ಕೃಷ್ಣ ರುಕ್ಮಿಣಿ ಚಿತ್ರದ ಗೀತೆಗಳು
- ಕರ್ನಾಟಕದ ಇತಿಹಾಸದಲಿ
- ನಾ ಕಂಡೆ ನಿನ್ನ ಮಧುರ
- ಬಳುಕಾಡೊ ಬಂಗಾರಿ
- ಚೆಲುವಿನ ಚಿಲುಮೆ
- ನಾದ ಲೋಲ
- ನಾದವೇ ನನ್ನಿಂದ ದುರಾದೆಯಾ
ಸಂಗೀತ: ಕೆ.ವಿ.ಮಹಾದೇವನ, ಚಿತ್ರಗೀತೆ: ಆರ್.ಏನ್.ಜಯಗೋಪಾಲ ಗಾಯನ: ಎಸ್.ಪಿ.ಬಿ,
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು
ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲು ಚೆಲ್ಲಿ
ವಿಜಯದ ಕಹಳೆಯ ಊದಿದರು...
ವಿಜಯನಗರ ಸ್ಥಾಪನೆ ಮಾಡಿದರು ಕರ್ನಾಟಕದ ....
ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಕಲಿಗಳ ನಾಡು ಕಲಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ
ಕನ್ನಡ ಬಾವುಟ ಹಾರಿಸಿದ...
ಮಧುರೆವರೆಗು ರಾಜ್ಯವ ಅರಳಿಸಿದ ಕರ್ನಾಟಕದ ಇತಿಹಾಸದಲ್ಲಿ.....
ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿದೆ
ಯತಿಗಳ ದಾಸರ ನೆಲೆ ನಾಡಿಲ್ಲೆ
ಪಾವನ ಮಣ್ಣಿದು ಹಂಪೆಯದು .........
ಯುಗ ಯುಗ ಅಳಿಯದ ಕೀರ್ತಿ ಇದು
ಕನ್ನಡ ಭೂಮಿ ಕನ್ನಡ ನುಡಿಯು
ಕನ್ನಡ ಕೀರ್ತಿ ಎಂದೆಂದು ಬಾಳಲಿ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ
-----------------------------------------------------------------------------------------------------------------------
ಕೃಷ್ಣ ರುಕ್ಮಿಣಿ (1988) - ನಾದವೇ ನನ್ನಿಂದ
ಸಂಗೀತ: ಕೆ.ವಿ.ಮಹಾದೇವನ, ಚಿತ್ರಗೀತೆ: ಶ್ಯಾಮಸುಂದರ ಕುಲಕರ್ಣಿ ಗಾಯನ: ಎಸ್.ಪಿ.ಬಿ,
ನಾದವೇ ನನ್ನಿಂದ
ದೂರಾದೆಯಾ ಜೀವವೇ ಒಡಲಿಂದ ಬೇರಾದೆಯಾ
ನಾದವೇ ನನ್ನಿಂದ ದೂರಾದೆಯಾ ಜೀವವೇ ಒಡಲಿಂದ ಬೇರಾದೆಯಾ
ವೇದನೆ ರಾಗವ ವಿರಹದ ಲಯದಲಿ ಹೃದಯದೆ ಮೀಟಿದೆಯಾ
ನಾದವೇ ನನ್ನಿಂದ ದೂರಾದೆಯಾ ಜೀವವೇ ಒಡಲಿಂದ ಬೇರಾದೆಯಾ
ಗೆಜ್ಜೆಗಳು ಕುಣಿದಾಗ ಮೂಜಗವು ಮರೆತಾಗ
ಹೊಮ್ಮಿರಲು ಅನುರಾಗ ಸುಖ ಕಂಡೆನು
ನಿನ್ನ ನಗು ಮರೆಯಾಗೆ ವೇಣುವಿದು ಮೂಕಾಗೆ
ಕಂಬನಿ ಹೊಳೆಯಲ್ಲಿ ನಾ ಮಿಂದೆನು
ದೈವವದು ಇರದಂತ ಗುಡಿಯಾದೆ ನಾ
ರಸಹೀನ ಇಂದಾಯ್ತು ಈ ಜೀವನ
ವೇದನೆ ರಾಗವ ವಿರಹದ ಲಯದಲಿ ಹೃದಯದೆ ಮೀಟಿದೆಯಾ
ನಾದವೇ ನನ್ನಿಂದ ದೂರಾದೆಯಾ ಜೀವವೇ ಒಡಲಿಂದ ಬೇರಾದೆಯಾ
ಕನಸುಗಳು ಕಲೆತಾಗ ಮನಸುಗಳು ಬೆರೆತಾಗ
ಪ್ರೇಮವೆನ್ನೊ ಅಲೆಯಲ್ಲಿ ನಾ ತೇಲಿದೆ
ಜನ್ಮಗಳ ಬಂಧನವೊ ಈ ನನ್ನ ತಪ ಫಲವೊ
ಅತ್ಮಗಳ ಸಮ್ಮಿಲನ ಸವಿ ನೋಡಿದೆ
ನಿನ್ನೊಲವ ಬೆಳಕಲ್ಲಿ ನಲಿದಾಡಿದೆ
ನೊಂದಿರುವೆ ಇರುಳಲ್ಲಿ ಗುರಿಕಾಣದೆ
ದೇಹಕೆ ಪ್ರಾಣವು ಆಗಿದೆ ಭಾರವು
ಅಂತ್ಯವ ತೋರಿಸೆಯಾ
ನಾದವೇ ನನ್ನಿಂದ ದೂರಾದೆಯಾ ಜೀವವೇ ಒಡಲಿಂದ ಬೇರಾದೆಯಾ
ವೇದನೆ ರಾಗವ ವಿರಹದ ಲಯದಲಿ ಹೃದಯದೆ ಮೀಟಿದೆಯಾ
ನಾದವೇ ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ
-----------------------------------------------------------------------------------------------------------------------
ಕೃಷ್ಣ ರುಕ್ಮಿಣಿ (1988) - ನಾ ಕಂಡೆ ನಿನ್ನ
ಚಿತ್ರಗೀತೆ: ದೊಡ್ಡರಂಗೇಗೌಡ ಸಂಗೀತ: ಕೆ.ವಿ.ಮಹಾದೇವನ, ಗಾಯನ: ಎಸ್.ಪಿ.ಬಿ, ವಾಣಿಜಯರಾಂ
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲಕು ಪಲಕು ಹೆಜ್ಜೆಯಲಿ
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲಕು ಪಲಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲಿ ಲೀನವಾಯ್ತು ಮೋಹನ ಮುರಳಿ
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲಕು ಪಲಕು ಹೆಜ್ಜೆಯಲಿ
ನಿನ್ನ ಗೆಜ್ಜೆ ಘಲಿರೆನುವಾಗ ನನ್ನ ಹೃದಯ ಹಾಡಿತು ರಾಗ
ನಿನ್ನ ಕಣ್ಣು ಕರೆದಿರುವಾಗ ನನ್ನ ಬಯಕೆ ಪಡೆಯಿತು ಯೋಗ
ಇಲ್ಲಿ ನಿನ್ನ ಇಂಪಿನ ಕೊಳಲು ಅಲ್ಲೇ ನನ್ನ ನಾಟ್ಯದ ನವಿಲು
ಇಲ್ಲಿ ನಿನ್ನ ಗೀತದ ಸೆಳೆಯೋ ಅಲ್ಲೇ ನನ್ನ ಪ್ರೀತಿಯ ಹೊನಲು
ಜೀವ ಭಾವ ಅರಿತು ಬೆರೆತ ರಾಸಲೀಲಾ ಬಂಧ
ಜೀವ ಭಾವ ಅರಿತು ಬೆರೆತ ರಾಸಲೀಲಾ ಬಂಧ
ಬಾನ ಕಾನಾ ನಿಂದು ನಲಿದು ಆತ್ಮಾನುಭಂಧ...
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿನೀ ತಂದೆ ಲಾಸ್ಯ ಪಲಕು ಪಲಕು ಹೆಜ್ಜೆಯಲಿ
ನಮ್ಮ ನಲುಮೆ ಭಾಗ್ಯದ ಬೆಳಕು ಪ್ರೀತಿಯಾಗಿ ಹರಿಯುತ ಬಂತು
ನಿನ್ನ ರೂಪು ಸೆಳೆದಿರುವಾಗ ನೂರು ರೀತಿ ರಂಗಿನ ಭೋಗ
ನಿನ್ನ ಸನಿಹ ಹಿತವಿರುವಾಗ ನನ್ನ ಆಸೆ ಬಯಸಿತು ಸಂಗ
ಮಾತು ಮೌನ ಮೀರಿ ಬೆಳೆದ ಪ್ರೇಮದಾಟ ಚೆಂದ
ಮಾತು ಮೌನ ಮೀರಿ ಬೆಳೆದ ಪ್ರೇಮದಾಟ ಚೆಂದ
ಮೋಹ ದಾಹ ಮೈತ್ರಿ ಪಡೆದ ಸ್ವರ್ಗ ಸುಖವೇ ಚೆಂದ
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲಕು ಪಲಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲಿ ಲೀನವಾಯ್ತು ಮೋಹನ ಮುರಳಿ
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲಕು ಪಲಕು ಹೆಜ್ಜೆಯಲಿ
ಪಲಕು ಪಲಕು ಹೆಜ್ಜೆಯಲಿ.. ಪಲಕು ಪಲಕು ಹೆಜ್ಜೆಯಲಿ
-------------------------------------------------------------------------------------------------------------------------
ಕೃಷ್ಣ ರುಕ್ಮಿಣಿ (1988) - ಬಳಕಾಡೊ ಬಂಗಾರಿ
ಚಿತ್ರಗೀತೆ: ದೊಡ್ಡರಂಗೇಗೌಡ ಸಂಗೀತ: ಕೆ.ವಿ.ಮಹಾದೇವನ, ಗಾಯನ: ಎಸ್.ಪಿ.ಬಿ, ವಾಣಿಜಯರಾಂ
ಬಳುಕಾಡೊ ಬಂಗಾರಿ ರಂಗಾಗಿ ಬಂದಾಗ ಗೆಣೆಕಾರ ನೀನಾಗು ಬಾ..
ಕುಲಕಾಡೊ ವಯ್ಯಾರಿ ಶೃಂಗಾರ ತಂದಾಗ ಮೈತುಂಬಿ ಮಾತಾಡು ಬಾ..
ಮತ್ತೇರಿ ಮೆರೆದಾಡು ಬಾ ಕಾವೇರಿ ಕುಣಿದಾಡು ಬಾ
ಹೊತ್ತೇರಿ ಒಂದಾಗು ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಕುಡಿಯೊ ಹರೆಯ ನಗುತ ನಗುತ ಕೈ ಬಿಸಿ ಕರೆದಿರಲು
ತುಡಿಯೋ ಬಯಕೆ ಒಳಗೆ ಹೊರಗೆ ನನ್ನನ್ನು ಕಾದಿರಲು
ಕುಡಿಯೊ ಹರೆಯ ನಗುತ ನಗುತ ಕೈ ಬಿಸಿ ಕರೆದಿರಲು
ತುಡಿಯೋ ಬಯಕೆ ಒಳಗೆ ಹೊರಗೆ ನನ್ನನ್ನು ಕಾದಿರಲು
ಪ್ರಾಯ ತುಂಬಿರಾವಾಗ ಸಂಗವ ಸೇರುವ ಚಿಂತೆ ನಿನಗಿನ್ನೇಕೆ ಮಧುರ ಹೀರೂ
ಪ್ರಾಯ ತುಂಬಿರಾವಾಗ ಸಂಗವ ಸೇರುವ ಚಿಂತೆ ನಿನಗಿನ್ನೇಕೆ ಮಧುರ ಹೀರೂಎಂದೆಂದೂ ರೋಮಾಂಚನ ನೀ ನೀಡು ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ನಿನ್ನೆಯ ಮರೆತು ನಾಳೆಯ ಮರೆತು ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು ಸುಖವನು ಕಂಡಿರಲು
ನಿನ್ನೆಯ ಮರೆತು ನಾಳೆಯ ಮರೆತು ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು ಸುಖವನು ಕಂಡಿರಲು
ಆಸೆ ಬಿಸಿ ಇರುವಾಗ ಬಳಸು ಮೋಹ ಮಿನಿಗಿರುವಾಗ ಚುಂಬನ ಕಳಿಸು
ಆಸೆ ಬಿಸಿ ಇರುವಾಗ ಬಳಸು ಮೋಹ ಮಿನಿಗಿರುವಾಗ ಚುಂಬನ ಕಳಿಸುಚೆಲುವಾದ ಸಲ್ಲಾಪ ನೀ ಕಾಣು ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ ಸಂಗಾತಿ ಸಂಗಾತಿ ಬಾ
--------------------------------------------------------------------------------------------------------------------------
ಕೃಷ್ಣ ರುಕ್ಮಿಣಿ (1988) - ಚೆಲುವಿನ ಚಿಲುಮೆ
ಚಿತ್ರಗೀತೆ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ಕೆ.ವಿ.ಮಹಾದೇವನ, ಗಾಯನ: ಎಸ್.ಪಿ.ಬಿ, ವಾಣಿಜಯರಾಂ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ
ಸ್ನೇಹದ ಸಪ್ತ ಸ್ವರಗಳ ಮೇಳ, ಕೇಳುತಾ ಹೃದಯವು ಹಾಕಿದೆ ತಾಳ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗಪ್ರೀತಿಯ ಹಣತೆ ಬೀಗುತಾ ಬೆರೆತೆ ನಮ್ಮಯ್ಯ ಬಾಳಿದು ನಂದನ
ಬಯಸಿದೆ ನಿನ್ನ ಬಾಳಿದು ನಿನ್ನ ದಿವ್ಯ ಪ್ರೇಮದ ಚಂದನ
ಪ್ರೀತಿಯ ಹಣತೆ ಬೀಗುತಾ ಬೆರೆತೆ ನಮ್ಮಯ್ಯ ಬಾಳಿದು ನಂದನ
ಏನೇ ನೋವು ಬಂದರು ನಾವು ಎಂದಿಗೂ ಅಗಲದೇ ಬದುಕುವ
ಏನೇ ನೋವು ಬಂದರು ನಾವು ಎಂದಿಗೂ ಅಗಲದೇ ಬದುಕುವಯಾವುದೇ ಸಿರಿಯು ಬೇಡವು ನಮಗೆ ಒಲವೇ ನಮ್ಮಯ ವೈಭವ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ
ಮೋಹಕ ಮೊಗದ ಮನ್ಮಥ ನೀನು ಸೌಖ್ಯದ ಸಂಭ್ರಮ ಕಂಡೆ
ರಂಭೆಯು ನಾಚುವ ರತಿ ದೇವಿಯು ನೀ ಪ್ರೇಮದ ಸಂಗಮ ತಂದೆ
ಮೋಹಕ ಮೊಗದ ಮನ್ಮಥ ನೀನು ಸೌಖ್ಯದ ಸಂಭ್ರಮ ಕಂಡೆ
ರಂಭೆಯು ನಾಚುವ ರತಿ ದೇವಿಯು ನೀ ಪ್ರೇಮದ ಸಂಗಮ ತಂದೆ
ಕೃಷ್ಣನ ನಮ್ಮ ನೆನೆವುದು ಮನವು ಬಂದರು ಸಾವಿರ ಜನುಮ
ಕೃಷ್ಣನ ನಮ್ಮ ನೆನೆವುದು ಮನವು ಬಂದರು ಸಾವಿರ ಜನುಮ
ಅಕ್ಷಯ ಪ್ರೇಮದ ರುಕ್ಮಿಣಿ ಹೆಸರು ತುಂಬಿದೆ ರೋಮ ರೋಮ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗಸ್ನೇಹದ ಸಪ್ತ ಸ್ವರಗಳ ಮೇಳ, ಕೇಳುತಾ ಹೃದಯವು ಹಾಕಿದೆ ತಾಳ
ಚೆಲುವಿನ ಚಿಲುಮೆ ಚಿಮ್ಮಿದಾಗ ಹೊಮ್ಮಿದೆ ಎದೆಯಲಿ ಅನುರಾಗ
ಹೊಮ್ಮಿದೆ ಎದೆಯಲಿ ಅನುರಾಗ ಹೊಮ್ಮಿದೆ ಎದೆಯಲಿ ಅನುರಾಗ
-------------------------------------------------------------------------------------------------------------------------ಕೃಷ್ಣ ರುಕ್ಮಿಣಿ (1988) - ನಾದ ಲೋಲ
ಚಿತ್ರಗೀತೆ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ಕೆ.ವಿ.ಮಹಾದೇವನ, ಗಾಯನ: ವಾಣಿಜಯರಾಂ
ನಾದ ಲೋಲ ಶ್ರೀ ಕೃಷ್ಣ.. ನಾದ ಲೋಲ ಶ್ರೀ ಕೃಷ್ಣ..
ನಿನ್ನಯ ಮುರುಳಿ ನಾದಕೆ.. ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ..
ನುಡಿಸುವೆ ನೀನು ಕುಣಿಯುವೆ ನಾನು
ಯುಗ ಯುಗ ಕಳೆದರು ದನಿಯೆವು ನಾವು
ಹಿರಿಯರ ಪಂದ್ಯದಿ ಗೆಲ್ಲುತ ನಾವು
ಮರೆಯುವ ನಮ್ಮಿ ವಿರಹದ ನೋವು
ಬೆರೆತಿಹ ಮಂಗಳ ಎಂದಿಗೂ ಯಾರು
ಏನೇ ಆದರೂ ಅಗಲಿಸಲಾರರು
ಪ್ರೇಮದ ಭಾವವೇ ಸುಂದರ
ಪ್ರೇಮವೇ ಪೂಜಾ ಮಂದಿರ
ಪ್ರೇಮವೇ ಮಧುರ ಪ್ರೇಮವು ಅಮರ
ಪ್ರೇಮವೇ ಈಶ್ವರ ಪ್ರೇಮವೇ ಇಲ್ಲದೆ ಎಲ್ಲವು ನಶ್ವರ
ನಾದ ಲೋಲ ಶ್ರೀ ಕೃಷ್ಣ..
ನಿನ್ನಯ ಮುರುಳಿ ನಾದಕೆ.. ಕುಣಿವುದು ಮೈ ಮನ ಅನುದಿನ ಅನುಕ್ಷಣ
ನಾದ ಲೋಲ ಶ್ರೀ ಕೃಷ್ಣ..
ಯಾರು ಹೆಣೆಯದ ಪ್ರಣಯದ ಕವನ
ನಮ್ಮದು ಎಂದಿಗೂ ನಿಲ್ಲದ ಪಯಣ
ಸೇರಲೇಬೇಕು ಮಿಲನದ ತಾಣ
ನುಡಿಸುತ ಕೊಳಲು ಹಗಲು ಇರುಳು
ಎನ್ನುತ ಶೃತಿಗೆಆದೆಯಾ ಕೊರಳು
ಪ್ರೀತಿಗೆ ಇಲ್ಲವೋ ಸೋಲು ಪ್ರೀತಿಗೆ ಇಲ್ಲವೋ ಬೀಳು
ಕುಣಿಯುವ ಕಾಲು ಆಗಿದೆ ನವಿಲು ಚಿಗುರಿದೆ ಆಸೆಗಳು
ಹಿಗ್ಗಿನ ಗರಿಮೆ ಒಲವಿನ ಅಲೆಗಳು
ನಾದ ಲೋಲ ಶ್ರೀ ಕೃಷ್ಣ..
ನಿನ್ನಯ ಮುರುಳಿ ನಾದಕೆ..
ನಾದ ಲೋಲ ಶ್ರೀ ಕೃಷ್ಣ..
ನಿನ್ನಯ ಮುರುಳಿ ನಾದಕೆ..
ನಿನ್ನಯ ಮುರುಳಿ ನಾದಕೆ..
ನಿನ್ನಯ ಮುರುಳಿ ನಾದಕೆ..
ನಿನ್ನಯ ಮುರುಳಿ ನಾದಕೆ..
ನಿನ್ನಯ ಮುರುಳಿ ನಾದಕೆ..
ತಜ್ಜಮ ತಕ ಜಮ, ತಕಜನು ತಕಜಂ, ತಕಧಿಮಿ ತಟಕಜನು ತಾ,
ತಾ ತಕಜಮ ತಕ, ತಾ ತಕಜಮ ತಕ,
ತರಿಗಿಡಗದೊಂ, ತರಿಗಿಡಗದೊಂ, ತರಿಗಿಡತಕ ತಾ ತಜಂ
ತಕಧಿಮಿ ತಕಜನು, ತಕಧಿಮಿ ತಕಜನು,
ತಾಮ್ ತಕಜಂ ತಕಜಂ ತರಗಿಡಗದೊಂ ತರಗಿಡಗದೊಂತರಗಿಡಗದೊಂ ತರಗಿಡಗದೊಂ
ತಜ್ಜಮ್ ತಜ್ಜಮ್ ತಜ್ಜಮ್ ತತ್ ಓಂ ತಕತೊಮ್ ತಾರಿಗಿಡಗದೊಂ
ತತ್ ಓಂ ತಕತೊಮ್ ತಾರಿಗಿಡಗದೊಂ
ಥಾಮ್ ಥಕ ಧೀಮ್ ಥಕ್ ಥೋಮ್ ಥಕ್ ನಾಮ್ ಥಕ್ ಥಕ್ ಜಾಮ್ ಥಕ್ ಜಾಮ್
ಥಾಮ್ ಥಕ ಧೀಮ್ ಥಕ್ ಥೋಮ್ ಥಕ್ ನಾಮ್ ಥಕ್ ಥಕ್ ಜಾಮ್ ಥಕ್ ಜಾಮ್
ಥಕ್ ಧಿಮಿ ಥಕ್ ಜನು ಥಕ್ ಧಿಮಿ ಥಕ್ ಜನು
ಥಕ್ ಧಿಮಿ ಥಕ್ ಜನು ಥಕ್ ಧಿಮಿ ಥಕ್ ಜನು
ಥರಗಿಡಗದೊಂ ಥರಗಿಡಗದೊಂ ಥರಗಿಡಗದೊಂ ಥರಗಿಡಗದೊಂ ಥಾ
No comments:
Post a Comment