427. ರವಿಮಾಮ (೧೯೯೯)

ರವಿಮಾಮ ಚಲನಚಿತ್ರದ ಹಾಡುಗಳು 
  1. ಪ್ರಿಯ ಪ್ರಿಯ ಪ್ರೀತಿಯ ಸಾಲು ಕಣ್ಣುಗಳಲಿ 
  2. ನನ್ನಾಸೇ ಮಲ್ಲಿಗೆ ನೀ ಬಾಡದಿರೂ 
  3. ಮುದ್ದು ಮುದ್ದು ಕೋಗಿಲಮ್ಮಾ ನಿನ್ನ ಪದ ಕೇಳಿಸಮ್ಮಾ 
  4. ನನ್ನಾಸೆ ಮಲ್ಲಿಗೆ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ 
  5. ಆ ಕಿರಣಗಳಿಗೆ ಚುಂಬಿಸೋ ರವಿಮಾಮ 
  6. ಅ ಆ  ಕಲಿಯಬೇಕು ಜ್ಞಾನ ತಿಳಿಯಬೇಕು 
  7. ಅಲೆಯೋ ಅಲೆ ಎದೆಯೊಳಗೇ ಸುಖದಾ ಮಳೆ ಒಳ ಒಳಗೇ 
ರವಿಮಾಮ (೧೯೯೯) - ಪ್ರಿಯ ಪ್ರಿಯ ಪ್ರೀತಿಯ ಸಾಲು ಕಣ್ಣುಗಳಲಿ 
ಸಂಗೀತ : ಚೈತನ್ಯ ಸಾಹಿತ್ಯ : ಎಸ್.ನಾರಾಯಣ ಗಾಯನ : ರಾಜೇಶ, ಚಿತ್ರಾ 

ಹೆಣ್ಣು : ಹೇಹೇಹೇ ...
ಗಂಡು : ಪ್ರಿಯ ಪ್ರಿಯ ಪ್ರೀತಿಯ ಸಾಲು ಕಮಲಗಣ್ಣಲಿ
           ಸದಾ ಸದಾ ಸಂಗೀತ ಮಾಲೆ ಎದೆಯ ಗೂಡಲಿ
           ಪ್ರಿಯ ಪ್ರಿಯ ಪ್ರೀತಿಯ ಸಾಲು ಕಮಲಗಣ್ಣಲಿ
           ಸದಾ ಸದಾ ಸಂಗೀತ ಮಾಲೆ ಎದೆಯ ಗೂಡಲಿ
          ರಂಗು ರಂಗು ತೋಟದಲಿ ಡಿಂಗು ಡಿಂಗು ನಡೆಯುತಿದೆ
          ನಂಗು ನಿಂಗು ಏನೋ ಆಯ್ತು ಈಗಾ ...
ಹೆಣ್ಣು : ಓಹೋಹೋ                       ಗಂಡು : ಬಾ...  ಬೇಗ
ಹೆಣ್ಣು : ಪ್ರಿಯ ಪ್ರಿಯ ಪ್ರೀತಿಯ ಸಾಲು ಅಮಲು ಗಣ್ಣಲಿ
          ಸದಾ ಸದಾ ಸಂಗೀತ ಮಾಲೆ ಮಧುರ ಮಾತಲೀ...

ಹೆಣ್ಣು : ಈ ಹೆಣ್ಣಿನ ಧೀಮಿನ ಅಲೆಯೆಲ್ಲ ಹಾರ್ಸು ಕಣೋ
          ನೀ ಹಾರ್ಸಿನ ಫೋರ್ಸಿಗೆ ಗುರಿ ತೋರೋ ಜಾಕಿ ಕಣೋ
ಗಂಡು : ಈ ಜಾಕಿಯ ವಾಕಿಂಗ್ ಸ್ಟೈಲೆಲ್ಲ ಹೊಸದು ಕಣೇ
           ನಾ   ಹಾರ್ಸನು ಪಳಗಿಸೋ ಕಲೆಯಲ್ಲಿ ಜಾಣ ಕಣೇ
ಹೆಣ್ಣು : ಕಸ್ತೂರಿಯಾ ಕುಲದಲ್ಲಿ ನೀ ಅರಳಿದ ಹೂ ಬಳ್ಳಿ
ಗಂಡು : ಕಾವೇರಿಯಾ ಮಡಿಲಲ್ಲಿ ನಾ ಜನಿಸಿದೆ ನಗೆ  ಚೆಲ್ಲಿ
ಹೆಣ್ಣು : ಮುದ್ದು ಮುದ್ದು ಸುಂದರ ಈ ಮತ್ತು ತರೋ ಮನ್ಮಥನೇ...
ಗಂಡು : ಮಜಾ ಬಂತು ನಿನ್ನಾ ಹಂಗೆ ರೋಜಾ ...
ಹೆಣ್ಣು : ಹೇಹೇಹೇಹೇ ...               ಗಂಡು : ಓ.. ರೋಜಾ
ಹೆಣ್ಣು : ಪ್ರಿಯ ಪ್ರಿಯ ಪ್ರೀತಿಯ ಸಾಲು ಅಮಲು ಗಣ್ಣಲಿ
ಗಂಡು : ಸದಾ ಸದಾ ಸಂಗೀತ ಮಾಲೆ ಎದೆಯ ಗೂಡಲಿ...

ಗಂಡು : ಈ ವಂಡರ್ ಲೋಕಕೆ ತರುಣಿಯರೇ ಬೆಳಕು ಕಣೇ
            ನಾ ಹೂವಿನ ಹೃದಯವ ಕದಿವಂಥ ಚೋರ ಕಣೇ
ಹೆಣ್ಣು : ನಿನ್ನ ಕಣ್ಣಲಿ ಹೆಣ್ಣನು ಸೆಳೆವಂಥ ಮಚ್ಚೆ ಇದೆ
          ಆ ಮಚ್ಛೆಯ ಮುದ್ರಿಸೆ ನನಗೀಗ ಇಚ್ಚೇ ಆಗಿದೆ
ಗಂಡು : ಆ ಇಚ್ಛೇಗೆ ವೆಲ್ ಕಮ್ಮು ಮುತ್ತಿಟ್ಟರೇ ಪೋಯಮ್ಮು
ಹೆಣ್ಣು : ನೀ ಮುತ್ತಿನಾ ಮಳೆಯಲ್ಲಿ ಸಂಭ್ರಮಿಸುವೇ ಕಡಲಲ್ಲಿ
ಗಂಡು : ಡಿಯರ್ ಡಿಯರ್ ಡಾರ್ಲಿಂಗು ನಿನ್ನಲ್ಲಿದೆ ಸಂಥಿಂಗು
ಹೆಣ್ಣು : ಖುಷಿ ಬಂತು ಈಗ ನಂಗೆ ಓಹೋ
ಗಂಡು : ಓಹೋಹೋ ...           ಹೆಣ್ಣು : ಓಹೋಹೋ
ಹೆಣ್ಣು : ಪ್ರಿಯ ಪ್ರಿಯ ಪ್ರೀತಿಯ ಸಾಲು ಅಮಲು ಗಣ್ಣಲಿ
ಗಂಡು : ಸದಾ ಸದಾ ಸಂಗೀತ ಮಾಲೆ ಎದೆಯ ಗೂಡಲಿ...
------------------------------------------------------------------------------------------------------------------------- 

ರವಿಮಾಮ (೧೯೯೯) - ನನ್ನಾಸೇ ಮಲ್ಲಿಗೆ ನೀ ಬಾಡದಿರೂ 
ಸಂಗೀತ : ಚೈತನ್ಯ ಸಾಹಿತ್ಯ : ಎಸ್.ನಾರಾಯಣ ಗಾಯನ : ಎಸ್.ಪಿ.ಬಿ 

ನನ್ನಾಸೆ ಮಲ್ಲಿಗೆ ನೀ ಬಾಡದಿರು ನಮ್ಮೂರ ಜ್ಯೋತಿಯೇ ನೀ ಆರದಿರು ಬಂಗಾರದಂಥ ಬೊಂಬೆಯೇ ..
ನನ್ನಾಸೆ ಮಲ್ಲಿಗೆ ನೀ ಬಾಡದಿರು ನಮ್ಮೂರ ಜ್ಯೋತಿಯೇ ನೀ ಆರದಿರು ಬಂಗಾರದಂಥ ಬೊಂಬೆಯೇ ..
ಏಳೇಳು ಜನ್ಮವೂ ನೀ ನನ್ನ ತಂಗಿಯು ಉಸಿರಲ್ಲಿ ತುಂಬಿದಾ ಕರುಳಿನ ಬಂಧಿಯು
ಹೋಗಿ ಬಾರೇ ನನ್ನ ಪ್ರಾಣ ಜ್ಯೋತಿಯೇ ...
ಏಳೇಳು ಜನ್ಮವೂ ನೀ ನನ್ನ ತಂಗಿಯು ಉಸಿರಲ್ಲಿ ತುಂಬಿದಾ ಕರುಳಿನ ಬಂಧಿಯು
ಹೋಗಿ ಬಾರೇ ನನ್ನ ಪ್ರಾಣ ಜ್ಯೋತಿಯೇ ...
ನನ್ನಾಸೆ ಮಲ್ಲಿಗೆ ನೀ ಬಾಡದಿರು ನಮ್ಮೂರ ಜ್ಯೋತಿಯೇ ನೀ ಆರದಿರು ಬಂಗಾರದಂಥ ಬೊಂಬೆಯೇ ..

ಅಕ್ಕರೆಯ ಅಣ್ಣನೂ ಕಣ್ಣ ನೀರಲಿ ಓ ಸಕ್ಕರೆಯಾ ತಂಗಿ ನೀ ಹೊರಟೆ ತೇರಲಿ 
ನೀನು ಹೊರಟ ಊರಿಗೆ ದಾರಿ ಹೇಳಮ್ಮಾ ...  ಆ ಬೀದಿಯಲ್ಲಿ ಕಲ್ಲು ಮುಳ್ಳಿದ್ರೆ ಕೂಗಮ್ಮಾ 
ಕರುಳ ಗೆಳತೀ ಅಲ್ಲ ನೀ ನನ್ನ ಹೆತ್ತತಾಯಿಯೇ ಪ್ರೀತಿ ಹೊತ್ತ ಕಂದನ ಒಂಟಿ ಮಾಡಿ ಹೋದೆಯಾ 
ನಾ ಬರುವೇ ನಿನ್ನ ಹಿಂಬಾಲಿಸಿ 
ನನ್ನಾಸೆ ಮಲ್ಲಿಗೆ ನೀ ಬಾಡದಿರು ನಮ್ಮೂರ ಜ್ಯೋತಿಯೇ ನೀ ಆರದಿರು ಬಂಗಾರದಂಥ ಬೊಂಬೆಯೇ .. 

ತಾರೆಗಳು ತಂದು ನಾ ಕುಡಿ ಹಾಕುವೆ ಆ ಚಂದ್ರನನ್ನೂ ಇವಳ ಅಂಗೈಗೇ ನೀಡುವೇ 
ಜೋಗುಳದಾ ಹಾಡುತಾ ತುತ್ತಾ ಇಡುವೇ ನಾ ಕೂಸಿನಂತೇ ಆಗ ಸಿಹಿ ಮುತ್ತಾ ಬೇಡುವೇ 
ಕರುಳ ಗೆಳತೀ ಅದೋ ಇವಳೇ ನನಗೆ ತಾಯಿಯು 
ಮಮತೆ ಬಳ್ಳಿಯಾದರೂ ನನ್ನ ಉಸಿರಿನ ದೇವತೆಯು ಬದುಕೆಲ್ಲ ನನ್ನ ಬಂಗಾರಿಗೆ 
ನನ್ನಾಸೆ ಮಲ್ಲಿಗೆ ನೀ ಬಾಡದಿರು ನಮ್ಮೂರ ಜ್ಯೋತಿಯೇ ನೀ ಆರದಿರು ಬಂಗಾರದಂಥ ಬೊಂಬೆಯೇ .. 
ಏಳೇಳು ಜನ್ಮವೂ ನೀ ನನ್ನ ತಂಗಿಯು ಉಸಿರಲ್ಲಿ ತುಂಬಿದಾ ಕರುಳಿನ ಬಂಧಿಯು
ಹೋಗಿ ಬಾರೇ ನನ್ನ ಪ್ರಾಣ ಜ್ಯೋತಿಯೇ ...
ಏಳೇಳು ಜನ್ಮವೂ ನೀ ನನ್ನ ತಂಗಿಯು ಉಸಿರಲ್ಲಿ ತುಂಬಿದಾ ಕರುಳಿನ ಬಂಧಿಯು
ಹೋಗಿ ಬಾರೇ ನನ್ನ ಪ್ರಾಣ ಜ್ಯೋತಿಯೇ ...
ನನ್ನಾಸೆ ಮಲ್ಲಿಗೆ ನೀ ಬಾಡದಿರು ನಮ್ಮೂರ ಜ್ಯೋತಿಯೇ ನೀ ಆರದಿರು ಬಂಗಾರದಂಥ ಬೊಂಬೆಯೇ ..
------------------------------------------------------------------------------------------------------------------------- 

ರವಿಮಾಮ (೧೯೯೯) - ಮುದ್ದು ಮುದ್ದು ಕೋಗಿಲಮ್ಮಾ ನಿನ್ನ ಪದ ಕೇಳಿಸಮ್ಮಾ 
ಸಂಗೀತ : ಚೈತನ್ಯ ಸಾಹಿತ್ಯ : ಎಸ್.ನಾರಾಯಣ ಗಾಯನ : ಎಲ್.ಏನ್.ಶಾಸ್ತ್ರಿ, ಸುಜಾತದತ್ 

ಗಂಡು : ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ ಎದೆಯ ತುಂಬಿ ಹರಿಯಲಿ ನಿನ್ನಾ ಇಂಪು ಹಾಡಮ್ಮಾ
            ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ ಎದೆಯ ತುಂಬಿ ಹರಿಯಲಿ ನಿನ್ನಾ ಇಂಪು ಹಾಡಮ್ಮಾ
           ಊರಿಗೆಲ್ಲಾ ಲಾಡು ಹಂಚೋ ಕಾಲ ಬಂತಮ್ಮಾ ಸಿಹಿ ಸುದ್ದಿ ಸಾರಿ ಹೇಳೋ ದಿನ ಬಂತಮ್ಮಾ
           ನನ್ನ ತಂಗಿ ಮುಖದಾ ತುಂಬಾ ನಗೆ ಬಂತಮ್ಮಾ
            ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ ಎದೆಯ ತುಂಬಿ ಹರಿಯಲಿ ನಿನ್ನಾ ಇಂಪು ಹಾಡಮ್ಮಾ

ಗಂಡು : ಏನು ಚೆಂದ ನನ್ನ ತವರ ಪ್ರೀತಿ ಕಂದನೇ         ಕೋರಸ್ : ಪ್ರೀತಿ ಕಂದನೇ
ಗಂಡು : ನಿಂಗು ಬರುವ ನಿನ್ನ ಹಾಗೆ ಮುದ್ದು ಕಂದನೇ     ಕೋರಸ್ : ಮುದ್ದು ಕಂದನೇ
ಗಂಡು : ಬೆಳ್ಳಿ ತೊಟ್ಟಿಲಲ್ಲಿ ಅವನ ಲಾಲಿ ಹಾಡುವೇ         ಕೋರಸ್ : ಲಾಲಿ ಹಾಡುವೇ
ಗಂಡು : ಅಳಿಮಯ್ಯ ಮೆಚ್ಚಿಕೊಳ್ಳೋ ಪದ ಕಟ್ಟುವೇ        ಕೋರಸ್ : ಪದ ಕಟ್ಟುವೇ
ಕೋರಸ್ : ಸರಸವ್ವ ಬಿಡಿಸವ್ವ ಒಳಗೆ ಇರುವ ಕೂಗು ಹೆಣ್ಣೋ ಗಂಡೋ ಹೇಳವ್ವ
               ಗಂಡು ... ಅಲೆಲೆಲೆಲೇ  .... ಅಲೆಲೆಲೆಲೇ  ....
               ಬನ್ನೀ ಬನ್ನಿ ಬೀಗರೇ ಹೆಣ್ಣು ಕೋಡೋ ರಾಯರೇ ಗಂಡಿಗೇನು ಉಡುಗೊರೆಯಾ ತರುವಿರೆಂದು ಹೇಳಿ
ಗಂಡು : ಹೇಯ್ .. ಮುಚ್ಚಿ ನಿಮ್ಮ ಬಾಯಿನಾ ಮುರೀತೀನಿ ಸೊಂಟಾನ ಬೇಡುತಿರಿ ಯಾಕೆ ನೀವು ವರದಕ್ಷಿಣೆಯಾ
ಕೋರಸ್ : ಪೂರ್ವಿಕರೂ ಆಗ ಮಾಡಿದಂಥ ವಾಡಿಕೆ ಮೂರ್ಖ ಜನ ನಿಮಗೆ ಆಗದೇನು ನಾಚಿಕೆ
ಹೆಣ್ಣು : ತರಲೇ ಯಾಕೆ ಮಾಡುತಿಯಾ ನಾ ಒಪ್ಪಿಕೊಂಡರೇ ..
ಗಂಡು : ನನಗದುವೇ ತೊಂದರೆ
            ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ ಎದೆಯ ತುಂಬಿ ಹರಿಯಲಿ ನಿನ್ನಾ ಇಂಪು ಹಾಡಮ್ಮಾ

ಕೋರಸ್ : ಹಸಿರಿನಾ ಬಳೆಯನ್ನ ತೊಡಿಸಿರೇ ಕೈತುಂಬಾ ದುಂಡು ಮಲ್ಲೆ ದಿಂಡು ಮುಡಿ ತುಂಬ
                ಊರ ಕಣ್ಣ ದೂರಾ ಹೋಗಲಿ ನಮ್ಮ ಹೆಣ್ಣು ನಗುತ ಬಾಳಲಿ
ಹೆಣ್ಣು : ಹಲೋ ನನ್ನ ಪತಿರಾಯ ಮೀಸೆ ಹೊತ್ತ ಮಾರಾಯಾ ಹೆಣ್ಣು ಹೆತ್ತು ನಾ ಕೊಡಲು ಏನ್ಮಾಡ್ತಿಯಾ
ಗಂಡು : ಅಲೆಲೆಲೇ ಅಯ್ಯೋ ನಿನ್ನ ಮನೆ ಕಾಯ್ ನಾಚ್ಕೆ ಬಿಟ್ಟು ಮೇರೀತಿಯಾ ನಿನ್ನ ಹೆಣ್ಣೋ ಅನ್ನೋರ್ಗೆ ಬುದ್ದಿ ಇಲ್ಲ
ಹೆಣ್ಣು : ತಿಳಿಯದವನಂತೇ ನೀನು ಏಕೆ ನಟಿಸುವೇ
ಗಂಡು : ಗಡಿಬಿಡಿಯ ಹುಡುಗಿ ನಾನು ನಿನ್ನ ಒದೆಯುವೇ ಕೋಳಿ ಜಗಳ ಯಾಕೆ ಬೇಕು
           ಈ ಬೆಳ್ಳಿ ಬೊಂಬೆಯ ಕಿರು ಬೊಂಬೆ ಯಾವುದೂ
            ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ ಎದೆಯ ತುಂಬಿ ಹರಿಯಲಿ ನಿನ್ನಾ ಇಂಪು ಹಾಡಮ್ಮಾ
           ಊರಿಗೆಲ್ಲಾ ಲಾಡು ಹಂಚೋ ಕಾಲ ಬಂತಮ್ಮಾ ಸಿಹಿ ಸುದ್ದಿ ಸಾರಿ ಹೇಳೋ ದಿನ ಬಂತಮ್ಮಾ
           ನನ್ನ ತಂಗಿ ಮುಖದಾ ತುಂಬಾ ನಗೆ ಬಂತಮ್ಮಾ
            ಮುದ್ದು ಮುದ್ದು ಕೋಗಿಲಮ್ಮ ನಿನ್ನ ಪದ ಕೇಳಿಸಮ್ಮ ಎದೆಯ ತುಂಬಿ ಹರಿಯಲಿ ನಿನ್ನಾ ಇಂಪು ಹಾಡಮ್ಮಾ
------------------------------------------------------------------------------------------------------------------------- 

ರವಿಮಾಮ (೧೯೯೯) - ನನ್ನಾಸೆ ಮಲ್ಲಿಗೆ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ 
ಸಂಗೀತ : ಚೈತನ್ಯ ಸಾಹಿತ್ಯ : ಎಸ್.ನಾರಾಯಣ ಗಾಯನ : ಎಸ್.ಪಿ.ಬಿ 

ಗಂಡು :  ಓ... ಚಿಲಿಪಿಲಿಗಳ ಪದ ನುಡಿಸುವ ಗಿಳಿಗಳೇ ಕೇಳಿ  ಓ... ಜಿಗಿಜಿಗಿ ದೋಡುವ ಕುರಿಮರಿಗಳೇ ಜತೆಗೂಡಿ ...
             ನನ್ನಾಸೆ ಮಲ್ಲಿಗೇ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ ಅವಳೆನಮ್ಮಾ ಬಂಗಾರದಂತ ಬೊಂಬೆಯೂ
             ನನ್ನಾಸೆ ಮಲ್ಲಿಗೇ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ ಅವಳೆನಮ್ಮಾ ಬಂಗಾರದಂತ ಬೊಂಬೆಯೂ
             ಗಿರಿ ಜಾರೋ ಗಂಗೆಯೇ ಮಲೆನಾಡ ತುಂಗೆಯೇ
             ಕಾವೇರಿ ತಂಗಿಯೇ .. ವಯ್ಯಾರಿ ಭದ್ರಯೇ ಎಲ್ಲಾ ಸೇರಿ ಅವಳ ಪಾದ ತುಂಬಿರಿ
             ನನ್ನಾಸೆ ಮಲ್ಲಿಗೇ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ ಅವಳೆನಮ್ಮಾ ಬಂಗಾರದಂತ ಬೊಂಬೆಯೂ

ಕೋರಸ್  : ಅಲ್ಕಣ್ ಮಗ ನೀನ್ ತಂಗೀನ್ ಈಟೋನ  ಓದಿಸ್ತಿದ್ದೀಯಲ್ಲ ಅವಳಿಂಗೆ ಎಂಥ ಗಂಡ ತರತ್ತಿಯಪ್ಪಾ 
ಗಂಡು : ಸೂಟು ಬೂಟು ವೀರನಾ ಜೋಡಿ ನೀಡುವೆ ಅಂಬಾರಿ ಮೇಲೆ ಅವಳ ಮೆರವಣಿ ಮಾಡುವೇಯೋ 
            ಓ.. ತೆಂಗು ಬಾಳೆ ಚಪ್ಪರ ಊರ ಬೀದಿಗೆ ಕಂಸಾಳೆ ಡೊಳ್ಳು ಸಹರ  ಓಲಗವಾ ತರಿಸುವೇ 
            ಅವಳ ಪಾದ ಭೂಮಿಗೆ ಸೋಕದಂತೆ ಕಾಯುವೇ ನಡೆದ ದಾರಿಗೆಲ್ಲವೂ ಹೂವ ರಾಶಿ ಚೆಲ್ಲುವಾ 
            ನಗೆ ಎಲ್ಲ ಬಂಗಾರಿಗೆ 
            ನನ್ನಾಸೆ ಮಲ್ಲಿಗೇ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ ಅವಳೆನಮ್ಮಾ ಬಂಗಾರದಂತ ಬೊಂಬೆಯೂ 

ಗಂಡು : ತಾರೆಗಳು ತಂದು ನಾ ಕುಡಿ ಹಾಕುವೆ ಆ ಚಂದ್ರನನ್ನೂ ಇವಳ ಅಂಗೈಗೇ ನೀಡುವೇ 
            ಜೋಗುಳದಾ ಹಾಡುತಾ ತುತ್ತಾ ಇಡುವೇ ನಾ ಕೂಸಿನಂತೇ ಆಗ ಸಿಹಿ ಮುತ್ತಾ ಬೇಡುವೇ 
            ಕರುಳ ಗೆಳತೀ ಅದೋ ಇವಳೇ ನನಗೆ ತಾಯಿಯು 
            ಮಮತೆ ಬಳ್ಳಿಯಾದರೂ ನನ್ನ ಉಸಿರಿನ ದೇವತೆಯು ಬದುಕೆಲ್ಲ ನನ್ನ ಬಂಗಾರಿಗೆ 
             ನನ್ನಾಸೆ ಮಲ್ಲಿಗೇ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ ಅವಳೆನಮ್ಮಾ ಬಂಗಾರದಂತ ಬೊಂಬೆಯೂ
             ಗಿರಿ ಜಾರೋ ಗಂಗೆಯೇ ಮಲೆನಾಡ ತುಂಗೆಯೇ
             ಕಾವೇರಿ ತಂಗಿಯೇ .. ವಯ್ಯಾರಿ ಭದ್ರಯೇ ಎಲ್ಲಾ ಸೇರಿ ಅವಳ ಪಾದ ತುಂಬಿರಿ
             ನನ್ನಾಸೆ ಮಲ್ಲಿಗೇ ಬರ್ತಾಳಮ್ಮಾ ನಮ್ಮೂರ ಜ್ಯೋತಿಯ ಅವಳೆನಮ್ಮಾ ಬಂಗಾರದಂತ ಬೊಂಬೆಯೂ
------------------------------------------------------------------------------------------------------------------------- 

ರವಿಮಾಮ (೧೯೯೯) - ಆ ಕಿರಣಗಳಿಗೆ ಚುಂಬಿಸೋ ರವಿಮಾಮ 
ಸಂಗೀತ : ಚೈತನ್ಯ ಸಾಹಿತ್ಯ : ಎಸ್.ನಾರಾಯಣ ಗಾಯನ : ಎಲ್.ಏನ್.ಶಾಸ್ತ್ರಿ , ಸುಮಾಶಾಸ್ತ್ರಿ 

ಗಂಡು : ಹೇ... ಓಓಓ ... ಓಹೋಹೋ... ಲಾಲಾಲಾಲಾಲಾ
ಹೆಣ್ಣು : ಆ ಕಿರಣಗಳಿಗೆ ಚುಂಬಿಸೋ ರಘುರಾಮ ಹೊಂಗಿರಣದೊಳಗೆ ಸುಂದರ ರವಿಮಾಮ
          ಸಂತಸ ಮೂಡಣದ ಆ ದೀವೀಗಳಿಗೆ  ಸಂಭ್ರಮ ಸಂಭ್ರಮ ಈ ಹೃದಯದೊಳಗೆ
          ಆ ಕಿರಣಗಳಿಗೆ ಚುಂಬಿಸೋ ರಘುರಾಮ ಹೊಂಗಿರಣದೊಳಗೆ ಸುಂದರ ರವಿಮಾಮ
          ಸಂತಸ ಮೂಡಣದ ಆ ದೀವೀಗಳಿಗೆ  ಸಂಭ್ರಮ ಸಂಭ್ರಮ ಈ ಹೃದಯದೊಳಗೆ

ಹೆಣ್ಣು : ಆ ಹಮ್ಮಿರನಾ ಕಂಡಾಗಲೇ ಕೋಳೀನೂ ಕೂಗೋದು
ಗಂಡು : ಅವನೇದ್ದಾಗಲೇ ನಮ್ಮೂರಿಗೇ ಬೆಳಕು ಚೆಲ್ಲೋದು
           ಆ ಕಂದಮ್ಮನಾ ಅಳು ನಿಲ್ಲಲೂ ರವಿಮಾಮ ಬರಬೇಕು
ಹೆಣ್ಣು : ಈ ಕರುವಮ್ಮನು ಹಾಲ್ ಕುಡಿಯಲೂ ಆ ಸುಂದರನಿರಬೇಕು
          ಪ್ರೀತಿಗೆ ಹೃದಯವಂತನು ಊರಿಗೆ ಮುದ್ದು ಕಂದನು  ಅವನಿಗೆ ನಾ ನನ್ನೇ ತಂದೆನು
         ಆ ಕಿರಣಗಳಿಗೆ ಚುಂಬಿಸೋ ರಘುರಾಮ ಹೊಂಗಿರಣದೊಳಗೆ ಸುಂದರ ರವಿಮಾಮ

ಗಂಡು : ಓಹೋಹೋ... ಏಏಏಏಏ... ಒಹೋ ... ಲಾಲಾಲಾಲಾಲಾ...
ಹೆಣ್ಣು : ಆ ದಾಳಿಂಬೆಯಾ ಕೆಂಬಣ್ಣವೂ ಗಲ್ಲಾದ ಗೂಡಲ್ಲಿ
          ಆ ಮುಂಜಾನೆಯ ರಂಗೋಲಿಯು ಮುತ್ತಿನ ನಗುವಲ್ಲಿ
          ಓ ಅಬಲೆ ಎನುವ ಮುದ್ದು ಇದೆ ಕಣ್ಣಿನ ಕೊಳದಲ್ಲಿ
          ಪ್ರೀತಿಗೆ ಇದ್ದು ದಾಸನು ಸೋಲಿಗೆ ಸೋಲಲಾರನು ಅವನಿಗೆ ನಾ ನನ್ನನ್ನೇ ತಂದೆನು
          ಆ ಕಿರಣಗಳಿಗೆ ಚುಂಬಿಸೋ ರಘುರಾಮ ಹೊಂಗಿರಣದೊಳಗೆ ಸುಂದರ ರವಿಮಾಮ
          ಸಂತಸ ಮೂಡಣದ ಆ ದೀವೀಗಳಿಗೆ  ಸಂಭ್ರಮ ಸಂಭ್ರಮ ಈ ಹೃದಯದೊಳಗೆ
          ಆ ಕಿರಣಗಳಿಗೆ ಚುಂಬಿಸೋ ರಘುರಾಮ ಹೊಂಗಿರಣದೊಳಗೆ ಸುಂದರ ರವಿಮಾಮ
------------------------------------------------------------------------------------------------------------------------- 

ರವಿಮಾಮ (೧೯೯೯) - ಅ ಆ  ಕಲಿಯಬೇಕು ಜ್ಞಾನ ತಿಳಿಯಬೇಕು 
ಸಂಗೀತ : ಚೈತನ್ಯ ಸಾಹಿತ್ಯ : ಎಸ್.ನಾರಾಯಣ ಗಾಯನ : ಎಸ್.ಪಿ.ಬಿ, ಸುಮಾಶಾಸ್ತ್ರಿ 

ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ ವಿದ್ಯಾವಂತರಾಗಿ ಲೋಕ ಅರಿಯಬೇಕೂ
ಗಂಡು : ಎಸ್ ಎಸ್ ಅಂದಾಗಲೇ ಮೆಚ್ಚಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ 

ಗಂಡು : ನಾ ಹಳ್ಳಿ ಮೇಷ್ಟ್ರು ಮಗುವೇ ಪಾಠಾನಾ ಹೇಳಿ ಕೊಡುವೇ
           ಕಂ ಕಮ್ಮು ಇಲ್ಲಿ ಸಿಟ್ ಸಿಟ್ಟು ಅಲ್ಲಿ ನನ್ನಂತೆ ಕಲಿಯಿರೆಲ್ಲಾ ಹಾಂ..
ಹೆಣ್ಣು : ಓ.. ರಾಮಾಚಾರಿ ಕೇಳು ಕಾಗುಣಿತ ಸಾಲು ಸಾಲು
         ನೀ ಕಲಿತ ಮೇಲೆ ಊರರಿತ ಮೇಲೆ ನಿನಗಿಲ್ಲ ಸೋಲು ಸೋಲು
ಗಂಡು : ದಿಲ್ ತೋ ಪಾಗಲ್ ಐತೆ ಕುಚು ಕುಚ್ಚು ಹೋತಾ ಐತೆ
           ಬಾಜಿಗರ್ ಡರ್ರ ಆಗೈತೇ ಇಂಗ್ಲಿಷ್ ಎಂಗೇಗೈತೆ  
ಹೆಣ್ಣು : ಅಣ್ಣಯ್ಯ ಸುಮ್ನಿರೋ ತರ್ಲೆ ಮಾಡದೇ
ಗಂಡು : ಎ ಬಿ ಕಲಿಯಬೇಕು ಬೇಬಿ ಅನ್ನಬೇಕು ತಂಗಿ ಅನ್ನೋ ಬದಲೂ ಸಿಸ್ಟರ್ ಅನ್ನಬೇಕು
            ಐ ಕಂ ಯಾಪಿ ಯಾಪಿ ಅವ್ಳು ಇವ್ಳು.. ಹುಹೂಹೂ

ಹೆಣ್ಣು : ಮಾತೃದೇವೋಭವ.. ಪಿತೃದೇವೋಭವ ಅತಿಥಿ ದೇವೋಭವ ಆಚಾರ್ಯದೇವೋಭವ
          ಮಾತೃದೇವೋಭವ.. ಪಿತೃದೇವೋಭವ ಅತಿಥಿ ದೇವೋಭವ ಆಚಾರ್ಯದೇವೋಭವ 
          ಇದು ನಮ್ಮ ಆಸ್ತಿಯಮ್ಮ ಯಾರಿದನು ಕದಿಯರಮ್ಮ
          ಅಜ್ಞಾನ ಅಳಿಸಿ ಸುಜ್ಞಾನ ಕೊಡುವ ಶಾರದೆಯ ವರವಿದಮ್ಮಾ
ಗಂಡು : ನಮ್ಮೂರ ಜಾಣೆ ಇವಳೂ ಏ ಬಿ ಸಿ ಕಲಿತ ಮಗಳು
            ಇವ್ಲಹೇಳಿ ಕೊಟ್ರೇ ನೀ ಕಲಿತುಬಿಟ್ರೇ ಬೆಳಕಂತೆ ನಮ್ಮ ಬಾಳು
ಹೆಣ್ಣು : ಮನಸಿಟ್ಟು ಓದಲೇ ಬೇಕು ಹೆಬ್ಬೆಟ್ಟು ತೊಲಗಿಸಬೇಕು
          ಓದಿದರೆ ನೀನೇ ದೊರೆಯು ಇಲ್ಲದಿರೇ  ದೇಶಕೆ ಹೊರೆಯೂ
ಗಂಡು : ಗುರಕುಲ ಇಲ್ಲದೆ ಎಲ್ಲಾ ಬನ್ನಿರಿ..
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ ವಿದ್ಯಾವಂತರಾಗಿ ಲೋಕ ಅರಿಯಬೇಕೂ
ಗಂಡು : ಎಸ್ ಎಸ್ ಅಂದಾಗಲೇ ಮೆಚ್ಚಬೇಕೂ
ಹೆಣ್ಣು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ
ಗಂಡು : ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕೂ 
------------------------------------------------------------------------------------------------------------------------- 

ರವಿಮಾಮ (೧೯೯೯) - ಅಲೆಯೋ ಅಲೆ ಎದೆಯೊಳಗೇ ಸುಖದಾ ಮಳೆ ಒಳ ಒಳಗೇ 
ಸಂಗೀತ : ಚೈತನ್ಯ ಸಾಹಿತ್ಯ : ಎಸ್.ನಾರಾಯಣ ಗಾಯನ : ಎಸ್.ಪಿ.ಬಿ, ಚಿತ್ರಾ  

ಗಂಡು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ
ಹೆಣ್ಣು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ
ಗಂಡು : ಬಿಸಿ ಮುತ್ತು ಕೊಡೋ ಹೊತ್ತು ಹೊಸ ಮತ್ತು ನಂಗೆ ಬಂತು
ಹೆಣ್ಣು : ಸಿಹಿ ತುತ್ತು ಮೂರೂ ಹೊತ್ತು ನಿಂಗೆ ಇತ್ತು ಖುಷಿ ತಂತು
ಗಂಡು : ಹಲೋ ಜಾಣೆ ಕಲರ ಜೇನೆ ದೊಂಬಿ ಮಾಡೋ ದುಂಬಿ ನಾನು
ಗಂಡು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ
ಹೆಣ್ಣು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ

ಗಂಡು : ದಿಲ್ ಸೇ ಹೇಳು ವರ್ಣಗಳ ಪ್ರೀತಿ ಚೆಲ್ಲುವೇ 
            ನನ್ನ ಹಾರ್ಟನಲ್ಲಿ ಲವ್ ಬೀಟಲ್ಲಿ ಸೀಟು ನಾನೇ ಇಡುವೇ 
ಹೆಣ್ಣು : ಹಾಂ ... ಡವ್ ಡವ್ ಎನ್ನುವ ಹೃದಯದಲಿ ಲವ್ ಲವ್ ಸದ್ದಿದೇ 
          ನನ್ನ ಕನಸಲ್ಲಿ ಬೆಣ್ಣೆ ಮನಸಲ್ಲಿ ನಿನ್ನಾ ಚೆಲ್ಲಾಟವೇ.. 
ಗಂಡು : ನಾ ಮೆಚ್ಚಿದಾ ಹುಡುಗಿ ಸ್ವೀಟಿ ನಮ್ಮಿಬ್ಬರ ಜೋಡಿ ಬ್ಯುಟಿ 
ಹೆಣ್ಣು : ಹುಡುಗಾಟದಾ ಹುಡುಗ ನೀನು ಜೊತೆ ಇದ್ದರೇ ಕುಶಲ ನಾನು 
ಗಂಡು : ಥ್ರಿಲ್ಲಾಗಿದೇ ದಿಲ್ ಎಲ್ಲವೂ .. 
ಹೆಣ್ಣು : ತಂಟೆ ಮಾಡೋ ತುಂಟ ನೀನು 
ಗಂಡು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ
ಹೆಣ್ಣು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ

ಹೆಣ್ಣು : ಅಲೆಯಾ ರಭಸಕೆ ಕರಗದಾ ಬಂಡೆ ಎಲ್ಲಿದೇ 
          ನಿನ್ನ ಎದುರಲಿ ನಿಂತ ಕ್ಷಣದಲಿ ನಾ ಕರಗಿ ನೀರಾದೆನೂ 
ಗಂಡು : ಆ.. ಒಂದೇ ನೋಟಕೆ ಎಳೆ ಮನಸಾ ಸೆಳವ ಭೂಪತಿ 
           ನಾನು ಟೀನೇಜು ಹೆವಿ ವೋಲ್ಟೇಜು ಲವ್ವೆ ನನ್ನ ಫ್ಯೂಜು 
ಹೆಣ್ಣು : ಟೀನೇಜಿಗೇ ನೀನೇ ಸ್ಕೂಲು ನೀ ಪ್ರೀತಿಗೆ ಪ್ರಿನ್ಸಿಪಾಲೂ 
ಗಂಡು : ಈ ಸ್ಕೂಲಿನ ಪಾಠ ಕೇಳಲು ಪ್ರೇಮಾಂಕುರ ಮೊದಲ ಸಾಲು 
ಹೆಣ್ಣು : ಥ್ರಿಲ್ಲಾಗಿದೇ .. ದಿಲ್ ಎಲ್ಲವೂ 
ಗಂಡು : ಬೆಳ್ಳಿ ಮಾನಸ ಮಳ್ಳಿ ನೀನೂ ... 
ಹೆಣ್ಣು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ
ಗಂಡು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ 
ಗಂಡು : ಬಿಸಿ ಮುತ್ತು ಕೊಡೋ ಹೊತ್ತು ಹೊಸ ಮತ್ತು ನಂಗೆ ಬಂತು
ಹೆಣ್ಣು : ಸಿಹಿ ತುತ್ತು ಮೂರೂ ಹೊತ್ತು ನಿಂಗೆ ಇತ್ತು ಖುಷಿ ತಂತು
ಗಂಡು : ಹಲೋ ಜಾಣೆ ಕಲರ ಜೇನೆ ದೊಂಬಿ ಮಾಡೋ ದುಂಬಿ ನಾನು
ಗಂಡು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ
ಹೆಣ್ಣು : ಅಲೆಯೋ ಅಲೆ ಎದೆಯೊಳಗೆ ಸುಖದಾ ಮಳೆ ಒಳ ಒಳಗೆ ಬಳಿ ನೀನಿರುವಾಗ
------------------------------------------------------------------------------------------------------------------------- 

No comments:

Post a Comment