412. ಪ್ರೀತಿ ಮಾಡು ತಮಾಷೆ ನೋಡು (1979)


ಪ್ರೀತಿ ಮಾಡು ತಮಾಷೆ ನೋಡು ಚಿತ್ರದ ಹಾಡುಗಳು 
  1. ನಮ್ಮೂರು ಮೈಸೂರು ನಿಮ್ಮೂರು ಯಾವೂರು 
  2. ಹೇ.. ಸಾಹುಕಾರ ನಿನಗೇ ದಿಕ್ಕಾರ 
  3. ನಿನ್ನ ಕಂಡ ನನ್ನ ಕಣ್ಣು ಎಂದೆಂದೂ 
  4. ಪ್ರೀತಿ ಮಾಡು ತಮಾಷೆ ನೋಡು 
  5. ಮನಸು ಮನಸು ಒಂದಾದರೇ 
ಪ್ರೀತಿ ಮಾಡು ತಮಾಷೆ ನೋಡು (1979) - ನಮ್ಮೂರು ಮೈಸೂರು
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್  ಗಾಯನ: ಎಸ್.ಪಿ.ಬಿ, ಎಸ್.ಜಾನಕಿ

ಗಂಡು : ನಮ್ಮೂರು ಮೈಸೂರು, ನಿಮ್ಮೂರು ಯಾವೂರು
           ನಮ್ಮೂರು ಮೈಸೂರು, ನಿಮ್ಮೂರು ಯಾವೂರು
           ಎಲ್ಲಿಂದ ಬಂದೆ ಹೇಳು ಜಾಣೆ ನಿನ್ನಂಥ ಚೆಲುವೆ ಎಲ್ಲೂ ಕಾಣೆ
           ಜೊತೆಯಲಿ ಬಂದರೆ ಇಲ್ಲವೆ ತೊಂದರೆ ನನ್ನಾಣೆ
           ಜೊತೆಯಲಿ ಬಂದರೆ ಇಲ್ಲವೆ ತೊಂದರೆ ನಿನ್ನಾಣೆ, ಕೇಳು ಹೆಣ್ಣೆ
           ಎಲ್ಲಿಂದ ಬಂದೆ ಹೇಳೆ ಜಾಣೆ ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಹೆಣ್ಣು : ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
          ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
         ಎಲ್ಲಿಂದ ಬಂದರೇನು ನಾನು  ನಿಮ್ಮವಳೆ ಆದ ಮೇಲೆ ಇನ್ನೇನು
         ಕುಳ್ಳನ ಆಸರೆ ಬಯಸಿದೆ ಬಾ ದೊರೆ ನಂಬುವೆಯಾ....
        ಕುಳ್ಳನ ಆಸರೆ ಬಯಸಿದೆ ಬಾ ದೊರೆ ನಂಬುವೆಯಾ, ನನ್ನ ನೀನು
        ಎಲ್ಲಿಂದ ಬಂದರೇನು ನಾನು ನಿಮ್ಮವಳೆ ಆದ ಮೇಲೆ ಇನ್ನೇನು

ಗಂಡು : ಚಾಮುಂಡಿ ಬೆಟ್ಟಾವ ಹತ್ತಿಸುವೆ ಬಾರೆ  ಕಾವೇರಿ ನದಿಯಾಗೆ ಈಜಿಸುವೆ ಬಾರೆ
ಹೆಣ್ಣು :ಚಾಮುಂಡಿ ಕಾವೇರಿ ಕಂಡಿರುವೆ ನಾನು ಬೇಲೂರ ಗುಡಿಯನ್ನ ತೋರುವೆಯಾ ನೀನು?
ಗಂಡು : ಬೇಲೂರು ಒಂದೆ ಏಕೆ, ಕೊಲ್ಲೂರ ಬಿಟ್ಟೆ ಏಕೆ
           ಕನ್ನಡ ನಾಡ ಚಿನ್ನದ ನಾಡ ಸುತ್ತಿಸಿ ಬರುವೆ ನಿನ್ನನ್ನು
          ನಮ್ಮೂರು ಮೈಸೂರು,  ನಿಮ್ಮೂರು ಹ್ಹಾ .. ಯಾವೂರು
ಹೆಣ್ಣು :  ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ಗಂಡು :  ಎಲ್ಲಿಂದ ಬಂದೆ ಹೇಳು ಜಾಣೆ ನಿನ್ನಂಥ ಚೆಲುವೆ ಎಲ್ಲೂ ಕಾಣೆ ಅಹ್ಹಹ್ಹಹ್ಹಾ...
ಹೆಣ್ಣು : ಎಲ್ಲಿಂದ ಬಂದರೇನು ನಾನು ನಿಮ್ಮವಳೆ ಆದ ಮೇಲೆ ಇನ್ನೇನು

ಹೆಣ್ಣು : ಮಾರುದ್ದ ಮಾತೋನೆ ಮೆಚ್ಚಿದೆ ನಿನ್ನನ್ನು, ಚೋಟುದ್ದ ನಿಂತೋನೆ ಒಪ್ಪಿದೆ ನಿನ್ನನ್ನು
ಗಂಡು : ಹೂವಂತ ಮೊಗದೋಳೆ ಮೆಚ್ಚಿದೆ ನಿನ್ನನ್ನು  ಹಾವಂತ ಜೆಡೆಯೋಳೆ ಒಪ್ಪಿದೆ ನಿನ್ನನ್ನು
ಹೆಣ್ಣು : ನಿನ್ನಾಟ ಬಲ್ಲೆ ನಾನು, ಕಿಲಾಡಿ ಕುಳ್ಳ ನೀನು
          ತುಂಟನ ಹಾಗೆ ತಂಟೆಯ ಮಾಡಿ ಕೆರಳಿಸ ಬೇಡ ನನ್ನನ್ನು
ಗಂಡು : ಅರೆರೆರೆ...  ನಮ್ಮೂರು ಮೈಸೂರು, ನಿಮ್ಮೂರು ಯಾವೂರು
ಹೆಣ್ಣು : ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ಗಂಡು : ಆಹಹ..  ಎಲ್ಲಿಂದ ಬಂದೆ ಹೇಳು ಜಾಣೆ  ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಹೆಣ್ಣು : ಅಹ್...  ಎಲ್ಲಿಂದ ಬಂದರೇನು ನಾನು  ನಿಮ್ಮವಳೆ ಆದ ಮೇಲೆ ಇನ್ನೇನು
----------------------------------------------------------------------------------------------------------------------

ಪ್ರೀತಿ ಮಾಡು ತಮಾಷೆ ನೋಡು (1979) - ಲೋ ಸಾಹುಕಾರಾ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ


ಗಂಡು : ಲೋ ಸಾಹುಕಾರಾ...
            ಓ... ಸಾಹುಕಾರಾ ನಿನಗೆ
ಕೋರಸ್ : ನಮಸ್ಕಾರಾ ನಮಸ್ಕಾರಾ ನಮಸ್ಕಾರಾ ನಮಸ್ಕಾರಾ
ಗಂಡು : ಹೇ ಸಾಹುಕಾರಾ  ನಿನಗೆ ಧಿಕ್ಕಾರಾ ...
ಕೋರಸ್ : ಹೇ ಸಾಹುಕಾರಾ  ನಿನಗೆ ಧಿಕ್ಕಾರಾ ...
ಗಂಡು :  ನ್ಯಾಯವಿಲ್ಲಾ ನೀತಿಯಿಲ್ಲಾ   ಪಾಪವಿಲ್ಲಾ ಪುಣ್ಯವಿಲ್ಲಾ ... ೨
ಕೋರಸ್ : ನ್ಯಾಯವಿಲ್ಲಾ ನೀತಿಯಿಲ್ಲಾ   ಪಾಪವಿಲ್ಲಾ ಪುಣ್ಯವಿಲ್ಲಾ ... ೨
ಗಂಡು : ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರಾ ತಾಳು ನಿಂಗೆ ಬಿಡಿಸ್ತೀವಿ ಗ್ರಾಚಾರಾ ...
ಕೋರಸ್ : ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರಾ ತಾಳು ನಿಂಗೆ ಬಿಡಿಸ್ತೀವಿ ಗ್ರಾಚಾರಾ ...
ಗಂಡು : ಹೇ ಸಾಹುಕಾರಾ ನಿನಗೆ (ಧಿಕ್ಕಾರಾ) ಸಾಹುಕಾರಾ (ಧಿಕ್ಕಾರಾ )
            ಸಾಹುಕಾರಾ (ಧಿಕ್ಕಾರಾ)  ಧಿಕ್ಕಾರಾ (ಧಿಕ್ಕಾರಾ)  ಧಿಕ್ಕಾರಾ

ಗಂಡು : ಕಾರಿನಲ್ಲೆ ಸಂಚಾರಾ  ಬಾರಿನಲೇ ಸಂಸಾರಾ
            ಧನಿಕರಿಗೆ ಪುರಸ್ಕಾರಾ  ಬಡವರಿಗೆ ತಿರಸ್ಕಾರಾ
           ಮೋಜುಗಾರ ಮೋಸಗಾರ ಜೂಜುಕೋರ ಲಂಚಕೋರ
           ತುಳಿವೆಯ ಬಡ ಜನರ ...
ಕೋರಸ್ : ಬೂಬ್ಬೂಬೂ ಬೂಬ್ಬೂಬೂ ಬೂಬ್ಬೂಬೂ ಬೂಬ್ಬೂಬೂ
                ಬ್ಯಾ...ಬ್ಯಾ... ಬ್ಯಾ... ಬ್ಯಾ... ಬ್ಯಾ... ಬ್ಯಾ... ಬ್ಯಾ...
ಗಂಡು : ಕಾರಿನಲ್ಲೆ (ಸಂಚಾರ)  ಬಾರಿನಲೇ (ಸಂಸಾರ)
            ಧನಿಕರಿಗೆ (ಪುರಸ್ಕಾರ)  ಬಡವರಿಗೆ (ತಿರಸ್ಕಾರ)
ಕೋರಸ್ :  ಮೋಜುಗಾರ ಮೋಸಗಾರ ಜೂಜುಕೋರ ಲಂಚಕೋರ ತುಳಿವೆಯ ಬಡ ಜನರ ...
ಗಂಡು :  ನಿನ್ನ ಜೋರಾ ಇಳಿಸೊ ಧೀರ ನೋಡೋ ಮುದಿಕುಮಾರ
ಎಲ್ಲರು : ಹೇ ಸಾಹುಕಾರಾ  ನಿನಗೆ ಧಿಕ್ಕಾರಾ
            ನ್ಯಾಯವಿಲ್ಲಾ ನೀತಿಯಿಲ್ಲಾ  ಪಾಪವಿಲ್ಲಾ ಪುಣ್ಯವಿಲ್ಲಾ
            ನ್ಯಾಯವಿಲ್ಲಾ ನೀತಿಯಿಲ್ಲಾ  ಪಾಪವಿಲ್ಲಾ ಪುಣ್ಯವಿಲ್ಲಾ
            ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರಾ ತಾಳು ನಿಂಗೆ ಬಿಡಿಸ್ತೀವಿ ಗ್ರಾಚಾರಾ
           ಹೇ ಸಾಹುಕಾರಾ ನಿನಗೆ ಧಿಕ್ಕಾರಾ
           ಸಾಹುಕಾರಾ (ಧಿಕ್ಕಾರ)  ಹೇ.. ಸಾಹುಕಾರಾ (ಧಿಕ್ಕಾರ)
           ಧಿಕ್ಕಾರಾ ಧಿಕ್ಕಾರಾ ಧಿಕ್ಕಾರಾ

ಗಂಡು : ಹಾಯ್ ಹಾಯ್ (ಹೋಯ್ ಹೋಯ್)
ಎಲ್ಲರು : ಅಅ ಆಆ ಇಇ ಈಈ ಉಉ ಓಓ
            ಅಅ ಆಆ ಇಇ ಈಈ ಉಉ ಓಓ
           ಪರಪಮ ರಮಪಪ ಗಮಗ ರಿಗಮರಿ  ಸರಿಸ ರಿಗಮ ಸದಮ ದಪಮ
           ತದಾನನ್ನ ತಂದಾನೋ  ತದಾನನ್ನ ತಂದಾನೋ
           ಧೀರನನನ ಧೀರನನನ ತಾಂ  ತಾಂ ತಾಂ ತಾಂ
ಗಂಡು : ಊರಿನಲ್ಲಿ ಎಲ್ಲೂ ಇಲ್ಲಾ ಇಂತಾ ಹೆಣ್ಣು
           ಆಹಾ ತಿಂದು ತಿಂದು ಊದಿರುವಾ ಸೀಬೆ ಹಣ್ಣು
          ಓಹೋ ನೋಡು ಹ್ಯಾಗೆ ಬಿಡ್ತಾಳೆ ಮಾರಿ ಕಣ್ಣು
         ಇವಳ ಕಟ್ಕೊಂಡೋನು ಬಾಯಿಗೆ ಜೇಡಿ ಮಣ್ಣು
         ಗಯ್ಯಾಳಿ ಬಾಯಾಳಿ ಗಂಡು ಭೀರಿಯಾ
ಕೋರಸ್ :  ಇಂತಾ ಗಯ್ಯಾಳಿ ಬಾಯಾಳಿ ಗಂಡು ಭೀರಿಯಾ
ಗಂಡು : ಎಲ್ಲೂ ಕಂಡಿಲ್ಲಾ ನಾವ್ ಇಂತಾ ಮನೆ ಹಾಳಿಯಾ
ಕೋರಸ್ :  ಎಲ್ಲೂ ಕಂಡಿಲ್ಲಾ ನಾವ್ ಇಂತಾ ಮನೆ ಹಾಳಿಯಾ
ಗಂಡು : ತರ್ಲೆ ಮಾಡ್ತೀಯಾ ತಂಟೆ ತಕ್ರಾರ್ ಮಾಡ್ತೀಯಾ
           ಮೀಸೆ ಇರುವ ಗಂಡಿನೆದುರು ಜೋರು ಮಾಡ್ತೀಯಾ
ಕೋರಸ್ :  ತರ್ಲೆ ಮಾಡ್ತೀಯಾ ನೀನು ಚಾಡಿ ಹೇಳ್ತೀಯಾ
              ಇಂತಾ ಭೂಪನನ್ನು ಕೆಲ್ಸದಿಂದ ವಜ ಮಾಡ್ತೀಯಾ
ಗಂಡು : ಚಾಡಿಕೋರಿ ಚಪ್ಪಲ್ಕೋರಿ ನಿನ್ಗೆ ತಾನೆ ಮಾರಾಮಾರಿ ... ಹೇಹೇ
ಕೋರಸ್ :  ಚಾಡಿಕೋರಿ ಚಪ್ಪಲ್ಕೋರಿ ನಿನ್ಗೆ ತಾನೆ ಮಾರಾಮಾರಿ ...
ಎಲ್ಲರು : ಹೇಹೇ ಹೇಹೇ ಹೇಹೇ
            ಬಾರೋ ಲೋ ಸಾಹುಕಾರಾ ನಿನಗೆ ಧಿಕ್ಕಾರಾ
            ನ್ಯಾಯವಿಲ್ಲಾ ನೀತಿಯಿಲ್ಲಾ  ಪಾಪವಿಲ್ಲಾ ಪುಣ್ಯವಿಲ್ಲಾ
            ನ್ಯಾಯವಿಲ್ಲಾ ನೀತಿಯಿಲ್ಲಾ  ಪಾಪವಿಲ್ಲಾ ಪುಣ್ಯವಿಲ್ಲಾ
            ತಿಂದು ಕೊಬ್ಬಿ ಬಂತು ನಿನಗೆ ಅಹಂಕಾರಾ
            ತಾಳು ನಿಂಗೆ ಬಿಡಿಸ್ತೀವಿ ಗ್ರಾಚಾರಾ
           ಹೇ ಸಾಹುಕಾರಾ ನಿನಗೆ ಧಿಕ್ಕಾರಾ
ಗಂಡು : ಸಾಹುಕಾರಾ (ಧಿಕ್ಕಾರಾ) ಸಾಹುಕಾರಾ (ಧಿಕ್ಕಾರಾ)
            ಧಿಕ್ಕಾರ  ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರಾ ಧಿಕ್ಕಾರಾ
-------------------------------------------------------------------------------------------------------------------------

ಪ್ರೀತಿ ಮಾಡು ತಮಾಷೆ ನೋಡು (1979) - ನಿನ್ನ ಕಂಡ ನನ್ನ ಕಣ್ಣುಸಂಗೀತ: ರಾಜನ್-ನಾಗೇಂದ್ರ ಚಿತ್ರಗೀತೆ : ಚಿ. ಉದಯಶಂಕರ್  ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ  

ಎಸ್.ಪಿ.:  ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
ಜಾನಕಿ:  ಮುತ್ತಂಥ ಮಾತಂದೆ ಆನಂದ ನೀ ತಂದೆ
             ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
ಎಸ್.ಪಿ.: ಮುತ್ತಂಥ ಮಾತಂದೆ ಆನಂದ ನೀ ತಂದೆ
ಇಬ್ಬರು :   ಲಾಲ..ಲಾಲ..ಆಹಾಹಾ..

ಎಸ್.ಪಿ.:  ನಿನ್ನ ಒಲವಲಿ.. ಒಲವಿನ ಬಾನಲಿ...
               ಹೊಸ ಕಾಂತಿಯಿಂದ ರವಿಯಂತೆ ಬೆಳಗಿ.. ಸುಖ ಹೊಂದಿದೆ..
ಜಾನಕಿ: ನಿನ್ನ ಒಲವಲಿ.. ಒಲವಿನ ಕಡಲಲಿ...
             ಅಲೆಯಂತೆ ಕುಣಿದೆ.. ಹಾಯಾಗಿ ನಲಿದೆ... ಸುಖ ಹೊಂದೆದೆ...
ಎಸ್.ಪಿ.:  ಹೊಸ ಹೂ ಅಂದ.. ನಿನ್ನ ಮೈಯಂದ.. ಚಿನ್ನ.. ನನ್ನ ಕುಣಿಸಿದೆ... [ಅಹ...ಅಹ...]
              ಹೊಸ ಹೂ ಅಂದ [ಆ...] ನಿನ್ನ ಮೈಯಂದ [ಆ..] ಚಿನ್ನ ನನ್ನ ಕುಣಿಸಿದೆ...
ಹೆಣ್ಣು .:  ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
ಎಸ್.ಪಿ :  ಮುತ್ತಂಥ ಮಾತಂದೆ..ಎ.. ಆನಂದ.. ನೀ ತಂದೆ...

ಜಾನಕಿ:  ನಿನ್ನ ಗೆಳೆತನ.. ಸೆಳೆಯಲು ನನ್ನ ಮನ..
             ನೂರಾಸೆ ಕೆರಳಿ.. ಹೂವಂತೆ ಅರಳಿ.. ನಿನ್ನ ಸೇರಿತೇ...ಎ..
ಎಸ್.ಪಿ.:  ನಿನ್ನ ಗೆಳೆತನ.. ಪಡೆಯಲು ಹೊಸತನ...
              ಬಾನಾಡಿಯಾಗಿ ಹಾರಾಡುವಾಸೆ.. ಇಂದು ಮೂಡಿತೇ..ಎ...
ಜಾನಕಿ:  ನಿನ್ನ ನಾ ಬೆರೆತೆ.. ನನ್ನೇ ನಾ ಮರೆತೆ... ತನು..ಮನ ತಣಿಯಿತೇ.. [ಅಹ..ಹ.ಹ..]
            ನಿನ್ನ ನಾ ಬೆರೆತೆ.. [ಆ...] ನನ್ನೇ ನಾ ಮರೆತೆ... [ಆ...] ತನು..ಮನ ತಣಿಯಿತೇ..
ಎಸ್.ಪಿ.:  ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
ಜಾನಕಿ:  ಮುತ್ತಂಥ ಮಾತಂದೆ ಆನಂದ ನೀ ತಂದೆ
             ನಿನ್ನ ಕಂಡ ನನ್ನ ಕಣ್ಣು ಎಂದೆಂದೂ.. ಬೇರೇನು ನೋಡದು...
ಎಸ್.ಪಿ.:  ಮುತ್ತಂಥ ಮಾತಂದೆ.. ಆನಂದ ನೀ ತಂದೆ..
ಎಸ್.ಪಿ./ಜಾನಕಿ:  ಲಾಲ ಅಹ..ಹ... ಆ... ಲಾಲಲ... ಅಹ..ಹ... ಲ..ಲ.ಲಾ...
-------------------------------------------------------------------------------------------------------------------------

ಪ್ರೀತಿ ಮಾಡು ತಮಾಷೆ ನೋಡು (1979) - ಪ್ರೀತಿ ಮಾಡು ತಮಾಷೆ ನೋಡು ಸಂಗೀತ: ರಾಜನ್-ನಾಗೇಂದ್ರ  ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಗಂಡು : (ಕೆಮ್ಮು )  ಪ್ರೀತಿ ಮಾಡು ತಮಾಷೆ ನೋಡು 
            ಪ್ರೀತಿ ಮಾಡು ತಮಾಷೆ ನೋಡು
            ಹಾಯ್  ಪ್ರೀತಿ ಮಾಡು ಅಹ್ಹಹ  ತಮಾಷೆ ನೋಡು
           ನಿನ್ನ ಮನಸನ್ನೇ ನನಗಾಗಿ ನೀಡು
           ನಿನ್ನ ಮನಸನ್ನೇ ನನಗಾಗಿ ನೀಡು 
           ನೀನೇ ನನ್ನ ಪುಟಾಣಿ ರಂಭೆ ನಾನೇ ನಿನ್ನ ಜೋಡಿ ಬೊಂಬೆ  
           ನೀನೇ ನನ್ನ ಪುಟಾಣಿ ರಂಭೆ ನಾನೇ ನಿನ್ನ ಜೋಡಿ ಬೊಂಬೆ  
           ಪ್ರೀತಿ ಮಾಡು ಅಹ್ಹಹ  ತಮಾಷೆ ನೋಡು
          ಪ್ರೀತಿ ಮಾಡು ಒಹೋ  ತಮಾಷೆ ನೋಡು
          ನಿನ್ನ ಮನಸನ್ನೇ ನನಗಾಗಿ ನೀಡು 
           ನನ್ನ ವಯಸ್ಸನ್ನೇ ಮರೆಯುವಂತೆ ಮಾಡೋ...

ಗಂಡು : ಒಂಟಿ ಬಾಳು ಏನು ಚಂದ ಹೇಳು ಚಿನ್ನ ತಂಟೆ ಮಾಡೋ ವಯಸುತಾನೆ ತುಂಬಾ ಚೆನ್ನಾ 
          ಒಂಟಿ ಬಾಳು ಏನು ಚಂದ ಹೇಳು ಚಿನ್ನ ತಂಟೆ ಮಾಡೋ ವಯಸುತಾನೆ ತುಂಬಾ ಚೆನ್ನಾ 
          ಮನದಲಿ ಮಿಡಿತಾ ಎದೆಯಲಿ ಬಡಿತಾ  ಹೆಚ್ಚಾಗಿ ಹುಚ್ಚಾದೆ ನಿನ್ನ ಮೆಚ್ಚುತಾ 
         ಇಂದು ತುಂಬಾ ಒಳ್ಳೆ ಲಗ್ನ ಕೇಳೇ ರನ್ನಾ  ರಾಹುಕಾಲ ಬರೋಕೆ ಮುಂಚೆ ಸೇರೋ ನನ್ನಾ 
         ನಡೆದರೂ ಚಂದ ನಿಂತರು ಚಂದಾ ನೀ ಕೋಪಗೊಂಡಾಗ ಇನ್ನು ಚೆಂದಾ 
        ನಿನ್ನಿಂದ ಆನಂದಾ ನನ್ನ ಸೇರೇ ಬಾಳೇ ಚೆಂದಾ ಹಾ..ಹಾ.. ಹಾ..ಹಾ.. 
        ಪ್ರೀತಿ ಮಾಡು ಹೈಯ್  ತಮಾಷೆ ನೋಡು
        ಪ್ರೀತಿ ಮಾಡು ಆಹಾ  ತಮಾಷೆ ನೋಡು
     ನಿನ್ನ ಮನಸನ್ನೇ ನನಗಾಗಿ ನೀಡು  ನನ್ನ ವಯಸ್ಸನ್ನೇ ಮರೆಯುವಂತೆ ಮಾಡೋ...ಹೋಹೊ 

ಗಂಡು : ಕುಮಾರಿಯೇ ನನ್ನ ತಳ್ಳಿ ಓಡಬೇಡಾ ಈ ಕುಮಾರನ ನುಂಗೋ ಹಾಗೇ ನೋಡಬ್ಯಾಡಾ.. 
          ಕುಮಾರಿಯೇ ನನ್ನ ತಳ್ಳಿ ಓಡಬೇಡ  ಈ ಕುಮಾರನ ನುಂಗೋ ಹಾಗೇ ನೋಡಬ್ಯಾಡಾ.. 
          ಅನುಭವಾ ಇರುವ ರಸಿಕನ ಬೆರೆವಾ ಈ ಭಾಗ್ಯ ನಿನದಾಗೇ ಬಿಡು ಕೋಪವಾ 
          ದಾಡಿ ಮೀಸೆ ಕಂಡು ಮೋಸ ಹೋಗಬೇಡಾ ಎಲ್ಲಾ ಹೀಗೆ ಎಂದು ನೀನು ನಂಬಬೇಡಾ 
          ಮುದಕನ ವಯಸು ಹುಡುಗನ ಕನಸು  ಮನಸಲ್ಲಿ ಮನಸ್ಸನ್ನು ನೀ ಸೇರಿಸು 
          ಸಾಕಿನ್ನು ನನ್ನನ್ನು ಬೇಗ ಬಂದು ಸುಧಾರಿಸು
         ಪ್ರೀತಿ ಮಾಡು  ತಮಾಷೆ ನೋಡು
         ಪ್ರೀತಿ ಮಾಡು ಅಹ್  ತಮಾಷೆ ನೋಡು ನಿನ್ನ ಮನಸನ್ನೇ ನನಗಾಗಿ ನೀಡು 
        ನಿನ್ನ ಮನಸನ್ನೇ ನನಗಾಗಿ ನೀಡು 
         ಹೇ.. ನೀನೇ ನನ್ನ ಪುಟಾಣಿ ರಂಭೆ ನಾನೇ ನಿನ್ನ ಜೋಡಿ ಬೊಂಬೆ  
        ನೀನೇ ನನ್ನ ಪುಟಾಣಿ ರಂಭೆ ನಾನೇ ನಿನ್ನ ಜೋಡಿ ಬೊಂಬೆ  
        ಪ್ರೀತಿ ಮಾಡು ಹೈಯ್  ತಮಾಷೆ ನೋಡು
        ಲಾಲಲಲಲ ರರರರ ಪಾಪಪಪ ಹಾ ಹಾ 
--------------------------------------------------------------------------------------------------------------------------

ಪ್ರೀತಿ ಮಾಡು ತಮಾಷೆ ನೋಡು (1979) - ಗಂಡು : ಮನಸು ಮನಸು ಒಂದಾದರೇ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ

ಗಂಡು : ಲಲ್ಲಲಾಲಲ ... ಲಲ್ಲಲಾಲಲ (ಲಲಲಲಲಲ )
ಹೆಣ್ಣು : ಲಲ್ಲಲಾಲಲ ... ಲಲ್ಲಲಾಲಲ ( ಲಲಲಲಲಲ )  ಆಹಾಹ (ಆಹಾಹ )
         ಆಹಾಹ (ಆಹಾಹ ಹ್ಹಹ್ಹಹಹ  )
ಗಂಡು : ಮನಸು (ಲಾಲಲಲಲಲಲ )  ಮನಸು ಮನಸು ಒಂದಾದರೇ ಬಾಳೇ ಹೊನ್ನಿನ ತಾವರೇ
ಹೆಣ್ಣು : ಈ ಅನುರಾಗ ಈ ಶುಭಯೋಗ ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ 
          ಈ ಅನುರಾಗ ಈ ಶುಭಯೋಗ ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ 
ಗಂಡು : ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ 
ಹೆಣ್ಣು : ಮನಸು ಮನಸು ಒಂದಾದರೇ ಬಾಳೇ ಹೊನ್ನಿನ ತಾವರೇ 
          ಮನಸು (ಲಾಲಲಲಲಲಲ ) 

ಗಂಡು : ಕಲೆಯದೇ  ಹ್ಹಾ.. ತಿಳಿದೇನು ಈ ಪ್ರಣಯದಾಟವ ನಾನು 
ಹೆಣ್ಣು : ಬಲ್ಲೆನು ನೀ ನುಡಿಯದೇ ಓ.. ರಸಿಕನಲ್ಲವೇ ನೀನೂ 
ಗಂಡು : ನಿನ್ನಾ ಮಾತುಗಳೂ ಕಡಲ ಮುತ್ತುಗಳು ಮಾತಿನಲ್ಲಿ ಗೆಲ್ಲಲಾರೆ ನಿನ್ನನ್ನೂ 
ಹೆಣ್ಣು : ಪ್ರೀತಿ ಮಾತಿನಲಿ ಸ್ನೇಹ ತೋರುತಲಿ ಮುದ್ದು ಮಾಡಿ ಗೆದ್ದೇ ನೀನು ನನ್ನನ್ನೂ 
          ಮುದ್ದು ಮಾಡಿ ಗೆದ್ದೇ ನೀನು ನನ್ನನ್ನೂ 
         ಮನಸು (ಲಾಲಲಲಲಲಲ )  ಮನಸು ಮನಸು ಒಂದಾದರೇ ಬಾಳೇ ಹೊನ್ನಿನ ತಾವರೇ
ಗಂಡು : ಈ ಅನುರಾಗ ಈ ಶುಭಯೋಗ ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ 
ಇಬ್ಬರು : ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ 
ಗಂಡು : ಮನಸು ಮನಸು ಒಂದಾದರೇ ಬಾಳೇ ಹೊನ್ನಿನ ತಾವರೇ 

ಗಂಡು : ಆಯ್ ಲವ್ ಯೂ  ಯೂ ಲವ್ ಮೀ   ಹೆಣ್ಣು : ಲವ್ ಲವ್ ಮೀ ಆಯ್ ಲವ್ ಯೂ  
ಗಂಡು : ಆಯ್ ಲವ್ ಯೂ  
           ಬರೆವೆಯಾ ನೀ ಕವಿತೆಯ ಈ ಬಾಳಪುಟದಲಿ ಇಂದೂ 
ಹೆಣ್ಣು : ಬರುವೆಯಾ ನೀ ನೀರುವೆಯಾ ಈ ಎದೆಯ ಗುಡಿಯಲಿ ಎಂದೂ 
ಗಂಡು : ನನ್ನಾ ಆಸೆಯನೇ ಹೆಣ್ಣು ಕೇಳಿದರೇ ಒಲ್ಲೇ ಎಂದು ಹೇಳುದುಂಟೇ  ನಾ ಬಂದೇ 
ಹೆಣ್ಣು : ನನ್ನಾ ಸ್ವಾಗತಕೆ ಇಂಥ ಆತುರವೇ ತಾಳು ನಲ್ಲ ಹೆಣ್ಣು ಒಂದು ಹೂವಂತೇ 
          ತಾಳು ನಲ್ಲ ಹೆಣ್ಣು ಒಂದು ಹೂವಂತೇ 
 ಗಂಡು : ಮನಸು (ಲಾಲಲಲಲಲಲ )  
ಗಂಡು : : ಮನಸು     ಹೆಣ್ಣು : ಮನಸು 
ಇಬ್ಬರು : ಒಂದಾದರೇ ಬಾಳೇ ಹೊನ್ನಿನ ತಾವರೇ
ಹೆಣ್ಣು : ಈ ಅನುರಾಗ       ಗಂಡು :  ಈ ಶುಭಯೋಗ 
ಇಬ್ಬರು : ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ 
              ನಿನ್ನನ್ನೂ ನನ್ನನ್ನೂ ಜೊತೆ ಮಾಡಿದೆ 
               ಲಾಲಲಲಲಲಲ  ಲಾಲಲಲಲಲಲ  ಲಾಲಲಲಲಲಲ 
--------------------------------------------------------------------------------------------------------------------------

No comments:

Post a Comment