377. ಅನ್ನಪೂರ್ಣ(1964)



ಅನ್ನಪೂರ್ಣ ಚಿತ್ರದ ಹಾಡುಗಳು 
  1. ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು 
  2. ಅಂದ ಚೆಂದದ ಹೂವೇ 
  3. ಹೃದಯ ವೀಣೆ ಮಿಡಿಯೇ ತಾನೇ 
  4. ಚೆಲುವಿನ ಸಿರಿಯೆ ಬಾರೆಲೇ 
  5. ಕೃಷ್ಣ ಬಿಡು ಬಿಡು ಕೋಪವಾ 


ಅನ್ನಪೂರ್ಣ(1964) - ಕನ್ನಡವೇ ತಾಯ್ನುಡಿಯು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಪಿ.ಬಿ.ಶ್ರೀನಿವಾಸ್


ಪರಿಪರಿಯ ಪರಿಮಳದಿ ಅತಿಶೇಷ್ಠವೆನಿಸಿಹುದು ಕಸ್ತೂರಿಯು
ನುಡಿಗಳಲಿ ಅತಿಮಧುರವೆನಿಸಿಹುದು ಕನ್ನಡನುಡಿಯು.. ಸಿರಿಗನ್ನಡದ ನುಡಿಯು...
ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....

ನದಿಗಳೆನಿತೋ ಹರಿದೂ ತಾಯ ಪಾದ ತೊಳೆದು
ನದಿಗಳೆನಿತೋ ಹರಿದೂ ತಾಯ ಪಾದ ತೊಳೆದು
ಜನ್ಮಸಾರ್ಥಕ ಪಡೆವ ನಾಡೆ ನಿನ್ನದು.. ಆ.....ಆ.....ಆ.....
ಹರಿಹರರು ಒಂದೆಂದು ನುಡಿದವರ ನೆಲೆವೀಡು
ಕಾವ್ಯಗಂಗೆ ಹರಿವ ಪುಣ್ಯಭೂಮಿ ನಿನ್ನದು..ಪುಣ್ಯ ಭೂಮಿ ನಿನ್ನದು...
ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....

ಶಿಲೆಯಲ್ಲಿ ಕಲೆಯನ್ನು ಕಡೆದವರ ಸಿರಿನಾಡು
ಲಲಿತಕಲೆಗಳಾ ಭವ್ಯಗುಡಿಯು ನಿನ್ನದು
ಶಿಲೆಯಲ್ಲಿ ಕಲೆಯನ್ನು ಕಡೆದವರ ಸಿರಿನಾಡು
ಲಲಿತಕಲೆಗಳಾ ಭವ್ಯಗುಡಿಯು ನಿನ್ನದು
ನಾಡುನುಡಿಯ ಮೇಲ್ಮೆಗೇ ಜೀವತೊರೆದು ದೇಶಕೆ
ನಾಡುನುಡಿಯ ಮೇಲ್ಮೆಗೇ ಜೀವತೊರೆದು ದೇಶಕೆ
ಕೀರ್ತಿತಂದ ವೀರರಿತ್ತ ಭೂಮಿ ನಿನ್ನದು...ವೀರಭೂಮಿ ನಿನ್ನದು....
ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
ಕನ್ನಡಿಗನು ನೀನೆಂಬ ಅಭಿಮಾನವಿರಲಿ.....
-------------------------------------------------------------------------------------------------------------------------

ಅನ್ನಪೂರ್ಣ (೧೯೬೪)
ಸಾಹಿತ್ಯ: ಚಿ.ಉದಯಶಂಕರ   ಸಂಗೀತ: ರಾಜನ್-ನಾಗೇಂದ್ರ  ಗಾಯಕರು:ಪಿ.ಬಿ.ಶ್ರೀನಿವಾಸ್


ಹೂಂಹೂಂ ...  ಆಆಆ....
ಹೃದಯವೀಣೆ ಮಿಡಿಯೆ ತಾನೆ
ಹೃದಯವೀಣೆ ಮಿಡಿಯೆ ತಾನೆ ಕಾರಣ ನೀನೆ ಓ ಜಾಣೆ
ಕಾರಣ ನೀನೆ ಓ ಜಾಣೇ 
ಹೃದಯವೀಣೆ ಮಿಡಿಯೆ ತಾನೆ ಕಾರಣ ನೀನೆ ಓ ಜಾಣೆ
ಕಾರಣ ನೀನೆ ಓ ಜಾಣೇ 

ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲೂ ...
ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲೂ ...
ಚಂದ್ರನ ಕಾಣಲು ಮೊರೆಯದೇ ಕಡಲೂ
ತಿಂಗಳ ಬೆಳಕಿನ ರಾತ್ರಿಯೊಳೂ....
ಹೃದಯವೀಣೆ ಮಿಡಿಯೆ ತಾನೆ ಕಾರಣ ನೀನೆ ಓ ಜಾಣೆ
ಕಾರಣ ನೀನೆ ಓ ಜಾಣೇ 

ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು... 
ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು... 
ಹೂವು ಅರಳಲೂ ಕಂಪು ಚೆಲ್ಲಲು
ದುಂಬಿ ನಲಿಯದೆ ಗಾನದೋಳೂ
ಹೃದಯವೀಣೆ ಮಿಡಿಯೆ ತಾನೆ ಕಾರಣ ನೀನೆ ಓ ಜಾಣೆ
ಕಾರಣ ನೀನೆ ಓ ಜಾಣೇ 
ಹೃದಯವೀಣೆ ಮಿಡಿಯೆ ತಾನೆ ಕಾರಣ ನೀನೆ ಓ ಜಾಣೆ
ಕಾರಣ ನೀನೆ ಓ ಜಾಣೇ 
--------------------------------------------------------------------------------------------------------------------------

ಅನ್ನಪೂರ್ಣ(1964)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಪಿ.ಲೀಲಾ, ಟಿ.ಆರ್.ಜೈದೇವಾ 

ಹೆಣ್ಣು : ಹೂಂ...ಆಆಆ... 
          ಅಂದ ಚಂದದ ಹೂವೇ ಮಮತೆಯ ಮಗುವೇ 
          ತಾಯಮಡಿಲ ತುಂಬಿರುವ ಪ್ರೇಮದ ಫಲವೇ 
          ಈ ಮನೆಯ ದೀಪವಾಗಿರುವೇ 
ಗಂಡು : ಅಂದ ಚಂದದ ಚೆಲುವೆ ಒಲವಿನ ಹೂವೇ 
            ಹೃದಯ ಮಂದಿರದಲ್ಲಿ ನೀ ಬೆಳಗುತಿರುವೇ 
            ಮನಕೆ ಆನಂದ ತಂದಿರುವೇ 

ಹೆಣ್ಣು : ನಿನ್ನ ಕಣ್ಣ ಬೆಳಕಿಂದ ಮನವು ಬೆಳಗಿಹುದು 
          ನಿನ್ನ ಕಿರು ನಗುವಿಂದ ಹರುಷ ಮೂಡಿಹುದು 
          ನಿನ್ನ ಉದಯದಿಂದ  ಮನೆ ಸ್ವರ್ಗ ತಾಣಾಗಿಹುದು  
          ತಾಯಾದ ಭಾಗ್ಯವು ನನ್ನದಾಗಿಹುದು 
          ಅಂದ ಚಂದದ ಹೂವೇ ಮಮತೆಯ ಮಗುವೇ 
          ತಾಯಮಡಿಲ ತುಂಬಿರುವ ಪ್ರೇಮದ ಫಲವೇ 
          ಈ ಮನೆಯ ದೀಪವಾಗಿರುವೇ 

ಗಂಡು : ನಿನ್ನ ಕಣ್ಣಬೆಳಕಿನಲಿ ನಾನಿಯುತಿರುವೆ 
           ನಿನ್ನ ಕಿರುನಗುವಿನಲಿ ನಾ ನಲಿಯುತಿರುವೆ 
           ನೀ ಬಂದು ಈ ಮನೆಯ ಸ್ವರ್ಗವನೇ ಮಾಡಿರುವೆ 
           ನನ್ನ ಬಾಳಿನ ಭಾಗ್ಯ ತಾರೆಯಾಗಿರುವೆ 
           ಅಂದ ಚಂದದ ಚೆಲುವೆ ಒಲವಿನ ಹೂವೇ 
           ಹೃದಯ ಮಂದಿರದಲ್ಲಿ ನೀ ಬೆಳಗುತಿರುವೇ 
           ಮನಕೆ ಆನಂದ ತಂದಿರುವೇ 
ಇಬ್ಬರೂ : ಆಆಆ.... ಹೂಂ... ಹೂಂ...  ಹೂಂ... ಹೂಂ...  
-------------------------------------------------------------------------------------------------------------------------

ಅನ್ನಪೂರ್ಣ(1964)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎ. ಎಲ್.ರಾಘವನ್ 

ಹಾಯ್... ಚೆಲುವಿನ ಸಿರಿಯೆ ಬಾರಲೇ ಎಲೆ ನಗು ಮೊಗವಾ ತೋರಲೇ 
ಅಂದಚಂದ ಕಾಣಲೆಂದು ಓಡಿ ಬಂದ ಪ್ರೇಮಿಗಿಂದು 
ಒಲವಿನ ಕಾಣಿಕೆ ಏನಲೇ  ಕಿರುದನಿಯಲಿ ನುಡಿ ಚಂಚಲೇ 
ಚೆಲುವಿನ ಸಿರಿಯೆ ಬಾರಲೇ ಎಲೆ ನಗು ಮೊಗವಾ ತೋರಲೇ 
ಅಂದಚಂದ ಕಾಣಲೆಂದು ಓಡಿ ಬಂದ ಪ್ರೇಮಿಗಿಂದು 
ಒಲವಿನ ಕಾಣಿಕೆ ಏನಲೇ  ಕಿರುದನಿಯಲಿ ನುಡಿ ಚಂಚಲೇ 
ಚೆಲುವಿನ ಸಿರಿಯೆ ಬಾರಲೇ

ಈ ಲತೆ ತನು ಬಳಕಿತೆ ಮೋಹದ ಮತ್ತಲಿ ಬಂಧಿಸಿತೇ 
ಆ ಮನದಲಿ ಮತ್ಸರ ಮೂಡಿಸಿತೇ 
ಬಯಸಿತೇ ಸುಖ ಪಡೆಯಿತೆ ಹೂವಿದು ಚೆಂದುಟಿ ಚುಂಬಿಸಿತೇ ಹಾಂ...  
ರಸಿಕನ ಮನವನು ಕೆರಳಿಸಿತೇ 
ಕಾಡದೇ ಓಡದೇ ಅಲ್ಲೇ ನಿಲ್ಲೇ ನಲ್ಲೇ  ಫುಲ್ ಸ್ಟಾಫ್ ...   
ಚೆಲುವಿನ ಸಿರಿಯೆ ಬಾರಲೇ ಎಲೆ ನಗು ಮೊಗವಾ ತೋರಲೇ 
ಅಂದಚಂದ ಕಾಣಲೆಂದು ಓಡಿ ಬಂದ ಪ್ರೇಮಿಗಿಂದು 
ಒಲವಿನ ಕಾಣಿಕೆ ಏನಲೇ  ಕಿರುದನಿಯಲಿ ನುಡಿ ಚಂಚಲೇ 
ಚೆಲುವಿನ ಸಿರಿಯೆ ಬಾರಲೇ

ನಾಚಿಕೆ ನೀನಗೇತಕೆ ಕರೆಯುವೆ ಬಾರೆ ಸನಿಹಕೆ 
ರಸಸಮಯವೂ ಇರುವುದು ಸರಸಕೆ 
ಮೆಲ್ಲಗೆ ಮೇಲ ಮೆಲ್ಲಗೆ ಬಳುಕುತ ಅಡಿಯಿಡು ಮಲ್ಲಿಗೆ 
ನಾ ಹಾಸಿಹೆ ಹೂವಿನ ಹಾಸಿಗೆ  
ಕಾಡದೇ ಓಡದೇ ಅಲ್ಲೇ ನಿಲ್ಲೇ ನಲ್ಲೇ ಫುಲ್ ಸ್ಟಾಫ್ ...   
ಚೆಲುವಿನ ಸಿರಿಯೆ ಬಾರಲೇ ಎಲೆ ನಗು ಮೊಗವಾ ತೋರಲೇ 
ಅಂದಚಂದ ಕಾಣಲೆಂದು ಓಡಿ ಬಂದ ಪ್ರೇಮಿಗಿಂದು 
ಒಲವಿನ ಕಾಣಿಕೆ ಏನಲೇ  ಕಿರುದನಿಯಲಿ ನುಡಿ ಚಂಚಲೇ 
ಚೆಲುವಿನ ಸಿರಿಯೆ ಬಾರಲೇ
--------------------------------------------------------------------------------------------------------------------------

ಅನ್ನಪೂರ್ಣ(1964)
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್. ಜಾನಕೀ

ಕೃಷ್ಣ ಬೀಡು ಬೀಡು ಕೋಪವಾ ತೋರು ನಿನ್ನ ನಗು ಮೊಗವಾ... ಹೂಂ...
ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಓಡದೇ
ಅಲ್ಲೇ ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಕಾಡದೇ
ಸಲ್ಲದ ಕೋಪ ನನ್ನಲ್ಲಿ ಇನ್ನೂ ತೋರದೇ
ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಓಡದೇ
ಅಲ್ಲೇ ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಕಾಡದೇ

ನೀರನಗಲಿ ತಾವರೆ ಇರದು ಆಸರೆ ಇಲ್ಲದೆ ಬಳ್ಳಿಯು ನಿಲ್ಲದು
ನಲ್ಲ ಇರದ ಬಾಳು ಬರಿದು... ಆಆಆ...
ನೀರನಗಲಿ ತಾವರೆ ಇರದು ಆಸರೆ ಇಲ್ಲದೆ ಬಳ್ಳಿ ನಿಲ್ಲದು
ನಲ್ಲ ಇಲ್ಲದ ಬಾಳು ಬರಿದು ನಿನ್ನ ಕಾಣದ ಜೀವ ಇನ್ನೂ ನಿಲ್ಲದು
ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಓಡದೇ
ಅಲ್ಲೇ ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಕಾಡದೇ

ನೀನೇ ನನ್ನ ಜೀವವಿಂದು ನುಡಿದು ಮಾತನು ಮರೆತೆಯಿಂದು
ಓಡುವೇ ಎಲ್ಲಿಗೇ ವಿರಹ ತಂದು..
ನೀನೇ ನನ್ನ ಜೀವವಿಂದು ನುಡಿದು ಮಾತನು ಮರೆತೆಯಿಂದು
ಓಡುವೇ ಎಲ್ಲಿಗೇ ವಿರಹ ತಂದು..
ಇನ್ನೂ ವಿರಸದ ನೋವ ಜೀವ ತಾಳದು
ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಓಡದೇ
ಅಲ್ಲೇ ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಕಾಡದೇ
ಸಲ್ಲದ ಕೋಪ ನನ್ನಲ್ಲಿ ಇನ್ನೂ ತೋರದೇ
ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಓಡದೇ
ಅಲ್ಲೇ ನಿಲ್ಲು ನಿಲ್ಲು ನಿಲ್ಲಣ್ಣಾ ನಲ್ಲ ಕಾಡದೇ...
-------------------------------------------------------------------------------------------------------------------------
















No comments:

Post a Comment