398. ಲೀಡರ್ ವಿಶ್ವನಾಥ್ (1981)

ಲೀಡರ್ ವಿಶ್ವನಾಥ ಚಿತ್ರದ ಹಾಡುಗಳು
  1. ಕೇಳುವೆಯಾ ಕೇಳುವೆನು 
  2. ಭಗವಂತ ಭೂಮಿಗೆ ಬಾ ಬೇಗ 
  3. ಆಹ್ಹಾಹ್ಹಾ ಆನಂದ 
  4. ಝಣ ಝಣ ಎಂದಾಗ ಹಣವೂ 
ಲೀಡರ್ ವಿಶ್ವನಾಥ್ (1981)
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಜಯಚಂದ್ರನ್, ವಾಣಿ ಜಯರಾಮ್

ಗಂಡು : ಕೇಳುವೆಯಾ, ಹೆಣ್ಣು : ಕೇಳುವೆನು,ಗಂಡು : ನನ್ನ ಆಸೆಯನು  ಹೇಳುವೆಯಾ,
ಹೆಣ್ಣು : ಹೇಳುವೆನು,       ಗಂಡು : ಪ್ರೀತಿ ಮಾತೊಂದನು
ಹೆಣ್ಣು : ಕೇಳುವೆಯಾ,     ಗಂಡು : ಕೇಳುವೆನು,
ಹೆಣ್ಣು : ನನ್ನ ಆಸೆಯನು ಹೇಳುವೆಯಾ,
ಗಂಡು : ಹೇಳುವೆನು,     ಹೆಣ್ಣು : ಪ್ರೀತಿ ಮಾತೊಂದನು

ಹೆಣ್ಣು : ಮೊಗ್ಗು ಹೂವಾಗಲೀ, ಹೂವು ಕಾಯಾಗಲೀ
          ಕಾಯಿ ಹಣ್ಣಾಗಲೀ, ನಿಲ್ಲು ನಿಲ್ಲಲ್ಲೀ
          ಮೊಗ್ಗು ಹೂವಾಗಲೀ, ಹೂವು ಕಾಯಾಗಲೀ
          ಕಾಯಿ ಹಣ್ಣಾಗಲೀ, ನಿಲ್ಲು ನೀ ಅಲ್ಲೀ
ಗಂಡು : ಒಡೆದರೆ ಮುತ್ತು, ಕಳೆದರೆ ಹೊತ್ತು
            ದೊರೆಯದು ಮತ್ತೆ, ಬಾ ನಲ್ಲೆ
ಹೆಣ್ಣು : ಕೇಳುವೆಯಾ,     ಗಂಡು : ಕೇಳುವೆನು,
ಹೆಣ್ಣು : ನನ್ನ ಆಸೆಯನು ಹೇಳುವೆಯಾ,
ಗಂಡು : ಹೇಳುವೆನು,     ಹೆಣ್ಣು : ಪ್ರೀತಿ ಮಾತೊಂದನು

ಗಂಡು : ಕಣ್ಣು ಬಾ ಎನ್ನಲು, ವಿರಹ ಸಾಕೆನ್ನಲು
           ಮೋಹವು ಮೂಡಲು, ಬಂದೆ ನಾನಿಲ್ಲಿ
          ಕಣ್ಣು ಬಾ ಎನ್ನಲು, ವಿರಹ ಸಾಕೆನ್ನಲು
         ಮೋಹವು ಮೂಡಲು, ಬಂದೆ ನಾನಿಲ್ಲಿ
ಹೆಣ್ಣು : ನಯನದ ಕರೆಯೊ, ವಿರಹದ ಉರಿಯೊ
           ಸರಸದ ನುಡಿಯೊ, ನಾ ಅರಿಯೆ
ಗಂಡು : ಕೇಳುವೆಯಾ,     ಹೆಣ್ಣು : ಕೇಳುವೆನು,
ಗಂಡು : ನನ್ನ ಆಸೆಯನು  ಹೇಳುವೆಯಾ,
ಹೆಣ್ಣು : ಹೇಳುವೆನು,       ಗಂಡು : ಪ್ರೀತಿ ಮಾತೊಂದನು

ಹೆಣ್ಣು : ನಿನ್ನ ಕಂಡಾಗಲೆ, ಹೃದಯವು ಹಾಡಿತು
          ಸನಿಹ ನಿಂತಾಗಲೆ, ಮನಸು ಹೂವಾಯ್ತು
          ನಿನ್ನ ಕಂಡಾಗಲೆ, ಹೃದಯವು ಹಾಡಿತು
         ಸನಿಹ ನಿಂತಾಗಲೆ, ಮನಸು ಹೂವಾಯ್ತು
ಗಂಡು : ಚೆಲುವೆಯ ನಡೆಗೆ, ಒಲವಿನ ನುಡಿಗೆ
            ಪ್ರಣಯದ ಕರೆಗೆ, ನಾ ಸೋತೆ
ಹೆಣ್ಣು : ಕೇಳುವೆಯಾ, ಹೂಂ    ಗಂಡು : ಕೇಳುವೆನು,
ಹೆಣ್ಣು : ನನ್ನ ಆಸೆಯನು ಹೇಳುವೆಯಾ, ಹ್ಹಾಂ
ಗಂಡು : ಹೇಳುವೆನು,     ಹೆಣ್ಣು : ಪ್ರೀತಿ ಮಾತೊಂದನು
--------------------------------------------------------------------------------------------------------------------------

ಲೀಡರ್ ವಿಶ್ವನಾಥ್ (1981) - ಭಗವಂತ ಭೂಮಿಗೆ ಬಾ ಬೇಗ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.

ಓ ಗಾಡ್ ಕಮ್ ಡೌನ್ ಯಾಂಡ್ ಲುಕ್ ಯಾಟ್ ದಿಸ್ ಫ್ರಾಡ್ ಅಹ್ಹಹ್ಹ..
ಭಗವಂತ ಭೂಮಿಗೆ ಬಾ ಬೇಗ ಬಡವರ ಬವಣೆಯ ನೋಡೀಗ
ನೀನೇ ಬಡವರ ಪರವಾಗಿ ಬಾಳಿ ಬದುಕಲು ಸುಖವಾಗಿ
ನ್ಯಾಯ ತರುವೆಯಾ ವರವಾಗಿ ಬಲ್ಲಿದರ ಆಟಕೆ ಎದುರಾಗೀ
ಭಗವಂತ ಭೂಮಿಗೆ ಬಾ ಬೇಗ ಬಡವರ ಬವಣೆಯ ನೋಡೀಗ

ಬಡವರ ಬೆವರ ಕುಡಿಯುವರೂ ಅಂಗನೆ ಸಂಗದಿ ನಲಿಯುವರೂ
ಬಡವರ ಬೆವರ ಕುಡಿಯುವರೂ ಅಂಗನೆ ಸಂಗದಿ ನಲಿಯುವರೂ
ಮೋಸವೇ ಇವರ ಜೀವಾಳ ಅಹ್ಹ.. ಚೇತನ ಇವರ ಸೈತಾಳ
ಭಗವಂತ ಭೂಮಿಗೆ ಬಾ ಬೇಗ..  ಕಮ್ ಆನ್
ಬಡವರ ಬವಣೆಯ ನೋಡೀಗ...  ಕಮ್ ಆನ್ ಮಿಲ್ಕ್ ಆಯ್ ಸೇ

ಹೆಣ್ಣನು ಕಂಡರೂ ಗೋವಂತೇ ಅವಳಿಗೆ ಸ್ವಾತಂತ್ರ್ಯ ಇರದಂತೇ
ಹೆಣ್ಣನು ಕಂಡರೂ ಗೋವಂತೇ ಅವಳಿಗೆ ಸ್ವಾತಂತ್ರ್ಯ ಇರದಂತೇ
ಸಮಾಜ ನಿರ್ಮಿಸಿ ತಮ್ಮಂತೇ ದೇಶದಿ ನೂರೆಂಟೂ ಮತವಂತೆ 
ಭಗವಂತ ಭೂಮಿಗೆ ಬಾ ಬೇಗ ಬಡವರ ಬವಣೆಯ ನೋಡೀಗ... ಅಹ್ಹಹ್ಹಹ್ಹಹ್

ಹಣವಂತರೇ ಬಡವರನು ಬಾಳಲು ಬಿಡಿ
ಸಿರಿಯೂ ಸ್ವಾರ್ಥದ ಒಡನಾಡಿ ವಂಚನೆ ಅದಕೇ ಬಲು ಜೋಡಿ ಆಹ್ಹ್
ಸಿರಿಯೂ ಸ್ವಾರ್ಥದ ಒಡನಾಡಿ ವಂಚನೆ ಅದಕೇ ಬಲು ಜೋಡಿ 
ಸಂಚಿಕೆ ಸೋತರೇ ನೀವೆಲ್ಲಾ ಆಹ್ಹ್.. ಬಡವರ ಬವಣೆಗೆ ಕೊನೆಯಿಲ್ಲ 
ಭಗವಂತ ಭೂಮಿಗೆ ಬಾ ಬೇಗ ಬಡವರ ಬವಣೆಯ ನೋಡೀಗ
ನೀನೇ ಬಡವರ ಪರವಾಗಿ ಬಾಳಿ ಬದುಕಲು ಸುಖವಾಗಿ
ನ್ಯಾಯ ತರುವೆಯಾ ವರವಾಗಿ ಬಲ್ಲಿದರ ಆಟಕೆ ಎದುರಾಗೀ
ಬಲ್ಲಿದರ ಆಟಕೆ ಎದುರಾಗೀ ಅಹ್ಹ ಬಲ್ಲಿದರ ಆಟಕೆ ಎದುರಾಗೀ ಹ್ಹಾ..
--------------------------------------------------------------------------------------------------------------------------

ಲೀಡರ್ ವಿಶ್ವನಾಥ್ (1981) - ಆಹ್ಹಾಹ್ಹಾ ಆನಂದ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಬಂಗಿರಂಗ ಹಾಡಿದವರು: ಜಯಚಂದ್ರನ್,

ಆಹ್ಹಾಹ.. ಆಆ.. ಆನಂದಾ..
ತುಂಬಿ ತುಳುಕಿದೇ ಈಧಿನ ಎಂದೆಂದೂ ಸಂತೋಷ
ತಂದಿದೆ ದುಡಿಮೆಯ ಜೀವನ
ಆಹ್ಹಾಹ.. ಆಆ.. ಆನಂದಾ..

ಬೆವರು ಹರಿಸಿ ಅನ್ನವ ಗಳಿಸಿ  ಬಾಳುವ ನಾವೇ ಧನ್ಯರೂ
ಬೆವರು ಹರಿಸಿ ಅನ್ನವ ಗಳಿಸಿ  ಬಾಳುವ ನಾವೇ ಧನ್ಯರೂ
ಕೈ ಕೇಸರದಾರೇ ಬಾಯಿಗೇ ಮೊಸರೂ ದುಡಿಮೆಯೇ ನಮ್ಮ ದೇವರೂ 
ಆಹ್ಹಾಹ.. ಆಆ.. ಆನಂದಾ..

ಹಾಲುಗಲ್ಲದ ಹಸುಳೆಗಳೂ ನಾಳೇ ದೇಶದ  ಪ್ರಜೆಗಳೂ 
ಹಾಲುಗಲ್ಲದ ಹಸುಳೆಗಳೂ ನಾಳೇ ದೇಶದ  ಪ್ರಜೆಗಳೂ 
ಮಾನವ ಶಕ್ತಿಯ ಬಲದಿಂದ ನಾಡನು ಕಟ್ಟುವ ಶಿಲ್ಪಿಗಳೂ 
ಆಹ್ಹಾಹ.. ಆಆ.. ಆನಂದಾ.. 

ಗಳಿಸಿದ ಹಣವ ಉಳಿಸದೇ ಹೋದರೇ ಎಲ್ಲಿದೆ ಬಾಳಿಗೇ ನೆಮ್ಮದಿ 
ಗಳಿಸಿದ ಹಣವ ಉಳಿಸದೇ ಹೋದರೇ ಎಲ್ಲಿದೆ ಬಾಳಿಗೇ ನೆಮ್ಮದಿ 
ಹಗಲು ಇರುಳೂ ದುಡಿಯುವುದೊಂದೇ ಬಡತನ ನೀಗುವ ಔಷಧಿ 
ಆಹ್ಹಾಹ.. ಆಆ.. ಆನಂದಾ..
ತುಂಬಿ ತುಳುಕಿದೇ ಈಧಿನ ಎಂದೆಂದೂ ಸಂತೋಷ
ತಂದಿದೆ ದುಡಿಮೆಯ ಜೀವನ  ಆಹ್ಹಾಹ.. ಆಆ.. ಆನಂದಾ..
--------------------------------------------------------------------------------------------------------------------------

ಲೀಡರ್ ವಿಶ್ವನಾಥ್ (1981) - ಝಣ ಝಣ ಎಂದಾಗ ಹಣ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಬಸವರಾಜ ಕೆಸ್ತೂರ ಹಾಡಿದವರು: ಕಸ್ತೂರಿ ಶಂಕರ

ಝಣ ಝಣ ಝಣ ಝಣ ಎಂದಾಗ ಹಣವೂ ಎಂದಾಗ ಹಣವೂ
ಝಲ್ಲ ಝಲ್ಲ ಝಲ್ಲ ಝಲ್ಲ ಎಂದಾಗ ಗೆಜ್ಜೆಯೂ ಎಂದಾಗ ಗೆಜ್ಜೆಯೂ
ಗೆಜ್ಜೆಯ ತಾಳಕೆ ಕುಣಿದಾಡುವೇ ನನ್ನ ಹೆಜ್ಜೆಯ ಓಟಕೆ ನೀ ಸೊಲುವೇ

ಅರಳಿದ ಮೇಲೆ ಹೂವಿನ ಸೊಗಸೂ ನೀನೂ ಅರಿತಿರುವೇ
ಮಾಗಿದ ಮೇಲೆ ಹಣ್ಣಿನ ರುಚಿಯೂ ಎಂಬುದ ತಿಳಿದಿರುವೇ..  ಹೇ...
ಅರಳಿದ ಮೇಲೆ ಹೂವಿನ ಸೊಗಸೂ ನೀನೂ ಅರಿತಿರುವೇ
ಮಾಗಿದ ಮೇಲೆ ಹಣ್ಣಿನ ರುಚಿಯೂ ಎಂಬುದ ತಿಳಿದಿರುವೇ
ನಿನ್ನದೇ ಎಲ್ಲವೂ ನಿನ್ನದೇ ಎಲ್ಲವೂ ತಾಳೂ ನಾ ಬರುವೇ
ಝಣ ಝಣ ಝಣ ಝಣ ಎಂದಾಗ ಹಣವೂ ಎಂದಾಗ ಹಣವೂ
ಝಲ್ಲ ಝಲ್ಲ ಝಲ್ಲ ಝಲ್ಲ ಎಂದಾಗ ಗೆಜ್ಜೆಯೂ ಎಂದಾಗ ಗೆಜ್ಜೆಯೂ
ಗೆಜ್ಜೆಯ ತಾಳಕೆ ಕುಣಿದಾಡುವೇ ನನ್ನ ಹೆಜ್ಜೆಯ ಓಟಕೆ ನೀ ಸೊಲುವೇ
--------------------------------------------------------------------------------------------------------------------------

No comments:

Post a Comment