419. ಬಾಳುಜೇನು (1976)



ಬಾಳು ಜೇನು ಚಿತ್ರದ ಹಾಡುಗಳು
  1. ಮಧುರ ಬಲು ಮಧುರ ಬಾಳು 
  2. ಸಂಸಾರದ ಸಂತೋಷವೇ 
  3. ಆಸೆ ಅರಳಿದೆ ನನ್ನಾಸೆ ಅರಳಿದೇ 
  4. ಒಂದೇ ಒಂದು ಕಥೆ ಹೇಳುವೇ 
ಬಾಳುಜೇನು (1976) - ಮಧುರ ಬಲು ಮಧುರ ಬಾಳುಜೇನಾದಾಗ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ: ಕೆ.ಜೆ.ಯೇಸುದಾಸ್ ಮತ್ತು ಎಸ್.ಜಾನಕಿ.


ಗಂಡು : ಮಧುರ ಬಲು ಮಧುರ ಬಾಳುಜೇನಾದಾಗ
           ಮನಸು ಮನಸು ಲೀನವಾಗಿರುವಾಗಾ...
          ಮಧುರ ಬಲು ಮಧುರ ಬಾಳುಜೇನಾದಾಗ
          ಮನಸು ಮನಸು ಲೀನವಾಗಿರುವಾಗಾ...

ಗಂಡು : ಜೀವನ ಹೂಬನದೇ ವಾಸಂತಿಯು ನೀನೇ
           ಶೃಂಗಾರದ ಕಾವ್ಯದಲೀ ನವ ನಾಯಕಿ ನೀನೇ
           ಪ್ರಣಯದ ಬಾನಿನಲೀ ಮಧುಚಂದಿರ ನೀನೇನೇ
           ಒಲಿದ ಬಂದ ದೇವತೆ ನೀ ಹೃದಯ ಮಂದಿರ ಜ್ಯೋತಿಯು ನೀ
          ನಿನ್ನ ಪಡೆದಿಹ ಧನ್ಯ ನಾ....
         ಮಧುರ ಬಲು ಮಧುರ ಬಾಳುಜೇನಾದಾಗ
         ಮನಸು ಮನಸು ಲೀನವಾಗಿರುವಾಗಾ...

ಹೆಣ್ಣು : ಆಸೆಯ ಬಳ್ಳೀಯಲೀ ಹೂವಾದ ವೇಳೇ
          ಈ ಮಾತೆಯ ಹಿರಿಮೆಯನೂ ನೀ ತಂದ ವೇಳೇ
         ಕಂಡಿಹ ಕನಸುಗಳೂ ನನಸಾದ ಈ ವೇಳೇ
         ತೊದಲು ನುಡಿಯೇ ಮುತ್ತುಗಳೂ
         ಹೊಳೆವ ಕಂಗಳೆ ತಾರೆಗಳೂ
         ನಿನ್ನ ಪಡೆದಿಹ ಧನ್ಯ ನಾ....
        ಮಧುರ ಬಲು ಮಧುರ ಬಾಳುಜೇನಾದಾಗ
        ಮನಸು ಮನಸು ಲೀನವಾಗಿರುವಾಗಾ...

ಹೆಣ್ಣು : ಗೋಕುಲ ಆಡಿಸಿದಾ ಶ್ರೀ ಕೃಷ್ಣನು ನೀನೇ
          ತುಂಟರ ಗುರುವೆನಿಸೀ ಮೆರೆವಾತನು ನೀನೇ
ಗಂಡು : ವಂಶದ ದೀಪವನೂ ಬೆಳಗುವ ನೀನೇನೇ
           ಚಿನ್ನದಂತ ಮಗುವಿರಲೂ ಪ್ರೀತಿ ಮಡದಿ ಜೊತೆಯಿರಲೂ
          ನಿಮ್ಮ ಪಡೆದಿಹ ಧನ್ಯ ನಾ....
ಇಬ್ಬರು : ಮಧುರ ಬಲು ಮಧುರ ಬಾಳುಜೇನಾದಾಗ
            ಮನಸು ಮನಸು ಲೀನವಾಗಿರುವಾಗಾ...
-----------------------------------------------------------------------------------------------------------------------

ಬಾಳು ಜೇನು (೧೯೭೬)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಎಸ್.ಪಿ.ಬಿ.


ಸಂಸಾರದ ಸಂತೋಷವೇ ಸಂಗೀತವಾಗಿದೆ
ಸಂಸಾರದ ಸಂತೋಷವೇ ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ ಸಪ್ತಸ್ವರವಾಗಿ
ಸಂಸಾರದ ಸಂತೋಷವೇ ಸಂಗೀತವಾಗಿದೆ

ಮನಸಿನ ಉಯ್ಯಾಲೆ ಮೇಲೆ ನಿನ್ನ ಕೂರಿಸಿ
ನಾ ತೂಗುವೆ ಅನುರಾಗದ ಹೂ ಮಳೆ ಸುರಿಸಿ
ಮನಸಿನ ಉಯ್ಯಾಲೆ ಮೇಲೆ ನಿನ್ನ ಕೂರಿಸಿ
ನಾ ತೂಗುವೆ ಅನುರಾಗದ ಹೂ ಮಳೆ ಸುರಿಸಿ
ನಾದವು ನೀ, ತಾನವು ನೀ, ಹೃದಯ ವೀಣೆಗೆ
ಸಂಸಾರದ ಸಂತೋಷವೇ ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ ಸಪ್ತಸ್ವರವಾಗಿ
ಸಂಸಾರದ ಸಂತೋಷವೇ ಸಂಗೀತವಾಗಿದೆ

ನಗುವಿನ ಕಾರಂಜಿ ಎಂದು ಮನೆಯ ತುಂಬಲಿ
ನೋವೆನ್ನುವ ಬಿರುಗಾಳಿಯು ಬೀಸದೆ ಇರಲಿ
ನಗುವಿನ ಕಾರಂಜಿ ಎಂದು ಮನೆಯ ತುಂಬಲಿ
ನೋವೆನ್ನುವ ಬಿರುಗಾಳಿಯು ಬೀಸದೆ ಇರಲಿ
ಯಾವ ತೆರೆ, ಮುಚ್ಚು ಮರೆ, ಇಲ್ಲ ನಮ್ಮಲೀ
ಸಂಸಾರದ ಸಂತೋಷವೇ ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ ಸಪ್ತಸ್ವರವಾಗಿ
ಸಂಸಾರದ ಸಂತೋಷವೇ ಸಂಗೀತವಾಗಿದೆ
--------------------------------------------------------------------------------------------------------------------------

ಬಾಳು ಜೇನು (೧೯೭೬) - ಆಸೆ ಅರಳಿದೆ ನನ್ನಾಸೆ ಅರಳಿದೆ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಕುಣಿಗಲ ನಾಗಭೂಷಣ ಗಾಯನ: ಎಸ್.ಜಾನಕೀ, ಕೋರಸ್

ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ ಸುಖವ ಕೋರಿ
ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ ಸುಖವ ಕೋರಿ 
ಆಸೆ ಅರಳಿದೆ...  ನನ್ನಾಸೆ ಅರಳಿದೆ..

(ಲಲ್ಲಲ್ಲಾ.. ಲಲ್ಲಲ್ಲಾ.. ಲಲ್ಲಲ್ಲಾ.. ಲಲ್ಲಲ್ಲಾ.. ಲಲ್ಲಲ್ಲಾ..
ರೂರು ರೂರು ರೂರು ರೂರು ರೂರು ರೂರು ರೂರು)

ಹೃದಯದ ವೇಗ ಮಿಡಿದಿಹ ರಾಗ ಕೇಳಿ ಬರುತಿದೆ
ಹರೆಯದ ಯೋಗ ಮನಸಿನ ಭಾವ ಹೀಗೇ ನುಡಿದಿದೆ
ಗೆಳೆಯನು ಕುರಡ ಒಲವನು ನೀಡಿ ನಿಂತು ಕಾಡಿದೆ
ಅಂತರಂಗ ಪ್ರೀತಿ ಚಿಲುಮೆಯ ರೀತಿ ತಾ ಹೊಳ್ಳಿ ಬಂದಂತಿದೆ
ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ ಸುಖವ ಕೋರಿ 
ಆಸೆ ಅರಳಿದೆ...  ನನ್ನಾಸೆ ಅರಳಿದೆ..

ರಸಮತಿ ಬೇಡಿ ಗೆಳೆತನ ನೀಡಿ ಯಾರು ಬರುವನೋ
ಕನಸಿನ ಮೋಹ ತರುತಿದೆ ದಾಹ ಮೈಯೇನೋ ನುಡೀತಿದೇ
ಪಡೆಯಿದು ರೀತಿ ಕನಸಲು ಭೀತಿ ಇಂದೂ ಕೂಡಿದೆ
ಬೆರೆಯದ ಮಾತು ನುಡಿಯಲು ನಿಂತೂ ಏನೇನೋ ಬೇಕೆಂದಿದೆ
ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ ಸುಖವ ಕೋರಿ 
ಆಸೆ ಅರಳಿದೆ...  ನನ್ನಾಸೆ ಅರಳಿದೆ.. 
ಆಆಆಆ... 
-----------------------------------------------------------------------------------------------------------------------

ಬಾಳು ಜೇನು (೧೯೭೬) - ಒಂದೇ ಒಂದು ಕಥೆಯ ಹೇಳುವೇ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಆರ್.ಏನ್.ಜಯಗೋಪಾಲ ಗಾಯನ: ಎಸ್.ಜಾನಕೀ

ಒಂದೇ ಒಂದು ಕಥೆಯ ಹೇಳುವೇ
ಒಂದೇ ಒಂದು ಕಥೆಯ ಹೇಳುವೇ
ಕೊನೆಯಿಲ್ಲದ ಕಥೆ ಸುಖವ ವ್ಯಥೆಯ ಮುಗಿವ
ಒಂದೇ ಒಂದು ಕಥೆಯ ಹೇಳುವೇ

ಕಾಡಲಿ ಒಂದು ಜಿಂಕೆಯಿದೆ ಓಡುತ ಹರುಷದಲಿ 
ಕಾಡಲಿ ಒಂದು ಜಿಂಕೆಯಿದೆ ಓಡುತ ಹರುಷದಲಿ 
ಬೇಡನು ಬಂದ ಒಂದು ಕಡೇ ಒಂದೆಡೇ ಗಂಡು ಹುಲಿ 
ಬೆದರುತಲಿ ನಡುಗುತಿದೆ ಜಿಂಕೆ ನಡುವಿನಲಿ 
ಒಂದೇ ಒಂದು ಕಥೆಯ ಹೇಳುವೇ

ಜಿಂಕೆಯ ಮೂಕ ವೇದನೆಯ ಬಲ್ಲವರಾರುಂಟೂ 
ಜಿಂಕೆಯ ಮೂಕ ವೇದನೆಯ ಬಲ್ಲವರಾರುಂಟೂ 
ಕಣ್ಣಿನ ಕಂಬನಿ ಧಾರೆಯನು ಒರೆಸುವರಾರುಂಟೂ 
ಪ್ರತಿ ನಿಮಿಷ ಹಲವರುಷ ಶಾಂತಿ ಎಲ್ಲುಂಟೂ 
ಒಂದೇ ಒಂದು ಕಥೆಯ ಹೇಳುವೇ

ತುಂಬಿರೇ ಗುಟ್ಟು ಹೃದಯದಲಿ ನೆಮ್ಮದಿ ಸಿಗದಂತೇ 
ತುಂಬಿರೇ ಗುಟ್ಟು ಹೃದಯದಲಿ ನೆಮ್ಮದಿ ಸಿಗದಂತೇ 
ಸತ್ಯದ ಹಿಂದೇ ಅಡಗಿರುವ ಶೋಧನೆ ಹಲವಂತೇ 
ನಿಜ ತಿಳಿಸು ದೇವರಲೀ ಧೈರ್ಯ ಕಾಣಲ್ಲಿ 
ಒಂದೇ ಒಂದು ಕಥೆಯ ಹೇಳುವೇ
ಕೊನೆಯಿಲ್ಲದ ಕಥೆ ಸುಖವ ವ್ಯಥೆಯ ಮುಗಿವ
-----------------------------------------------------------------------------------------------------------------------

No comments:

Post a Comment