384. ಶಿವ ಮೆಚ್ಚಿದ ಕಣ್ಣಪ್ಪ (1988)

ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದ ಹಾಡುಗಳು 
  1. ಕಣ್ಣಿಂದ ನೀ ಬಾಣ ಬೀಸಿದಾಗ 
  2. ಮಾಯೆಯ ತೆರೆಯನು 
  3. ಕಣ್ಣಿಲ್ಲ ಕಿವಿಯಿಲ್ಲ 
  4. ಮೆಲ್ಲ ಮೆಲ್ಲನೆ ಬಂದನೆ
  5. ದೇವಾ ಮಹಾದೇವಾ 
  6. ಎಲ್ಲಾರು ಮಾಡುವುದು ಹೊಟ್ಟೆಗಾಗಿ 
  7. ನೀ ದಾನಿ ನಾ ದೀನ ನೀ ತಂದೆ ನಾ ಮಗನು
ಶಿವ ಮೆಚ್ಚಿದ ಕಣ್ಣಪ್ಪ (1988) - ಕಣ್ಣಿಂದ ನೀ ಬಾಣ ಬೀಸಿದಾಗ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಎಸ್.ಪಿ.ಬಿ., ಬಿ.ಆರ್.ಛಾಯ

ಗಂಡು : ಆಹಾಹಾ ಆಹ್ಹಾಹಾ               ಹೆಣ್ಣು : ಆಹಾಹಾ ಆಹ್ಹಾಹಾ
ಗಂಡು : ಓಹೋಹೋ... ಓಹೋಹೋ  ಹೆಣ್ಣು : ಆಹಾಹಾ ಆಹ್ಹಾಹಾ
ಗಂಡು : ಆಹಾಹಾ ಆಹ್ಹಾಹಾ              ಹೆಣ್ಣು : ಹೂಂ ಹೂಂ ಹೂಂ
ಗಂಡು : ಆಹಾಹಾ ಆಹ್ಹಾಹಾ 
           ಕಣ್ಣಿಂದ ನೀ ಬಾಣ ಬೀಸಿದಾಗ ಆ ಬಾಣ ಎದೆಯಲ್ಲಿ ನಾಟಿದಾಗ
ಹೆಣ್ಣು :  ಕಣ್ಣಿಂದ ನೀ ಬಾಣ ಬೀಸಿದಾಗ  ಆ ಬಾಣ ಎದೆಯಲ್ಲಿ ನಾಟಿದಾಗ
ಗಂಡು : ನೋವು ಬಾರದೆ, ಆಸೆ ಬಂದಿತೆ
ಹೆಣ್ಣು : ನೋವು ಬಾರದೆ, ಆಸೆ ಬಂದಿತೆ
ಗಂಡು : ಹೀಗೇಕೆ ನಾ ಕಾಣೆ ಹೇಳು ಬೇಗ
ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ
ಗಂಡು : ಆ ಬಾಣ ಎದೆಯಲ್ಲಿ ನಾಟಿದಾಗ

ಗಂಡು : ನೀ ಬಳಿಗೆ ಬಂದಾಗ,   ಹೆಣ್ಣು : ಚಳಿಯು ನನ್ನಲಿ
ಗಂಡು : ಮೈಸೋಕಿ ನಿಂತಾಗ, ಹೆಣ್ಣು : ಮಿಂಚು ಮೈಯಲ್ಲಿ
ಗಂಡು : ನೀ ಬಳಿಗೆ ಬಂದಾಗ,   ಹೆಣ್ಣು : ಚಳಿಯು ನನ್ನಲಿ
ಗಂಡು : ಮೈಸೋಕಿ ನಿಂತಾಗ, ಹೆಣ್ಣು : ಮಿಂಚು ಮೈಯಲ್ಲಿ
ಗಂಡು : ಬಳಸಲು ನಿನ್ನ, ತೋಳಲಿ ನನ್ನ
            ಬಳಸಲು ನಿನ್ನ, ತೋಳಲಿ ನನ್ನ  ಎಂಥ ಚೆಂದ ಎಂಥ ಚೆಂದ
ಹೆಣ್ಣು : ಚೆಲುವನೆ, ಬಿಡು ಬಿಡು
ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
ಹೆಣ್ಣು : ಆ ಬಾಣ ಎದೆಯಲ್ಲಿ ನಾಟಿದಾಗ

ಹೆಣ್ಣು : ಆ ಸೂರ್ಯ ಬಂಗಾರದ,   ಗಂಡು : ಕಿರಣ ಚೆಲ್ಲಿದೆ
ಹೆಣ್ಣು : ಈ ಭೂಮಿ ಹಸಿರಾದ,      ಗಂಡು : ಹುಲ್ಲು ಹಾಸಿದೆ
ಹೆಣ್ಣು : ಆ ಸೂರ್ಯ ಬಂಗಾರದ,   ಗಂಡು : ಕಿರಣ ಚೆಲ್ಲಿದೆ
ಹೆಣ್ಣು : ಈ ಭೂಮಿ ಹಸಿರಾದ,      ಗಂಡು : ಹುಲ್ಲು ಹಾಸಿದೆ
ಹೆಣ್ಣು : ಚಿಲಿಪಿಲಿ ಎಂದು, ಗಿಳಿಗಳು ಹಾಡಿ
         ಚಿಲಿಪಿಲಿ ಎಂದು, ಗಿಳಿಗಳು ಹಾಡಿ  ನಾನು ನೀನು ಸೇರಲೆಂದು
ಗಂಡು : ಕರೆದಿವೆ, ಚಿನ್ನ
ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ  ಆ ಬಾಣ ಎದೆಯಲ್ಲಿ ನಾಟಿದಾಗ
ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ  ಆ ಬಾಣ ಎದೆಯಲ್ಲಿ ನಾಟಿದಾಗ
ಹೆಣ್ಣು : ನೋವು ಬಾರದೆ, ಆಸೆ ತಂದಿತೆ
ಗಂಡು : ನೋವು ಬಾರದೆ, ಆಸೆ ಬಂದಿತೆ
ಹೆಣ್ಣು : ಹೀಗೇಕೆ ನಾ ಕಾಣೆ ಹೇಳು ಬೇಗ
ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
ಹೆಣ್ಣು : ಆ ಬಾಣ ಎದೆಯಲ್ಲಿ ನಾಟಿದಾಗ
------------------------------------------------------------------------------------------------------------------------

ಶಿವ ಮೆಚ್ಚಿದ ಕಣ್ಣಪ್ಪ (1988) - ಕಣ್ಣಿಲ್ಲಾ... ಕಿವಿಯಿಲ್ಲಾ.
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಪಿ.ಬಿ

ಶಿವಪ್ಪಾ... ಶಿವಪ್ಪಾ ತಂದೇ... ನನ್ನಪ್ಪಾ ಇಂದೇ ನಿನ್ನನ್ನು ತಿಳಿದೇ
ನೀನಿಲ್ಲಾ ನೀನಿಲ್ಲಾ ಎಂದು ನಾನು ಹಹ್ಹಹ್ಹ ಬದುಕೆಲ್ಲಾ ಕತ್ತಲಲೇ  ಅಲೆದೆನಲ್ಲಾ
ಬದುಕೆಲ್ಲಾ ಕತ್ತಲಲೇ  ಅಲೆದೆನಲ್ಲಾ

(ಓಂ... ತತ್ತಪುರಷಾಯ ವಿಸ್ಮಯೇ ಮಹಾ ದೇವಾಯ ಧೀಮಹೀ
ಸನ್ನೋ ಉಗ್ರ ಪ್ರಚೋದಯಾ..ತ  ಈಶಾನ ಸರ್ವ ವಿದ್ಯಾನ್
ಈಶ್ವರ ಸರ್ಪ ಭೂತಾನಾಮ್ ಭ್ರಹ್ಮಾಧೀಪತಿ   ಭ್ರಹ್ಮ ನಾರಿಪತಿ
ಬ್ರಹ್ಮ ಶಿವೋಮೇ ಅಸ್ಥಿತೇ ಶಿವೋಮ್ ಸಧ್ಯೋಗ ಗಾತಿಂ ಪ್ರಾಧ್ಯಮ್ )

ಕಣ್ಣಿಲ್ಲಾ... ಕಿವಿಯಿಲ್ಲಾ.. ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ ಮಹಾದೇವನೇ ಮನಸೆಲ್ಲಾ
ಕಣ್ಣಿಲ್ಲಾ... ಕಿವಿಯಿಲ್ಲಾ.. ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ ಮಹಾದೇವನೇ ಮನಸೆಲ್ಲಾ

ಎದುರಲ್ಲೆ ದಿನವೆಲ್ಲಾ ಕುಳಿತಿರುವ ಆಸೆ ಕಾಣೆನೊ ಏಕೋ ನನ್ನಪ್ಪಾ..
ಎದುರಲ್ಲೆ ದಿನವೆಲ್ಲಾ ಕುಳಿತಿರುವ ಆಸೆ ಕಾಣೆನೊ ಏಕೋ ನನ್ನಪ್ಪಾ..
ನಿನ್ನನ್ನೇ ನೋಡುತಾ ಇಲ್ಲಿರುವಾ ಆಸೆ ಕಾರಣ ಏನೋ ಹೇಳಪ್ಪಾ 
ನಿನ್ನ ಪ್ರೀತಿಗೆ ಸೋತು ಹೋದೆನು 
ನಿನ್ನ ಪ್ರೀತಿಗೆ ಸೋತು ಹೋದೆನು ಇನ್ನು ಮರೆತರೆ ನಾನು ಬದುಕೇನು
ಕಣ್ಣಿಲ್ಲಾ... ಕಿವಿಯಿಲ್ಲಾ.. ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ ಮಹಾದೇವನೇ ಮನಸೆಲ್ಲಾ

ಶಿವ ಶಿವ ಎಂದಾಗ ಮನಸಿನ ಭಾರ ದೂರಕೆ ಓಡಿ ತಾನಾಗಿ
ಶಿವ ಶಿವ ಎಂದಾಗ ಮನಸಿನ ಭಾರ ದೂರಕೆ ಓಡಿ ತಾನಾಗಿ
ಹರ ಹರ ಎಂದಾಗ ಮೈಯಲ್ಲಿ ಮಿಂಚು ಓಡುವ ಹಾಗೆ ನನಗಾಗಿ
ಗಂಟಲಲ್ಲಿಯೇ ಧನಿಯು ಹಿಡಿವುದು...
ಗಂಟಲಲ್ಲಿಯೇ ಧನಿಯು ಹಿಡಿವುದು ಏಕೋ ಕಾಣೆನು ಅಳುವೇ ಬರುವುದು
ಕಣ್ಣಿಲ್ಲಾ... ಕಿವಿಯಿಲ್ಲಾ.. ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ ಮಹಾದೇವನೇ ಮನಸೆಲ್ಲಾ
------------------------------------------------------------------------------------------------------------------------

ಶಿವ ಮೆಚ್ಚಿದ ಕಣ್ಣಪ್ಪ (1988) - ದೇವಾ ಮಹಾದೇವಾ ದೇವಾ ಮಹಾದೇವಾ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಪಿ.ಬಿ

ದೇವಾ ಮಹಾದೇವಾ ದೇವಾ ಮಹಾದೇವಾ
ನೀನೆ ನನ ಜೀವ ಬಿಡಲಾರೆ ಪಾದವ
ದೇವಾ ಮಹಾದೇವಾ ದೇವಾ ಮಹಾದೇವಾ

ಎಲ್ಲಿದ್ದೆ ನಾನು ಹೇಗಿದ್ದೆ ನಾನು...
ಎಲ್ಲಿದ್ದೆ ನಾನು ಹೇಗಿದ್ದೆ ನಾನು ನಂಬಲು ನಿನ್ನ ಏನಾದೆ ನಾನು
ಕಣ್ಣಲ್ಲಿ ನೀನು ಮನಸಲಿ ನೀನು...
ಕಣ್ಣಲ್ಲಿ ನೀನು ಮನಸಲಿ ನೀನು ಹೀಗಿರುವಾಗ ಏನಾದರೇನು
ಸುಡಲಿ ದೇಹವಾ ಉರಿವಾ ಬೆಂಕಿಯು ನಿನ್ನ ಬೇರೆಯಲಿ ನನ್ನ ಜೀವವು
ದೇವಾ ಮಹಾದೇವಾ ದೇವಾ ಮಹಾದೇವಾ

ಕೈಲಾಸವಂತೆ ಭೂಲೋಕವಂತೆ...
ಕೈಲಾಸವಂತೆ ಭೂಲೋಕವಂತೆ ವಾಹನ ನಿನಗೆ ಈ ನಂದಿಯಂತೆ
ಶಿವರಾತ್ರಿಯಂತೆ ನವರಾತ್ರಿಯಂತೆ...
ಶಿವರಾತ್ರಿಯಂತೆ ನವರಾತ್ರಿಯಂತೆ ಏತಕೆ ಬೇಕು ಆ ಎಲ್ಲಾ ಚಿಂತೆ
ನಿನ್ನಾ ನೋಡಿದ ನೋಡಿ ಹಾಡಿದ ಎಲ್ಲಾ ರಾತ್ರಿ ಶಿವರಾತ್ರಿಯೇ
ಆಡೋ ಮಾತು ಶಿವ ಮಂತ್ರದಂತೆಯೇ ಬೇರೆ ಏನನು ಅರಿಯೆ ತಂದೆಯೇ
ಅಪ್ಪಾ ಅಮ್ಮಾ ನನಗಿಲ್ಲಾ ನಿನ್ನ ಬಿಟ್ಟು ಬೇರಿಲ್ಲಾ
ಜಟಾಧಾರಾ ಗಂಗಾಧರ ನಟೇಶ ಗಿರೀಶ ಮಹೇಶಾ.....
------------------------------------------------------------------------------------------------------------------------

ಶಿವ ಮೆಚ್ಚಿದ ಕಣ್ಣಪ್ಪ (1988) - ಮೆಲ್ಲ ಮೆಲ್ಲನೆ ಬಂದನೇ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು:ವಾಣಿ ಜಯರಾಮ 

ಮೆಲ್ಲ ಮೆಲ್ಲನೆ ಬಂದನೇ
ಮೆಲ್ಲ ಮೆಲ್ಲನೆ ಬಂದನೇ ನಮ್ಮಮ್ಮ ಕೇಳೇ
ಮೆಲ್ಲ ಮೆಲ್ಲನೆ ಬಂದನೇ ನಮ್ಮಮ್ಮ ಕೇಳೇ ಮೆಲ್ಲ ಮೆಲ್ಲನೆ ಬಂದನೇ
ನಮ್ಮಮ್ಮ ಕೇಳೇ ಮೆಲ್ಲ ಮೆಲ್ಲನೆ ಬಂದನೇ
ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಏನೋ ಕೊಟ್ಟು
ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಏನೋ ಕೊಟ್ಟು
ನಿಲ್ಲದೆ ಓಡಿ ಹೋದ ನಲ್ಲನು ಇವನೇ ನೋಡೇ 
ಮೆಲ್ಲ ಮೆಲ್ಲನೆ ಬಂದನೇ ನಮ್ಮಮ್ಮ ಕೇಳೇ ಮೆಲ್ಲ ಮೆಲ್ಲನೆ ಬಂದನೇ  

ಅತ್ತೆಯ ಮಗಳೇ ಎಂದ ಕಿತ್ತಳೆ ಹಣ್ಣೇ ಎಂದ
ಅತ್ತೆಯ ಮಗಳೇ ಎಂದ ಕಿತ್ತಳೆ ಹಣ್ಣೇ ಎಂದ
ಚಿತ್ತಿ ನೀ ಜಾತಿ ಹೆಣ್ಣೇ ಹತ್ತಿರ ಬಾ ಎಂದ 
ಚಿತ್ತಿ ನೀ ಜಾತಿ ಹೆಣ್ಣೇ ಹತ್ತಿರ ಬಾ ಎಂದ 
ಸುತ್ತಲೂ ಯಾರು ಇಲ್ಲಾ.... ಆ...ಆ...ಆ.. 
ಸುತ್ತಲೂ ಯಾರು ಇಲ್ಲಾ ಕತ್ತಲು ಬಂದೆ ಇಲ್ಲಾ 
ಮೆತ್ತಗೆ ಹತ್ತಿರ ಬಂದು ಮುತ್ತು ಕೊಟ್ಟು ಓಡಿದಾ 
ಮೆಲ್ಲ ಮೆಲ್ಲನೆ ಬಂದನೇ ನಮ್ಮಮ್ಮ ಕೇಳೇ ಮೆಲ್ಲ ಮೆಲ್ಲನೆ ಬಂದನೆ

ರಂಭೆಯ ಹಾಗೆ ಎಂದ ನಿಂಬೆಯ ಹಣ್ಣೇ ಎಂದ
ರಂಭೆಯ ಹಾಗೆ ಎಂದ ನಿಂಬೆಯ ಹಣ್ಣೇ ಎಂದ
ತುಂಬೆಯ ಹೂವು ಚಂದ ಮುಡಿದುಕೊ ಎಂದ 
ತುಂಬೆಯ ಹೂವು ಚಂದ ಮುಡಿದುಕೊ ಎಂದ 
ಅಂಬಾ ಪ್ರಿಯ ಶಂಭು ಮಹಾದೇವ ತಾನೆಂದು 
ಅಂಬಾ ಪ್ರಿಯ ಶಂಭು ಮಹಾದೇವ ತಾನೆಂದು 
ನಂಬಿಸಿ ಇರುಳೆಲ್ಲಾ ಚೆಲ್ಲಾಟವಾಡಿದ 
ಮೆಲ್ಲ ಮೆಲ್ಲನೆ ಬಂದನೇ ನಮ್ಮಮ್ಮ ಕೇಳೇ ಮೆಲ್ಲ ಮೆಲ್ಲನೆ ಬಂದನೆ
ನಮ್ಮಮ್ಮ ಕೇಳೇ ಮೆಲ್ಲ ಮೆಲ್ಲನೆ ಬಂದನೆ
----------------------------------------------------------------------------------------------------------------------

ಶಿವ ಮೆಚ್ಚಿದ ಕಣ್ಣಪ್ಪ (1988) - ಅವನು ದೂರದಲಿಲ್ಲಾ ಕಾಣದೆ ಅಡಗಿಲ್ಲಾ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು:ಡಾ|| ರಾಜಕುಮಾರ್ 

ಅವನು ದೂರದಲಿಲ್ಲಾ ಕಾಣದೆ ಅಡಗಿಲ್ಲಾ
ಅವನಿಲ್ಲದ ಎಡೆಯಿಲ್ಲಾ ಅವನಿಂದಲೇ ಎಲ್ಲಾ
ಓ... ಮನುಜಾ ನೀನೇಕೆ ಈ ಸತ್ಯ ತಿಳಿದಿಲ್ಲಾ
ಈ ಸತ್ಯ ತಿಳಿದಿಲ್ಲಾ

ಮಾಯೆಯ ತೆರೆಯನು ಸರಿಸಿದರೇನೇ ಕಾಣುವುದು ನಿಜವಾ ಜೀವ...
ಅರಿವುದೆ ನೀ ನಿಜವಾ
ಮಾಯೆಯ ತೆರೆಯನು ಸರಿಸಿದರೇನೇ ಕಾಣುವುದು ನಿಜವಾ ಜೀವ...
ಅರಿವುದೆ ನೀ ನಿಜವಾ

ಇರುಳಲ್ಲಿ ನಿಂತು ಅಯ್ಯೋ ಎಂದರೆ ಕತ್ತಲು ಓಡುವುದೇ 
ಇರುಳಲ್ಲಿ ನಿಂತು ಅಯ್ಯೋ ಎಂದರೆ ಕತ್ತಲು ಓಡುವುದೇ 
ಬೆಳಕಿಗೆ ಬರದೇ ನೀ ಹಲುಬಿದರೆ...
ಬೆಳಕಿಗೆ ಬರದೇ ನೀ ಹಲುಬಿದರೆ ಕಂಗಳು ಕಾಣುವುದೇ
ನಿನ್ನನ್ನು ನೀನು ಅರಿತರೆ ತಾನೇ ಶಿವನ ಅರಿಯುವುದು
ಮಾಯೆಯ ತೆರೆಯನು ಸರಿಸಿದರೇನೇ ಕಾಣುವುದು ನಿಜವಾ ಜೀವ...
ಅರಿವುದೆ ನೀ ನಿಜವಾ

ಕನ್ನಡಿಯನು ನೋಡಿದರೇನೇ  ಬಿಂಬವು ಕಾಣುವುದು
ಕನ್ನಡಿಯನು ನೋಡಿದರೆನೇ  ಬಿಂಬವು ಕಾಣುವುದು
ಒಳಗಿನ ಕಣ್ಣ ತೆರೆದರೆ ತಾನೇ...
ಒಳಗಿನ ಕಣ್ಣ ತೆರೆದರೆ ತಾನೇ ದೇವನ ನೋಡುವುದು
ಆಗಲೇ ಮನದ ಭ್ರಾಂತಿಯು ಅಳಿದು ಶಾಂತಿಯು ತುಂಬುವುದು
ಮಾಯೆಯ ತೆರೆಯನು ಸರಿಸಿದರೇನೇ ಕಾಣುವುದು ನಿಜವಾ ಜೀವ...
ಅರಿವುದೆ ನೀ ನಿಜವಾ
ಮಾಯೆಯ ತೆರೆಯನು ಸರಿಸಿದರೇನೇ ಕಾಣುವುದು ನಿಜವಾ ಜೀವ...
ಅರಿವುದೆ ನೀ ನಿಜವಾ 
-----------------------------------------------------------------------------------------------------------------------

ಶಿವ ಮೆಚ್ಚಿದ ಕಣ್ಣಪ್ಪ (1988) - ಆ.... ಎಲ್ಲಾರು ಮಾಡುವುದು ಹೊಟ್ಟೆಗಾಗಿ 
ಸಾಹಿತ್ಯ:ಕನಕದಾಸ  ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು:ಡಾ|| ರಾಜಕುಮಾರ್

ಆ.... ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ  ಗೇಣು ಬಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ  ಗೇಣು ಬಟ್ಟೆಗಾಗಿ
ಬಿಲ್ಲುಗಳ ಹುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ
ಬಿಲ್ಲುಗಳ ಹುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು ಹೊಟ್ಟೆಗಾಗಿ
ನಾಲ್ಕು ವೇದ ಪುರಾಣ ಪಂಚಾಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ

ಬಡಿದು ಬಡಿದು ಕಬ್ಬಿಣವ ಕಾಸಿ ತುಪಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ
ಬಡಿದು ಬಡಿದು ಕಬ್ಬಿಣವ ಕಾಸಿ ತುಪಾಕಿ ಮಾಡಿ
ಹೊಡೆವ ಗುಂಡು ಮಾಡುವುದು ಹೊಟ್ಟೆಗಾಗಿ
ಚಂಡ ಭಂಡಾರೆಲ್ಲಾ ಮುಂದೆ ಕತ್ತಿ ಹರಿಗೆಯ ಪಿಡಿದು 
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ 
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ

ದೊಡ್ಡ ದೊಡ್ಡ ಕುದುರೆ ಏರಿ ಮೇಧೇ ಹೊತ್ತು
ರಾಹುತನಾಗಿ ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ದೊಡ್ಡ ದೊಡ್ಡ ಕುದುರೆ ಏರಿ ಮೇಧೇ ಹೊತ್ತು
ರಾಹುತನಾಗಿ ಹೊಡೆದಾಡಿ ಸಾಯುವುದು ಹೊಟ್ಟೆಗಾಗಿ
ಕುಂಟೆ ಕುರಿಗೆ ಇಂದ ಹೆಂಟೆ ಮಣ್ಣ ಹದ ಮಾಡಿ 
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ

ಕೆಟ್ಟ ತನದಿಂದ ಕಳ್ಳತನವನೇ ಮಾಡಿ
ಕಟ್ಟಿ ಹೊಡೆಸಿಕೊಳ್ಳುವುದು ಹೊಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮುಂದ ಭೈರಾಗಿ
ನಾನಾ ವೇಷ ಗುಂಬುವುದು ಹೊಟ್ಟೆಗಾಗಿ
ಉನ್ನತ ಕಾಗಿನೆಲೆ ಆದಿ ಕೇಶವನ
ಉನ್ನತ ಕಾಗಿನೆಲೆ ಆದಿ ಕೇಶವನ
ಅನುದಿನ ನೆನೆವುದು ಭಕ್ತಿಗಾಗಿ ಪರ ಮುಕ್ತಿಗಾಗಿ
ನಾವೆಲ್ಲರೂ ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ
------------------------------------------------------------------------------------------------------------------------

ಶಿವ ಮೆಚ್ಚಿದ ಕಣ್ಣಪ್ಪ (1988) - ನೀ ದಾನಿ ನಾ ದೀನ ನೀ ತಂದೆ ನಾ ಮಗನು 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಪಿ.ಬಿ

ನೀ ದಾನಿ ನಾ ದೀನ ನೀ ತಂದೆ ನಾ ಮಗನು
ನೀ ಒಡೆಯ ನಾ ಆಳು ಈ ನಿಜವನು ನೀ ತಿಳಿದೂ ನನ್ನ ಸೇವಕನಂದೇ
ಆ ನಿನ್ನ ನುಡಿ ಕೇಳಿ ನಾನಿಂದೂ ಬಲು ನೊಂದೇ ನೀನಲ್ಲವೇ ಲೋಕಕ್ಕೆಲ್ಲಾ ತಂದೇ
ನಿನ್ನ ಕರುಣೆಯ ಕಂಡು ನಾ ಸೋತು ಬಂದೇ ...
ನಾ ಸೋತು ಬಂದೇ ... ನಾ ಸೋತು ಬಂದೇ

No comments:

Post a Comment