408. ಕೌರವ (1998)

ಕೌರವ ಚಲನ ಚಿತ್ರದ ಹಾಡುಗಳು 
  1. ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ (ಚಿತ್ರಾ) 
  2. ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ (ರಾಜೇಶ್ ) 
  3. ಹಲೋ ಹಲೋ ಕೌರವ ವೇಷ 
  4. ಹುಡುಗಿರೆಂದ್ರೆ ಡೆಂಜರಪ್ಪೋ 
  5. ಏನಾಯಿತೋ ಅಂತರದೊಳಗೆ 
  6. ಅವನ್ಯಾವನೋ ರಾಜ 
  7. ಇಳಕಲ್ ಸೀರೆ ಉಟ್ಟುಕೊಂಡೂ 
  8. ಅವಳ್ಯಾವಳೋ ನಕ್ಕೂ ವನವಾಸ ಪೋಕ್ಕೂ 
ಕೌರವ (1998) - ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಹಾಡಿರುವವರು: ರಾಜೇಶ್ ಕೃಷ್ಣನ್, ಚಿತ್ರಾ 

ಹೆಣ್ಣು : ಹೇ..ಹೇಹೇ ಹೇ..ಹೇಹೇ ಏಏಏಏಏ ..
          ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ
          ಪ್ರೀತಿ ಮಾಡೋಣ ಅಂತು ಕೂಕ್ಕೂಕೂ ಕೂಡಿ ಹಾಡೋಣ ಅಂತು ಕೂಕ್ಕೂಕೂ
          ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
          ಕೂಡಿ ಹಾಡೋಣ ಅಂತು ಕೂಕ್ಕೂಕೂ
          ಮನಸಿದ್ರೆ ಮಾನವ ಮದವಿದ್ರೆ ದಾನವ ಗುಣವಿದ್ರೆ ಪಾಂಡವ
          ಇಲ್ಲದವ್ನೆ ಕೌರವ.. ಅಂತಮ್ಮ ಕೋಗಿಲೆ.. ಓಓಓಓಓಓಓ
ಗಂಡು : ಯಾವೋಳೆ ಅವ್ಳು ಹುಲಿಯೂರಲ್ಲಿ ಕೌರವ ಅನ್ನೋಳು.. ತಿಮ್ರಾ..  ಪೊಗರ
ಹೆಣ್ಣು : ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
          ಕೂಡಿ ಹಾಡೋಣ ಅಂತು ಕೂಕ್ಕೂಕೂ

ಹೆಣ್ಣು : ಹೇ ಹೇ ಹೇಹೇ ..ಹೇ ಹೇ ಹೇಹೇ
          ಅರಚಿದರೆ ಹಾಡಾಗದೂ..  ಬೈದರೆ ಬೆಳೆಯಾಗದೂ..
ಗಂಡು : ದಂಡಿಸೋನೆ ನಾಯಕ  ಅರಚಿ ಆಳೋದ್ ಅವನ ಕಾಯಕ
ಗಂಡು : ಮೂರು ಅಡಿಯ ಬಾಲ್ಕ ಅರಚದೆ ಬಲಿಯ ತುಳುದನೆಲ್ಕ
            ಭಯ ಹುಟ್ಸೋನ್ ದಾನವ  ಭಯ ಬಿಡಿಸೋನ್ ಮಾನವ
            ಭಯ ಭಕ್ತಿ ಗೌರವ ಇರದೋನೆ ಕೌರವ ಅಂತಮ್ಮ ಕೋಗಿಲೆ... ಓಓಓಓಓ ಓಓಓಓ ಓಓಓ
ಗಂಡು : ಯಾವಳೊ ಅವಳು ಕುಕುಕೂ ಅಂತ ಕಿವಿಯನು ಕೊರೆಯೋಳು.. ತಿಮ್ರ ಪೊಗರ
ಹೆಣ್ಣು : ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
          ಕೂಡಿ ಹಾಡೋಣ ಅಂತು ಕೂಕ್ಕೂಕೂ

ಕೋರಸ್ :   ಏನ್ರಣ್ಣ ನಿಮ್ ಎಮ್ಮೆ ಹಗ್ಗ ಬಿಚ್ಚ್‍ಕೊಂಡ್ತ
                 ಕೆಪ್ಪಣ್ಣ ನಿಂಗ್ ಯಾವೋನ್ ಹೇಳ್ದ ಹಂಗತ್ತ
                 ತೋಟದಲಿರ್‌ಬೌದ್ ಹುಡುಕ್ಕೊಂಡ್ ಎಳಕೊಂಡ್ ಬರ್ಲಣ್ಣ
                 ಅದುಮ್ಕೊಂಡ್ ಕುರಿಗಳ್ನ ಮೇಯಿಸ್ಕೊಂಡು ಕುಂತ್ಕಣ್ಣ
ಹೆಣ್ಣು : ಜಾಣನದು ಒಂದೇ ಮಾತು...   ಹುಂಬನದು ಮಾತೇ ಮಾತು...
ಗಂಡು : ಯಾರೇ ನೀನೂ ಛತ್ರಿ ನಾನೇ ಕಾಣದೂರ ಬಿತ್ರಿ
ಹೆಣ್ಣು : ಬಿತ್ರಿ ಗಿತ್ರಿ ಅಂದ್ರೆ ನಿನ್ನ ನಾಲ್ಗೆಗ್ ಹಾಕ್ತೀನ್ ಕತ್ರಿ
          ಹೆಣ್ಣಂದ್ರೆ ಗೌರವ ನೀಡೋನೆ ಮಾನವ ಸಭೆಯಲ್ಲಿ ಸೀರೆಯ ಸೆಳೆಸೋನೆ ಕೌರವ
          ಅಂತಮ್ಮ ಕೋಗಿಲೆ.. ಓಓಓಓಓ .. ಓಓಓಓಓ .. ಓಓಓಓಓ... ಓಓಓಓಓ ... ಓಓಓಓಓ .. ಓಓಓಓಓ
ಗಂಡು : ಯಾವೊಳೇ ಅವಳು ಕುಂಟಲಗಿತ್ತಿ ಡೈಲಾಗ್ ಹೊಡೆಯೋಳು... ತಿಮ್ರ ಪೊಗರ
ಹೆಣ್ಣು : ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
          ಕೂಡಿ ಹಾಡೋಣ ಅಂತು ಕೂಕ್ಕೂಕೂ
--------------------------------------------------------------------------------------------------------------------------

ಕೌರವ (1998) - ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಹಾಡಿರುವವರು: ರಾಜೇಶ್ ಕೃಷ್ಣನ್, ಚಿತ್ರಾ

ಗಂಡು : ಹೇ..ಹೆಹೆಹೆಹೆ ಹೇ..ಹೆಹೆಹೆಹೆ ಓಓಓಓಓ ಓಓಓಓಓಓಓ
           ಹೇ..ಹೆಹೆಹೆಹೆ ಹೇ..ಹೆಹೆಹೆಹೇ
           ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
           ಕೂಡಿ ಬಾಳೋಣ ಅಂತೂ ಕೂಕ್ಕೂಕೂ
           ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
           ಕೂಡಿ ಬಾಳೋಣ ಅಂತೂ ಕೂಕ್ಕೂಕೂ
           ಆಕಾಶ ನಕ್ತತೈತೆ ಹಕ್ಕಿಗಳು ಕರೆದೈತೆ ಹಸುರೆಲೆಗಳು ನನ್ನೋಡಿ ಪಿಸು ಪಿಸು ಪಿಸು ಅಂತೈತೇ
           ಜಗವೆಲ್ಲ ಬಂಧುಗಳೋ.... ಓಓಓಓಓ ... ಓಓಓಓಓ... ಓಓಓಓಓ..
ಹೆಣ್ಣು : ಯಾವನೋ ಅವನೂ ಮನ್ನಸಿರೋ ಮನಷ್ಯ ಕವಿತ್ವ ಹಾಡೋನು ಒನ್ಸ್ ಮೋರ್ ಒನ್ಸ್ ಮೋರ್
ಗಂಡು : ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ ಕೂಡಿ ಬಾಳೋಣ ಅಂತೂ ಕೂಕ್ಕೂಕೂ

ಗಂಡು : ಹೇಹೇಹೇ .. ಹೇಹೇಹೇಹೇ ... ಸರಿಗಮ ಗೊತ್ತಿಲ್ಲಮ್ಮಾ ಹ್ಹಾಂ ... ಹಾಡೊಂಗ್ ಆಗತೈತ್ತಮ್ಮಾ ....
ಹೆಣ್ಣು : ಇದು ಒಳ್ಳೆ ಲಕ್ಷಣ ಬರುವಾಗ ಹಾಡಬೇಕು ತಕ್ಷಣ
ಗಂಡು : ಹಾಡು ಅಂದ್ರೇ ತಕ್ಷಣ ಗೆಪ್ತಿಗೇ ಬಂತೊಂದ ಹಳ್ಳಿ ಕವನ
            ಎದೆ ತುಂಬ ಬೆಳೆದಿಂಗಳೂ ತಂದೌವಳೇ ಚಂದುಳ್ಳಿ
            ಮನಸೇಂಬೋ ಮೀನನ್ನ ಹಿಡಿದವಳೇ ಮಿಂಚುಳ್ಳಿ ಅಂತಮ್ಮ ಕೋಗಿಲೇ ... ಓಓಓ... ಓಓಓ ... ಓಓಓ
ಹೆಣ್ಣು : ಯಾವುದೋ ಅಂದು ಕಂಚಿನ ಕಂಠ ಜನಪದ ಹಾಡೋದು ಒನ್ಸ್ ಮೋರ್ ಒನ್ಸ್ ಮೋರ್
ಗಂಡು : ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ ಕೂಡಿ ಬಾಳೋಣ ಅಂತೂ ಕೂಕ್ಕೂಕೂ

ಕೋರಸ್ : ಎನ್ರಣ್ಣ.. ನಿಮ್ಮ ಎಮ್ಮೇ  ಹಗ್ಗ ಬಿಚ್ಕೊಂಡ್ತಾ ( ಹೌದ್ರಣ್ಣಾ  ನಮ್ ಎಮ್ಮೆ ಏನಾರ್  ಇಲ್ಲಿ ಬಂತ್ )
                ತೋಪೋಳಗ ಇರಬೌದು ಹೋಡ್ಕೊಂಡ್ ಎಳ್ಕೊಂಡ್ ಬರಲಣ್ಣಾ
                (ನಮ್ ಎಮ್ಮೆನ್ ನೀವೇನ್ ಹಿಡಿಯೋದ್ ಬ್ಯಾಡ್ರಣ್ಣಾ )
ಗಂಡು : ಮನಸಿಗೂ ಪೊರೆ ಬರುತೈತೇ..  ಅನ್ನೋದ ಈಗ ಅರಿವಾಗತೈತೇ ....
ಹೆಣ್ಣು : ತಪ್ಪು ಯಾವುದಂತ ತಿಳಿದರೇ ಅವನೇ ಮಾನವಂತ
ಗಂಡು : ಉಪ್ಪು ಯಾವುದಂತ ತಿಳಿಸೋರು ಇಲ್ಲದಿದ್ದರೇ ಇಂತಾ
           ತಾಯಿ  ಇದ್ರೇ ತವರಂತ ಅಷ್ಟಿಲ್ದೇ ಹೇಳ್ತಾರ್  ಗುರುವಿದ್ರೇ ವರವಂತ ಗಾದೆನ್ ಮಾಡ್ತಾರಾ
           ಕೇಳಮ್ಮ ಕೋಗಿಲೇ .. ... ಓಓಓ... ಓಓಓ ... ಓಓಓ ಓಓಓ... ಓಓಓ ... ಓಓಓ
ಹೆಣ್ಣು : ಯಾರಪ್ಪಾ ಅದು ಬುದ್ಧನ ತೂಕದ ಬುದ್ದಿಯ ಹೇಳೋರೂ  ಒನ್ಸ್ ಮೋರ್ ಒನ್ಸ್ ಮೋರ್
ಗಂಡು : ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ
           ಪ್ರೀತಿ ಮಾಡೋಣ ಅಂತು ಕೂಕ್ಕೂಕೂ ಕೂಡಿ ಬಾಳೋಣ ಅಂತೂ ಕೂಕ್ಕೂಕೂ
--------------------------------------------------------------------------------------------------------------------------

ಕೌರವ (1998) - ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಸಂಗೀತ, ಸಾಹಿತ್ಯ: ಹಂಸಲೇಖ, ಗಾಯನ: ಚಿತ್ರ, ಎಲ್.ಏನ್.ಶಾಸ್ತ್ರಿ, ಲತಾ ಹಂಸಲೇಖ, ಮುರಳಿ, ಬದ್ರಿಪ್ರಸಾದ, ಮಂಗಳ,                             ರಮೇಶ ಚಂದ್ರ,  ಸುಮಾ, ಕುಸುಮಾ 

ಕೋರಸ್ : ಉಘೇ ಎನ್ನಿರೋ ಏಳು ಮಳೆ ಮಾದನಿಗೆ ಉಘೇ ಎನ್ನಿರೋ  ಏಳು ಲೋಕದಾ ತಂದೆಗೇ
ಹೆಣ್ಣು : ಹಾಲರವಿ ಬಂದೋ ನೂರೊಂದ ಹಾಲರವಿ ಬಂದೋ
          ಹಾಲರವಿ ಮ್ಯಾಗೇ ಹೂವಿನ ದಂಡೇ ವಾಲಾಡಿ ಬಂದೋ
ಕೋರಸ್ : ಹಾಲರವಿ ಬಂದೋ ನೂರೊಂದ ಹಾಲರವಿ ಬಂದೋ
          ಹಾಲರವಿ ಮ್ಯಾಗೇ ಹೂವಿನ ದಂಡೇ ವಾಲಾಡಿ ಬಂದೋ
ಗಂಡು : ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
            ಎಲೋ ಎಲೋ ಕೌರವೇಶ ಇದೇನಪ್ಪ ಹೊಸ ವೇಷ ಎದೆಯಾಗ ಯಾರು ನೆಟ್ಟರೋ ...
ಕೋರಸ್ : ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಗಂಡು : ಪ್ರೀತಿಯಲ್ಲೇ ಯಾರು ಇಟ್ಟರೋ
ಕೋರಸ್ : ನಿನ್ನಾ ಕೋಪ ತಾಪಕೇ ಕೊಳ್ಳಿ
ಹೆಣ್ಣು : ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
            ಎಲೋ ಎಲೋ ಕೌರವೇಶ ಇದೇನಪ್ಪ ಹೊಸ ವೇಷ ಎದೆಯಾಗ ಯಾರು ನೆಟ್ಟರೋ ...
ಕೋರಸ್ : ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಹೆಣ್ಣು : ಪ್ರೀತಿಯಲ್ಲೇ ಯಾರು ಇಟ್ಟರೋ
ಕೋರಸ್ : ನಿನ್ನಾ ಕೋಪ ತಾಪಕೇ ಕೊಳ್ಳಿ
ಹೆಣ್ಣು : ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಕೋರಸ್ : ಹಾಲರವಿ ಬಂದೋ ನೂರೊಂದ ಹಾಲರವಿ ಬಂದೋ
          ಹಾಲರವಿ ಮ್ಯಾಗೇ ಹೂವಿನ ದಂಡೇ ವಾಲಾಡಿ ಬಂದೋ

ಗಂಡು : ಖಾಲಿ ದೋಸೆಗೆ ಬೆಣ್ಣೆ ಮಸಾಲೆ ಬಿತ್ತಾ ... 
ಹೆಣ್ಣು : ಹಳೇ ಬಂಡಿಗೆ ಹೊಸ ಚಿತ್ತಾರ ಬಂತಾ 
ಗಂಡು : ಬಿರುಕು ಬಿಟ್ಟಿದ್ದ ಕೊಡೆ ರಿಪೇರಿ ಆಯ್ತಾ ದ್ಯಾವರ ಏರಿಕೊಂಡು ದೆವ್ವಾನ ತಿಂತಾ 
ಹೆಣ್ಣು : ಸೀರೆಯ ಅಂಚು ಹಿಡಿಯೋ ರಾಯ ಸ್ವರ್ಗದ ದಾರಿ ಸಿಗತೈತೇ ಅಂತ ಯಾರೋ ಊದಿದಂಗ ಕಾಣತೈತೆ .. 
          ಅಂತ ಯಾರೋ ಊದಿದಂಗ ಕಾಣತೈತೆ .. 
ಗಂಡು : ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
            ಎಲೋ ಎಲೋ ಕೌರವೇಶ ಇದೇನಪ್ಪ ಹೊಸ ವೇಷ
ಹೆಣ್ಣು : ಎದೆಯಾಗ ಯಾರು ನೆಟ್ಟರೋ ...
ಕೋರಸ್ : ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಹೆಣ್ಣು : ಪ್ರೀತಿಯಲ್ಲೇ ಯಾರು ಇಟ್ಟರೋ
ಕೋರಸ್ : ನಿನ್ನಾ ಕೋಪ ತಾಪಕೇ ಕೊಳ್ಳಿ
ಹೆಣ್ಣು : ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ

ಕೋರಸ್ : ಹಾಲರವಿ ಬಂದೋ ನೂರೊಂದ ಹಾಲರವಿ ಬಂದೋ
               ಹಾಲರವಿ ಹೊರ ಶಿರಚಂದ್ರಿಕೆಗೊಳ್ ನಲಿದಾಡಿ ಬಂದೋ
ಗಂಡು : ಉರಿಸಿಂಗಿ ಮೂತಿಮ್ಯಾಲೆ ಮತ್ತೊಂದ ಕುಂತಾ 
ಹೆಣ್ಣು : ಗದರುವ ನಾಲಿಗೇಲಿ ಗಣಪತಿ ನಿಂತ 
ಗಂಡು : ಒದೆಯೋ ಪಾದದಲಿ ಪ್ರಲ್ಹಾದ ಕುಂತ ಉರಿಯೋ ಕಣ್ಣಿನಲಿ ಶ್ರೀ ಕೃಷ್ಣ ನಿಂತ 
ಹೆಣ್ಣು : ಪ್ರೀತಿಯ ರಾಜ ಬೀದೀಲಿ ಕೋಟಿ ದೈವಗಳೆಲ್ಲಾ ಬರ್ತಾರೇ .. ಬಂದು ಪಾದ ತೊಳೆದು ಕರಿತಾರೇ 
          ಬಂದು ಪಾದ ತೊಳೆದು ಕರಿತಾರೇ 
ಗಂಡು : ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
            ಎಲೋ ಎಲೋ ಕೌರವೇಶ ಇದೇನಪ್ಪ ಹೊಸ ವೇಷ ಎದೆಯಾಗ ಯಾರು ನೆಟ್ಟರೋ ...
ಕೋರಸ್ : ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಗಂಡು : ಪ್ರೀತಿಯಲ್ಲೇ ಯಾರು ಇಟ್ಟರೋ
ಕೋರಸ್ : ನಿನ್ನಾ ಕೋಪ ತಾಪಕೇ ಕೊಳ್ಳಿ 
ಹೆಣ್ಣು : ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಕೋರಸ್ : ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
ಹೆಣ್ಣು : ಕೂಕ್ಕೂಕೂ ಕೂಕ್ಕೂಕೂ (ಕೂಕ್ಕೂಕೂ)  ಕೂಕ್ಕೂಕೂ ಕೂಕ್ಕೂಕೂ (ಕೂಕ್ಕೂಕೂ)  
           ಪ್ರೀತಿ ಮಾಡೋಣ ಅಂತು  ಕೂಕ್ಕೂಕೂ (ಕೂಕ್ಕೂಕೂ) 
ಕೋರಸ್ : ಪ್ರೀತಿ ಮಾಡೋಣ ಅಂತು ಕೂಕ್ಕೂಕೂ (ಕೂಕ್ಕೂಕೂ) 
ಎಲ್ಲರು : ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಕೂಕ್ಕೂಕೂ ಪ್ರೀತಿ ಮಾಡೋಣ ಅಂತು ಕೂಕ್ಕೂಕೂ 
           ಪ್ರೀತಿ ಮಾಡೋಣ ಅಂತು ಕೂಕ್ಕೂಕೂ
--------------------------------------------------------------------------------------------------------------------------

ಕೌರವ (1998) - ಹುಡುಗಿರಂದ್ರೆ ಡೆಂಜರಪ್ಪೋ ಹುಷಾರಾಗಿರಪ್ಪೋ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಹಾಡಿರುವವರು: ಎಲ್.ಏನ್.ಶಾಸ್ತ್ರಿ

ಓಯ್ ಓಯ್ ಓಯ್ ಓಲೇಲೇ  ಒಲೇ ಒಲೇ 
ಓಯ್ ಓಯ್ ಓಯ್ ಓಲೇಲೇ  ಒಲೇ ಒಲೇ ಒಲೇ ಒಲೇ ಒಲೇ ಒಲೇ 
ಹುಡುಗಿರೆಂದ್ರೇ...  ಹುಡುಗಿರೆಂದ್ರೇ...  
ಹುಡುಗಿರೆಂದ್ರೇ ಡೆಂಜರಪ್ಪೋ ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ 
ಹುಡುಗಿರೆಂದ್ರೇ ಡೆಂಜರಪ್ಪೋ ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ 
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ ಹೆಣ್ಣ ನಂಬಿದರೇ ದಂಡ ತಲೆದಂಡ 
ಹುಡುಗಿರೆಂದ್ರೇ ಡೆಂಜರಪ್ಪೋ ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ 

ತಿನ್ನು ಅಂದ್ಳು ತಿನ್ನು ಕಬ್ಬಿನ ಜಲ್ಲೆನ ಅಂದ್ಳು ತಿನ್ನಕ್ ಹೋದ್ರೇ ನಮ್ಗೆ ಖೆಡ್ದಾ ಆಪರೇಷನ್ನು 
ಕಳಕೊಂಡೇ ಕಳಕೊಂಡೇ ನಾನು ನಿನ್ನ ತಬ್ಬಿಕೊಂಡೇ ನಿನ್ನಿಂದ ಅವಳನ್ನು ಮರೆತು ಜೀವ ಉಳಿಸಿಕೊಂಡೇ 
ಕಳಕೊಂಡೇ ಕಳಕೊಂಡೇ ಹೊಟ್ಟೆ ತುಂಬಾ ಹೀರಿಕೊಂಡೇ ಮೋಹಿನಿ ಪಾಶಿಂದಾ ಎಂಗೋ ಮೇಲ್ಗೆ ಜಾರಿಕೊಂಡೇ 
ಹುಡುಗಿರೆಂದ್ರೇ...  ಹುಡುಗಿರೆಂದ್ರೇ... ಹುಡುಗಿರೆಂದ್ರೇ ಪಾಯಜಾನಪ್ಪೋ ಬಾಳ ಹುಷಾರಪ್ಪೋ 
ಪಾನಕ ಅಂತ ಕುಡಿದ್ರೆ ಗುಂಡಿಗೇ ಪಂಚರ ಆಗತೈತಪ್ಪೋ 
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ ಹೆಣ್ಣ ನಂಬಿದರೇ ದಂಡ ತಲೆದಂಡ 
ಹುಡುಗಿರೆಂದ್ರೇ ಡೆಂಜರಪ್ಪೋ ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ 

ಎಲೆ ಅಡಿಕೆ ಸುಣ್ಣ  ತತ್ತಾ ತಿಂತೀನ್ ಅಂದ್ಲು..  ಪ್ರೀತಿ ಬೆರೆಸಿ ಕೊಟ್ರೇ ಅಗದು ಅಗದು ಉಗುದ್ಲೂ 
ಕಳಕೊಂಡೇ ಕಳಕೊಂಡೇ ನಾನು ನಿನ್ನ ನೆಚ್ಚಿಕೊಂಡೇ ನಿನ್ನಿಂದ ಗುಂಡಿಗೇನಾ ಕಲ್ಲು ಬಂಡೇ ಮಾಡಿಕೊಂಡೆ 
ಕಳಕೊಂಡೇ ಕಳಕೊಂಡೇ ನಾನು ನಿನ್ನ ಹೀರಿಕೊಂಡೇ ಅವಮಾನ ಅಪವಾದ ಎಲ್ಲಾ ನುಂಗಿ ಸಹಿಸಿಕೊಂಡೇ 
ಹುಡುಗಿರೆಂದ್ರೇ...  ಹುಡುಗಿರೆಂದ್ರೇ... ಹುಡುಗಿರೆಂದ್ರೇ ಉಸುರವಳ್ಳಿ ಹುಷಾರಾಗಿರಪ್ಪೋ 
ಘಳಿಗೆಗೊಂದು ಬಣ್ಣಾ ತೋರ್ಸಿ ಪಂಕ್ ಮಾಡ್ತಾರಪ್ಪೋ 
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ ಹೆಣ್ಣ ನಂಬಿದರೇ ದಂಡ ತಲೆದಂಡ 
ಹುಡುಗಿರೆಂದ್ರೇ ಡೆಂಜರಪ್ಪೋ ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ 
--------------------------------------------------------------------------------------------------------------------------

ಕೌರವ (1998) - ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೇ  
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಹಾಡಿರುವವರು: ಚಿತ್ರ, ರಮೇಶ ಚಂದ್ರ 

ಗಂಡು : ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೇ ಏನೈತೋ... ಓಓಓಓಓ (ಓಓಓಓಓ )
            ಚಿಗುರೈತೋ ಮಾಗೈತೋ ಅರಳೈತೋ ಮುದುಡೈತೋ
            ಪ್ರೀತಿ ರಸಬಳ್ಳಿ ಎಂಬುದೂ ಎಲೈತೋ (ಓಓಓಓಓ ) ಅಲ್ಲಿ ಬಾಳ ಮೊಗ್ಗು ಎಂದೂ ನಗತೈತೋ
            ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೇ ಏನೈತೋ... ಓಓಓಓಓ (ಓಓಓಓಓ )

ಕೋರಸ್ :  ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ ಲಾಲಾ
ಗಂಡು : ಪ್ರೀತಿ ಅಂದ್ರೆ ಗೋಡೆಗೆ ಎಸಿಯೋ ಚೆಂಡು ಅಂತಾರೆ ಪುಟಿಯೋ ಚೆಂಡು ಅಂತಾರೇ
            ಪ್ರೀತಿ ಅಂದ್ರೆ ಕೂಸಿಗೆ ಕಲಿಸೋ ಮಾತು ಅಂತಾರೇ .. ಮುದ್ದಿನ ಮಾತು ಅಂತಾರೇ .. ಓಓಓಓ ..
             ಪ್ರೀತಿ ಅಂದ್ರೇ ಗಿರಿಗೋಳ ಮುಂದಿನ ಧ್ವನಿಗೋಳ್ ಅಂತಾರೇ ಪ್ರತಿಧ್ವನಿಗೊಳ ಅಂತಾರೇ ..
            ದೀಪದಿಂದ ದೀಪ ಹಚ್ಚೋ ಜ್ಯೋತಿ ಅಂತಾರೆ ಪ್ರೀತಿ ಜ್ಯೋತಿ ಅಂತಾರೇ
             ನಾವು ಕೊಟ್ಟರೆ ತಾನು ಕೊಡುವೆನು ಆಹಾಹಾ ..ಆಹಾಹಾ ..
            ನಾವು ಕೊಟ್ಟರೇ ತಾನು ಕೊಡುವೆನು ಅಂತದೇ ಮನಸಾರೇ ..
           ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೇ ಏನೈತೋ
            ಓಓಓಓಓ (ಓಓಓಓಓ )ಓಓಓಓಓ (ಓಓಓಓಓ )

ಕೋರಸ್ : ತಂದನನ ತಂದನನ ತಂದನನ ತಂದನನ ತಂದನನ ತಂದನನ ತಂದನನ
               ತಂದನನ ತಂದನನ ತಂದನನ ತಂದನನ ತಂದನನ ತಂದನನ ತಂದನನ
ಗಂಡು : ಎಲ್ಲರೆದೆಯಲ್ಲೂ ಇರುತೈತೆ ಪ್ರೇಮ ಪರಸಂಗ ಒಂದು ಪ್ರೇಮ ಪರಸಂಗ
            ಕೂಗದೇನೇ ಹೋಗೋ ಮದುವೇಲಿ ಆಗೋ ಮುಖಭಂಗ ಒಲ್ಲದ ಪ್ರೀತಿ ರಸಭಂಗ
            ನಾವೂ ಹುಟ್ಟಿದ ಮ್ಯಾಲೇ ಸಾವೂ ಬಂದೇ ಬರತೈತೇ ಬ್ಯಾಡ್ ಅಂದ್ರೇ ನಗತೈತೇ
            ಪ್ರೀತಿ ಹುಟ್ಟಿದ ಮ್ಯಾಲೇ ಒಳಗೆ ನಗ್ತಾ ಇರತೈತೇ ಸಾಯೋವರೆಗೂ ಕಾಯುತೈತೇ
            ನಕ್ಕದಿದ್ರೂ ಪ್ರಿತಿಸೋದೇ ಹಾ.. ಹಾ.. ಹಾ... ಹಾ.....
            ನಕ್ಕದಿದ್ರೂ ಪ್ರಿತಿಸೋದೇ ಪ್ರೀತಿಯ ಗುಣವಂತೇ
            ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೇ ಏನೈತೋ... ಓಓಓಓಓ (ಓಓಓಓಓ )
            ಚಿಗುರೈತೋ ಮಾಗೈತೋ ಅರಳೈತೋ ಮುದುಡೈತೋ
            ಪ್ರೀತಿ ರಸಬಳ್ಳಿ ಎಂಬುದೂ ಎಲೈತೋ (ಓಓಓಓಓ ) ಅಲ್ಲಿ ಬಾಳ ಮೊಗ್ಗು ಎಂದೂ ನಗತೈತೋ
            ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೇ ಏನೈತೋ... ಓಓಓಓಓ (ಓಓಓಓಓ )
--------------------------------------------------------------------------------------------------------------------------

ಕೌರವ (1998) - ಅವನ್ಯಾವನೋ ರಾಜ ನಳನೆಂಬ ಭೋಜ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಹಾಡಿರುವವರು: ಚಿತ್ರ, ರಾಜೇಶ್ ಕೃಷ್ಣನ್, ಚಿತ್ರಾ

ಅವನ್ಯಾವನೋ ರಾಜ ನಳನೆಂಬ ಭೋಜ ವಿಧಿ ಎಂಬ ಕೈಗೊಂಬೇ ಆದ್ನಂತೆ ಹೇಹೇಹೇಹೇಹೇ
ಚಿತ್ರಾದ ಹಂಸ ಹಾರಾವ ನುಂಗಿ ಅಪವಾದ ತಾನೇ ಹೊತ್ತನಂತೆ
ಹೆಣ್ಣಿಂದ ನಾಕಾ ಹೆಣ್ಣಿಂದ ನರಕ ಅಂದೋನ ಯಾವನೋ ಜೋಗಯ್ಯ
ಇದು ಏನೋ ಬಾಳುವೇ ಹೋಗಯ್ಯ ..

ಅವನ್ಯಾವನೋ ಶಿಷ್ಯ ಗುರು ಕಾಣಿಕೆ ವಿಷ್ಯ ಹೇಳಲೂ ಬೆರಳೇ ಕೊಟ್ಟನಂತೇ ... ಹೇಹೇಹೇಹೇಹೇ ...
ಸತ್ಯಕ್ಕೆ ಬೆಳೆಯ ಮಾನಕ್ಕೆ ತಲೆಯ ನೀಡುವೆ ಕೇಳಿ ಅಂದ್ರಂತೇ .. ಹೇಹೇಹೇಹೇ
ಅನುಮಾನ ಬೆಂಕಿ ಅಭಿಮಾನದಂಗೇ ಅಂದೋನ ಯಾವನೋ ಜೋಗಯ್ಯ ಇದು ಆರೋ ಬೆಂಕಿಯೇ ಹೇಳಯ್ಯಾ...

ಅವಳ್ಯಾವಳೋ ನಾರಿ ಕುರುಡು ಗಾಂಧಾರಿ ಕಿವಿಯಿಂದ ನ್ಯಾಯಾನಾ ಕಂಡಳಂತೇ
ಕುರುಡಾದರೇನೂ ಕಿವುಡಾದರೇನೂ ಪ್ರಮಾಣಿಸಿ ತಿಳಿಯೋದೇ ಮರೆತಳಂತೇ ... ಹೇಹೇಹೇಹೇ ..
ಹೆಣ್ಣೇ ಛಲ ಹೆಣ್ಣೇ ಚಂಚಲ ಅಂದೋನ್ ಯಾವನೋ ಜೋಗಯ್ಯ ಇದು ಹೇಳೋ ನ್ಯಾಯವೋ ಹೋಗಯ್ಯ ...
--------------------------------------------------------------------------------------------------------------------------

ಕೌರವ (1998) - ಇಳಕಲ್ ಸೀರೆ ಉಟ್ಕೊಂಡು ಮೊಣಕಾಲ ಗುಂಟ ಎತ್ಕೊಂಡು ಏರಿ ಮೇಲೇ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಹಾಡಿರುವವರು: ಚಿತ್ರ, ಎಲ್.ಏನ್.ಶಾಸ್ತ್ರಿ ಕೋರಸ್ 

ಗಂಡು : ಇಳಕಲ್ ಸೀರೆ ಉಟ್ಕೊಂಡು ಮೊಣಕಾಲ ಗುಂಟ ಎತ್ಕೊಂಡು ಏರಿ ಮೇಲೇ ಏರಿ ಬಂದ್ಲು ನಾರೀ
            ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಕೋರಸ್ : ಲಲ್ಲಲಲ.. ಲಲ್ಲಲಲ.. ಲಲ್ಲಲಲ.. ಲಲ್ಲಲಲ.. ಲಲ್ಲಲಲ.. ಲಲ್ಲಲಲ.. ಲಲ್ಲಲಲ.. ಲಲ್ಲಲಲ..
ಗಂಡು : ಇಳಕಲ್ ಸೀರೆ ಉಟ್ಕೊಂಡು ಮೊಣಕಾಲ ಗುಂಟ ಎತ್ಕೊಂಡು
            ಏರಿ ಮೇಲೇ ಏರಿ ಬಂದ್ಲು ನಾರೀ ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
            ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ 
ಕೋರಸ್ : ಹೈಲೇಸಾ ಐಸಾ ಹೈಲೇಸಾ  ಹೈಲೇಸಾ ಐಸಾ ಹೈಲೇಸಾ  ಹೈಲೇಸಾ ಐಸಾ ಹೈಲೇಸಾ  

ಗಂಡು : ನಾಟಿಯ ಹೊಲದ ಕಳೆ ತೆಗೆದೆಳೋ ಓಓಓಓಓ ..          ಹೆಣ್ಣು : ಬಾಳ ಬಂಗಾರ ನೀನೂ 
ಗಂಡು : ಹೊಲಕೆ ತಾನೇ ಬೇಲಿಯಾದಳೋ..ಓಓಓಓಓ             ಹೆಣ್ಣು : ಹಣೆಯ ಸಿಂಗಾರ್ ನೀನೂ
ಗಂಡು : ಖಂಡ್ಗ ಖಂಡ್ಗ ಕನಸು ಬೆಳೆದಳೋ.. ಓಓಓಓ ಓ             ಹೆಣ್ಣು : ನಿನ್ನಾ ಕೈಲಾಡೋ ಬೊಂಬೆ
ಗಂಡು : ಎದೆಯ ಕಣಜ ತುಂಬಸೇ ಬಿಟ್ಟಳೋ.. ಓಓಓಓಓ          ಹೆಣ್ಣು :  ನಾನಯ್ಯಾ ಬೊಂಬೆ ನಾನಯ್ಯಾ
ಗಂಡು : ಪುಂಗಿಯ ಬಳಿ ನಾಗ ಅದೇನು ನಾನೀಗ ಏನೋ ಗುಂಗೂ ಗೌರಿ ಬಳಿಯಲೀ...
            ಮನಸಿಗೇ ಸ್ನಾನ ಮಾಡ್ಸಿದ್ದಳ್ಳು (ಹೂಂಹೂಂಹೂಂ ) ಪ್ರೀತಿಯ ಅಂಗಿ ತೊಡಿಸಿದ್ದಿಳ್ಳು  (ಹೂಂಹೂಂಹೂಂ )
            ಇಳಕಲ್ ಸೀರೆ ಉಟ್ಕೊಂಡು ಮೊಣಕಾಲ ಗುಂಟ ಎತ್ಕೊಂಡು
            ಏರಿ ಮೇಲೇ ಏರಿ ಬಂದ್ಲು ನಾರೀ ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
            ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ 
ಕೋರಸ್ : ಹೈಲೇಸಾ ಐಸಾ ಹೈಲೇಸಾ  ಹೈಲೇಸಾ ಐಸಾ ಹೈಲೇಸಾ  ಹೈಲೇಸಾ ಐಸಾ ಹೈಲೇಸಾ  
               ತಾನನನಾ ತನನನಾ ನನನಾ ನನನಾ ನಾನನನಾ ನನನಾ ನನನನಾ ... 

ಹೆಣ್ಣು  : ಒಂದೇ ಕನಿಕೆಯಾಗಿ ಊಟ.. ಓಓಓಓಓ             ಗಂಡು : ನೋಟದಾಗೇ ನಗೆಯ ಮೀಟಿ 
ಹೆಣ್ಣು : ಇಬ್ರ ಬಾಯ್ ಒಂದೇ ನೋಟ್ .. ಓಓಓಓಓ         ಗಂಡು : ಮೋಜಿನಾಗೇ ಎಲ್ಲೆಯ ಧಾಟಿ 
ಹೆಣ್ಣು : ಬೇಗ ಬಿತ್ತೋ ಮದುವೇ ಬೆಸುಗೆ ... ಓಓಓಓಓ      ಗಂಡು : ಮೋಡಿಯ ಮಾಡಿದೋಳ್ 
ಹೆಣ್ಣು : ಇಬ್ರ ಇಷ್ಟಕ್ಕೊಂದೇ ಹಾಸಿಗೇ .. ಓಓಓಓಓ           ಗಂಡು : ಪರಸಂಗ ಐತೇ   
ಹೆಣ್ಣು : ಕನಸಲಿ ಬಾಳತ್ವಿನಿ ಮನಸಿಗೇ ಕಾಯ್ತೀವಿನೀ ತಾಳಿಗಿಷ್ಟೂ ಚಿನ್ನ ತಾರಯ್ಯಾ..
          ಉಕ್ಕೂತೀನಿ ನೀನ್ ಮನೆಗೇ ಹಾಲಾಗಿ ಇರ್ತೀನಿ ನಿನ್ನ ಕುಡಿಗೇ ತಾಯಾಗೀ
ಗಂಡು : ಇಳಕಲ್ ಸೀರೆ ಉಟ್ಕೊಂಡು ಮೊಣಕಾಲ ಗುಂಟ ಎತ್ಕೊಂಡು
            ಏರಿ ಮೇಲೇ ಏರಿ ಬಂದ್ಲು ನಾರೀ ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
            ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ 
ಕೋರಸ್ : ಹೈಲೇಸಾ ಐಸಾ ಹೈಲೇಸಾ  ಹೈಲೇಸಾ ಐಸಾ ಹೈಲೇಸಾ  ಹೈಲೇಸಾ ಐಸಾ ಹೈಲೇಸಾ  
--------------------------------------------------------------------------------------------------------------------------

ಕೌರವ (1998) - ಅವಳ್ಯಾವಳೋ ನಕ್ಕೂ ವನವಾಸ ಪೋಕ್ಕೂ ಕೌರವನ ಮಂಡಿ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಹಾಡಿರುವವರು: ಚಿತ್ರ, ಬಿ.ಜಯಶ್ರೀ 

ಅವಳ್ಯಾವಳೋ ನಕ್ಕೂ ವನವಾಸ ಪೋಕ್ಕೂ ಕೌರವನ ಮಂಡಿ ಮುರಿದಳಂತೇ ಹೇಹೇಹೇಯ್ ...
ಅವಳ್ಯಾವಳೋ ಅತ್ತೂ ಅಪವಾದ ಹೊತ್ತೂ ರಾವಣನ ವಂಶ ತೊಳೆದಳಂತೇ.. ಹೇಹೇಹೇಯ್
ಹೆಣ್ಣಿಂದ ನಾಕ್ ಹೆಣ್ಣಿಂದ ನರಕ ಅಂದಯಾವನೋ ಜೋಗಯ್ಯಾ .. ಇದು ಏನೋ ಬಾಳುವೇ ಹೋಗಯ್ಯಾ
ಹೆಣ್ಣಿಂದ ನಾಕ್ ಹೆಣ್ಣಿಂದ ನರಕ ಅಂದಯಾವನೋ ಜೋಗಯ್ಯಾ .. ಇದು ಏನೋ ಬಾಳುವೇ ಹೋಗಯ್ಯಾ
ಅವಳ್ಯಾವಳೋ ನಕ್ಕೂ ವನವಾಸ ಪೋಕ್ಕೂ ಕೌರವನ ಮಂಡಿ ಮುರಿದಳಂತೇ ಹೇಹೇಹೇಯ್ ...
ಅವಳ್ಯಾವಳೋ ಅತ್ತೂ ಅಪವಾದ ಹೊತ್ತೂ ರಾವಣನ ವಂಶ ತೊಳೆದಳಂತೇ.. ಹೇಹೇಹೇಯ್   

ಊರಾ ಮುರುದು ಉಡದಾರ್ ಹರಿದು ಕಡಗ ಕಳೆದರೂ ತರಬೋದು 
ಬೊಕ್ಕಸ ಬಳದೂ ಭಂಡಾರ ಅಳೆದೂ ರಾಜ್ಯವ ಕಳೆದರೂ ಗೆಲ್ಲಬಹುದೂ 
ಜನುಮಕೇ ಒಮ್ಮೇ ದಕ್ಕೋನಮ್ಮಾ ಅಮ್ಮನ ಕಳೆದು ತರಬಹುದೇ ಕಂದ ಅಮ್ಮನಿಲ್ಲದೇ ಇರಬಹುದೇ  
ಅವನ್ಯಾವನೋ ಪುತ್ರ ಗುರುಪಿತೃ ಹೊತ್ತ ತಾಯಿಯ ತಲೆಯಾ ಕಡಿದ್ನಂತೇ .. ಹೇಹೇಹೇ ... 
ಮುನಿ ಮಗನ ಮೆಚ್ಚಿ ವರವೇಳು ಅಂದ್ರೇ ತಾಯಿಯ ತಾರೋ ಅಂದ್ನತೇ... ಹೇಹೇಹೇ .. 
ತಾಯಿ ಇದ್ರೇ ನಾಕ್ ಇರದಿದ್ದರೇ ಶೋಕ ಅಂದೋನ್ಯಾವನೋ ಜೋಗಯ್ಯಾ ... ಇದು ಬ್ರಹ್ಮ ಸತ್ಯದ ಕಂದಯ್ಯಾ.. 

ಸಾವನ್ನ ಸೋಲಿಸೀ ಪಾವಿತ್ರ್ಯ ಪಾಲಿಸಿ ಗಂಡನ್ನ ಪಡೆದೋಳೂ ಒಂದು ಹೆಣ್ಣೇ 
ಪಂಚಭೂತಗಳಂಥ ಧರ್ಮವ ಕಾಯುವಂತ ವೀರರ ಕೊಟ್ಟೋಳು ಒಂದು ಹೆಣ್ಣೇ 
ಶ್ರೀದೇವಿ ಹೆಣ್ಣೇ ಭೂದೇವಿ ಹೆಣ್ಣೇ ನಿತ್ಯ ದೇವತೇ ಒಂದು ಹೆಣ್ಣೇ ಬುದ್ದಿ ತಿದ್ದಿ ತೀಡೋಳೂ ಒಂದು ಹೆಣ್ಣೇ 
ಅವರ್ಯಾರೋ ಮೂರೂ ಜಗ ಕಾಯೋ ದ್ಯಾವರೂ ತಾಯಿಗೆ ಪರಿಚೇಯ ಇಲ್ಲಂತೇ .. ಹೇಹೇಹೇ 
ತಾಯಿ ಸುಮ್ಮಕೇ ನಕ್ರೂ ದ್ಯಾವರಾದ್ರೂ ಮಕ್ಕಳೂ ಎತ್ಕೊಂಡು ಎದೆಹಾಲು ಕೊಟ್ಟಳಂತೇ... ಹೇಹೇಹೇ .. 
ಹೆಣ್ಣಿಂದ ಸೃಷ್ಟಿ ಹೆಣ್ಣಿಂದ ವೃಷ್ಟಿ ಅಂದೋನ್ಯಾವನೋ ಜೋಗಯ್ಯಾ .. ಇದು ಸುಳ್ಳೂ ಪೊಳ್ಳಲ್ಲಾ ಕೇಳಯ್ಯಾ  
--------------------------------------------------------------------------------------------------------------------------

No comments:

Post a Comment