389. ಎಲ್ಲಿಂದಲೋ ಬಂದವರು (1980)



ಎಲ್ಲಿಂದಲೋ ಬಂದವರು ಚಿತ್ರದ ಹಾಡುಗಳು 
  1. ಎಲ್ಲಿದ್ದಿ ಇಲ್ಲಿತನಕ ಎಲ್ಲಿಂದ ಬಂದ್ಯವ್ವ 
  2. ಕರಿಯವ್ನ ಗುಡಿತಾವ ಅರಳ್ಯಾವ 
  3. ಕೆಂಪಾದವೋ ಎಲ್ಲಾ ಕೆಂಪಾದವೋ 
ಎಲ್ಲಿಂದಲೋ ಬಂದವರು (1980) 
ಸಾಹಿತ್ಯ: ಪಿ.ಲಂಕೇಶ್  ಸಂಗೀತ: ವಿಜಯಭಾಸ್ಕರ್  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಎಲ್ಲಿದ್ದಿ ಇಲ್ಲಿತನಕ ಎಲ್ಲಿಂದ ಬಂದೈವ್ವ,
ನಿನ್ನ ಕಂಡು ನಾನ್ಯಾಕೆ ಕರಗಿದೆನೊ... 
ಎಲ್ಲಿದ್ದಿ ಇಲ್ಲಿತನಕ ಎಲ್ಲಿಂದ ಬಂದೈವ್ವ,
ನಿನ್ನ ಕಂಡು ನಾನ್ಯಾಕೆ ಕರಗಿದೆನೊ... 
ಸುಡುಗಾಡು ಹೈದನ್ನ ಕಂಡವಳು ನೀನ್ಯಾಕೆ
ಈಟೊಂದು ತಾಯಾಗಿ ಮರುಗಿದೆಯೋ...     

ನೂರಾರು ಗಾವುದ ಬಂದಿದ್ದೆ ಕಾಣವ್ವಾ
ಬಂದಿಲ್ಲ ಅನಿಸಿತ್ತು ನೋಡಿದರೇ 

ಇಲ್ಲೇ ಈ ಮನೆಯಾಗೆ ಹುಟ್ಟಿದ್ದೇ ಅನಿಸಿತ್ತು
ನಿನ್ನನ್ನು ಆ  ಘಳಿಗೆ  ನೋಡಿದರೇ .. 
ಎಲ್ಲಿದ್ದಿ ಇಲ್ಲಿತನಕ ಎಲ್ಲಿಂದ ಬಂದೈವ್ವ,
ನಿನ್ನ ಕಂಡು ನಾನ್ಯಾಕೆ ಕರಗಿದೆನೊ... 
ನಿನ್ನ ಕಂಡು ನಾನ್ಯಾಕೆ...  ಕರಗಿದೆನೊ... 
---------------------------------------------------------------------------------------------------------------------

ಎಲ್ಲಿಂದಲೋ ಬಂದವರು (1980) - ಕರಿಯವ್ನ ಗುಡಿ ತಾವ
ಚಿತ್ರಗೀತೆ | ಪಿ. ಲಂಕೇಶ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಿ


ಕರಿಯವ್ನ ಗುಡಿ ತಾವ ಅರಳ್ಯಾವ ಬಿಳಿ ಹೂವ
ಸೀಮೆಯ ಜನ ಕುಣಿದು ನಕ್ಕಾಂಗ್ ಅದ
ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ ಅದ
ಊರಿಂದ ನಾಕೆಜ್ಜೆ ಹಾಕಿದರೆ ಕಾಣ್ತೈತೆ
ಚಂದಾಗೆ ಹರಿತವಳೆ ಐರಾವತಿ
ಮಳೆಗಾಲ ಬಂದಾಗ ಮೈಮರೆತು ಹರಿದವಳು
ಬ್ಯಾಸ್ಗ್ಯಾಗೆ ಬಸವಳಿದ ಐರಾವತಿ ...  ಹೇ......... ಹ್ಹಾಂ....

ಕರಿಯವ್ನ ಗುಡಿ ತಾವ ಪಣ ತೊಟ್ಟು ಗೆದ್ದವರು
ಇನ್ನು ಬದುಕೆ ಅವರೆ ಸರದಾರರು
ಸಡ್ಡೊಡೆದು ಬಡಿದಾಡಿ ಉಯ್ಯಾಲೆ ತುಯ್ದಾಡಿ
ಮನಸಾರೆ ಮೆಚ್ಚಿಸಿದ ಸರದಾರರು... ಓಓಓಓಓಓಓ... ಆಆಆಅ...

ಅಲ್ಲೊಂದು ಗಿಣಿ ಕೂತು ಕತೆಯೊಂದ ಹೇಳೈತೆ
ಕೇಳಾಕೆ ನಾನಿಲ್ಲ ಊರೊಳಗೆ
ಕತೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ
ಕತೆಗಳ ಮಾರಾಣಿ ಐರಾವತಿ... ಹೇಹೇಹೇಹೇಹೇಹೇಹೇ
ಕರಿಯವ್ನ ಗುಡಿ ತಾವ ಅರಳ್ಯಾವ ಬಿಳಿ ಹೂವ
ಸೀಮೆಯ ಜನ ಕುಣಿದು ನಕ್ಕಾಂಗ್ ಅದ
ತುಂಟ ಹುಡುಗ್ಯಾರಲ್ಲಿ ನೆವ ಹೇಳಿ ಬರುತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ ಅದ
-----------------------------------------------------------------------------------------------------------------------

ಎಲ್ಲಿಂದಲೋ ಬಂದವರು (1980) - ಕೆಂಪಾದವೊ ಎಲ್ಲ ಕೆಂಪಾದವೊ
ಸಾಹಿತ್ಯ: ಪಿ.ಲಂಕೇಶ್  ಸಂಗೀತ: ವಿಜಯಭಾಸ್ಕರ್  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಕೆಂಪಾದವೊ ಎಲ್ಲ ಕೆಂಪಾದವೊ
ಕೆಂಪಾದವೊ ಎಲ್ಲ ಕೆಂಪಾದವೊ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಸುರಿಧ್ಹಾಂಗೆ ಕೆಂಪಾದವೊ

ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೊ
ಊರು ಕಂದಮ್ಮಗಳು ಕೆಂಪಾದವೊ
ಜೊತೆಜೊತೆಗೆ ನಡೆದಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಛಾಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೊ
ನನಗಾಗ ಕೆಂಪಾದವೊ
ಕೆಂಪಾದವೊ ಎಲ್ಲ ಕೆಂಪಾದವೊ
ಕೆಂಪಾದವೊ...  ಎಲ್ಲ ಕೆಂಪಾದವೊ
ಹೂಂ ಹೂಂ ಹೂಂ  ಆಹಾ.. ಹಾ...
------------------------------------------------------------------------------------------------------------------------

No comments:

Post a Comment