421. ಕಿಲಾಡಿ ಕಿಟ್ಟು (1976)


ಕಿಲಾಡಿ ಕಿಟ್ಟು ಚಿತ್ರದ ಹಾಡುಗಳು 
  1. ಮಡಿಲಲ್ಲಿ ಮಗುವಾದೆ ನಾನು 
  2. ನನ್ನ ನಿನ್ನ ಒಲವೂ ಮಧುರ 
  3. ಹೂವಂತೇ ಹೆಣ್ಣು ನಗುತಿರಬೇಕು 
  4. ತಾವರೇ ಹೂವೂ ಈ ನಿನ್ನ ಮೊಗವೂ 
  5. ಮನಸನು ಕೋಡು 
  6. ಈ ಚೆಲುವೂ ಸೆಳೆವ ನಗುವೂ 
ಕಿಲಾಡಿ ಕಿಟ್ಟು (1976) - ಮಡಿಲಲ್ಲಿ ಮಗುವಾಗಿ ನಾನು
ಸಂಗೀತ : ಮೋಹನ್ ಕುಮಾರ್ ಸಾಹಿತ್ಯ : ಆರ್.ಎನ್.ಜಯಗೋಪಾಲ್  ಗಾಯನ : ವಿಷ್ಣುವರ್ಧನ್, ಪಿ.ಸುಶೀಲ

ಗಂಡು : ಮಡಿಲಲ್ಲಿ ಮಗುವಾಗಿ ನಾನು (ಹೂಂಹೂಂಹೂಂ)
           ಮಮತೇಯ ಸೆಲೆಯಾಗಿ ನೀನು (ಹಾ.ಆ.. )..
          ಇರುವಾಗ ಬಾಳೆಲ್ಲ ಜೇನು (ಹಾ.ಆ.ಆಆ . ).
          ಕನಸೆಲ್ಲ ಹುಸಿಯಾಯಿತೇನು (ಹೂಂಹೂಂಹೂಂ)
          ಮಡಿಲಲ್ಲಿ ಮಗುವಾಗಿ ನಾನು ಮಮತೇಯ ಸೆಲೆಯಾಗಿ ನೀನು
         ಇರುವಾಗ ಬಾಳೆಲ್ಲ ಜೇನು ಕನಸೆಲ್ಲ ಹುಸಿಯಾಯಿತೇನು
ಹೆಣ್ಣು : ಮಡಿಲಲ್ಲಿ ಮಗುವಾಗಿ ನೀನು ಮಮತೇಯ ಸೆಲೆಯಾಗಿ ನಾನು
          ಇರುವಾಗ ಬಾಳೆಲ್ಲ ಜೇನು ಕನಸೆಲ್ಲ ನನಸಾಗದೇನು
ಗಂಡು: ಮಡಿಲಲ್ಲಿ ಮಗುವಾಗಿ ನಾನು

ಗಂಡು : ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
           ಕುಡಿನೋಟದಲ್ಲಿ ನೂರಾಸೆ ತರಿಸಿ
           ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
           ಕುಡಿನೋಟದಲ್ಲಿ ನೂರಾಸೆ ತರಿಸಿ
          ಹಗಲು ಇರುಳು ಮನದಲ್ಲೆ ನೆಲೆಸಿ         
          ಹಗಲು ಇರುಳು ಮನದಲ್ಲೆ ನೆಲೆಸಿ ದೂರಕೆ ಎಲ್ಲಿ ತೆರಳಿರುವೆ
ಹೆಣ್ಣು : ಮಿಗಿಲಾಗಿ ಅವನೊಬ್ಬ ಇಹನು ನಮಗೆಂದು ಕೇಡೊಂದು ತರನು
ಗಂಡು : ಮಡಿಲಲ್ಲಿ ಮಗುವಾಗಿ ನಾನು ಮಮತೇಯ ಸೆಲೆಯಾಗಿ ನೀನು
ಹೆಣ್ಣು : ಇರುವಾಗ ಬಾಳೆಲ್ಲ ಜೇನು ಕನಸೆಲ್ಲ ನನಸಾಗದೇನು
ಗಂಡು : ಮಡಿಲಲ್ಲಿ ಮಗುವಾಗಿ ನಾನು

ಹೆಣ್ಣು : ಮನೆಯೆಂಬ ಗುಡಿಗೆ ಬೆಳಕಾಗಿ ಇರುವೆ
          ಜೋತೆಯಲ್ಲೆ ಬರುವೆ ನೆರಳಾಗೆ ನಡೆವೆ
         ಮನೆಯೆಂಬ ಗುಡಿಗೆ ಬೆಳಕಾಗಿ ಇರುವೆ
         ಜೋತೆಯಲ್ಲೆ ಬರುವೆ ನೆರಳಾಗೆ ನಡೆವೆ
         ಬಿಸಿಲೋ ಮಳೆಯೋ ನಿಮ್ಮಲ್ಲಿ ಬೆರೆವೆ
        ಬಿಸಿಲೋ ಮಳೆಯೋ ನಿಮ್ಮಲ್ಲಿ ಬೆರೆವೆ ಸಂದೇಹ ಬೇಡ ಕಲೆತಿರುವೆ
ಗಂಡು : ಮಿಗಿಲಾಗಿ ಅವನೊಬ್ಬ ಇಹನು ನಮಗೆಂದು ಕೇಡನ್ನು ತರನು
ಹೆಣ್ಣು :  ಮಡಿಲಲ್ಲಿ ಮಗುವಾಗಿ         ಗಂಡು : ನಾನು
ಗಂಡು : ಮಮತೇಯ ಸೆಲೆಯಾಗಿ   ಹೆಣ್ಣು : ನಾನು
ಹೆಣ್ಣು : ಇರುವಾಗ ಬಾಳೆಲ್ಲ            ಗಂಡು : ಜೇನು
ಇಬ್ಬರು : ಕನಸೆಲ್ಲ ನನಸಾಗದೇನು ಲಲ್ಲಲಾ ಲಾಲಾ ಲಲ್ಲಾ
-----------------------------------------------------------------------------------------------------------------------

ಕಿಲಾಡಿ ಕಿಟ್ಟು (1978)
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಮೋಹನ್ ಕುಮಾರ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ


ಗಂಡು : ಲಾಲಲಾ ಲಾಲಲಾ     ಹೆಣ್ಣು : ಲಲ್ಲಲಾ
ಗಂಡು : ಲಾಲಲಾ ಲಾಲಲಾ     ಹೆಣ್ಣು : ಲಲ್ಲಲಾ ಲಲ್ಲಲಾ
ಗಂಡು : ಲಾಲಲಾ ಲಾಲಲಾ     ಹೆಣ್ಣು : ಲಲ್ಲಲಾ ಲಲ್ಲಲಾ
ಇಬ್ಬರು : ಅಹ್ಹಹ್ಹಾ ಅಹ್ಹಹ್ಹ ಅಹ್ಹಹ್ಹಾ 
ಹೆಣ್ಣು : ನನ್ನ ನಿನ್ನ ಒಲವು ಮಧುರ ಹರುಷ 
          ಎಂದಿನಿಂದ ಅನುಬಂಧ ಬಾಳ ಬಂಧ ಎಲ್ಲ ಚೆಂದ ಅಂದ 
          ಏನೀ ಉಲ್ಲಾಸ ಸಂದೇಶ
ಗಂಡು : ನಿನ್ನ ನನ್ನ ಒಲವು ಮಧುರ ಹರುಷ 
           ಅಂದು ನಿನ್ನ ನಡೆಯಿಂದ ಬಂತು ಇಂತ ಬಾಳ ಬಂಧ ಅಂದ
           ಏನೀ ಉಲ್ಲಾಸ ಸಂದೇಶ

ಹೆಣ್ಣು : ಗಗನವು ಭೂಮಿಯ ಚುಂಬಿಸಿರೆ ನಲಿಯುತಿರೆ ಒಲವ ಧರೆ
          ಈ ಅಂದ ಚಂದಕೆ ಯಾವಾಸರೆ
         ಈ ಅಂದ ಚಂದಕೆ ಯಾವಾಸರೆ
ಗಂಡು : ಮನ ಮನದ ಮಿಲನ ಬಗೆ ಬೇರೆ
            ಆನಂದ ಅನುರಾಗ ರಸಧಾರೆ
           ಏನೀ ಉಲ್ಲಾಸ ಸಂದೇಶ... ಅಹ್ಹ..ಅಹ್ಹ..ಅಹ್ಹ
ಹೆಣ್ಣು : ನನ್ನ ನಿನ್ನ ಒಲವು ಮಧುರ ಹರುಷ 
          ಎಂದಿನಿಂದ ಅನುಬಂಧ ಬಾಳ ಬಂಧ ಎಲ್ಲ ಚೆಂದ ಅಂದ 
          ಏನೀ ಉಲ್ಲಾಸ ಸಂದೇಶ

ಗಂಡು : ಮಧುಮಯ ಹೂಬನ ಸವಿಗಾನ ದುಂಬಿ ಜೊತೆ ಈ ಮಿಲನ
            ಏನೆಂದು ಬಲ್ಲೆಯ ಆಲಾಪನ
            ಏನೆಂದು ಬಲ್ಲೆಯ ಆಲಾಪನ
ಹೆಣ್ಣು : ಮನ ಮನದ ಬಯಕೆ ಗುರಿ ಸೇರೆ
          ಆನಂದ ಅನುರಾಗ ರಸಧಾರೆ
          ಏನೀ ಉಲ್ಲಾಸ ಸಂದೇಶ
ಗಂಡು : ನಿನ್ನ ನನ್ನ ಒಲವು ಮಧುರ ಹರುಷ
           ಅಂದು ನಿನ್ನ ನಡೆಯಿಂದ ಬಂತು ಇಂತ ಬಾಳ ಬಂಧ ಅಂದ
          ಏನೀ ಉಲ್ಲಾಸ ಸಂದೇಶ
--------------------------------------------------------------------------------------------------------------------------

ಕಿಲಾಡಿ ಕಿಟ್ಟು (1978) - ಹೂವಂತೇ ಹೆಣ್ಣು ನಗುತಿರಬೇಕು 
ಸಂಗೀತ : ಮೋಹನ್ ಕುಮಾರ,  ಸಾಹಿತ್ಯ: ಚಿ।।ಉದಯಶಂಕರ, ಗಾಯನ: ಕೆ.ಜೆ. ಏಸುದಾಸ್

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಬಂಗಾರವಲ್ಲ ಸಿಂಗಾರಕಲ್ಲ ಕೊರಳಿನಲಿ
ಮೆರೆದಿರಲು ಮಾಂಗಲ್ಯವಿಲ್ಲ
ಬಂಗಾರವಲ್ಲ ಸಿಂಗಾರಕಲ್ಲ ಕೊರಳಿನಲಿ
ಮೆರೆದಿರಲು ಮಾಂಗಲ್ಯವಿಲ್ಲ
ಸುಮವ ಕೊಡುವ ಲತೆಗೆ ಹಸಿರೇ ಉಸಿರಾಗಿದೆ
ಗೃಹಿಣಿ ಇರುವ ಗುಡಿಗೆ ತಾಳಿ ಬೆಳಕಾಗಿದೆ
ಸಂತೋಷವೇನು ನೋವಾದರೇನು
ವಿರಸ ಮರೆತು ಸರಸದಿಂದ ಬಾಳಲು ಸೊಗಸು
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೇ ತೊರೆಯುವುದೇ ಸಂಬಂಧ ನೂಕಿ
ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೇ ತೊರೆಯುವುದೇ ಸಂಬಂಧ ನೂಕಿ
ಒಲಿದ ಹೃದಯ ಬೆರೆತ ಜೀವ ಬಿಡದೆಂದಿಗೂ
ಮದುವೆ ತಂದ ಬೆಸುಗೆ ಕೆಡದು ಎಂದೆಂದಿಗೂ
ಈ ರೋಷ ತಂದ ಆವೇಶದಿಂದ
ಸಹನೆ ಮರೆವೆ ಕಡೆಗೆ ಕೆಡುವೆ ಯಾತನೆ ಪಡುವೆ
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇ… ಕು
--------------------------------------------------------------------------------------------------------------------------

ಕಿಲಾಡಿ ಕಿಟ್ಟು (1978) - ತಾವರೇ ಹೂವು ಈ ನಿನ್ನ ಮೊಗವೂ
ಸಂಗೀತ : ಮೋಹನ್ ಕುಮಾರ, ಸಾಹಿತ್ಯ: ಚಿ।।ಉದಯಶಂಕರ, ಗಾಯನ: ಎಸ್.ಪಿ.ಬಿ. 


ಅಹ್ಹಹ್ಹ... ತಾವರೇ ಹೂವೂ ಈ ನಿನ್ನ ಮೋಗವು 
ನೈದಿಲೆಯಂತೇ ಈ ಕಣ್ಣ ಚೆಲುವೂ 
ನಗೆಯ ಹೂಬಾಣ ಎಸೆಯುವೇಯಾ 
ಎದೆಯ ನೀ ಸೇರಿ ನಲಿಯುವೆಯಾ 
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ 
ಈ ನನ್ನ ಮನಸ್ಸನ್ನೂ ಕೊಲ್ಲುವೇಯಾ... ಓಯ್ ಹ್ಹಾ..  
ತಾವರೇ ಹೂವೂ ಈ ನಿನ್ನ ಮೋಗವು 
ನೈದಿಲೆಯಂತೇ ಈ ಕಣ್ಣ ಚೆಲುವೂ 
ನಗೆಯ ಹೂಬಾಣ ಎಸೆಯುವೇಯಾ ... ಹ್ಹಾ.. 
ಎದೆಯ ನೀ ಸೇರಿ ನಲಿಯುವೆಯಾ 
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ 
ಈ ನನ್ನ ಮನಸ್ಸನ್ನೂ ಕೊಲ್ಲುವೇಯಾ ಓಯ್ ಓಯ್ ಓಯ್ ಓಯ್ 

ನಿನ್ನಂಥ ಚೆಲುವೆಯ ಮೋಗವನು ನಾನು
ನೋಡಿಲ್ಲ ಹೆಣ್ಣೇ ನಂಬು ನನ್ನಾಣೆ 
ನಿನ್ನನ್ನು ಕಂಡ ಕಣ್ಣು ಇನ್ನಾರೂ ನೋಡದಿನ್ನೂ 
ಬಳಿಯಿರೇ ನೀನೂ ನನ್ನ ಬಾಳು ಜೇನು . 
ನನ್ನಂಥ ರಸಿಕನ ಗೆಳೆತನವನ್ನೂ 
ಬಿಟ್ಟರೇ ಹೀಗೇ ಕೆಟ್ಟಿಯೇ ಜೋಕೇ 
ನಿನ್ನಿಂದ ಬೇರೆ ಏನೋ ಬೇಕಿಲ್ಲ ನಂಗೇ ಏನೋ 
ತುಟಿಗಳ ಬಯಕೆ ತಿರಿದಿರೇ ಸಾಕೇ 
ಆಆಆ ಆಆಆ ಆಆಆ .. ಆ.. ಆ.. ಹೇ... ಹೇ.. ಹೇಹೇಹೇಹೇ 

ನನ್ನಲ್ಲಿ ಬೆರೆಯುತ ಅರಿತರೇ ಮನಸೂ 
ಬಾಳೆಲ್ಲ ಸರಸ ಎಂದೆಂದೂ ಹರುಷ 
ಯಾರಿಲ್ಲ ನೋಡೂ ಚಿನ್ನ ಸಂಕೋಚವೇನೋ ಚೆನ್ನ 
ತೋಳಲಿ ಬಳಸೂ ಕಾಣುವೇ ಸೊಗಸೂ 
ಅಹ್ಹ ಅಹ್ಹ ಅಹ್ಹಹ್ಹಾ...   ಅಹ್ಹ ಅಹ್ಹ ಅಹ್ಹಹ್ಹಾ... 
ನಿನ್ನಲ್ಲಿ ಮರೆಯಲಿ ಅಡಗಿದೆ ಅಂದ ನನ್ನನ್ನೂ ಕೆಣಕಿ ಮನಸ್ಸನ್ನು ಕೆದಕಿ 
ಇನ್ನೇಕೆ ದೂರ ನಿಂತೇ ಬಾ ಇಲ್ಲಿ ಎಲ್ಲ ನಿಂದೇ 
ಎನ್ನಲೂ ಸೋತೇ ಓಡೋಡಿ ಬಂದೇ 
ಆಆಆಆಅ... ಆಆಆಆಅ ಹೇಹೇಹೇಹೇಹೇಹ್ಹೇಹ್ಹೇಹೇ 
ತಾವರೇ ಹೂವೂ ಈ ನಿನ್ನ ಮೋಗವು 
ನೈದಿಲೆಯಂತೇ ಈ ಕಣ್ಣ ಚೆಲುವೂ 
ನಗೆಯ ಹೂಬಾಣ ಎಸೆಯುವೇಯಾ ... ಹ್ಹಾ.. 
ಎದೆಯ ನೀ ಸೇರಿ ನಲಿಯುವೆಯಾ 
ಹೂವಂಥ ಹೆಣ್ಣಾಗಿ ಹೂವಿಂದ ದೂರಾಗಿ 
ಈ ನನ್ನ ಮನಸ್ಸನ್ನೂ ಕೊಲ್ಲುವೇಯಾ ಓಯ್ 
--------------------------------------------------------------------------------------------------------------------------

ಕಿಲಾಡಿ ಕಿಟ್ಟು (1978) - ಮನಸನು ಕೊಡು
ಸಂಗೀತ : ಮೋಹನ್ ಕುಮಾರ, ಸಾಹಿತ್ಯ: ಚಿ।।ಉದಯಶಂಕರ, ಗಾಯನ: ಎಸ್.ಜಾನಕೀ

ಮನಸನು ಕೊಡುತಿರೆ
ಮನಸನು ಕೊಡುತಿರೆ ನಾನಾರೋ ನೆನಪಿದೆ ಬರದಿರೇ ಕೇಳು ನನ್ನ ಹೂವೇ
ಮನಸನು ಕೊಡುತಿರೆ ನಾನಾರೋ ನೆನಪಿದೆ ಬರದಿರೇ ಕೇಳು ನನ್ನ ಹೂವೇ
ಮನಸನು ಕೊಡುತಿರೆ 

ನನ್ನಲ್ಲಿ ನೀನೂ ಆಆಆ... ಆಆಆ.. ಆಆಆ..... 
ನನ್ನಲ್ಲಿ ನೀನೂ ನಿನ್ನಿಂದ ನಾನೂ 
ಒಲಿದವಳ ಮರೆಯುವೆಯಾ ನಿನ್ನವಳ ತೊರೆಯುವೆಯಾ ನನ್ನಿನಿಯಾ 
ಮನಸನು ಕೊಡುತಿರೆ ನಾನಾರೋ ನೆನಪಿದೆ ಬರದಿರೇ ಕೇಳು ನನ್ನ ಹೂವೇ
ಮನಸನು ಕೊಡುತಿರೆ 

ಈ ಅನುಬಂಧ ಹೊಸದೇನೋ ಅಲ್ಲ 
ನಿಜವನು ಅರಿತರೇ ಸರಸದಿ ಬೆರೆತರೇ 
ಈ ಅನುಬಂಧ ಹೊಸದೇನೋ ಅಲ್ಲ 
ನಿಜವನು ಅರಿತರೇ ಸರಸದಿ ಬೆರೆತರೇ
ಹೊಸ ಬಾಳು ತಂದ ಆಆಆ.. ಸ.. ನಿಸ ದನಿಸ ಮದನಿಸ 
ಗಮದನಿಸ ಸಗಮದನಿಸ  ನಿಸಗಮದನಿಸ 
ಹೊಸಬಾಳು ತಂದ ಆನಂದದಿಂದ 
ಬೆಸೆದಿರಲೂ ತಪ್ಪಒಲವು ಅರಳಿರಲೂ ಮೈಮನವೂ ಹೊಸತನವೂ  
ಮನಸನು ಕೊಡು ತಿಳಿವೇ ಈ ರಾಧೆಯ ನೆನಪಿಗೆ ಬರದಿರೇ ಕೇಳು ಕೃಷ್ಣ  ಹೇಳುವೇ
ಮನಸನು ಕೊಡು ತಿಳಿವೆ... 
ಆಆಆ... ಆಆಆ... ಆಆಆ.. ಆಆಆ...  
ಮನಸನು ಕೊಡು ತಿಳಿವೆ... ಕೃಷ್ಣ  ಕೃಷ್ಣ  ಕೃಷ್ಣ  
--------------------------------------------------------------------------------------------------------------------------

ಕಿಲಾಡಿ ಕಿಟ್ಟು (1978) - ಈ ಚೆಲುವು ಸೆಳೆವ ನಗುವೂ
ಸಂಗೀತ : ಮೋಹನ್ ಕುಮಾರ, ಸಾಹಿತ್ಯ: ಆರ್.ಏನ್.ಜಯಗೋಪಾಲ್, ಗಾಯನ: ಎಸ್.ಪಿ.ಬಿ.  ಎಸ್.ಜಾನಕೀ

ಗಂಡು : ಈ.. ಚೆಲುವೂ... ಸೆಳೆವಾ ನಗುವೂ
            ಇಂಥ ಬೆಡಗಿನ ಮೋಹಿನಿಯೋ ಮೋಹಕತೆ ಮಾದಕತೆ ತುಂಬಿ
            ಈ.. ಚೆಲುವೂ... ಸೆಳೆವಾ ನಗುವೂ

ಹೆಣ್ಣು : ಜೀವನ ಜೂಜಾಟ (ತ್ತತ್ತತುರೂರುರೂರು) ಆಸೆಯ ಚೆಲ್ಲಾಟ (ತ್ತತ್ತತುರೂರುರೂರು)
         ಕೆಣಕುವ ಕಣ್ಣೋಟ (ತ್ತತ್ತತುರೂರುರೂರು) ನಲಿಸಿದೆ ತುಂಟಾಟ (ತ್ತತ್ತತುರೂರುರೂರು)
         ದಾಹಕೆ ನೀರುಂಟು ಮೋಹಕೆ ಮದ್ದುಂಟು
         ಸುಮ್ಮನೇ ಸಿಗೋಲ್ಲಾ (ಆಆಆ) ಸಿಕ್ಕರೇ ಬಿಡೋಲ್ಲಾ (ಆಆಆ)
ಕೋರಸ್ : ಪಬಪಪ ಪಬಪಪ ಪಬಪಪ ರಿಬಬಬ ಪಬಪಪ
ಗಂಡು : ಹರೆಯದ ಹೊಳೆಯಲಿ ಈಜಾಡಿ ಬಂದೂ
           ಹೃದಯದ ತಾಳಕೇ ಆವೇಗ ತಂದೂ
          ಮನದಲಿ ಆಸೆಯ ಮೀಟುತ ಇಂದೂ
          ಮಿಲನಕೆ ಕರೆಯನು ಕಣ್ಣಲ್ಲೇ ತಂದಾ...
          ಈ.. ಚೆಲುವೂ... ಸೆಳೆವಾ ನಗುವೂ

ಹೆಣ್ಣು : ಹೆಣ್ಣು ಗಂಡೆಂಬ (ತ್ತತ್ತತುರೂರುರೂರು) ಬೇಧ ಇಲ್ಲಿಲ್ಲಾ (ತ್ತತ್ತತುರೂರುರೂರು)
          ಒಂದೇ ನಾವೆಲ್ಲಾ (ತ್ತತ್ತತುರೂರುರೂರು)ಮೋಜು ಬಾಳೆಲ್ಲಾ (ತ್ತತ್ತತುರೂರುರೂರು)
          ಗುಟ್ಟಾಗಿ ಏನಿಲ್ಲಾ ರಟ್ಟಾಗಿ ಇಲ್ಲೆಲ್ಲಾ 
          ಅಂಜಿಕೆ ಬೇಕಿಲ್ಲಾ (ಆಆ )  ಯಾರದೂ ಹಂಗಿಲ್ಲಾ (ಆಆ )
ಕೋರಸ್ : ಪಬಪಪ ಪಬಪಪ ಪಬಪಪ ರಿಬಬಬ ಪಬಪಪ
ಗಂಡು : ಕಂಗಳ ಹೊಳಪಿದು ಮಿಂಚಿನ ತಾರೇ 
           ತುಟಿಗಳ ಅಂಚಲಿ ಜೇನಿನ ಧಾರೇ 
           ಮೈಮನ ಮರೆಸುವ ರೂಪವೋ ಭವ್ಯ 
          ಯೌವ್ವನ ಬರೆದಿಹ ಸೊಬಗಿನ ಕಾವ್ಯ 
          ಈ.. ಚೆಲುವೂ... ಸೆಳೆವಾ ನಗುವೂ
          ಇಂಥ ಬೆಡಗಿನ ಮೋಹಿನಿಯೋ ಮೋಹಕತೆ ಮಾದಕತೆ ತುಂಬಿ
          ಈ.. ಚೆಲುವೂ... ಸೆಳೆವಾ ನಗುವೂ....  
 -------------------------------------------------------------------------------------------------------------------------

No comments:

Post a Comment