ನಮ್ಮ ಮಕ್ಕಳು ಚಲನಚಿತ್ರದ ಹಾಡುಗಳು
- ತಾರೆಗಳ ತೋಟದಿಂದ ಚಂದಿರ ಬಂದಾ
- ನಿನ್ನೊಲುಮೆ ನಮಗಿರಲಿ ತಂದೆ,
- ಮನಸೇ ನಗಲೇಕೆ ಹರುಷದೇ ನೀನು ಈ ದಿನ
- ನಿನ್ನೊಲುಮೆ ನಮಗಿರಲಿ ತಂದೆ ಕೈ ಹಿಡಿದು ನೀ ನಡೆಸು ಮುಂದೆ (ದುಃಖ)
ನಮ್ಮ ಮಕ್ಕಳು (1969) - ತಾರೆಗಳ ತೋಟದಿಂದ ಚಂದಿರ ಬಂದ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಜಾನಕಿ ಮತ್ತು ಸಂಗಡಿಗರು
ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ ಚಂ
ತಾರೆಗಳ ತೋಟದಿಂದ ಚಂದಿರ ಬಂದಾ
ನೈದಿಲೆಯ ಅಂದ ನೋಡಿ ಆಡಲು ಬಂದಾ...ತಾರೆಗಳ..
ಹಾಲಿನ ಕೊಳದಿ ಮಿಂದು ಬಂದು.ಹೊ.ಹೊ.ಹೊ
ಹೂಬಳ್ಳೀ ಉಯ್ಯಾಲೆ ಆಡಿ ನಿಂದು.ಹೊ.ಹೊ.ಹೊ
ಹೇಳಬೇಡವೆಂದು ಸನ್ನೆ ಮಾಡಿ ಮುಂದು
ಮೆಲ್ಲಗೇತ ಹುವ್ವಿಗಿತ್ತ ಮುತ್ತನೊಂದು..ಮುತ್ತನೊಂದು...ತಾರೆ..
ಹೂವಿನ ರಾಣಿಯ ಜೊತೆಗೂಡಿ .ಹೊ.ಹೊ.ಹೊ
ನಗುವ ಸಖನ ಪರಿ ನೋಡಿ .ಹೊ.ಹೊ.ಹೊ
ಕೋಪದಿಂದ ಕೂಡಿ ಕಂದು ಮುಖ ಬಾಡಿ
ತಾರೆಗಳು ನೋಡುತ್ತಿತ್ತು ದೂರ ಓಡಿ..ದೂರ ಓಡಿ...ತಾರೆ..
ಮೂಡಿರೆ ಬಾನಲ್ಲಿ ಕೆಂಪು ಬಣ್ಣಾ .ಹೊ.ಹೊ.ಹೊ
ಚಂದಿರ ತೆರೆದ ತನ್ನ ಕಣ್ಣಾ.ಹೊ.ಹೊ.ಹೊ
ಕಾಲ ಮೀರಿತೆಂದು ಬಾನ ಮೇಲೆ ನಿಂದು
ನೈದಿಲೆಗೆ ಕೈಯ್ಯ ಬೀಸಿ ಹೋದ ಮುಂದು..ಹೋದ ಮುಂದು
ಚಂದಿರನ ಆಟ ನೋಡಿ ನಕ್ಕನು ಬಾನೂ
ನೈದಿಲೆಯು ತನ್ನ ಮುಖ ಮುಚ್ಚಿತು ತಾನೂ..
ಲಾ ಲ ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ ಲಾ ಲ ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ....
--------------------------------------------------------------------------------------------------------------------------
ನಮ್ಮ ಮಕ್ಕಳು (1969) - ನಿನ್ನೊಲುಮೆ ನಮಗಿರಲಿ ತಂದೆ,
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಬಿ. ಕೆ. ಸುಮಿತ್ರಾ, ಪಿ.ಬಿ.ಶ್ರೀ, ಅಂಜಲಿ, ಕೌಸಲ್ಯ

ನಿನ್ನೊಲುಮೆ ನಮಗಿರಲಿ ತಂದೆ,
ಕೈ ಹಿಡಿದು ನೀ ನಡೆಸು ಮುಂದೆ
ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ
ದೀಪದೊಳು ನೀನೆನ್ನ ಅನುಗೊಳಿಸು ತಂದೆ
ಕಾನನದ ಸುಮವೊಂದು ಸೌರಭವ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆನ್ನ ತಂದೆ
ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ
ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ
ನಿನ್ನೊಲುಮೆ ನಮಗಿರಲಿ ತಂದೆ,
ಕೈ ಹಿಡಿದು ನೀ ನಡೆಸು ಮುಂದೆ
ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯೂ ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ,
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆ ಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ
ನಿನ್ನೊಲುಮೆ ನಮಗಿರಲಿ ತಂದೆ,
ಕೈ ಹಿಡಿದು ನೀ ನಡೆಸು ಮುಂದೆ
-------------------------------------------------------------------------------------------------------------------------
ನಮ್ಮ ಮಕ್ಕಳು (1969) - ಮನಸೇ ನಗಲೇಕೆ ಹರುಷದೇ ನೀನು ಈ ದಿನ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್, ಜಾನಕೀ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್, ಜಾನಕೀ
ಮನಸೇ ನಗಲೇಕೆ ಹರುಷದೇ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ
ಮನಸೇ ನಗಲೇಕೆ ಹರುಷದೇ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ
ನುಡಿ ಕಾರಣ ನೀ ನುಡಿ ಕಾರಣ
ಕನಸಲಿ ಕಂಡುದು ಎದುರಲೇ ಬಂದಿತೋ
ಸೊಗಸಿನ ಮೊಗವದು ಕಣ್ಣಲೇ ನಿಂದಿತೋ
ಕನಸಲಿ ಕಂಡುದು ಎದುರಲೇ ಬಂದಿತೋ
ಸೊಗಸಿನ ಮೊಗವದು ಕಣ್ಣಲೇ ನಿಂದಿತೋ
ನೀ ಆತುರ ಪಡಲೇಕೆ ಈ ಸಂಭ್ರಮ ನಿನಗೇಕೆ
ಮನಸೇ ನಗಲೇಕೆ ಹರುಷದೇ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ
ನುಡಿ ಕಾರಣ ನೀ ನುಡಿ ಕಾರಣ
ಕಳುಹಿದೆ ನಿನ್ನನ್ನು ಇನಿಯನಾ ಸನಿಹಕೆ
ಮರೆತು ನೀ ನನ್ನನ್ನು ಉಳಿದೆಯಾ ಅವರಲ್ಲೇ
ಕಳುಹಿದೆ ನಿನ್ನನ್ನು ಇನಿಯನಾ ಸನಿಹಕೆ
ಮರೆತು ನೀ ನನ್ನನ್ನು ಉಳಿದೆಯಾ ಅವರಲ್ಲೇ
ಮನಸೇ ನಗಲೇಕೆ ಹರುಷದೇ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ
ಪ್ರೇಮದಾ ಪಂಜರಾ ಮನಸಿನ ಮಂದಿರಾ
ಅದರಲಿ ಉದಿಸಿದಾ ಭಾವನೆ ಸುಂದರಾ
ಪ್ರೇಮದಾ ಪಂಜರಾ ಈ ಮನಸಿನ ಮಂದಿರಾ
ಅದರಲಿ ಉದಿಸಿದಾ ಭಾವನೆ ಸುಂದರಾ
ಅದ ತಂದಾವ ತಾನಾರೋ ಸುಖ ನಲ್ಲದೆ ಬೇರಾರೋ
ಮನಸೇ ನಗಲೇಕೆ ಹರುಷದೇ ನೀನು ಈ ದಿನ
ನುಡಿ ಕಾರಣ ನೀ ನುಡಿ ಕಾರಣ
-------------------------------------------------------------------------------------------------------------------------
ನಮ್ಮ ಮಕ್ಕಳು (1969) - ನಿನ್ನೊಲುಮೆ ನಮಗಿರಲಿ ತಂದೆ,
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಬಿ. ಕೆ. ಸುಮಿತ್ರಾ, ಪಿ. ಬಿ. ಶ್ರೀನಿವಾಸ್, ಅಂಜಲಿ, ಕೌಸಲ್ಯ
ನಿನ್ನೊಲುಮೆ ನಮಗಿರಲಿ ತಂದೆ,
ಕೈ ಹಿಡಿದು ನೀ ನಡೆಸು ಮುಂದೆ
ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೊಡು
ಈ ಮನೆಯ ಎಂದೆಂದೂ ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೇ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ
ನೀ ನಮ್ಮ ಕೈ ಬೀಡಲು ನಮ್ಮ ಗತಿ ಮುಂದೇನು
ನಂಬಿದರೆ ಭಯವಿಲ್ಲ ಎಂಬ ನುಡಿ ಸುಳ್ಳೇನು
ಧರ್ಮದಲಿ ನಡೆವವರ ಶೋಧನೆಯ ಗುರಿಯೇನು
ನಾ ನಿನಗೆ ಮಾಡಿರುವ ಅಪರಾಧ ತಾನೇನು
ಬಾಳಿನಲಿ ತುಂಬಿರುವ ಕತ್ತಲೆಯ ನೀ ಹರಿಸು
ಬಾಡಿರುವ ಈ ಮನದ ದುಃಖವನು ನೀ ಮರೆಸು
------------------------------------------------------------------------------------------------------------------------

No comments:
Post a Comment