406. ವಿಜಯೋತ್ಸವ (1987)


ವಿಜಯೋತ್ಸವ ಚಿತ್ರದ ಹಾಡುಗಳು 
  1. ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
  2. ಮರೆಯೇಕೆ ಸೌಂದರ್ಯಕೆ  ಸೆರೆಯೇಕೆ ಚಂದ್ರನಿಗೆ 
  3. ಸರಿಗಮ ಪಗ ಪಗ ಪಗ   
  4. ಆಗಸಕೆ ನೀನೇ ಸಂಗಾತಿ
  5. ಆದಿ ಶಕ್ತಿಯೇ 
ವಿಜಯೋತ್ಸವ (1987) - ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ಎಸ್.ಪಿ.ಬಿ.

ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಗಗನದಲಿ ಬೆಳಕಿನ, ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ, ರವಿಯು ಬಂದನು ನೋಡಿ
ಸುಮಗಳು ಅರಳಿವೆ ಕಂಪನು ಚೆಲ್ಲಾಡಿವೆ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಗಗನದಲಿ ಬೆಳಕಿನ, ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ, ರವಿಯು ಬಂದನು ನೋಡಿ
ಸುಮಗಳು ಅರಳಿವೆ ಕಂಪನು ಚೆಲ್ಲಾಡಿವೆ

ದೂರದಿಂದ ತಣ್ಣನೆ ಗಾಳಿ ಮೆಲ್ಲನೆ ಬೀಸುತ ಬಂತು
ಹಾಗೆ ಹೀಗೆ ನಾಟ್ಯವನಾಡಿ ತೂಗಿತು ಬಾಳೇ ತೆಂಗು
ಆ ಬಾನಿನಲ್ಲಿ ಈ ಭೂಮಿಯಲ್ಲಿ  ಆ ಬಾನಿನಲ್ಲಿ ಈ ಭೂಮಿಯಲ್ಲಿ
ಸೊಗಸು ಕಂಡೆ ಹರುಷ ಕಂಡೆ
ಸರಸ ಕಂಡೆ ಗೆಲುವ ಕಂಡೆ
ಸುಖದ ಕನಸನು ಕಣ್ಣು ನೋಡಿತು
ಹಿಗ್ಗಿ ನಲಿಯುತ ಮನಸು ಹಾಡಿತು
ಸರೀಗ ರಿಗಾಮ ಗಮಾಪ ಮಪಾದ ಪಮಪದನಿಸ  ಸರಿಗರಿಸ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಗಗನದಲಿ ಬೆಳಕಿನ, ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ, ರವಿಯು ಬಂದನು ನೋಡಿ
ಸುಮಗಳು ಅರಳಿವೆ ಕಂಪನು ಚೆಲ್ಲಾಡಿವೆ

ಬಾಳು ಒಂದು ಬಂಡಿಯಂತೆ ಎಂದೂ ಮುಗಿಯದ ಪಯಣ
ಹಾದಿಯಲ್ಲಿ ಹೀಗೇ ಎಂದು ಹೊಸ ಹೊಸ ಜನರ ಮಿಲನ
ನಮ್ಮೂರು ಎಲ್ಲೋ ನಿಮ್ಮೂರು ಎಲ್ಲೋ
ನಮ್ಮೂರು ಎಲ್ಲೋ ನಿಮ್ಮೂರು ಎಲ್ಲೋ
ಪ್ರೀತಿ ಪ್ರೇಮ ರೋಷ ದ್ವೇಷ
ಸ್ನೇಹ ಮೋಹ ಕೋಪ ತಾಪ
ಎಲ್ಲ ಬದುಕಿನ ಕಡಲ ಅಲೆಗಳು
ನಮ್ಮ ಬಾಳಿನ ಜೀವ ಸ್ವರಗಳು
ಸರಿರಿಗ ರಿಗರಿಗ  ಗಮಗಮಮ ಪಮಪಪದ ಸರಿಗಮಪದನಿಸ ರಿಗಸ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
ಗಗನದಲಿ ಬೆಳಕಿನ, ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ, ರವಿಯು ಬಂದನು ನೋಡಿ
ಸುಮಗಳು ಅರಳಿವೆ ಕಂಪನು ಚೆಲ್ಲಾಡಿವೆ
ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ
---------------------------------------------------------------------------------------------------------------------

ವಿಜಯೋತ್ಸವ (1987) - ಮರೆಯೇಕೆ ಸೌಂದರ್ಯಕೆ  ಸೆರೆಯೇಕೆ ಚಂದ್ರನಿಗೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ರಾಜ್‌ಕುಮಾರ್ ಭಾರತಿ


ರುಕ್ ಸೆ ಪರದಾ ಹಟಾ ದೀಜಿಯೇ,  ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ   ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ   ಚಾಂದನೀ ಕೊ ಸಜಾ ದೀಜಿಯೇ
ಚಾಂದನೀ ಕೊ ಸಜಾ ದೀಜಿಯೇ    ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ

ಮರೆಯೇಕೆ ಸೌಂದರ್ಯಕೆ  ಸೆರೆಯೇಕೆ ಚಂದ್ರನಿಗೆ 
ತೆರೆಯೇಕೆ ತಾವರೆಗೆ ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ ಸೆರೆಯೇಕೆ ಚಂದ್ರನಿಗೆ

ಆ ಕಣ್ಣ ಬೆಳದಿಂಗಳೇನೋ, ಆ ಕೆನ್ನೆ ಬಣ್ಣ, ಆ ಮುಖದಂದವೇನೋ
ರಂಗಾದ ತುಟಿಯಂದವೇನೋ... ನಗುವಾಗ ಹೇಗೋ, ನೀ ನುಡಿವಾಗ ಹೇಗೋ
ನೋಡಿ ಬೆರಗಾಗಿ, ಇಂದೇ ಕವಿಯಾಗಿ
ಹಾಡಬೇಕು ಇಲ್ಲೇ ಇಂದು ಕವಿತೆಯೊಂದನು
ಮರೆಯೇಕೆ ಸೌಂದರ್ಯಕೆ  ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ  ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ....   ಸೆರೆಯೇಕೆ ಚಂದ್ರನಿಗೆ

ಮಿಂಚಲ್ಲಿ ಮರೆಯಾದ ಹೂವೋ... ಬಾನಲ್ಲಿ ಬರುವ, ಆ ಸಂಜೆ ಚೆಲುವೋ...
ಮಿಂಚಲ್ಲಿ ಮರೆಯಾದ ಹೂವೋ... ಬಾನಲ್ಲಿ ಬರುವ, ಆ ಸಂಜೆ ಚೆಲುವೋ
ಬಂಗಾರದ ಬೊಂಬೆ ಸೊಗಸೋ... ಒಲವನ್ನು ತೋರೋ ಜೇನಂಥ ಮನಸೋ
ಒಂದೂ ನಾ ಕಾಣೇ, ಬೆಡಗಿ ನನ್ನಾಣೆ
ಒಂದೇ ಒಂದು ಬಾರಿ ತೆರೆಯ ಸರಿಸಲಾರೆಯಾ
ಮರೆಯೇಕೆ ಸೌಂದರ್ಯಕೆ  ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ ಸೆರೆಯೇಕೆ ಚಂದ್ರನಿಗೆ
-----------------------------------------------------------------------------------------------------------------------

ವಿಜಯೋತ್ಸವ (1987) - ಸರಿಗಮ ಪಗ ಪಗ ಪಗ ಎಂದೆಂದೂ ನಾವು ಎಂದೆಂದೂ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಸರಿಗಮ ಪಗ ಪಗ ಪಗ    ಹೆಣ್ಣು : ರಿಗಮಪ ದಮ ದಮ ದಮ
ಗಂಡು : ಪಪಪಗ                        ಹೆಣ್ಣು : ಮಮಮರಿ
ಗಂಡು : ಗಗಗರಿ                         ಹೆಣ್ಣು : ಸನಿದಪ
ಗಂಡು : ಎಂದೆಂದೂ ನಾವು ಎಂದೆಂದೂ
           ನಮಗಾಗಿ ಹಾಡೋಣ ನಮಗಾಗಿ ಬಾಳೋಣ
           ನಮಗಾಗಿ ಹಾಡೋಣ ನಮಗಾಗಿ ಬಾಳೋಣ
ಹೆಣ್ಣು : ಇನ್ನು ಎಂದು ಪ್ರೀತಿಯೊಂದೆ ದೇವರೆನ್ನೋಣ
          ನನ್ನ ನಿನ್ನ ಪ್ರಾಣ ಎಂದು ಒಂದೇ ಎನ್ನೋಣ
ಗಂಡು : ಸರಿಗಮ ಪಗ ಪಗ ಪಗ    ಹೆಣ್ಣು : ರಿಗಮಪ ದಮ ದಮ ದಮ
ಗಂಡು : ಅರೇ .. ಪಪಪಗ              ಹೆಣ್ಣು : ಮಮಮರಿ
ಗಂಡು : ಗಗಗರಿ                         ಹೆಣ್ಣು : ಸನಿದಪ
ಗಂಡು : ಎಂದೆಂದೂ                    ಹೆಣ್ಣು : ಹೀಗೇ ಬಾಳೋಣ

ಗಂಡು : ಇಂದು ನಾನಿಲ್ಲಿ ನಿನ್ನನ್ನು ಕಂಡಾಗ ಬದುಕು ಜೇನಾಯಿತು
ಹೆಣ್ಣು :  ನನ್ನ ಆನಂದ ಹೇಳೋಕೆ ಬಂದಾಗ ಮಾತೇ ಹಾಡಾಯಿತು
ಗಂಡು : ಇಂದು ನಾನಿಲ್ಲಿ ನಿನ್ನನ್ನು ಕಂಡಾಗ ಬದುಕು ಜೇನಾಯಿತು
ಹೆಣ್ಣು :  ನನ್ನ ಆನಂದ ಹೇಳೋಕೆ ಬಂದಾಗ ಮಾತೇ ಹಾಡಾಯಿತು
ಗಂಡು : ಹೇ ನಮ್ಮ ಪ್ರೇಮ ಕಂಡು ಈಗ ಮುಳ್ಳು ಹೂವೇ ಆಯಿತು
ಹೆಣ್ಣು : ನಮ್ಮ ಸ್ನೇಹ ಕಂಡು ಸೂರ್ಯ ಚಂದ್ರನಂತೆ ಆಯಿತು
ಗಂಡು : ಸನಿಹದ ಸುಖದಲಿ ಕುಣೀದಿವೆ ಕನಸುಗಳು
ಹೆಣ್ಣು : ಸರಸದ ಸಮಯದಿ ಅರಳಿವೆ ನೆನಪುಗಳು
ಗಂಡು : ಸರಿಗಮ ಪಗ ಪಗ ಪಗ ಪಗ     ಹೆಣ್ಣು : ರಿಗಮಪ ದಮ ದಮ ದಮ ದಮ
ಗಂಡು : ಅರೇ .. ಪಪಪಗ                    ಹೆಣ್ಣು : ಮಮಮರಿ
ಗಂಡು : ಗಗಗರಿ                                ಹೆಣ್ಣು : ಸನಿದಪ
ಗಂಡು : ಎಂದೆಂದೂ                          ಹೆಣ್ಣು : ಸೇರಿ ಹಾಡೋಣ 

ಹೆಣ್ಣು : ಇನ್ನು ಊರೇನು ಕಾಡೇನು ನಾಡೇನು ನಮ್ಮ ಸಂತೋಷಕೆ
ಗಂಡು : ಯಾರ ಭಯವೇನು ಚಳಿಯೇನು ಮಳೆಯೇನು ಸರಸ ಸಲ್ಲಾಪಕೆ.. ತರರರ ತರರರ
ಹೆಣ್ಣು : ಇನ್ನು ಊರೇನು ಕಾಡೇನು ನಾಡೇನು ನಮ್ಮ ಸಂತೋಷಕೆ
ಗಂಡು : ಯಾರ ಭಯವೇನು ಚಳಿಯೇನು ಮಳೆಯೇನು ಸರಸ ಸಲ್ಲಾಪಕೆ... ಹೇ..
ಹೆಣ್ಣು : ಸದಾ ಹೀಗೆ ನಾನು ನೀನು ಜೋಡಿ ಹಕ್ಕಿಯಾಗುವ
ಗಂಡು : ಮೇಘಮಾಲೆಯನ್ನು ಮೀರಿ ಇನ್ನು ಮೇಲೆ ಹಾರುವ
ಹೆಣ್ಣು : ಜೊತೆಯಲಿ ನೀನಿರೆ ಹೊಸ ಹೊಸ ಬಯಕೆಗಳು
ಗಂಡು : ನಯನವು ಬೆರೆಯಲು ವರುಷವು ನಿಮಿಷಗಳು
ಹೆಣ್ಣು  : ಸರಿಗಮ ಪಗ ಪಗ ಪಗ      ಗಂಡು: ರಿಗಮಪ ದಮ ದಮ ದಮ
ಹೆಣ್ಣು  : . ಪಪಪಗ                       ಗಂಡು : ಮಮಮರಿ
ಹೆಣ್ಣು  : ಗಗಗರಿ                          ಗಂಡು  : ಸನಿದಪ
ಹೆಣ್ಣು  : ಎಂದೆಂದೂ  ನಾವು ಎಂದೆಂದೂ ನಮಗಾಗಿ ಹಾಡೋಣ ನಮಗಾಗಿ ಬಾಳೋಣ
ಗಂಡು : ಇನ್ನು ಎಂದು ಪ್ರೀತಿಯೊಂದೆ ದೇವರೆನ್ನೋಣ
          ನನ್ನ ನಿನ್ನ ಪ್ರಾಣ ಎಂದು ಒಂದೇ ಎನ್ನೋಣ
ಹೆಣ್ಣು  : ಸರಿಗಮ ಪಗ     ಗಂಡು : ಪಗ     ಹೆಣ್ಣು : ಪಗ
ಗಂಡು: ರಿಗಮಪ ದಮ    ಹೆಣ್ಣು : ದಮ     ಗಂಡು:  ದಮ
ಹೆಣ್ಣು  : . ಪಪಪಗ                    ಗಂಡು : ಮಮಮರಿ
ಹೆಣ್ಣು  : ಗಗಗರಿ                                ಗಂಡು  : ಸನಿದಪ
ಇಬ್ಬರು : ಲಾಲಾಲ ಲಾಲಾಲ ಲಾಲಾಲ ಲಾಲಾಲ
--------------------------------------------------------------------------------------------------------------------------

ವಿಜಯೋತ್ಸವ (1987) - ಆಗಸಕೆ ನೀನೇ ಸಂಗಾತಿ ಆ ಲತೆಗೆ ಹೂವೇ ಸಂಗಾತಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ರಾಜ್‌ಕುಮಾರ್ ಭಾರತಿ, ಚಿತ್ರಾ 


ಗಂಡು : ಆಗಸಕೆ ನೀನೇ ಸಂಗಾತಿ ಆ ಲತೆಗೆ ಹೂವೇ ಸಂಗಾತಿ
           ಓ ನಲ್ಲೇ... ನೀ.. ನನಗೆ.. ನೀ..
          ಉಲ್ಲಾಸದಿಂದ ಆನಂದ ತಂದ ಸಂಗೀತದಿಂದ ಸಂತೋಷ ತಂದ
          ಸಂಗಾತಿ ಆಗಿರುವೇ.....ಓಓಓಓಓ....
ಹೆಣ್ಣು :   ಆಗಸಕೆ ಮೋಡ ಸಂಗಾತಿ ಆ ಲತೆಗೆ ಹೂವೇ ಸಂಗಾತಿ
           ಓ ನಲ್ಲ... ನೀ.. ನನಗೆ.. ನೀ..
          ಉಲ್ಲಾಸದಿಂದ ಆನಂದ ತಂದ ಸಂಗೀತದಿಂದ ಸಂತೋಷ ತಂದ
          ಸಂಗಾತಿ ಆಗಿರುವೇ.....ಓಓಓಓಓ....

ಗಂಡು : ನಯನಗಳು ಒಂದಾಗಿರೆ ಮನಸುಗಳು ಒಂದಾಗಿರೇ
           ನಯನಗಳು ಒಂದಾಗಿರೆ ಮನಸುಗಳು ಒಂದಾಗಿರೇ
            ನೀನಾಡೋ ಮಾತೆಲ್ಲ ಮುತ್ತಂತೆ ತಾನೇ
           ನಿನ್ನಂದ ನಾ ಕಂಡೆ ಆ ಸ್ವರ್ಗವನ್ನೇ
           ಎಂದೆಂದೂ ಹೀಗೆ ಒಂದಾಗಿ ಬಾಳೋ ಆಸೆ ಕಂಡೆ ನನ್ನಲ್ಲಿ ...
ಹೆಣ್ಣು : ಓಓಓಓಓ
ಗಂಡು : ಆಗಸಕೆ ನೀನೇ ಸಂಗಾತಿ ಆ ಲತೆಗೆ ಹೂವೇ ಸಂಗಾತಿ
ಹೆಣ್ಣು :   ಓ ನಲ್ಲ... ನೀ.. ನನಗೆ.. ನೀ..
ಗಂಡು:  ಉಲ್ಲಾಸದಿಂದ ಆನಂದ ತಂದ ಸಂಗೀತದಿಂದ ಸಂತೋಷ ತಂದ
ಹೆಣ್ಣು :  ಸಂಗಾತಿ ಆಗಿರುವೇ.....ಓಓಓಓಓ....

ಹೆಣ್ಣು : ಒಲವಿನಲಿ ಓಲಾಡಿದೆ ಕನಸಿನಲಿ ತೇಲಾಡಿದೇ
          ಒಲವಿನಲಿ ಓಲಾಡಿದೆ ಕನಸಿನಲಿ ತೇಲಾಡಿದೇ
          ನನ್ನಾಸೆ  ಪೂರೈಸೆ  ಬಂದಾಗ  ನೀನು
          ಹಣ್ಣಾದೆ ಈ ನಿನ್ನ ತೋಳಲ್ಲಿ ನಾನು 
          ಪ್ರೀತಿ ಅರಿತೇ ಹೇಗೆಂದು ಇಂದೂ ಕಂಡೆ ನಲ್ಲ ನಿನ್ನಿಂದ 
ಗಂಡು  : ಓಓಓಓಓ
ಹೆಣ್ಣು : ಆಗಸಕೆ  ಮೋಡ ಸಂಗಾತಿ ಆ ಲತೆಗೆ ಹೂವೇ ಸಂಗಾತಿ
ಗಂಡು :   ಓ ನಲ್ಲೇ .. ನೀ.. ನನಗೆ.. ನೀ..
ಹೆಣ್ಣು : ಉಲ್ಲಾಸದಿಂದ ಆನಂದ ತಂದ ಸಂಗೀತದಿಂದ ಸಂತೋಷ ತಂದ
ಗಂಡು  :  ಸಂಗಾತಿ ಆಗಿರುವೇ.....
ಇಬ್ಬರು : ಓಓಓಓಓ....
--------------------------------------------------------------------------------------------------------------------------

ವಿಜಯೋತ್ಸವ (1987) - ಆದಿಶಕ್ತಿಯೇ ಮಾಹಾಶಕ್ತಿ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ರಾಜಾಸೀತಾರಾಮನ್, ಕೋರಸ್ 

ಗಂಡು : ಆದಿಶಕ್ತಿಯೇ ಸರ್ವ ಶಕ್ತಿ
            ಆದಿಶಕ್ತಿಯೇ ಸರ್ವ ಶಕ್ತಿ ದೈವ ಶಕ್ತಿ ದಿವ್ಯ ಶಕ್ತಿ
            ದೈವ ಶಕ್ತಿ ದಿವ್ಯ ಶಕ್ತಿ ಭಕ್ತಿಯಿಂದ ಬೇಡುತಿಹೆವು ಶಕ್ತಿ ನೀಡಯ್ಯಾ...
            ಬೇಗ ಬೇಗ ಬೆಟ್ಟ ಏರೋವಂತೇ ಮಾಡಯ್ಯಾ... ತಾ..ಯೇ.. ಲೋಕಮಾತೇ ..
ಕೋರಸ್ :  ಆದಿಶಕ್ತಿಯೇ ಸರ್ವ ಶಕ್ತಿ
            ಆದಿಶಕ್ತಿಯೇ ಸರ್ವ ಶಕ್ತಿ ದೈವ ಶಕ್ತಿ ದಿವ್ಯ ಶಕ್ತಿ
            ದೈವ ಶಕ್ತಿ ದಿವ್ಯ ಶಕ್ತಿ ಭಕ್ತಿಯಿಂದ ಬೇಡುತಿಹೆವು ಶಕ್ತಿ ನೀಡಯ್ಯಾ...
            ಬೇಗ ಬೇಗ ಬೆಟ್ಟ ಏರೋವಂತೇ ಮಾಡಯ್ಯಾ... ತಾ..ಯೇ.. ಲೋಕಮಾತೇ ..

ಗಂಡು : ನಿನ್ನ ಮಹಿಮೆಯನ್ನೂ ನಾವೂ ಏನೂ ಬಲ್ಲೆವು.. ಅಪ್ಪ ಅಮ್ಮ ಹೇಳುವುದನು ಕೇಳಿ ಅರಿತೆವು
            ನಿನ್ನ ಹಿರಿಮೆಯನ್ನೂ ನಾವೂ ಏನೂ ಬಲ್ಲೆವು ... ಭಕ್ತಿಗೀತೆ ಕೇಳಿ ಕೇಳಿ ಸ್ವಲ್ಪ ಅರಿತೆವು
            ನಮ್ಮಾಸೆಯನ್ನೂ ಪೂರೈಸು ಈಗ ಸಂತೋಷದಿಂದ ಹಾರೈಸು ಬೇಗ
            ನಮ್ಮ ಗೆಳೆಯನೀಗ ಇಂದು ಗೆದ್ದು ಬಂದರೇ ..
ಕೋರಸ್ :  ನಮ್ಮ ಗೆಳೆಯನೀಗ ಇಂದು ಗೆದ್ದು ಬಂದರೇ ..
ಗಂಡು : ಸಾವಿರ ತೆಂಗಿನ ಕಾಯಿ ಒಡೆವೆನೂ               
ಕೋರಸ್ :  ಆದಿಶಕ್ತಿಯೇ ಸರ್ವ ಶಕ್ತಿ
            ಆದಿಶಕ್ತಿಯೇ ಸರ್ವ ಶಕ್ತಿ ದೈವ ಶಕ್ತಿ ದಿವ್ಯ ಶಕ್ತಿ
            ದೈವ ಶಕ್ತಿ ದಿವ್ಯ ಶಕ್ತಿ ಭಕ್ತಿಯಿಂದ ಬೇಡುತಿಹೆವು ಶಕ್ತಿ ನೀಡಯ್ಯಾ...
            ಬೇಗ ಬೇಗ ಬೆಟ್ಟ ಏರೋವಂತೇ ಮಾಡಯ್ಯಾ... ತಾ..ಯೇ.. ಲೋಕಮಾತೇ ..

ಕೋರಸ್ : ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
                ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
ಗಂಡು : ಆಸೆಯಿಂದ ಆಶಾಳನ್ನು ಪ್ರೀತಿ ಮಾಡಿದ ಮದುವೆಯಾಗಿ ಮೆರೆವೆನೆಂದೂ ಕನಸು ನೋಡಿದಾ
            ಅವಳ ಅಪ್ಪ ಮಹೀಷನಂತೇ ಮೀಸೆ ತಿರುವೀದಾ... ಬೆರೆತ ಜೀವಿಗಳನು ಪಾಪಿ ದೂರ ಮಾಡಿದ
            ಈ ಜೋಡಿಯನ್ನೂ ಒಂದಾಗಿ ಮಾಡೂ ನೀನಾಗ ನಮ್ಮ ಆನಂದ ನೋಡು
            ನಮ್ಮ ಗೆಳೆಯ ವಿಜಯಶಾಲಿಯಾಗೀ ಬಂದರೇ
ಕೋರಸ್ : ನಮ್ಮ ಗೆಳೆಯ ವಿಜಯಶಾಲಿಯಾಗೀ ಬಂದರೇ     
ಗಂಡು : ನಿನ್ನನ್ನೇ ಹೊಗಳುತ ಹಾಡಿ ಕುಣಿವೇನೂ ...
ಕೋರಸ್ :  ಆದಿಶಕ್ತಿಯೇ ಸರ್ವ ಶಕ್ತಿ
            ಆದಿಶಕ್ತಿಯೇ ಸರ್ವ ಶಕ್ತಿ ದೈವ ಶಕ್ತಿ ದಿವ್ಯ ಶಕ್ತಿ
            ದೈವ ಶಕ್ತಿ ದಿವ್ಯ ಶಕ್ತಿ ಭಕ್ತಿಯಿಂದ ಬೇಡುತಿಹೆವು ಶಕ್ತಿ ನೀಡಯ್ಯಾ... ತಾ..ಯೇ.. ಲೋಕಮಾತೇ ..
            ಆದಿಶಕ್ತಿಯೇ ಸರ್ವ ಶಕ್ತಿ ದೈವ ಶಕ್ತಿ ದಿವ್ಯ ಶಕ್ತಿ
            ದೈವ ಶಕ್ತಿ ದಿವ್ಯ ಶಕ್ತಿ ... ಹ್ಹಾ.. 
--------------------------------------------------------------------------------------------------------------------------

No comments:

Post a Comment