ನಮ್ ಏರಿಯಾಲ್ ಒಂದಿನ ಚಲನಚಿತ್ರದ ಹಾಡುಗಳು
- ಕಾಪಾಡಿಕೋ... ಬರ ಸೆಳೆದುಕೋ..
- ಮನ್ಮಥನಾ ಇವ ಮನ್ಮಥನಾ
- ನೆನಪೇ ಓ ನೆನಪೇ
- ನಮ್ ಏರಿಯಾಲ್ ಒಂದಿನ
- ಜಮೈಸೀ
- ರುಮ್ದ ರುಮ್ದ
- ತಲೆನೋವು
- ಕನ್ಯಾಮಣಿ
ನಮ್ ಏರಿಯಾಲ್ ಒಂದಿನ (೨೦೧೦) - ಕಾಪಾಡಿಕೋ... ಬರ ಸೆಳೆದುಕೋ..
ಸಂಗೀತ : ಅರ್ಜುನ, ಸಾಹಿತ್ಯ: ಅರವಿಂದ್ ಕೌಶಿಕ್, ಮಂಜುನಾಥ್ ಬಾಗದೆ ಗಾಯನ: ಕಾರ್ತೀಕ & ಶಮಿತಾ ಮಲ್ನಾಡ್ ಕಾಪಾಡಿಕೋ... ಬರ ಸೆಳೆದುಕೋ.. ಸಾಧಿಸು ಈ ಸಂಧಾನ
ಬರಿ ಆ ಮಾತು ಆಡೋ ಮನಸನು ಮೆಚ್ಚಿಸದೇ ಪ್ರೀತಿ
ಕಾಯೋ ಎದೆಯಲ್ಲಿ ಮುಚ್ಚಿ ಇಡು
ಸೋಲುವುದೇ ಸುಂದರ ಇಲ್ಲಿ ಸೋತೊಮ್ಮೆ ನೋಡಿಕೋ
ಸರಿಯಲ್ಲ ಈ ಪರಿಪಾಠ ಸಾಕಿಂದು ಹೇಳಿಕೋ
ಕಳೆಯೋ ಸಮಯದ ಹಾಗೆ ಕಡೆಯಾಗಿ ಹೋಗಲಿ
ಒಲವಿದು ಕೈ ಬಿಡದಂತೆ ಮಾಡಿಕೊ ನೀ ಜೋಪಾನ
ನೀ ಕೇಳೋ ಸರದಾರ ಇವನಂತೂ ಆಗಲಾರ
ನೀಡಿದ್ದ ಕೈ ಹಿಡಿದು ಇವನಾ ಸಹಿಸಿಕೋ
ಕಣ್ಣು ಕಂಡ ಕನಸುಗಾರ ಮಾತಿನಲ್ಲಿ ಸೊಗಸುಗಾರ
ಮುದ ನೀಡೋ ಮಾತಾಡಿ ಮುದ್ದು ಮಾಡಿಕೊ
ಮನಸಾಗೋ ಪರಿಯೇ ಹೀಗೆ ಏನೊಂದೂ ಕೇಳದು
ಕಾಣೋದು ಹೇಗೋ ಏನೋ ಪ್ರೇಮವು ನೋಡದು
ನಾನು ಅನ್ನೋ ಎದೆಯಲಿ ಪ್ರೀತಿಗೆ ಸಾವಿದೆ
ಕಾಣಿಸು, ಕನಿಕರ ತೋರು, ಮಾಡಿಕೊ ನೀ ಜೋಪಾನ
ಮುಂಜಾನೆ ಕನಸಿನ ವೇಳೆ, ನೀ ಬಂದೆ ಅಂಬಾರಿ ಮೇಲೆ
ನಂಗಾಗಿ ನೀ ಆಗ ತಂದೆ, ಸುಗಂಧ ರಾಜನ ಮಾಲೆ
ಆ ತಾವರೆ ಚೆಲುವೆಯ ಕಣ್ಣಾಯಿತೋ
ಆ ಮೋಡವೇ ಕಂಗಳ ಕಪ್ಪಾಯಿತೋ
ಉಸಿರಿದು ಭಾರ ನೀನು ಹೋದರೆ ದೂರ
ಆಸರೆಯಾಗಿ ತೋಳ ಸೆರೆ ಹಿಡಿ ಬಾರಾ
ನೀನೆ ನನ್ನ ಪ್ರಾಣ ಇನ್ನ, ಕೇಳೆ ನನ್ ಚಿನ್ನ ದೂರದ ಊರಿಂದ..
-----------------------------------------------------------------------------------------------------------------------
ನಮ್ ಏರಿಯಾಲ್ ಒಂದಿನ (೨೦೧೦) - ಮನ್ಮಥನಾ ಇವ ಮನ್ಮಥನಾ
ಸಂಗೀತ : ಅರ್ಜುನ ಸಾಹಿತ್ಯ: ಅರವಿಂದ್ ಕೌಶಿಕ್ ಗಾಯನ : ಪ್ರೀಯಾ ಪ್ರಕಾಶ
ಮನ್ಮಥನಾ ಇವ ಮನ್ಮಥನಾ, ಮನದಾ ಮನೆಗೆ ಇವ ಮಾಲಿಕನಾ?
ಸುರನಿವನಾ ಸುಂದರನಿವನಾ, ವಧುವಾದರೆ ನಾ ನನ್ನ ವರನಿವನಾ?
ನೆರಳಿವನಾ ನೇಸರನಿವನಾ, ಮಗು ಇವನಾ ಮಮತೆ ಇವನಾ, ಮನ್ಮಥನಾ..
ಕಣ್ಣು ಕಂಡ ಕನಸು ನನಸಾಗೋ ಕನಸು ಕಂಡೆ ನಾ
ಕಂಡಿತಾಗ ಕಣ್ಣು ಈ ಕನಸುಗಾರನ (೨)
ಕವಿ ಇವನಾ, ಕವಿತೆ ಇವನಾ, ಕಣ್ಣ ಒರೆಸೋ ಕರುಳೇ ಇವನಾ
ಸ್ನೇಹವೆಂಬ ಸ್ವರಕೆ ಪ್ರೀತಿಯೆಂಬ ಪದವು ಸೇರಿದೆ
ದನಿಗೆ ದನಿಯು ಕೂಡಿ ಪ್ರೇಮ ಗೀತೆಯಾಗಿದೆ
ಸಿಹಿ ಇವನಾ, ಸಕ್ಕರೆ ಇವನಾ, ಸನಿಹ ಸೆಳೆಯೋ ಅಕ್ಕರೆ ಇವನಾ
-------------------------------------------------------------------------------------------------------------------------
ನಮ್ ಏರಿಯಾಲ್ ಒಂದಿನ (೨೦೧೦) - ನೆನಪೇ ಓ ನೆನಪೇ
ಸಂಗೀತ : ಅರ್ಜುನ, ಸಾಹಿತ್ಯ: ಕೆ ಕಲ್ಯಾಣ್ ಗಾಯನ : ಕಾರ್ತೀಕ ಸಂಗೀತ :
ನೆನಪೇ ಓ ನೆನಪೇ, ಆ ನೆನಪನು ನೆನೆಸು
ನೆನಪಿನಾ ನೆಪದಲಿ, ಈ ಪ್ರೀತಿಯ ಜಪಿಸು
ನಿನ್ನ ನಗೆಯಾ ನೆನಪಲಿ ನನ್ನ ನಗುವ ಮರೆತೆನು
ನಿನ್ನ ನೆನಪಾ ನೆಪದಲಿ ನನ್ನ ನೆನಪೇ ಮರೆತೆನು ನೆನಪಿರಲಿ..
ನನ್ನದೇ ನೆನಪಿರಲಿ.. ನೆನಪಿರಲಿ.. ನನ್ನೆದೇ ನೆನಪಿರಲಿ..
ಓಡೋ ನದಿಯು ನೀನಾದರೆ, ಅಲೆಯಾ ಜೊತೆಗೆ ಅಲೆಯಾಗುವೆ
ಓಡೋ ಮೋಡವು ನೀನಾದರೆ, ಮಳೆಯಾ ಜೊತೆಗೆ ಮಳೆಯಾಗುವೆ
ನನ್ನ ಕಡೆಯೋ ಶಿಲ್ಪಿ ನೀನಾದರೆ, ಉಳಿಯಾಗಿ ಉಳಿಯುವೆ ಕೈಯಲ್ಲಿಯೇ
ಕೊಟ್ಟು ಪಡೆಯೋ ಗೆಳತಿ ನೀನಾದರೆ, ಉಸಿರಾಗಿ ಉಳಿಯುವೆ ಮೈಯಲ್ಲಿ ನೆನಪಿರಲಿ..
ಸನಿಹ ನೆನಪಿರಲಿ.. ನೆನಪಿರಲಿ.. ವಿರಹ ನೆನಪಿರಲಿ..
ಆರು ಋತುಗಳ ಈ ಭೂಮಿಗೆ, ಯಾವ ಗುರುತು ಇಲ್ಲ ಕಣೆ
ನೂರು ಕಥೆಗಳ ಈ ಪ್ರೇಮಿಗೆ, ನಿನ್ನ ಹೊರತು ಇಲ್ಲ ಕಣೆ
ಆ ಚಂದ್ರ ತೂಗಲಿ ಉಯ್ಯಾಲೆಯ, ಮಗುವಾಗಿ ಮಲಗಿಸು ಈ ಪ್ರೀತಿಯ
ಬೆಳಗಾಗೋ ಮುಂಚೆಯೇ ಈ ಪ್ರೀತಿಯ, ಕಣ್ಣಲ್ಲಿ ತುಂಬಿಸು ಆಸೆಯ ನೆನಪಿರಲಿ..
ಮಾತು ನೆನಪಿರಲಿ.. ನೆನಪಿರಲಿ.. ವಿರಹ ನೆನಪಿರಲಿ..

-----------------------------------------------------------------------------------------------
ನಮ್ ಏರಿಯಾಲ್ ಒಂದಿನ (೨೦೧೦) - ನಮ್ ಏರಿಯಾಲ್ ಒಂದಿನ
ಸಂಗೀತ : ಅರ್ಜುನ, ಸಾಹಿತ್ಯ: ಅರವಿಂದ್ ಕೌಶಿಕ್, ಗಾಯನ: ಅರ್ಜುನ
-----------------------------------------------------------------------------------------------
ನಮ್ ಏರಿಯಾಲ್ ಒಂದಿನ (೨೦೧೦) - ಜಮೈಸೀ
ಸಂಗೀತ : ಅರ್ಜುನ, ಸಾಹಿತ್ಯ: ಅರವಿಂದ್ ಕೌಶಿಕ್, ಮಂಜುನಾಥ್ ಬಾಗದೆ ಗಾಯನ: ರಂಜಿತ, ಚೈತ್ರಾ
-----------------------------------------------------------------------------------------------
ನಮ್ ಏರಿಯಾಲ್ ಒಂದಿನ (೨೦೧೦) - ರುಮ್ದ ರುಮ್ದ
ಸಂಗೀತ : ಅರ್ಜುನ, ಸಾಹಿತ್ಯ: ಅರವಿಂದ್ ಕೌಶಿಕ್, ಗಾಯನ: ಸತ್ಯನ, ಅರ್ಜುನ
-----------------------------------------------------------------------------------------------
ನಮ್ ಏರಿಯಾಲ್ ಒಂದಿನ (೨೦೧೦) - ತಲೆನೋವು
ಸಂಗೀತ : ಅರ್ಜುನ, ಸಾಹಿತ್ಯ: ಅರವಿಂದ್ ಕೌಶಿಕ್, ಗಾಯನ: ಹೇಮಂತ ಕುಮಾರ, ಹರ್ಷ, ಅರ್ಜುನ
-----------------------------------------------------------------------------------------------
ನಮ್ ಏರಿಯಾಲ್ ಒಂದಿನ (೨೦೧೦) - ಕನ್ಯಾಮಣಿ
ಸಂಗೀತ : ಅರ್ಜುನ, ಸಾಹಿತ್ಯ: ಅರವಿಂದ್ ಕೌಶಿಕ್, ಗಾಯನ: ಮುಕೇಶ, ರಮಾದೇವಿ,ವಿಜಯ, ದಿವ್ಯ
-----------------------------------------------------------------------------------------------
No comments:
Post a Comment