424. ಭೂತಯ್ಯನ ಮಗ ಅಯ್ಯು (1974)


ಭೂತಯ್ಯನ ಮಗ ಅಯ್ಯು ಚಿತ್ರದ ಹಾಡುಗಳು 
  1. ಮಲೆನಾಡ ಹೆಣ್ಣ ಮೈ ಬಣ್ಣ  ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
  2. ಮಾರಿಯೇ ಗತಿಯೆಂದು ಮನ್ನಿಸು ತಪ್ಪೆoದು
  3. ಸೋಬಾನ ಸೋಬಾನ ಸೊಬಾನವೇ  
  4. ವಿರಸವೆಂಬ ವಿಷಕೆ ಬಲಿಯಾದೇ ಏತಕೆ 
ಭೂತಯ್ಯನ ಮಗ ಅಯ್ಯು (1974) - ಮಲೆನಾಡ ಹೆಣ್ಣ ಮೈ ಬಣ್ಣ
ಸಾಹಿತ್ಯ : ಅರ್.ಎನ್.ಜಯಗೋಪಾಲ್ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ


ಗಂಡು : ಮಲೆನಾಡ ಹೆಣ್ಣ ಮೈ ಬಣ್ಣ  ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
           ಮಲೆನಾಡ ಹೆಣ್ಣ ಮೈ ಬಣ್ಣ  ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
           ನಾ ಮನಸೋತೆನೆ ಚಿನ್ನ
ಹೆಣ್ಣು : ಬಯಲು ಸೀಮೆಯ ಗಂಡು ಬಲುಗುಂಡು ಜಗಮೊಂಡು ದುಂಡು ಹೂ ಚೆಂಡು
          ನನ್ನ ಸರದಾಗೆ ರಸಗುಂಡು   ನನ್ನ ಸರದಾಗೆ ರಸಗುಂಡು

ಗಂಡು : ಮಾತು ನಿಂದು ಹುರಿದಾ ಅರಳು ಸಿಡಿದಂಗೆ  ಕಣ್ಣುಗಳು ಮಿಂಚಂಗೆ
           ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ  ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ
ಗಂಡು : ಮಲೆನಾಡ ಹೆಣ್ಣ ಮೈ ಬಣ್ಣ  ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
           ನಾ ಮನಸೋತೆನೆ ಚಿನ್ನ
ಹೆಣ್ಣು : ಕಾಡಬೇಡಿ ನೋಡಿಯಾರು ನನ್ನೋರು  ನನ್ನ ಹಿರಿಯೋರು 
          ಬಿಡು ನನ್ನ ಕೈಯ್ಯ ದಮ್ಮಯ್ಯ  ತುಂಟಾಟ ಸಾಕಯ್ಯ ಈ ತುಂಟಾಟ ಸಾಕಯ್ಯ
ಗಂಡು : ದೂರದಿಂದ ಬಂದೆ ನಿನ್ನ ಹಂಬಲಿಸಿ  ಗೆಳೆತನ ನಾ ಬಯಸಿ
ಹೆಣ್ಣು : ಅದನಾ ಬಲ್ಲೇ ನಾ ಬಲ್ಲೆ ನಾಚಿ ಮೊಗ್ಗಾದೆ ನಾನಿಲ್ಲೆ  ನಾಚಿ ಮೊಗ್ಗಾದೆ ನಾನಿಲ್ಲೆ
ಗಂಡು : ಮಲೆನಾಡ ಹೆಣ್ಣ ಮೈ ಬಣ್ಣ  ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
           ನಾ ಮನಸೋತೆನೆ ಚಿನ್ನ
------------------------------------------------------------------------------------------------------------------------

ಭೂತಯ್ಯನ ಮಗ ಅಯ್ಯು (1974).....ಮಾರಿಯೇ ಗತಿಯೆಂದು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ: ಆರ್.ಎನ್.ಜಯಗೋಪಾಲ,  ಗಾಯನ : ಪಿ.ಬಿ.ಶ್ರೀ, ಜಿ.ಕೆ.ವೆಂ ಮತ್ತು ಕೋರಸ್

ಮಾರಿಯೇ ಗತಿಯೆಂದು ಮನ್ನಿಸು ತಪ್ಪೆoದು
ಮಾರಿಯೇ ಗತಿಯೆಂದು ಮನ್ನಿಸು ತಪ್ಪೆoದು
ಮಕ್ಕಳು ನಾವು ಬಂದೆವು ಎಲ್ಲಾ ಕಾಣಿಕೆ ತಂದೆವು
ನಿನ್ನ ನಂಬಿ ಬಾಳೆವು
ತಾಯಿಯ ದಯೇಗಾಗಿ ಬಂದೆವು ತಲೆಬಾಗಿ
ತಾಯಿಯ ದಯೇಗಾಗಿ ಬಂದೆವು ತಲೆಬಾಗಿ
ಬ್ಯಾನೆ ಬರದಂತೆ ಶ್ಯಾನೆ ನಗುವಂತೆ
ಹೆತ್ತವ್ವ ಚಿತ್ತಾಗಿ ಕಾಪಾಡು ಎಂದೆಂದೂ
ತಾಯಿಯ ದಯೇಗಾಗಿ ಬಂದೆವು ತಲೆಬಾಗಿ
ಬೆಟ್ಟಾದ ತಾಯಿ ಸಿಟ್ಟಾಗದoತೆ
ಕಟ್ಟುನಿಟ್ಟಾಗಿ ನಡೆದೇವು
ಕಟ್ಟುನಿಟ್ಟಾಗಿ ನಡೆದೇವು
ಚಿತ್ತಾದ ವರವ ಕೊಟ್ಟ್ಯಾಳು ಎಂದು
ಗಟ್ಟ್ಯಾಗಿ ಪಾದ ಹಿಡಿದೇವು
ಗಟ್ಟ್ಯಾಗಿ ಪಾದ ಹಿಡಿದೇವು
ತಾಯಿಯ ದಯೇಗಾಗಿ ಬಂದೆವು ತಲೆಬಾಗಿ
ತಾಯಿಯ ದಯೇಗಾಗಿ ಬಂದೆವು ತಲೆಬಾಗಿ

ಬರಗಾಲ ಪೀಡೆ ಬರದೇನೆ ಇರಲು
ಸೋoಕು ರೋಗವು ದೂರಾಗಲು
ಸೋoಕು ರೋಗವು ದೂರಾಗಲು
ಉಯ್ನಾದ ಕುಯ್ಲು ಸoಕ್ರಾತಿ ತರಲು
ಮಾರಮ್ಮ ನೀನೇ ಬೆಂಗಾವಲು
ಮಾರಮ್ಮ ನೀನೇ ಬೆಂಗಾವಲು
ತಾಯಿಯ ದಯೇಗಾಗಿ ಬಂದೆವು ತಲೆಬಾಗಿ
ತಾಯಿಯ ದಯೇಗಾಗಿ ಬಂದೆವು ತಲೆಬಾಗಿ
-------------------------------------------------------------------------------------------------------------------------

ಭೂತಯ್ಯನ ಮಗ ಅಯ್ಯು (1974).....ಸೋಬಾನ ಸೋಬಾನ ಸೋಬಾನವೆ
ಸಾಹಿತ್ಯ : ಆರ್.ಎನ್.ಜಯಗೋಪಾಲ್  ಸಂಗೀತ : ಜಿ.ಕೆ.ವೆಂಕಟೇಶ್  ಗಾಯನ : ವಾಣಿ ಜಯರಾಂ ಮತ್ತು ಕೋರಸ್


ವಾಣಿ :  ಸೋಬಾನ ಸೋಬಾನ ಸೊಬಾನವೇ  ಸೋಬಾನ ಸೋಬಾನ ಸೊಬಾನವೇ
            ಸೋಬಾನ ಎಂಬುದು ಶಿವನಿಗೇ  ಸೋಬಾನ ಎಂಬುದು ಶ್ರೀಗೌರಿಗೇ
ಕೋರಸ್:  ಸೋಬಾನ ಸೋಬಾನ ಸೊಬಾನವೇ  ಸೋಬಾನ ಸೋಬಾನ ಸೊಬಾನವೇ
ವಾಣಿ :  ಚಂದದ ಹಸೆ ಮೇಲೆ ಸುಂದರ ಕುಳಿತಾನೆ ಇಂದು ಕಂಕಣವ ತೊಡಿಸೀರೆ
ಕೋರಸ್: ಇಂದು ಕಂಕಣವ ತೊಡಿಸೀರೆ
ವಾಣಿ: ಇಂದು ಕಂಕಣವ ತೊಡಿಸೀರೆ ಚೆಲುವಿಗೆ ಚಂದನದಾ ಬೊಂಬೆ ಮಾದೇವಿಗೆ
ಕೋರಸ್: ಚಂದನದಾ ಬೊಂಬೆ ಮಾದೇವಿಗೆ 
ವಾಣಿ:  ಅಕ್ಕತoಗೇರು ಬಂದು ಮುತ್ತಿನಾರತಿ ಎತ್ತಿ  ಕರೆಯಿರಿ ವರನನ್ನು ಮಂಟಪಕ್ಕೆ
ಕೋರಸ್: ಕರೆಯಿರಿ ವರನನ್ನು ಮಂಟಪಕ್ಕೆ
ವಾಣಿ: ಸೋದರ ಮಾವಯ್ಯ ಕರೆ ತನಿರಯ್ಯ ಧಾರೆಗೆ ವಧುವನ್ನು
ಕೋರಸ್: ನಿಮ್ಮ ತೌರಿನ ಬೆಳಕನ್ನು
ವಾಣಿ: ಹೆಜ್ಜೆ ಇಟ್ಟರೆ ಸವೆಯೋಳೆ ಲಜ್ಜೆಗೆ ನೆಲೆವ ಕೆರೆಯೋಳೆ  ನಿನ್ನಯ ಗಂಡನ ಹೆಸರೇಳೆ
ಕೋರಸ್: ನಿನ್ನಯ ಗಂಡನ ಹೆಸರೇಳೆ
ವಾಣಿ : ಕದ್ದು ಹೆoಡಿರ ನೋಡೋನೆ ಮುದ್ದು ಮುಖಕೆ ಸೋತೋನೆ ನಿನ್ನಯ ಹೆಂಡತಿ ಹೆಸರೇಳು
ಕೋರಸ್: ನಿನ್ನಯ ಹೆಂಡತಿ ಹೆಸರೇಳು
-------------------------------------------------------------------------------------------------------------------------

ಭೂತಯ್ಯನ ಮಗ ಅಯ್ಯು (1974) - ವಿರಸವೆಂಬ ವಿಷಕೆ ಬಲಿಯಾದೆ.....
ಸಾಹಿತ್ಯ : ಚಿ.ಉದಯಶಂಕರ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಜಿ.ಕೆ.ವೆಂಕಟೇಶ್


ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..

ಗೆಲುವಾ ಛಲವ ಹೊಂದಿ ಮನದಲೀ
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ  ಗತಿಯಾಯ್ತೇ ಮಾನವಾ........
ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..

ಬಂಧು ಬಳಗ ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು
ಲಾಭಯಾರಿಗೋ ಸಂತಾಪಯಾರಿಗೋ ವಿಧಿಲೀಲೆ ಏನಿದು..........
ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..
--------------------------------------------------------------------------------------------------------------------------

No comments:

Post a Comment