392. ಬಾಳ ಪಂಜರ (1972)

ಬಾಳ ಪಂಜರ ಚಿತ್ರದ ಹಾಡುಗಳು
  1. ಭಲೇ ಖುಷಿ ತಮಾಷೆ ಮಾತಿದು
  2. ಹೊನ್ನಾಗಿ ಬಾಳಲ್ಲಿ ಹೆಸರಾಗಿ ಊರಲ್ಲಿ
  3. ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
  4. ಕಾಳ ಕೆಂಚ ಕೇಳರೋ ಕೊಂಚ
  5. ಒಲವು ಹೃದಯ ನೀಡಿತು
  6. ಇದುವೇ ಸುಂದರ ಕಲ್ಯಾಣ ನಗರ
ಬಾಳ ಪಂಜರ (1972) - ಭಲೇ ಖುಷೀ ತಮಾಷೆ ಮಾತಿದು
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯಕರು:ಪಿ.ಬಿ.ಶ್ರೀನಿವಾಸ್, ಸಂಗಡಿಗರು.

ಮಕ್ಕಳು : ಕಥೇನಾ ಚಿಕ್ಕಪ್ಪಾ...
ಗಂಡು : ಹೂಂ ಜಾಣಮರಿ..
           ಭಲೇ ಖುಷೀ ತಮಾಷೆ ಮಾತಿದು ಹೊಸ ಕಥೇ ವಿಚಾರ ಕೇಳಿದು...
           ಭಲೇ ಖುಷೀ ತಮಾಷೆ ಮಾತಿದು ಹೊಸ ಕಥೇ ವಿಚಾರ ಕೇಳಿದು......
ಮಕ್ಕಳು : ಲಲ್ಲ ಲಲ್ಲ ಲಾಲಲ  ಲಲ್ಲ ಲಲ್ಲ ಲಾಲಲ  ಲಲ್ಲ ಲಲ್ಲ ಲಾಲಲ
ಗಂಡು : ಮರದಲ್ಲಿ ಹಕ್ಕೀಗೂಡು ನೆಲದಲ್ಲಿ ಇರುವೆ ಬೀಡು
            ನಡುವಲ್ಲಿ ನದಿಯು ಕಾಡು ಕಥೆ ಕೇಳಿ ಆಡು........
ಎಲ್ಲರು : ಭಲೇ ಖುಷೀ ತಮಾಷೆ ಮಾತಿದು ಹೊಸ ಕಥೇ ವಿಚಾರ ಕೇಳಿದು......

ಗಂಡು : ಇರುವೆಯು ನೀರಲಿ ಮುಳುಗುವ ಹೊತ್ತು  ಹಕ್ಕಿಯು ಎಲೆಯನು ಎಸೆದಿತ್ತು......
           ಇರುವೆಯು ನೀರಲಿ ಮುಳುಗುವ ಹೊತ್ತು  ಹಕ್ಕಿಯು ಎಲೆಯನು ಎಸೆದಿತ್ತು......
          .ಜೀವಾ ಉಳಿಸಿದ ಹಕ್ಕಿಯ ನೆನೆದು ಇರುವೆಯು ಸಮಯಕೆ ಕಾದಿತ್ತು...
           ಭಲೇ ಖುಷೀ ತಮಾಷೆ ಮಾತಿದು ಹೊಸ ಕಥೇ ವಿಚಾರ ಕೇಳಿದು......
ಮಕ್ಕಳು : ಭಲೇ ಖುಷೀ ತಮಾಷೆ ಮಾತಿದು ಹೊಸ ಕಥೇ ವಿಚಾರ ಕೇಳಿದು......

ಮಕ್ಕಳು : ಆಮೇಲೇ....
ಗಂಡು : ಬೇಡ ಬಂದಾ ಯಮನ ಹಾಗೇ..
ಮಕ್ಕಳು : ಅಯ್ಯಯ್ಯೋ ಕೊಲ್ತಾನಾ?
ಗಂಡು : ಏನ್ ಬಿಡ್ತಾನಾ?.. (ಆ)
            ಬೇಡನು ಹಕ್ಕಿಯ ಕೊಲ್ಲುವ ಕಾಲ ಇರುವೆಯು ಕಚ್ಚಿತು ಬೇಡನ ಕಾಲ..
            ಬೇಡನು ಹಕ್ಕಿಯ ಕೊಲ್ಲುವ ಕಾಲ ಇರುವೆಯು ಕಚ್ಚಿತು ಬೇಡನ ಕಾಲ..
            ಮಾಡಿದ ಒಳ್ಳೆದು ಅಳಿಯುವುದಿಲ್ಲಾ ನೀತಿಯ ನೆನೆಯಿರಿ ನೀವೆಲ್ಲಾ...
            ಭಲೇ ಖುಷೀ ತಮಾಷೆ ಮಾತಿದು ಹೊಸ ಕಥೇ ವಿಚಾರ ಕೇಳಿದು......
ಮಕ್ಕಳು : ಭಲೇ ಖುಷೀ ತಮಾಷೆ ಮಾತಿದು ಹೊಸ ಕಥೇ ವಿಚಾರ ಕೇಳಿದು......
             ಲಲ್ಲ ಲಲ್ಲ ಲಾಲಲ  ಲಲ್ಲ ಲಲ್ಲ ಲಾಲಲ  ಲಲ್ಲ ಲಲ್ಲ ಲಾಲಲ  
            ಲಲ್ಲ ಲಲ್ಲ ಲಾಲಲ  ಲಲ್ಲ ಲಲ್ಲ ಲಾಲಲ  ಲಲ್ಲ ಲಲ್ಲ ಲಾಲಲ  
----------------------------------------------------------------------------------------------------------------------

ಬಾಳ ಪಂಜರ (1972) - ಹೊನ್ನಾಗಿ ಬಾಳಲ್ಲಿ ಹೆಸರಾಗಿ ಊರಲ್ಲಿ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯಕರು:ಬಿ.ಕೆ.ಸುಮಿತ್ರಾ ಮತ್ತು ಜಯದೇವ

ಹೊನ್ನಾಗಿ ಬಾಳಲ್ಲಿ ಹೆಸರಾಗಿ ಊರಲ್ಲಿ
ನಾಡಿಗೆ ಉಸಿರಾಗಿ ನಗೆ ಚೆಲ್ಲಿ ನಗೆ ಚೆಲ್ಲಿ ನಗೆ ಚೆಲ್ಲಿ
ಕನ್ನಡದ ನುಡಿ ಚೆನ್ನ ಕನ್ನಡದ ನೆಲ ಚಿನ್ನ
ಕನ್ನಡಕೆ ಜಯವೆಂದು ಬಾಳೋಣ ಬಾಳೋಣ ಬಾಳೋಣ

ಕನ್ನೆಯರ ಹರೇ ಚಂದ ತುಂಬಿರುವ ಕೊಡ ಚಂದ
ತಣ್ಣೀರ ಬಿಂದಿಗೆಯ ತುಂಬೋಣ ತುಂಬೋಣ ತುಂಬೋಣ

ನಗುನಗುವ ಹೂ ಮೊಗ್ಗು ಈ ಹಳ್ಳಿ ಸಿಂಗಾರ
ಕಾಪಾಡೋ ಭಗವಂತ ನಿನ್ನೀ ಸಂಸಾರ
ರಸಹೀನ ಜೀವನದ ಹೊಸ ಮಿಂಚ ಸಂಚಾರ
ಭೂತಾಯಿ ಮಡಿಲಲಿ ಬಾಳೆ ಸಿಂಗಾರ

ಕಾಯಕವೇ ಕೈಲಾಸ ಎಂದವರ ಕೈಮುಗಿವೆ
ಮಣ್ಣಿಂದ ಹೊನ್ನ ನಾ ಬೇಡಿ ಪಡೆವೆ
ಬಂದಾನೊ ತಮ್ಮಯ್ಯ ಕಣ್ಣೀರ ತೊಡೆವೆ
ತಂದಾನೋ ಆನಂದ ಐಸಿರಿಯಾ ಒಡೆವೆ
--------------------------------------------------------------------------------------------------------------------------

ಬಾಳ ಪಂಜರ (1972) - ಮಣ್ಣಿನ ದೇಹ ಕಾಣದ ಜೀವ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯಕರು:ಪಿ.ಬಿ.ಶ್ರೀನಿವಾಸ

ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ ಹುಚ್ಚನೇ ಇಲ್ಲ ನಿನಗಿಂತ
ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ ಹುಚ್ಚನೇ ಇಲ್ಲ ನಿನಗಿಂತ
ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ ಹುಚ್ಚನೇ ಇಲ್ಲ ನಿನಗಿಂತ

ನೆರಳು ಬೆಳಕಿನ ನಲಿದಾಟ ಕಾಲ ಚಕ್ರದ ಸುತ್ತಾಟ
ನೆರಳು ಬೆಳಕಿನ ನಲಿದಾಟ ಕಾಲ ಚಕ್ರದ ಸುತ್ತಾಟ
ನೋವು ನಲಿವಿನಾ ಕೂಗಾಟ ಏನಿದು ನಿನ್ನಾ ಹುಚ್ಚಾಟ
ಏನಿದು ನಿನ್ನಾ ಹುಚ್ಚಾಟ
ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ ಹುಚ್ಚನೇ ಇಲ್ಲ ನಿನಗಿಂತ

ಒಲವು ಚೆಲುವಿನ ಸಂಸಾರ ಅಗಲಿ ಕೂಡುವ ವ್ಯವಹಾರ
ಒಲವು ಚೆಲುವಿನ ಸಂಸಾರ ಅಗಲಿ ಕೂಡುವ ವ್ಯವಹಾರ
ಇರುವ ತನಕವೇ ವ್ಯಾಪಾರ ಯಾರು ಕಾಣರು ಆಧಾರ
ಯಾರು ಕಾಣರು ಆಧಾರ
ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ ಹುಚ್ಚನೇ ಇಲ್ಲ ನಿನಗಿಂತ

ಸುಖದ ಸುಂಕವ ನೀ ಬೇಡಿ ನೀಡಿದೆ ಬಾಳಿನ ಈ ಬೇಡಿ
ಸುಖದ ಸುಂಕವ ನೀ ಬೇಡಿ ನೀಡಿದೆ ಬಾಳಿನ ಈ ಬೇಡಿ
ಏನಿದು ನಿನ್ನಾ ಈ ಮೂಡಿ ತೋರೆಯ ದಾರಿ ದಯಮಾಡಿ
ತೋರೆಯ ದಾರಿ ದಯಮಾಡಿ
ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ ಹುಚ್ಚನೇ ಇಲ್ಲ ನಿನಗಿಂತ
ಮಣ್ಣಿನ ದೇಹ ಕಾಣದ ಜೀವ ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ ಹುಚ್ಚನೇ ಇಲ್ಲ ನಿನಗಿಂತ
-------------------------------------------------------------------------------------------------------------------------

ಬಾಳ ಪಂಜರ (1972) - ಕಾಳ ಕೆಂಚ ಕೇಳರೋ ಕೊಂಚ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯಕರು:ಎಲ್.ಆರ್.ಈಶ್ವರಿ 

ಹೈ ಹೈ ಹೈ ಹೈ ಹೈ ಹೈ ಬುರ್ರಾರ್ರಾರ್ರಾ....  
ಕಾಳ ಕೆಂಚ ಕೇಳರೋ ಕೊಂಚ ಕೊಡುವೇನು ಎಣ್ಣೆ ಹಿಂಡಿ ಲಂಚ
ಶಂಕೆ ಹೂಡಿತು ಮನದಲಿ ಸಂಚ ನಂಬಿಕೆ ತಂದಿಹು ನಗೆ ಮಿಂಚ
ಕಾಳ ಕೆಂಚ ಕೇಳರೋ ಕೊಂಚ ಕೊಡುವೇನು ಎಣ್ಣೆ ಹಿಂಡಿ ಲಂಚ

ಹಿಂದೇ ಕುಂತೋರಿಗೆ ಮುನಿಸೇಕೋ ಬಸವಯ್ಯಾ
ಒಗಟನು ನೀನು ಬಿಡಿಸಿ ಹೇಳಯ್ಯಾ
ಹಿಂದೇ ಕುಂತೋರಿಗೆ ಮುನಿಸೇಕೋ ಬಸವಯ್ಯಾ
ಒಗಟನು ನೀನು ಬಿಡಿಸಿ ಹೇಳಯ್ಯಾ
ಒಂದೇ ಹೆಣ್ಣಲ್ಲಿ ಆಸೆ ಬೇಡಯ್ಯಾ ಮಂದಿ ನೂರಾರು ನೀಡಿತು ಕೈಯ್ಯಾ
ಕಾಳ ಕೆಂಚ ಕೇಳರೋ ಕೊಂಚ ಕೊಡುವೇನು ಎಣ್ಣೆ ಹಿಂಡಿ ಲಂಚ

ಓದಿ ಓದಿ ನಾಡನು ಆಳೋ ಧಣಿಗೆ ಹಳ್ಳಿ ಕಳ್ಳಿ ಹೂವೇ ಬೇಕೇ ಕಾಣಿಕೆ
ಓದಿ ಓದಿ ನಾಡನು ಆಳೋ ಧಣಿಗೆ ಹಳ್ಳಿ ಕಳ್ಳಿ ಹೂವೇ ಬೇಕೇ ಕಾಣಿಕೆ 
ಕಲಿತೋರೆಲ್ಲಾ ಹೀಗೆ ಕಾಣಯ್ಯಾ ಆಮೇಲೆ ಅವರೂ ನಿನ್ನ ಹಾಗೇನಯ್ಯಾ
ಕಾಳ ಕೆಂಚ ಕೇಳರೋ ಕೊಂಚ ಕೊಡುವೇನು ಎಣ್ಣೆ ಹಿಂಡಿ ಲಂಚ

ಹೂಂ ಅಂತೀಯಾ.. ಶಬ್ಬಾಷ್ ... 
ಮೊಗದ ಕಳೆಯೇ ಹೇಳೋಕಿಲ್ವಾ ಗೆಲುವಾ ನಿನ್ನಾ ಕೆನ್ನೆ ಒಳ್ಳೆ ಹೆಣ್ಣೇ ಚೆಲುವಾ
ಮೊಗದ ಕಳೆಯೇ ಹೇಳೋಕಿಲ್ವಾ ಗೆಲುವಾ ನಿನ್ನಾ ಕೆನ್ನೆ ಒಳ್ಳೆ ಹೆಣ್ಣೇ ಚೆಲುವಾ
ಬಳೆಯ ಕೈಯ್ಯಾ ಕೂಡಿಕೊಳ್ಳಯ್ಯಾ ನಾಳೇನೇ ನಿನಗೇ ಬಾಸಿಂಗವಯ್ಯಾ
ಕಾಳ ಕೆಂಚ ಕೇಳರೋ ಕೊಂಚ ಕೊಡುವೇನು ಎಣ್ಣೆ ಹಿಂಡಿ ಲಂಚ
ಕಾಳ ಕೆಂಚ ಕೇಳರೋ ಕೊಂಚ ಕೊಡುವೇನು ಎಣ್ಣೆ ಹಿಂಡಿ ಲಂಚ
ಹೈ ಹೈ ಹೈ ಹೈ ಬುರುಗೂರು ನಡೆಯೋ ಬಸವಣ್ಣ ಡರ್ ರ್ ರ್ ರ್ ..  
-------------------------------------------------------------------------------------------------------------------------

ಬಾಳ ಪಂಜರ (1972) - ಒಲವು ಹೃದಯ ನೀಡಿತು
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯಕರು: ಎಸ್.ಜಾನಕೀ 

ಒಲವು ಹೃದಯ ನೀಡಿತು ಚೆಲುವು ನಗೆಯ ಬೀರಿತು 
ಕವಲು ದಾರಿ ಕತ್ತಲಲಿ ಹೊಸಬೆಳಕೇ ಮೂಡಿತು 
ಒಲವು ಹೃದಯ ನೀಡಿತು ಚೆಲುವು ನಗೆಯ ಬೀರಿತು 

ಎಣಿಕೆ ಒಂದೂ ಗಳಿಕೆ ಒಂದೂ ಶೋಕದಾ ವಿಷ ಬಿಂದೂ 
ಎಣಿಕೆ ಒಂದೂ ಗಳಿಕೆ ಒಂದೂ ಶೋಕದಾ ವಿಷ ಬಿಂದೂ 
ಸೇರದಂತೇ ನಾಳೆಂದೂ ಹರಿಸಿದ ವಿಧಿ ಇಂದೂ 
ಒಲವು ಹೃದಯ ನೀಡಿತು ಚೆಲುವು ನಗೆಯ ಬೀರಿತು 

ಕಾಮವೇನೋ ಪ್ರೇಮವೇನೋ ಕಾಣದ ಮಗೂ ಮನಸೂ 
ಕಾಮವೇನೋ ಪ್ರೇಮವೇನೋ ಕಾಣದ ಮಗೂ ಮನಸೂ 
ಎಲ್ಲೂ ಎಲ್ಲೂ ಕಂಡೀತೀಗ ಒಲವಿನ ಹೊಸ ದಿನಸೂ 
ಒಲವು ಹೃದಯ ನೀಡಿತು ಚೆಲುವು ನಗೆಯ ಬೀರಿತು 

ಕನಸ್ಸಿನಲ್ಲಿ ನನಸಿನಲ್ಲಿ ಕಂಡ ಅದೇನೋ ರೂಪ 
ಕನಸ್ಸಿನಲ್ಲಿ ನನಸಿನಲ್ಲಿ ಕಂಡ ಅದೇನೋ ರೂಪ 
ದಾರಿ ಬೆಳಕೂ ತೋರುತಿಹುದು ಕಾಣದ ಕೈ ದೀಪ 
ಒಲವು ಹೃದಯ ನೀಡಿತು ಚೆಲುವು ನಗೆಯ ಬೀರಿತು 
ಒಲವು ಹೃದಯ ನೀಡಿತು ಚೆಲುವು ನಗೆಯ ಬೀರಿತು 
-------------------------------------------------------------------------------------------------------------------------

ಬಾಳ ಪಂಜರ (1972) - ಇದುವೇ ಸುಂದರ ಕಲ್ಯಾಣ ನಗರ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯಕರು: ಎಸ್.ಪಿ.ಬಿ.

ಇದುವೇ ಸುಂದರ ಕಲ್ಯಾಣ ನಗರ ಯಂತ್ರ ಮಾನವನ ಮತಿ ಸಂಸ್ಕಾರ
ಕೇಳಿತು ಹಸಿವಿನ ಅಹ್ಹಾಹಾಕಾರ ಪುಡಾರಿ ಧನಿಕಗೇ ಜೈ ಜೈ ಕಾರ
ಇದುವೇ ಸುಂದರ ಕಲ್ಯಾಣ ನಗರ

ನರಕ ಹೋಲುವ ಈ ಪಟ್ಟಣ ನಂಬಿ ಬಂದರೇ ಹೊಲಸು ಜೀವನ
ಎಲುಬು ಗೂಡಿನ ಶನಿ ಸಂತಾನ ಒರಗಿ ಒರಲಿದೇ ಅನ್ನ ಅನ್ನ
ಆಗಿದೆ ಹೆಣ್ಣಿನ ಮಾನಾಪಹರಣ ಎಂಜಲು ಸಂಸ್ಕ್ರತಿ ಇದಕೇ ಕಾರಣ
ಇದುವೇ ಸುಂದರ ಕಲ್ಯಾಣ ನಗರ

ಕೆಲಸ ಬೇಡುತಾ ಕೈ ಚಾಚಿದರೇ ಲಂಚವ ಬೇಡುವ ವಂಚಕರಾಸರೆ
ಅನ್ನ ಬ್ರಹ್ಮನ ದೇಗುಲದಲ್ಲಿ ಅತ್ಯಾಚಾರದ ಭೀಕರ ಹಲ್ಲೇ
ಮಾನವೀಯತೆಯ ಮಸಣದ ಮೇಲೆ ಹಣರಣಹದ್ದಿನ ನರ್ತನ ಲೀಲೆ
ಇದುವೇ ಸುಂದರ ಕಲ್ಯಾಣ ನಗರ

ವಿಧಿ ವಿಡಂಬನೆಯ ವಿಲಾಸದಲ್ಲಿ ತಾಯಿ ಮಮತೆಗೆ ಮಾನ್ಯತೆ ಎಲ್ಲಿ
ಕಣ್ಣ ನೀರಿನ ಸಾಗರದಲ್ಲಿ ಕರುಣೆ ರತ್ನವ ಹುಡುಕುವರಿಲ್ಲಿ
ಬಡತನ ತಂದ ಬಡಬಾಗ್ನಿಯಲಿ ಸರ್ವ ಶೂನ್ಯವೇ ಉಳಿಯುವುದಿಲ್ಲಿ
ಇದುವೇ ಸುಂದರ ಕಲ್ಯಾಣ ನಗರ ಯಂತ್ರ ಮಾನವನ ಮತಿ ಸಂಸ್ಕಾರ
ಕೇಳಿತು ಹಸಿವಿನ ಅಹ್ಹಾಹಾಕಾರ ಪುಡಾರಿ ಧನಿಕಗೇ ಜೈ ಜೈ ಕಾರ
ಇದುವೇ ಸುಂದರ ಕಲ್ಯಾಣ ನಗರ
--------------------------------------------------------------------------------------------------------------------------

No comments:

Post a Comment