431. ಮೊದಲ ತೇದಿ (1955)



ಮೊದಲ ತೇದಿ ಚಲನಚಿತ್ರದ ಹಾಡುಗಳು 
  1. ಮೊದಲ ತೇದಿ ಇಂದು ಮೊದಲ ತೇದಿ
  2. ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ
  3.  ಸಂತೋಷವು ಎಲ್ಲೆಡೆ ತುಂಬಿರುತ್ತದೆ
  4. ನನಗೆ ಸ್ವಲ್ಪ ಆಟಿಕೆ ಬೇಕು.
  5. ನೀವು ಕಷ್ಟಪಡುತ್ತಿರುವಾಗ ನಗು
  6. ನೀವು ಅದನ್ನು ಏಕೆ ರಚಿಸಿದ್ದೀರಿ?
  7. ಎಲ್ಲರಿಗೂ ನಮಸ್ಕಾರ, ಪ್ರವಾಸಕ್ಕೆ ಹೋಗಿ
ಮೊದಲ ತೇದಿ (1955) - ಮೊದಲ ತೇದಿ ಇಂದು
ಚಿತ್ರಗೀತೆ: ಚಿ.ಸದಾಶಿವಯ್ಯ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಟಿ.ವಿ.ರತ್ನಂ

ಹೆಣ್ಣು : ಅರಳಿದ ಮನ ಕುಣಿವ ತನು ತಣಿವನ ತೇದಿ...
          ಮರಳಿಯು ಧಣವು ಮಣಿದು ಬರುವ ತೇದಿ ಮೊದಲ ತೇದಿ...
          ಮೊದಲ ತೇದಿ ಇಂದು ಮೊದಲ ತೇದಿ
          ಮೊದಲ ತೇದಿ ಇಂದು ಮೊದಲ ತೇದಿ
         ನಾಡಿನ ಜನವೆಲ್ಲ ಮುದದಿಂದ ಎದುರು ನೋಡುವ ತೇದಿ
         ಮೊದಲ ತೇದಿ ಇಂದು ಮೊದಲ ತೇದಿ

ಸಂಬಳ ಬಹುದೆಂದು ನಂಬಿದ ಶ್ರಮಜೀವಿ... .ಆಆಆ..
ಸಂಬಳ ಬಹುದೆಂದು ನಂಬಿದ ಶ್ರಮಜೀವಿ
ಕ್ಷಣದ ಮರವಂಥ ಮೊದಲ ತೇದಿ
ಹಣವು ಹೋಗುವುದೆಂದು ಎಣಿಸಿರ್ಪ ಯಜಮಾನ
ಹಣವು ಹೋಗುವುದೆಂದು ಎಣಿಸಿರ್ಪ ಯಜಮಾನ
ಹೆಣಗಾಡಿ ಕೊರಗುವುದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ

ಕಾಸಿಗೆ ಕಾಸು ಬಡ್ಡಿ ಹೇಸದೇ ಸುಲಿವಂಥ ಆಸೆಗಾರ ನೀಚನಿಗು ಮೊದಲ ತೇದಿ
ಕಾಸಿಗೆ ಕಾಸು ಬಡ್ಡಿ ಹೇಸದೇ ಸುಲಿವಂಥ ಆಸೆಗಾರ ನೀಚನಿಗು ಮೊದಲ ತೇದಿ
ಸೇರೇ ನೊರೆ ಹಾಲಿನಲಿ ಸೇರನೀರನು ಬೆರೆಸಿ ಭಾರಿ ಮೋಸಗೈಯವರೀಗೇ ಮೊದಲ್ ತೇದಿ
ಮೊದಲ ತೇದಿ ಇಂದು ಮೊದಲ ತೇದಿ
ಸಿನಿಮಾ ನೋಡಬೇಕು ಹಲೋ ಮೈ ಡಿಯರ್ ಬೇಗ ಬಂದು ಸೇರಬೇಕು
ಸಿನಿಮಾ ನೋಡಬೇಕು ಆಫೀಸಗೇದಕು  ಬೇಗ ಬಂದು ಸೇರಬೇಕು 
ಎಂದು ಗಂಡನ ಕಿವಿಯಲಿ ಸವಿನುಡಿಗಳನು
ಹೆಂಡತಿ ಉಸುರುವ ಕಾರಣವಿಂದು
ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ

ಜೇಬುಗಳ್ಳನಿಹನೆಚ್ಚರಿಕೆ ಎಚ್ಚರಿಕೆ  ಎಚ್ಚರಿಕೆ
ಜೇಬುಗಳ್ಳನಿಹನೆಚ್ಚರಿಕೆ ಎಚ್ಚರಿಕೆ ಎಚ್ಚರಿಕೆ 
ನೋಡಿ ಹಿಡಿಯಲಾಗುವುದಿಲ್ಲ  ಮೋಡಿಯ ಮಾಟವ ಇವಬಲ್ಲ ಕಾಯುತಲಿಹನು..
ಕಾಯುತಲಿಹನು ಸಂಬಳತರುವಡೇ ಗಮನವಿರಲಿ ಇದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ
ಮೊದಲ ತೇದಿ ಇಂದು ಮೊದಲ ತೇದಿ
-----------------------------------------------------------------------------------------------------------------------

ಮೊದಲ ತೇದಿ (1955) - ಒಂದರಿಂದ ಇಪ್ಪತ್ತರವರೆಗು
ಚಿತ್ರಗೀತೆ : ಚಿ.ಸದಾಶಿವಯ್ಯ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಎಂ.ಮಾಧವರಾವ್ ( ಎನ್.ಎಸ್.ಕೃಷ್ಣನ್)


ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ
ತೇದಿ ಒಂದರಿಂದ ಸಂಬಳ ತೇದಿ 
ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ
ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ
ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ ಭಂಡಾಟ ಭಂಡಾಟ
ಸಂಬಳ ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ

ದುಡಿತ ಕೆಲಸಕೇ ಫಲವು ಪಡೆವರೂ ಒಂದಕೇ  ತೇದಿ ಒಂದಕೇ  
ಪಡುಬಾರದ ಪಾಡನು ಪಡುವರೂ  ಇಪ್ಪತ್ತೊಂದಕೇ .. ಇಪ್ಪತ್ತೊಂದಕೇ 
ಮೊದಲು ಮಾಡಿದ ಸಾಲ ತೀರಿಸುವರೊಂದಕೇ ತೇದಿ ಒಂದಕೇ   
ಮತ್ತೇ ಚಿಲ್ಲರೇ ಕಾಸಿಗೇ ಹಲ್ಲ ಹಲ್ಲ ಕಿರಿಯುತ ಎಲ್ಲರ ಬೇಡುವರಿಪ್ಪತ್ತೊಂದಕೇ 
ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ

ತಿರುಪತಿ ತಿಮ್ಮಪ್ಪನೀಗೂ  ಘಾಟಿ ಸುಬ್ಬಣ್ಣನೀಗೂ  ಹರಕೆ ಕಾಸ ಕೂಡಿಸುವರು ತೇದಿ ಒಂದಕೆ
ತಿರುಪತಿ ತಿಮ್ಮಪ್ಪನೀಗೂ  ಘಾಟಿ ಸುಬ್ಬಣ್ಣನೀಗೂ  ಹರಕೆ ಕಾಸ ಕೂಡಿಸುವರು ತೇದಿ ಒಂದಕೆ
ಭಕುತಿಯಿಂದ ಕೂಡಿಸಿಟ್ಟ ಹುಂಡಿಯ ಕಿರುಗಂಜಿಯ ಕೊಂಚ
ಭಕುತಿಯಿಂದ ಕೂಡಿಸಿಟ್ಟ ಹುಂಡಿಯ ಕಿರುಗಂಜಿಯ ಕೊಂಚ ಅಗಲಿಸುತ್ತ ಆಡಿಸುವರು ಇಪ್ಪತ್ತೊಂದಕೆ
ತಿರುಪತಿ ತಿಮ್ಮಪ್ಪನೀಗೂ  ಘಾಟಿ ಸುಬ್ಬಣ್ಣನೀಗೂ  ಹರಕೆ ಕಾಸ ಕೂಡಿಸುವರು ತೇದಿ ಒಂದಕೆ

ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ ಟಿಕೆಟ್ ಸಿಕ್ಕದು ಒಂದಕೆ
ಥೇಟರ್ ಖಾಲಿ ಹೊರಗಡೆ ಗೇಲಿ ತೇದಿ ಇಪ್ಪತ್ತೊಂದಕೆ
ಹೋಟೆಲ್ ಅಂಗಡಿ ಬಾಟಲ್ ಮಳಿಗೆಗೆ ತುಳುಕಾಡುವುದೂ ಒಂದಕೇ ... 
ಮೂಟೆಗಟ್ಟಿಗಲ್ಲವ ಮುಚ್ಚಿಟ್ಟು ತೂಕಡಿಸುವರೂ ಇಪ್ಪತ್ತೊಂದಕೇ 
ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ

ಗಂಡನು ಹೆಂಡತಿಯೂ ಹಿಂಡೂ ಮಕ್ಕಳ ಕೂಡಿ ಕುಣಿದಾಡಿ ನಲಿಯವರೂ ಒಂದಕೇ ತೇದಿ ಒಂದಕೇ   
ಅವರ್ ಕೂಗಾಡಿ ಬೈದಾಡಿ ಕೈ ಮಾಡಿ ಹೊಡೆದಾಡಿ ಸಿಟ್ಟಾಗುವರೂ ಇಪ್ಪತ್ತೊಂದಕೆ
ಅವರ್ ಕಿತ್ತಾಡುವರೂ ಇಪ್ಪತ್ತೊಂದಕೇ 
ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ.. 
ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ
ಬಳಲಿ ನಡೆದೂ ಬರುವರೂ ಇಪ್ಪತ್ತೊಂದಕೆ
ಗೆಳೆಯರುಗಳ ಕೂಟವೆಲ್ಲ ಒಂದಕೇ .. ಬೀದಿ ನಾಯಿ ಸಹ ಮುಟ್ಟದದು ಇಪ್ಪತ್ತೊಂದಕೆ
ಉಂಡಾಟವೇ ತೇದಿ ಒಂದಕೆ ಖಾಲಿ ಭಂಡಾಟವೇ ಇಪ್ಪತ್ತೊಂದಕೆ
ಉಂಡಾಟವೇ ತೇದಿ ಒಂದಕೆ ಖಾಲಿ ಭಂಡಾಟವೇ ಇಪ್ಪತ್ತೊಂದಕೆ
ತೇದಿ ಒಂದರಿಂದ ಸಂಬಳ ತೇದಿ 
ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ
ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ
ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ ಭಂಡಾಟ ಭಂಡಾಟ
ಸಂಬಳ ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ
--------------------------------------------------------------------------------------------------------------------------
ಮೊದಲ ತೇದಿ ಚಿತ್ರದ ರೀಮೇಕ್  ಆಗಿರುವ ತಮಿಳು ಚಿತ್ರದ ಹಾಡುಗಳು ಈ ಕೆಳಗಿನಂತಿದೆ. ದಯವಿಟ್ಟು ಇದನ್ನು ಆಧಾವಾಗಿಟ್ಟು ಕೊಂಡು ಕನ್ನಡದ ಮೊದಲ ತೇದಿಯ ಉಳಿದ ಹಾಡುಗಳ ನೆನಪು ಬಂದರೆ ಅಥವಾ ತಮಿಳು ಬಾಷೆ ತಮಗೆ ಗೊತ್ತಿದ್ದರೆ ಇಲ್ಲಿರುವ   ಹಾಡುಗಳನ್ನು ಕನ್ನಡದಲ್ಲಿ ಭಾಷಾಂತರ ಮಾಡಲು ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತೇನೆ.
No.SongSingersLyricsLength (m:ss)
1"Onnilayirundhu Irupadhu Varaikkum"N. S. KrishnanUdumalai Narayana Kavi02:52
2"Engum Inbame Pongum"A. P. Komala & K. RaniK. D. Santhanam
3"Aham Kulira... Mudhal Thethi"
(Title song)
T. V. Rathnam02:02
4"Ellorum Kelunga Ullasa Payanam"A. P. Komala03:18
5"Yaen Padaithaai Iraivaa"M. M. Dandapani Desikar
6"Thunbam Varumpodhu Nagaithiduvai"02:45
7"Chinna Chinna Bommai Venum"T. V. Rathnam & K. Rani01:58

No comments:

Post a Comment