399. ಪುಟ್ಟಾಣಿ ಏಜೆಂಟ್ಸ್ 123 (1980)


ಪುಟಾಣಿ ಎಜೇಂಟ್ ಒನ್ ಟೂ ಥ್ರೀ ಚಿತ್ರದ ಹಾಡುಗಳು 
  1. ಪಿಕನಿಕ್ ಅಂದರೆ ಪಿಕನಿಕ್ 
  2. ಕಿ ಕಿ ಕಿ ಕಿ ಎನ್ನುತ ಹಾಡೋಣ ತೂಗಿ ಸಾಗಿ ಎಲ್ಲರು ಹಾರೋಣ
  3. ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
  4. ಪುಟಾಣಿ ಏಜೇಂಟ್ ಒನ್ ಪುಟಾಣಿ ಏಜೇಂಟ್ ಟೂ ಪುಟಾಣಿ ಏಜೇಂಟ್ ತ್ರೀ ..... 
ಪುಟ್ಟಾಣಿ ಏಜೆಂಟ್ಸ್ ೧ ೨ ೩ (೧೯೮೦) - ಪಿಕನಿಕ್ ಅಂದರೆ ಪಿಕನಿಕ್ 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್.ಜಾನಕಿ, ಆರ್.ರಾಜೇಶ್ವರೀ 

ಪಿಕನಿಕ್ ಅಂದರೇ ಪಿಕನಿಕ್ 
ಮಕ್ಕಳ ಪಿಕನಿಕ್ ಬಲು ಜೋಕು 
ಇಷ್ಟ ಬಂದಂತೇ ಕುಣಿಯೋಕೆ 
ಮನೆಯಲ್ಲಿ ದೊಡ್ಡ ಕಾಟ 
ಅಪ್ಪ.. ಅಮ್ಮ ದಿನವೆಲ್ಲ ಓದು ಅಂತಾರೇ ಪಾಠ 
ಪಾಠದ ಕಾಟ ತಪ್ಪಿದರೆ ನಾವೆಲ್ಲಾ ಆಡಿದ್ದೇ ಆಟ 
ಪಿಕನಿಕ್ ಅಂದರೇ ಪಿಕನಿಕ್ 
ಮಕ್ಕಳ ಪಿಕನಿಕ್ ಬಲು ಜೋಕು 
----------------------------------------------------------------------------------------------

ಪುಟ್ಟಾಣಿ ಏಜೆಂಟ್ಸ್ ೧ ೨ ೩ (೧೯೮೦) - ಸಹ್ಯಾದ್ರಿ ಸಾಲಿನಲಿ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್.ಜಾನಕಿ ಮತ್ತು ಸಂಗಡಿಗರು 


ಹೆಣ್ಣು : ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ ಬೆಳೆದಿತ್ತು ಭಾರಿ ಆಲದಮರವು
         ಮೊರೆದಿತ್ತು ನೂರಾರು ಹಕ್ಕಿಗಳಾ  ಸ್ವರವು
         ಕೀ ಕೀ ಕೀ ಕೀ ಎನ್ನುತ ಹಾಡೋಣ ತೂಗಿ ಬಾಗಿ ಎಲ್ಲರು ಹಾರೋಣ
        ಸಿಹಿಯಾದ ರುಚಿಯಾದ ಹಣ್ಣಿನ ರಸವ ಹೀರೋಣ
ಎಲ್ಲರು : ಕೀ ಕೀ ಕೀ ಕೀ ಎನ್ನುತ ಹಾಡೋಣ
            ಕಲಕಲ ಕುಣಿಯೋಣ  ಮೈ ಮನ ಮರೆಯೋಣ
           ಒಟ್ಟಿಗೆ ಸಾಗಿ ಮೆತ್ತಗೆ ಹೋಗಿ ಇಂದೆ ಮೆರೆಯೋಣ
           ಕೀ ಕೀ ಕೀ ಕೀ ಎನ್ನುತ ಹಾಡೋಣ ತೂಗಿ ಬಾಗಿ ಎಲ್ಲರು ಹಾರೋಣ
          ಎಲ್ಲರು ಹಾಡೋಣ ಎಲ್ಲರು ಹಾಡೋಣ

ಹೆಣ್ಣು : ಕಂದ ನೀ ಬಲಿಯಾದೆಯಾ ತಂದೆ ತಾಯಿಯ ತೊರೆದೆಯಾ  
           ಕಾಡಿತೆ ವಿಷವು ತೀರಿತೆ ಋಣವು ಕಾಳ ಸರ್ಪದ ಕಾಗು ತಾಳಾಲಾರ ನೋವು
          ಇದಕೆ ಕೊನೆ ಇಲ್ಲವೆ ಯಾರು ಗತಿ ಇಲ್ಲವೇ ... ಇಲ್ಲವೇ .... ಇಲ್ಲವೇ...
         ಕಂದ ನೀ ಬಲಿಯಾದೆಯಾ ತಂದೆ ತಾಯಿಯ ತೊರೆದೆಯಾ
         ಅಗಲಿ ಇರಲಾರೆ ನಾ ಅಗಲಿ ಇರಲಾರೆ ಇರಲಾರೆ

ನರಿ  :   ಏನಾಯ್ತು ಹೇಗಾಯ್ತು ಯಾರಿಂದ ಹೇಳಿ ಹೇಳಿ
        ಅಳಬೇಡಿ ಹೆದರಬೇಡಿ ಈ ನರಿ ಮಾತು ಕೇಳಿ
        ಅಪಾಯ ಬಂದಾಗ ಉಪಾಯ ಹೇಳ್ತೀನಿ
        ಆ ಸರ್ಪಾನೆ ಸಾಯೊ ಹಾಗ್ ಮಾಡ್ತೀನಿ ಬನ್ನಿ ಎಲ್ಲ ಬನ್ನಿ
        ಏ ಪಕ್ಷಿ ರಾಜ ಬಾನ ತೇಜ ಬಾ ಬಾ

ನರಿ  : ಆಹಾ ಆಹಾ ಏನು ರೋಷ ಏನೋ ಆವೇಶ 
         ಎಲ್ಲ ನಮ್ಮಂಥ ಬಡ ಪ್ರಾಣಿಗಳ ಮೇಲೇನೆ ನಿನ್ನ ಪೌರುಷ
         ಸಾಕು ಸಾಕು ಬರಿ ಒಣ ಜಂಬದಿಂದ ಏನು ಪ್ರಯೋಜನವಿಲ್ಲ
        ವೃತ ಕೋಪ ತಾಪ ಪ್ರತಾಪ ಏನು ಸುಖವಿಲ್ಲ
        ನಮ್ಮ ಸರ್ಪ ರಾಜನ ಮುಂದೆ ನಿನ್ನ ದರ್ಪ ಏನು ನಡೆಯೊಲ್ಲ
       ತಾಳು ತಾಳು ನಿನ್ನ ಪೌರುಷ ಆವೇಶ ರೋಷ ಅಲ್ಲಿ ತೋರಿಸೂ ಬಾ

ಹೆಣ್ಣು :  ಅಪಾಯ ಬಂದಾಗ ಉಪಾಯದಿಂದ ಕಾರ್ಯ ಸಾಧಿಸಬೇಕು
          ವೈರಿ ಎದುರಾದಾಗ ಧೈರ್ಯ ತೋರಿ ಛಲದಿಂದ ಗೆಲ್ಲಬೇಕು
          ಕೀ ಕೀ ಕೀ ಕೀ ಎನ್ನುತ ಹಾಡೋಣ ತೂಗಿ ಬಾಗಿ ಎಲ್ಲರು ಹಾರೋಣ
          ಎಲ್ಲರು ಹಾಡೋಣ ಎಲ್ಲರು ಹಾಡೋಣ
-----------------------------------------------------------------------------------------------------------------------

ಪುಟಾಣಿ ಏಜೆಂಟ್ ೧ ೨ ೩ (೧೯೭೯)..............ಏನೋ ಸಂತೋಷ ಏನೋ ಉಲ್ಲಾಸ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಗೀತಪ್ರಿಯ  ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಎಸ್.ಜಾನಕಿ

ಕೋರಸ್ :ಓಓಓಓಓಓಓ .... ಓಓಓಓಓಓಓ ಓಓಓಓಓ
ಎಸ್.ಪಿ : ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ ಎಂದೂ ಮುಗಿಯದ ಈ ಪ್ರೇಮಬಂಧನ
ಎಸ್.ಜಾನಕಿ: ಜನ್ಮಜನ್ಮದಾ ಈ ಆತ್ಮಬಂಧನ
                   ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ ಎಂದೂ ಮುಗಿಯದ ಈ ಪ್ರೇಮಬಂಧನ
ಎಸ್.ಪಿ. : ಜನ್ಮಜನ್ಮದಾ ಈ ಆತ್ಮಬಂಧನ

ಕೋರಸ್ : ಲಾಲಾಲಾಲಾಲ ಲಾಲಾಲಾಲಾಲ ಲಾಲಾಲಾಲಾಲ ಲಾಲಾಲಾಲಾಲ
ಎಸ್.ಪಿ. : ನನ್ನಾಸೆ ನಿನ್ನಾಸೆ ಒಂದಾಗಿ ಸೇರಿ ಏನೇನೋ ಕೋರಿ ಉಯ್ಯಾಲೆ ತಾನಾಡಿದೆ
ಎಸ್.ಜಾನಕಿ: ನೀನಲ್ಲಿ ನನಲ್ಲಿ ಒಲವೆಲ್ಲ ಕೂಡಿ ಗೆಲುವಿಂದ ಹಾಡಿ ಎಲ್ಲೆಲ್ಲೂ ಓಲಾಡಿದೆ
ಎಸ್.ಪಿ. : ದಾಹವೊ ಮೋಹವೊ ಹೂಬಳ್ಳಿಯೊಂದು ಮರಸುತ್ತಿ ಬಂದು ತಾ ನೀಡೆ ಆಲಿಂಗನ
ಎಸ್.ಜಾನಕಿ: ಕಂಚಿನ ಮಿಂಚಿನ ಕಣ್ಣೆರಡು ಕೂಡಿ ಮಾಡಿರಲು ಮೋಡಿ ಮೈಯಲ್ಲಿ ಮೃದು ಕಂಪನ
ಇಬ್ಬರೂ : ಇಂದೇಕೋ ನಮ್ಮಲ್ಲಿ ಇಂತಹ ತಲ್ಲಣ
ಎಸ್.ಜಾನಕಿ: ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಸ್.ಪಿ. : ಎಂದೂ ಮುಗಿಯದ ಈ ಪ್ರೇಮಬಂಧನ
ಎಸ್.ಜಾನಕಿ:ಜನ್ಮಜನ್ಮದಾ ಈ ಆತ್ಮಬಂಧನ

ಎಸ್.ಜಾನಕಿ: ನೀನಲ್ಲಿ ನಾನಿಲ್ಲಿ ಈ ನೋಟದಲ್ಲಿ ಆ ನೋಟ ನೆಟ್ಟು ಚೆಲ್ಲಾಟ ನೀನಾಡಿದೆ
ಎಸ್.ಪಿ. : ಹಾಡುತ ಆಡುತ ಮನವೆಂಬ ಹಕ್ಕಿ ಒಲವೆಲ್ಲ ಉಕ್ಕಿ ಬಾನಲ್ಲಿ ಹಾರಾಡಿದೆ
ಎಸ್.ಜಾನಕಿ: ನಿನ್ನಿಂದ ನನ್ನಂದ ಹೂವಲ್ಲಿ ಜೇನು ನನ್ನಲ್ಲಿ ನೀನು ಬಾಳೆಲ್ಲ ಹಾಯಾಗಿದೆ
ಎಸ್.ಪಿ.: ನಾವೆಂದು ಒಂದೆಂದು ನಮ್ಮ ಅಂತರಂಗ ಆನಂದರಂಗ ಅನುರಾಗ ತಾ ತಂದಿದೆ
ಇಬ್ಬರೂ : ತಂಗಾಳಿ ತಂಪಾದ ಸಂದೇಶ ಸಾರಿದೆ
             ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
            ಎಂದೂ ಮುಗಿಯದ ಈ ಪ್ರೇಮಬಂಧನ ಜನ್ಮಜನ್ಮದಾ ಈ ಆತ್ಮಬಂಧನ
-----------------------------------------------------------------------------------------------------------------------

ಪುಟ್ಟಾಣಿ ಏಜೆಂಟ್ಸ್ 123 (1980) - ಪುಟ್ಟಾಣಿ ಏಜೆಂಟ್ 123
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು


ಗಂಡು : ಪುಟಾಣಿ ಏಜೇಂಟ್ ಒನ್
ಹೆಣ್ಣು : ಪುಟಾಣಿ ಏಜೇಂಟ್ ಟೂ
ಗಂಡು : ಪುಟಾಣಿ ಏಜೇಂಟ್ ತ್ರೀ .....
ಎಲ್ಲರು : ಪುಟಾಣಿ ಏಜೇಂಟ್ ಒನ್ ಟೂ ತ್ರೀ ಸಿಡಿಲಿನ ಮರಿಗಳು ನಾವೂ
            ಪುಟಾಣಿ ಏಜೇಂಟ್ ಒನ್ ಟೂ ತ್ರೀ ಸಿಡಿಲಿನ ಮರಿಗಳು ನಾವೂ
            ನ್ಯಾಯ ನೀತಿಗೆಂದು ಹೋರಾಡುವೆವು....
           ನ್ಯಾಯ ನೀತಿಗೆಂದು ಹೋರಾಡುವೆವು....
           ಪುಟಾಣಿ ಏಜೇಂಟ್ ಒನ್ ಟೂ ತ್ರೀ ಸಿಡಿಲಿನ ಮರಿಗಳು ನಾವೂ

ಗಂಡು : ಬಿರುಗಾಳಿ ಬೀಸಿದರೂ ಅಂಜೋ ಭೂಪರಲ್ಲಾ... 
ಹೆಣ್ಣು : ಎದುರಾಳಿ ಯಾರಿರಲೀ.. ನಮಗಾರು ಸಾಟಿಯಲ್ಲಾ...
         ತಿಳಿಯುವೆವು ಕೇಡಿಗಳ ಮಾಡೋ ಮೋಸವೆಲ್ಲಾ 
         ದ್ರೋಹಿಗಳು ಎಲ್ಲಿರಲಿ ಪಾರಾಗೋಕೆ ಸಾಧ್ಯವಿಲ್ಲಾ ...
ಗಂಡು : ಧರ್ಮದ ರಕ್ಷಣೆ ಗುರಿಯು ನಮ್ಮದು, 
            ದುಷ್ಟರಾ ಶಿಕ್ಷಣೆ ಹೊಣೆಯು ನಮ್ಮದೇ
ಎಲ್ಲರು : ಹಗಲು ಇರುಳು ಕಾಯುವೆವು ನಮ್ಮಯ ಬಲವನು ತೋರುವೆವು...
            ಪುಟಾಣಿ ಏಜೇಂಟ್ ಒನ್ ಟೂ ತ್ರೀ ಸಿಡಿಲಿನ ಮರಿಗಳು ನಾವೂ
            ನ್ಯಾಯ ನೀತಿಗೆಂದು ಹೋರಾಡುವೆವು....
            ಪುಟಾಣಿ ಏಜೇಂಟ್ ಒನ್ ಟೂ ತ್ರೀ   ಒನ್ ಟೂ ತ್ರೀ
            ಹ್ಹೂ ಹ್ಹಾ ಹ್ಹಾ ಹ್ಹೂ ಹ್ಹೂ ಹ್ಹಾ ಹ್ಹಾ ಹ್ಹೂ ಹ್ಹೂ ಹ್ಹಾ ಹ್ಹೀಹ್ಹಾ 

ಗಂಡು : ಸಿಂಹಗಳ ಗುಹೆಯೊಳಗೆ ನುಗ್ಗಿ ಗೆಲ್ಲಬಲ್ಲೆ, 
ಹೆಣ್ಣು : ವಂಚಿಸುವ ನರಿಗಳನು ನಿರ್ಮೂಲ ಮಾಡಬಲ್ಲೆ
ಗಂಡು : ಮದಿಸಿರುವ ಆನೆಗಳ ಮಾದವಾ ಇಳಿಸಬಲ್ಲೇ.. 
ಹೆಣ್ಣು : ವಿಷಪೂರಿತ ಹಾವುಗಳ ಹಲ್ಲನ್ನು ಕೀಳಬಲ್ಲೇ
          ಕನ್ನಡ ತಾಯಿಯ ಮಡಿಲಿನ ಮಕ್ಕಳು
ಎಲ್ಲರು : ಕೆಚ್ಚದೇ ಕಲಿಗಳು ದೈರ್ಯದಾ ಹುಲಿಗಳು
            ನಾಡಿಗೆ ನೆಮ್ಮದಿ ತರಲೆಂದು ಕಂಕಣ ತೊಟ್ಟೆವು ನಾವಿಂದು..
           ಪುಟಾಣಿ ಏಜೇಂಟ್ ಒನ್ ಟೂ ತ್ರೀ ಸಿಡಿಲಿನ ಮರಿಗಳು ನಾವೂ
           ನ್ಯಾಯ ನೀತಿಗೆಂದು ಹೋರಾಡುವೆವು....
           ಪುಟಾಣಿ ಏಜೇಂಟ್ ಒನ್ ಟೂ ತ್ರೀ ಒನ್ ಟೂ ತ್ರೀ ಒಹೋ ಒಹೋ ಒಹೋ
-------------------------------------------------------------------------------------------------------------------------

No comments:

Post a Comment