401. ಮುತ್ತಿನ ಹಾರ (1990)


ಮುತ್ತಿನ ಹಾರ ಚಿತ್ರದ ಹಾಡುಗಳು
  1. ಕೊಡಗರ ವೀರ ಗಂಡೆದೇ ಶೂರ
  2. ಮಡಿಕೇರಿ ಸಿಪಾಯೀ ಮುತ್ತು ಕಾತ್ತು ಮರೇನು
  3. ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ
  4. ಸಾರು ಸಾರು ಮಿಲ್ಟ್ರಿ ಸಾರು ಸಾರು ಸಾರು ಮಿಲ್ಟ್ರಿ ಸಾರು
  5. ಕೋಡಗಿನೊಳು ಬೆಡಗಿನೊಳು ನನ್ನ ಹೆಂಡರೂ ನಂಜಿ
  6. ಹೇ..ಯುದ್ಧಾ....ನೀನೇಕೇ...ಬರುವೇ... 
ಮುತ್ತಿನ ಹಾರ (1990) - ಹುಲಿಯ ಹಾಲಿನ ಮೇವು
ಸಾಹಿತ್ಯ : ಸಂಗೀತ: ಹಂಸಲೇಖ ಗಾಯಕರು: ಚಿತ್ರ, ಎಸ್.ಪಿ.ಬಿ, ಚಿತ್ರ ಮತ್ತು ಸಂಗಡಿಗರು

ಕೊಡಗರ ವೀರ ಗಂಡೆದೆ ಶೂರ ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನ ಬಳಕನ ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ
ಕೊಡಗರ ವೀರ ಗಂಡೆದೆ ಶೂರ ಭಲೆ ಗುರಿಕಾರ ಪುಲಿ ಕೊಂದ ಧೀರ
ಕಾಟ್ಟೀರೊ ಅವಂಗ ಇಟ್ಟು ಪೊನ್ನ ಬಳಕನ ಮಾಡೀರೊ ಅವಂಗ ಇಟ್ಟು ಪುಲಿ ಮಂಗಳ
ಹುಲಿಯ ಹಾಲಿನ ಮೇವು ಎರೆವೇನು ನಿನಗೆ ಸವಿದು ಬೆಳೆಯೋ ಕೊಡವನೇ
ಆನೇ ದಂತವ ನಾನು ಕೊಡುವೇನು ನಿನಗೆ ಆಡಿ ಬೆಳೆಯೋ ಕೊಡವನೇ
ಕಾವೇರಮ್ಮನ ಮಡಿಲ ಕಂದ ಲಾಲಿ ಲಾಲಿ ಜೋ ಕಾವೇರಮ್ಮೆದ ಕುಞೆ ನೀನು ಲಾಲಿ ಲಾಲಿ ಜೋ

ತಾಯ್ನಾಡಿಗಾಗಿ ಹಿಡಿಯೋ ಕೈಲಿ ಖಡ್ಗ ಖಡ್ಗ ಕೊಡವ ಹೇ ಕೊಡವ ಹಿಡಿ ಖಡ್ಗ
ಎದೆ ಸೀಳೊ ಜೋಡಿ ಕೋವಿಯಲ್ಲಿ ಗುಂಡು ಸಿಡಿ ಗುಂಡು ಕೊಡವ ಹೇ ಕೊಡವ ನೀ ಗಂಡು
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು ಈ ಮಣ್ಣಿನಲ್ಲಿ ನೂರು ಜನ್ಮ ನಮ್ಮದು
ಕವಣೆ ಬೀಸಲು ನಿನಗೆ ಹೆಬ್ಬಾವ ಕೊಡುವೆ ದೇಶ ಕಾಯೊ ಕೊಡವನೆ
ಕಾವೇರಮ್ಮನು ನಿನಗೆ ವಿಜಯಮಾಲೆ ತರಲಯ್ಯ ಕಾವೇರಮ್ಮೆ ನಿನಕು ವಿಜಯಮಾಲೆ ತಕ್ಕುಲಾ

ಕೊಡಗಲ್ಲಿ ಜನಿಸಿ ಬಂದ ಬಂದ ಚಂದ್ರ ಈ ಚಂದ್ರ  ಪುತರಿಯ ಪುತರಿಯ ಚಂದ್ರ
ಇರುಳಲ್ಲಿ ಬೆಳಕ ತಂದ ತಂದ ಚಂದ್ರ ಈ ಚಂದ್ರ ಪುತರಿಯ ಪುತರಿಯ ಚಂದ್ರ
ನಮ್ಮನೆ ದೀಪ ದೇವರ ರೂಪ ಕೈಯಲಿ ಖೋವಿ ವೀರನ ಠೀವಿ
ವರವಾಗಿ ತಂದ ನಮಗೆ ??? ಇಗ್ಗುತಪ್ಪನು ???
??? ವರ ಆಯ್ತು ತಾತನಂಕು ಇಗ್ಗುತಪ್ಪನು ???
ಅವ್ವ ಅವ್ವ ನಾಡ ಮುತ್ತಿನಂಥ ಅವ್ವ ಪಪ್ಪ, ನಾಡ ಪಪ್ಪ, ಪಪ್ಪ ಎಲ್ಲಿಗೆ ಪೋಯ್ತ
ಮೋನೆ ಮೋನೆ ನಾಡ ಮುತ್ತಿನಂಥ ಮೋನೆ ಪಪ್ಪ, ನೀಡ ಪಪ್ಪ, ದೇಶ ಕಾತ್ತುಕು ಪೋಯ್ತು
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು ಈ ಮಣ್ಣಿನಲ್ಲಿ ನೂರು ಜನ್ಮ ನಮ್ಮದು
-------------------------------------------------------------------------------------------------------------------

ಮುತ್ತಿನ ಹಾರ (1990) - ಮಡಿಕೇರಿ ಸಿಪಾಯಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕರು: ಚಿತ್ರ ಮತ್ತು ಎಸ್.ಪಿ.ಬಿ,

ಮಡಿಕೇರಿ ಸಿಪಾಯೀ ಮುತ್ತು ಕಾತ್ತು ಮರೇನು
ಮಡಿಕೇರಿ ಸಿಪಾಯೀ ಮುತ್ತು ಕಾತ್ತು ಮರೇನು
ಅಧರ ಈ ಅಧರ ಮಧುರ ಓ ಮಧುರ ನಿಂಗಡ ಪ್ರೇಮವೋ ದುಂಬ ಚಾಯಿ ದುಂಬ ಚಾಯಿ
ಚಾಯ್ ಕತ್ತಿ ಮೂಡಿಕ್ಕ ನಾ ಮುತ್ತಿಕ ಮರೇನ ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ ದುಂಬ ಚಾಯಿ ದುಂಬ ಚಾಯಿ

ಓ ಹೋ ಮಳೆ ಮಳೆ ಮಳೆ ಓಒ ಓಒ ಓಒ ಓಒ ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಓ ಹೋ ಮಳೆ ಮಳೆ ಮಳೆ ಓಒ ಓಒ ಓಒ ಓಒ ಇಳೆಯ ಮೇಲೆ ಇಳಿದು ಬಂತು ಹೂವಿನ ಮಳೆ
ಭೂರಮೆಯ ರಮಿಸಿ ಪ್ರೀತಿಗಳ ಹರಸಿ
ನಲಿವ ಈ ವನವೆ ಕುಣಿವ ಈ ಮನವೆ ನಿಂಗಡ ನೆನಪುಕು ಅಮರ ಅಮರ ಅಮರ ಅಮರ
ಮಡಿಕೇರಿ ಸಿಪಾಯೀ ಮುತ್ತು ಕಾತ್ತು ಮರೇನು

ಓ ಹೋ ನುಡಿ ನುಡಿ ನುಡಿ ಓಒ ಓಒ ಓಒ ಓಒ ದೇಹದೊಳಗೆ ಪ್ರಾಣವಾಗೊ ಆಣೆಯ ನುಡಿ
ಓ ಹೋ ದಿನ ಪ್ರತಿ ಕ್ಷಣ ನುಡಿವ ನಿನ್ನ ಹೃದಯ ನನ್ನ ಉಸಿರು ಎಂದೆ ನಾ
ನೀ ನುಡಿವ ಸಮಯ ಮಾರ್ದನಿಯೆ ಹೃದಯ
ಆಣೆ ನಿನ್ನಾಣೆ ಭೂಮಿ ತಾಯಆಣೆ ನಿಂಗಡ ಬಂಧನ ಹಸಿರೋ ಹಸಿರು ಹಸಿರೋ ಹಸಿರು
ಮಡಿಕೇರಿ ಸಿಪಾಯೀ ಮುತ್ತು ಕಾತ್ತು ಮರೇನು
ಅಧರ ಈ ಅಧರ ಮಧುರ ಓ ಮಧುರ ನಿಂಗಡ ಪ್ರೇಮವೋ ದುಂಬ ಚಾಯಿ ದುಂಬ ಚಾಯಿ
ಚಾಯ್ ಕತ್ತಿ ಮೂಡಿಕ್ಕ ನಾ ಮುತ್ತಿಕ ಮರೇನ ಅಧರ ಈ ಅಧರ ಮಧುರ ಓ ಮಧುರ
ನಂಗಡ ಪ್ರೇಮವೋ ದುಂಬ ಚಾಯಿ ದುಂಬ ಚಾಯಿ
------------------------------------------------------------------------------------------------------------------------

ಮುತ್ತಿನ ಹಾರ (1990) - ದೇವರು ಹೊಸೆದ ಪ್ರೇಮದ ದಾರ
ಸಾಹಿತ್ಯ, ಸಂಗೀತ: ಹಂಸಲೇಖ ಗಾಯಕರು: ಡಾ|| ಬಾಲಮುರಳಿಕೃಷ್ಣ, ಚಿತ್ರ ಮತ್ತು ಸಂಗಡಿಗರು

ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ

ಬೇಸಿಗೆಯಲಿ ಆ ಸೂರ್ಯ ಭೂತಾಯಿಯ ಸುಡುತಾನೆ
ಪ್ರೇಮಕೂ ಅಗ್ನಿಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಎಂದರೆ ನಾವು ಸುಡದೆ ಇರುವುದೆ ನೋವು
ಸರಿಯೋಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ
ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ

ಮೇಘವೋ ಮೇಘವು ಮುಂಗಾರಿನ ಮೇಘವು
ಮೇಘವೋ ಮೇಘವು ಹಿಂಗಾರಿನ ಮೇಘವು
ಹನಿ ಹನಿ ಹನಿ ಹನಿ ಚಿಟಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡು ಗುಡು ಗುಡು ಗುಡು ಗುಡುಗೋ ಗುಡುಗಿನ
ಫಳ ಫಳ ಮಿಂಚುವ ಸಿಡಿಯುವ ಸಿಡಿಲಿನ ಧರಣಿ ತಣಿಸುವ ಭರಣಿ ಹೊಳೆಮಳೆ
ಹಸ್ತ ಚಿತ್ತ ಸ್ವಾತಿ ಹೊಳೆ ಮಳೆ ಸಿಡಿಯುವ ಭುವಿಗೆ ಗಂಗಾವಾಹಿನಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ
ಆsss ಆssss ಆssss ಆಆಆಅ...

ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ ಆssssss ಆsss
ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ
ಕವಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
ಕುಹು ಕುಹು ಕುಹು ಕುಹು ಕುಹು ಕುಹು ಕುಹು ಕುಹು
ಋತುಗಳ ಚಕ್ರವು ತಿರುಗುತ ಇರಲು  ಕ್ಷಣಿಕವೇ ಕೊಗಿಲೆ ಗಾನದ ಹೊನಲು
ಬಿಸಿಲೋ ಮಳೆಯೋ ಚಿಗುರೋ ಹಿಮವೋ
ಅಳುವೋ ನಗುವೋ ಸೋಲೋ ಗೆಲುವೋ
ಬದುಕೇ ಪಯಣ ನಡಿಯೇ ಮುಂದೆ ಒಲವೇ ನಮಗೆ ನೆರಳು ಹಿಂದೆ
ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ
-----------------------------------------------------------------------------------------------------------------------

ಮುತ್ತಿನ ಹಾರ (1990) - ಸಾರು ಸಾರು ಮಿಲ್ಟ್ರಿ ಸಾರು
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕರು: ಲತ ಹಂಸಲೇಖ, ಎಸ್. ಪಿ. ಬಾಲಸುಬ್ರಮಣ್ಯಮ್

ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು ಸಾರು ಸಾರು ಮಿಲ್ಟ್ರಿ ಸಾರು
         ಯಾರು ಯಾರು ನಾನು ಯಾರು ಹೇಳಿ ಸಾರು
ಗಂಡು : ಮಾರಿ ಮಾರಿ ತಂಟೆ ಮಾರಿ ಮಾರಿ ಮಾರಿ ತಂಟೆ ಮಾರಿ
           ಕೇಳೇ ಕೇಳು ಏನೇ ಕೇಳು ಹೆದರೋರ್ಯಾರು

ಹೆಣ್ಣು : ಕೋಣೆಯಲ್ಲಿ ಮಂಚ ಕಾಯುತಿತ್ತು ಒಹೋ.. ನನ್ನ ಜೀವ ನಿನ್ನ ಕೇಳುತಿತ್ತು ಒಹೋ..
          ನೀನು ಬರದೆ ಹಸಗೊಂಡ್ ಹೋದೆ ನಾನು ಯಾರು
ಗಂಡು : ತಿಗಣೆ ಮರಿಯೆ ತಿಗಣೆ ಮರಿಯೆ ರಕ್ತ ಹೀರೊ ಆಸೆ ಮರಿಯೆ ನಿನ್ನ ಒಡಲು ನೀರಲ್ಲಿರಲು ನೀನು ಯಾರು
ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು

ಹೆಣ್ಣು : ಚಿಟಿಕೆಯಲ್ಲೆ ಬರುವೆ ನಾನು ಸ್ವರ್ಗ ತೋರುವೆ ಹತ್ತು ಕೈಗು ತುತ್ತು ನೀಡಿ ಹೊಟ್ಟೆ ತುಂಬುವೆ
         ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಮೂಗು ನಶ್ಯ (ಹಾ ಛಿ) ಅಂಬಾಳೆ ನಶ್ಯ
ಹೆಣ್ಣು : ಅಯ್ಯೋ... ಕೆಂಪು ಕೆಂಪು ನನ್ನ ಮೈಯ ಬಣ್ಣ ಕೆಂಪಗೆ ಹೊಟ್ಟೆ ಒಳಗೆ ಇರುವ ಚಿನ್ನದ ಕಾಸು ಯಾರಿಗೆ
          ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಮೆಣಸಿನ ಕಾಯಿ ಮೆಣಸಿನ ಕಾಯಿ ನಿನ್ನ ಹೆಸರೇ ಖಾರಾ ಬಾಯಿ
            ಖಾರಾ ಬಾಯಿ ಖಾರಾ ಬಾಯಿ ಖಾರಾ ಬಾಯಿ
ಹೆಣ್ಣು : ಸಾರು ಸಾರು ಮಿಲ್ಟ್ರಿ ಸಾರು ಅಯ್ಯೋ... ಅಹ್ಹ..

ಹೆಣ್ಣು : ಅಜ್ಜಿ ಅಜ್ಜಿ ಅಜ್ಜಿ ಮೈಗೆ ಕಜ್ಜಿ ಬಂದಿದೆ ಸೊಂಟ ಇರದೆ ಪಾಪ ಜೋತು ಬಿದ್ದು ತೂಗಿದೆ
          ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ಹಾಗಲಕಾಯಿ (ಅಯ್ಯೋ) ತೆಗಿ ಬೇಗ ಬಾಯಿ (ಅಯ್ಯಯ್ಯೋ)
ಹೆಣ್ಣು : ಕೋಟೆ ಕೋಟೆ ನಂದು ಏಳು ಸುತ್ತಿನ ಕೋಟೆಯೊ
          ಕೋಟೆ ಕಟ್ಟೊ ಸೈನ್ಯ ನನ್ನ ಹೊಟ್ಟೆಗೆ ಬೇಟೆಯೊ ಮಿಲ್ಟ್ರಿ ಸಾರು ಹೇ ಹೇ ನಾನು ಯಾರು
ಗಂಡು : ನಾಗರ ಹಾವೆ ಹಾವೊಳು ಹೂವೆ ಬಾಗಿಲಬಿಲದಿ ನಿನ್ನಯ ಠಾವೆ
           ಗೆದ್ದೆ ನಾನು ಸೋತೆ ನೀನು ಕೇಳೆ ಇನ್ನು
           ತಂದೆಯ ಚಿನ್ನ ತನ್ನ ಕೈಯಲಿ ಹಿಡಿವ ಹೋ ತಾಯಿಯ ಅನ್ನ ತನ್ನ ಬಾಯಲಿ ಕಡಿವ ಹೋ
           ಹೇಳೇ ನೀನು ಏಳೇ ನೀನು ಯಾರೆ ನಾನು
-----------------------------------------------------------------------------------------------------------------------

ಮುತ್ತಿನ ಹಾರ (1990) - ಸಾರು ಸಾರು ಮಿಲ್ಟ್ರಿ ಸಾರು
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕರು: ಎಸ್. ಪಿ. ಬಿ 

ಲಲಲಲಲಾ ... ಲಲಲಲಲಾ ... ಲಲಲಲಲಾ ...
ಕೋಡಗಿನೊಳು ಬೇಡಗಿನೊಳು ನನ್ನ ಹೆಂಡ್ರು ನಂಜೀ
ಕೋಡಗಿನೊಳು ಬೇಡಗಿನೊಳು ನನ್ನ ಹೆಂಡ್ರು ನಂಜೀ 
ಮದುವೆಯಾಗಿ ಅವಳ ಕೂಡ ಕಳೆದೇ  ಒಂದು ಸಂಜಿ 
ಸಂಜಿ ನಂಜಿಯೊಡನೇ ಸಂಜೀ ...
ಕೋಡಗಿನೊಳು ಬೇಡಗಿನೊಳು ನನ್ನ ಹೆಂಡ್ರು ನಂಜೀ 
ಮದುವೆಯಾಗಿ ಅವಳ ಕೂಡ ಕಳೆದೇ  ಒಂದು ಸಂಜಿ 
ಸಂಜಿ ನಂಜಿಯೊಡನೇ ಸಂಜೀ ... 
ಲಲಲಲಲಾ ... ಲಲಲಲಲಾ ... ಲಲಲಲಲಾ ...

ತಲಗೆ ಸೆರಗು ಕೈನಾಗ್ ದೀಪ್ ಹಿಡ್ಕೊಂಡ್ ಬಂದ್ಲು ನಂಜೀ 
ತಲಗೆ ಸೆರಗು ಕೈನಾಗ್ ದೀಪ್ ಹಿಡ್ಕೊಂಡ್ ಬಂದ್ಲು ನಂಜೀ 
ಪ್ರಾಣ ಬಂದ ರವಿಯ ವರ್ಮನ್ ಚಿತ್ರ ಎಂದೇ ಗಿಂಜಿ ನಂಜಿ ನಕ್ಳು ಹಲ್ಗಳು ಗಿಂಜಿ 
ಲಲಲಲಲಾ ... ಲಲಲಲಲಾ ... ಲಲಲಲಲಾ ... 

ಹಸರು ಗಾಜು ಹಸರು ರವಿಕೆ ತೊಟ್ಟಕೊಂಡಿದ್ದಳು ನಂಜೀ 
ಹಸರು ಗಾಜು ಹಸರು ರವಿಕೆ ತೊಟ್ಟಕೊಂಡಿದ್ದಳು ನಂಜೀ 
ಗುಂಡು ಹೊಡೆಯೋ ಗಂಡು ನಾನು ಪಕ್ಕಕ್ಕ ಹೋದೆ ಅಂಜಿ ನಂಜಿ ಕೈಯ್ಯ ಮುಟ್ಟದೇ ಅಂಜಿ 
ಲಲಲಲಲಾ ... ಲಲಲಲಲಾ ... ಲಲಲಲಲಾ ...

ಮೆಲ್ಲಗೇ ಮೂಡುಸೋಕ ಹೋದೆ ತಲೆಗೆ ಮಲ್ಗೆ ಹೂವಿನ ಹಾರ 
ಮೆಲ್ಲಗೇ ಮೂಡುಸೋಕ ಹೋದೆ ತಲೆಗೆ ಮಲ್ಗೆ ಹೂವಿನ ಹಾರ 
ಗಂಡನಾಸೆಗೆ ನಂಜಿ ನಕ್ರೇ ಹಲ್ಲು ಮುತ್ತಿನ ಹಾರ ನಂಜಿ ನಕ್ರೇ ಮುತ್ತಿನ ಹಾರ 
ಲಲಲಲಲಾ ... ಲಲಲಲಲಾ ... ಲಲಲಲಲಾ ... 

ಮೊದಲ ರಾತ್ರೀ ಗಂಡ ಹೆಂಡ್ರು ಕುಡ್ಕೊಳ್ಳಾಕ್ಕೇ ಮೊದ್ಲು 
ಅಯ್ಯೋ.. ಮೊದಲ ರಾತ್ರೀ ಗಂಡ ಹೆಂಡ್ರು ಕುಡ್ಕೊಳ್ಳಾಕ್ಕೇ ಮೊದ್ಲು 
ಆಣೆ ಮಾಡಿ ಮಾಡಿಕೊಂಡ್ಲು ಮನಸು ಅದಲು ಬದಲು ಮುಂದೇ ಐತೇ ಕಟ್ಗೆ ಮಜಲು 
ಲಲಲಲಲಾ ... ಲಲಲಲಲಾ ... ಲಲಲಲಲಾ ... 

ಅರೆರೆರೆರೇ .. ಮಂಚ ಇತ್ತು ಹೂವಿನ ಒಳಗಡೇ ನಾಚಿಕೇ ಇತ್ತು ಮನಸ್ಸಿನ ಒಳಗಡೆ 
ಮುತ್ತು ಕೊಟ್ರೇ ಮೂಗ್ ಅಡ್ಡಾ  ಬೆಳಕಿತ್ತು ನಮಗಡ್ಡ 
ಅರೆರೆರೆರೇ .. ಕತ್ಲಾದರೂ ಇತ್ತು ಹುಣ್ಣಿಮೇ ಅವಳಾದಳೂ ನಂಗೇ ಪೌರ್ಣಿಮೇ 
ನಾನಂದೇ ಮುತ್ತು ಬೇಕಾ ಅವಳಂದ್ಳು ಮಗು ಬೇಕಾ... 
ಲಲಲಲಲಾ ... ಲಲಲಲಲಾ ... ಲಲಲಲಲಾ ... 

ನಂಗೂ ಹೊಸದೂ ಅವ್ಳಗೂ ಹೊಸದೂ ಬ್ಯಾಡ್ ನಮ್ಮ್ ಫಜೀತಿ 
ನಂಗೂ ಹೊಸದೂ ಅವ್ಳಗೂ ಹೊಸದೂ ಬ್ಯಾಡ್ ನಮ್ಮ್ ಫಜೀತಿ 
ಪ್ರೀತಿ ಮಾಡಕಿತ್ತು ನಮಗೇ ಮದುವೆಯ ರಶೀತಿ ಕೇಳೋರಿಲ್ಲ ನಮ್ಮ ಫಜೀತಿ 
ಲಲಲಲಲಾ ... ಲಲಲಲಲಾ ... ಲಲಲಲಲಾ ... 

ಹೇ.. ಹೇ...  ಓಹೋ ..ಓಹೋ 
ನಮ್ಮಾಕೆಗೇ ಮೂರೂ ತಿಂಗಳೂ ನನ್ನಾಸೆಗೇ ತುಂಬಿತು ದಿನಗಳೂ 
ನನ್ನ ಹೆಂಡ್ತೀ ತಂತೀ ಕೊಟ್ಟಳೂ ಈ ಸಂಗತಿ ಕಳಿಸಿ ಕೊಟ್ಟಳೂ.. ಹ್ಹಾಂ ... 
ಅಪ್ಪಾ ನೀನು ಅಮ್ಮಾ ನಾನು ... ಅಪ್ಪಾ ನೀನು ಅಮ್ಮಾ ನಾನು ... ಹಹ್ಹಾ..ಹಹ್ಹಾ...  
ಮೇಲ್ಗೆ ನಡೆಯೇ ಮೇಲ್ಗೆ ನಡೆಯೇ ಕೊಡಗಿನೂರ ಹರಿಣಿ 
ಎಡವಿ ಬಿದ್ರೆ ಹೇರಿಗೇ ನೋವೂ ತಾಳಲಾರೇ ತರುಣೀ ನೀನು ತಾಳಲಾರೇ ತರುಣಿ 
ಅಯ್ಯೋ ಅಯ್ಯೋ ಬಯಕೆ ಆಗ್ತತಿದೆ ಹೇಯ್ ... ಅಯ್ಯೋ ಅಯ್ಯೋ ಬಯಕೆ ಆಗ್ತತಿದೆ ಹೊಯ್ 
ಹುಳಿ ಮಾವು ತಿನ್ನಬೇಕೆನ್ನಿಸಿದೇ ಹೊಯ್ ಹುಳಿ ಮಾವೂ ಹೊಯ್ ಹೊಯ್ 

ಕಾವೇರಮ್ಮಾ ಕೊಟ್ಲು ನನಗೇ ವರಗಳ ತುಂಬಿದ ಮೂಟೆ 
ಕಾವೇರಮ್ಮಾ ಕೊಟ್ಲು ನನಗೇ ವರಗಳ ತುಂಬಿದ ಮೂಟೆ 
ನಂಜಿ ಹೊಟ್ಟೆಯಾಗ್ ಬೆಳೆಯೋ ಕೂಸ್ಗೆ ನೀನೇ ನಮ್ಮ ಕ್ವಾಟೇ 
ನಂಜಿ ನಂಗೇ ಗಂಡು ಮಗೂನ ಹೆತ್ತ ಕೊಟ್ಟಳೆಂದರೇ ಕೇಳು 
ನಂಜಿ ನಂಗೇ ಗಂಡು ಮಗೂನ ಹೆತ್ತ ಕೊಟ್ಟಳೆಂದರೇ ಕೇಳು 
ಇಂಡಿಯಾನ್ ದೇಶನ್ ಮುಟ್ಟೋದನ್ ಶತ್ರು ಸಿಗದ ಹಾಕ್ತಿನೀ ಸೀಳು... ಸಿಗದ ಹಾಕ್ತಿನೀ ಸೀಳು 
ಜೈ ಹಿಂದ್ 
-----------------------------------------------------------------------------------------------------------------------

ಮುತ್ತಿನ ಹಾರ (1990) - ಹೇ.. ಯುದ್ಧಾ...
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕರು: ಎಸ್. ಪಿ. ಬಿ 

ಹೇ..ಯುದ್ಧಾ.... ಹೇ..ಯುದ್ಧಾ....ಆಆಆ....
ನೀನೇಕೆ ಬರುವೇ.. ಭೂಮಿಗೇ...
ತೋಗಲಾಚೆ ನೀನೂ ಆ ಧರೇ ಆಚೆಗೇ....
ಮಾನವನ ಮಾರಣ ಹೋಮಕೇ ಸಿದ್ದಾ.....
ಜನ ನುಂಗೋ..ಯಮಧೂತ 
ಜನ ನುಂಗೋ ರಣಧೂತ...
ನಿನಗಿನ್ನೂ... ದಾಹ ಇಂಗಿಲ್ಲಾ....

ಹೇ..ಯುದ್ಧಾ.... ಹೇ..ಯುದ್ಧಾ....ಆಆಆ....
ನೀನೇಕೆ ಬರುವೇ.. ಭೂಮಿಗೇ...
ತೋಗಲಾಚೆ ನೀನೂ ಆ ಧರೇ ಆಚೆಗೇ....
ಮಾನವನ ಮಾರಣ ಹೋಮಕೇ ಸಿದ್ದಾ.....
ಜನ ನುಂಗೋ..ಯಮಧೂತ 
ಜನ ನುಂಗೋ ರಣಧೂತ... 
ನಿನಗಿನ್ನೂ... ದಾಹ ಇಂಗಿಲ್ಲಾ....
--------------------------------------------------------------------------

No comments:

Post a Comment