386. ಸಾಮ್ರಾಟ್ (1994)

ಸಾಮ್ರಾಟ್ ಚಲನಚಿತ್ರದ ಹಾಡುಗಳು 

  1. ನಿಮ್ ಕಡೆ ಸಂಬಾರಂದ್ರೆ ನಮ್ ಕಡಿ ತಿಳಿಯೂದಿಲ್ಲ
  2. ಕನ್ಯಾಗಿರಿಯಲ್ಲಿ ತರುಣೋದಯ ತರುಣೋದಯದಲ್ಲೆ ಪ್ರೇಮೋದಯ
  3. ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
  4. ನಂಗೇ ದುಡ್ಡ ಅಂದ್ರೆ...  ನಂಗೇ ದುಡ್ಡ ಅಂದ್ರೆ... 
  5. ನಾನ್ಯಾರು ನಾನೇನು ನಾನಿಲ್ಲಿರುವ ಗುರಿ ಏನು 

ಸಾಮ್ರಾಟ್ ( ೧೯೯೪) - ನಿಮ್ ಕಡೆ ಸಂಬಾರಂದ್ರೆ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ : ಮಾಲ್ಗುಡಿ ಶೋಭಾ ಮತ್ತು ಎಸ್.ಪಿ.ಬಿ.

ಹೆಣ್ಣು : ನಿಮ್ ಕಡೆ ಸಾಂಬರ ಅಂದ್ರೇ ನಮ್ ಕಡಿ ತಿಳಿಯೂದಿಲ್ಲ
          ನಮ್ ಕಡಿ ಡಾಮರಂದ್ರೆ ನಿಮ್ ಕಡಿ ತಿಳಿಯೂದಿಲ್ಲ
           ನಿಮ್ ಕಡೆ ಶಿರ ಅಂದ್ರೆ ತಲೆ ಅಂತ ತಿಳ್ಕೊಂತೀರಿ
           ನಮ್ ಕಡೆ ಶಿರ ಅಂದ್ರೆ ಕೇಸರಿಬಾತ್ ಅಂದ್ಕೊಂತೀವಿ
           ಎಂತದು ಎಂತದು ಹಾಡುದೆಂತ, ಕೂಡುದೆಂತ, ಕುಣಿಯುದೆಂತ
           ಹ್ಯಾಂಗಪ್ಪ, ಹ್ಯಾಂಗಪ್ಪ, ಹಾಡುದ್ ಹ್ಯಾಂಗ, ಕೂಡುದ್ ಹ್ಯಾಂಗ, ಕುಣಿಯುದ್ ಹ್ಯಾಂಗ
ಗಂಡು : ಬೆಳಗಾವಿ ಆದರೇನು ಬೆಂಗಳೂರು ಆದರೇನು
            ನಗಬೇಕು ನಾವು ಮೊದಲು ಮಾತಾಡಲು ಎದೆ ಭಾಷೆಯ ಅರಿವಾಗಲು
            ಹುಬ್ಬಳ್ಳಿಯಾದರೇನು, ಭದ್ರಾವತಿ ಆದರೇನು, ಬೇರೀಬೇಕು ನಾವು ಮೊದಲು ನಲಿದಾಡಲು
            ನಾವೆಲ್ಲರೂ ಸರಿ ಹೋಗಲು...

ಹೆಣ್ಣು : ಬೆಂಗಳೂರಲ್ಲಿ ಬೋಂಡ ಅಂದ್ರೆ ಆಲೂಗಡ್ಡೆ ಉಂಡೆ ಅಂತೆ
          ಮಂಗಳೂರಲ್ಲಿ ಬೊಂಡ ಅಂದ್ರೆ ಎಳನೀರಿನ್ ಕಾಯಿ ಅಂತೆ
         ಗದಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ
ಗಂಡು :  ಮೈಸೂರಲಿ ಹೊಲ ಗದ್ದೆಗೆ ಭೂತಾಯಿ ಅಂತಾರೆ
            ಮಂಗಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ
ಹೆಣ್ಣು : ನಿಮ್ ಕಡೆ ಭಂಗಿ ಅಂದ್ರೆ ಹೊಗಿ ಸೊಪ್ಪು ಹಚ್ಚುವುದು, ಸೇದುವುದು
          ನಮ್ ಕಡಿ ಭಂಗಿ ಅಂದ್ರ ಚೊಕ್ಕ ಮಾಡೋ ಮಾನವರ ನಾಮವದು
ಗಂಡು : ಸಾವಿರ ಹೂವ ಎದೆ ಹನಿ ಬೇಕು, ಜೇನಿನ ಗೂಡಾಗಲು
           ಸಾವಿರ ಭಾವ ಸಂಧಿಸಬೇಕು, ಕನ್ನಡ ನಾಡಾಗಲು...
           ಗುಡಿಗೇರಿಯಾದರೇನು, ಮಡಿಕೇರಿ ಆದರೇನು
          ದುಡಿಬೇಕು ನಾವು ಮೊದಲು ಧಣಿಯಾಗಲು ಬಂಗಾರದ ಗಣಿಯಾಗಲು...

ಹೆಣ್ಣು : ಯಾವ ಭಾಷೆ ದೊಡ್ಡದು, ಯಾವುದು ಸಣ್ಣದು
           ಯಾವ ಭಾಷೆ ಕಲಿಯೋದು, ಯಾವುದ್ ಬಿಡೋದು
ಗಂಡು : ಜಯ ಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು
            ನೂರಾರಲೂ ಗುರಿಯಿಲ್ಲದ ನೂರಾರು ಕವಲುಗಳು
            ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು
            ಕನ್ನಡಕ್ಕೆ ಅಲ್ಲಿ ಉಂಟು, ನಾಲ್ಕನೆಯ ದೊಡ್ಡ ಸ್ಥಾನ ಮಾನಗಳು
           ಕನ್ನಡ ನಾಡ ಜನ್ಮದ ಹಿಂದೆ, ತ್ಯಾಗಗಳ ಕಥೆ ಇದೆ
           ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ...
ಎಲ್ಲರು : ಲಲ್ಲಲ್ಲಲ್ಲಾಲಲಲಲಲ್ಲ ಲಲ್ಲಲ್ಲಲ್ಲಾಲಲಲಲಲ್ಲ ಲಲ್ಲಲ್ಲಲ್ಲಾಲಲಲಲಲ್ಲ ಹಹಹಃ... 
-----------------------------------------------------------------------------------------------------------------------

ಸಾಮ್ರಾಟ್ (1994) -ಕನ್ಯಾಗಿರಿಯಲ್ಲಿ ತರುಣೋದಯ ತರುಣೋದಯದಲ್ಲೆ ಪ್ರೇಮೋದಯ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಕನ್ಯಾಗಿರಿಯಲ್ಲಿ ತರುಣೋದಯ ತರುಣೋದಯದಲ್ಲೆ ಪ್ರೇಮೋದಯ
ಕನ್ಯಾಕಡಲಲ್ಲಿ ಪ್ರಣಯೋದಯ ಪ್ರಣಯೋದಯದಲ್ಲೆ ಪ್ರೇಮೋದಯ

ನೇಸರ ಬಂದ ನನ್ನ ನೇಸರ ಬಂದ   ಪ್ರೇಯಸಿ ಇರದ ಬಾಳು ಬೇಸರ ಎಂದ
ನೇಸರ ಬಂದ ನನ್ನ ನೇಸರ ಬಂದ   ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ನೇಸರ ಬಂದ ನಿನ್ನ ನೇಸರ ಬಂದ  ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ನೇಸರ ಬಂದ ನನ್ನ ನೇಸರ ಬಂದ  ಪ್ರೇಯಸಿ ಇರದ ಬಾಳು ಬೇಸರ ಎಂದ

ಕನಸು ಕಂಡ ತೆರದಿ ಮುಖ ತೋರಿದ  ಮೊದಲ ಪ್ರೇಮ ಸ್ಪರ್ಶ ಸುಖ ನೀಡಿದ
ಹಗಲು ಇವಳ ಸಂಗ ಕುಣಿದಾಡಿದ   ಇರುಳು ಇವಳು ಸಿಗದ ಚಿಂತೆ ಮಾಡಿದ
ಕಲ್ಲೆದೆ ಹೆಣ್ಣನ್ನು ನೀರು ಮಾಡಿದ ನೀರಿನ ಮೇಲೆಲ್ಲ ಚಿನ್ನ ಹರಡಿದ
ಅನುರಾಗದ ಸಂಯೋಗದ ರಸದ ಗಳಿಗೆ ನೀಡಿದ
ನೇಸರ ಬಂದ ನಿನ್ನ ನೇಸರ ಬಂದ  ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ನೇಸರ ಬಂದ ನನ್ನ ನೇಸರ ಬಂದ
ಪ್ರೇಯಸಿ ಇರದ ಬಾಳು ಬೇಸರ ಎಂದ

ಅಧರ ಮಧುರ ಮಾಡೊ ಸಿಹಿ ಕಬ್ಬಿಗ  ಹೃದಯ ವೀಣೆ ನುಡಿಸೊ ನರ ವೈಣಿಕ
ನಖಶಿಖಾಂತ ಕಿರಣ ನೆಡೊ ಬಿಲ್ಲಿಗ   ವಶವಮಾಡಿಕೊಳ್ಳೊ ಮನ ಮಾಂತ್ರಿಕ
ತನ್ನಯ ಹೆಣ್ಣನ್ನು ಸುಡದೆ ರಮಿಸುವ  ಚಿನ್ನದ ಚುಂಬನವ ಉಂಡು ಉಣಿಸುವ
ಅನುರಾಗದ ಸಂಯೋಗದ ರಸದ ಗಳಿಗೆ ನೀಡುವ
ನೇಸರ ಬಂದ ನನ್ನ ನೇಸರ ಬಂದ
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ ಉಷೆಯ ಹೃದಯ ತೀರವೇರಿದ
ನೇಸರ ಬಂದ ನಿನ್ನ ನೇಸರ ಬಂದ
ಪ್ರೇಯಸಿ ಇರದ ಬಾಳು ಬೇಸರ ಎಂದ
-----------------------------------------------------------------------------------------------------------------------

ಸಾಮ್ರಾಟ್ (1994) - ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
ಸಾಹಿತ್ಯ: / ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಗಂಡು : ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
            ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
            ಕುಸುಮಮಯ ಭ್ರಮರಮಯ ಧೀರನನನ ಧೀರನನನ ಹೃದಯದ ತಾಳ
            ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
            ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
            ಕುಸುಮಮಯ ಭ್ರಮರಮಯ ಧೀರನನನ ಧೀರನನನ ಹೃದಯದ ತಾಳ
            ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ

ಗಂಡು :  ಈ ಪ್ರೇಮ ತಾಣ ಈ ಮೌನ ಗಾನ ಒಂದೇ ಬಳ್ಳಿಯ ಹೂಗಳೂ
ಹೆಣ್ಣು : ಈ ಪ್ರೇಮ ಧ್ಯಾನ ಸೌಂದರ್ಯ ಸ್ನಾನ ಬೇಕು ಈ ಬಾಳು ಸಾಗಲು
ಗಂಡು : ಆ ಕಮಲಗಳು ಈ ಕಣ್ಣಗಳು ಆ ಬಳ್ಳಿಗಳು ಈ ತೋಳುಗಳು
ಹೆಣ್ಣು : ಬಳ್ಳಿಯಾಗಿ ನಾನು ನಿನ್ನ ಬಳಸಲೇನು ಬೇಗ ಹೂಗಳಾಗಿ ನಾನು ನಿನ್ನ ರಮಿಸಬೇಕು ಈಗ
ಗಂಡು : ಕುಸುಮಮಯ ಭ್ರಮರಮಯ ಧೀರನನನ ಧೀರನನನ ಹೃದಯದ ತಾಳ
            ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ

ಹೆಣ್ಣು : ಮಂದಾರ ನಾನು ಶ್ರೀಕಾರ ನೀನು ನನ್ನ ಪ್ರೇಮದ ಗುಡಿಗೆ
ಗಂಡು : ಶೃಂಗಾರ ನೀನು ಸಿಂಧೂರ ನಾನು ನಮ್ಮ ಜೀವನ ಪೂಜೆಗೆ
ಹೆಣ್ಣು : ಆ.. ಹೊಂಬಿಸಿಲು ನೀ ಸೋಕಿದರೆ ಆ ತಂಬೆಳಕು ನೀ ಹಾಡಿದರೆ
ಗಂಡು : ಸೂರ್ಯನಾಗಿ ನಾನು ನಿನ್ನ ಚೆಲುವ ಉರಿಸಲಾರೆ ಚಂದ್ರನಾಗಿ ದೂರ ಹೋಗಿ ವಿರಹ ಸಹಿಸಲಾರೆ
            ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
            ಕುಸುಮಮಯ ಭ್ರಮರಮಯ ಧೀರನನನ ಧೀರನನನ ಹೃದಯದ ತಾಳ
            ಎರಡು ಮನದ ಮಾತೆ ಒಂದು ಯುಗಳ ಗೀತೆ ಅಧರ ಪ್ರೇಮರಾಗ ಮಧುರಮಯ
-----------------------------------------------------------------------------------------------------------------------

ಸಾಮ್ರಾಟ್ (1994) - ನಂಗೇ ದುಡ್ಡ ಅಂದ್ರೆ...  ನಂಗೇ ದುಡ್ಡ ಅಂದ್ರೆ... 
ಸಾಹಿತ್ಯ: / ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., 

ನಂಗೇ ದುಡ್ಡ ಅಂದ್ರೆ...  ನಂಗೇ ದುಡ್ಡ ಅಂದ್ರೆ...
ನಂಗೇ ದುಡ್ಡ ಅಂದ್ರೆ ಲೆಕ್ಕ ಇಲ್ಲ ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೇ ದುಡ್ಡ ಅಂದ್ರೆ ಲೆಕ್ಕ ಇಲ್ಲ ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ ಇವು ಆಗಲ್ಲ ಅನ್ನೋನಿಗೆ ಅಲ್ಲ

ಟಕ್ಕು ಟಕ್ಕು ಟಕ್ಕು ಟಕ್ಕು  ಕುದುರೆಯ ನಂಬಿ ಸುರಿದರೆ ಜಾಕಿ ಎಳೆದು ಕೆಡಿಸಿದ ಅಲ್ಲಿ ಕುದುರೆಯ ತಪ್ಪಿಲ್ಲ
ಎಲೆಯನು ನಂಬಿ ಸುರಿದರೆ ಇವನು ಮೋಸ ಮಾಡಿದ ಇಲ್ಲಿ ಎಲೆಯದು ತಪ್ಪಲ್ಲ
ಅತಿ ಆಸೆ ಇರೋ ಮನುಜ ಗತಿ ಕೆಡುವುದು ಬಲು ಸಹಜ
ನಂಗೆ ನೂರಾಸೆ ಹುಟ್ಟಿನಲೇ ಇಲ್ಲ
ನಂಗೇ ದುಡ್ಡ ಅಂದ್ರೆ ಲೆಕ್ಕ ಇಲ್ಲ ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ ಇವು ಆಗಲ್ಲ ಅನ್ನೋನಿಗೆ ಅಲ್ಲ

ಆಆಆ... ಓಓಓಓಓ..
ಕಣ್ಣನು ಮುಚ್ಚಿ ಯೋಚಿಸು ಮನವ ಲೋಕ ಸುತ್ತಿಸು
ಮೋಸ ಇಲ್ಲದ ನಾಡಿಲ್ಲ ಮೋಸದ ಅಂಗಡಿ ಕಲಿಯುಗ
ಅಸಲಿ ನಕಲಿ ಝಗಮಗ ಇಲ್ಲಿ ಸತ್ಯಕ್ಕೆ ಬೆಲೆ ಇಲ್ಲ
ಅಲ್ಲೊಬ್ಬ ಇಲ್ಲೊಬ್ಬ ಆಗೊಬ್ಬ ಈಗೊಬ್ಬ ಸತ್ಯ ಹೇಳೋನು ಬಂದ್ರೆ ತಪ್ಪಿಲ್ಲ
ನಂಗೇ ದುಡ್ಡ ಅಂದ್ರೆ ಲೆಕ್ಕ ಇಲ್ಲ ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೇ ದುಡ್ಡ ಅಂದ್ರೆ ಲೆಕ್ಕ ಇಲ್ಲ ನಾನು ಆಡದಿರೋ ಆಟ ಇಲ್ಲ
--------------------------------------------------------------------------------------------------------------------------

ಸಾಮ್ರಾಟ್ (1994) - ನಾನ್ಯಾರು ನಾನೇನು ನಾನಿಲ್ಲಿರುವ ಗುರಿ ಏನು 
ಸಾಹಿತ್ಯ: / ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., 

ನಾನ್ಯಾರು ನಾನೇನು ನಾನಿಲ್ಲಿರುವ ಗುರಿ ಏನು
ಜೀವನವೇ ಹುಡುಕಾಟ ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ.. ಸಾಮ್ರಾಟ.. ಸಾಮ್ರಾಟ
 
ಕಂಡಿರುವೆವು ತಾಯಿಯ ಮಡಿಲ ನಂಬಿರುವೆವು ದೇವರ ನೆರಳ
ನೆಚ್ಚಿರುವೆವು ಸತ್ಯದ ತಿರುಳ ಅನುಮಾನ ಇಲ್ಲ ಇದರೊಳಗೆ
ಹೊಂದಿರುವೆವು ಸ್ನೇಹ ಬಲವ ಉಂಡಿರುವೆವು ಪ್ರೀತಿಯ ಸುಖವ
ಮೆಚ್ಚಿರುವೆವು ಧೈರ್ಯದ ಗುಣವ ಅನುಮಾನ ಇಲ್ಲ ಇದರೊಳಗೆ
ಇದಲ್ಲದೆ ಇನ್ನೇನೋ ಗುರಿ ಇದೆ ನಮಗೆ ಅದಿಲ್ಲದೆ ಅಪೂರ್ಣ ಎನಿಸಿದೆ ಎದೆಗೆ
ಜೀವನವೇ ಹುಡುಕಾಟ ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ.. ಸಾಮ್ರಾಟ.. ಸಾಮ್ರಾಟ
ನಾನ್ಯಾರು ನಾನೇನು ನಾನಿಲ್ಲಿರುವ ಗುರಿ ಏನು 

ಏಳೇಳು ಎದ್ದೇಳು ಸಿಡಿಲಂತೆ ಸಿಡಿದೇಳು ಸತ್ಯಕ್ಕೆ ಸಾವಾಗಿದೆ 
ಈ ಯುದ್ಧ ಸನ್ಯಾಸ ಸಾಕಿನ್ನು ಹಿಡಿ ಖಡ್ಗ ನ್ಯಾಯಾನೇ ಅಳುತಾ ಇದೆ 
ಈ ಜನುಮ ಮುಂದಿಲ್ಲ ಮರುಜನುಮ ತಿಳಿದಿಲ್ಲ ಪೂರೈಸು ನಿನ ಧರ್ಮವ 
ಅನ್ಯಾಯ ಅಲೆದಾಡೋ ಮದ್ದಾನೆ ಆವಾಗ ಕಾಪಾಡು ನಿಜಧರ್ಮ 
ಸಂಯಮ ಮುಗಿದರೆ ಸಮರವೇ ಅಂತಿಮ ದುರ್ಜನರ ಸಿಗಿದು ಕೌರವರ ಬಗೆದು 
ನಿಜ ಅಗೆದು ತೆಗೆದು ಜಯ ಧ್ವಜವ ಹಿಡಿದವನೇ ಸಾಮ್ರಾಟ.. ಸಾಮ್ರಾಟ.. ಸಾಮ್ರಾಟ
ನಾನ್ಯಾರು ನಾನೇನು ನಾನಿಲ್ಲಿರುವ ಗುರಿ ಏನು
ಜೀವನವೇ ಹುಡುಕಾಟ ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ.. ಸಾಮ್ರಾಟ.. ಸಾಮ್ರಾಟ
ನಾನ್ಯಾರು ನಾನೇನು ನಾನಿಲ್ಲಿರುವ ಗುರಿ ಏನು 
--------------------------------------------------------------------------------------------------------------------------

No comments:

Post a Comment