437. ಮುಂಜಾನೆಯ ಮಂಜು (1993)


ಮುಂಜಾನೆಯ ಮಂಜು ಚಿತ್ರದ ಗೀತೆಗಳು 
  1. ಮನೆ ಮುಂದೆ ಸೀಗೆ ಬೇಲಿ ಬೇಡ 
  2. ಕೋಪಾನ ಮದನ 
  3. ದುಂಬಿ ದುಂಬಿ 
  4. ಮುಂಜಾನೆಯ ಮಂಜು 
  5. ಈ ಜೀವನ ಸರಿಗಮ 
  6. ಈ ಜೀವನ ಸರಿಗಮ (ಹೆಣ್ಣು)
ಮುಂಜಾನೆಯ ಮಂಜು (1993) - ಮನೆ ಮುಂದೆ ಸೀಗೆ ಬೇಲಿ ಬೇಡ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಡಾ.ರಾಜ್‌ಕುಮಾರ್

ಮನೆ ಮುಂದೆ ಸೀಗೆ ಬೇಲಿ ಬೇಡ ಇದ್ರು ಮೇಲೆ ಬಟ್ಟೇನ್ ಹಾಕೋದ್ ಬೇಡ
ವೇದ ಸುಳ್ಳೆ ಆದ್ರು ಗಾದೆ ಸುಳ್ಳೆ ಹೂವೆ ಇದ್ರು ಬೇಲಿ ತುಂಬ ಮುಳ್ಳೆ
ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ ಬೊಂಬೆಗಳ ಕಾಯಕವೆ ಕುಣಿಯುವುದಮ್ಮ
ಮನಸಿನ ಕೈಯೊಳಗೆ ನಾವ್ ಮಾನವರಮ್ಮ ಮಾನವರ ಕಾಯಕವೆ ಮಣಿಯುವುದಮ್ಮ

ಬೇವಿನ್ ಗಿಡಕೆ ಬೆಲ್ಲ ಸುರಿಯೋದ್ ದಂಡ ಗಂಡ ಬಿಟ್ಟ ಹೆಣ್ಣು ಸೆರಗಿನ್ ಕೆಂಡ
ಮನವೆಂಬ ಬನಕೆ ಮದುವೆ ಬೇಲಿಯ ಬಿಗಿದಿರುವುದು ಏಕೆ ಎಂದು ಅರಿತೆಯ
ನಗೊ ಹೆಣ್ಣು ಅಳೊ ಗಂಡು ಒಂದೆ ನಂಬಿ ಮೋಸ ಹೋದ್ರೆ ತಪ್ಪು ನಮ್ದೆ
ಪರನಾರಿಯ ನೋಡದಿರಲು ಗಂಡಸು ಜೊತೆಯಾದಳು ತಾಳಿ ಹೊರುವ ಹೆಂಗಸು
ನಿನ್ನ ಮನೆ ನಿನ್ನ ಪತಿ ಅಂಕೆಯಲಿರಲಿ ಜೀವ ಕೊಡೊ ಗೆಳತಿಯರು ಶಂಕೆಯಲಿರಲಿ
ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ ಬೊಂಬೆಗಳ ಕಾಯಕವೆ ಕುಣಿಯುವುದಮ್ಮ
ಮನಸಿನ ಕೈಯೊಳಗೆ ನಾವ್ ಮಾನವರಮ್ಮ ಮಾನವರ ಕಾಯಕವೆ ಮಣಿಯುವುದಮ್ಮ

ತಲೆ ಬಾಗಲ್ ದಾನ ಕೊಡೋದ್ ಯಾಕೆ ರಾತ್ರಿ ಪೂರ ಜಗ್ಲೀಲ್ ಕಾಯೋದ್ ಯಾಕೆ
ಅತಿ ಪ್ರೀತಿಯ ಮಾಡೊ ಮನಸು ನಿನ್ನದು ಕೆಡಬಹುದು ಎನುವ ಮನಸು ಅವನದು
ಸಲ್ಗೆ ಕೊಟ್ರೆ ನಾಯಿ ಮಡಕೆ ಮುಟ್ತು ಅಯ್ಯೊ ಅಂದ್ರೆ ಶಾಪ ನೆತ್ತಿಗ್ ಏರ್ತು
ನೆಲೆ ಕಾಣದ ಹೆಣ್ಣು ಮನಸು ಅವಳದು ಅಪವಾದವ ಹುಡುಕೊ ಮನಸು ಜನರದು
ಹೇಳಿದರೆ ಕೇಳದಿರೊ ಮಾರನ ಮನಸು ಜಾರಿದರೆ ಉಳಿಯುವುದೆ ಪ್ರೇಮದ ಕನಸು
ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ ಬೊಂಬೆಗಳ ಕಾಯಕವೆ ಕುಣಿಯುವುದಮ್ಮ
ಮನಸಿನ ಕೈಯೊಳಗೆ ನಾವ್ ಮಾನವರಮ್ಮ ಮಾನವರ ಕಾಯಕವೆ ಮಣಿಯುವುದಮ್ಮ
--------------------------------------------------------------------------------------------------------------------

ಮುಂಜಾನೆಯ ಮಂಜು (1993) - ಕೋಪನ ಮದನ ತಾಪನ ಮದನ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಚಿತ್ರಾ 

ಕೋಪನ ಮದನ ತಾಪನ ಮದನ
ಕೋಪನ ಮದನ ತಾಪನ ಮದನ ಬಿಡು ಬಿಡು ನಿನ್ನ ಬಿಂಕಾನ
ಹಿಡುಕೊ ಭಾರ ಸೇಳ್ಕೊ ಸುಖ ಪಡ್ಕೊ ರೋಷಾನ ಮದನ ವೇಷನಾ ಮದನ
ಸತಿ ಪತಿ ಸರಸಕೆ ಸುಂಕಾನಾ ಹಿಡುಕೊ ಭಾರ ಸೇಳ್ಕೊ ಸುಖ ಪಡ್ಕೊ
ಕಾಲಿಂದ ತಲೆಗೆ ಕಾವೇರುವ ಕಲೆಗೆ ಸರ ಸರ ಸರ ಸರ ಬಾ... 
ಕೋಪನ ಮದನ ತಾಪನ ಮದನ ಬಿಡು ಬಿಡು ನಿನ್ನ ಬಿಂಕಾನ
ಹಿಡುಕೊ ಭಾರ ಸೇಳ್ಕೊ ಸುಖ ಪಡ್ಕೊ 

ಮಲಗದು ಮನಸಿದು ಮುನಿದಿರಲು ಕಡಲದು ವಯಸಿದು ಹಸಿದಿರಲು
ಹಿಡಿಸದು ಹುಣ್ಣಿಮೆ ಉರಿ ಇರುಳು ಸುಖಿಸಿದ ಒಂಟಿ ತನುವಿರಲು
ಜೋತೆ ಇರಬೇಕು ನಡು ಇರುಳು ಜೇನಿಲ್ಲದ ಗೂಡೇ ನೀನಿಲ್ಲದ ಹಾಡೇ
ಸರ...  ಸರ...  ಸರ...  ಸರ...  ಬಾ
ಬಿಲ್ಲು ಹಿಡುಕೊ ಹೂಬಾಣ ಎಳಕೊ ರತಿ ಎದೆ ಬೆಸೆದು ಮನ ಸೆಳೇಕೋ
ಹಿಡುಕೊ ಭಾರ ಸೆಳೇಕೊ ಸುಖ ಪಡಕೋ
ಕೋಪನ ಮದನ ತಾಪನ ಮದನ ಬಿಡು ಬಿಡು ನಿನ್ನ ಬಿಂಕಾನ
ಹಿಡುಕೊ ಭಾರ ಸೇಳ್ಕೊ ಸುಖ ಪಡ್ಕೊ

ಹಾರಾಡುವೆ ಮೈಯಿಗೆ ಹೂವುಗಳಾ ಬಡಿಸುವೆ ಬಾಯಿಗೆ ರಸಗವಳ
ನುಡಿಸುವೆ ನುಡಿಯಾದ ತಂತಿಗಳ ಬರೆಸುವೆ ಪ್ರೇಮದ ಪಂಕ್ತಿಗಳ
ಮಲಗುವ ತನಕವೇ ನಮ್ಮ ಜಗಳ ಈ ದಂಪತಿ ವಿರಸ ಕೂಡಿಟ್ಟರೆ ಸರಸ
ಸರ..  ಸರ..  ಸರ..  ಸರ...  ಬಾ
ತಿಲ್ಲಾನ ಹಿಡುಕೊ ಗಲ್ಲಾನ ಕಡಿಕೋ ಹುಸಿ ಮುನಿಸಿದು ಮನ ಸೆಳೇಕೋ
ಹಿಡುಕೊ ಭಾರ ಸೆಳೇಕೋ ಸುಖ ಪಡ್ಕೊ
ಕೋಪನ ಮದನ ತಾಪನ ಮದನ ಬಿಡು ಬಿಡು ನಿನ್ನ ಬಿಂಕಾನ
ಹಿಡುಕೊ ಭಾರ ಸೇಳ್ಕೊ ಸುಖ ಪಡ್ಕೊ 
--------------------------------------------------------------------------------------------------------------------------

ಮುಂಜಾನೆಯ ಮಂಜು (1993) - ದುಂಬಿ ದುಂಬಿ ದುಂಬಿ ದುಂಬಿ
ಸಾಹಿತ್ಯ: ಸಂಗೀತ: ಹಂಸಲೇಖ ಹಾಡಿದವರು:ಎಸ್ಪಿಬಿ, ಚಿತ್ರಾ

ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗೋ ದುಂಬಿ ಆಯಿತು ಸಾಯಂಕಾಲ
ಮಲ್ಲೆ ಮಲ್ಲೆ ಮಲ್ಲೆ ಮಲ್ಲೆ ಇಂದು ರಾತ್ರಿ ಇಲ್ಲೇ ನಿಂತರೆ ಅನುಕೂಲ
ಆಗದು ಹೋಯ್ಯ್ ಆಗದು ಹೋಯ್ಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್ಯ್ ಜಾಣನಾಗಿ ಊರು ಸೇರಿಕೋ
ಮಲ್ಲೆ ಮಲ್ಲೆ ಮಲ್ಲೆ ಮಲ್ಲೆ ಇಂದು ರಾತ್ರಿ ಇಲ್ಲೇ ನಿಂತರೆ ಅನುಕೂಲ
ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ ಆಯಿತು ಸಾಯಂಕಾಲ 
ಆಗದು ಹೋಯ್ಯ್ ಆಗದು ಹೋಯ್ಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್ಯ್  ನನ್ನ ಮುತ್ತು ಒತ್ತೇ ಇಟ್ಟುಕೋ...   

ಉರೇಕೆ ದುಂಬಿಗೆ ಸೂರೇಕೆ ದುಂಬಿಗೆ
ಮಲ್ಲಿಗೆ ಮನದುಂಬಿ ಹಾಡೋ ಜಾಗ
ಹಾಡಿನ ಮದ್ಯೆ ಜೇನು ಹೀರೊ ಯೋಗ
ಜಾಣ ಜಾಣ ನೀನು ಹಾಡಿನ ಬಾಣ ಹೂಡುವೆ
ಜೀವ ಜಾರೋವಾಗ ಅರ್ಧ ಪ್ರಾಣ ನೀಡುವೆ
ಅಂಜುವೆ ಏಕೆ ಮಲ್ಲೆ ಕಂಪಿನ ತೋಟದಲಿ
ಉತ್ತಮನಾಗಿ ಓಡಾಡುವೆ ಮಾನವ ಮಲ್ಲೆ ನಾನು
ನಾಚಿಕೆ ಕಾಡದೇನು ಕತ್ತಲಿಗಾಗಿ ನಾ ಬೇಡುವೆ
ಆಗದು ಹೋಯ್ಯ್ ಆಗದು ಹೋಯ್ಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್ಯ್ 
ಕಣ್ಣು ಮುಚ್ಚಿ ಕತ್ತಲೆಂದುಕೋ 
ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗೋ ದುಂಬಿ ಆಯಿತು ಸಾಯಂಕಾಲ
ಮಲ್ಲೆ ಮಲ್ಲೆ ಮಲ್ಲೆ ಮಲ್ಲೆ ಇಂದು ರಾತ್ರಿ ಇಲ್ಲೇ ನಿಂತರೆ ಅನುಕೂಲ

ಬಾ ನನ್ನ ಹತ್ತಿರ ಬಾ ಇನ್ನೂ ಹತ್ತಿರ
ಹತ್ತಿರ ಬಂದ ಮೇಲೆ ಹೆಚ್ಚಬೇಡ
ಮೆಚ್ಚಿನ ರಾಸಲೀಲೆ ನೆಂಚಬೇಡ
ಮಾತು ಮತ್ತು ಮುತ್ತು ಈಗ ಸಾಲ ನೀಡು
ಅಂತರಂಗ ಒಪ್ಪಿದಾಗ ಪ್ರೀತಿ ಮಾಡು
ತನ್ನನೇ ಗಾಳಿಯಂತ ಸಂಜೆಯ ರಂಗಿನಂತ
ದುಂಬಿಯ ಹಾಡಿಗೆ ಸೋಲೇನು
ಮಾಗಿಯ ಕಾಲದಂತ ಮಾವಿನ ಹೂವಿನಂತ
ಹೆಣ್ಣಿನ ಕಂಪು ನಾ ತಾಳೆನು
ಆಗದು ಹೋಯ್ಯ್ ಆಗದು ಹೋಯ್ಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್ಯ್ 
ಹಣ್ಣು ತಿಂದು ಹೆಣ್ಣು ಅಂದುಕೋ 
ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗೋ ದುಂಬಿ ಆಯಿತು ಸಾಯಂಕಾಲ
ಮಲ್ಲೆ ಮಲ್ಲೆ ಮಲ್ಲೆ ಮಲ್ಲೆ ಇಂದು ರಾತ್ರಿ ಇಲ್ಲೇ ನಿಂತರೆ ಅನುಕೂಲ
--------------------------------------------------------------------------------------------------------------------------

ಮುಂಜಾನೆಯ ಮಂಜು (1993) - ಮುಂಜಾನೆಯ ಮಂಜು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು:ಎಸ್ಪಿಬಿ, ಚಿತ್ರಾ

ಕೊ ಕೊ ಕೊ ಕುಕ್ಕು ಕೊ ಕೊ
ಕೊ ಕೊ ಕೊ ಕುಕ್ಕು ಕೊ ಕೊ
ಮುಂಜಾನೆಯ ಮಂಜು
ಮುಂಜಾನೆಯ ಮಂಜು ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ
ಮುಂಜಾನೆಯ ಮಂಜು ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ


ನಗುವ ಕಡಲು ತುಂಬಿದೆ ಲಾಲಾ ಲಾಲಾ ಲಾಲಾ ಲಾ
ಮುಗಿಲಿಗೆ ಅಲೆ ಸೋಕಿದೆ
ಹೆಗಲಿನಗಳ ನವಿಲ ಪಟದ ಗರಿ ಗರಿ ತೆರೆದಾಡಿದೆ
ಉಟ್ಟ ನಡು ಕಟ್ಟಿ ಬಿಗಿ ತೋಟ ಎದೆ ಪಟ್ಟೆ ಬಿಗಿ
ಈ ಹಿಗ್ಗಿನ ಸುಗ್ಗಿ
ಕಣ್ಣು ಕಟೂ ಜಾದು ಪಟ್ಟೋ ಬಳ್ಳಿ ಬಾಲೇ ಬಾಗೋ ಗುಟ್ಟೋ
ಅಮಲೇರಿದೆ ಆಸೆಗೆ
ಈ ಬಲಗಾರನು ಬರ ಸೆಳೆದರೆ ಸಿಹಿ ಮತ್ತು
ಬರಿ ಸುತ್ತೋ ತಲೆ ಸುತ್ತೋ
ಮುಂಜಾನೆಯ ಮಂಜು ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ

ಮನ ವಸಂತವಾಗಿದೆ ಲಲಲ ಲಾಲಾ ಲಾ ಲಾ
ಚಿಗುರಿನ ಸೊಗಡೇರಿದೆ
ಮೀರಿ ಮರಿ ಮೀರಿ ಮರಿ ನರಗಳು ಸ್ವರ ಹಾಡಿದೆ
ಹೆಜ್ಜೆ ಇಟ್ಟ ಕಡೆ ಎಲ್ಲ ಹೂವು ಕಾಯಿ ಹಣ್ಣು ಬೆಲ್ಲಾ
ಈ ಹೆಣ್ಣಿನ ಸನ್ನೆಗೆ
ಮೆಲ್ಲ ಇತ್ತ ಹೆಜ್ಜೆ ಎಲ್ಲ ಘಲ್ಲೋ ಘಲ್ಲೋ ಎನ್ನುತ್ತಲ್ಲಾ
ಈ ಗಂಡಿನ ಹಾಡಿಗೆ
ಈ ಸುಕಮಾರಿಯು ತುಟಿ ತೆರೆದರೆ ಬರಿ ಮುತ್ತೋ
ಈ ಗಂಡಿನ ಹಾಡಿಗೆ
ಈ ಸುಕುಮಾರಿಯು ತುಟಿ ತೆರೆದರೆ ಬರಿ ಮುತ್ತು
ಸುರಿಸುತ್ತೋ ತಲೆ ಸುತ್ತೋ
ಮುಂಜಾನೆಯ ಮಂಜು ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ
ಮುಂಜಾನೆಯ ಮಂಜು ಪರದೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾನಿನ ಬೆಳ್ಳಿ ಮೋಡ 
------------------------------------------------------------------------------------------------------------------------

ಮುಂಜಾನೆಯ ಮಂಜು (1993) - ಜೀವನ ಸರಿಗಮಗಳ ಅಲೆಗಳ ಮೇಲೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು:ಎಸ್ಪಿಬಿ, 

ಲಲ್ಲಲ್ಲ ಲಲ್ಲಲ ಲಲ್ಲ ಲಾ ಲಾ
ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವೂ ಹೊಸದೇ ಸಂದೇಶವಿದೆ
ದಿನವೂ ಹೊಸದೇ ಸಂದೇಶವಿದೆ
ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ 

ಹರಿದಾಡೋ ಮನ ದೋಣಿ ಹರಿದೊಳೆ
ಅವಳು ಅವಳ ಪ್ರೇಮ ಅವಳಿಗೆ
ಸುಳಿದಾಡುವ ಸುಖ ಜಿಂಕೆಗೆ ಯಜಮಾನಿ
ಅವಳು ಅವಳ ಮಾಯ ಅವಳಿಗೆ
ನಗಲು ಕಂಬನಿ ಅಳುವಾಗಲು ಕಂಬನಿ
ಸುಳ್ಳಿಗೂ ನಾಲಿಗೆ ವೇದಾಂತಕು ನಾಲಿಗೆ
ಹಗಲಲ್ಲಿ ಇರುಳಾಗಿ ಕಸದಲ್ಲಿ ರಸವಾಗಿ ಉಳಿಯುವಳವಳು
ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವೂ ಹೊಸದೇ ಸಂದೇಶವಿದೆ
ದಿನವೂ ಹೊಸದೇ ಸಂದೇಶವಿದೆ
ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ 

ಬರಗಾಲದ ಬೆನ್ನಲ್ಲಿಯೇ ಮಳೆಗಾಲ
ಬಿರಿದ ನೆಲಕೆ ಪಸೆಯಾಗಿರುವ
ಅತಿವೃಷ್ಠಿಯ ಅಡಿಯಲ್ಲೇ ಅತಿ ಆಸೆ
ಜಗದ ಬದುಕೇ ಹುಸಿಯಾಗಿಸುವ
ಒಂದೇ ನನ್ನಯ ಪೂರ್ವಾಪರ ಮುಖಗಳು
ಒಂದೇ ಬಾಳು ನಾನ್ ವಿಧ ದೆಸೆಗಳು
ಎದೆಯಲ್ಲಿ ವ್ಯಥೆಯಾಗಿ ವ್ಯಥೆಯಲ್ಲಿ ಕಥೆಯಾಗಿ ಒಲವಾಗಿರುವ
ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ
ದಿನವೂ ಹೊಸದೇ ಸಂದೇಶವಿದೆ
ದಿನವೂ ಹೊಸದೇ ಸಂದೇಶವಿದೆ
ಈ ಜೀವನ ಸರಿಗಮಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೋಲೆ 
--------------------------------------------------------------------------------------------------------------------------

ಮುಂಜಾನೆಯ ಮಂಜು (1993) - ಜೀವನ ಸರಿಗಮಗಳ ಅಲೆಗಳ ಮೇಲೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಚಿತ್ರಾ, ಎಸ್.ಪಿ.ಬಿ. 

ಲಲ್ಲಲ್ಲ ಲಲ್ಲಲ ಲಲ್ಲ ಲಾ ಲಾ ಲಲಲ
ಜೀವನ ಸರಿಗಮಗಳ ಅಲೆಗಳ ಮೇಲೆ ನಗಿಸೋ ಅಳಿಸೋ ಪ್ರಿಯನೋಲೆ..
ದಿನವೂ ಹೊಸದೇ ಸಂದೇಶವಿದೆ
ದಿನವೂ ಹೊಸದೇ ಸಂದೇಶವಿದೆ
ಈ ಜೀವನ ಸರಿಗಮಗಳ ಅಲೆಗಳ ಮೇಲೆ ನಗಿಸೋ ಅಳಿಸೋ ಪ್ರಿಯನೋಲೆ..

ಆಆಆ.. ಓಓಓಓಓ.. ಹೂಂ   ಹೂಂಹೂಂಹೂಂ
ಹರಿದಾಡೋ ಮನ ದೋಣಿಗೆ ಹರಿದೊಳೆ  ಅವನು ಅವಳ ನಿಯಮವಾಳಿಯೇ 
ಸುಳಿದಾಡುವ ಸುಖ ಜಿಂಕೆಯ ಯಜಮಾನ ಅವನು ಅವಳ ಮಾಯ ಅವಳಿಗೆ
ನಗಲು ಕಂಬನಿ ಅಳುವಾಗಲು ಕಂಬನಿ ಸುಳ್ಳಿಗೂ ನಾಲಿಗೆ ವೇದಾಂತಕು ನಾಲಿಗೆ
ಹಗಲಲ್ಲಿ ಇರುಳಾಗಿ ಕಸದಲ್ಲಿ ರಸವಾಗಿ ಉಳಿವ ಜನರೂ ..
ಜೀವನ ಸರಿಗಮಗಳ ಅಲೆಗಳ ಮೇಲೆ ನಗಿಸೋ ಅಳಿಸೋ ಪ್ರಿಯನೋಲೆ..
ದಿನವೂ ಹೊಸದೇ ಸಂದೇಶವಿದೆ
ದಿನವೂ ಹೊಸದೇ ಸಂದೇಶವಿದೆ
ಈ ಜೀವನ ಸರಿಗಮಗಳ ಅಲೆಗಳ ಮೇಲೆ ನಗಿಸೋ ಅಳಿಸೋ ಪ್ರಿಯನೋಲೆ..

ಹೆಣ್ಣು : ಬರಗಾಲದ ಬೆನ್ನಲ್ಲಿಯೇ ಮಳೆಗಾಲ ಬಿರಿದ ನೆಲಕೆ ಪಸೆಯಾಗಿರುವ
           ಅತಿವೃಷ್ಠಿಯ ಅಡಿಯಲ್ಲೇ ಅತಿ ಆಸೆ ಜಗದ ಬದುಕೇ ಹುಸಿಯಾಗಿಸುವ
           ಒಂದೇ ಬಾಳೂ ನಾನ್ ವಿಧ ದೆಸೆಗಳು ಮುಂದೆ ನಾನು ಪೂರ್ವಾಪರ ಮುಖಗಳು
           ಎದೆಯಲ್ಲಿ ವ್ಯಥೆಯಾಗಿ ವ್ಯಥೆಯಲ್ಲಿ ಕಥೆಯಾಗಿ ಒಲವಾಗಿರುವ
ಗಂಡು : ಜೀವನ ಸರಿಗಮಗಳ ಅಲೆಗಳ ಮೇಲೆ ಒಲವ ಚೆಲುವ ಕರೆಯೋಲೆ
            ದಿನವೂ ಹೊಸದೇ ಸಂದೇಶವಿದೆ
            ದಿನವೂ ಹೊಸದೇ ಸಂದೇಶವಿದೆ
            ಈ ಜೀವನ ಸರಿಗಮಗಳ ಅಲೆಗಳ ಮೇಲೆ ಒಲವ ಚೆಲುವ ಕರೆಯೋಲೆ
--------------------------------------------------------------------------------------------------------------------------

No comments:

Post a Comment