- ಮಲೆನಾಡೇ ಮೂಲೆನಾಗೆ ಇತ್ತೊಂದು ಸೋಮನ
- ನಿನ್ನ ಕೊಂಕು ನೋಟವ ಮಿಂಚು ಎನ್ನಲೇ
- ವೆಂಕು ಚಿಂಕು ಎಲ್ಲ ಬನ್ನಿ
- ಸಾವಿರ ಹೂವುಗಳಲೀ
ಸುವರ್ಣ ಸೇತುವೆ (1983) - ಮಲ್ನಾಡಿನ್ ಮೂಲೆನಾಗೆ
ತಂದಾನ ತಂದಾನ ತಾನಾನ ತಾನಿ ತಂದಾನಿ ತಂದ ನಾನ ತನ ನನನಾ
ಹೆಣ್ಣು : ಮಲ್ನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ
ಮಲ್ನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ
ಆ ಹಳ್ಳಿ ಎಲ್ಲ ಜನರು ಲೋಕಾನೆ ಗೊತ್ತಿಲ್ದೋರು
ಅದರೊಳಗೆ ಮುದುಕಿ ಒಬ್ಬಳು ದೌಳಿಂದ ಮೆರಿತಿದ್ಲು
ಅವಳಂತು ಬೋ ಘಾಟಿ ಜಂಬಗಾತಿ
ಮಲ್ನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ ಅಹ್ಹ..
ಕೋಳಿ : ಕೊಕ್ಕೋ ಕೊಕ್ಕೋ ಕೊಕ್ಕೋ ಕೊಕ್ಕೋ
ಹೆಣ್ಣು : ಆ ಮುದುಕಿ ಜಂಬದ ಕೋಳಿ ಸಾಕಿರಲು
ಆ ಕೋಳಿ ಕೊಕ್ಕೋ ಅಂತ ಕೂಗ್ತಿರಲು
ಅದ್ರಿಂದ್ಲೇ ಉರಿಯೋ ಸೂರ್ಯ ಮೂಡ್ತೈತೆಂದು
ನನ್ನಿಂದ್ಲೇ ಊರ ಬೆಳಕು ಕಾಣ್ತೈತೆಂದು
ನನ್ನಿಂದಲೇ ಹಳ್ಳಿ ಇಲ್ಲ ನಾನಿಲ್ಲದೇ ಬದುಕೇ ಇಲ್ಲ
ಅಂದ್ಕೊಂಡೆ ಸೊಕ್ಕಿನಿಂದ ಕೊಬ್ಬಿದ್ದಳು
ಕೋರಸ್ : ತಂದಾನ ತಂದಾನ ತಾನಾನ ತಾನಿ ತಂದಾನಿ ತಂದ ನಾನ ತನ ನನನಾ
ತಂದಾನ ತಂದಾನ ತಾನಾನ ತಾನಿ ತಂದಾನಿ ತಂದ ನಾನ ತನ ನನನಾ
ಹೆಣ್ಣು : ಮಲ್ನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ ಅಹ್ಹ..
ಕಂಕ್ಳಾಗೆ ತನ್ನ ಕೋಳಿ ಬಚ್ಚಿಟ್ಕೊಂಡು
ಕತ್ಲಾಗೆ ಒಂದೊಂದೇನೆ ಹೆಜ್ಜೆ ಇಟ್ಕೊಂಡು
ಕಾಡ್ನಾಗೆ ಸೇರ್ಕೊಂಡ್ಲು ಹೊತ್ ನೋಡ್ಕೊಂದು
ಬೆಳ್ಗಾಯ್ತು ಯಾವತ್ನಂಗೆ ಪೆಚ್ಚಾದ್ಲು ಮುದುಕಿ ಹಂಗೆ
ನಡೆದೈತೆ ಈ ಲೋಕ ಮಾಮೂಲ್ನಂಗೆ
ಕೋರಸ್ : ತಂದಾನ ತಂದಾನ ತಾನಾನ ತಾನಿ ತಂದಾನಿ ತಂದ ನಾನ ತನ ನನನಾ
ತಂದಾನ ತಂದಾನ ತಾನಾನ ತಾನಿ ತಂದಾನಿ ತಂದ ನಾನ ತನ ನನನಾ
ಕೋರಸ್ :ತಾ ತಾ ತಂದಾನ ತಂದಾನ ನಾನ ತನ ನನನಾ
ತಾ ತಾ ತಂದಾನ ತಂದಾನ ನಾನ ತನ ನನನಾ
ಹೆಣ್ಣು : ತನ್ನ ಕೋಳಿ ಕೂಗಿದ್ರೇನೇ ಬೆಳಗಾಗತೈತೆಂದು
ನಂಬಕೊಂಡ ಮುದುಕಿ ಗರ್ವ ಇಳಿದು ಹೊಯಿತ್ತಿಂದು
ಹೊತ್ತಿಲದೇ ಸೂರ್ಯ ಚಂದ್ರ ಬೆಳಕ ಕೊಡ್ತಾರೇ
ಈ ಭೂಮಿ ಮಂದಿ ಮಾತ್ರ ಬಿಂಕ ಪಡ್ತಾರೇ
ತಿಳ್ಕೊಂಡು ಒಳ್ಳೆ ನೀತಿ ಇಸ್ಕೊಂಡು ಬಾಳಿನ ರೀತಿ
ಎಲ್ಲಾರೂ ಮೆಚ್ಚೋ ಹಾಗೇ ನಡ್ಕೋಬೇಕು
ಹೆಣ್ಣು : ಹ್ಹಾ... ಮಲ್ನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ
ಆ ಹಳ್ಳಿ ಎಲ್ಲ ಜನರು ಲೋಕಾನೆ ಗೊತ್ತಿಲ್ದೋರು
ಅದರೊಳಗೆ ಮುದುಕಿ ಒಬ್ಬಳು ದೌಳಿಂದ ಮೆರಿತಿದ್ಲು
ಅವಳಂತು ಬೋ ಘಾಟಿ ಜಂಬಗಾತಿ....
---------------------------------------------------------------------------------------------------------------------
ಸುವರ್ಣ ಸೇತುವೆ (೧೯೮೨)...ನಿನ್ನ ಕೊಂಕು ನೋಟವ
ಸಾಹಿತ್ಯ : ಗೀತಪ್ರಿಯ ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್.ಪಿ.ಬಿ, ವಾಣಿಜಯರಾಮ್
ನಿನ್ನ ಬಿoಕದಾಟವ ಸಂಚು ಎನ್ನಲೆ
ಹೂವು ಎನ್ನಲೆ ಮುಳ್ಳು ಎನ್ನಲೆ
ಕೆಸರಿನಲ್ಲಿ ಹುಟ್ಟಿದಾ ಕಮಲವೆನ್ನಲೆ
ಹೆಣ್ಣು : ನನ್ನ ಸೆಳೆವ ನೋಟವ ಬಲೆಯು ಎನ್ನಲೆ
ನಿನ್ನ ಮನದ ಆಸೆಯ ಅಲೆಯು ಎನ್ನಲೆ
ಸೋಲು ಎನ್ನಲೆ ಗೆಲುವು ಎನ್ನಲೆ
ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ
ಗಂಡು : ಹೃದಯವನ್ನು ಅಂದೇ ಗಾಯ ಮಾಡಿದೆ
ಆ ಗಾಯದೊಡನೆ ಇಂದು ಆಡಿ ನೋಡಿದೆ
ಹೆಣ್ಣು : ಸುಮ್ಮನಿದ್ದ ನನ್ನ ಏಕೆ ಕೆಣಕಿದೆ
ಸುಳಿವ ಕೊಡದೆ ಮನದಲಿ ಏಕೆ ಇಣುಕಿದೆ
ಗಂಡು : ಚುಚ್ಚು ಮಾತಿನಿಂದಲೇ ನನ್ನ ದೋಚಿದೆ
ಅದಕೆ ತುಟಿಯ ಕಚ್ಚಿ ನೀನು ನಾಚಿದೆ
ಹೆಣ್ಣು : ವಿರಸವೆಲ್ಲವೂ ಸರಸವಾಗಲೂ
ಅದುವೆ ಮನವ ಒಲಿಸುವಾ ವರಸೆ ಎನ್ನಲೆ
ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ ( ಅ.. ಅ )
ನಿನ್ನ ಬಿoಕದಾಟವ ಸಂಚು ಎನ್ನಲೆ (ಅ )
ಹೆಣ್ಣು : ಸೋಲು ಎನ್ನಲೆ ಗೆಲುವು ಎನ್ನಲೆ
ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ
ಆ ಗಾಯದೊಡನೆ ಇಂದು ಆಡಿ ನೋಡಿದೆ
ಹೆಣ್ಣು : ಸುಮ್ಮನಿದ್ದ ನನ್ನ ಏಕೆ ಕೆಣಕಿದೆ
ಸುಳಿವ ಕೊಡದೆ ಮನದಲಿ ಏಕೆ ಇಣುಕಿದೆ
ಗಂಡು : ಚುಚ್ಚು ಮಾತಿನಿಂದಲೇ ನನ್ನ ದೋಚಿದೆ
ಅದಕೆ ತುಟಿಯ ಕಚ್ಚಿ ನೀನು ನಾಚಿದೆ
ಹೆಣ್ಣು : ವಿರಸವೆಲ್ಲವೂ ಸರಸವಾಗಲೂ
ಅದುವೆ ಮನವ ಒಲಿಸುವಾ ವರಸೆ ಎನ್ನಲೆ
ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ ( ಅ.. ಅ )
ನಿನ್ನ ಬಿoಕದಾಟವ ಸಂಚು ಎನ್ನಲೆ (ಅ )
ಹೆಣ್ಣು : ಸೋಲು ಎನ್ನಲೆ ಗೆಲುವು ಎನ್ನಲೆ
ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ
ಗಂಡು : ಕಾಣುವಂತೆ ಕಣ್ಣಲೇ ಸನ್ನೆ ಮಾಡಿದೆ
ಬಾಣದಂತೆ ಹೃದಯಕೆ ಕನ್ನ ಹಾಕಿದೆ.. ಹೋ ಹೊಯ್
ಹೆಣ್ಣು : ಕಣ್ಣಿನಿಂದ ಕಣ್ಣಿಗೆ ಕಟ್ಟಿ ಸೇತುವೆ
ಮನದ ಕದವ ಮೆಲ್ಲನೆ ಏಕೆ ತಟ್ಟಿದೆ.. ಹ್ಹಾಂ..
ಗಂಡು : ಅದಕೆ ಬೇಕು ಆಯಿತು ಇಷ್ಟು ಆಗಿದೆ
ಇನ್ನು ಕಾಯುತಿರುವುದೇ ಕಷ್ಟವಾಗಿದೆ
ಹೆಣ್ಣು : ಆಸೆ ಎಲ್ಲವೂ ಪಾಶವಾಗಲೂ
ತಪಿಸುವoಥ ಮನಕೆ ಅದೇ ಇಷ್ಟವೆನ್ನಲೇ
ಗಂಡು : ನಿನ್ನ ಕೊಂಕು ನೋಟವ ಮಿಂಚು ಎನ್ನಲೆ (ಲಲಲಲ )
ನಿನ್ನ ಬಿoಕದಾಟವ ಸಂಚು ಎನ್ನಲೆ (ಲಲಲಲ )
ಹೂವು ಎನ್ನಲೆ (ಲಲಲಲ ) ಮುಳ್ಳು ಎನ್ನಲೆ (ಲಲಲಲ )
ಕೆಸರಿನಲ್ಲಿ ಹುಟ್ಟಿದಾ ಕಮಲವೆನ್ನಲೆ
ಹೆಣ್ಣು : ಹ್ಹ.. ನನ್ನ ಸೆಳೆವ ನೋಟವ ಬಲೆಯು ಎನ್ನಲೆ (ರಪ್ಪಪಪಪ್ಪಪ )
ನಿನ್ನ ಮನದ ಆಸೆಯ ಅಲೆಯು ಎನ್ನಲೆ (ರಪ್ಪಪಪಪ್ಪಪ )
ಸೋಲು ಎನ್ನಲೆ ಗೆಲುವು ಎನ್ನಲೆ
ಸೋತು ಸೋತು ಗೆಲ್ಲುವ ಕಲೆಯು ಎನ್ನಲೆ
--------------------------------------------------------------------------------------------------------------------------
ಸುವರ್ಣ ಸೇತುವೆ (1983)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯ ಭಾಸ್ಕರ್ ಗಾಯನ:ಬೆಂಗಳೂರ್ ಲತಾ, ಪಿ.ಬಿ.ಶ್ರೀ
ಕೋರಸ್ : ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ
ಹೆಣ್ಣು : ವೆಂಕು ಪಿಂಕು ಎಲ್ಲಾ ಬನ್ನೀ ಆಟ ಆಡೋಣ
ನ್ಯಾನ್ಸಿ ನಿಂಗಿ ನಿಂಗಿ ನ್ಯಾನ್ಸಿ ಒಟ್ಟಿಗೆ ಓಡೋಣ
ನಕ್ಕು ನಲಿಯೋಣ ಹಿಗ್ಗಿ ಕುಣಿಯೋಣ
ಸುತ್ತ ತಿರುಗೋಣ ಹೊತ್ತು ಕಳೆಯೋಣ
ವೆಂಕು ಪಿಂಕು ಎಲ್ಲಾ ಬನ್ನೀ ಆಟ ಆಡೋಣ
ನ್ಯಾನ್ಸಿ ನಿಂಗಿ ನಿಂಗಿ ನ್ಯಾನ್ಸಿ ಒಟ್ಟಿಗೆ ಓಡೋಣ
ನಕ್ಕು ನಲಿಯೋಣ ಹಿಗ್ಗಿ ಕುಣಿಯೋಣ
ಸುತ್ತ ತಿರುಗೋಣ ಹೊತ್ತು ಕಳೆಯೋಣ
ಎಲ್ಲರು : ಅವಲಕ್ಕಿ ಪವಲಕ್ಕಿ ಕಾಂಚಾಣ ಮಿಣಮಿಣ
ಡಾಂ ಡೂಮ್ ಡುಸ್ ಪೀಸ್ ಕ್ಯೂಯ್ ಫಳಾರ್
ಎಲ್ಲರು: ಲಾ..ಲಾ.. ಲಾ..ಲಾ.. ಲಾ..ಲಾ.. ಲ್ಲಲ್ಲಲಾ..ಲಾ..
ರರರರ... ರಬಪ್ಪಪ್ಪಪ್ಪ
ಮಕ್ಕಳು : ದಿಣ್ಣೆ ಹತ್ತಿ ಮರಗಳ ಸುತ್ತಿ ಕೇಕೇ ಹಾಕೋಣ
ದಿಣ್ಣೆ ಹತ್ತಿ ಮರಗಳ ಸುತ್ತಿ ಕೇಕೇ ಹಾಕೋಣ
ಬಿದ್ದು ಎದ್ದು ಮೇಲಿನಿಂದ ಜಿಗಿದು ಪಲ್ಟಿ ಹೊಡೆಯೋಣ
ಬಿದ್ದು ಎದ್ದು ಮೇಲಿನಿಂದ ಜಿಗಿದು ಪಲ್ಟಿ ಹೊಡೆಯೋಣ
ಹೆಣ್ಣು: ಕಣ್ಣಾ ಮುಚ್ಚಾಲೆ ಕುಂಟೆ ಬಿಲ್ಲೇ ಪಂದ್ಯ ಇಳಿಸೋಣ
ವರಸೆ ಕೂರಿಸೋಣ ಚಿಣ್ಣಿ ದಾಂಡೂ ಕುಕ್ಕು ಅಂಗಡಿ
ಬಿಡದೇ ಮುಗಿಸೋಣ
ವೆಂಕು ಪಿಂಕು ಎಲ್ಲಾ ಬನ್ನೀ ಆಟ ಆಡೋಣನ್ಯಾನ್ಸಿ ನಿಂಗಿ ನಿಂಗಿ ನ್ಯಾನ್ಸಿ ಒಟ್ಟಿಗೆ ಓಡೋಣ
ನಕ್ಕು ನಲಿಯೋಣ ಹಿಗ್ಗಿ ಕುಣಿಯೋಣ
ಸುತ್ತ ತಿರುಗೋಣ ಹೊತ್ತು ಕಳೆಯೋಣ
ಗಂಡು : ಎಳೆಯರ ಸಂಗಡ ಸೇರಿ ನಗುವ ನಲಿವ
ಮರೆತಿಹ ಬಾಲ್ಯಕೆ ಜಾರಿ ಮೆರೆವ ಕುಣಿವ
ಗಾಂಭೀರ್ಯ ತೋರದೇ ಬೀಗುವನು ದೂಡಿ
ಮಕ್ಕಳ ಸ್ನೇಹದಿ ಮಕ್ಕಳೇ ಆಗಿ ಗುರುತಲೀ
ನೆನೆಯುವ ಕಳೆದಿಹ ಕಾಲ ಎಳೆಯರ ಸಂಗಡ ಸೇರಿ
ಲವ್ ಯು ಚಿಲ್ಡ್ರನ್
ವರ್ಕ್ ಫಾರ್ ರೀವರ್ ಪ್ಲೇ ವಾಲೀ ಫೇರ್ ಅ ರೀಚ್ ಕನ್ನಡಮೇ ಹ್ಯಾಪಿ ಎಂಡ್ ಫೇರ್.. ಹ್ಹಾಂ
ವರ್ಕ್ ಫಾರ್ ರೀವರ್ ಪ್ಲೇ ವಾಲೀ ಫೇರ್ ಅ ರೀಚ್ ಕನ್ನಡಮೇ ಹ್ಯಾಪಿ ಎಂಡ್ ಫೇರ್
ಹೆಣ್ಣು : ವೆಂಕು ಪಿಂಕು ಎಲ್ಲಾ ಬನ್ನೀ ಆಟ ಆಡೋಣ (ಕಮ್ಸ್ ಬಾಯ್ಸ್ )
ನ್ಯಾನ್ಸಿ ನಿಂಗಿ ನಿಂಗಿ ನ್ಯಾನ್ಸಿ ಒಟ್ಟಿಗೆ ಓಡೋಣ
ನಕ್ಕು ನಲಿಯೋಣ ಹಿಗ್ಗಿ ಕುಣಿಯೋಣ
ಸುತ್ತ ತಿರುಗೋಣ ಹೊತ್ತು ಕಳೆಯೋಣ
ವೆಂಕು ಪಿಂಕು ಎಲ್ಲಾ ಬನ್ನೀ ಆಟ ಆಡೋಣ
ನ್ಯಾನ್ಸಿ ನಿಂಗಿ ನಿಂಗಿ ನ್ಯಾನ್ಸಿ ಒಟ್ಟಿಗೆ ಓಡೋಣನಕ್ಕು ನಲಿಯೋಣ ಹಿಗ್ಗಿ ಕುಣಿಯೋಣ
ಸುತ್ತ ತಿರುಗೋಣ ಹೊತ್ತು ಕಳೆಯೋಣ
--------------------------------------------------------------------------------------------------------------------------
ಸುವರ್ಣ ಸೇತುವೆ (1983)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯ ಭಾಸ್ಕರ್ ಗಾಯನ: ವಾಣಿ ಜಯರಾಂ, ಜಯಚಂದ್ರನ್
ಗಂಡು : ಸಾವಿರ ಹೂಗಳಲೀ ಹುಡುಕಿದೇ ಒಂದನ್ನೇ
ಸಾವಿರ ಜನುಮದಲ್ಲೂ ಬಯಸುವೇ ನಿನ್ನನ್ನೇ
ಹೆಣ್ಣು : ಬಾಳಿನ ದಾರಿಯಲೀ ಪಡೆದೆನು ನಿನ್ನನ್ನೇ
ನಿನ್ನಯ ಒಲವಿನಲೀ ಮರೆವೇನು ಜಗವನ್ನೇ
ಗಂಡು : ನಾಚುತ ಬಂದೇ ನವ ವಧು ಆಗಿ
ನನ್ನಯ ಪಾಲಿಗೇ ನೀ ಮಧುವಾಗಿ
ಹೆಣ್ಣು : ನೀನಿರೇ ಇಲ್ಲಿ ಒಡೆಯನು ಆಗಿ
ಇರುವೇನು ನಾನು ಒಡತಿಯೂ ಆಗಿ
ಗಂಡು : ಮನೆಯಲಿ ಮನಗಳ ಬೆಳಗಿಸುವಂಥ
ನಗೆ ತುಂಬಿರಲೀ ಹೊಸ ಬೆಳಕಾಗಿ
ಹೆಣ್ಣು : ಬಾಳಿನ ದಾರಿಯಲೀ ಪಡೆದೆನು ನಿನ್ನನ್ನೇ
ಹೆಣ್ಣು : ಹೃದಯವು ಹೃದಯವ ಹುಡುಕುವುದಂತೇ
ದಡವನು ಅರಸೀ ಅಲೆವರೂ ಅಂತೇ
ಗಂಡು : ಯಾರದೋ ಕರೆಗೇ ಓಗೊಡುವಂತೇ
ಒಬ್ಬರನೊಬ್ಬರ ಸೆಳೆವರಂತೇ
ಹೆಣ್ಣು : ಸ್ನೇಹವೂ ಮೊದಲು ಸೆಣಸುವುದಂತೇ
ನಂತರ ಹತ್ತಿರ ಸರಿಸುವುದಂತೇ
ಗಂಡು : ಸಾವಿರ ಹೂಗಳಲೀ ಹುಡುಕಿದೇ ಒಂದನ್ನೇ
ಗಂಡು : ಒಂದೇ ನದಿಯ ತೀರಗಳೆರಡೂ
ಆ ದಿನ ನಾನೂ ಮೀನಂತೆಯೇ
ಹೆಣ್ಣು : ಮಿಲನದ ಆಸೆಗೇ ಒಲವೇ ಸುವರ್ಣದ ಸೇತುವೇ
ನಾನು ಆಗುವುದಂತೇ
ಗಂಡು : ದೂರದ ಇರುವರ ಸೇರಿಸುವಂಥ
ತಿಳಿಯದ ಯಾವುದೋ ಬಂಧವಿದಂತೆ
ಹೆಣ್ಣು : ಬಾಳಿನ ದಾರಿಯಲೀ ಪಡೆದೆನು ನಿನ್ನನ್ನೇ
ಗಂಡು : ಸಾವಿರ ಜನುಮದಲ್ಲೂ ಬಯಸುವೇ ನಿನ್ನನ್ನೇ
--------------------------------------------------------------------------------------------------------------------------
No comments:
Post a Comment