429. ಒಂದು ಮುತ್ತಿನ ಕಥೆ (1987)


ಒಂದು ಮುತ್ತಿನ ಕಥೆ ಚಿತ್ರದ ಹಾಡುಗಳು 
  1. ಮುತ್ತೊಂದ ತಂದೆ 
  2. ಒಂದು ಎರಡು ಮೂರೂ 
  3. ಮಲ್ಲಿಗೆ ಹೂವಿನಂಥ 
  4. ಮೇಲಿಂದ ಹುಣ್ಣಿಮೆ ಚಂದ್ರ 
  5. ಮುತ್ತೊಂದು ಬಂದಾಯ್ತು 
ಒಂದು ಮುತ್ತಿನ ಕಥೆ (1987) - ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಲ್.ವೈದ್ಯನಾಥನ್ ಹಾಡಿದವರು: ಡಾ.ರಾಜ್‌ಕುಮಾರ್, ರತ್ನಮಾಲ ಪ್ರಕಾಶ್

ಗಂಡು : ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
           ತಾವರೆ ಹೂವಿನಂತೆ ಚಂದ ಕಣ್ಣಲ್ಲಿ
          ದುಂಬಿಯ ಹಾಡಂತೆ ಮಾತಿನ ಇಂಪಂತೆ
          ನನಗೆ ಒಲಿದ ಮುದ್ದು ಚಲುವೆಯೆ
         ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
         ತಾವರೆ ಹೂವಿನಂತೆ ಚಂದ ಕಣ್ಣಲ್ಲಿ
ಹೆಣ್ಣು : ತಾನನ ತಾನಾನ ತಾನ

ಗಂಡು : ಕಡಲ ನೀರಲ್ಲಿ ದಿನವೂ ಈಜೋಣ
            ಜೋಡಿ ಮೀನಂತೆ ಆಟ ಆಡೋಣ
           ಮುಗಿಲು ಕಪ್ಪಾಗಿ ಸಿಡಿಲ ಸದ್ದಾಗಿ
           ಮಳೆಯು ಸುರಿದು ಚಳಿ ಬಂದಾಗ
          ಓ ಹೆಣ್ಣೇ, ನಾ ನಿನ್ನ ಈ ನನ್ನ ತೋಳಿಂದ
          ಅಪ್ಪುತ್ತ ತಂದೇನು ಆನಂದ
         ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
         ತಾವರೆ ಹೂವಿನಂತೆ ಚಂದ ಕಣ್ಣಲ್ಲಿ
         ದುಂಬಿಯ ಹಾಡಂತೆ ಮಾತಿನ ಇಂಪಂತೆ
         ನನಗೆ ಒಲಿದ ಮುದ್ದು ಚಲುವೆಯೆ
        ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
        ತಾವರೆ ಹೂವಿನಂತೆ ಚಂದ ಕಣ್ಣಲ್ಲಿ
ಹೆಣ್ಣು : ತಾನನ ತಾನಾನ ತಾನ ತಂದಾನನ ಆಆಆ...

ಗಂಡು : ಹಗಲು ಬಂದಂತೆ ಇರುಳು ಹೋದಂತೆ
            ಕಾಲ ನಿಲದೆಲೆ ಜಾರಿ ಹೋದಂತೆ
            ಪ್ರೀತಿ ಹಣ್ಣಾಯ್ತು ವರವ ತಂದಾಯ್ತು
            ಹೊಸದೊಂದು ಜೀವ ಜಾರಿ ಬಂದಾಯ್ತು
            ಬಾಳೆಲ್ಲ, ಸಂತೋಷ ಸಂಗೀತ ಎಂದೆಂದೂ
            ಜೋಗುಳ ಹಾಡೋದೆ ಇನ್ನೆಂದೂ
            ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
           ತಾವರೆ ಹೂವಿನಂತೆ ಚಂದ ಕಣ್ಣಲ್ಲಿ
            ದುಂಬಿಯ ಹಾಡಂತೆ ಮಾತಿನ ಇಂಪಂತೆ
            ನನಗೆ ಒಲಿದ ಮುದ್ದು ಚಲುವೆಯೆ
            ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
            ತಾವರೆ ಹೂವಿನಂತೆ ಚಂದ ಕಣ್ಣಲ್ಲಿ
-------------------------------------------------------------------------------------------------------------------------

ಒಂದು ಮುತ್ತಿನ ಕಥೆ (1987) - ಮುತ್ತೊಂದ ತಂದೆ ಕಡಲಾಳದಿಂದ ಅದರ ಅಂದ ಇಲ್ಲಿ ಕಂಡೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಲ್.ವೈದ್ಯನಾಥನ್ ಹಾಡಿದವರು: ಡಾ.ರಾಜ್‌ಕುಮಾರ್, ರತ್ನಮಾಲ ಪ್ರಕಾಶ್


ಗಂಡು : ಮುತ್ತೊಂದ ತಂದೆ ಕಡಲಾಳದಿಂದ ಅದರ ಅಂದ ಇಲ್ಲಿ ಕಂಡೆ
ಹೆಣ್ಣು : ನಿನೀಲ್ಲಿ ಕಂಡ ಅದೇ ಅಂದಕ್ಕಿಂತ ನೀನೇ ಚೆಂದ ನನ್ನಾಣೆಗೂ
ಗಂಡು : ಮುತ್ತೊಂದ ತಂದೆ ಕಡಲಾಳದಿಂದ ಅದರ ಅಂದ ಇಲ್ಲಿ ಕಂಡೆ
ಹೆಣ್ಣು : ನಿನೀಲ್ಲಿ ಕಂಡ ಅದೇ ಅಂದಕ್ಕಿಂತ ನೀನೇ ಚೆಂದ ನನ್ನಾಣೆಗೂ

ಗಂಡು :ಆ ಅಲೆಗಳು ಮೇಲೇರುತಾ ನೀ ನುಡಿದ ಅನುವಿಗೆ ನೋಡು ಕುಣಿದಿದೆ 
ಹೆಣ್ಣು : ತಂಗಾಳಿಯು ಮೈ ಸೋಕುತ ನೀ ಬಳಿಗೆ ಬಾ ಎನ್ನುತ ನನ್ನೇ ನೂಕಿದೆ 
ಗಂಡು : ಇನ್ನು ಮುದ್ದು ಹೆಣ್ಣೇ ನಿನ್ನಾ ಬಿಡೆ ಎಂದೆಂದೂ 
ಹೆಣ್ಣು : ನನ್ನ ಮುದ್ದು ಗಂಡೇ ನೀನೇ ಪ್ರಾಣ ಎಂದೆಂದು 
ಗಂಡು : ಮುತ್ತೊಂದ ತಂದೆ ಕಡಲಾಳದಿಂದ ಅದರ ಅಂದ ಇಲ್ಲಿ ಕಂಡೆ
ಹೆಣ್ಣು : ನಿನೀಲ್ಲಿ ಕಂಡ ಅದೇ ಅಂದಕ್ಕಿಂತ ನೀನೇ ಚೆಂದ ನನ್ನಾಣೆಗೂ 

ಕೋರಸ್ : ಆಕಾಶ ಭೂಮಿ ಒಂದಾಗೋ ಕಾಲ ಬಂದೆ ಬಂತು ನೋಡಿ ಈಗ 
               ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು ಸೇರೋ ಕಾಲ ಬಂತು ಈಗ 
               ಹೆಣ್ಣೊಂದ ಹುಡುಕುವೇ... ಗಂಡೊಂದ ಹುಡುಕುವೇ 
               ಒಂದಾಗಿ ಬೆರೆಯುವೇ... ಆನಂದ ಹೊಂದುವೇ 
               ಆಕಾಶ ಭೂಮಿ ಒಂದಾಗೋ ಕಾಲ ಬಂದೆ ಬಂತು ನೋಡಿ ಈಗ 
               ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು ಸೇರೋ ಕಾಲ ಬಂತು ಈಗ 

              ಒಂಟಿ ಬಾಳೇನು ದೂರ ನೂಕದಿರಿ ಆಳಿ ಬಂದು ಬಾಳಿ ಬಿಡು 
              ಜೋಡಿ ನೋಡಿರಿ ಆಸೆ ಹೇಳಿರಿ ನಾಚಬೇಡಿರಿ 
              ಮೆಚ್ಚಿಕೊಂಡ ಗಂಡನೊಡನೆ ಬಂದು ನಿಲ್ಲಿರಿ 
ಗಂಡು : ಸೇರಿ ಬಂದು ನಿಲ್ಲಿ ನನ್ನ ಮುಂದೆ ನೀವೆಲ್ಲಾ 
            ನಮ್ಮ ಭೂತರಾಯ ಬೇಡ ಎಂದು ಹೇಳಲ್ಲ 
            ಹೆಣ್ಣೊಂದ ಕಂಡೆ ನಾ ಒಪ್ಪಿಕೊಂಡೇ 
            ಎಂಥ ಅಂದ ಇವಳು ನೋಡು 
ಹೆಣ್ಣು : ಗಂಡೊಂದ ಕಂಡೇ ನಾ ಒಪ್ಪಿಕೊಂಡೇ 
          ಎಂಥಾ ಭೂಪ ಇವನು ನೋಡು 

ಗಂಡು : ನನ್ನ ಕಣ್ಣಲ್ಲಿ ನೀನೇ ತುಂಬಿರೆ ಈ ಇರಳು ಈ ಕಡಲು ಏನು ಕಾಣದು
ಹೆಣ್ಣು : ನನ್ನ ಎದೆಯಲಿ ನೀನೇ ನಿಂತರೇ ಈ ಮನಸು ಬೇರೇನೂ ಕನಸು ನೋಡದು
ಗಂಡು : ಜೋಡಿ ತಾರೆ ಆಗಿ ನಾವು ಮೇಲೆ ಹೋಗೋಣ
ಹೆಣ್ಣು : ಇನ್ನು ಮೋಡದಿಂದ ಕಡಲಂದ ನೋಡೋಣ
ಕೋರಸ್ : ಆಕಾಶ ಭೂಮಿ ಒಂದಾಗೋ ಕಾಲ ಬಂದೆ ಬಂತು ನೋಡಿ ಈಗ 
               ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು ಸೇರೋ ಕಾಲ ಬಂತು ಈಗ 
               ಹೆಣ್ಣೊಂದ ಹುಡುಕುವೇ... ಗಂಡೊಂದ ಹುಡುಕುವೇ 
               ಒಂದಾಗಿ ಬೆರೆಯುವೇ... ಆನಂದ ಹೊಂದುವೇ 
               ಆಕಾಶ ಭೂಮಿ ಒಂದಾಗೋ ಕಾಲ ಬಂದೆ ಬಂತು ನೋಡಿ ಈಗ 
               ಗಂಡೊಂದ ಹೆಣ್ಣಾ ಹೆಣ್ಣೊಂದ ಗಂಡು ಸೇರೋ ಕಾಲ ಬಂತು ಈಗ 
--------------------------------------------------------------------------------------------------------------------------

ಒಂದು ಮುತ್ತಿನ ಕಥೆ (1987) - ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಲ್.ವೈದ್ಯನಾಥನ್ ಹಾಡಿದವರು: ಡಾ.ರಾಜ್‌, ಸುನಿಲ, ಸೌಮ್ಯ 

ಮಕ್ಕಳು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
             ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
ಗಂಡು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
             ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ

ಗಂಡು : ಮತ್ತೆ ಮತ್ತೆ ಕುಡಿದರೂ ಮುತ್ತು ಮುತ್ತು ಸೇರಿದರು
            ಒಂದು ಎರಡು ಮೂರೂ ನಾಲ್ಕನೇ, ಆತುರ ಏತಕೆ ನೋಡು ಇಲ್ಲಿ
            ಸೇರಿಸು ಇದನ್ನು  ಸೇರಿಸದೆ ಹೌದಾ
ಮಕ್ಕಳು : ಹೌದಾ
ಗಂಡು : ಕೂಡಿಸಿದೇ ಹೌದಾ         ಮಕ್ಕಳು : ಹೌದು
ಗಂಡು : ಆದರೂ ಈಗಲೂ ನಾಲ್ಕೇ ಮುತ್ತುಗಳು  ಇದರ ಮನೆ ಕಾಯ್ವೋಗ್
ಗಂಡು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ
             ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ

ಗಂಡು : ಐದು ಆರು ಎಂಟು ಕೂಡಿ ಹೇಳೋ ಅಂಕಿಗಳು 
           ಅಯ್ಯೋ ಮಂಕೆ ನಿನಗೆ ಗೊತ್ತುಂಟಾ 
           ನೋಡಿಕೋ ಈಗಲೇ ನಾನು ಹೇಗೆ ಎಲ್ಲಾ ಎಣಿಸುವೆನು
           ಒಂದಾಯ್ತು ಸರಿನಾ...         ಮಕ್ಕಳು:  ಸರಿ
           ಎರಡಾಯ್ತು  ಸರಿನಾ..         ಮಕ್ಕಳು:  ಸರಿ
           ಮೂರಿದು ನಾಲ್ಕಿದು ನಾಲ್ಕೇ ಮುತ್ತುಗಳು ಅಯ್ಯಯ್ಯೋ
ಗಂಡು : ಒಂದು ಎರಡು ಮೂರೂ ನಾಲ್ಕು ಆಮೇಲೆ ಏನೂ

             ನಾಲ್ಕು ಮೂರೂ ಎರಡು ಒಂದು ಆಮೇಲೆ ಇನ್ನೇನೂ
             ಹೇಳು ಆಮೇಲೆ ಇನ್ನೇನು ಅಷ್ಟೇ ನನಗೆ ಗೊತ್ತಿರದು ನಾನೇನು ಮಾಡ್ಲಿ 
--------------------------------------------------------------------------------------------------------------------

ಒಂದು ಮುತ್ತಿನ ಕಥೆ (1987) - ಮೇಲಿಂದ ಹುಣ್ಣಿಮೆ ಚಂದ್ರ ಕಡಲಲ್ಲಿ ಜಾರಿ ಬಿದ್ದ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಲ್.ವೈದ್ಯನಾಥನ್ ಹಾಡಿದವರು: ಡಾ.ರಾಜ್‌, ಶಂಕರನಾಗ್ 

ಗಂಡು : ಮೇಲಿಂದ ಹುಣ್ಣಿಮೆ ಚಂದ್ರ ಕಡಲಲ್ಲಿ ಜಾರಿ ಬಿದ್ದ 
           ಸೊಗಸಾದ ಮುತ್ತಾದ ನನ್ ಕೈಗೆ ಸಿಕ್ಕಿದ

ಗಂಡು : ನನ್ನಂಥ ಭಾಗ್ಯಶಾಲಿ ಊರಲ್ಲಿ ಇಲ್ಲಾ
            ಬೆಲೆ ಬಾಳೋ ಇಂಥ ಮುತ್ತು ಬೇರೆ ಇಲ್ಲ
             ನನ್ನಂಥ ಭಾಗ್ಯಶಾಲಿ ಊರಲ್ಲಿ ಇಲ್ಲಾ
             ಬೆಲೆ ಬಾಳೋ ಇಂಥ ಮುತ್ತು ಬೇರೆ ಇಲ್ಲ
             ಹಣವನ್ನು ಕೊಟ್ಟು ಕೊಳ್ಳೋ ಭೂಪ ಯಾರೋ ಗೊತ್ತಿಲ್ಲಾ 
             ಓ ಕಾಳ.. ಓ..ಕುಳ್ಳ... ನೀನೇ ಹೇಳಲೇ... 
ಕೋರಸ್ : ನಿಮ್ಮಪ್ಪ ನೋಡೇ ಇಲ್ಲಾ ನಮ್ ತಾತ ನೋಡೇ ಇಲ್ಲಾ 
                ಸೊಗಸಾದ ಮುತ್ತು ಬೆಲೆ ಬಾಳೋ ಇಂಥಾ ಮುತ್ತು 
ಗಂಡು : ಮೇಲಿಂದ ಹುಣ್ಣಿಮೆ ಚಂದ್ರ ಕಡಲಲ್ಲಿ ಜಾರಿ ಬಿದ್ದ 
           ಸೊಗಸಾದ ಮುತ್ತಾದ ನನ್ ಕೈಗೆ ಸಿಕ್ಕಿದ

ಗಂಡು : ಈ ನನ್ನ ಪುಟ್ಟ ವೀರ ಪಟ್ಟಣಕೆ ಹೋಗುವ 
           ಶಾಲೆಗೇ ಸೇರುವಾ ಓದು ಬರೆದು ಮಾಡುವಾ 
           ಉಸಿರಿಂದ ಹತ್ತು ಎಂಟು ಹಕ್ಕಿ ಎಲ್ಲ ಎಣಿಸುವ 
           ಓ.. ಠಾಕಿ ... ಓ ಚೆನ್ನೀ... ಓ.. ಡಾಣಿ ದರಿತಿ ಕೇಳಲೇ 

ಗಂಡು : ನೂರಾರು ದೋಣಿಯನ್ನು ಕೊಳ್ಳುವೇ  ನಾನು 
           ನಿಮಗೆಲ್ಲ ಹಂಚುವೇ  ಇನ್ನು ಚಿಂತೆ ಏನು.. 
ಶಂಕರ : ಮುತ್ತಿನ ರಾಜನೆಂದು ಬಿರುದು ಬಂದಿತು 
           ನಿನ್ನಂತೆ ಊರಲ್ಲಿ ಯಾರಿಲ್ಲ ಎನ್ನಿಸಿಕೊಳ್ಳುವೇ 
ಕೋರಸ್ : ಮುತ್ತಿನ ರಾಜ ಮುತ್ತಿನ ರಾಜ
--------------------------------------------------------------------------------------------------------------------------

ಒಂದು ಮುತ್ತಿನ ಕಥೆ (1987) - ಮುತ್ತೊಂದು ಬಂದಾಯ್ತು ಕಣ್ಣೀರು ತಂದಾಯ್ತು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಲ್.ವೈದ್ಯನಾಥನ್ ಹಾಡಿದವರು: ಸಿ.ಅಶ್ವಥ 

ಮುತ್ತೊಂದು ಬಂದಾಯ್ತು ಕಣ್ಣೀರು ತಂದಾಯ್ತು
ಮುತ್ತಿನ ಕಥೆ ಮುಗಿಯದಾ ವ್ಯಥೆ

ಬಡತನ ಇದ್ದಾಗ ಪ್ರೀತಿ ಭೀತಿ ನ್ಯಾಯ ಕಂಡೇ ಬಾಳಲ್ಲಿ
ದೇವರಾ ರೀತಿಯ ಹೀಗೆ ಎಂದೂ ಹೇಳೋರಾರು ಲೋಕದಿ
ಇನ್ನೂ ಹೀಗೆ ಕಣ್ಣಲಿ ಕಂಬನಿ
ಮುತ್ತೊಂದು ಬಂದಾಯ್ತು ಕಣ್ಣೀರು ತಂದಾಯ್ತು
ಮುತ್ತಿನ ಕಥೆ ಮುಗಿಯದಾ ವ್ಯಥೆ 

ಸಿರಿತನ ಬಂದಾಗ ನೂರು ಕಣ್ಣು ನಿನ್ನ ಮೇಲೆ 
ಬಂದಾಗ ಪ್ರೇಮವು ಅತ್ತಾಗ ರೋಷ ದ್ವೇಷ 
ಮೋಸ ಕಂಡು ನೊಂದಾಗ  
ಶಾಂತಿ ಎಲ್ಲಿ ಸಂತೋಷ ಎಲ್ಲಿ ಬದುಕಲಿ 
ಮುತ್ತೊಂದು ಬಂದಾಯ್ತು ಕಣ್ಣೀರು ತಂದಾಯ್ತು
ಮುತ್ತಿನ ಕಥೆ ಮುಗಿಯದಾ ವ್ಯಥೆ 
-------------------------------------------------------------------------------------------------------------------------

No comments:

Post a Comment