383. ಶ್ರೀಮಾನ್ (1981)


ಶ್ರೀಮಾನ್ ಚಿತ್ರದ ಹಾಡುಗಳು 
  1. ಕಣ್ಣಿನ ಕಾಗುಣಿತ ಕಲಿಸಿದ 
  2. ಹಲೋ ಮಿಸ್ಟರ್ ಕೊಂಚ್ ನಿಲ್ಲಿ 
  3. ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ 
ಶ್ರೀಮಾನ್ (1981)
ಸಂಗೀತ: ಉಪೇಂದ್ರ ಕುಮಾರ್ ಸಾಹಿತ್ಯ: ದೊಡ್ಡರಂಗೇ ಗೌಡ, ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ
ಗಂಡು : ಕಣ್ಣಿನ ಕಾಗುಣಿತ
            ಕಣ್ಣಿನ ಕಾಗುಣಿತ  ಕಲಿಸಿದ ಕನ್ನಿಕೆಯೇ
            ಸನ್ನೆಯ ಮಾಡುತಲೀ ಬೆಳೆಸಿದೆ ಸಿಹಿ ಬಯಕೆ
           ಕಣ್ಣಿನ ಕಾಗುಣಿತ  ಕಲಿಸಿದ ಕನ್ನಿಕೆಯೇ
           ಸನ್ನೆಯ ಮಾಡುತಲೀ ಬೆಳೆಸಿದೆ ಸಿಹಿ ಬಯಕೆ

ಗಂಡು : ಪ್ರಾಯದ ಆಸೆಗಳೂ
           ಕೆಣಕುವ ಕೀರ್ತನೆ ಕಂಡಾಗ ಮನಸಲಿ ಮೋಹಕ ಮೃದಂಗ
          ಕಾಡುವ ನೆನಪುಗಳೂ
         ಅರಿಯದ ಪ್ರೀತಿಯ ತಂದಾಗ ಕನಸಲಿ ಕಾಮನೆ ತರಂಗ
         ಅರಿಯದ ಪ್ರೀತಿಯ ತಂದಾಗ ಕನಸಲಿ ಕಾಮನೆ ತರಂಗ
ಹೆಣ್ಣು : ಈ ಸಕ್ಕರೆ ಮಾತಿಂದ
         ಈ ಸಕ್ಕರೆ ಮಾತಿಂದ ಸನಿಹಕೆ ಸರಿದವನೇ  
         ಅಕ್ಕರೆ ಮೋಡಿಯಲೀ ಸೆಳೆವೆಯಾ ನಿನ್ನೆಡೆಗೆ

ಹೆಣ್ಣು : ಸ್ನೇಹದ ದಾರಿಯಲೀ 
         ನಡೆಯುತ ನಂಬಿಕೆ ಬಂದಾಗ ಕಂಡೆನು ರಂಗಿನ ಪತಂಗ
ಗಂಡು : ತೀರದ ರಾಗದಲೀ
        ನಲಿಯುತ ಸಂಗಡ ನಿಂತಾಗ  ಮಿಂಚಿತು ಮೋಜಿನ ಪ್ರಸಂಗ
        ನಲಿಯುತ ಸಂಗಡ ನಿಂತಾಗ  ಮಿಂಚಿತು ಮೋಜಿನ ಪ್ರಸಂಗ
        ಈ ಕಣ್ಣಿನ ಕಾಗುಣಿತ
        ಈ ಕಣ್ಣಿನ ಕಾಗುಣಿತ ಕಲಿಸಿದ ಕನ್ನಿಕೆಯೇ
ಹೆಣ್ಣು :ಸನ್ನೆಯ ಮಾಡುತಲೀ ಬೆಳೆಸಿದೆ ಸಿಹಿ ಬಯಕೆ
         ಸನ್ನೆಯ ಮಾಡುತಲೀ ಬೆಳೆಸಿದೆ ಸಿಹಿ ಬಯಕೆ
-----------------------------------------------------------------------------------------------------------------------

ಶ್ರೀಮಾನ್ (1981)
ಸಂಗೀತ: ಉಪೇಂದ್ರ ಕುಮಾರ್ ಸಾಹಿತ್ಯ: ದೊಡ್ಡರಂಗೇ ಗೌಡ, ಹಾಡಿದವರು: ಎಸ್.ಜಾನಕಿ


ಹಲೋ ಮಿಸ್ಟರ್ ಕೊಂಚ್ ನಿಲ್ಲಿ 
ಯಾಕೇ ಹೀಗೇ ದೂರ ದೂರ ಓಡುವಿರೀ 
ನನ್ನನು ನೋಡಿ ಮಾತನಾಡಿ ಹೆದರದಿರಿ ಬೆದರದಿರಿ ಸರಿಯದಿರಿ..  ಓಓಓ...  
ಹಲೋ ಮಿಸ್ಟರ್ ಕೊಂಚ್ ನಿಲ್ಲಿ 


ಯಾಕೇ ಹೀಗೇ ದೂರ ದೂರ ಓಡುವಿರೀ 


ನನ್ನನು ನೋಡಿ ಮಾತನಾಡಿ ಹೆದರದಿರಿ ಬೆದರದಿರಿ ಸರಿಯದಿರಿ ಓಓಓ.. 
ಹಲೋ ಮಿಸ್ಟರ್

ಹೆಣ್ಣನ್ನು ಕಂಡರೇ ಕಿಡಿಕಿಡಿ ಸಿಡಿಮಿಡಿ ನಡೆನುಡಿ ಏಕೇ 
ಕಣ್ಣಲ್ಲಿ ಕರೆದರೇ ಕಿರಿಕಿರಿ ಪಿರಿಪಿರಿ  ಕಸಿವಿಸಿ ಏಕೇ 
ಹೆಣ್ಣನ್ನು ಕಂಡರೇ ಕಿಡಿಕಿಡಿ ಸಿಡಿಮಿಡಿ ನಡೆನುಡಿ ಏಕೇ
ಕಣ್ಣಲ್ಲಿ ಕರೆದರೇ ಕಿರಿಕಿರಿ ಪಿರಿಪಿರಿ  ಕಸಿವಿಸಿ ಏಕೇ
ಮೌನ ದಾಟಿ ಮಾತು ಮೀಟಿ ಮಾಡು ಭೇಟಿ ನೋಟ ನಾಟಿ 
ನನ್ನನ್ನು ನೋಡಿ ಮಾತನಾಡಿ ಹೆದರದಿರಿ ಬೆದರದಿರಿ ಸರಿಯದಿರಿ ಓಓಓ.. 
ಹಲೋ ಮಿಸ್ಟರ್ ಕೊಂಚ್ ನಿಲ್ಲಿ

ಮುತ್ತುವ ಭಾವನೆ ಕಳವಳ ಕಲುಕುವ ತಳಮಳ ಕಂಡೇ 
ಹತ್ತಿರ ಸೇರಲು ದಿನ ದಿನ ಕ್ಷಣ ಕ್ಷಣ ಚಣ ಚಣ ತವಕವ ಕಂಡೇ ಅಹ್ಹಹ್ಹಹ್ಹ..  
ಮುತ್ತುವ ಭಾವನೆ ಕಳವಳ ಕಲುಕುವ ತಳಮಳ ಕಂಡೇ
ಹತ್ತಿರ ಸೇರಲು ದಿನ ದಿನ ಕ್ಷಣ ಕ್ಷಣ ಚಣ ಚಣ ತವಕವ ಕಂಡೇ
ನಲ್ಮೆ ಕೋರಿ ಆಸೆ ಭೀರಿ ಹತ್ತಿರ ಬಂದೇ ಬಾಳ ದಾರಿ ಹೇ.. 
ನನ್ನನ್ನು ನೋಡಿ ಮಾತನಾಡಿ ಹೆದರದಿರಿ ಬೆದರದಿರಿ ಸರಿಯದಿರಿ ಓಓಓ..
ಹಲೋ ಮಿಸ್ಟರ್ ಕೊಂಚ್ ನಿಲ್ಲಿ ಯಾಕೇ ಹೀಗೇ ದೂರ ದೂರ ಓಡುವಿರೀ
ಹಲೋ ಮಿಸ್ಟರ್ ಹೇ ಹಲೋ ಮಿಸ್ಟರ್ ಹಲೋ ಹಲೋ ಹೇ ಮಿಸ್ಟರ್ ಮಿಸ್ಟರ್  ಕೊಂಚ್ ನಿಲ್ಲಿ
 ಮಿಸ್ಟರ್   ಮಿಸ್ಟರ್   ಮಿಸ್ಟರ್  ಕೊಂಚ್ ನಿಲ್ಲಿ
-----------------------------------------------------------------------------------------------------------------------

ಶ್ರೀಮಾನ್ (1981)
ಸಂಗೀತ: ಉಪೇಂದ್ರ ಕುಮಾರ್ ಸಾಹಿತ್ಯ: ಗೀತಪ್ರಿಯಾ, ಹಾಡಿದವರು:  ಎಸ್.ಜಾನಕಿ

ಲವ್ ಇಸ್ ಬ್ಲೈಂಡ್ ಪ್ರೇಮ ಕುರುಡೂ
ಪ್ರೇಮದಲ್ಲಿ ಬಿದ್ದೋರೂ ಕಣ್ಣಿದ್ದರೂ ಕುರುಡರಾಗಿರುತ್ತರೇ
ಪ್ರೇಮಿಸಿ ಮೋಸ ಹೋಗ್ತಾರೇ ಅದಕ್ಕೇ ಬಿವೇರ್ ಆಫ್ ಲವ್
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ ಹೇ.. ಎಚ್ಚೆತ್ತುಕೊಳ್ಳಿ
ಈ ಪ್ರೇಮವೆಂಬ ಮೋಸದಿಂದ ನಿಮ್ಮ ನೀವೇ ಕಾಪಾಡಿಕೊಳ್ಳಿ
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ ಈ ಪ್ರೇಮವೆಂಬ
ಮೋಸದಿಂದ ನಿಮ್ಮ ನೀವೇ ಕಾಪಾಡಿಕೊಳ್ಳಿ ಅಯ್ ಆಮ್ ರೈಟ್
(ಯ್ಯಾ.. ಅಯ್ ಆಮ್ ರೈಟ್ ) ಅವೇರ್ ಅವೇರ್

ಮೊದಲು ಮೊದಲು ನಂಬುವಂಥ ನಲ್ಮೆ ತೋರುತಾರೇ
ಹೊಗಳಿ ಹೊಗಳಿ ಮೆಲ್ಲನೇ ಮನವ ಗೆಲ್ಲುತ್ತಾರೇ
ನಥಿಂಗ್ ಬಟ್ ಫೂಲಿಂಗ್ ಎಲ್ಲ ಬರಿ ನಾಟಕ
ಎಂದು ನಿನ್ನ ಮರೆಯೇ ಎಂದು ಆಣೆ ಹಾಕುತಾರೇ
ಚಂದ್ರ ತಾರೆ ತಂದು ಕೊಡುವೇ ಎಂದು ಹೇಳುತಾರೆ
ಆಹ್ಹ್ ಅವರಪ್ಪಮನೇ ಗಂಟು ತಂದುಕೊಡೋಕೇ ವಾಟ್ ಎ ಗ್ರೇಟ್ ಲೈ
ನಂಬುವಂತೇ ನಟಿಸಿ ನಟಿಸಿ ಹೃದಯ ಸೇರುತ್ತಾರೇ
ಏನೋ ಏನೋ ಆಸೆ ತೋರಿ...  ಮೋಸ ಮಾಡುತ್ತಾರೇ ನೋ ಡಾಟ್ ಟೇ ಆಲ್
ಸೋ ಬಿವೇರ್ ಆಫ್ ಮೆನ್ ಪ್ರೇಮವೆಂಬುದಿದ್ದರೇ ನಿಮ್ಮೊಳಗೇ ಬಚ್ಚಿಟ್ಟುಕೊಳ್ಳಿ ಹ್ಹಹ್ಹಹ್ಹ..
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ

ಲೈಲಾ ಮಜನೂ ರೋಮಿಯೋ ಜೂಲಿಯೆಟ್ ಕಥೆಯ ಹೇಳುತ್ತಾರೇ
ಅವರ ಪ್ರೇಮಕಥೆಗೆ ಇವರು ಮಸಿಯ ಬಳಿಯುತ್ತಾರೆ
ವ್ವಾ..ವ್ವಾ.. ಎಂಥಾ ಮಹಾ ಕಾರ್ಯ ವಾಟ್ ಎ ಗ್ರೇಟ್ ಗೀತ್
ತಾವೂ ಪ್ರೇಮ ವೀರರೆಂದೂ ಜಂಭ ಕೊಚ್ಚುತ್ತಾರೆ
ಶುದ್ಧ ಶುಂಠಿಯಾದರೂ ಕವಿಯು ಆಗುತ್ತಾರೇ
ಹುಡುಗಿಯರ ಮುಂದೇ ಕಪಿನೂ ಆಗುತ್ತಾರೇ ಅಹ್ಹಹ್ಹಹ್ಹ...
ಪ್ರೇಮಕ್ಕಾಗಿ ವಿಷವ ಊಣಲು ಸಿದ್ಧವೆನ್ನುತ್ತಾರೇ
ಕೊನೆಗೆ ಅವರೇ ಪ್ರೇಮಕ್ಕೇ... ವಿಷವನುಣಿಸುತಾರೆ 
ಅದಕ್ಕೇ ಹೆಣ್ಣುಗಳೇ ಇಂಥ ಪ್ರೇಮವನ್ನೇ ನೀವೂ ದೂರಕ್ಕೇ ತಳ್ಳಿ
ಪ್ರೇಮಿಗಳೇ ಎಚ್ಚೆತ್ತುಕೊಳ್ಳಿ ಈ ಪ್ರೇಮವೆಂಬ ಮೋಸದಿಂದ
ನಿಮ್ಮ ನೀವೇ ಕಾಪಾಡಿಕೊಳ್ಳಿ ಹ್ಹಹ್ಹಹ್ಹಹ್ಹ...
-----------------------------------------------------------------------------------------------------------------------

No comments:

Post a Comment