- ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
- ನೀ ನಗುವಾಗ ಹೂ ಬಿರಿದಾಗಾ
- ಈ ಊರು ಚೆಂದವೋ ಆ ಊರು ಚೆಂದವೋ
- ಕಲ್ಲಿಂದ ಹೂವೂ ಮೂಡುವುದೂ ಉಂಟೇ ..
ವಿಜಯವಾಣಿ (1976) - ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ ಒಲವಿನಾ ಲೋಕಕೇ ನೀ ತಂದೇ ಪೂರ್ಣಿಮಾ...
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ ಒಲವಿನಾ ಲೋಕಕೇ ನೀ ತಂದೇ ಪೂರ್ಣಿಮಾ....
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ನಾ ಪ್ರೇಮದರಮನೆಯಲ್ಲೀ ವೈಭೋಗ ಸಿರಿಯನು ಕಂಡೇ
ನಾ ಪ್ರೇಮದರಮನೆಯಲ್ಲೀ ವೈಭೋಗ ಸಿರಿಯನು ಕಂಡೇ ನನ್ನೆದೆಯ ಸಿಂಹಾಸನದೀ ನೀ ರಾಜ್ಯವಾಳಿದೇ
ನೀ ನನ್ನ ಬಾಳಿನ ಪುಟದೇ ಅನುರಾಗ ಕವಿತೆಯ ಬರೆದೇ ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇಲಿದೇ
ಅಲೆಯಲ್ಲಿ ತೇಲಿ ತೇಲಿದೇ....
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಹೆಣ್ಣು : ರಸಪೂರ್ಣ ಮೈತ್ರಿಯ ಸಮಯಾ ನೂರಾಸೆ ಕಡಲಿದು ಹೃದಯಾ
ರಸಪೂರ್ಣ ಮೈತ್ರಿಯ ಸಮಯಾ ನೂರಾಸೆ ಕಡಲಿದು ಹೃದಯ ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯಾ
ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ ಸುಖವೆಂಬ ಉಯ್ಯಾಲೆಯಲೀ ಸಖ ನಿನ್ನಾ ತೂಗುವೇ
ಹಾಯಾಗಿ ತೂಗಿ ಕೂಗುವೇ....
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಇಬ್ಬರು : ಒಲವಿನಾ ಲೋಕಕೇ ನೀ ತಂದೇ ಪೂರ್ಣಿಮಾ....
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ...
----------------------------------------------------------------------------------------------------------------------
ವಿಜಯವಾಣಿ (1976) - ನೀ ನಗುವಾಗ ಹೂ ಬಿರಿದಾಗಾ
ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ, ಎಸ್.ಜಾನಕಿ
ಅಹ್ಹಹ್ಹ (ಹೂ ಹೂ ) ಅಹ್ಹಹ್ಹ (ಹೂ ಹೂ )
ನೀ ನಗುವಾಗ ಹೂ ಬಿರಿದಾಗಾ ಈ ಮನದಲ್ಲಿ ಹರುಷಾ ಮೂಡಿತೂ ಕವಿತೇ ಹಾಡಿತೂ
ಹೆಣ್ಣು : ನೀ ಕರೆದಾಗ ಕೈ ಹಿಡಿದಾಗ ಈ ತನುವಲ್ಲೀ ಸೊಗಸೂ ಮೂಡಿತೂ ವಯಸೂ ಕಾಡಿತೂ....
ಗಂಡು : ನೀ ನಗುವಾಗ (ಹೂಹೂ ) ಹೂ ಬಿರಿದಾಗಾ
ಗಂಡು : ಅಹಾ..(.ಆಹಾ.) ಹೇಹೇ .(.ಅಹಾ.)..
ಈ ಸಂಜೆ ಸೊಬಗಿನಲ್ಲೀ ಈ ತಂಪು ಗಾಳಿಯಲ್ಲೀ ನಾ ನಿನ್ನ ಸ್ನೇಹದಲ್ಲೀ ಆನಂದ ಕಂಡೆನೂ...
ಹೆಣ್ಣು : ನೀ ಕರೆದಾಗ (ಆ.. ಅಹ್ಹಹ್ಹಹ್ಹಾ) ಕೈ ಹಿಡಿದಾಗ ಈ ತನುವಲ್ಲೀ ಸೊಗಸೂ ಮೂಡಿತೂ ವಯಸೂ ಕಾಡಿತೂ....
ನೀ ಕರೆದಾಗ ಕೈ ಹಿಡಿದಾಗ
ಒಲವೆಂಬ ಗಂಗೆಯಲ್ಲೀ ಸುಖದಿಂದ ತೇಲೀ ತೇಲೀ ಎಂದೆಂದು ಹೀಗೇ ಸೇರೀ ಈ ಬದುಕು ಸಾಗಲೀ
ಹೆಣ್ಣು : ಅಹಾ...(ಆಹಾ)....ಅಹಾ...(.ಆ..ಆಆ .)
ಈ ಪಯಣ ಮುಗಿಯದಿರಲೀ ಬಾಳೆಲ್ಲ ಹೀಗೇ ಇರಲೀ ಯುಗ ಉರುಳಿ ಯುಗವೇ ಬರಲೀ ನಾನೆಂದು ನಿನ್ನಲೀ. ಗಂಡು : ನೀ ನಗುವಾಗ ಹೂ ಬಿರಿದಾಗಾ
ಇಬ್ಬರು : ಈ ಮನದಲ್ಲಿ ಹರುಷಾ ಮೂಡಿತೂ ಕವಿತೇ ಹಾಡಿತೂ
ಲಾಲಲಲಾ ... ಆಆಆ ... ಲಾಲಲಲಾ ... ಆಆಆ ... ಲಾಲಲಲಾ ... ಆಆಆ ... ಲಾಲಲಲಾ ... ಆಆಆ ...
--------------------------------------------------------------------------------------------------------------------------
ವಿಜಯವಾಣಿ (1976) - ಈ ಊರು ಚೆಂದವೋ ಆ ಊರು ಚೆಂದವೋ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್
ಈ ಹಾಡಿನ ಸಾಹಿತ್ಯ ಲಭ್ಯವಿಲ್ಲ ... ಕ್ಷಮಿಸಿರಿ...
--------------------------------------------------------------------------------------------------------------------------
ವಿಜಯವಾಣಿ (1976) - ಕಲ್ಲಿಂದ ಹೂವೂ ಮೂಡುವುದೂ ಉಂಟೇ ..
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ.
ಬೆಂಕಿಯನು ಹಣ್ಣೆಂದೂ ಭ್ರಮಿಸಿ ಬಂದಾ ಪತಂಗದಂತೇ
ಸಿರಿಯನ್ನೂ ಸುಖವೆಂದೂ ನಂಬಿ ಬಂದೆಯಾ ವನಿತೇ ..
ಕಲ್ಲಿಂದ ಹೂವೂ ಮೂಡುವುದೂ ಉಂಟೇ .. ಮುಳ್ಳಿಂದ ನೋವೂ ಕಾಣಿಸದೇ .. ಉಂಟೇ ..
ಬೆಂಕಿಯಲಿ ತಂಪಿದೇ ಎಂಬ ಮರುಳಾಟವೇಕೇ .. ಮರುಳಾಟವೇಕೇ ..
ಕಲ್ಲಿಂದ ಹೂವೂ ಮೂಡುವುದೂ ಉಂಟೇ ..
ನೀನಂದೂ ಬಯಸಿದ ಭಾಗ್ಯ ಬೇಕಿಂದರೇನು
ದೂರಕ್ಕೆ ಬೆಟ್ಟ ನುಣುಪೂ ನೀ ಬಲ್ಲೇಯೇನು
ನೂರೆಂಟೂ ಆಸೆಯ ಬಲೆಯ ಮೀನಾದೇ ನೀನೂ
ಸುಖಶಾಂತಿ ಎಂಬ ಮಾತು ಕನಸಾಯಿತೇನು... ಕನಸಾಯಿತೇನು...
ಕಲ್ಲಿಂದ ಹೂವೂ ಮೂಡುವುದೂ ಉಂಟೇ .. ಮುಳ್ಳಿಂದ ನೋವೂ ಕಾಣಿಸದೇ .. ಉಂಟೇ ..
ಇರುಳಲ್ಲಿ ಕಾಣುವನೆಂಬ ಹುಚ್ಚಾಟವೇನೂ
ನೆರಳನ್ನೂ ಹಿಡಿಯುವನೆಂಬ ಹುಡುಗಾಟವೇನೂ
ಮನದಲ್ಲಿ ಮೂಡದ ಶಾಂತಿ ಸಿರಿ ತರುವುದೇನೂ
ಹಣದಿಂದ ನೆಮ್ಮದಿ ಸುಖವ ಕೊಳ್ಳುವೆಯಾ ನೀನೂ... ಕೊಳ್ಳುವೆಯಾ ನೀನೂ
ಕಲ್ಲಿಂದ ಹೂವೂ ಮೂಡುವುದೂ ಉಂಟೇ .. ಮುಳ್ಳಿಂದ ನೋವೂ ಕಾಣಿಸದೇ .. ಉಂಟೇ ..
ಬೆಂಕಿಯಲಿ ತಂಪಿದೇ ಎಂಬ ಮರುಳಾಟವೇಕೇ .. ಮರುಳಾಟವೇಕೇ ..
ಕಲ್ಲಿಂದ ಹೂವೂ ಮೂಡುವುದೂ ಉಂಟೇ ..
--------------------------------------------------------------------------------------------------------------------------
No comments:
Post a Comment