382. ದತ್ತ (2006)




ದತ್ತ ಚಲನಚಿತ್ರದ ಹಾಡುಗಳು 
  1. ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
  2. ಎಸ್ಕೇಪ್ ಮಾಮ 
  3. ಮಾನಸ 
  4. ಈ ಸೌಂದರ್ಯವೇಕೆ 
  5. ಬಾರೇ ಬಾರೇ 
ದತ್ತ (2006) - ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಸಂಗೀತ: ಆರ್.ಪಿ.ಪಟ್ನಾಯಕ,  ಸಾಹಿತ್ಯ: ಕೆ.ಕಲ್ಯಾಣ, ಗಾಯನ : ಮಧುಬಾಲಕೃಷ್ಣ

ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಸಾವಿರ ದೇವರಿಗೂ, ಮಿಗಿಲು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯೆ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯೆ

ನೂರು ವರುಷ ಸಾಲದು, ಅಮ್ಮನ ಪ್ರೀತಿಸಲು
ಕೋಟಿ ಜನುಮ ಸಾಲದು, ಋಣವ ತೀರಿಸಲು
ಗುಡಿಯು ಗೋಪುರ ವ್ರತವು ನೇಮವು ಏತಕೆ ಬೇಕು
ಹೆತ್ತ ತಾಯಿಯ ಸೇವೆ ಮಾಡುವ ಭಾಗ್ಯವೆ ಸಾಕು
ಅಮ್ಮನೆ ನಿಜ ದೈವ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯೆ

ಕರುಣೆ ಸಹನೆ ಎಂಬುದೆ, ಅಮ್ಮನ ನಿಜ ರೂಪ
ಎಲ್ಲ ಭಾರವ ತಾಳುವ, ಬುವಿಯ ಪ್ರತಿರೂಪ
ಮಾಡೋ ತಪ್ಪನು ಮನ್ನಿಸಿ ಕಾಯೋ ಪ್ರೇಮಮಯಿ ಇವಳು
ನೋವ ನುಂಗಿ ನಗುವ ಹಂಚೋ ತ್ಯಾಗಮಯಿ ಇವಳು
ನನಗೆ ನೀ ನೆರಳು
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ ಸಾವಿರ ದೇವರಿಗೂ, ಮಿಗಿಲು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ
ಮಮತೆಯ ಜೋಗುಳ, ಮರೆಯೆನು ತಾಯೆ
ಕಣ್ಣಿಗೆ ಕಾಣಿಸುವ, ದೈವವು ನೀನಮ್ಮ
ಕನಸಿನ ಕಂಗಳ, ತುಂಬಿದ ತಾಯಿ ಮಮತೆಯ ಜೋಗುಳ, ಮರೆಯೆನು ತಾಯೆ
-----------------------------------------------------------------------------------------

ದತ್ತ (2006) - ಎಸ್ಕೇಪ್ ಮಾಮ 
ಸಂಗೀತ: ಆರ್.ಪಿ.ಪಟ್ನಾಯಕ,  ಸಾಹಿತ್ಯ: ನಾಗೇಂದ್ರ ಪ್ರಸಾದ, ಗಾಯನ : ಕಾರ್ತಿಕ 

-----------------------------------------------------------------------------------------

ದತ್ತ (2006) - ಮಾನಸ 
ಸಂಗೀತ: ಆರ್.ಪಿ.ಪಟ್ನಾಯಕ,  ಸಾಹಿತ್ಯ: ಕೆ.ಕಲ್ಯಾಣ, ಗಾಯನ : ಶ್ರೇಯಾ ಘೋಷಾಲ್, ಕುನಾಲ್ ಗುಂಜಾವಲ್  

ಮಾನಸ.. ಆಆಆ...  ಮಾನಸ... ಆಆಆ... 
ಮಾನಸ.. ಆಆಆ...  ಮಾನಸ... ಆಆಆ... 
ಹೇಳಲೇ ಮಲ್ಲಿಗೆ ಮಾನಸ... ಬೆಳಗಿನ ಜಾವದ ಕನಸ... 
ಕವಿ ಬಣ್ಣಿಸಲಾಗದ ಸೊಗಸ... ಮಾನಸ... ಆಆಆ 
ನಡುವಿದು ಬಳಕುವ ದಿವಸ... ಆ... ನಡುವಿಗೆ ನಾನೇ ಅರಸ 
ಈಗಲಾದರೂ ತಿಳಿಸು ವಯಸ... ಮಾನಸ.... 
ಮಾನಸ.. ಆಆಆ...  ಮಾನಸ... ಆಆಆ... 
ಮಾನಸ.. ಆಆಆ...  ಮಾನಸ... ಆಆಆ... 
  
ನನ್ನೆದಿನ ಮುಂಜಾನೆಯಲಿ ಬಂದೆ ನೀ ಕನಸಿನಲಿ 
ಕಣ್ಣ ಮುಚ್ಚಿ ಪಿಸು ಮಾತನಾಡಿ ಓಡಿದೆ ಯಾಕೆ ಅಲ್ಲಿ 
ನೀನಿಲ್ಲದೇ ನಿದಿರೆಯೇ ... ನನಗೆ ಬಾರದೂ 
ನೀನಿಲ್ಲದೇ ಹಗಲೇ ಕಾಣದು...  
ಈ ಪ್ರೀತಿಯ ಮಾಡುವ ಈ ಹೃದಯಕೆ 
ಎಲ್ಲ ತಿಳಿಸು ಏನು ತಿಳಿಯದು... 
ಮಾನಸ.. ಆಆಆ...  ಮಾನಸ... ಆಆಆ... 
ಮಾನಸ.. ಆಆಆ...  ಮಾನಸ... ಆಆಆ... 

ಸಂಜೆಯ ಏಕಾಂತದಲ್ಲಿ ನೀನು ನಡೆದಾಡೋ ದಾರಿ 
ದಾರಿಯಲಿ ಹೆಜ್ಜೆ ಗುರುತಿನಲಿ ಒಮ್ಮೆ ಇಳಿದೊಡೆ ಜಾರಿ 
ಕೈಯ್ಯ ಹಿಡಿಯುವೇ ... ತಕ್ಷಣ ಜಾರಿದಾಕ್ಷಣ.. 
ಕೂಡಿರುವೇನು ಎಲ್ಲ ಕ್ಷಣ ಕ್ಷಣ 
ಕಣ್ಣ ರೆಪ್ಪೆಗೆ ಕಾವಲು ಎಂದೆಂದೂ ನಾ ... 
ನೀನೇ ತಾನೇ ನನ್ನ ಜೀವನಾ... 
ಮಾನಸ.. ಆಆಆ...  ಮಾನಸ... ಆಆಆ... 
ಮಾನಸ.. ಆಆಆ...  ಮಾನಸ... ಆಆಆ... 
-----------------------------------------------------------------------------------------

ದತ್ತ (2006) - ಈ ಸೌಂದರ್ಯವೇಕೆ 
ಸಂಗೀತ: ಆರ್.ಪಿ.ಪಟ್ನಾಯಕ,  ಸಾಹಿತ್ಯ: ಕೆ.ಕಲ್ಯಾಣ, ಗಾಯನ : ನಂದಿತಾ, ಕುನಾಲ್ ಗುಂಜವಾಲ್ 

ಈ ಸೌಂದರ್ಯಕೆ ನಾ ತಲೆ ಬಾಗುವೇ 
ಈ ಹೂ ಒಲವಿಗೆ ನಾ ಶರಣಾಗವೇ 
ಓ... ಹೃದಯವೇ... ಏಏಏ ಆಶ್ಚರ್ಯವೇ... ಏಏಏ 
ಆಯ್ ಲವ್ ಯೂ... ಲವ್ ಯೂ... 
ಪ್ರೀತಿ ಮಾಡು ಚೆಲುವೇ ... 
ಈ ಸೌಂದರ್ಯಕೆ ನಾ ತಲೆ ಬಾಗುವೇ 
ಈ ಹೂ ಒಲವಿಗೆ ನಾ ಶರಣಾಗವೇ 

ನಿನ್ನಾ ನಗುವಿಂದ ಬೆಳಂದಿಗಳಿಗೆ ಹೆಸರು 
ನಿನ್ನಾ ಉಸಿರಿಂದ ತಂಗಾಳಿಗೂನೂ ಹೆಸರು 
ನೂರು ಜನ್ಮ ಕಾಯುವೆ ಒಂದು ಮಾತಿಗೆ 
ಪ್ರಾಣವನ್ನೇ ನೀಡುವೆ ನಿನ್ನ ಪ್ರೀತಿಗೆ 
ನಿಂತರು ನೀನೇ ... ಕುಂತರೂ ನೀನೇ ... ಬದುಕಿರುವ ವರೆಗೆ... 
ಈ ಸೌಂದರ್ಯಕೆ ನಾ ತಲೆ ಬಾಗುವೇ 
ಈ ಹೂ ಒಲವಿಗೆ ನಾ ಶರಣಾಗವೇ 

ಲಾಲಾ ... ಲಲಲಲಲ ಲಾಲಾ ... ಲಲಲಲಲ 
ಲಾಲಾ ... ಲಲಲಲಲ ಲಾಲಾ ... ಲಲಲಲಲ 
ಹೊಂಗೆ ನೆರಳಲಿ ನಾ ನಿನ್ನ ಮಡಿಲಿನಲ್ಲಿ 
ಮಲಗಿ ಮಗುವಾಗಿ ಕಂಡಂತ ಕನಸಿನಲ್ಲಿ 
ನಾನು ನೀನು ಇಬ್ಬರೇ... ಲೋಕದಲ್ಲಿ 
ಹಂಚಿಕೊಂಡ ಆಣೆಯ ಮಾತಿನಲ್ಲಿ 
ಪ್ರೀತಿಯ ದತ್ತನ ಪ್ರೇಮದ ನರ್ತನ ನಿನ್ನದೇ ಒಳಗಿತ್ತು... ಆಆಆ... 
ಈ ಸೌಂದರ್ಯಕೆ ನಾ ತಲೆ ಬಾಗುವೇ 
ಈ ಹೂ ಒಲವಿಗೆ ನಾ ಶರಣಾಗವೇ 
ಓ... ಹೃದಯವೇ... ಏಏಏ ಆಶ್ಚರ್ಯವೇ... ಏಏಏ 
ಆಯ್ ಲವ್ ಯೂ... ಲವ್ ಯೂ... 
ಪ್ರೀತಿ ಮಾಡು ಚೆಲುವೇ ... 
ಈ ಸೌಂದರ್ಯಕೆ ನಾ ತಲೆ ಬಾಗುವೇ 
ಈ ಹೂ ಒಲವಿಗೆ ನಾ ಶರಣಾಗವೇ 
-----------------------------------------------------------------------------------------

ದತ್ತ (2006) - ಬಾರೇ ಬಾರೇ
ಸಂಗೀತ: ಆರ್.ಪಿ.ಪಟ್ನಾಯಕ, ಸಾಹಿತ್ಯ: ನಾಗೇಂದ್ರಪ್ರಸಾದ, ಗಾಯನ : ಮಾಲತಿ, ಶಂಕರ ಮಹಾದೇವನ್

ಹೆಣ್ಣು : ಓ... ಮಾವ....    
ಗಂಡು : ಏ ರ೦ಗೀ...
            ವ್ಹಾರೇ ಕಣ್ಣ ಹುಡುಗಿ ಬಾ ಬಾರೇ ನನ್ನ ಬೆಡಗಿ
            ವ್ಹಾರೇ  ಕಣ್ಣ ಹುಡುಗಿ ಬಾರೇ ನನ್ನ ಬೆಡಗಿ
            ಮಿ೦ಚಿನ ಬಳ್ಳಿ, ಕೊತ್ತರ ಬಳ್ಳಿ ಮನಸು ಕಳ್ಳಿ ಮಾಯದ ಮಳ್ಳಿ
             ಬಾರೆ ಬಾರೆ ಬಾರೆ ನನ್ನ ಬಜಾರಿ, ನಾನೆ ನಾನೆ ನಾನೆ ನಿನ್ನ ಪೂಜಾರಿ
ಹೆಣ್ಣು : ಬಾರೊ ಬಾರೊ ಬಾರೊ ನನ್ನ ಸರ್ದಾರ,  ನೀನೆ ನೀನೆ ನೀನೆ ನನ್ನ ಮಯೂರ
           ಬಾಬ್ಕಟ್ಟು ಮಧುಬಾಲ ಒಬ್ಬಟ್ಟು ನಿನ್ನ ಗಲ್ಲ
           ಮು೦ದೆ ನೀನು ಹೋದಾಗ ಹಿ೦ದೆ ನಾನು ಬರ್ತೀನಿ
           ಲೈನು ಹೊಡಿ ಅ೦ದಾಗ ಲೈಫೆ ನಿ೦ಗೆ ಕೊಡ್ತೀನಿ
ಗಂಡು : ಬಾರೆ ಬಾರೆ ಬಾರೆ ನನ್ನ ಬಜಾರಿ, ನಾನೆ ನಾನೆ ನಾನೆ ನಿನ್ನ ಪೂಜಾರಿ
ಹೆಣ್ಣು : ಬಾರೊ ಬಾರೊ ಬಾರೊ ನನ್ನ ಸರ್ದಾರ, ನೀನೆ ನೀನೆ ನೀನೆ ನನ್ನ ಮಯೂರ

ಹೆಣ್ಣು : ಏ ಸು೦ಟರಗಾಳಿ, ಮ೦ಡ್ಯ ಗೂಳಿ, ಕಟ್ಟಯ್ಯ ತಾಳಿ, 
          ಪ್ರೀತಿನೇ ಕೂಲಿ ಎಗ್ಗು ಸಿಗ್ಗು ಏನೂ ಇಲ್ಲ
ಗಂಡು : ಓಪನ್ನಾಗೆ ಕೇಳ್ತಾಳಲ್ಲ 
            ಮ್ಯಾಲೆ ಮ್ಯಾಲೆ ಬೀಳ್ತಾಳಲ್ಲ ಮ್ಯಾಲೆ ಬಿದ್ರೆ ಏಳೋದಿಲ್ಲ
            ಆಕಾಶ ಮ್ಯಾಲಾದ್ರು ಬೀಳಲಿ ಈ ಭೂಮಿ ಎರಡು ಹೋಳಾಗಲಿ
            ಏ ಮಾಮ ನೀ ಶ್ಯಾಮ ನೀ ಪ್ರೇಮ ಬಾ ಹಾಡುಮ
            ಅಣ್ಣಾವ್ರ ಸಿನೆಮ ಥರ ಲಕ್ಕ ಲಕ್ಕ  ಹೊಚ್ಚ ಹೊಸ ಕಾಪಿ ಕಣೋ ನಿನ್ನ ಮುಖಾ
            ಆ ಅಣ್ಣಾವ್ರ ಸಿನೆಮ ಥರ ಲಕ್ಕ ಲಕ್ಕ ಹೊಚ್ಚ ಹೊಸ ಕಾಪಿ ಕಣೋ ನಿನ್ನ ಮುಖಾ
ಗಂಡು : ಬಾರೆ ಬಾರೆ ಬಾರೆ ನನ್ನ ಬಜಾರಿ, ನಾನೆ ನಾನೆ ನಾನೆ ನಿನ್ನ ಪೂಜಾರಿ
ಹೆಣ್ಣು : ಬಾರೊ ಬಾರೊ ಬಾರೊ ನನ್ನ ಸರ್ದಾರ, ನೀನೆ ನೀನೆ ನೀನೆ ನನ್ನ ಮಯೂರ, ಮಯೂರ

ಗಂಡು : ಏ ಕನ್ಯಾಮಣಿ, ಚಿ೦ತಾಮಣಿ, ನೀನೆ ನ೦ಗೆ ಪ್ರೀತಿ ಗಣಿ
ಹೆಣ್ಣು : ರತ್ತೋ ರತ್ತೋ ರಾಯರ್ ಮಗ ಆಸೆ ಬೀಜ ಬಿತ್ತೋ ಮಗ
           ನನ್ನ ತುಟಿಗೆ ತುಟಿಯ ಬೀಗ ಹಾಕಿ ಬಿಟ್ಟಾ ನೋಡೀಗ
ಗಂಡು : ಆಕಾಶ ಬಾಗಿದೆ ಭಾಮಿನಿ, ನಿನ್ನ೦ದ ನೋಡಲೆ೦ದು ಕಾಮಿನಿ
            ಹೇ ಭಾಮ ಈ ಪ್ರೇಮ ನೋಡಮ್ಮ ಬಾ ಹಾಡುಮ
ಹೆಣ್ಣು : ಅಬ್ಬಬ್ಬ ಚಿ.ಉದಯ ಶ೦ಕರ್ ಇವನು,
          ಮಾತಿನಲ್ಲೂ ಹಾಡಿನಲ್ಲೂ ಗನ್ನು ಗನ್ನು
          ಅಬ್ಬಬ್ಬ ಚಿ.ಉದಯ ಶ೦ಕರ್ ಇವನು,
          ಮಾತಿನಲ್ಲೂ ಹಾಡಿನಲ್ಲೂ ಗನ್ನು ಗನ್ನು
ಗಂಡು : ಬಾರೆ ಬಾರೆ ಬಾರೆ ನನ್ನ ಬಜಾರಿ, ನಾನೆ ನಾನೆ ನಾನೆ ನಿನ್ನ ಪೂಜಾರಿ
ಹೆಣ್ಣು : ಬಾರೊ ಬಾರೊ ಬಾರೊ ನನ್ನ ಸರ್ದಾರ ನೀನೆ ನೀನೆ ನೀನೆ ನನ್ನ ಮಯೂರ
ಗಂಡು : ಬಾಬ್ಕಟ್ಟು ಮಧುಬಾಲ ಒಬ್ಬಟ್ಟು ನಿನ್ನ ಗಲ್ಲ
            ಮು೦ದೆ ನೀನು ಹೋದಾಗ ಹಿ೦ದೆ ನಾನು ಬರ್ತೀನಿ
            ಲೈನು ಹೊಡಿ ಅ೦ದಾಗ ಲೈಫೆ ನಿ೦ಗೆ ಕೊಡ್ತೀನಿ
            ಬಾರೆ ಬಾರೆ ಬಾರೆ ನನ್ನ ಬಜಾರಿ, ನಾನೆ ನಾನೆ ನಾನೆ ನಿನ್ನ ಪೂಜಾರಿ
ಹೆಣ್ಣು : ಬಾರೊ ಬಾರೊ ಬಾರೊ ನನ್ನ ಸರ್ದಾರ, ನೀನೆ ನೀನೆ ನೀನೆ ನನ್ನ ಮಯೂರ
-----------------------------------------------------------------------------------------

No comments:

Post a Comment