403. ಸಮಯದ ಗೊಂಬೆ (1983)

ಸಮಯದ ಗೊಂಬೆ ಚಿತ್ರದ ಹಾಡುಗಳು 

  1. ಚಿನ್ನದ ಬೊಂಬೆಯಲ್ಲ ದಂತದ ಗೊಂಬೆಯಲ್ಲ 
  2. ಆಕಾಶ ಕೆಳಗೇಕೆ ಬಂತು 
  3. ಸಂಕೋಚವ ಬಿಡು 
  4. ನನ್ನ ಸರದಾರ 
  5. ಕೋಗಿಲೆ ಹಾಡಿದೆ ಕೇಳಿದೆಯಾ 
ಸಮಯದ ಗೊಂಬೆ (1983) - ಕೋಗಿಲೆ ಹಾಡಿದೆ ಕೇಳಿದೆಯ
ಸಾಹಿತ್ಯ: ಚಿ||ಉದಯ ಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿರುವವರು: ಡಾ||ರಾಜ್, ಎಸ್.ಜಾನಕಿ

ಹೆಣ್ಣು : ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
          ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
         ಹೊಸ ಹೊಸ ಭಾವ ಕುಣಿಸುತ ಜೀವ
         ಮರೆಸುತ ನೋವ ಪ್ರೇಮವ ತುಂಬಿ

ಹೆಣ್ಣು : ಅಮ್ಮನು ಕಂದನ ಕೂಗುವ ಹಾಗೆ ತಂಗಿಯು ಅಣ್ಣನ ಹುಡುಕುವ ಹಾಗೆ
         ಅಮ್ಮನು ಕಂದನ ಕೂಗುವ ಹಾಗೆ ತಂಗಿಯು ಅಣ್ಣನ ಹುಡುಕುವ ಹಾಗೆ
         ಪ್ರೀತಿಯ ಚಿಲುಮೆ ಉಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದಿ
         ಕೊಳಲಿಂದ ಹೊರಬಂದ ಸಂಗೀತದಂತೆ
        ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
         ಹೊಸ ಹೊಸ ಭಾವ ಕುಣಿಸುತ ಜೀವ
         ಮರೆಸುತ ನೋವ ಪ್ರೇಮವ ತುಂಬಿ
        ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ

ಗಂಡು : ಆಆಆಆ.... 
           ಕಾಣದ ಸಿರಿಯ ನೋಡಿದ ಹಾಗೆ ದೊರಕದ ಮಾಣಿಕ್ಯ ದೊರಕಿದ ಹಾಗೆ
           ಕಾಣದ ಸಿರಿಯ ನೋಡಿದ ಹಾಗೆ ದೊರಕದ ಮಾಣಿಕ್ಯ ದೊರಕಿದ ಹಾಗೆ
          ಬಾಳಲಿ ಬೆಳಕು ಮೂಡಿದ ಹಾಗೆ ಸಡಗರ ಬದುಕಲಿ ತುಂಬುವ ಹಾಗೆ
          ಬಾಡಿದ ಬಳ್ಳಿ ಚಿಗುರಿದ ಹಾಗೆ ಇರುಳಲಿ ಜ್ಯೋತಿ ಬೆಳಗಿದ ಹಾಗೆ
         ಸವಿಯಾಗಿ ಇಂಪಾಗಿ ಆನಂದದಿಂದ
         ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
 
ಗಂಡು : ಕಂಗಳು ಕನಸು ಕಾಣುವ ಹಾಗೆ ತಿಂಗಳ ಬೆಳಕು ತುಂಬಿದ ಹಾಗೆ
           ಹೃದಯದ ನೈದಿಲೆ ಅರಳಿದ ಹಾಗೆ ಹರುಷದ ಹೊನಲು ಹೊಮ್ಮಿದ ಹಾಗೆ
           ನೆನಪಿನ ಅಲೆಯಲಿ ತೇಲಿದ ಹಾಗೆ ನೋವೋ ನಲಿವೋ ತಿಳಿಯದ ಹಾಗೆ
          ಸಂಗೀತ ಸುಧೆಯಿಂದ ಸುಖ ನೀಡುವಂತೆ
          ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
         ಹೊಸ ಹೊಸ ಭಾವ ಕುಣಿಸುತ ಜೀವ
         ಹೊಸ ಹೊಸ ಭಾವ ಕುಣಿಸುತ ಜೀವ
        ಮರೆಸುತ ನೋವ ಪ್ರೇಮವ ತುಂಬಿ
        ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
-----------------------------------------------------------------------------------------------------------------------

ಸಮಯದ ಗೊಂಬೆ (೧೯೮೪/1984)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಡಾ.ರಾಜ್‌ಕುಮಾರ್, ಎಸ್.ಜಾನಕಿ

ಗಂಡು : ಸಂಕೋಚವ ಬಿಡು, ಗೆಳತಿಯೆ ನಿನ್ನಾಸೆಗಳೆಲ್ಲವನು,
           ಹೇಳು ನೀ ನನಗೆ ಈಗಲೇ ಎಲ್ಲವ, ನನ್ನಾಣೆ ಪೂರೈಸುವೆ
ಹೆಣ್ಣು : ಹೆಣ್ಣಲ್ಲವೆ ನಾನು, ಗೆಳೆಯನೆ  ನೂರಾಸೆಯು ಇರದೇನು,
          ಹೇಳು ನೀ ನನಗೆ ಮದುವೆಯ ಬಯಕೆಯು, ನನ್ನಲ್ಲಿ ಬರದೇನು

ಗಂಡು : ಕಣ್ಣಲಿ ಹೀಗೇತಕೆ, (ಏನು) ತೀರದ ಬಾಯಾರಿಕೆ (ಅಹ್ಹಹಾ )
           ಕೆನ್ನೆಯು ಕೆಂಪೇತಕೆ, ಚೆಂದುಟಿ ಮಿಂಚೇತಕೆ  ಹೇಳೆಯಾ ಹೆಣ್ಣೇ
ಹೆಣ್ಣು : ನನ್ನಾ ಕಣ್ತುಂಬ ತುಂಬಿ ಈ ರೂಪ  ಏನೋ ಆನಂದವು.. (ಹಹ್ಹಾ )
          ನನ್ನಾ ಕಣ್ತುಂಬ ತುಂಬಿ ಈ ರೂಪ  ಏನೋ ಆನಂದವು
         ಎದೆಯನು ತುಂಬಲು, ಮೈಯೆಲ್ಲ ಹೂವಾಗಿದೆ
         ಹೆಣ್ಣಲ್ಲವೆ ನಾನು, ಗೆಳೆಯನೆ ನೂರಾಸೆಯು ಇರದೇನು,
        ಹೇಳು ನೀ ನನಗೆ ಮದುವೆಯ ಬಯಕೆಯು, ನನ್ನಲ್ಲಿ ಬರದೇನು

ಹೆಣ್ಣು : ಲಾಲಾ ಲಲಲಲಾ ಲಲಲಲಾ  (  ಲಾಲಾ ಲಲಲಲಾ ಲಲಲಲಾ )
         ಸಂಜೆಯ ಈ ರಂಗಿಗೆ, (ಹ್ಹಹ)  ಹಕ್ಕಿಯ ಹಾರಾಟಕೆ (ಒಹೋ)
        ತಣ್ಣನೆ ತಂಗಾಳಿಗೆ, ಹೂಗಳ ಈ ಕಂಪಿಗೆ  ಸೋತೆನು ನಾನು
ಗಂಡು : ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ  ತಂದಾ ಸಂತೋಷವು
          ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ  ತಂದಾ ಸಂತೋಷವು
          ಜೊತೆಯಲೇ ಇರುವೆನು ಒಂದಾಗಿ ಎಂದೆಂದಿಗೂ
         ಸಂಕೋಚವ ಬಿಡು, ಗೆಳತಿಯೆ ನಿನ್ನಾಸೆಗಳೆಲ್ಲವನು,
        ಹೇಳು ನೀ ನನಗೆ  ಈಗಲೇ ಎಲ್ಲವ, ನನ್ನಾಣೆ ಪೂರೈಸುವೆ
ಹೆಣ್ಣು : ಹೆಣ್ಣಲ್ಲವೆ ನಾನು, ಗೆಳೆಯನೆ  ನೂರಾಸೆಯು ಇರದೇನು,
          ಹೇಳು ನೀ ನನಗೆ ಮದುವೆಯ ಬಯಕೆಯು, ನನ್ನಲ್ಲಿ ಬರದೇನು
ಇಬ್ಬರು : ಲಾಲಾಲ ಲಾಲಾಲಾ ಲಾಲಾಲ ಲಾಲಾಲಾ ಲಾಲಾಲ ಲಾಲಾಲಾ
-----------------------------------------------------------------------------------------------------------------------

ಸಮಯದ ಗೊಂಬೆ (೧೯೮೩)
ರಚನೆ: ಚಿ. ಉದಯಶಂಕರ್  ಸಂಗೀತ: ಎಂ. ರಂಗರಾವ್   ಗಾಯಕ: ಡಾ. ರಾಜಕುಮಾರ್

ಹೇ.. ಲಾರಲಾರಲಾಲ ಹ್ಹಾ..ಲಾರಲಾರಲಾಲ   ಹ್ಹಾ.. ಹಹಹ.. ಹೇ.. ಲಾರಲಾರಲಾಲ
ಹೇ... ಚಿನ್ನದ ಬೊಂಬೆಯಲ್ಲ, ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ  ಮಾನವ, ಆಡುವ ಸಮಯದ ಗೊಂಬೆ 
ಚಿನ್ನದ ಬೊಂಬೆಯಲ್ಲ, ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ, ಆಡುವ ಸಮಯದ ಗೊಂಬೆ 

ಹೇ... ಸಿಡಿಯುವ ರೋಷದಲಿ ಬಡಿಯುವ ಸೇಡಿನಲಿ ದಿನವು ಹೋರಾಟವೇ
ಹಾಂ... ನಲಿಯುವ ಪ್ರೀತಿಯಲಿ ನಗಿಸುವ ಮಾತಿನಲಿ
ಮನುಜ ಜೊತೆಯಾಗಿ ಒಂದಾಗಿ ಬಾಳುವ
ಅವನು ಸಂತೋಷ ಎಲ್ಲೆಂದೆ ಹುಡುಕುವ
ಬಿಸಿಲಲಿ ಮಳೆಯಲಿ ಚೆಳಿಯಲಿ ಬೆದರದೆ
ವಿನೋದವೋ ವಿಷಾದವೋ ಹೊಂದಿಕೊಳ್ಳುವ
ಚಿನ್ನದ ಬೊಂಬೆಯಲ್ಲ, ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ, ಆಡುವ ಸಮಯದ ಗೊಂಬೆ

ಹೇ...  ಜನಿಸಿದ ಊರೊಂದು ಬೆಳೆಯುವ ಊರೊಂದು ಬದುಕು ಉಯ್ಯಾಲೆಯು
ಹಾಂ.... ನಡೆಯುವ ನಾಡೊಂದು ಬೆರೆಯುವ ಮಣ್ಣೊಂದು
ಮನುಜ ಇರುವಲ್ಲೆ ಹಾಯಾಗಿ ಬಾಳುವ
ಸುಖದ ಕನಸಲ್ಲೇ ದಿನವೆಲ್ಲ ತೇಲುವ
ನೆನಪಿನ ಸುಳಿಯಲಿ ಮರೆವಿನ ಮರೆಯಲಿ
ವಿನೋದವೋ ವಿಷಾದವೋ ಹೊಂದಿಕೊಳ್ಳುವ
ಚಿನ್ನದ ಬೊಂಬೆಯಲ್ಲ, ದಂತದ ಬೊಂಬೆಯಲ್ಲ,
ಬುದ್ದಿ ಇರುವ ಬೊಂಬೆಯೂ ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ,
ಆಡುವ ಸಮಯದ ಗೊಂಬೆ ಮಾನವ, ಆಡುವ ಸಮಯದ ಗೊಂಬೆ
ಹ್ಹಾಆ... ಹೇಹೇ... ಹ್ಹಾಆ... ಹೇಹೇ...  ಹ್ಹಾಆ... ಹೇಹೇ...     
-----------------------------------------------------------------------------------------------------------------------

ಸಮಯದ ಗೊಂಬೆ (೧೯೮೩) - ಆಕಾಶ ಕೆಳಗೇಕೇ ಬಂತು.
ರಚನೆ: ಚಿ. ಉದಯಶಂಕರ್  ಸಂಗೀತ: ಎಂ. ರಂಗರಾವ್   ಗಾಯಕ: ಡಾ. ರಾಜಕುಮಾರ್

ಆಕಾಶ ಕೆಳಗೇಕೇ ಬಂತು... ಯಾಕ್ ಬಂತು...
ಈ ಭೂಮಿ ಮೇಲೇಕೆ ಹೋಯ್ತು.. ಯಾಕ್ ಹೋಯ್ತು
ಇದು ತಾರೆಯು ಇದು ಮೋಡವೋ
ಇದು ತಾರೆಯು ಇದು ಮೋಡವೋ
ಇಲ್ಲೇಕೆ ನೀ ಬಂದೆ ಹೇಳು ಚಿನ್ನ
ಆಕಾಶ ಕೆಳಗೇಕೇ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ

ತೇಲಾಡಿದ ಹಾಗಿದೆ ತೂರಾಡುವಾ ಹಾಗಿದೆ
ತೇಲಾಡಿದ ಹಾಗಿದೆ ತೂರಾಡುವಾ ಹಾಗಿದೆ 
ಹಿಡಿದಿಕೋ ನನ್ನ ಬಿಡದಿರು ಚಿನ್ನ 
ಹಿಡಿದಿಕೋ ನನ್ನ ಬಿಡದಿರು ಚಿನ್ನ 
ಕಾಲು ಕುಣಿದಿದೆ ಮೇಲೆ ಎಗರಿದೇ 
ಕಾಲು ಕುಣಿದಿದೆ ಮೇಲೆ ಎಗರಿದೇ 
ಮೈಯೆಲ್ಲವೂ ಹೂವಾಗಿದೆ 
ಮೈಯೆಲ್ಲವೂ ಹೂವಾಗಿದೆ 
ಬಾಯಾರಿದೇ ದಾಹ ದಾಹ ದಾಹ ನನ್ನ ಚೆಲುವೇ  
ಆಕಾಶ ಕೆಳಗೇಕೇ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ

ನೀ ನಾಚದೆ ಮೋಹಿನಿ ಬಾ ಪ್ರೀತಿಸು ಕಾಮಿನಿ 
ನೀ ನಾಚದೆ ಮೋಹಿನಿ ಬಾ ಪ್ರೀತಿಸು ಕಾಮಿನಿ 
ಕಂಗಳು ಎಲ್ಲಿ ತುಟಿಗಳು ಎಲ್ಲಿ 
ಕಂಗಳು ಎಲ್ಲಿ ತುಟಿಗಳು ಎಲ್ಲಿ 
ಒಂದು ಕಾಣದೇ ಏನೋ ತೋರದೇ 
ಒಂದು ಕಾಣದೇ ಏನೋ ತೋರದೇ 
ನನ್ನಾಸೆಯ ನೀ ಕಾಣೆಯಾ 
ನನ್ನಾಸೆಯ ನೀ ಕಾಣೆಯಾ 
ಮಾತಾಡೆಯಾ ನುಡಿ ನುಡಿ ಸವಿ ನುಡಿ ಚೆಲುವೇ 
ಆಕಾಶ ಕೆಳಗೇಕೇ ಬಂತು...ಉಹುಂ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ
ಇದು ತಾರೆಯು ಇದು ಮೋಡವೋ  
ಇದು ತಾರೆಯು ಇದು ಮೋಡವೋ
ಇಲ್ಲೇಕೆ ನೀ ಬಂದೆ ಹೇಳು ಚಿನ್ನ
ಆಕಾಶ ಕೆಳಗೇಕೇ ಬಂತು...ಓ... ಹೋ.. ಹೋ
ಈ ಭೂಮಿ ಮೇಲೇಕೆ ಹೋಯ್ತು.. ಉಹುಂ
--------------------------------------------------------------------------------------------------------------------------

ಸಮಯದ ಗೊಂಬೆ (1983) - ನನ್ನ ಸರದಾರ ಬಾರೋ ಛಲಗಾರ 
ಸಾಹಿತ್ಯ: ಚಿ||ಉದಯ ಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿರುವವರು: ಡಾ||ರಾಜ್, ಎಸ್.ಜಾನಕಿ

ಗಂಡು : ಓ.. ಓ... ಓ.. ಓ.. ಓ.. ಲಲಲ ಲಲಲ ಲಲಲ
           ಆಆಆ... ಲಲಲ ..  ಲಲಲ ಲಾ ಲಲಲ ಲಲಲ
ಹೆಣ್ಣು : ನನ್ನ ಸರದಾರ... (ಹೂಂ) ಹಾಂ.. (ಹೂಂ).. ಹಾಂ.. ಬಾರೋ ಛಲಗಾರ
          ನಿನ್ನಂಥ ಶೂರನ  (ಆ) ಹಾಂ..(ಆ) ಹಾಂ.  ಬೇರೆಲ್ಲೂ ಕಾಣೆನು
          ಬಾ ಸುಕುಮಾರ ನನ್ನ ರಾಜಕುಮಾರ
ಗಂಡು :ಗಜನಿಂಬೆ ಹಣ್ಣೇ..(ಹಾಂ..) ಹೇ  (ಹಾಂ.) ಹೇ..   ಚೆಂದುಳ್ಳಿ ಹೆಣ್ಣೇ
           ನಿನ್ನಂಥ ಚೆಲುವೆಯ (ಹಾಂ..) ಹೇ  (ಹಾಂ.) ಹೇ .ಬೇರೆಲ್ಲೂ ಕಾಣೆನು 
           ಬಾ ಸುಕುಮಾರಿ ನನ್ನ ರಾಜಕುಮಾರಿ

ಹೆಣ್ಣು : ದಿನವೂ ನಾ ನೊಂದೇ ನಿನ್ನ ನೋಡದೇ (ಹೌದಾ)
          ಬಳಲಿದೆ ರಾತ್ರಿಯಲಿ ನೀನ್  ಇಲ್ಲದೇ (ಓಹೋಹೋ)
          ನಿನ್ನ ಕೊರಗಿಂದು ಹೀಗೆ ಪಡಲಾಗಿ
          ಇಂದು ನಿನ್ನ ಕಂಡಾಗ ಎಂಥ ಚ್ಯುತಿಯಾಗಿ
ಗಂಡು : ಓ.. ಹೆಣ್ಣೇ ನಿನ್ನ ಮಾತು ಬಲು ಚೆಂದ
           ನಿನ್ನ ಈ ಸ್ನೇಹ ಪರಮಾನಂದಾ
           ಬಾ ಚಿನ್ನಾ... ಸರಸ ತರುವಾ ಸುಖವ ಪಡೆವಾ ನಗುತಾ ಬಾಳುವಾ
ಹೆಣ್ಣು : ನನ್ನ ಸರದಾರ... ಹಾಂ.. ಹಾಂ.. ಬಾರೋ ಛಲಗಾರ
ಗಂಡು : ನಿನ್ನಂಥ ಚೆಲುವೆಯ (ಹಾಂ..) ಹೇ  (ಹಾಂ.) ಹೇ .ಬೇರೆಲ್ಲೂ ಕಾಣೆನು
          ಬಾ ಸುಕುಮಾರಿ  ನನ್ನ ರಾಜಕುಮಾರಿ

ಗಂಡು : ನೋಡು ಈ ಸಂಜೆ ಸೊಗಸಾಗಿದೆ 
            ತಣ್ಣನೇ ತಂಗಾಳಿ ಚಳಿ ತುಂಬಿದೆ 
            ನಿನ್ನ ತೋಳಿಂದ ಬಳಸು ನನ್ನನ್ನು 
            ನೊಂದ ಜೀವಕ್ಕೆ ನೀಡು ಸುಖವನ್ನು 
ಹೆಣ್ಣು : ಓ.. ಗೆಳೆಯಾ ಹೀತವಾದ ನಿನ್ನ ಮಾತ 
          ಕೇಳಿ ನನ್ನ ಹೃದಯವು ಹೂವಾಯಿತು   
          ನೂರಾರು ಬಯಕೆ ಹೊಮ್ಮಿ ಆಸೆ ಚಿಮ್ಮಿ ಮನವು ಕುಣಿಯಿತು 
ಗಂಡು :ಗಜನಿಂಬೆ ಹಣ್ಣೇ..(ಹಾಂ..) ಹೇ  (ಹಾಂ.) ಹೇ..   ಚೆಂದುಳ್ಳಿ ಹೆಣ್ಣೇ
ಹೆಣ್ಣು : ನಿನ್ನಂಥ ಶೂರನ  ಹಾಂ.. ಹಾಂ.  ಬೇರೆಲ್ಲೂ ಕಾಣೆನು
          ಬಾ ಸುಕುಮಾರ ನನ್ನ ರಾಜಕುಮಾರ
ಗಂಡು : ನನ್ನ ರಾಜಕುಮಾರಿ  ಹೆಣ್ಣು : ನನ್ನ ರಾಜಕುಮಾರ 
ಗಂಡು : ನನ್ನ ರಾಜಕುಮಾರಿ  ಹೆಣ್ಣು : ನನ್ನ ರಾಜಕುಮಾರ 
ಗಂಡು : ನನ್ನ ರಾಜಕುಮಾರಿ  ಹೆಣ್ಣು : ನನ್ನ ರಾಜಕುಮಾರ 
ಇಬ್ಬರು : ಆಹ್ಹಹ್ಹಾ ಅಹ್ಹಹ್ಹ
--------------------------------------------------------------------------------------------------------------------------

No comments:

Post a Comment