376. ಪುನರ್ಜನ್ಮ (1969)


ಪುನರ್ಜನ್ಮ ಚಿತ್ರದ ಹಾಡುಗಳು 
  1. ಕನ್ನಡತೀ ನಮ್ಮೊಡತೀ 
  2. ಒಲುಮೆಯಾ ಹೂವೇ 
  3. ಮುಳಗಬಯಸುವೇ ನಿನ್ನನ್ನೊಳಗೆ  
  4. ಹಕ್ಕಿ ಹಾಡು ಚಿಲಿಪಿಲಿ ರಾಗ 
  5. ಗೋಧೂಳಿ ಹಾರುವ ಹೊತ್ತು 
  6. ಹುಬ್ಬಳ್ಳಿಯಿಂದ ಹಾರಿಬಂದ 

ಪುನರ್ಜನ್ಮ (1969) - ಕನ್ನಡತೀ ನಮ್ಮೊಡತೀ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ದುಲಾಲ್ ಸೇನ್ ಗಾಯನ: ಪಿ.ಬಿ.ಶ್ರೀನಿವಾಸ, ಪಿ.ಸುಶೀಲಾ 

ಒಹೊಹೋ.. ಓ..ಓ... ಒಹೊಹೋ.. ಓ..ಓ... 
ಕನ್ನಡತೀ .. ನಮ್ಮೊಡತೀ  ಕಣ್ಣು ತೆರೆದು ನೋಡು, 
ನೀ ನಮಗೆ ವರವ ನೀಡು ಕೈಮುಗಿವೆ ಭೂಮಿತಾಯೆ
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ
ಕೈಮುಗಿವೆ ಭೂಮಿತಾಯೆ
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ
ಕನ್ನಡತೀ ನಮ್ಮೊಡತೀ  ಕಣ್ಣು ತೆರೆದು ನೋಡು,
ನೀ ನಮಗೆ ವರವ ನೀಡು ಕೈಮುಗಿವೆ ಭೂಮಿತಾಯೆ
ನಿನ್ನ ಮಣ್ಣ ಮಕ್ಕಳನು ನೀನು ಕಾಯೆ

ಮುಂಗಾರು ಮಳೆಯಾಗಿದೇ ಬಯಲುಗಳಾ ಸೀಮೆಯಲೀ
ಕೆರೆತುಂಬಿ ತುಳುಕಾಡಿದೇ ನಗುನಗುತೆ ನಲಿವಿನಲಿ
ಕರೆನೀಡಿದೇ..  ದುಡಿ ಎಂದಿದೆ ನೀ ದುಡಿ ಎಂದಿದೆ
ಉಳುವ ರೈತ ನಾನು, ಫಲವ ನೀಡೆ ನೀನು
ಉಳುವ ರೈತ ನಾನು, ಫಲವ ನೀಡೆ ನೀನು
ಹೆಣ್ಣು : ಕನ್ನಡತೀ ನಮ್ಮೊಡತೀ  ಕಣ್ಣು ತೆರೆದು ನೋಡು,
          ನೀ ನಮಗೆ ವರವ ನೀಡು ಕೈಮುಗಿವೆ ಭೂಮಿತಾಯೆ
          ನಿನ್ನ ಮಣ್ಣ ಮಕ್ಕಳನು ನೀನು ಕಾಯೆ

ಹೆಣ್ಣು : ನಮ್ಮ ಕುಲದ ದೈವ ನೀನು
          ನಮ್ಮ ಕುಲದ ದೈವ ನೀನು
         ನಿನ್ನ ಹೆಸರ ಹೇಳೀ ಬೆಳಕು ಹಚ್ಚುವೆ ನಾನು
ಗಂಡು : ನಮ್ಮ ಕುಲದ ದೈವ ನೀನು
           ನಿನ್ನ ಹೆಸರ ಹೇಳೀ ನೇಗಿಲ ಹೂಡುವೆ ನಾನು
ಇಬ್ಬರು : ನಮ್ಮ ಕುಲದ ದೈವ ನೀನು
ಹೆಣ್ಣು : ನಿನ್ನಿಂದಲೇ ಜನಿಸೀದೆ ನಾ ಬೆಳದೀಹೆ ನಾ
          ದುಡಿವೆವು ನಿನಗಾಗಿ ಮಡಿವೆವು ನಿನಗಾಗಿ
          ದುಡಿವೆವು ನಿನಗಾಗಿ ಮಡಿವೆವು ನಿನಗಾಗಿ
ಇಬ್ಬರು : ಕನ್ನಡತೀ ನಮ್ಮೊಡತೀ  ಕಣ್ಣು ತೆರೆದು ನೋಡು,
            ನೀನೆಮಗೆ ವರವ ನೀಡು ಕೈಮುಗಿವೆ ಭೂಮಿತಾಯೆ
            ನಿನ್ನ ಮಣ್ಣ ಮಕ್ಕಳನು ನೀನು ಕಾಯೆ
           ಕೈಮುಗಿವೆ ಭೂಮಿತಾಯೆ  ನಿನ್ನ ಮಣ್ಣ ಮಕ್ಕಳನು ನೀನು ಕಾಯೆ
           (ಒಹೊಹೋ ಓ ಓ)
           ಕೈಮುಗಿವೆ ಭೂಮಿತಾಯೆ ನಿನ್ನ ಮಣ್ಣ ಮಕ್ಕಳನು ನೀನು ಕಾಯೆ
-----------------------------------------------------------------------------------------------------------------------

ಪುನರ್ಜನ್ಮ (1969) - ಒಲುಮೆಯಾ ಹೂವೇ ನೀ ಹೋದೇ ಎಲ್ಲಿಗೇ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ದುಲಾಲ್ ಸೇನ್ ಗಾಯನ: ಡಾ|ಪಿ.ಬಿ.ಶ್ರೀನಿವಾಸ್


ಒಲುಮೆಯ ಹೂವೇ ನೀ ಹೋದೇ ಎಲ್ಲಿಗೇ
ಉಳಿಸಿ ಕಣ್ಣ ನೀರಾ ಈ ನನ್ನ ಬಾಳಿಗೇ ... ಓ ಗೆಳತೀ.....
ಒಲುಮೆಯ ಹೂವೇ ನೀ ಹೋದೇ ಎಲ್ಲಿಗೇ

ಮಧುಮಯ ಗಾನವದೂ ನಡುವಲ್ಲೇ ನಿಂದುದೇಕೇ
ಹಗಲಿನ ರಾಜ್ಯದಲೀ ಕಾರಿರುಳು ಬಂದುದೇಕೇ
ನಿನ್ನಯಾ ಸನಿಹದಲೀ ನಾ ಕಂಡ ಕನಸುಗಳು
ಸದಾ ಎನ್ನ ಮನದೇ ನೆನಪಾಗಬೇಕೇ.. ಓ...  ಗೆಳತೀ....
ಒಲುಮೆಯ ಹೂವೇ ನೀ ಹೋದೇ ಎಲ್ಲಿಗೇ

ಬಾಳಿನಾ ನಂದನದೇ ಹೂವಾಗೀ ನೀ ಬಂದೇ
ಇಂದಲ್ಲಿ ಉಳಿದಿಹುದೂ ಸೌಗಂಧ ಒಂದೇ
ನಿನ್ನಯಾ ನೋಟಗಳೂ ನಿನ್ನ ಮೊಗ ನಿನ್ನ ನಗೇ
ಇದೇ ಕಣ್ಗಳೊಳಗೇ ನೀನೆಲ್ಲೀ ಹೋದೇ... ಓ...  ಗೆಳತೀ
ಒಲುಮೆಯ ಹೂವೇ ನೀ ಹೋದೇ ಎಲ್ಲಿಗೇ
ಓ...  ಗೆಳತೀ.. ಓ...  ಗೆಳತೀ.. ಹೂಂ ... ಹೂಂ ... 
------------------------------------------------------------------------------------------------------------------------

ಪುನರ್ಜನ್ಮ (1969) - ಮುಳಗಬಯಸುವೆ ನಾ ನಿನ್ನ 
ಸಂಗೀತ: ದುಲಾಲ್ ಸೇನ್ ಸಾಹಿತ್ಯ: ಆರ್.ಎನ್.ಜಯಗೋಪಾಲ್  ಗಾಯನ: ಡಾ|ಪಿ.ಬಿ.ಶ್ರೀನಿವಾಸ್

ಹೂಂ.... ಹೂಂ.... ಹೂಂ....
ಮುಳಗಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಹೂಂ.... ಹೂಂ....
ಮುಳಗಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ

ಅರಿಯದೇ ನಡೆದ ಘಟನೆಯ ನೆನಪು
ಅಣುವಾಗಿ ಸುಡುತಿದೆ ನನ್ನ
ಮುಳಗಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ

ನಾ ನಗುತಿದ್ದೇ ಅಹ್ಹಹ್ಹ  ಜಗವನೇ ನೋಡಿ
ಅಳುತಿದೆ ಇಂದೂ ನನ್ನನ್ನೇ ನೋಡಿ ಅಹ್ಹಹ್ಹ
ಮುಳಗಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ... ಅಹ್ಹಹ್ಹ

ಕಣ್ಣ ನೀರಲಿ ಈ ಪಾಪ ತೊಳೆಯದೆ
ಕೊನೆಯಿದಕೆಲ್ಲ ಮರಣವು ಒಂದೇ... ಮರಣವು ಒಂದೇ
ಮುಳಗಬಯಸುವೆ ನಾ ನಿನ್ನ ಒಳಗೆ
ಮರೆಯ ಬಯಸುವೇ ನಾ ಆ ಘಳಿಗೆ
-------------------------------------------------------------------------------------------------------------------------

ಪುನರ್ಜನ್ಮ (1969) - ಮುಳಗಬಯಸುವೆ ನಾ ನಿನ್ನ 
ಸಂಗೀತ: ದುಲಾಲ್ ಸೇನ್ ಸಾಹಿತ್ಯ: ಆರ್.ಎನ್.ಜಯಗೋಪಾಲ್  ಗಾಯನ: ಪಿ.ಸುಶೀಲಾ 

ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ

ರಾಟೆ ತಿರುಗಾಣಿ ಕಟ್ಯಾವೇ ಮೇಳಾ 
ಕುಟ್ಟೋ ಒನಕೆಯ ಹಾಕ್ಯಾವೆ ತಾಳ 
ಕಡೆವ ಕಡೆಗೋಲು ತೆಗೆದಾವ  ಬೆಣ್ಣೆ 
ಅದನು ಸವಿದಾಗ ಆರಳ್ಯಾವೇ ಕಣ್ಣೇ 
ಎಲ್ಲಾ ಕಂಡಾವ ಮೈ ಜುಂ ಎಂದಾಗ
ಹೊಯ್ ಹೊಯ್ ಹೊಯ್ ಹೊಯ್ 
ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ

ರಂಗು ರಂಗೋಲಿ ನಕ್ಕಾವೆ ನೋಡಾ
ತೆಂಗು ತಂಗಾಳಿ ಆಡ್ಯಾವೆ ನೋಡ 
ಮಂಜು ಮುತ್ತಂಗೆ ಸುಮ ರಾಜಿಮ್ಯಾಗೆ
ಮೇಲೆ ಬಿಳಿಮೋಡ ಅರಳೆಯ ಹಾಂಗೆ
ಎಲ್ಲಾ ಕಂಡಾಗ ಮೈ ಜುಂ ಎಂದಾಗ
ಹೊಯ್... ಹೊಯ್... ಹೊಯ್... ಹೊಯ್...
ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ ನೂರಾರು ಆಸೆಯು ಮನದಾಗ

ಸುಮರಾಶಿ ಭೂಮಿ ಹಸಿರುಟ್ಟು ನಿಂದಾಳೆ ನೋಡ
ಪೈರು ತಲೆದೂಗಿ ಹಾಡ್ಯಾವೆ ಹಾಡ
ಕುಯ್ಯೋ ಕುಡುಗೋಲು ಕುಣಿದಾವೆ ಕೂಡ
ಮೇಲೆ ಹಾರೈವೇ  ಬೆಳುವಕ್ಕಿ ಜೋಡ
ಎಲ್ಲಾ ಕಂಡಾಗ ಮೈ ಜುಂ ಎಂದಾಗ
ಹೊಯ್.. ಹೊಯ್.. ಹೊಯ್.. ಹೊಯ್..
ಹಕ್ಕಿ ಹಾಡೋ ಚಿಲಿಪಿಲಿ ರಾಗ
ಹರಿವ ನೀರ ಕಲಕಲ ವೇಗ
ಏನೇನೋ ಭಾವನೆ ತಂದಾಗ
ಆ..  ನೂರಾರು ಆಸೆಯು ಮನದಾಗ
--------------------------------------------------------------------------------------------------------------------

ಪುನರ್ಜನ್ಮ (1969) - ಮುಳಗಬಯಸುವೆ ನಾ ನಿನ್ನ
ಸಂಗೀತ: ದುಲಾಲ್ ಸೇನ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಬಿ.ಶ್ರೀನಿವಾಸ, ಪಿ.ಸುಶೀಲಾ


ಗಂಡು : ಗೋಧೂಳಿ ಹಾರುವ ಹೊತ್ತು ನೀರಿನ ಬಿಂದಿಗೆ ಹೊತ್ತು
            ಕುಲುಕಿ ಬಳುಕಿ ನಡೆಯೊಳೇ ಬಾರೇ ಬಾರೇ ನನ್ನವಳೇ
ಹೆಣ್ಣು : ಗೋಧೂಳಿ ಹಾರುವ ಹೊತ್ತು ಹೆಗಲಲ್ಲಿ ನೇಗಿಲ ಹೊತ್ತು
          ಜಂಭದ ಹೆಜ್ಜೆಯ ಹಾಕೋರೇ ನೀವೇ ನೀವೇ ನನ್ನ ದೊರೆ 

ಹೆಣ್ಣು : ಚಿನ್ನ ನೀನೆಂದೂ (ಹುಂಹುಂ) ರನ್ನ ನೀನೆಂದೂ (ಹುಂಹುಂ)
          ಏನೆಂದು ಕರೆದವರೇ ಏನೇನೋ ಕರೆದವರೇ 
          ನಿದಿರೆಯ ಕೆಡಸಿ ಮಡದಿಯ ನಗಿಸಿ ಮನದಾಗೆ ನಿಂದವಗೇ  
ಗಂಡು :  ಮಲ್ಲೆಯ ಹೂವಾ (ಹುಂಹುಂ) ಜಡೆಯಲಿ ಮುಡಿದು (ಹುಂಹುಂ)
            ಮೆಲ್ಲನೆ ಬಂದವಳೇ ಮೆಲ್ಲನೆ ಬಂದವಳೇ 
            ಬಾಯಲ್ಲಿ ವೀಳ್ಯ ಜಗೆಯುತ ನಡೆದು ನಗೆ ಮಿಂಚ ತಂದವಳೇ ಹೊಯ್ 
ಹೆಣ್ಣು : ಗೋಧೂಳಿ ಹಾರುವ ಹೊತ್ತು ಹೆಗಲಲ್ಲಿ ನೇಗಿಲ ಹೊತ್ತು
          ಜಂಭದ ಹೆಜ್ಜೆಯ ಹಾಕೋರೇ ನೀವೇ ನೀವೇ ನನ್ನ ದೊರೆ 

ಗಂಡು : ಮಾತಲ್ಲಿ ಜೇನು (ಹುಂಹುಂ) ಹರಿಸಲು ನೀನು (ಹುಂಹುಂ)
           ಮೀಯುವೇ ಅದರಲ್ಲೇ ನಾ ಮೀಯುವೆ ಅದರಲ್ಲೇ   
           ಎಲ್ಲಿಹೆ ನಾನು ಅಲ್ಲಿರೇ ನೀನು ಸ್ವರ್ಗವು ಬಳಿಯಲ್ಲೇ 
ಹೆಣ್ಣು : ಎನ್ನಯ ಬಾಳ (ಹುಂಹುಂ) ಬೆಳಗಲು ಎಂದೂ (ಹುಂಹುಂ)
          ಬೆಳಕಾಗಿ ಬಂದವರೇ ಬೆಳಕಾಗಿ ಬಂದವರೇ 
          ಏಳೇಳು ಜನ್ಮ ನಾ ನಿನ್ನ ದಾಸಿ ಆಗುವೆ ನನ್ನ ದೊರೆ ಹೊಯ್ 
ಗಂಡು : ಗೋಧೂಳಿ ಹಾರುವ ಹೊತ್ತು ನೀರಿನ ಬಿಂದಿಗೆ ಹೊತ್ತು
            ಕುಲುಕಿ ಬಳುಕಿ ನಡೆಯೊಳೇ ಬಾರೇ ಬಾರೇ ನನ್ನವಳೇ 
------------------------------------------------------------------------------------------------------------------------

ಪುನರ್ಜನ್ಮ (1969)
ಸಂಗೀತ: ದುಲಾಲ್ ಸೇನ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಸುಶೀಲಾ

ಹಾ.... ಲಾಯ್ಲ್..ಲಾಯ್ಲ್.. ಲಾಯ್ಲ್...  ಹಾ.. ಹಾ.. ಒಹೋ... ಆಹಾ...
ಹೊಯ್.. ಹುಬ್ಬಳಿಯಿಂದಾ  ಹಾರಿ ಬಂದ ಹಕ್ಕಿನಾ ಜೋಡಿಯು ಬೇಕಾಗೈತೇ 
ಹುಬ್ಬಳಿಯಿಂದಾ  ಹಾರಿ ಬಂದ ಹಕ್ಕಿನಾ ಜೋಡಿಯು ಬೇಕಾಗೈತೇ
ಧಾರವಾಡ ಕಾರವಾರ ಸುತ್ತಿ ಬಂದೆ ನಾ
ಧಾರವಾಡ ಕಾರವಾರ ಸುತ್ತಿ ಬಂದೆ ನಾ  
ಚಿನ್ನ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ ಹೊಯ್ ಹೊಯ್ 
ಹುಬ್ಬಳಿಯಿಂದಾ  ಹಾರಿ ಬಂದ ಹಕ್ಕಿನಾ ಜೋಡಿಯು ಬೇಕಾಗೈತೇ

ಈ ಮೂಗುತ್ತಿ ಮುಂಭಾರ ಜಡೇದಳೆ ಹಿಂಭಾರ ಬಲು ಭಾರ ಈ ಯೌವ್ವನಾ ... 
ಹದಿನಾರು ಬಂದಾಗ ನಿಟ್ಟುಸಿರು ಕಂಡಾಗ ಬಲು ಕಷ್ಟ ಈ ಜೀವನಾ 
ತುಟಿಯಲ್ಲಿ ಜೇನಂಟು ಮಾತಲ್ಲಿ ಮಧುವುಂಟು ನಿನಗುಂಟು ಈ ಕಣ್ಣಲ್ಲಿ    
ಹೊಸ ಜಾಗ ನೂರೆಂಟು ಸವಿಯಾದ ಕಥೆಯುಂಟು ನೀನಗಾಗೇ ಈ ನನ್ನಲ್ಲಿ
ವಯಸ್ಸಿಗೇ ಸೊಗಸಿಗೇ.. ವಯಸ್ಸಿಗೇ ಸೊಗಸಿಗೇ ಮನಸಿಗೇ ನಿನಗಾಗಿ
ಹುಬ್ಬಳಿಯಿಂದಾ  ಹಾರಿ ಬಂದ ಹಕ್ಕಿನಾ ಜೋಡಿಯು ಬೇಕಾಗೈತೇ

ಈ.. ತಂಗಾಳಿ ಬಿಸೈತೇ ಕಾಲಗೆಜ್ಜೆ ಕರೆದೈತೆ ಹಾಡೋಕೆ ಮನಸಾಗೈತೆ
ಏಕಾಂತ ಸಾಕಾಗಿ ಸಂಗಾತಿ ಬೇಕಾಗಿ ಈ ಜೀವ ಸೋತಹೋಗೈತೆ
ಕುಡಿ ಮೀಸೆ ಹಮ್ಮಿರ ಮೈಕಟ್ಟಿನ ಸರದಾರ ನನ್ನಾಸೆ ನಿನ್ನಮ್ಯಾಲೈತೇ
ಮುತ್ತಂಥ  ಮಾವಯ್ಯಾ ನನ್ನತ್ತ ಬಾರಯ್ಯಾ ಮನಸಿಂದು ಹುಚ್ಚಾಗೈತೆ
ಸಮಯವೂ...  ಸರಸಕೆ.. ಸಮಯವೂ...  ಸರಸಕೆ ರಸಿಕನೇ ಬಾ ಬಾರಾ
ಹುಬ್ಬಳಿಯಿಂದಾ  ಹಾರಿ ಬಂದ ಹಕ್ಕಿನಾ ಜೋಡಿಯು ಬೇಕಾಗೈತೇ
ಧಾರವಾಡ ಕಾರವಾರ ಸುತ್ತಿ ಬಂದೆ ನಾ
ಧಾರವಾಡ ಕಾರವಾರ ಸುತ್ತಿ ಬಂದೆ ನಾ  
ಚಿನ್ನ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ ಹೊಯ್ ಹೊಯ್ 
ಹುಬ್ಬಳಿಯಿಂದಾ  ಹಾರಿ ಬಂದ ಹಕ್ಕಿನಾ ಜೋಡಿಯು ಬೇಕಾಗೈತೇ
--------------------------------------------------------------------------------------------------------------------------

No comments:

Post a Comment