410. ಸಪ್ತಪದಿ (೧೯೯೨)

ಸಪ್ತಪದಿ ಚಲನಚಿತ್ರದ ಹಾಡುಗಳು 
  1. ಸಪ್ತಪದೀ...ಇದು ಸಪ್ತಪದೀ....
  2. ಕರುಣೆ ತೋರಿಸಮ್ಮ ತಾಯೇ ಗೌರಮ್ಮ 
  3. ಚೆನ್ನ ನನ್ನ ನಯನದೀ ನೀನೂ 
  4. ಬಾಳಲಿ ವಿವಾಹದ ಅನುಬಂಧ 
  5. ಕೋಣೆಯಲ್ಲಿ ಮಂಚ ಕಂಡೇನೂ 
  6. ಹೂವೂ ಮುಳ್ಳು ಹಾಲು ವಿಷವೂ 
ಸಪ್ತಪದಿ (1992) - ಸಪ್ತಪದೀ ಇದು ಸಪ್ತಪದೀ......
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಡಾ.ರಾಜ್ ಕುಮಾರ್ 

ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....ಈ ಏಳು ಹೆಜ್ಜೆಗಳ ಈ ಸಂಬಂಧ..
ನಮ್ಮಏಳು ಜನುಮಗಳ ಅನುಬಂಧ...
ಸಪ್ತಪದೀ...ಇದು ಸಪ್ತಪದೀ....ಈ ಏಳು ಹೆಜ್ಜೆಗಳ ಈ ಸಂಬಂಧ..
ನಮ್ಮಏಳು ಜನುಮಗಳ ಅನುಬಂಧ...

ನಿನ್ನೊಡನೆ ನನ್ನ ಜೀವನದಾ ಮೊದಲ ಹೆಜ್ಜೆ ಇಡುವೆ ಇದಕೆ ಹರಿಯ ಸಾಕ್ಷಿ ಎನುವೆ
ಸ್ವರ್ಗಸಮಾನ ಸುಖವ ನೀಡೆಂದು ಕೈಗಳನೂ ಮುಗಿವೆ ಎರಡನೇ  ಹೆಜ್ಜೆಯನು ಇಡುವೆ.....
ಸಪ್ತಪದೀ...ಇದು ಸಪ್ತಪದೀ....

ಮೂರುಕಾಲದಲು ಏಕರೀತಿಯಲಿ ನಾ ಸಹಚರನಾಗಿರುವೆ ಮೂರನೆ ಹೆಜ್ಜೆಯನು ಇಡುವೆ
ಮಮತೆ ಮೋಹ ಸುಖದು:ಖದಲಿ ಜೊತೆಯಲ್ಲೇ ಇರುವೆ ನಾಲ್ಕನೆ ಹೆಜ್ಜೆಯನು ಇಡುವೆ....
ಸಪ್ತಪದೀ...ಇದು ಸಪ್ತಪದೀ....

ಜೊತೆಯಾಗಿ ನಾವು ಅಜ್ಞಾನದಿಂದ
ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಎನುತಾ ಐದನೆ ಹೆಜ್ಜೆಯನು ಇಡುವೆ...
ಆರು ಋತುಗಳಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎನುವೆ ಆರನೆ ಹೆಜ್ಜೆಯನು ಇಡುವೆ
ಸಪ್ತಋಷಿಗಳಾ ಸ್ಮರಣೆ ಮಾಡುತಾ ಹರಸಿ ನಮ್ಮನು ಎಂದು ಬೇಡುತಾ ಏಳನೆ ಹೆಜ್ಜೆ ಇಡುವೇ ..
ನಾ ಏಳನೆ ಹೆಜ್ಜೆ ಇಡುವೆ.....
ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....ಈ ಏಳು ಹೆಜ್ಜೆಗಳ ಈ ಸಂಬಂಧ..
ನಮ್ಮಏಳು ಜನುಮಗಳ ಅನುಬಂಧ...
ಸಪ್ತಪದೀ...ಇದು ಸಪ್ತಪದೀ....ಈ ಏಳು ಹೆಜ್ಜೆಗಳ ಈ ಸಂಬಂಧ..
ನಮ್ಮಏಳು ಜನುಮಗಳ ಅನುಬಂಧ...
-------------------------------------------------------------------------------------------------------------------------

ಸಪ್ತಪದಿ (೧೯೯೨)...ಕರುಣೆ ತೋರಿಸಮ್ಮ ತಾಯೆ ಗೌರಮ್ಮ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಾ ಗುರುರಾಜ, ಸಂಗೀತಾ ಕಟ್ಟಿ

ಸಂಗೀತಾ : ಕರುಣೆ ತೋರಿಸಮ್ಮ ..
                 ಕರುಣೆ ತೋರಿಸಮ್ಮ ತಾಯೇ ಗೌರಮ್ಮ  ಶರಣೆಂದು ಬಂದೆನಮ್ಮ
ಮಂಜುಳಾ  : ಕರುಣೆ ತೋರಿಸಮ್ಮ ತಾಯೇ ಗೌರಮ್ಮ  ಶರಣೆಂದು ಬಂದೆನಮ್ಮ
ಸಂಗೀತಾ : ಸಂತೋಷ ನೀಡು ಸೌಭಾಗ್ಯ ನೀಡು
                ಬಾಳನ್ನು ಬೆಳಗುಬಾಮ್ಮ ಶರಣೆಂದು ಬಂದೆನಮ್ಮ
ಮಂಜುಳಾ  : ಸಂತೋಷ ನೀಡು ಸೌಭಾಗ್ಯ ನೀಡು
                  ಬಾಳನ್ನು ಬೆಳಗುಬಾಮ್ಮ ಶರಣೆಂದು ಬಂದೆನಮ್ಮ
ಸಂಗೀತಾ :  ಕರುಣೆ ತೋರಿಸಮ್ಮ ತಾಯೇ ಗೌರಮ್ಮ ಶರಣೆಂದು ಬಂದೆನಮ್ಮ
ಸಂಗೀತಾ :  ಅಮ್ಮಾ ಈ ಲೋಕಕೆಲ್ಲಾ ಅಮ್ಮಾ ಅನೋಳು ನೀನೇ
ಮಂಜುಳಾ : ನಮ್ಮ ಆನಂದವೆಲ್ಲಾ ನಿನ್ನ ನಗುವಲ್ಲಿ ತಾನೇ
ಸಂಗೀತಾ :  ಬಂಗಾರ ಕೇಳೆನಮ್ಮಾ... ಬಂಗಾರ ಕೇಳೆನಮ್ಮಾ
ಮಂಜುಳಾ  : ಸುಖ ಶಾಂತಿ ಬೇಡುವೆ
ಇಬ್ಬರೂ:  ಕರುಣೆ ತೋರಿಸಮ್ಮ ..  ಕರುಣೆ ತೋರಿಸಮ್ಮ ತಾಯೇ ಗೌರಮ್ಮ
              ಶರಣೆಂದು ಬಂದೆನಮ್ಮ
ಮಂಜುಳಾ  :  ನನ್ನ ಸಂಗಾತಿಯಲ್ಲಿ ಪ್ರ್ರೀತಿ ನಾನೇಕೋ ಕಾಣೆ
ಸಂಗೀತಾ :  ನನ್ನ ಸಂಗಾತಿ ಎಲ್ಲೋ ತಾಯೆ ನಾನಿನ್ನು ಕಾಣೆ
ಮಂಜುಳಾ :  ಇರುಳಿನಲ್ಲಿ ಇರುವೆನಮ್ಮಾ
ಸಂಗೀತಾ :  ನಾ ದಾರಿ ಕಾಣದೆ
ಇಬ್ಬರೂ:  ಕರುಣೆ ತೋರಿಸಮ್ಮ ತಾಯೇ ಗೌರಮ್ಮ ಶರಣೆಂದು ಬಂದೆನಮ್ಮ
ಸಂಗೀತಾ : ಕರುಣೆ ತೋರಿಸಮ್ಮ ತಾಯೇ ಗೌರಮ್ಮ  ಶರಣೆಂದು ಬಂದೆನಮ್ಮ
ಮಂಜುಳಾ  : ಸಂತೋಷ ನೀಡು ಸೌಭಾಗ್ಯ ನೀಡು
                  ಬಾಳನ್ನು ಬೆಳಗುಬಾಮ್ಮ ಶರಣೆಂದು ಬಂದೆನಮ್ಮ
ಇಬ್ಬರೂ: ಕರುಣೆ ತೋರಿಸಮ್ಮ ತಾಯೇ ಗೌರಮ್ಮ ಶರಣೆಂದು ಬಂದೆನಮ್ಮ
-------------------------------------------------------------------------------------------------------------------------

ಸಪ್ತಪದಿ (1992) - ಚೆನ್ನ ನನ್ನ ನಯನದಿ ನೀನೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಮಂಜುಳಾ ಗುರುರಾಜ್

ಹೆಣ್ಣು : ಚೆನ್ನ ನನ್ನ ನಯನದಿ ನೀನು ನನ್ನ ಹೃದಯದಿ ನೀನು ನಿನ್ನ ಬಿಡೇ ನಾನೂ
          ಚೆನ್ನ ನನ್ನ ನಯನದಿ ನೀನು ನನ್ನ ಹೃದಯದಿ ನೀನು ನಿನ್ನ ಬಿಡೇ ನಾನೂ
          ಮನಸ್ಸು ನಿನ್ನದೂ ಸೊಗಸು ನಿನ್ನದೂ
          ಮನಸ್ಸು ನಿನ್ನದೂ ಸೊಗಸು ನಿನ್ನದೂ ಸರಸ ನಿನ್ನನ್ನೂ ಹರುಷ ನಿನ್ನದು
          ಅನುದಿನ ಬಾಳಲಿ ನಿಜವನು ನಾ ನುಡಿವೇ
ಗಂಡು : ಹೆಣ್ಣೇ ನನ್ನ ಕೆಣಕುವೇ ಏಕೆ ಏನೋ ನುಡಿಯುವೆ ಏಕೆ ನನ್ನ ಬಿಡು ಇನ್ನೂ
            ನಿನ್ನ ಯೌವ್ವನ ನಿನ್ನ ತನುಮನ
            ನಿನ್ನ ಯೌವ್ವನ ನಿನ್ನ ತನುಮನ ನಿನ್ನ ಹಿಡಿತದಿ ಇರಲಿ ಅನುಕ್ಷಣ
            ನೆಮ್ಮದಿ ನೋಡುವೆ ಸುಖವನು ನೀ ಪಡೆವೇ ..
ಹೆಣ್ಣು : ಚೆನ್ನ ನನ್ನ ನಯನದಿ ನೀನು ನನ್ನ ಹೃದಯದಿ ನೀನು ನಿನ್ನ ಬಿಡೇ ನಾನೂ

ಹೆಣ್ಣು : ಈ ಅಲೆಗಳು ಪ್ರಣಯಗೀತೆ ಹಾಡಿವೆ ಈ ಚೆಲುವನ ಬಿಡದಿರೆ ಎಂದು ಹೇಳಿವೆ 
ಗಂಡು : ಓ ಚೆಲುವೆಯೇ ಸುಳಿವ ಗಾಳಿ ಹಾಡಿದೆ ಓ ರಸಿಕನೇ ಚಪಲ ಬೇಡ ಎಂದಿದೇ 
ಹೆಣ್ಣು : ಕೆನ್ನೇ ರಂಗು ಏರಿದೇ ನಿನ್ನ ಸ್ನೇಹ ಬೇಕು ಎಂದಿದೇ 
ಗಂಡು : ಸಂಜೆ ಕೆಂಪು ತುಂಬಿದೆ ನನ್ನ ನೋಡು ಎಂದು ಹೇಳಿದೆ 
ಹೆಣ್ಣು : ಏತಕೆ ಓಡುತ್ತಾ ಹೋಗುವೆ ಹೀಗೆ ತಾಳೆನು ನಾ ವಿರಹ 
ಗಂಡು : ಹೆಣ್ಣೇ ನನ್ನ ಕೆಣಕುವೇ ಏಕೆ ಏನೋ ನುಡಿಯುವೆ ಏಕೆ ನನ್ನ ಬಿಡು ಇನ್ನೂ 

ಗಂಡು : ಈ ಅವಸರ ಬಿಡದೆ ಶಾಂತಿ ದೊರಕದು ಈ ಸಡಗರ ಸುಖವ ನಿನಗೆ ನೀಡದು 
ಹೆಣ್ಣು : ನೀ ಒಲಿಯದೆ ಬಿಡೆನು ಇನ್ನೂ ನಿನ್ನನ್ನು ನೀ ದೊರಕದೆ ನಾನು ದೂರ ಹೋಗೆನು 
ಗಂಡು : ಗಾಳು ಎಂದು ನುಂಗಿದೆ ಅದು ತಾಳು ತಾಳು ಎಂದಿದೇ 
ಹೆಣ್ಣು : ನನ್ನ ಬಾಳು ಒಂದಿದೆ ನೀ ಬೇಕು ಬೇಕು ಎಂದಿದೆ 
ಗಂಡು : ಏತಕೆ ಸುಳ್ಳನು ಹೇಳುವೆ ಹೀಗೆ ಸಾಕು ಈ ಕಲಹ 
ಹೆಣ್ಣು : ಚೆನ್ನ ನನ್ನ ನಯನದಿ ನೀನು ನನ್ನ ಹೃದಯದಿ ನೀನು ನಿನ್ನ ಬಿಡೇ ನಾನೂ
          ಚೆನ್ನ ನನ್ನ ನಯನದಿ ನೀನು ನನ್ನ ಹೃದಯದಿ ನೀನು ನಿನ್ನ ಬಿಡೇ ನಾನೂ
          ಮನಸ್ಸು ನಿನ್ನದೂ ಸೊಗಸು ನಿನ್ನದೂ
          ಮನಸ್ಸು ನಿನ್ನದೂ ಸೊಗಸು ನಿನ್ನದೂ ಸರಸ ನಿನ್ನನ್ನೂ ಹರುಷ ನಿನ್ನದು
          ಅನುದಿನ ಬಾಳಲಿ ನಿಜವನು ನಾ ನುಡಿವೇ
ಗಂಡು : ಹೆಣ್ಣೇ ನನ್ನ ಕೆಣಕುವೇ ಏಕೆ ಏನೋ ನುಡಿಯುವೆ ಏಕೆ ನನ್ನ ಬಿಡು ಇನ್ನೂ
            ನಿನ್ನ ಯೌವ್ವನ ನಿನ್ನ ತನುಮನ
            ನಿನ್ನ ಯೌವ್ವನ ನಿನ್ನ ತನುಮನ ನಿನ್ನ ಹಿಡಿತದಿ ಇರಲಿ ಅನುಕ್ಷಣ
            ನೆಮ್ಮದಿ ನೋಡುವೆ ಸುಖವನು ನೀ ಪಡೆವೇ ..
ಹೆಣ್ಣು : ಚೆನ್ನ ನನ್ನ ನಯನದಿ ನೀನು ನನ್ನ ಹೃದಯದಿ ನೀನು ನಿನ್ನ ಬಿಡೇ ನಾನೂ
-------------------------------------------------------------------------------------------------------------------------

ಸಪ್ತಪದಿ (1992) - ಬಾಳಲಿ ವಿವಾಹದ ಅನುಬಂಧ ಎನ್ನುವುದೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಸಂಗೀತ ಕಟ್ಟಿ

ಗಂಡು : ಬಾಳಲಿ ವಿವಾಹದ ಅನುಬಂಧ ಎನ್ನುವುದು
           ಬಾಳಲಿ ವಿವಾಹದ ಅನುಬಂಧ ಎನ್ನುವುದು
           ನನ್ನಾಣೆ ಹೊಸ ರೀತಿ ಆನಂದ ತುಂಬುವುದೂ ...
ಹೆಣ್ಣು : ಬಾಳಲಿ ವಿವಾಹದ ಅನುಬಂಧ ಎನ್ನುವುದು
           ನನ್ನಾಣೆ ಹೊಸ ರೀತಿ ಆನಂದ ತುಂಬುವುದೂ ...
ಗಂಡು : ಬಾಳಲಿ ವಿವಾಹದ ಅನುಬಂಧ ಎನ್ನುವುದು

ಗಂಡು : ಒಲವಿನ ಸುಮ ಅರಳುತಲಿರೆ ಬದುಕಲ್ಲಿ ಅನುದಿನ ಸುಖವೇ 
ಹೆಣ್ಣು : ಸರಸದಿ ಮನ ನಲಿಯುತಲಿದೆ ಕನಸಲ್ಲೂ ಮರೆಯದ ಸುಖವೇ 
ಗಂಡು : ಸ್ನೇಹ ತುಂಬಿ ಹಿತವಾಗಿ ಮೋಹ ಒಂದು ವರವಾಗಿ ಸುರಲೋಕ ಕಾಣುವೇ 
ಹೆಣ್ಣು : ಬಾಳಲಿ ವಿವಾಹದ ಅನುಬಂಧ ಎನ್ನುವುದು
           ನನ್ನಾಣೆ ಹೊಸ ರೀತಿ ಆನಂದ ತುಂಬುವುದೂ ...
ಗಂಡು : ಬಾಳಲಿ ವಿವಾಹದ ಅನುಬಂಧ ಎನ್ನುವುದು

ಹೆಣ್ಣು : ಬಯಕೆಯ ಕಲೆ ಸುಳಿಯುತಲಿದೆ ಎದೆಯಲ್ಲಿ ಇನಿಯನೇ ಈಗ 
ಗಂಡು : ಆಸೆಯ ಬಲೇ ಸೆಳೆಯುತಲಿರೇ ತನುವನ್ನು ಸನಿಹಕೆ ಬೇಗಾ 
ಹೆಣ್ಣು : ನನ್ನ ನಲಿವು ನಿನಗಾಗಿ ನಿನ್ನ ಒಲವು ನನಗಾಗಿ ನನ್ನ ಜೀವ ಹಾಡಿದೇ 
ಗಂಡು : ಬಾಳಲಿ ವಿವಾಹದ ಅನುಬಂಧ ಎನ್ನುವುದು
           ಬಾಳಲಿ ವಿವಾಹದ ಅನುಬಂಧ ಎನ್ನುವುದು
           ನನ್ನಾಣೆ ಹೊಸ ರೀತಿ ಆನಂದ ತುಂಬುವುದೂ ...
ಹೆಣ್ಣು : ಬಾಳಲಿ ವಿವಾಹದ ಅನುಬಂಧ ಎನ್ನುವುದು
           ನನ್ನಾಣೆ ಹೊಸ ರೀತಿ ಆನಂದ ತುಂಬುವುದೂ ...
ಗಂಡು : ಬಾಳಲಿ ವಿವಾಹದ ಅನುಬಂಧ ಎನ್ನುವುದು
--------------------------------------------------------------------------------------------------------------------------

ಸಪ್ತಪದಿ (1992) - ಕೋಣೆಯಲ್ಲಿ ಮಂಚ ಕಂಡೇನೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಮಂಜುಳಾ ಗುರುರಾಜ

ಗಂಡು : ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
            ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
            ಆ ಹೂವ ಕಂಡು ಬೆರಗಾದೆನೂ ಈ ಹೂವಿಗಿಂತ ಚೆಲುವೇ ಕಂಡು ಸೋತು ಹೋದೆನು
ಹೆಣ್ಣು : ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
          ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
          ಆ ಹೂವ ಕಂಡು ಬೆರಗಾದೆನೂ ಈ ಹೂವ ಹಿಡಿದ ರಾಜನ ಕಂಡು ಸೋತು ಹೋದೆನು
ಗಂಡು : ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
            ಆ ಹೂವ ಕಂಡು ಬೆರಗಾದೆನೂ ಈ ಹೂವಿಗಿಂತ ಚೆಲುವೇ ಕಂಡು ಸೋತು ಹೋದೆನು 

ಹೆಣ್ಣು : ಬೆಲ್ಲದ ಹಾಗೆ ಮಾತನಾಡಿ ಈ ನಲ್ಲೆಯ ಮನವನು ನೀ ಸೆಳೆದೆ ಈ ಚೆಲುವೆಯ ಬಳಿಗೆ ನೀ ಸೆಳೆದೇ 
ಗಂಡು : ಮೆಲ್ಲಗೆ ಅರಳಿದ ತುಟಿಗಳಿಂದ ಮಳಿಗೆ ಹೂವುಗಳ ನಾ ತಂದೆ ಹೂ ಮಲ್ಲಿಗೆ ಸಾಲನ್ನೂ ನಾ ಕಂಡೇ 
ಹೆಣ್ಣು : ನಿನ್ನಲ್ಲಿ ನಾ ಕಾಣೆ ಎಂದೆಂದೂ ಈ ಪ್ರೀತಿಯು ಹೊಸ ರಾತ್ರಿಗೇ ನೀ ಕೇಳು ನನ್ನಾಸೆಯಾ 
ಗಂಡು : ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
            ಆ ಹೂವ ಕಂಡು ಬೆರಗಾದೆನೂ ಈ ಹೂವಿಗಿಂತ ಚೆಲುವೇ ಕಂಡು ಸೋತು ಹೋದೆನು 

ಗಂಡು : ಅಂಗನೇ ನಿನ್ನ ಕಂಗಳಲ್ಲಿ ಬೆಳದಿಂಗಳ ಕೋಣೆ ತುಂಬಿರಲು ಆ ತಿಂಗಳ ಬೆಳಕೆ ತುಂಬಿರಲೂ 
ಹೆಣ್ಣು : ರಂಗನು ಚೆಲ್ಲುವ ಬೆಳಕೇಕೆ ಸೈ ರಂಗನೆ ನನ್ನ ಬಳಿಯಿರಲು ಮುದ್ದು ರಂಗನೇ ನನಗೆ ಒಲಿದಿರಲು 
ಗಂಡು : ಓ ನನ್ನ ಜಾಣೆ ಬಾ ಇಲ್ಲಿ ನಲಿದಾಡುವ ನನ್ನ ಜೊತೆಯಲ್ಲಿ ನೀ ನೋಡು ಆನಂದವಾ 
ಗಂಡು : ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
            ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
            ಆ ಹೂವ ಕಂಡು ಬೆರಗಾದೆನೂ ಈ ಹೂವಿಗಿಂತ ಚೆಲುವೇ ಕಂಡು ಸೋತು ಹೋದೆನು
ಹೆಣ್ಣು : ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
          ಕೋಣೆಯಲ್ಲಿ ಮಂಚ ಕಂಡೇನೂ ಆ ಮಂಚದ ಮೇಲೆ ಹೂವ ಕಂಡೇನೂ
          ಆ ಹೂವ ಕಂಡು ಬೆರಗಾದೆನೂ ಈ ಹೂವ ಹಿಡಿದ ರಾಜನ ಕಂಡು ಸೋತು ಹೋದೆನು 
-------------------------------------------------------------------------------------------------------------------------

ಸಪ್ತಪದಿ (1992) - ಹೂವೂ ಮುಳ್ಳು ಹಾಲು ವಿಷವೂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.

ಹೂವೂ ಮುಳ್ಳು ಹಾಲು ವಿಷವು ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು ನರಕನಾಕ ಒಂದೇ .. ನರಕನಾಕ ಒಂದೇ ..

ಬದುಕು ಒಂದು ಹೂವು ಎಂದು ನಗುತಾ ನಾನಿರುವಾಗ
ಬದುಕು ಒಂದು ಹೂವು ಎಂದು ನಗುತಾ ನಾನಿರುವಾಗ
ಅರಿಯದಂತೇ ನೋವ ತಂದೆ ನನಗೆ ನೀನೇಕೆ ದೇವ
ತಾಳಿ ಕಟ್ಟಿ ಏಳು ಹೆಜ್ಜೆ ನಡೆದು ಬಂದೆ ನಲ್ಲಾ
ಆಸೆ ಏಕೋ ನನ್ನ ಸ್ನೇಹ ಬೇಡ ಎಂದ ನಲ್ಲಾ
ನನ್ನ ಜೊತೆಗೆ ಬೆಳೆದರೇನು ಮನಸ್ಸು ಗೆಲ್ಲಲಿಲ್ಲಾ
ನನ್ನ ಜೊತೆಗೆ ಬೆಳೆದರೇನು ಮನಸ್ಸು ಗೆಲ್ಲಲಿಲ್ಲಾ
ಒಲಿದು ಬಂದರೇನು ನನ್ನ ಪ್ರೀತಿ ಪಡೆಯಲಿಲ್ಲಾ
ಮನಸ್ಸು ಮನಸ್ಸು ಸೇರದಿರಲು ಹೇಗೆ ಜೊತೆಯಲಿರಲಿ
ಬ್ರಹ್ಮ ಗಂಟು ಯಾವುದೆಂದು ಕೇಳುವರಾರು ಇಲ್ಲಿ
ಹೂವೂ ಮುಳ್ಳು ಹಾಲು ವಿಷವು ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು ನರಕನಾಕ ಒಂದೇ .. ನರಕನಾಕ ಒಂದೇ ..
-------------------------------------------------------------------------------------------------------------------------

No comments:

Post a Comment