434. ಬಿಡುಗಡೆಯ ಬೇಡಿ (1985)


ಬಿಡುಗಡೆಯ ಬೇಡಿ ಚಿತ್ರದ ಹಾಡುಗಳು 
  1. ನಗುವ ಹೂವೆಲ್ಲವೂ ಒಲಿದ ಹಾಡಾಯಿತು 
  2. ಮನಸುಗಳ ಸವಿ ಮಿಲನ ಮಿಡಿದ ಸ್ಪಂದನ 
  3. ಒಲವಿನ ಸರಿಗಮ ರಾಗ ಹೃದಯವು ಬೆರೆತಿರುವಾಗ 
  4. ಏನೋ ಹೊಸ ಸಂತೋಷದೇ ಏಕೋ ಮನ ತೂಗಾಡಿದೇ 
ಬಿಡುಗಡೆಯ ಬೇಡಿ(೧೯೮೫) - ನಗುವ ಹೂವೆಲ್ಲವು ಒಲಿದ ಹಾಡಾಯಿತು
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ


ನಗುವ ಹೂವೆಲ್ಲವೂ ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು
ಚೆಲುವೆಲ್ಲ ಕಣ್ಣಲ್ಲೇ ತುಂಬಿತು ಕಣ್ ತುಂಬಿ ಮನದಲ್ಲಿ ನಿಂತಿತು
ಮನತುಂಬಿ ನಿನ್ನಲ್ಲೇ ಸೇರಿತು ನಿನ್ನ ಸೇರಿ ಸೆರೆಯಾಯಿತು
ನಗುವ ಹೂವೆಲ್ಲವೂ ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು
ಚೆಲುವೆಲ್ಲ ಕಣ್ಣಲ್ಲೇ ತುಂಬಿತು ಕಣ್ ತುಂಬಿ ಮನದಲ್ಲಿ ನಿಂತಿತು
ಮನತುಂಬಿ ನಿನ್ನಲ್ಲೇ ಸೇರಿತು ನಿನ್ನ ಸೇರಿ ಸೆರೆಯಾಯಿತು
ನಗುವ ಹೂವೆಲ್ಲವೂ ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು

(ಆಆಆ... ಆಆಆ... ಆಆಆ... ಆಆಆ... )
ನೀನಾಡೊ ಪ್ರತಿಮಾತು ಸವಿಯಾದ ಗೀತೆ
ಶೃಂಗಾರ ರಸಕಾವ್ಯ ನಿನ್ನಿಂದ ಕಲಿತೆ
(ಆಆಆ... ಆಆಆ... ಆಆಆ... ಆಆಆ... )
ಬಳುಕಾಡಿ ನಡೆದಾಗ ಹೊಸ ತಾಳವಂತೆ
ಅದ ಕಂಡು ನಾ ಸೋತು ನನ್ನನ್ನೇ ಮರೆತೆ
ಹೊಸರಾಗ ಹೊಸ ಭಾವ ಹೊಸ ಜೀವ ನೀನೇ..ನೀನೇ..  ನೀನೇ.. ನೀನೇ..
ರಸಶಿಲ್ಪಿ ಕಡೆದಂಥ ಶಿಲೆಯಲ್ಲೂ ನೀನೇ...
ಕಡಲಲ್ಲಿ ಬಂದಥ ಅಲೆಯಲ್ಲೂ ನೀನೇ..
ಎಲ್ಲೆಲ್ಲೂ ನಾ ಕಂಡೆ ಪ್ರಿಯೆ ನಿನ್ನನೇ...
ಸೃಷ್ಠಿ ಸೊಬಗೆಲ್ಲವು ಸೊಬಗ ನಗುವೆಲ್ಲವೂ
ನಗುವ ಹೂವೆಲ್ಲವೂ ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು
ಚೆಲುವೆಲ್ಲ ಕಣ್ಣಲ್ಲೇ ತುಂಬಿತು ಕಣ್ ತುಂಬಿ ಮನದಲ್ಲಿ ನಿಂತಿತು
ಮನತುಂಬಿ ನಿನ್ನಲ್ಲೇ ಸೇರಿತು ನಿನ್ನ ಸೇರಿ ಸೆರೆಯಾಯಿತು
ನಗುವ ಹೂವೆಲ್ಲವೂ ಒಲಿದ ಹಾಡಾಯಿತು
ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು

ಉಸಿರಲ್ಲಿ ಉಸಿರಾಗಿ ನೀ ಬೆರೆತೆ ಆಗ
ನೀರಲ್ಲಿ ಬರೆದಂಥ ಕಥೆಯಾದೆ ಈಗ
ನೆನಪೆಲ್ಲ ಮುಳುವಾಗಿ ಕೊಲುವಾಗ ನನ್ನ
ಹೂವಂಥ ಮನಸೇಕೆ ಕಲ್ಲಾಯ್ತು ಚಿನ್ನ
ನಗೆದೀಪ ಇರುವಲ್ಲಿ ಇರುಳನ್ನು ತಂದೆ...
ಸವಿ ಜೇನ ಬದಲಾಗಿ ಕಣ್ಣೀರ ತಂದೆ...
ಅನುರಾಗ ಶೃತಿ ತಪ್ಪಿ ನಾನೀಗ ನೊಂದೆ...
ಸೊಗದಾದ ನನ್ನಾಸೆ ಕನಸಾಗಿದೆ
ಕನಸು ಮುಗಿದಾಯಿತು ಮುಗಿದು ನೋವಾಯಿತು
ನೋವು ನೆಲೆಯಾಯಿತು ನಗುವು ದೂರಾಯಿತು
ನಗುವು ದೂರಾಯಿತು.....
-----------------------------------------------------------------------------------------------------------------------


ಬಿಡುಗಡೆಯ ಬೇಡಿ (1985) - ಮನಸುಗಳ ಸವಿಮಿಲನಾ ಮಿಡಿದಾ ಸ್ಪಂದನ
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ


ಹೆಣ್ಣು : ಆಆಆ...
ಗಂಡು : ಆಆಆಆಅ
           ಮನಸುಗಳ ಸವಿಮಿಲನಾ ಮಿಡಿದಾ ಸ್ಪಂದನಾ
           ಮದುವೇ ಎನ್ನುವಾ ಮಧುರಾ ಬಂಧನಾ
ಹೆಣ್ಣು : ಮಾಂಗಲ್ಯ ಭಾಗ್ಯ ತಂದಾ  ಹೊಸಬಾಳು ಇಂದಿನಿಂದಾ...
          ಮನಸುಗಳ ಸವಿಮಿಲನಾ ಮಿಡಿದಾ ಸ್ಪಂದನಾ
          ಮದುವೇ ಎನ್ನುವಾ ಮಧುರಾ ಬಂಧನಾ

ಗಂಡು : ಬೆರೆತಾಗ ಜೀವ ಅರಿತಾಗ ಮನವ  ಬಾಳೊಂದು ಮಧುರ ಗೀತೇ
            ನಗುವೆಂಬ ವೀಣೆಯು ಮಿಡಿದಾಗ ಸ್ವರ್ಗದಂತೇ
ಹೆಣ್ಣು : ಸಂಸಾರ ಸುಖದ ಸಂಗೀತದಲ್ಲೀ  ಸ್ವರವಾಗಿ ನಾನು ನಿನಗೇ
          ನೀನಿರಲು ಜೊತೆಗೆ ನೆರಳಾಗಿ ನಿನಗೇ  ನಾ ನಡೆವೆ ಕೊನೆಯವರೆಗೇ
ಗಂಡು : ಚಲುವೇ ಇದುವೇ ನಗುವೇ...
ಹೆಣ್ಣು :  ಮನಸುಗಳ ಸವಿಮಿಲನಾ ಮಿಡಿದಾ ಸ್ಪಂದನಾ
          ಮದುವೇ ಎನ್ನುವಾ ಮಧುರಾ ಬಂಧನಾ
ಗಂಡು : ಮಾಂಗಲ್ಯ ಭಾಗ್ಯ ತಂದಾ  ಹೊಸಬಾಳು ಇಂದಿನಿಂದಾ...
            ಮನಸುಗಳ ಸವಿಮಿಲನಾ ಮಿಡಿದಾ ಸ್ಪಂದನಾ
           ಮದುವೇ ಎನ್ನುವಾ ಮಧುರಾ ಬಂಧನಾ

ಗಂಡು : ಆ.....ಆ....ಆ..
ಹೆಣ್ಣು : ರಿ ರಿ ರಿ ಮಮದಾ ನಿದಮ...ಆಹಾ...ಆ..ಆ ಆ
ಗಂಡು : ರೀ ಮಾದ ನಿದಾಮ ಗರೀರಿ...ಆ .(.ಆ.).ಆ..(ಆ )
ಹೆಣ್ಣು : ಅನುರಾಗ ತಂದ ಆನಂದ ಇಂದು ಅಲೆಯಾಗಿ ಹೊಮ್ಮಿ ಬರಲೀ
          ಬಾಳೆಂಬ ದೋಣಿಯೂ ಅಲೆಯಲ್ಲಿ ತೇಲುತಿರಲೀ
ಗಂಡು : ಹೂವಾದರೇನು ಮುಳ್ಳಾದರೇನು  ಮುಂದಿರುವ ಬಾಳ ಹಾದೀ
           ಎಂದೆಂದು ನನ್ನ ಕಣ್ಣಂತೆ ಚಿನ್ನಾ ಕಾಪಾಡಿಕೊಳುವೆ ನಿನ್ನಾ
ಹೆಣ್ಣು :  ನಗುವಾ ನಲಿವಾ ಮೆರೆವಾ...
ಗಂಡು : ಮನಸುಗಳ ಸವಿಮಿಲನಾ ಮಿಡಿದಾ ಸ್ಪಂದನಾ
           ಮದುವೇ ಎನ್ನುವಾ ಮಧುರಾ ಬಂಧನಾ
ಹೆಣ್ಣು :  ಮಾಂಗಲ್ಯ ಭಾಗ್ಯ ತಂದಾ  ಹೊಸಬಾಳು ಇಂದಿನಿಂದಾ...
ಇಬ್ಬರು : ಮನಸುಗಳ ಸವಿಮಿಲನಾ ಮಿಡಿದಾ ಸ್ಪಂದನಾ
          ಮದುವೇ ಎನ್ನುವಾ ಮಧುರಾ ಬಂಧನಾ
--------------------------------------------------------------------------------------------------------------------------

ಬಿಡುಗಡೆಯ ಬೇಡಿ(೧೯೮೫) - ಒಲವಿನ ಸರಿಗಮ ರಾಗ

ಸಾಹಿತ್ಯ : ಚಿ.ಉದಯಶಂಕರ್  ಸಂಗೀತ : ಎಂ.ರಂಗರಾವ್  ಗಾಯನ : ಎಸ್.ಪಿ.ಬಾಲಸುಬ್ರಹ್ನಣ್ಯಂ ಮತ್ತು ಎಸ್.ಜಾನಕಿ


ಎಸ್.ಪಿ.ಬಾ :  ಒಲವಿನ ಸರಿಗಮ ರಾಗ ಹೃದಯವು ಬರೆತಿರುವಾಗ
                    ಅನುರಾಗ ನಗುವಾಗ  ಮನೆ ಆಗ ಸುಖ ಸ್ವರ್ಗ
ಎಸ್.ಜಾನಕಿ:  ಒಲವಿನ ಸರಿಗಮ ರಾಗ  ಹೃದಯವು ಬರೆತಿರುವಾಗ
                    ಅನುರಾಗ ನಗುವಾಗ  ಮನೆ ಆಗ ಸುಖ ಸ್ವರ್ಗ
ಎಸ್.ಪಿ.ಬಾ :  ಒಲವಿನ ಸರಿಗಮ ರಾಗ ಹೃದಯವು ಬರೆತಿರುವಾಗ

ಎಸ್.ಜಾನಕಿ:  ಆ..ಆ ...ಆ ....ಆ......ನಂತ ನಂತ ನಂತ ತನನ ತನನ ತನನ
ಎಸ್.ಪಿ.ಬಾ : ದಿನವು ಹೊಸ ಸೊಗಸು  ಸುಖದ ಹೊಸ ಕನಸು ನಮ್ಮ ಬಾಳಲಿ
                   ನಗೆಯೆ ಹೊಸ ಬೆಳಕು ನಲಿವೆ ಹೊಸ ಬದುಕು  ಬಾಳ ಗೀತೆಯಲ್ಲಿ
ಎಸ್.ಜಾನಕಿ: ಚಿಗುರ ಹೊಸ ಹಸಿರು ಶುಭದ ಹೊಸ ತಳಿರು ಪ್ರೀತಿ ಬನದಲಿ
                   ಜಗವ ಮರೆತಿಹೆನು  ಮರೆತು ಬೆರೆತಿಹನು ನಿನ್ನ ಸನಿಹದಲ್ಲಿ
ಎಸ್.ಪಿ.ಬಾ:  ಒಲವಿನ ಸರಿಗಮ ರಾಗ ಹೃದಯವು ಬರೆತಿರುವಾಗ
ಎಸ್.ಜಾನಕಿ:  ಅನುರಾಗ ನಗುವಾಗ ಮನೆ ಆಗ ಸುಖ ಸ್ವರ್ಗ
ಇಬ್ಬರೂ: ಒಲವಿನ ಸರಿಗಮ ರಾಗ  ಹೃದಯವು ಬರೆತಿರುವಾಗ

ಎಸ್.ಜಾನಕಿ:  ಚೈತ್ರ ಕರೆದಿರಲು ಚೆಲವು ಮೆರೆದಿರಲು ಆಸೆ ಎದೆಯಲಿ
                    ವರುಷ ನಿಮಿಷದಲು ಹರುಷ ಹರಿದಿರಲು ನಿನ್ನ ಸ್ನೇಹದಲಿ
ಎಸ್.ಪಿ.ಬಾ : ಹೂವು ಪರಿಮಳವ ಚೆಲ್ಲಿ ಸೆಳೆಯುತಿದೆ ನಿನ್ನ ಮುಡಿಯಲಿ
                   ಸಂಜೆ ನಸುಗೆಂಪು  ಮಿಂಚಿ ಮೆರೆಯುತಿದೆ ನಿನ್ನ ಕೆನೆಯಲ್ಲಿ
ಎಸ್.ಜಾನಕಿ: ಒಲವಿನ ಸರಿಗಮ ರಾಗ ಹೃದಯವು ಬರೆತಿರುವಾಗ
ಎಸ್.ಪಿ.ಬಾ :  ಅನುರಾಗ ನಗುವಾಗ  ಮನೆ ಆಗ ಸುಖ ಸ್ವರ್ಗ
ಇಬ್ಬರೂ: ಒಲವಿನ ಸರಿಗಮ ರಾಗ  ಹೃದಯವು ಬರೆತಿರುವಾಗ
-------------------------------------------------------------------------------------------------------------------------

ಬಿಡುಗಡೆಯ ಬೇಡಿ (1985) - ಏನೋ ಹೊಸ ಸಂತೋಷದೆ 

ಸಾಹಿತ್ಯ: ಆರ್.ಎನ್.ಜಯಗೋಪಾಲ್  ಸಂಗೀತ: ರಾಜನ್-ನಾಗೇಂದ್ರ  ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ


ಹೆಣ್ಣು : ಏನೋ ಹೊಸ ಸಂತೋಷದೆ  ಏಕೋ ಮನ ತೂಗಾಡಿದೆ
          ಯಾವುದೊ ಸ್ನೇಹ, ಯಾವುದೊ ಮೋಹ
          ಅರಳಿ ಹೂವಾಗಿದೆ, ಆ ಹೂವು ಹಾಡಾಗಿದೆ
ಗಂಡು : ಏನೋ ಹೊಸ ಸಂತೋಷದೆ  ಏಕೋ ಮನ ತೂಗಾಡಿದೆ
            ಯಾವುದೊ ಸ್ನೇಹ, ಯಾವುದೊ ಮೋಹ
            ಅರಳಿ ಹೂವಾಗಿದೆ, ಆ ಹೂವು ಹಾಡಾಗಿದೆ
ಹೆಣ್ಣು : ಏನೋ ಹೊಸ ಸಂತೋಷದೆ ಏಕೋ ಮನ ತೂಗಾಡಿದೆ

ಹೆಣ್ಣು : ಹೊಸ ಭಾವ, ಹೊಸ ಜೀವ, ಇಂದು ನಮ್ಮಲೀ
          ಮನಸೂ ಮನಸೂ ಬೆರೆತಾ ಸುಖದಲ್ಲೀ
ಗಂಡು : ಶೃತಿ ರಾಗ, ಕಲೆತಂತೆ, ನಮ್ಮಾ ಸಂಗಮ
           ಸ್ವರದ ಲಯದ ಮಿಲನದಾ ಸಂಗಮ
ಹೆಣ್ಣು : ಹೃದಯಾ ಹಾಡಿದೆ,
ಗಂಡು : ನಲಿವೂ ಮೂಡಿದೆ,
ಹೆಣ್ಣು : ಜಗವೇ ಆಡಿದೆ.. ಓಓಓ
ಗಂಡು : ಏನೋ ಹೊಸ ಸಂತೋಷದೆ  ಏಕೋ ಮನ ತೂಗಾಡಿದೆ
ಹೆಣ್ಣು : ಯಾವುದೊ ಸ್ನೇಹ, ಯಾವುದೊ ಮೋಹ
          ಅರಳಿ ಹೂವಾಗಿದೆ, ಆ ಹೂವು ಹಾಡಾಗಿದೆ
ಗಂಡು : ಏನೋ ಹೊಸ ಸಂತೋಷದೆ  ಏಕೋ ಮನ ತೂಗಾಡಿದೆ

ಗಂಡು : ಬಾನ ಹೆಣ್ಣು ರಂಗನು ಚೆಲ್ಲಿ ನಿಂತಳು ನೋಡಲ್ಲಿ
           ನಾಚೀ ನಿನ್ನ ಹಾಗೆ, ರವಿಯ ಸ್ಪರ್ಶದಿಂದ
ಹೆಣ್ಣು : ಮೋಡದಾಗೆ ಜೋಡಿ ಹಕ್ಕಿ ಹಾಡಿದೆ ಕೇಳಲ್ಲಿ
          ನನ್ನ ನಿನ್ನ ಇಂದು, ಹರಸಿ ಪ್ರೇಮದಿಂದ
ಗಂಡು : ನಡೆವಾ ಜೊತೆಗೆ,
ಹೆಣ್ಣು : ಆಆಆ  ನಲಿವಾ ಸುಖದೆ (ಆಆಆ)
ಇಬ್ಬರು : ನಡೆವಾ ಜೊತೆಗೆ, ನಲಿವಾ ಸುಖದೆ
             ಕೂಡೀ ಬಾಳುವಾ, ತೇಲುವಾ, ಆಡುವಾ
ಹೆಣ್ಣು : ಏನೋ ಹೊಸ ಸಂತೋಷದೆ
ಗಂಡು : ಏಕೋ ಮನ ತೂಗಾಡಿದೆ
ಇಬ್ಬರು : ಯಾವುದೊ ಸ್ನೇಹ, ಯಾವುದೊ ಮೋಹ
             ಅರಳಿ ಹೂವಾಗಿದೆ, ಆ...  ಹೂವು ಹಾಡಾಗಿದೆ
            ಲಾಲಲಲಲಲ ಲಾಲಲಲಲಲ ಲಾಲ ಲಲ್ಲಲ
           ಲಾಲ ಲಲ್ಲಲ ಲಾಲ ಲಲ್ಲಲ ಲಾಲ ಲಲ್ಲಲ
--------------------------------------------------------------------------------------------------------------------------

No comments:

Post a Comment