ ನಿನ್ನ ಬಳಿ ಸಾರುವ ಹೊಸ
ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು 

ಮನಸಿನಲಿ ನೆನಸಿರುವ ಆ ಕತೆ ಆಗುವುದೇ ಕನಸು 
ಬಯಸಿದ ಸುಖಗಳ ನಿನ್ನಾಸೆಯ 
ಕೈಸೇರದೆಂಬ ಕತೆಯನು ಕನಸು ಎನಿಸೆ 
ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು 
--------------------------------------------------------------------------------------------------------------------------

ಬಾಲ ನಾಗಮ್ಮ (1966) - ಬಂಗಾರ ಬೊಂಬೆಗಳೇ 
ಚಿತ್ರಗೀತೆ : ಚಿ.ಸದಾಶಿವಯ್ಯ ಸಂಗೀತ: ಎಸ್.ರಾಜೇಶ್ವರ ರಾವ್ ಗಾಯನ: ಎಲ್.ಆರ್.ಈಶ್ವರಿ,

ಬಂಗಾರ ಬೊಂಬೆಗಳೇ ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ... 
ಮುದ್ದಿನ ಅರಗಿಣಿಗಳೇ ಜೋ..ಜೋ... 

ಭೋಗ ಭಾಗ್ಯಗಳೆಲ್ಲ ನಿಮಗಾಗಿ ಕಾದಿಹುದು
ನಿದ್ದೆಯಲಿ ಬೆಳಗೆ ಏಳಿ ಜೋ..ಜೋ..  
ಬಂಗಾರ ಬೊಂಬೆಗಳೇ ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ... 

ಸತ್ಯಮಣಿ ದೀಪಗಳೇ ಕತ್ತಲೆಯ ಮನೆಯನ್ನು
ಬೆಳಗೆ ಬಂದಿಹವೋ ಜೋ..ಜೋ... 
ಬೆಳಗೆ ಬಂದಿಹವೋ ಜೋ... 
ಬತ್ತಿದ ನದಿಗಳಿಗೆ ಮುಂಗಾರು ಮಳೆ ಉಂಟು
ಕಳೆಯತಂದಿಹವು ಜೋ.. ಜೋ..
ಕಳೆಯತಂದಿಹವು ಜೋ.. ಜೋ..
ಬಂಗಾರ ಬೊಂಬೆಗಳೇ ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ... 
ಮುದ್ದಿನ ಅರಗಿಣಿಗಳೇ ಜೋ..ಜೋ... 

ಸಪ್ತ ದೀಪಗಳ ಮಹಾರಾಣಿಯರು
ನೀವಾರೂ ವೈಭವದಿ ಸುತಿಸಿರಿ ಜೋ..ಜೋ..
ಅದನೋಡಿ ನಾ ನಂದು ದಿನವಾದರೂ ತಣಿಯೇ
ಬದುಕಿ ಬಯಸುವೆನು ಜೋ.. ಜೋ..
ಬದುಕಿ ಬಯಸುವೆನು ಜೋ.. ಜೋ..
--------------------------------------------------------------------------------------------------------------------------

ಬಾಲ ನಾಗಮ್ಮ (1966) - ಈ ಅಂದದ ಸೃಷ್ಟಿಯ 
ಚಿತ್ರಗೀತೆ : ಚಿ.ಸದಾಶಿವಯ್ಯ ಸಂಗೀತ: ಎಸ್.ರಾಜೇಶ್ವರ ರಾವ್ ಗಾಯನ: ಎಸ್.ಜಾನಕೀ

ಈ ಅಂದದ ಸೃಷ್ಟಿಯ ನಿರ್ಮಿಸುಹುದು ಆನಂದಕೇ... ಆನಂದಕೇ
ಈ ಅಂದದ ಸೃಷ್ಟಿಯ ನಿರ್ಮಿಸುಹುದು ಆನಂದಕೇ... ಆನಂದಕೇ
ಈ ಮರ್ಮವ ತಿಳಿಯದೆ ಬಾಳಲು ನೂಕುವೇ ಏತಕೆ... ಏತಕೇ..
ಈ ಅಂದದ ಸೃಷ್ಟಿಯ ನಿರ್ಮಿಸುಹುದು ಆನಂದಕೇ... ಆನಂದಕೇ

ಪರಿಮಳ ಸೂಸುವ ಅರಳಿದ ಕುಸುಮವು
ನೋಡಿರೋ ಎನ್ನುವರುಂಟೇನೂ
ಪರಿಮಳ ಸೂಸುವ ಅರಳಿದ ಕುಸುಮವು
ನೋಡಿರೋ ಎನ್ನುವರುಂಟೇನೂ 
ಮಧುರವಾದ ಸಂಗೀತ ಹಾಡುತಿರೇ 
ಕೇಳಲು ಎನ್ನುವರುಂಟೇನೋ 
ಈ ಅಂದದ ಸೃಷ್ಟಿಯ ನಿರ್ಮಿಸುಹುದು ಆನಂದಕೇ... ಆನಂದಕೇ 
ಈ ಮರ್ಮವ ತಿಳಿಯದೆ ಬಾಳಲು ನೂಕುವೇ ಏತಕೆ... ಏತಕೇ..
ಈ ಅಂದದ ಸೃಷ್ಟಿಯ ನಿರ್ಮಿಸುಹುದು ಆನಂದಕೇ... ಆನಂದಕೇ 
-------------------------------------------------------------------------------------------------------------------------

ಬಾಲ ನಾಗಮ್ಮ (1966) - ಇಬ್ಬರ ಹೆಂಡಿರ ಕಾಟ 
ಚಿತ್ರಗೀತೆ : ಚಿ.ಸದಾಶಿವಯ್ಯ ಸಂಗೀತ: ಎಸ್.ರಾಜೇಶ್ವರ ರಾವ್ ಗಾಯನ: ಪಿ.ಬಿ.ಶ್ರೀನಿವಾಸ

ಇಬ್ಬರ ಹೆಂಡಿರ ಕಾಟ.... ಇರಳು ತಿಗಣೆ ಕಾಟ...
ಕಬಕ್ಕಿ ಕಾಟ ಬಲು ಕಾಟವಯ್ಯಾ....
ಬಲು ಕಾಟವಯ್ಯಾ... ಹೊಯ್...
ಇತ್ತ ಕಡೇ ಶೇಷಾಮ್ಮಾ.. ಅತ್ತ ಕಡೇ ಶಂಕರಮ್ಮಾ
ಇತ್ತ ಕಡೇ ಶೇಷಾಮ್ಮಾ.. ಅತ್ತ ಕಡೇ ಶಂಕರಮ್ಮಾ
ಅತ್ತ ನರಿ ಇತ್ತ ಪುಲಿ ಎತ್ತ ಕಡೆ ನಾ ಹೋಗಲಿ
ನಡುವೇ ಮೆತ್ತಗಾಗುತಿರುವೇ ನನ್ನ ಗತಿ
ಶ್ರೀ ಮದ್ಮರಮರಮಣ ಗೋವಿಂದ ಗೋವಿಂದ

ಇವಳು ನನ್ನ ಅರ್ಧಂಗಿ ಅವಳು ನನ್ನ ಅರ್ಧಂಗಿ 
ಇವಳು ನನ್ನ ಅರ್ಧಂಗಿ ಅವಳು ನನ್ನ ಅರ್ಧಂಗಿ
ನನ್ನ ದೇಹ ಇಬ್ಬರ ಪಾಲಾದರೇ
ನನಗೇನು ಉಳಿಯುತು ದೇವರೇ 
ಶ್ರೀ ಮದ್ಮರಮರಮಣ ಗೋವಿಂದ ಗೋವಿಂದ 

ಈ ಕೆನ್ನೆ ನಿನಗಿರಲಿ ಕೈ ನಿನ್ನದಾಗಿರಲಿ 
ಈ ಕೆನ್ನೆ ನಿನಗಿರಲಿ ಕೈ ನಿನ್ನದಾಗಿರಲಿ 
ಉಳಿದರ್ಧ ಅವಳದು ಕಣೇ ಎಂದರೇ 
ಒಪ್ಪದೇ ಎಳೆದಾಡುತಾರೆ 
ಇತ್ತ ಕಡೇ ಶೇಷಾಮ್ಮಾ.. ಅತ್ತ ಕಡೇ ಶಂಕರಮ್ಮಾ
ಅತ್ತ ನರಿ ಇತ್ತ ಪುಲಿ ಎತ್ತ ಕಡೆ ನಾ ಹೋಗಲಿ
ನಡುವೇ ಮೆತ್ತಗಾಗುತಿರುವೇ ನನ್ನ ಗತಿ

ಅದಕ್ಕೆ ಇರಬೇಕು ಗಂಗೆಯ ಜಡೆಯಲಿ ಕಟ್ಟಿದನು ಶಿವನು
ಅದಕ್ಕೆ ಇರಬೇಕು ಪಾಪ ವಿಷವನು ನುಂಗಿದನು  ಶಿವನು
ಅದಕ್ಕೆ ಇರಬೇಕು ಯೋಗಿಗಳು ಇದನ್ನು ಹೇಳುವುದು
ಅದಕ್ಕೆ ಇರಬೇಕು ಯೋಗಿಗಳು ಇದನ್ನು ಹೇಳುವುದು
ಸಂಸಾರ ಹೊರೆ ಕರ್ಣೋ ಸನ್ಯಾಸಿಯಾಗಿ ಕಾಡಿಗೆ ಹೋಗ್ರೋ
ಶ್ರೀ ಮದ್ಮರಮರಮಣ ಗೋವಿಂದ ಗೋವಿಂದ ಅಂತಾ
ಸಂಸಾರಿ ಸದಾ ದುಃಖೀ ಸನ್ಯಾಸಿ ಸದಾ ಸುಖಿ
ಸಂಸಾರಿ ಸದಾ ದುಃಖೀ ಸನ್ಯಾಸಿ ಸದಾ ಸುಖಿ 
ಸಂಸಾರಿ ದುಃಖೀ ಸನ್ಯಾಸಿ ಸುಖಿ 
ಸಂಸಾರಿ ದುಃಖೀ ಸನ್ಯಾಸಿ ಸುಖಿ 
ಸಂಸಾರಿ ದುಃಖೀ ಸನ್ಯಾಸಿ ಸುಖಿ 
ಶ್ರೀ ಮದ್ಮರಮರಮಣ ಗೋವಿಂದ ಗೋವಿಂದ ಅಂತಾ 
-------------------------------------------------------------------------------------------------------------------------

No comments:

Post a Comment