388. ಸನಾದಿ ಅಪ್ಪಣ್ಣ (1977)



ಸನಾದಿ ಅಪ್ಪಣ್ಣ ಚಿತ್ರದ ಹಾಡುಗಳು 
  1. ಕರೆದರೂ ಕೇಳದೇ ಸುಂದರನೇ 
  2. ರಾಗ ಅನುರಾಗ ಶುಭಯೋಗ 
  3. ನಿನಗಾಗಿ ಓಡೋಡಿ ಬಂದೆ ನಾನು 
  4. ನಾನೇ ತಾಯಿ ನಾನೇ ತಂದೆ ನಿನ್ನ ಪಾಲಿಗೆ 
ಸನಾದಿ ಅಪ್ಪಣ್ಣ (1977) - ಕರೆದರೂ ಕೇಳದೆ
ಸಾಹಿತ್ಯ: ಚಿ|| ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್  ಗಾಯನ: ಎಸ್. ಜಾನಕಿ


ಕರೆದರೂ ಕೇಳದೆ
ಕರೆದರೂ ಕೇಳದೆ ಸುಂದರನೆ ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ಸುಂದರನೆ ಏಕೆ ನನ್ನಲ್ಲಿ ಈ ಮೌನ
ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ
ಸದಾ ನನ್ನ ಕಣ್ಣ ತುಂಬ ಈ ನಿನ್ನ ಬಿಂಬ
ನಿನ್ನಾಸೆಯಿಂದ ಕಾಣಲೆಂದು ಓಡಿ ಬಂದಾಗ
ನೋಡದೆ ಸೇರದೆ ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ಶಂಕರನೆ ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ಶಂಕರನೆ ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ...

ಈ ನನ್ನ ಅಂದ ಚೆಂದ ನೀ ಕಾಣಲೆಂದೆ
ಈ ನನ್ನ ಗಾಣ ಧ್ಯಾಣ ನಿನ್ನ ಸೇವೆಗೆಂದೆ
ಹೂವಾಗಿ ಇಂದು ನಿನ್ನ ಪಾದ ಸೇರಬಂದಾಗ
ಸಲ್ಲದೆ ನಿಲ್ಲದೆ ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ಪರಶಿವನೆ ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ಪರಶಿವನೆ ಏಕೆ ನನ್ನಲ್ಲಿ ಈ ಮೌನ
ಕರೆದರೂ ಕೇಳದೆ ...

ಧಿಮೀಂ ಧಿಮೀಂ ಧ್ವನಿ ಮೃದಂಗ ಕೇಳದೆ
ಕೊರಳ ನಾಗ ನಲಿದಾಡಲು ನೋಡದೆ
ಕುಮಾರ ?ಮಾಮರ? ಸಡಗರ ಕಾಣದೆ
ಕರ ತ್ರಿಶೂಲ ಢಮರುಗ ಮೆರೆದಾಡೆ
ಶಿವ ಚಂ ಚಂ ಚಂ ........
----------------------------------------------------------------------------------------------------------------------

ಸನಾದಿ ಅಪ್ಪಣ್ಣ (1977) - ನಾನೆ ತಾಯಿ ನಾನೆ ತಂದೆ

ಸಾಹಿತ್ಯ: ಚಿ|| ಉದಯಶಂಕರ್ ಸಂಗೀತ: ಹೆಚ್. ಆರ್. ಪದ್ಮನಾಭ ಶಾಸ್ತ್ರಿ ಗಾಯನ: ಪಿ. ಬಿ. ಶ್ರೀನಿವಾಸ್


ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀ ನನಗೆ
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ

ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿಂದ ದೂರ ಜಾರಿದೆ
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿಂದ ದೂರ ಜಾರಿದೆ
ನಿನ್ನ ನಾನು ನೋಡಲು ಕರುಣೆ ತುಂಬಿ ಕಾಡಲು
ಪ್ರೇಮದಿ ನಿನ್ನ ಸೇರಿದೆ ನನ್ನಲಿ ನೀನಾದೆ
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀ ನನಗೆ

ಯಾರಿಗಾಗಿ ಬಾಳಬೇಕು ಎಂದು ಕಾಣದೆ
ಸಾವಿಗಾಗಿ ಕೂಗಿ ಕೂಗಿ ನೊಂದು ಬಾಡಿದೆ
ನೀನು ನನ್ನ ಸೇರಿದೆ ಬಾಳುವಾಸೆ ತುಂಬಿದೆ
ನಗುವಲೆ ನೋವ ಮರೆಸಿದೆ ಹರುಷವ ನೀ ತಂದೆ
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀ ನನಗೆ
ದೇವಲೋಕದಿಂದ ನಿನ್ನ ಅಮ್ಮ ನೋಡುತ
ಹರಸುತಿಹಲು ನೂರು ವರುಷ ಬಾಳು ಎನ್ನುತ
ಅವಳ ಹೃದಯದಾಸೆಯ ನನ್ನ ಎದೆಯ ಬಯಕೆಯ
ನಡೆಸಲು ನೀನು ಬಂದೆಯ ಕಂದನೆ ಹೇಳಯ್ಯ
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
ನಾಳೆ ನೀನೆ ನಂದಾದೀಪ ನನ್ನ ಬಾಳಿಗೆ
ಆಸರೆ ನೀ ನನಗೆ
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ
-----------------------------------------------------------------------------------------------------------------

ಸನಾದಿ ಅಪ್ಪಣ್ಣ (1977) - ನಿನಗಾಗಿ ಓಡೋಡಿ ಬಂದೆ

ಸಾಹಿತ್ಯ: ಚಿ|| ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್  ಗಾಯನ: ಡಾ|| ರಾಜ್ ಕುಮಾರ್

ನಿನಗಾಗಿ ಓಡೋಡಿ ಬಂದೆ
ನಿನಗಾಗಿ ಓಡೋಡಿ ಬಂದೆ ನಾನು
ಕಾಣದೆ ಹೀಗೇಕೆ ಮರೆಯಾಗಿ ಹೋದೆ... ಮರೆಯಾಗಿ ಹೋದೆ ನೀನು
ನಿನಗಾಗಿ ಓಡೋಡಿ ಬಂದೆ

ತಣ್ಣನೆ ಗಾಳಿ ಬೀಸಿದ ಹಾಗೆ ಬಾಳಲಿ ಬಂದೆ ಸಂತಸ ತಂದೆ
ಕಣ್ಣಿಗೆ ಮಿಂಚು ಕಾಣುವ ಹಾಗೆ ಬಾಳಿನ ಬಾನಲಿ ಬೆಳಕನು ತಂದೆ
ಸ್ನೇಹದಿ ಸೇರಿ ಮೋಹವ ತೋರಿ ಸನಿಹಕೆ ಸಾರಿ ಮನವನು ಸೇರಿ
ಏಕೆ ನೀ ಮರೆಯಾದೆ...
ನಿನಗಾಗಿ ಓಡೋಡಿ ಬಂದೆ ನಾನು  ಕಾಣದೆ ಹೀಗೇಕೆ ಮರೆಯಾಗಿ ಹೋದೆ
ಮರೆಯಾಗಿ ಹೋದೆ ನೀನು
ನಿನಗಾಗಿ ಓಡೋಡಿ ಬಂದೆ

ಬಿಸಿಲಿಗೆ ಹೂವು ಬಾಡುವ ಹಾಗೆ ಕಾಣದಿ ನೊಂದೆ ವಿರಹದಿ ಬೆಂದೆ
ಮುಳ್ಳಿನ ಬಲೆಯ ಇಳಿಯಂತಾಗಿ ಅಳುಕಿದೆ ಮನವು ನಡುಗಿದೆ ತನುವು
ತೀರದ ನೋವ ತಾಳದು ಜೀವ ಕಾಣದೆ ನೀನು ಉಳಿಯನು ನಾನು
ಏಕೆ ನೀ ದೂರಾದೆ... ದೂರಾದೆ....
ನಿನಗಾಗಿ ಓಡೋಡಿ ಬಂದೆ
------------------------------------------------------------------------------------------------------------------------

ಸನಾದಿ ಅಪ್ಪಣ್ಣ (1977) - ರಾಗ ಅನುರಾಗ ಶುಭಯೋಗ ಸೇರಿದೆ

ಸಾಹಿತ್ಯ: ಚಿ|| ಉದಯಶಂಕರ್  ಸಂಗೀತ: ಜಿ. ಕೆ. ವೆಂಕಟೇಶ್  ಗಾಯನ: ಎಸ್. ಜಾನಕಿ ಮತ್ತು ಡಾ|| ರಾಜ್‍ಕುಮಾರ್

ರಾಗ ಅನುರಾಗ....
ರಾಗ ಅನುರಾಗ ಶುಭಯೋಗ ಸೇರಿದೆ
ತಂದ ಅನುಬಂಧ ಆನಂದ ತಂದಿದೆ....ರಾಗ..
ರಾಗ ಅನುರಾಗ ಶುಭಯೋಗ ಸೇರಿದೆ
ರಾಗ ತಾಳ ಮಿಲನ ಸಂಗೀತವಾಗಿದೆ.....
ನಾಗ ಲಾಸ್ಯ ಮಿಲನ ಹೊಸಭಾವ ಮೂಡಿದೆ ಹೊಸಗೀತೆ ಹಾಡಿದೆ
ಹೂವು ಗಂಧದಂತೆ ನಮ್ಮ ಜೀವ ಜೀವ ಸೇರಿ ಉಯ್ಯಾಲೆ ಆಡಿದೆ
ರಾಗ ಅನುರಾಗ ಶುಭಯೋಗ ಸೇರಿದೆ

ಹೃದಯ ವೀಣೆ ಮೀಟಿ ಹೊಸ ತಾನ ನುಡಿಸಿದೆ
ಗಾನಗಂಗೆಯಲ್ಲಿ ತೇಲಾಡಿದಂತಿದೆ ಸುರಲೋಕ ಕಂಡಿದೆ
ಗಂಗ ಶಿವನ ವರಿಸಿ ಶಿರವೇರಿದಂತೆ ನನ್ನ ಬಾಳಿಂದು ಆಗಿದೆ
ರಾಗ ಅನುರಾಗ ಶುಭಯೋಗ ಸೇರಿದೆ

ಬಾಳ ನದಿಯು ಇಂದು ಹೊಸ ಹಾದಿ ಹಿಡಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ
ಪ್ರಣಯವೆಂಬ ವನವ ಹಾಯಾಗಿ ಬಳಸಿದೆ ಉಲ್ಲಾಸ ಕಂಡಿದೆ
ಹರುಷವೆಂಬ ಕಡಲ  ಅಲೆಅಲೆಯು ತೇಲಿ ಬಂದು ಈ ನದಿಯ ಸೇರಿದೆ
ರಾಗ ಅನುರಾಗ ಶುಭಯೋಗ ಸೇರಿದೆ
ರಾಗ ಅನುರಾಗ ಶುಭಯೋಗ ಸೇರಿದೆ
ತಂದ ಅನುಬಂಧ ಆನಂದ ತಂದಿದೆ... ರಾಗ

No comments:

Post a Comment