415. ಮಂಕು ದಿಣ್ಣೆ (1968)


ಮಂಕು ದಿಣ್ಣೆ ಚಿತ್ರದ ಹಾಡುಗಳು 
  1. ಮಧು ಮಧುರ ಆಧರ 
  2. ಬಾ ಬೇಗ ಮನ ಮೋಹಿನಿ 
  3. ಏನೋ ಏನೋ ನಾ ಅರಿಯೇ 
  4. ಗ್ಯಾರಂಟೀ ಸ್ವೀಟ್ ಸೆವೆಂಟಿನ್... 
ಮಂಕು ದಿಣ್ಣೆ (1968)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ವಿಜಯಭಾಸ್ಕರ್  ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ


ಗಂಡು : ಸುಧಾ.. ನಿನ್ನ ಮನಸು .. ಈ ಕನಸು ನನಸಾಗಬಾರದೇ..
           ಮಧು ಮಧುರ ಅಧರ ಸೋಕೇ
           ಕಣ್ಣಾಮುಚ್ಚಾಲೆ ನಲಿನಲಿದ ಒಲಿದ ಬಾಳೇ
           ಸುಖದ ಉಯ್ಯಾಲೆ
ಹೆಣ್ಣು : ಮಧು ಮಧುರ ಅಧರ ಸೋಕೇ
          ಕಣ್ಣಾಮುಚ್ಚಾಲೆ ನಲಿನಲಿದ ಒಲಿದ ಬಾಳೇ
          ಸುಖದ ಉಯ್ಯಾಲೆ

ಹೆಣ್ಣು: ಕಣ್ಣು ಕಣ್ಣು ಸೇರೇ ಮೌನದ ನುಡಿಯಲ್ಲಿ
         ತುಟಿಯು ತುಟಿಯು ಸೇರೇ ಮಾತದು ಇನ್ನೆಲ್ಲಿ
         ಕಣ್ಣು ಕಣ್ಣು ಸೇರೇ ಮೌನದ ನುಡಿಯಲ್ಲಿ
        ತುಟಿಯು ತುಟಿಯು ಸೇರೇ ಮಾತದು ಇನ್ನೆಲ್ಲಿ
ಗಂಡು : ಕಾಣದ ಈ ಅನುಭವವು ಆಸೆಯ ಎದೆಯಲ್ಲಿ
            ಒಲವಿನ ಗೀತೆಯದೆಲ್ಲ ಹೊಸದೀ ಬಾಳಿನಲಿ
ಇಬ್ಬರು : ಮಧು ಮಧುರ ಅಧರ ಸೋಕೇ
            ಕಣ್ಣಾಮುಚ್ಚಾಲೆ ನಲಿನಲಿದ ಒಲಿದ ಬಾಳೇ
           ಸುಖದ ಉಯ್ಯಾಲೆ

ಗಂಡು : ಮೈಗೆ ಮೈಕೈ ಸೇರಿ ಕಂಪನ ತನುವಲ್ಲಿ
            ಇನ್ನು ಏನೊ ಬಯಕೆ ಮೂಡಿದೆ ಮನದಲ್ಲಿ
           ಮೈಗೆ ಮೈಕೈ ಸೇರಿ ಕಂಪನ ತನುವಲ್ಲಿ
           ಇನ್ನು ಏನೊ ಬಯಕೆ ಮೂಡಿದೆ ಮನದಲ್ಲಿ
ಹೆಣ್ಣು : ನನ್ನನೆ ಕಾಣಿಕೆಯಾಗಿ ನಿನಗೇ ನೀಡಿರುವಲ್ಲಿ
         ನಿನ್ನ ಬಯಕೆಗೆ ತಡೆಯು ಎಲ್ಲಿದೆ ಇನ್ನಿಲ್ಲಿ
ಇಬ್ಬರು : ಮಧು ಮಧುರ ಅಧರ ಸೋಕೇ ಕಣ್ಣಾಮುಚ್ಚಾಲೆ
             ನಲಿನಲಿದ ಒಲಿದ ಬಾಳೇ ಸುಖದ ಉಯ್ಯಾಲೆ
             ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ
----------------------------------------------------------------------------------------------------------------------

ಮಂಕು ದಿಣ್ಣೆ (1968) - ಬಾ ಬೇಗ ಮನಮೋಹಿನಿ 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, 
ಗಂಡು : ಬಾ ಬೇಗ ಮನಮೋಹಿನಿ...  
            ಬಾ ಬೇಗ ಮನಮೋಹಿನಿ ರಮಣಿ ಬಾ ಬೇಗ ಮನಮೋಹಿನಿ 
            ವೈಯ್ಯಾರವನು ತೋರಿ ನಸುನಗೆಯನು ಬೀರಿ 
            ಬಾ ಬೇಗ ಬಳಿ ಕಾಮಿನಿ.... ಬಾ ಬೇಗ ಮನಮೋಹಿನಿ 

ಗಂಡು : ಮೋಡದ ತೆರೆಯಿಂದ ಚಂದಿರ ನೋಡುವಂತೇ 
            ಮೋಡದ ತೆರೆಯಿಂದ ಚಂದಿರ ನೋಡುವಂತೇ 
            ಬಾಗಿಲ ಮರೆಯಿಂದ ಹೀಗೇಕೇ ಕಾಡುವೇ.. ಕಾವೇರೀ..   
            ಮೋಡದ ತೆರೆಯಿಂದ ಚಂದಿರ ನೋಡುವಂತೇ 
            ಬಾಗಿಲ ಮರೆಯಿಂದ ಹೀಗೇಕೇ ಕಾಡುವೇ 
            ನಿನ್ನ ಆ ವಯಸು ನೆನೆಯುತ ಹಳೆಯ ಚೆಲ್ಲಾಟ ಆಡುತಾ 
           ನಿನ್ನ ಆ ವಯಸು ನೆನೆಯುತ ಹಳೆಯ ಚೆಲ್ಲಾಟ ಆಡುತಾ 
           ಕುಲುಕುತ ಬಳುಕುತ ಮೇಲು ನಡೆ ನಡೆಯುತ 
           ತನುವ ಕುಣಿಸಿ ಮನವ ನಲಿಸಿ ಒಲಿಯುತ.. 
           ಬಾಯಾರೀ..  ಅಲ್ಲ..ಅಲ್ಲ.. ಕಾವೇರೀ ಮನಮೋಹಿನಿ 
      
ಗಂಡು : ಮದನನ ಬಾಣವೂ ನಾಟಿದೆ ಎದೆಯಲಿ 
           ಮದನನ ಬಾಣವೂ ನಾಟಿದೆ ಎದೆಯಲಿ  
           ಮನದನ್ನೆ ಈ ನೋವ ನಾ ಹೇಗೆ ತಾಳಲಿ... ಕಾವೇರೀ.. 
           ಮದನನ ಬಾಣವೂ ನಾಟಿದೆ ಎದೆಯಲಿ  
           ಮನದನ್ನೆ ಈ ನೋವ ನಾ ಹೇಗೆ ತಾಳಲಿ 
           ವಿರಹ ತಾಪದಲಿ ಬೇಯುತ ಪ್ರಣಯ ಭಾರದಲಿ ಕುಸಿಯುತ       
           ವಿರಹ ತಾಪದಲಿ ಬೇಯುತ ಪ್ರಣಯ ಭಾರದಲಿ ಕುಸಿಯುತ       
           ಚೆಲುವಿನ ಮೊಗವನು ನೆನೆಯುತ ಬಳಲಿದೇ 
           ಮನವ ಗೆಲುವ ಸುಖವ ಪಡೆವ ಆಸೆಯೂ... ಬಾಯಾರೀ 
           ಕಾವೇರಿ ಮನಮೋಹಿನಿ.... ಬಾ ಬೇಗ ಮನಮೋಹಿನಿ.. 
           ಮೋಹಿನಿ..ಮೋಹಿನಿ   
----------------------------------------------------------------------------------------------------------------------

ಮಂಕು ದಿಣ್ಣೆ (1968) - ಏನೋ ಏನೋ ನಾ ಅರಿಯೆ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ

ಆಆಆ... ಆಆಆ...
ಏನೋ ಏನೋ ನಾ ಅರಿಯೇ ಕಣ್ಣಲ್ಲಿ ಈ ಝಳ ಬೇಗೆಯು ತಂದಿದೇ
ಏನೋ ಏನೋ ನಾ ಅರಿಯೇ ಕಣ್ಣಲ್ಲಿ ಈ ಝಳ ಬೇಗೆಯು ತಂದಿದೇ
ಏನೋ ಏನೋ ನಾ

ನೋಟದ ಮಿಂಚಿಗೇ ಬಿರಿಯುವ ಹೂವೂ
ಬಯಸಿದೆ ಬಳಿಗೆ ನಿನ್ನಯ ಬರವು
ನೋಟದ ಮಿಂಚಿಗೇ ಬಿರಿಯುವ ಹೂವೂ
ಬಯಸಿದೆ ಬಳಿಗೆ ನಿನ್ನಯ ಬರವು
ಮೈ ಕೈಯ ಸೋಕಲು ಮರೆಯದ ಸುಖವೂ 
ಆಸೆಯ ಮುಗಿಸು ಮೈಮನ ಮರೆಸು ಆಆಆ... 
ಏನೋ ಏನೋ ನಾ ಅರಿಯೇ ಕಣ್ಣಲ್ಲಿ ಈ ಝಳ ಬೇಗೆಯು ತಂದಿದೇ
ಏನೋ ಏನೋ ನಾ 

ಯೌವ್ವನ ಕಳಶವ ನಾ ತಂದಿರುವೇ 
ನೀ ಕೈಯ ನೀಡಲೂ ಕಾಣಿಕೆ ಕೊಡುವೇ 
ಯೌವ್ವನ ಕಳಶವ ನಾ ತಂದಿರುವೇ 
ನೀ ಕೈಯ ನೀಡಲೂ ಕಾಣಿಕೆ ಕೊಡುವೇ 
ಎಂದಿಗೂ ನಿನಗೇ ನಾ ನಿಲ್ಲಿರುವೇ 
ರಮಿಸು ರಮಿಸು ಮೋಹದಿ ಕುಣಿಸು ಆಆಆ 
ಏನೋ ಏನೋ ನಾ ಅರಿಯೇ ಕಣ್ಣಲ್ಲಿ ಈ ಝಳ ಬೇಗೆಯು ತಂದಿದೇ
ಏನೋ ಏನೋ ನಾ ಅರಿಯೇ ಕಣ್ಣಲ್ಲಿ ಈ ಝಳ ಬೇಗೆಯು ತಂದಿದೇ
ಏನೋ ಏನೋ ನಾ 
----------------------------------------------------------------------------------------------------------------------

ಮಂಕು ದಿಣ್ಣೆ (1968) - ಗ್ಯಾರಂಟೀ ಸ್ವೀಟ್ ಸೆವೆಂಟಿನ್... 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ, ಎಲ್.ಆರ್.ಈಶ್ವರೀ 

ಸ್ವೀಟ್ ಸೆವೆಂಟಿನ್... ಸ್ವೀಟ್ ಸೆವೆಂಟಿನ್...
ಗ್ಯಾರಂಟೀ ಸ್ವೀಟ್ ಸೆವೆಂಟಿನ್  ನಾವಂತೀ ಥರ್ಟಿನ್ ಫೋರ್ಟಿನ್
ರಾಯಲ್ಸಿ ಫಿಫ್ಟೀನ ಸಿಕ್ಸ್ಟೀನ್  ಕ್ವಾಲಿಟಿ ಏಟೀನ್ ನೈನಟೀನ್
ಚಚ್ಚಚ  ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ
ಚಚ್ಚಚ  ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ ಚಚ್ಚಚ
ಗ್ಯಾರಂಟೀ ಸ್ವೀಟ್ ಸೆವೆಂಟಿನ್  ಲಾಲಾಲಾ
ನಾವಂತೀ ಥರ್ಟಿನ್ ಫೋರ್ಟಿನ್  ಲಾಲಾಲಾ
ರಾಯಲ್ಸಿ ಫಿಫ್ಟೀನ ಸಿಕ್ಸ್ಟೀನ್    ಲಾಲಾಲಾ
ಕ್ವಾಲಿಟಿ  ಏಟೀನ್ ನೈನಟೀನ್  ಲಾಲಾಲಾ

ಸ್ವೀಟ್ ಸೆವೆಂಟಿನ್ ಬ್ಯೂಟಿಗೇ ಒಂದು ಜೋಡಿ ಬೇಕೇ ಬೇಕು
ಜಾಲಿಯಾಗಿ ಹಾಯಾಗಿರಲೂ ಬಾಯ್ ಫ್ರೆಂಡ್ ಕೂಡಿರಬೇಕೂ
ಸ್ವೀಟ್ ಸೆವೆಂಟಿನ್ ಬ್ಯೂಟಿಗೇ ಒಂದು ಜೋಡಿ ಬೇಕೇ ಬೇಕು
ಜಾಲಿಯಾಗಿ ಹಾಯಾಗಿರಲೂ ಬಾಯ್ ಫ್ರೆಂಡ್ ಕೂಡಿರಬೇಕೂ
ಇವಿನಿಂಗ್ ಮಾರ್ನಿಂಗ್ ಎಲ್ಲ ಒಂದೇ ಜೋತೆಯಲಿ ಗೆಳೆಯನು ಇರಲೂ.. 
ಹಸಿವು ನಿದ್ದೇ ಒಂದು ಇಲ್ಲ ಲವ್ವಲೀ ಮೈಮರೆತಿರಲೂ 
ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ  ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ
ಗ್ಯಾರಂಟೀ ಸ್ವೀಟ್ ಸೆವೆಂಟಿನ್  ಲಾಲಾಲಾ
ನಾವಂತೀ ಥರ್ಟಿನ್ ಫೋರ್ಟಿನ್  ಲಾಲಾಲಾ
ರಾಯಲ್ಸಿ ಫಿಫ್ಟೀನ ಸಿಕ್ಸ್ಟೀನ್    ಲಾಲಾಲಾ
ಕ್ವಾಲಿಟಿ ಏಟೀನ್ ನೈನಟೀನ್

ನನ್ನೀ ಹಾರ್ಟ್ ಲಿ ಅವನಿಗೇ ಪಾರ್ಟಿ ಕೊಡುವುದೇ ಇಂದಿನ ಡ್ಯೂಟಿ 
ಅವನಿಗೇ ತಾನೇ ಮೀಸಲು ನನ್ನ ನೀ ಹೊಂದು ಫುಲ್ ಡ್ಯೂಟಿ 
ನನ್ನೀ ಹಾರ್ಟ್ ಲಿ ಅವನಿಗೇ ಪಾರ್ಟಿ ಕೊಡುವುದೇ ಇಂದಿನ ಡ್ಯೂಟಿ 
ಅವನಿಗೇ ತಾನೇ ಮೀಸಲು ನನ್ನ ನೀ ಹೊಂದು ಫುಲ್ ಡ್ಯೂಟಿ 
ಹೂವೇ ಇಲ್ಲದೇ ಬಳ್ಳಿಯು ನಿಂತಿರೇ ನೋಡಲು ಏನದು ಅಂದ 
ಪ್ರೀತಿಯು ಅರಿಯದ ಹುಡುಗಿಯ ಲೈಫಲೀ ಏನಿದೇ ಗ್ಲ್ಯಾಮರ್ ಚಂದ 
ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ  ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ  ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ
ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ ಚಚ್ಚಚ  ಚಚ್ಚಚ ಚಚ್ಚಚ ಹ್ಹಹ್ಹ
ಗ್ಯಾರಂಟೀ ಸ್ವೀಟ್ ಸೆವೆಂಟಿನ್  ಲಾಲಾಲಾ
ನಾವಂತೀ ಥರ್ಟಿನ್ ಫೋರ್ಟಿನ್  ಲಾಲಾಲಾ
ರಾಯಲ್ಸಿ ಫಿಫ್ಟೀನ ಸಿಕ್ಸ್ಟೀನ್    ಲಾಲಾಲಾ
ಕ್ವಾಲಿಟಿ ಏಟೀನ್ ನೈನಟೀನ್
----------------------------------------------------------------------------------------------------------------------

No comments:

Post a Comment