405. ಮಣ್ಣಿನ ದೋಣಿ (1992)


ಮಣ್ಣಿನ ದೋಣಿ ಚಲನಚಿತ್ರದ ಹಾಡುಗಳು 
  1. ಮೇಘ ಬಂತು ಮೇಘ ಮೇಘ ಬಂತು ಮೇಘ
  2. ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ
  3. ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
  4. ನಂದು ನಿಂದು ಇಂದು ಒಂದೇ ಪೊಯಮೂ       
  5. ರಾಜನು ರಾಣಿ, ಸೇರಿದರಮ್ಮ ಮಣ್ಣಿನ ದೋಣಿ ಏರಿದರಮ್ಮ
ಮಣ್ಣಿನ ದೋಣಿ (1993) - ಮೇಘ ಬಂತು ಮೇಘ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ : ಡಾ| ರಾಜ್‍ಕುಮಾರ್


ಆ ಆಆ... ಆಅ ಆಆಆ... ಆ ಆಆ... ಆಅ ಆಆಆ... ಆ ಆಆ... ಆಅ ಆಆಆ...
ಮೇಘ ಬಂತು ಮೇಘ ಮೇಘ ಬಂತು ಮೇಘ ಮೇಘ ಬಂತು ಮೇಘ ಮೇಘ ಬಂತು ಮೇಘ
ಮೇಘ ಬಂತು ಮೇಘ ಮೇಘ ಬಂತು ಮೇಘ ನೀಲಿಯ ಮೇಘ ಮೇಘ ಮಲ್ಹಾರ ಮೇಘ
ಮೇಘ ಬಂತು ಮೇಘ     ಮೇಘ ಬಂತು ಮೇಘ ಮೇಘ ನೀಲಿಯ ಮೇಘ   ಮೇಘ ಮಲ್ಹಾರ ಮೇಘ
ಇರುಳು ಸರಿದು ಬೆಳಕು ಹರಿದು  ಕನಸು ಮುಗಿದು ಮನಸು ಜಿಗಿದು ಸರಿಗಮಪ ಪದನಿಸ ಸಂಚಾರದಲಿ  
ಮೇಘ ಬಂತು ಮೇಘ ಮೇಘ ಬಂತು ಮೇಘ ಮೇಘ ನೀಲಿಯ ಮೇಘ  ಮೇಘ ಮಲ್ಹಾರ ಮೇಘ

ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
ಬೆಳಕಿನ ಚೆಲುವೆ ಸುಳಿದಳು...ಬಳುಕುತ ಇಳೆಗೆ ಇಳಿದಳು
ಉಷೆಯೆ ರಂಗಿನಲಿ ತೃಷೆಯ ನೋಟದಲಿ ಕವಿಯ ಬಳಿಗೆ ಬಂದೂ
ಪ್ರೇಮದ ನಯನ ತೆರೆದಳು...ಕಾವ್ಯದ ಒಳಗೆ ಕುಳಿತಳೂ
ಕಲಕಲಗೊಂಡವು ತ್ರಿಪದಿ ಪದಗಳು  ಪರವಶಗೊಂಡವು ಸಕಲ ರಸಗಳು
ಇರುಳು ಸರಿದು ಬೆಳಕು ಹರಿದು  ಕನಸು ಮುಗಿದು ಮನಸು ಜಿಗಿದು ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ ಮೇಘ ಬಂತು ಮೇಘ ಮೇಘ ಕಾವ್ಯದ ಮೇಘ ...ಕನ್ಯಾ ಕವನ ಮೇಘ

(ಆಆಆಅ.. ಆಆಆ.. ಆಆಆಅ.. ಆಆಆ.)
ಸಾಸಾಸಾಸಾಸಸ ಸರಿಗಮ  ಗರಿಸನಿ ದನಿಸರಿ ಸನಿದಪ ಮಪದ ಪದನಿ
ಸಾಸಾಸಾಸಾಸಸ ಸರಿಗಮ  ಗರಿಸನಿ ದನಿಸರಿ ಸನಿದಪ ಗಮಪ ಗರಿಸ
ಸಾರಿಗರಿಗರಿ ಸರಿಸರಿ ನಿಸನಿಸನಿ  ದನಿದಪ ದನಿದಪಮಪ
ಸಾರಿಗರಿ ಗಮಪಮಪಮ ಗಮಸನಿದ ಸರಿಸನಿ ಸರಿಸನಿ
ನಿರಿನಿರಿನಿದಪ (ಪಾಮರಿಸ ) ದನಿದನಿದಪಮ (ಮಾಪದನಿಸ)
ಮಪದಪಮ (ಮಪದಪಮ) ಗಮಪಮಗ (ಗಮಪಮಗ )
ಸರಿಗರಿ (ರಿಗಮಪ ) ಗಮಪಮ (ಪದನಿಸ)
ಸರಿಗರಿ (ನಿಗಪಮ) ಗಮಪಮ (ಪದನಿಸ )
ತಕಿತಕತಜನು  (ಸರಿಗಮಪದನಿ) ತಕಿತಕತಜನು  (ರಿಗಮಪದನಿಸ)

ನಾದಮಂದಿರದ ವೇದದಿಂಚರದ ಮದುವೆ ಮಂಟಪದಲೀ
ನಲಿದವು ಲಕ್ಷದಕ್ಷತೆ..ಪಡೆದವು ಧಾನ್ಯ ಧನ್ಯತೆ
ಪ್ರೇಮ ಸಿಂಚನದ ಬಾಳ ಬಂಧನದ ಸ್ನೇಹ ಶಾಸ್ತ್ರದೊಳಗೇ
ನಡೆದವು ಸಪ್ತಪದಿಗಳು ಬಂದವು ಸಕಲ ವಿಧಿಗಳು
ಋತುವಿನ ಪಥದಲಿ ಬಾಳ ರಥವಿದೆ ಪಯಣವ ಸಗಸಲು ಪ್ರೇಮ ಜೊತೆಗಿದೆ
ಇರುಳು ಸರಿದು ಬೆಳಕು ಹರಿದು ಕನಸು ಮುಗಿದು ಮನಸು ಜಿಗಿದು ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ ಮೇಘ ಬಂತು ಮೇಘ  ಮೇಘ ಕಲ್ಯಾಣ ಮೇಘ  ಯೋಗಯೋಗದ ಮೇಘ
ಮೇಘ ಬಂತು ಮೇಘ  ಮೇಘ ಬಂತು ಮೇಘ ಮೇಘ ಕಲ್ಯಾಣ ಮೇಘ ಯೋಗ ಯೋಗದ ಮೇಘ
ಇರುಳು ಸರಿದು ಬೆಳಕು ಹರಿದು  ಕನಸು ಮುಗಿದು ಮನಸು ಜಿಗಿದು ಸರಿಗಮಪ ಪದನಿಸ ಸಂಚಾರದಲಿ ಮೇಘ...
-----------------------------------------------------------------------------------------------------------------------

ಮಣ್ಣಿನ ದೋಣಿ (1992) - ಕೋಗಿಲೆಯೇ ಕ್ಷೇಮವೇ
ಸಂಗೀತ & ಚಿತ್ರಗೀತೆ : ಹಂಸಲೇಖ ಗಾಯನ : ಎಸ್.ಜಾನಕೀ


ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ
ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ ನೈದಿಲೆಯೇ ನಿದಿರೆಯೇ  ಮಲ್ಲಿಗೆಯೇ ಮಂಪರೇ
ಏಳಿರಿ ಏಳಿರಿ ಮೇಲೆ ನೇಸರೆ ಬಂದನು ಮೇಲೆ ನೋಡಿ ಮಣ್ಣಿನ ನೀರಲ್ಲಿ  ಮುದ್ದು ಮೋರೆಯ ತೊಳೆದು ಬಂದು ಹಾಡಿ
ಕೋಗಿಲೆಯೇ ಕ್ಷೇಮವೇ  ಕಸ್ತೂರಿಯೇ ಸೌಖ್ಯವೇ ನೈದಿಲೆಯೇ ನಿದಿರೆಯೇ  ಮಲ್ಲಿಗೆಯೇ ಮಂಪರೇ

ಕಾನನದಲ್ಲಿ ಬೀಸುವ ಗಾಳಿಗೆ ಎಂದು ಆಲಸ್ಯ ಬಂದಿದೆ ಹೇಳೀ
ಬೆಟ್ಟಗಳಲ್ಲಿ ಓಡುವ ನದಿಯು ಎಂದು ದಣಿದು ನಿಂತಿದೆ ಕೇಳೀ
ರಾಗಗಳಂತೇ ಮೂಡುವ ಮೇಘಗಳಿಗೆ ಬೇಸರ ಬಂದಿತೆ ಕೇಳೀ
ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು ಬರೆನು ಎಂಬುದೆ ಹೇಳೀ
ಭುವನ ತಿರುಗಿದೆ ಓ ಓ ಓಗಗನ ಚಲಿಸಿದೇ ಕವನ ಕದೆದಿದೆ ಓಓಓಓ  ಬದುಕು ಬರೆಸಿದೆ
ಏಳಿರಿ ಏಳಿರಿ ಮೇಲೆ ನೇಸರೆ ಬಂದನು ಮೇಲೆ ನೋಡಿ ಮಣ್ಣಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ
ಕೋಗಿಲೆಯೇ ಕ್ಷೇಮವೇ  ಕಸ್ತೂರಿಯೇ ಸೌಖ್ಯವೇ  ನೈದಿಲೆಯೇ ನಿದಿರೆಯೇ  ಮಲ್ಲಿಗೆಯೇ ಮಂಪರೇ

ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ ಸೊಂಪಿನ ಜೇನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ ಹೊಟ್ಟೆಯ ಬಿರಿಯೆ ತಿಂದವು
ತಪ್ಪಲಿನಲ್ಲಿ ರಂಗಿನ ಅಚ್ಚೆ ಹೊಯ್ದ ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ ದೊಡ್ಡ ಕಣ್ಣಿನ ಮಿಂಚಿನ ಮೌನ
ಕಮಲ ಕುಳಿತೆಯ ಓ ಓ ಓ  ಅಳಿಲೆ ಅವಿತೆಯ ನವಿಲೆ ನಿಂತೇಯಾ ಓಓಓಓ ಮನಸೆ ಮರೆತೆಯ
ಏಳಿರಿ ಏಳಿರಿ ಮೇಲೆ ನೇಸರೆ ಬಂದನು ಮೇಲೆ ನೋಡಿ ಮಣ್ಣಿನ ನೀರಲ್ಲಿ  ಮುದ್ದು ಮೋರೆಯ ತೊಳೆದು ಬಂದು ಹಾಡಿ
ಕೋಗಿಲೆಯೇ ಕ್ಷೇಮವೇ  ಕಸ್ತೂರಿಯೇ ಸೌಖ್ಯವೇ ನೈದಿಲೆಯೇ ನಿದಿರೆಯೇ  ಮಲ್ಲಿಗೆಯೇ ಮಂಪರೇ
----------------------------------------------------------------------------------------------------------------------

ಮಣ್ಣಿನ ದೋಣಿ (1993) - ಮಳೆ ಮಳೆ ಮಳೆ ಮಳೆ   ಒಲವಿನ ಸುರಿಮಳೆ

ಸಾಹಿತ್ಯ ಮತ್ತು ಸಂಗೀತ - ಹಂಸಲೇಖ   ಗಾಯನ - ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಮತ್ತು ಚಿತ್ರ


ಗಂಡು : ಮಳೆ ಮಳೆ ಮಳೆ ಮಳೆ   ಒಲವಿನ ಸುರಿಮಳೆ
           ಮಳೆ ಮಳೆ ಮಳೆ ಮಳೆ  ಕನಸಿನ ಸುರಿಮಳೆ
           ಮನ ಹರಯದ ನದಿಯಾಗಿದೆ.. ಓಓಓಓಓ  ತನು ಬದುಕಿನ ಕಡಲಾಗಿದೆ
ಹೆಣ್ಣು : ಮಳೆ ಮಳೆ ಮಳೆ ಮಳೆ   ಒಲವಿನ ಸುರಿಮಳೆ
           ಮಳೆ ಮಳೆ ಮಳೆ ಮಳೆ  ಕನಸಿನ ಸುರಿಮಳೆ
           ಮನ ಹರಯದ ನದಿಯಾಗಿದೆ.. ಓಓಓಓಓ  ತನು ಬದುಕಿನ ಕಡಲಾಗಿದೆ

ಗಂಡು : ಮೊದಲನೆ ನೋಟ ಮದನ ಮಳೆ                              ಹೆಣ್ಣು : ಮೊದಲನೆ ಸ್ವರ್ಶ ರತಿಯ ಮಳೆ
ಗಂಡು : ಮೊದಲನೆ ಮಾತು ಕವನ ಮಳೆ                               ಹೆಣ್ಣು : ಮೊದಲನೆ ನಗುವು ಹುಣ್ಣಿಮೆ ಮಳೆ
ಗಂಡು : ತುಂತುರು ತುಂತುರು ಮಳೆಯಲಿ ಮೊದಲನೆ ಮಿಲನ   ಹೆಣ್ಣು : ಮಳೆಯ ಮಣ್ಣಿನ ಮದುವೆಲಿ ಬೆರೆತವು ನಯನ   
ಗಂಡು : ತೊಡಿಸಿದವು                                                       ಹೆಣ್ಣು : ಗುಡುಗುಗಳು
ಗಂಡು : ಬೆಳಗಿದವು                                                          ಹೆಣ್ಣು : ಮಿಂಚುಗಳು
ಇಬ್ಬರು : ಮಳೆಯ ಹಾಡ ಮರೆಯಬಲ್ಲವೇ?
ಗಂಡು : ಮಳೆ ಮಳೆ ಮಳೆ ಮಳೆ   ಒಲವಿನ ಸುರಿಮಳೆ
ಹೆಣ್ಣು :  ಮಳೆ ಮಳೆ ಮಳೆ ಮಳೆ  ಕನಸಿನ ಸುರಿಮಳೆ
ಗಂಡು : ಮನ ಹರಯದ ನದಿಯಾಗಿದೆ.. ಓಓಓಓಓ  ತನು ಬದುಕಿನ ಕಡಲಾಗಿದೆ

ಹೆಣ್ಣು : ಆಲಿಂಗನಕೆ ಭರಣಿ ಮಳೆ                                  ಗಂಡು : ಸಿಹಿ ಚುಂಬನಕೆ ಸ್ವಾತಿ ಮಳೆ
ಹೆಣ್ಣು : ಒಸಗೆಯ ಹಗಲು ಹಸ್ತ ಮಳೆ                             ಗಂಡು : ಬೆಸುಗೆಯ ರಾತ್ರಿ ಚಿತ್ತ ಮಳೆ
ಹೆಣ್ಣು : ಮಧುರ ಮಧುರ ಮೈತ್ರಿಯ ಮಳೆಯಲಿ ಶಯನ    ಗಂಡು :ಒಡಲ ಒಳಗೆ ಉರಿಯುವ ಬಯಕೆಯ ಶಮನ
ಹೆಣ್ಣು : ಮುಂಗಾರು                                                   ಗಂಡು : ಹಿಂಗಾರು
ಹೆಣ್ಣು : ಮಳೆ ನೀರೇ                                                  ಗಂಡು : ಪನ್ನೀರು
ಇಬ್ಬರು : ಮಳೆಯ ಹಾಡ ಮರೆಯಬಲ್ಲವೇ? 
ಹೆಣ್ಣು : ಮಳೆ ಮಳೆ ಮಳೆ ಮಳೆ   ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ  ಕನಸಿನ ಸುರಿಮಳೆ
           ಮನ ಹರಯದ ನದಿಯಾಗಿದೆ.. ಓಓಓಓಓ  ತನು ಬದುಕಿನ ಕಡಲಾಗಿದೆ
ಗಂಡು : ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ ಮಳೆ ಮಳೆ ಮಳೆ ಮಳೆ  ಕನಸಿನ ಸುರಿಮಳೆ
           ಮನ ಹರಯದ ನದಿಯಾಗಿದೆ.. ಓಓಓಓಓ  ತನು ಬದುಕಿನ ಕಡಲಾಗಿದೆ
--------------------------------------------------------------------------------------------------------------------------

ಮಣ್ಣಿನ ದೋಣಿ (1993) - ನಂದು ನಿಂದು ಇಂದು
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಮತ್ತು ಚಿತ್ರ


ಗಂಡು : ಓ.. (ಓ.. ) ಓ.. (ಓ.. ) ಓ.. (ಓ.. ) ಓ.. (ಓ.. ) ಓ.. (ಓ.. ) ಓ.. (ಓ.. ) ಓ.. (ಓ.. ) ಓ.. (ಓ.. )
ಗಂಡು : ನಂದು ನಿಂದು ಇಂದು ಒಂದೆ ಪೊಯಮೂ         ಹೆಣ್ಣು : ನಂದು ನಿಂದು ಇಂದು ಒಂದೆ ರೀದಮೂ
ಗಂಡು : ರೀದಮ ರೀದಮ ಇದೆಂಥಾ ರೀದಮ               ಹೆಣ್ಣು : ಪೊಯಮ ಪೊಯಮ ಇದೆಂಥಾ ಪೊಯಮ
ಹೆಣ್ಣು : ನಂದು ನಿಂದು ಇಂದು ಒಂದೆ ಪೊಯಮ             ಗಂಡು : ಓ.. ನಂದು ನಿಂದು ಇಂದು ಒಂದೆ ರೀದಮ
ಹೆಣ್ಣು : ರೀದಮ ರೀದಮ ಇದೆಂಥಾ ರೀದಮ                 ಗಂಡು : ಪೊಯಮ ಪೊಯಮ ಇದೆಂಥಾ ಪೊಯಮ

ಗಂಡು : ಓ.. (ಓ.. )    ಓ.. (ಓ.. )  ಓ.. (ಓ.. )  ಓ.. (ಓ.. )
ಗಂಡು : ಇದು ಮದುವೆ ಮನೆ ಪೊಯಮ ಪೊಯಮ ಪೊಯಮ       
ಹೆಣ್ಣು : ಇದು ಹೊಸಗೆ ಮನೆ ರೀದಮ ರೀದಮ ರೀದಮ
ಗಂಡು : ಇದು ಹೇಗಾಯಿತು ಸಡನ್ ಸಡನ್  ಸಡನ್      ಹೆಣ್ಣು : ಇದು ಏಕಾಯಿತೊ ಹಿಡನ್  ಹಿಡನ್ ಹಿಡನ್
ಗಂಡು : ಆಹ್ಹಾ.. ಇದೆಂಥಾ ಟಚಿಂಗ್                           ಹೆಣ್ಣು : ಮಂದಾರ ಪ್ರಹಾರ
ಹೆಣ್ಣು : ಇದೆಂಥಾ ಕಿಸ್ಸಿಂಗ್                                       ಗಂಡು : ಹೆಜ್ಜೇನ ಭೋಜನ
ಹೆಣ್ಣು : ನಂದು ನಿಂದು ಇಂದು ಒಂದೆ ಪೊಯಮೂ         ಗಂಡು : ನಂದು ನಿಂದು ಇಂದು ಒಂದೆ  ರಿದಮ್
ಹೆಣ್ಣು : ರಿದಮ್ ರಿದಮ್ ಇದೆಂಥಾ ರಿದಮ್                 ಗಂಡು :ಆಆಆ.. ಪೊಯಮ ಪೊಯಮ ಇದೆಂಥಾ ಪೊಯಮ

ಹೆಣ್ಣು : ಆಹ್ಹಾ... ಆಹ್ಹಾ...  (ಆಹ್ಹಾ... ಆಹ್ಹಾ...  )
ಗಂಡು : ಇಂದು ಇಂಪಾಗಿದೆ ಸಿಂಗಿಂಗ್ ಸಿಂಗಿಂಗ್ ಸಿಂಗಿಂಗ್ 
ಹೆಣ್ಣು : ಇಂದು ಹೊಸದಾಗಿದೆ ಇವನಿಂಗ್ ಇವನಿಂಗ್ ಇವನಿಂಗ್ 
ಗಂಡು : ಇಂದು ನಮಗಾಗಿದೆ ವೆಡ್ಡಿಂಗ್ ವೆಡ್ಡಿಂಗ್ ವೆಡ್ಡಿಂಗ್
ಹೆಣ್ಣು : ಇಲ್ಲಿ ನಮಗೆಲ್ಲಿದೆ ಬೆಡ್ಡಿಂಗ್ ಬೆಡ್ಡಿಂಗ್ ಬೆಡ್ಡಿಂಗ್
ಹೆಣ್ಣು : ಇದೆಂಥಾ ಫಿಗರ್                                            ಗಂಡು : ಅಜಂತ ಎಲ್ಲೋರಾ
ಗಂಡು : ಇದೆಂಥಾ ಪವರ್                                          ಹೆಣ್ಣು : ಶರಾವತಿ ಶರಾವತಿ
ಗಂಡು : ನಂದು ನಿಂದು ಇಂದು ಒಂದೆ ಪೊಯಮೂ         ಹೆಣ್ಣು : ಓ.. ನಂದು ನಿಂದು ಇಂದು ಒಂದೆ ರೀದಮೂ
ಗಂಡು : ರೀದಮ ರೀದಮ ಇದೆಂಥಾ ರೀದಮ               ಹೆಣ್ಣು : ಪೊಯಮ ಪೊಯಮ ಇದೆಂಥಾ ಪೊಯಮ
ಗಂಡು : ಆ.. (ಆ) .. ಆ.. (ಆ) . ಆ..(ಆ) . ಆ..(ಆ) . ಆ. (ಆ) . ಆ.. (ಆ) . ಆ.. (ಆ) . ಆ.. (ಆ) .. ಆ..(ಆ) 
---------------------------------------------------------------------------------------------------------------------

ಮಣ್ಣಿನ ದೋಣಿ (1992) - ರಾಜನು ರಾಣಿ, ಸೇರಿದರಮ್ಮ  ಮಣ್ಣಿನ ದೋಣಿ, ಏರಿದರಮ್ಮ, ಸಾಗಿದರಮ್ಮ
ಸಾಹಿತ್ಯ: ಹಂಸಲೇಖ  ಸಂಗೀತ: ಹಂಸಲೇಖ  ಹಾಡಿದವರು: ಎಸ್.ಪಿ.ಬಿ., ಚಿತ್ರಾ


ಹೆಣ್ಣು : ರಾಜನು ರಾಣಿ ಸೇರಿದರಮ್ಮ  ಮಣ್ಣಿನ ದೋಣಿ ಏರಿದರಮ್ಮ ಸಾಗಿದರಮ್ಮ
          ಮರಳಿನ ಮೇಲೆ ನಡೆಯದ ದೋಣಿ ನೀರಿನ ಮೇಲೆ ಕರಗುವ ದೋಣಿ ನಂಬಿದರಮ್ಮ
          ಕಾಣಿಸದ ತೀರವದು ಜೀವನ ಕಡಲಿನಲಿ ನಂಬಿಕೆಯ ಯಾನವಿದು ಮಣ್ಣಿನ ದೋಣಿಯಲಿ

ಹೆಣ್ಣು : ಮನೆಯ ಕೊಡುವ ರಾಜ ಮನಸು ಕೊಡೆನು ಎಂದ
          ಬರಿ ಏಕಾಂತವೆ, ಈ ಸಂಸಾರ ಒಣ ವೇದಾಂತವೆ, ಇಲ್ಲಿ ಪರಿಹಾರ
ಗಂಡು : ಕನಸು ನನಸು ನಡುವೆ ನಡೆದ ರಾಣಿ ಮದುವೆ
           ವಿಧಿ ಬಯಲಾಟದ, ಒಂದು ಪರಿಹಾಸ ಅದು ಬಿಡಿಸೇಳಲು, ಬರಿ ಅಪಹಾಸ್ಯ
           ರಾಜನು ರಾಣಿ ಸೇರಿದರಮ್ಮ ಮಣ್ಣಿನ ದೋಣಿ ಏರಿದರಮ್ಮ ಸಾಗಿದರಮ್ಮ
           ಮರಳಿನ ಮೇಲೆ ನಡೆಯದ ದೋಣಿ ನೀರಿನ ಮೇಲೆ ಕರಗುವ ದೋಣಿ ನಂಬಿದರಮ್ಮ
           ಕಾಣಿಸದ ತೀರವದು ಜೀವನ ಕಡಲಿನಲಿ ನಂಬಿಕೆಯ ಯಾನವಿದು ಮಣ್ಣಿನ ದೋಣಿಯಲಿ

ಹೆಣ್ಣು : ಲಾಲಲಲ ಲಾಲಲಲ ಲಾಲಲಲ ಲಾಲಲಲಲಾ  ಲಾಲಲಲ ಲಾಲಲಲ  ಲಾಲಲಲಲಾ
ಗಂಡು : ಹಸಿರೆ ಇರದ ಬಯಲು ಬಯಸಿ ಬರದು ನವಿಲು
            ತುಂಬು ವನರಾಜಿಯೆ, ಅವಳ ತವರೂರು ಪ್ರೀತಿ ಅನುರಾಗವೆ, ಹೆಣ್ಣ ನೆರೆಯೂರು
           ಹೂವೆ ಇರದ ಕಾಡು ರಾಗ ಇರದ ಹಾಡು ರಾಣಿ ಜೇನೆಂದಿಗೂ, ಹೂವ ತೋಟದಲಿ
           ಗೂಡು ಪಡೆದಾಗಲೆ, ಕ್ಷೇಮ ಬಾಳಿನಲಿ
ಹೆಣ್ಣು : ಆಆಆ... ರಾಜನ ರಾಣಿ ನೋಡಿದಳಮ್ಮ  ಹಿಂದಿನ ನೆನಪು ನೀಡಿದಳಮ್ಮ ಕಾಡಿದಳಮ್ಮ
         ಆಗಸದಲ್ಲಿ ಪ್ರಣಯದ ದೋಣಿ  ಏರಲು ಕೈಲಿ ಹೂವಿನ ಏಣಿ ತಂದಿಹಳಮ್ಮ
         ಜೀವನವೇ ಆಸೆಗಳ ಅಲೆಗಳ ಸರಮಾಲೆ ಯೌವನವೆ ಅದರೊಳಗೆ ಮುತ್ತಿನ ಮಣಿಮಾಲೆ
--------------------------------------------------------------------------------------------------------------------------

No comments:

Post a Comment