428. ಮೌನ ಸಂಗ್ರಾಮ (1993)



ಮೌನ ಸಂಗ್ರಾಮ ಚಲನ ಚಿತ್ರದ ಹಾಡುಗಳು 
  1. ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ದುಂಡು ಮಲ್ಲೆ
  2. ಸಂಧ್ಯಾ ಸಮಯ, ಒಂದಾದವು ಬಣ್ಣಗಳು
  3. ಹುಯ್ಯೋ ಹುಯ್ಯೋ ಮಳೆರಾಯ 
  4. ನಾನು ನನ್ನವರು 
  5. ಸಿಲ್ಕ್ ಸಿಲ್ಕ್ 
ಮೌನ ಸಂಗ್ರಾಮ (1993) - ಮಲ್ಲಿಗೆ ಮಲ್ಲಗೆ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ, ಎಸ್.ಜಾನಕಿ

ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ದುಂಡು ಮಲ್ಲೆ, ನನ್ನ ನಲ್ಲೆ ಕಂಪು ಕಸ್ತೂರಿ ಬೀರೊ ಮಾಲೆ
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ದುಂಡು ಮಲ್ಲೆ, ನಿನ್ನ ನಲ್ಲೆ
ಪ್ರೇಮ ಪಲ್ಲಂಗ ಏರೊ ಹೂವ ಮಾಲೆ

ಮಂಜು ಮಂಜುಳವೀ ಮಡಿಕೇರಿ ಮಡಿಕೇರಿ ಜೊತೆ ಮದನಾರಿ
ಹಿಮದ ಜೊತೆಗೆ ಸುಮದ ಬೆಸುಗೆ
ತಾಯಿ ಮಣ್ಣೆಯಲ್ಲಿ ಕಾವೇರಿ ಕಾವೇರಿ ಜೊತೆ ಸಹಚಾರಿ
ಹುತ್ತರಿ ಜೊತೆಗೆ ತುತ್ತರಿ ಬೆಸುಗೆ
ಪ್ರಣಯಕಾಶಿ ಕೊಡಗಿನ ಮೇಲೆ ಮಲ್ಲೆ ಮುತ್ತಿನ ಸರಮಾಲೆ
ಹಸಿರು ಕಡಲ ಗಿರಿಗಳ ಮೇಲೆ ಪ್ರೇಮ ದುಂಬಿಗೆ ಕರೆಯೋಲೆ

ಮೈ ಸೂರೆ ಮಾಡೊ ದರಬಾರು ದರಬಾರಿನಲ್ಲಿ ಮೈಸೂರು
ಮನಸೇ ನಿಲ್ಲದು ದಸರಾ ನೆನೆದು
ಮನಸೂರೆ ಮಾಡೋ ಪಕ್ಷಿಧಾಮ ಪಕ್ಷಿಧಾಮದಲ್ಲು ಪ್ರೇಮನಾಮ
ನದಿಗೆ ಇಳಿದು ಹರೆಯ ನಿಲ್ಲದು
ಪ್ರಣಯ ಗಂಗ ಸಂಗಮದಲ್ಲಿ ಪ್ರಥಮ ಪ್ರೇಮದ ಸಲ್ಲಾಪ
ಪ್ರೇಮ ಕಾಮದ ಸೇತುವೆಯಲ್ಲಿ ಮಧುರ ಜೀವನ ಆಲಾಪ
-------------------------------------------------------------------------------------------------------------------------

ಮೌನ ಸಂಗ್ರಾಮ (1993) - ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರಾ 

ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಧೀ ಸಮಯ, ಒಂದಾದವು ಹೃದಯಗಳು
ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಧೀ ಸಮಯ, ಒಂದಾದವು ಹೃದಯಗಳು
ಒಲವೇ ಸಿಂಧೂರ, ಚೆಲುವೇ ಶೃಂಗಾರ ಸುದಿನ ಸುದಿನ ಈ ದಿನ
ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಧೀ ಸಮಯ, ಒಂದಾದವು ಹೃದಯಗಳು

ಮೊಗದ, ಕೊಳದ, ಕಮಲ, ಎರಡು
ನಾ ಅಲ್ಲಿರಲೊ ಇಲ್ಲಿರಲೊ ಭ್ರಮರಕೆ ಭ್ರಮೆ ಈಗ
ಕಮಲ, ದಳವ, ಮುಚ್ಚೋ, ಸಮಯ
ಪ್ರಿಯ ಹೊರಗಿರಲೊ ಒಳಗಿರಲೊ ಕುಸುಮಕೆ ಕನಸೀಗ
ನಿನ್ನೊಳಗೂ ಹೊರಗೂ ಇರುವೆ
ನೀ ನನಗೆ ಅರುಣೋದಯವೇ
ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಧೀ ಸಮಯ, ಒಂದಾದವು ಹೃದಯಗಳು
ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಧೀ ಸಮಯ, ಒಂದಾದವು ಹೃದಯಗಳು
ಒಲವೇ ಸಿಂಧೂರ, ಚೆಲುವೇ ಶೃಂಗಾರ ಸುದಿನ ಸುದಿನ ಈ ದಿನ

ಪ್ರತಿಮೆ, ನಿನಗೆ, ಉಪಮೆ, ಯಾಕೆ
ನಾ ಹಾಡದೆಯೇ ಹೊಗಳದೆಯೇ ಚೆಲುವಿನ ಗಣಿ ನೀನು
ನರರ, ನಡುವೆ, ಸುರರು, ನೀವು
ಈ ಕಣ್ಣಿನಲೇ ಕದನವಿಡೋ ವಸುಂಧರೆ ದೊರೆ ನೀನು
ಮೋಹಮಯ ಸರ್ವಾಂಗಗಳು
ಪ್ರೇಮಮಯ ಗಿರಿ ಕೋಟೆಗಳು
ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಧೀ ಸಮಯ, ಒಂದಾದವು ಹೃದಯಗಳು
ಸಂಧ್ಯಾ ಸಮಯ, ಒಂದಾದವು ಬಣ್ಣಗಳು
ಸಂಧೀ ಸಮಯ, ಒಂದಾದವು ಹೃದಯಗಳು
ಒಲವೇ ಸಿಂಧೂರ, ಚೆಲುವೇ ಶೃಂಗಾರ ಸುದಿನ ಸುದಿನ ಈ ದಿನ
-----------------------------------------------------------------------------------

ಮೌನ ಸಂಗ್ರಾಮ (೧೯೯೩) - ಹುಯ್ಯೋ ಹುಯ್ಯೋ ಮಳೆರಾಯ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ : ಲತಾಹಂಸಲೇಖ 

-----------------------------------------------------------------------------------

ಮೌನ ಸಂಗ್ರಾಮ (೧೯೯೩) - ನಾನು ನನ್ನವರು 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ : ಎಸ್.ಜಾನಕಿ

-----------------------------------------------------------------------------------

ಮೌನ ಸಂಗ್ರಾಮ (೧೯೯೩) - ಸಿಲ್ಕ್ ಸಿಲ್ಕ್ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ ಗಾಯನ : ಮಂಜುಳಾ ಗುರುರಾಜ 

-----------------------------------------------------------------------------------

No comments:

Post a Comment