430. ಪ್ರೇಮ ಪಲ್ಲವಿ (1981)

ಪ್ರೇಮ ಪಲ್ಲವಿ ಚಿತ್ರದ ಹಾಡುಗಳು 
  1. ಮಲ್ಲಿಗೆ ಮುಡಿದೋಳೆ ಮಾವನ ಮಗಳೆ
  2. ನಮಗಾಗೇ, ಈ ಲೋಕ
  3. ನಿನ್ನ ಕಂಡು ಬೆರಗಾದೇನೇ 
  4. ಕಣ್ಣ ಕೊಟ್ಟು ನೋಡೆಂದೂ ನುಡಿದವನೇ
  5. ನೋಡುತ ನೋಡುತ 
ಪ್ರೇಮ ಪಲ್ಲವಿ (1981) - ಮಲ್ಲಿಗೆ ಮುಡಿದೋಳೆ ಮಾವನ ಮಗಳೆ
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ   ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ ಅಂದದ ಮೊಗದೋಳೆ ಅತ್ತೆಯ ಮಗಳೆ
           ನನ್ನವಳೇ ಮನ ಕದ್ದವಳೇ  ನನ್ನವಳೇ ನನ್ನ ಗೆದ್ದವಳೇ
ಹೆಣ್ಣು : ಬಿಡೆನು ಬಿಡೆನು ಎಂದಿಗು ನಾ ನಿನ್ನ
          ಮಲ್ಲಿಗೆ ತಂದೋನೆ ಮಾವನ ಮಗನೆ ಅಂದದ ಮೊಗದೋನೆ ಅತ್ತೆಯ ಮಗನೆ
          ನನ್ನವನೇ ಮನ ಕದ್ದವನೇ ನನ್ನವನೇ ನನ್ನ ಗೆದ್ದವನೇ
ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ
ಹೆಣ್ಣು : ಅಂದದ ಮೊಗದೋನೆ ಅತ್ತೆಯ ಮಗನೆ

ಗಂಡು : ಈ ಹಾದಿಯ ಹಸಿರೆಲ್ಲವೂ  ನಲ್ಲೆ ಈ ನಿನ್ನ ನಡೆಗಾಗಿ
           ಹೂವ ಕಂಪೆಲ್ಲ, ಗಾಳಿ ತಂಪೆಲ್ಲ ಹೆಣ್ಣೆ ನಿನ್ನ ಹಿತಕಾಗಿ
ಹೆಣ್ಣು : ನೀ ಹಾಡುವ ಸವಿ ಗಾನವು ಚೆಲುವ ನಾ ಬಲ್ಲೆ ನನಗಾಗಿ
          ನನ್ನ ಈ ಅಂದ, ನನ್ನ ಆನಂದ ನಲ್ಲ ಎಂದೂ ನಿನಗಾಗಿ
ಗಂಡು : ಸರಸ ಹರುಷ ಅರಳಿತು ನಮಗಾಗಿ
ಹೆಣ್ಣು : ಮಲ್ಲಿಗೆ ತಂದೋನೆ ಮಾವನ ಮಗನೆ
ಗಂಡು : ಅಂದದ ಮೊಗದೋಳೆ ಅತ್ತೆಯ ಮಗಳೆ
ಹೆಣ್ಣು : ಆಆಆ... ಆ ಆ ಆ ಆ ಆ ಆ (ಆಆಆ.. ಆ ಆ ಆ)  ಆಹಾಹಾ .. (ಓಹೋಹೋ )

ಹೆಣ್ಣು : ಕಣ್ತುಂಬಿದೆ ಮನ ತುಂಬಿದೆ  ಬಾಳ ಉಯ್ಯಾಲೆ ತೂಗಾಡಿದೆ
          ನಿನ್ನ ತೋಳಲ್ಲಿ, ನಿನ್ನ ಒಲವಲ್ಲಿ ನಲಿವ ಹೂವು ನಾನಾದೆ
ಗಂಡು : ಬೆಳದಿಂಗಳ ಈ ಬೊಂಬೆಗೆ ಆಆಆ.. ಬಿಳಿಯ ಈ ಸೀರೆ ಸೊಗಸಾಗಿದೆ
            ನೀನು ನಡೆವಾಗ, ನಡುವು ಕುಣಿವಾಗ ನವಿಲ ನಾಟ್ಯ ನಾ ಕಂಡೆ
ಹೆಣ್ಣು : ಇಂದು ನಾನು ನಿನ್ನಲಿ ಒಂದಾದೆ
ಗಂಡು : ಮಲ್ಲಿಗೆ ಮುಡಿದೋಳೆ ಮಾವನ ಮಗಳೆ ಆಆಆ ಅಹ್ಹಹ್ಹಾಹ್ಹಾ
ಹೆಣ್ಣು : ಅಂದದ ಮೊಗದೋನೆ ಅತ್ತೆಯ ಮಗನೆ
ಗಂಡು : ನನ್ನವಳೇ ಮನ ಕದ್ದವಳೇ.....
ಹೆಣ್ಣು : ನನ್ನವನೇ ನನ್ನ ಗೆದ್ದವನೇ
          ಮಲ್ಲಿಗೆ ತಂದೋನೆ ಮಾವನ ಮಗನೆ
ಗಂಡು : ಅಂದದ ಮೊಗದೋಳೆ ಅತ್ತೆಯ ಮಗಳೆ
ಇಬ್ಬರು : ಲಲ್ಲಲಲ ಲಾಲಾ ಲಲಲ ಲಲ್ಲಲಲ ಲಾಲಾ ಲಲಲ
----------------------------------------------------------------------------------------------------------------

ಪ್ರೇಮ ಪಲ್ಲವಿ (1981) - ನಮಗಾಗೇ, ಈ ಲೋಕ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ನಮಗಾಗೇ.... ಹೆಣ್ಣು : ಈ ಲೋಕ
ಗಂಡು : ನಮಗಾಗೇ ಈ ಲೋಕ ಹೆಣ್ಣು : ನಮಗಾಗೇ ಈ ನಾಕ
ಗಂಡು : ಅಂದವೇ ತುಂಬಿದೆ, ಸಂತಸ ತಂದಿದೆ
ಹೆಣ್ಣು : ಬಾನಲಿ ಮುಗಿಲಿನ ಓಟವು ಬೀಸುವ ಗಾಳಿಯ ಆಟವು ಮನಸನು ಕುಣಿಸುವ ನೋಟವು
ಇಬ್ಬರು : ನಮಗಾಗೇ ಈ ಲೋಕ, ನಮಗಾಗೇ ಈ ನಾಕ ಅಂದವೇ ತುಂಬಿದೆ, ಸಂತಸ ತಂದಿದೆ

ಗಂಡು : ಸುತ್ತ ಮುತ್ತ ನಿಂತ ಮರವು ಓಲಾಡಿದೆ ಅಪ್ಪಿಕೊಂಡ ಬಳ್ಳಿಯನ್ನು ಮುದ್ದಾಡಿದೆ
ಹೆಣ್ಣು : ಹಾರಾಡೋ ಹಕ್ಕಿ, ಉಲ್ಲಾಸ ಉಕ್ಕಿ, ಹರುಷದೀ ಹಾಡಿದೆ
ಗಂಡು : ಅರಳಿ ನಗುವ ಹೂವ ಕಂಪು ಚೆಲ್ಲಾಡಿದೆ ಹೂವ ಕಂಡ ದುಂಬಿ ಮರಿಗೆ ಬಾಯಾರಿದೆ
ಹೆಣ್ಣು : ಹಾರಾಡೋ ಚಿಟ್ಟೆ, ಅಯ್ಯಯ್ಯೊ ಕೆಟ್ಟೆ, ಎನುತಲೀ ನೋಡಿದೆ
ಗಂಡು : ಹಗಲೂ ಇರುಳೇನು ನದಿಗೆ ದಣಿವೇನು ಕಡಲನು ಬೆರೆಯಲು ಹರಿಯುತಿದೆ
            ಕಡಲನು ಬೆರೆಯಲು ಹರಿಯುತಿದೆ
ಹೆಣ್ಣು : ನಮಗಾಗೇ,                       ಗಂಡು : ಈ ಲೋಕ
ಹೆಣ್ಣು : ನಮಗಾಗೇ ಈ ಲೋಕ,        ಗಂಡು: ನಮಗಾಗೇ ಈ ನಾಕ
ಹೆಣ್ಣು : ಅಂದವೇ ತುಂಬಿದೆ,             ಗಂಡು : ಸಂತಸ ತಂದಿದೆ

ಹೆಣ್ಣು : ಜೇನಿಗಿಂತ ನಿನ್ನ ನುಡಿಯು ಸಿಹಿಯಾಗಿದೆ ನಿನ್ನ ಸ್ನೇಹ ಇಂದು ತುಂಬ ಹಿತವಾಗಿದೆ
ಗಂಡು : ಒಂದಾಗೆ ಇರುವ, ಒಂದಾಗೆ ನಲಿವ, ಬಯಕೆಯು ಬಂದಿದೆ... ಆಆಆ...
ಹೆಣ್ಣು : ನಿನ್ನೆಗಿಂತ ನಿನ್ನ ಮೊಗವು ಸೊಗಸಾಗಿದೆ ಎಂದಿಗಿಂತ ನಿನ್ನ ಮಾತು ಹಿತವಾಗಿದೆ
ಗಂಡು : ನಿನ್ನನ್ನು ನೋಡಿ, ನೂರಾಸೆ ಮೂಡಿ, ಮನಸನು ಕಾಡಿದೆ
ಹೆಣ್ಣು : ಇನ್ನು ಮಾತೇಕೆ ಯಾರ ಹಂಗೇಕೆ ಕೊಡುವೆನು ಒಲವಿನ ಕಾಣಿಕೆ
          ಕೊಡುವೆನು ಒಲವಿನ ಕಾಣಿಕೆ
ಗಂಡು : ನಮಗಾಗೇ....                    ಹೆಣ್ಣು : ಈ ಲೋಕ
ಗಂಡು : ನಮಗಾಗೇ ಈ ಲೋಕ         ಹೆಣ್ಣು : ನಮಗಾಗೇ ಈ ನಾಕ
ಗಂಡು : ಅಂದವೇ ತುಂಬಿದೆ,            ಹೆಣ್ಣು : ಸಂತಸ ತಂದಿದೆ
ಹೆಣ್ಣು : ಬಾನಲಿ ಮುಗಿಲಿನ ಓಟವು     ಹೆಣ್ಣು ಬೀಸುವ ಗಾಳಿಯ ಆಟವು
ಗಂಡು : ಮನಸನು ಕುಣಿಸುವ ನೋಟವು
ಇಬ್ಬರು : ನಮಗಾಗೇ ಈ ಲೋಕ, ನಮಗಾಗೇ ಈ ನಾಕ ಅಹಹಹಆಹ್ಹಹ್ಹಾ ಆಹಾ ಪಪಪಪಪಪಪ
-------------------------------------------------------------------------------------------------------------------------

ಪ್ರೇಮ ಪಲ್ಲವಿ (1981) - ನಿನ್ನ ಕಂಡು ಬೆರಗಾದೇನೇ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., 

ಆಆಆಅ... ನಿನ್ನ ಕಂಡು ಬೆರಗಾದೇನೇ ಏಕೋ ಕಾಣೇ ಮರುಳಾದೇನೇ
ನಿನ್ನ ಕಂಡು ಬೆರಗಾದೇನೇ ಏಕೋ ಕಾಣೇ ಮರುಳಾದೇನೇ
ಸ್ನೇಹದ ಕರೆಗೇ ಪ್ರೀತಿಯ ನುಡಿಗೇ ಹೆಣ್ಣೇ ನನ್ನಾಣೆ ನಾ ಸೋತೇ
ನಿನ್ನ ಕಂಡು ಬೆರಗಾದೇನೇ ಏಕೋ ಕಾಣೇ ಮರುಳಾದೇನೇ

ಬಳುಕುತ ನಡೆವಾಗ ಸುಮಲತೆಯಂತೇ ಕುಣಿಯಲೂ ನೀ ನವಿಲಂತೇ.. 
ಮುಗಿಯುವ ಮಾತೆಲ್ಲಾ ಅರಗಿಣಿಯಂತೇ ಹಾಡಲೂ ಕೋಗಿಲೆಯಂತೇ.. 
ಕಣ್ಣಲೀ ಮಿಂಚೇನು ತುಟಿಯಲಿ ಸವಿಜೇನು  
ಕಣ್ಣಲೀ ಮಿಂಚೇನು ತುಟಿಯಲಿ ಸವಿಜೇನು ಈ ನಿನ್ನ ನೋಟ ಶೃಂಗಾರದಾಟ  
ಈ ನಿನ್ನ ನೋಟ ಶೃಂಗಾರದಾಟ ಪ್ರಣಯದ ಹೊಸ ಕವಿತೆಯೇ ನನಗೋಲಿಯುತ
ಹೆಣ್ಣಾಗಿ ಓಡೋಡಿ ಬಂದೇನು ನಾ ಕಾಣೇನೇ
ನಿನ್ನ ಕಂಡು ಬೆರಗಾದೇನೇ ಏಕೋ ಕಾಣೇ ಮರುಳಾದೇನೇ
ಸ್ನೇಹದ ಕರೆಗೇ ಪ್ರೀತಿಯ ನುಡಿಗೇ ಹೆಣ್ಣೇ ನನ್ನಾಣೆ ನಾ ಸೋತೇ
ನಿನ್ನ ಕಂಡು ಬೆರಗಾದೇನೇ ಏಕೋ ಕಾಣೇ ಮರುಳಾದೇನೇ...

ಬಾಳಲಿ ಜೊತೆಯಾಗಿ ಬರುವೆನು ನಾನೂ ಚಿಂತೆಯ ನೀನು ಬೀಡೂ
ಕೇಳದೇ ನೀನಗೆಲ್ಲಾ ತರುವೇನು ಇನ್ನೂ ಮನಸನು ಇಲ್ಲಿ ಕೋಡು
ಓಡುವ ನದಿಯೆರಡೂ ಒಂದಾಗಿ ಬೆರೆವಂತೇ
ಓಡುವ ನದಿಯೆರಡೂ ಒಂದಾಗಿ ಬೆರೆವಂತೇ  ನಾ ನಿನ್ನ ಸೇರಿ ಎಂದೆಂದೂ ಇರುವೇ
ನಾ ನಿನ್ನ ಸೇರಿ ಎಂದೆಂದೂ ಇರುವೇ ಹರುಷವ ಮನ ತುಂಬುವೇ ಸುಖ ನೀಡುವೇ
ಈ ಮಾತು ಸುಳ್ಳಲ್ಲಾ ನಂಬೆನ್ನ ಬಾ ಚಿನ್ನ ಬಾ
ನಿನ್ನ ಕಂಡು ಬೆರಗಾದೇನೇ ಏಕೋ ಕಾಣೇ ಮರುಳಾದೇನೇ
ಸ್ನೇಹದ ಕರೆಗೇ ಪ್ರೀತಿಯ ನುಡಿಗೇ ಹೆಣ್ಣೇ ನನ್ನಾಣೆ ನಾ ಸೋತೇ
ನಿನ್ನ ಕಂಡು ಬೆರಗಾದೇನೇ ಏಕೋ ಕಾಣೇ ಮರುಳಾದೇನೇ...
-------------------------------------------------------------------------------------------------------------------------

ಪ್ರೇಮ ಪಲ್ಲವಿ (1981) - ಕಣ್ಣ ಕೊಟ್ಟು ನೋಡೆಂದೂ ನುಡಿದವನೇ 
ಸಂಗೀತ: ರಾಜನ್-ನಾಗೇಂದ್ರ  ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. 

ಮನೆಯನ್ನೂ ಬೆಳಗುವ ಜ್ಯೋತಿ ಹಣತೆಯಿಂದ ಜಾರಿ ಮನೆಯನ್ನೇ ದಹಿಸುವ ಉರಿಯಾಯಿತೇ
ಬೆಳಕನ್ನು ಕಾಣುವ ಕಂಗಳಿಗೆ ಹಗೆಯಾಯಿತೇ...
ಕಣ್ಣ ಕೊಟ್ಟು ನೋಡೆಂದೂ ನುಡಿದವನೇ ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಕಣ್ಣ ಕೊಟ್ಟು ನೋಡೆಂದೂ ನುಡಿದವನೇ ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದೂ ಕಣ್ಣೀರೇ ಜೀವನಾ.... ನೋವೇ ಬಾಳೆಲ್ಲಾ ಅತೀ ದಾರುಣ...
ಕಣ್ಣ ಕೊಟ್ಟು ನೋಡೆಂದೂ ನುಡಿದವನೇ ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ

ಬಿರುಗಾಳಿಗೇ ಹೂವು ಬಲಿಯಾಯಿತೇ ಉರಿಬಿಸಿಲಲೀ ಬೆಂದು ಮೈ ಬಾಡಿತೇ 
ಉರಳಾಡಿ ಮಣ್ಣಲ್ಲಿ ಧೂಳಾಯಾಯಿತೇ... ಕಟುಕನ ಕಾಲಲ್ಲಿ ಖತವಾಯಿತೇ 
ಹೊಸ ಬಾಳಿನ ಹೊಸ ರಾಗವೂ ಶೃತಿ ಸೇರದೇ ವ್ಯಥೇ ತಂದಿತೇ 
ಪ್ರೀತಿ ಅನುರಾಗ ಚಿತೆಯೇರಿತೇ 
ಕಣ್ಣ ಕೊಟ್ಟು ನೋಡೆಂದೂ ನುಡಿದವನೇ ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದೂ ಕಣ್ಣೀರೇ ಜೀವನಾ.... ನೋವೇ ಬಾಳೆಲ್ಲಾ ಅತೀ ದಾರುಣ...
ಕಣ್ಣ ಕೊಟ್ಟು ನೋಡೆಂದೂ ನುಡಿದವನೇ ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ

ಸಿಹಿ ಜೇನಲಿ ವಿಷ ಕಲೆತಾಯಿತು ಕೆನೆ ಹಾಲಲಿ ಹುಳಿ ಬೆರೆತಾಯಿತು 
ಆಸೆಯ ಕನ್ನಡಿ ಕೈ ಜಾರಿತೂ... ಕ್ಷಣದಲಿ ಒಡೆಯುತ ಚೂರಾಯಿತು  
ವಿಧಿಯಾಟಕೇ .. ತಲೆ ಬಾಗಿತೂ ಬರೀ ಶೋಕವೇ ಗತಿಯಾಯಿತು
ಬೆಂದು ಮನ ನೊಂದು ಸಾಕಾಯಿತು 
ಕಣ್ಣ ಕೊಟ್ಟು ನೋಡೆಂದೂ ನುಡಿದವನೇ ಮುಳ್ಳಿನಿಂದ ಚುಚ್ಚಿದಾ ಕಣ್ಣನ್ನೇ
ಇನ್ನೆಂದೂ ಕಣ್ಣೀರೇ ಜೀವನಾ.... ನೋವೇ ಬಾಳೆಲ್ಲಾ ಅತೀ ದಾರುಣ...
ಕಣ್ಣ ಕೊಟ್ಟು ನೋಡೆಂದೂ ನುಡಿದವನೇ ಮುಳ್ಳಿನಿಂದ ಚುಚ್ಚಿದಾ.....  ಕಣ್ಣನ್ನೇ
-------------------------------------------------------------------------------------------------------------------------

ಪ್ರೇಮ ಪಲ್ಲವಿ (1981) - ನೋಡುತ ನೋಡುತ ನಿನ್ನಂದ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು:  ಎಸ್.ಜಾನಕಿ

ನೋಡುತ ನೋಡುತ ನಿನ್ನಂದ ಕಾಣುತ ಕಾಣುತ ಕಣ್ಣಂದ ಮನದಲಿ ಆನಂದ
ಆಸೆಯ ಅಲೆಗಳು ಹಾಡಲೂ ಎದೆಯೊಳು ಹಾಡುತಾ ನಾ ಬಂದೇ.. ಹೊಸತನ ನೀ ತಂದೇ
ನೋಡುತ ನೋಡುತ ನಿನ್ನಂದ ಕಾಣುತ ಕಾಣುತ ಕಣ್ಣಂದ ಮನದಲಿ ಆನಂದ ಹೊಂದಿದೆ ನಿನ್ನಿಂದಾ

ಬಾನಲ್ಲಿ ಭಾಸ್ಕರನೂ ಪಯಣ ಮುಗಿಸಿ ಮಳುಗಿದಾಗ
ಮುಗಿಲಿಂದ ಚಂದಿರನು ಮೋಡ ಸರಿಸಿ ಇಣುಕಿದಾಗ
ತಂಗಾಳಿ ಹಿತವಾಗಿ ಬೀಸಿ ಸೋಕಿ ಓಡಿದಾಗ
ಏಕಾಂತ ನಮಗಾಗಿ ಹರಿಸಿ ಬಯಸಿ ಕೂಗಿದಾಗ
ತನುವ ಸುಡುವ ವಿರಹ ಏಕೇ..  ಇರುಳ ಮುಗಿವ ಮುನ್ನ ಬಳಿಗೆ ಬಾ
ಹ್ಹಾ..ಹ ಹ ಹ ನೋಡುತ ನೋಡುತ ನಿನ್ನಂದ ಕಾಣುತ ಕಾಣುತ ಕಣ್ಣಂದ ಮನದಲಿ ಆನಂದ ಹೊಂದಿದೆ ನಿನ್ನಿಂದಾ

ಪಪಪ ಪಪಪಬಪ ತರಪಪಪಪಾ ಲಲಲಲಾಲಾ ಅಹ್ಹಹ್ಹಾ ಆಹ್ಹಾ 
ಈ ಜೀವಾ ನಿನಗಾಗಿ ಒಲಿದು ನಲಿದು ಬಳಿಗೆ ಬಾರೋ 
ಸಂಗಾತಿ ನೀನಾಗಿ ಸರಸ ಬೆರೆಸಿ ಒಲವ ತೋರೋ 
ಬಿಡು ಚಿಂತೇ ಲತೆಯಂತೇ ತನುವ ಬಳಸಿ ಕುಣಿವೇ ನಾನೂ 
ಎಂದೆಂದೂ ಜೊತೆಯಾಗಿ ಹೀತವಾ ಸುಖವಾ ಪಡೆವೇ ನೀನೂ.. 
ನಿನಗೂ ನನಗೂ ವಿರಸವೇನೂ ವಿರಸ ಮರೆತು ನಗುತ ಸನಿಹ ಬಾರೋ... 
ಓಹೋಹೊಹೋ ... 
ನೋಡುತ ನೋಡುತ ನಿನ್ನಂದ ಕಾಣುತ ಕಾಣುತ ಕಣ್ಣಂದ ಮನದಲಿ ಆನಂದ
ಆಸೆಯ ಅಲೆಗಳು ಹಾಡಲೂ ಎದೆಯೊಳು ಹಾಡುತಾ ನಾ ಬಂದೇ.. ಹೊಸತನ ನೀ ತಂದೇ
ನೋಡುತ ನೋಡುತ ನಿನ್ನಂದ ಕಾಣುತ ಕಾಣುತ ಕಣ್ಣಂದ ಮನದಲಿ ಆನಂದ ಹೊಂದಿದೆ ನಿನ್ನಿಂದಾ .....
-------------------------------------------------------------------------------------------------------------------------

No comments:

Post a Comment