441. ಕಥಾನಾಯಕ (೧೯೮೬)

ಕಥಾನಾಯಕ ಚಲನ ಚಿತ್ರದ ಹಾಡುಗಳು 
  1. ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
  2. ಮರಳಿದೆ ಗೂಡಿಗೆ ಹಕ್ಕಿ ಮಿನುಗಿದೆ ಬಾನಲ್ಲಿ ಚುಕ್ಕಿ
  3. ಬಳ್ಳಿಲಿ ಕುಂಬಳಕಾಯಿ 
  4. ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ 
  5. ನೋಯುತಿದೆ 
ಕಥಾನಾಯಕ (1986) - ನನ್ನೆದೆ ವೀಣೆಯು ಮಿಡಿಯುವುದು.....
ಸಂಗೀತ : ಎಂ.ರಂಗರಾವ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿ ಜಯರಾಂ 

ಗಂಡು : ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
           ಹೊಸ ಭಾವಗಳು ಕುಣಿದಾಡುವುದು.....
            ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
           ಹೊಸ ಭಾವಗಳು ಕುಣಿದಾಡುವುದು...ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
           ಅನುರಾಗ ಮೂಡಿದಾಗ....
            ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಗಂಡು : ಎಂದೂ ಕಾಣೆ ನಂಬೂ ಜಾಣೆ ನಿನ್ನಾ ಸೇರಲು
            ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು (ಆ.......ಆ.....ಆ....)
ಹೆಣ್ಣು : ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
          ಒಂಟಿ ಬಾಳು ಸಾಕೆ ಎಂದು ಮನಸೂ ಹೇಳಲು
         ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ (೨)
        ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ (೨)
ಗಂಡು : ಮಿಂಚಿನ ಬಳ್ಳಿಯು ಒಡಲಲಿ ಓಡುತ ನಾಚಿ ನೋಡಿದಾಗ....
ಹೆಣ್ಣು :  ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
           ಹೊಸ ಭಾವಗಳು ಕುಣಿದಾಡುವುದು...ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
           ಅನುರಾಗ ಮೂಡಿದಾಗ....
           ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಹೆಣ್ಣು : ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
          ಸಂಜೆ ಬಂದು ರಂಗು ತಂದು ಮೇಲೆ ಎರಚಲು (ಆ....ಆ....ಆ...)
ಗಂಡು : ತಂಪು ಗಾಳಿ ಬೀಸಿ ಬಳ್ಳಿ ಬಳುಕೀ ಆಡಲು
           ಹಾಗೇ ಹೀಗೆ ಆಡಿ ಹೂವು ಕಂಪೂ ಚೆಲ್ಲಲೂ
          ದುಂಬೀ ನೋಡಿದಾಗ ಸಂಗೀತ ಹಾಡಿದಾಗ
         ದುಂಬೀ ನೋಡಿದಾಗ ಸಂಗೀತ ಹಾಡಿದಾಗ
ಹೆಣ್ಣು : ಮನಸಿನ ಹಕ್ಕಿಯು ಕನಸನು ಕಾಣುತ ದೂರ ಹಾರಿದಾಗ....
ಗಂಡು : ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೆಣ್ಣು : ಹೊಸ ಭಾವಗಳು ಕುಣಿದಾಡುವುದು...ನಿನ್ನ ನೋಡಿದಾಗ..ಕಣ್ಣು ಕೂಡಿದಾಗ
          ಅನುರಾಗ ಮೂಡಿದಾಗ....
ಗಂಡು :  ನನ್ನೆದೆ ವೀಣೆಯು ಮಿಡಿಯುವುದು
ಹೆಣ್ಣು : ಹೊಸರಾಗದಲಿ ಹೊರಹೊಮ್ಮುವುದು
ಗಂಡು : ಆಆಆ... ಆಆಆಅ ...      ಹೆಣ್ಣು : ಆಆಆ... ಆಆಆಅ ...
ಗಂಡು : ಆಆಆ... ಆಆಆಅ ...
--------------------------------------------------------------------------------------------------------------------------

ಕಥಾನಾಯಕ (೧೯೮೬)........ಮರಳಿದೆ ಗೂಡಿಗೆ
ಸಂಗೀತ : ಎಂ.ರಂಗರಾವ್  ಸಾಹಿತ್ಯ : ಆರ್.ಎನ್.ಜಯಗೋಪಾಲ್   ಗಾಯನ : ಪಿ.ಸುಶೀಲ

ಆಆಆ....ಆಆಆಆ .....ಹುಂ......ಹುಂ........
ಮರಳಿದೆ ಗೂಡಿಗೆ ಹಕ್ಕಿ ಮಿನುಗಿದೆ ಬಾನಲ್ಲಿ ಚುಕ್ಕಿ ಜೋಗುಳ ಹಾಡಿದೆ ತಂಗಾಳಿ
ಮಲಗು ಹಾಯಾಗಿ  ಮೈಮರೆತು ಹಾಯಾಗಿ
ಜೋ ಜೋ ಜೋ ಲಾಲಿ  ಜೋ ಜೋ ಜೋ ಲಾಲಿ

ಮಮತೆಯ ಕಾಣದೆ ಬೆಳೆದಿದೆ ಹೂವು ಅರಿತಿದೆ ಅದು ಬರೀ ನೋವು
ಮಮತೆಯ ಕಾಣದೆ ಬೆಳೆದಿದೆ ಹೂವು ಅರಿತಿದೆ ಅದು ಬರೀ ನೋವು
ಒಲವಿನ ನೀನೆರೆರೆದೆ ನೀ ನಗಲು ನಾನು ಜೊತೆ ನಲಿವೆ
ಕಣ್ಣೀರಿರೊಸೆ ಮೆರೆದಾಡುವೆನು
ಕಣ್ಣೀರಿರೊಸೆ ಮೆರೆದಾಡುವೆನು ನಿನ್ನಲೆ ಕರುಳಿನ ಕುಡಿ ಕಾಣುವೆ
ಜೋ ಜೋ ಜೋ ಲಾಲಿ ಜೋ ಜೋ ಜೋ ಲಾಲಿ

ಕಂಡಿಹ ಕನಸಿಗೆ ರೂಪವು ನೀನೆ ಮನಸಿಗೆ ಆಸರೆ ನೀನೇ
ಕಂಡಿಹ ಕನಸಿಗೆ ರೂಪವು ನೀನೆ ಮನಸಿಗೆ ಆಸರೆ ನೀನೇ
ಯಾವುದೊ ಜನ್ಮದಲಿ ಉಂಟಾದ ಬಂಧವು ಸೆಳೆಯುತಿದೆ
ನಮ್ಮೀ ಮನೆಯ ಬೆಳಕಾಗಿರುವೆ
ನಮ್ಮೀ ಮನೆಯ ಬೆಳಕಾಗಿರುವೆ ನನ್ನ ಮಡಿಲ ಮಗುವಾದೆ ನೀ
ಮರಳಿದೆ ಗೂಡಿಗೆ ಹಕ್ಕಿ ಮಿನುಗಿದೆ ಬಾನಲ್ಲಿ ಚುಕ್ಕಿ
ಜೋಗುಳ ಹಾಡಿದೆ ತಂಗಾಳಿ ಮಲಗು ಹಾಯಾಗಿ  ಮೈಮರೆತು ಹಾಯಾಗಿ
ಜೋ ಜೋ ಜೋ ಲಾಲಿ ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ ಜೋ ಜೋ ಜೋ ಲಾಲಿ
--------------------------------------------------------------------------------------------------------------------------

ಕಥಾನಾಯಕ (೧೯೮೬) - ಬಳ್ಳಿಲಿ ಕುಂಬಳಕಾಯಿ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ

ಗಂಡು : ಹೇ..ಏಏಏಏಏ ಹೇ..ಏಏಏಏಏ ಹೇಹೇಹೇಹೇ ಅಆಹಾಹಾ ಅಆಹಾಹಾ ಹೇಹೇ ಅಆಹಾಹಾ ಆಹಾ 
           ಹೊಯ್ ಬಳ್ಳಿಲಿ ಕುಂಬಳಕಾಯಿ ಮರದಲ್ಲಿ ಮಾವಿನಕಾಯಿ
           ಹೀಗ್ಯಾಕೇ ಮಾಡಿದನವನೂ ಹೇಳೂ ನೀ ಜಾಣ... ಓಓಓಓಓ
           ದೇವರು ಬಲು ದಡ್ಡ ಅಹ್ಹಹ್ಹ ಅಹ್ಹಹ್ಹ ಆ ದೇವರು ಬಲು ದಡ್ಡ
           ಹೊಯ್ ಬಳ್ಳಿಲಿ ಕುಂಬಳಕಾಯಿ ಮರದಲ್ಲಿ ಮಾವಿನಕಾಯಿ
           ಹೀಗ್ಯಾಕೇ ಮಾಡಿದನವನೂ ಹೇಳೂ ನೀ ಜಾಣ...
           ದೇವರು ಬಲು ದಡ್ಡ ಆ ದೇವರು ಬಲು ದಡ್ಡ
           ಹೇಹೇ .. ಹೇಹೇಹೇಹೇ .. ಹೇಹೇ  ಹೇಹೇಹೇಹೇ ಲಾಲ ಲಾಲ ಲಾಲ್ಲಲ್ಲ ಲಾಲ್ಲಲ್ಲ
           ಆಹಾ.. ಆಹಾಹಾಹಾ... ಆಹಾ ಲಾಲ ಲಾಲ್ಲಲ್ಲ ಲಾಲ್ಲಲ್ಲ ಒಹೋ...

ಗಂಡು : ಸೀಯಳ ನೀರನೂ ಕೈಚಾಚಿದರೂ ಎಟುಕದಾ ಹಾಗೀಟ್ಟ... ಓಓಓ ..
           ಘಮ ಘಮ ಎನ್ನುವ ಕಂಪನು ಗಂಧದ ಮರದಲಿ ಮುಚ್ಚಿಟ್ಟ.. ಆಹ್ಹಾ..
           ಜೇನಿನ ಗೂಡಿಗೆ ಕಚ್ಚುವ ಹುಳುಗಳ 
           ಜೇನಿನ ಗೂಡಿಗೆ ಕಚ್ಚುವ ಹುಳುಗಳ ಕಾವಲನೂ ಇಟ್ಟ.. ಆಆಆ....
          ಬೇವಿನ ಮರಗಳ ತಬ್ಬಲಿಯಾಗಿ ಬೀದೀಲಿ ಬಿಟ್ಟಾ... ಆಆಆ..
          ಹೀಗ್ಯಾಕೇ ಮಾಡಿದವನೂ ಕೇಳೋ ನೀ ಜಾಣ
           ದೇವರು ಬಲು ದಡ್ಡ ಅಹ್ಹಹ್ಹ ಅಹ್ಹಹ್ಹ ಆ ದೇವರು ಬಲು ದಡ್ಡ
           ಹೊಯ್ ಬಳ್ಳಿಲಿ ಕುಂಬಳಕಾಯಿ ಮರದಲ್ಲಿ ಮಾವಿನಕಾಯಿ
           ಹೀಗ್ಯಾಕೇ ಮಾಡಿದನವನೂ ಹೇಳೂ ನೀ ಜಾಣ...
           ದೇವರು ಬಲು ದಡ್ಡ ಆ ದೇವರು ಬಲು ದಡ್ಡ

ಗಂಡು : ಚಂದದ ನವಿಲಿಗೇ ಕರ್ಕಶವಾದ ಕಂಠವನು ಕೊಟ್ಟ... ಆಆಆ...
           ಕಪ್ಪನೇ ಕೋಗಿಲೇ ಕುಕ್ಕೇಲಿ ಕೊಳಲ ಇಂಪನ್ನೂ ಇಟ್ಟಾ.. ಓಹೋಹೊಹೋ
           ಸುಂದರವಾದ ಜಿಂಕೆಗಳನ್ನ..
           ಸುಂದರವಾದ ಜಿಂಕೆಗಳನ್ನ ಕಾಡಿನಲಿ ಬಿಟ್ಟಾ.. ಆಆಆ....
           ಹಂದಿಗಳನ್ನ ಗೂಬೆಗಳನ್ನ ಗೂಡಿನಲಿ ಇಟ್ಟ... ಓಓಓಓ
          ಹೀಗ್ಯಾಕೇ ಮಾಡಿದವನೂ ಕೇಳೋ ನೀ ಜಾಣ
           ದೇವರು ಬಲು ದಡ್ಡ ಅಹ್ಹಹ್ಹ ಅಹ್ಹಹ್ಹ ಆ ದೇವರು ಬಲು ದಡ್ಡ
           ಹೊಯ್ ಬಳ್ಳಿಲಿ ಕುಂಬಳಕಾಯಿ ಮರದಲ್ಲಿ ಮಾವಿನಕಾಯಿ
           ಹೀಗ್ಯಾಕೇ ಮಾಡಿದನವನೂ ಹೇಳೂ ನೀ ಜಾಣ...
           ದೇವರು ಬಲು ದಡ್ಡ ಅಹ್ಹಹ್ಹ ಅಹ್ಹಹ್ಹ  ಆ ದೇವರು ಬಲು ದಡ್ಡ
           ಹೇಹೇ .. ಹೇಹೇಹೇಹೇ .. ಹೇಹೇ  ಹೇಹೇಹೇಹೇ ಹ್ಹಾಂಹ್ಹಾಂಹ್ಹಾಂಹ್ಹಾಂ   ಆಆಆ...
            ಓಹೋಹೋ..  . ಆಹಾಹಾಹಾ... ಆಹಾ  ಒಹೋ...
--------------------------------------------------------------------------------------------------------------------------

ಕಥಾನಾಯಕ (೧೯೮೬) - ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಕೋರಸ್ 

ಗಂಡು : ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ
            ನನ್ನಂಥ ಸಂಗಾತಿ ನಿನಗೆಲ್ಲೋ ಸಿಕ್ಕಲ್ಲಾ ತಾನಿ ತಂದಾನ
            ನಿನ್ನ ಅಂದ ಕಂಡಾಯ್ತು  ಈಗ ಆಸೇ ಬಂದಾಯ್ತು
            ನಿನ್ನ ಅಂದ ಕಂಡಾಯ್ತು  ಈಗ ಆಸೇ ಬಂದಾಯ್ತು
            ಬಳಿ ಬರದೇ (ಆಆ ) ನಲ್ಲ ಎನ್ನದೇ (ಆಆ ) ತುಟಿ ಕೊಡದೇ (ಆಆ ) ಈಗ ನಿನ್ನನ್ನೂ
            ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ ( ತಂದನನ ತಾನಿತಂದಾನ )
            ನನ್ನಂಥ ಸಂಗಾತಿ ನಿನಗೆಲ್ಲೋ ಸಿಕ್ಕಲ್ಲಾ ತಾನಿ ತಂದಾನ ( ತಂದನನ ತಾನಿತಂದಾನ )
            ಅರೇ .. ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ

ಹೆಣ್ಣು : ತಂದಾನ ತಂದಾನ ತಂದಾನ ತಂದಾನ ತಂದಾನ ತಂದಾನ ತಂದಾನ ತಂದಾನ
          ತಂದಾನ ತಂದಾನ ತಂದಾನ ತಂದಾನ ತಂದಾನ
ಗಂಡು : ಪ್ರೀತಿ ಮಾತನ್ನೂ ಆಡುವೆಯಾ ಒಂದು ಹಾಡನ್ನೂ ಹಾಡುವೇಯಾ
            ಪ್ರೀತಿ ಮಾತನ್ನೂ ಆಡುವೆಯಾ ಒಂದು ಹಾಡನ್ನೂ ಹಾಡುವೇಯಾ
            ಆ ಮರವಾ ಈ ಮರವಾ ಸುತ್ತುವೆಯಾ ನೀನೀಗ
            ಈ ನೆಲದಿ ನಾ ಉರುಳಿ ನೋಡುವೆನು ನಾನೀಗ
            ಪ್ರೀತಿ ಮಾತನಾಡೋಣ... ಸೇರಿ ಒಮ್ಮೆ ಹಾಡೋಣ
            ಪ್ರೀತಿ ಮಾತನಾಡೋಣ... ಸೇರಿ ಒಮ್ಮೆ ಹಾಡೋಣ
            ಹೊಸ ಸುಖವಾ (ಆಆ ) ಹೊಸತನವ (ಆಆ ) ಮೊದಮೊದಲು (ಆಆ ) ನಾವೂ ಕಾಣೋಣ
            ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ ( ತಂದನನ ತಾನಿತಂದಾನ )
            ಅರೇ .. ನನ್ನಂಥ ಸಂಗಾತಿ ನಿನಗೆಲ್ಲೋ ಸಿಕ್ಕಲ್ಲಾ ತಾನಿ ತಂದಾನ ( ತಂದನನ ತಾನಿತಂದಾನ )
            ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ

ಕೋರಸ್ : ತಂದಾನನನ  ತಂದಾನನನನ ತಂದಾನನನನ ತಂದಾನನನನ ತಂದಾನನನನ
                ತಂದಾನನನನ ತಂದಾನನನನ ತಂದಾನನನನ ತಂದಾನನನನ
ಹೆಣ್ಣು : ಆಆಆಆ...  ತಂದಾನ ತಂದಾನತಂದಾನ ತಂದಾನ (ಆಆಆ... ಆಆಆ... )
          (ತಂದಾನನನನ ತಂದಾನನನನ ತಂದಾನನನನ ತಂದಾನನನನ )
ಗಂಡು : ನನ್ನ ಕಣ್ಣ ತುಂಬಾ ತುಂಬಿರುವೇ ನನ್ನಾ ಮನದಲ್ಲಿ ನಿಂತಿರುವೇ
           ನನ್ನ ಕಣ್ಣ ತುಂಬಾ ತುಂಬಿರುವೇ ನನ್ನಾ ಮನದಲ್ಲಿ ನಿಂತಿರುವೇ
           ರಾತ್ರಿಯಲಿ ಕನಸಿನಲಿ ನೀ ಬರುವೇ ಹಾಡುತ್ತಾ
           ನಾ ಕರಗಿ ಹೋಗುವೇನೂ ಆ ಸೊಗಸು ನೋಡುತ್ತಾ
           ಒಂಟಿ ಬಾಳು ಸಾಕಾಯ್ತು... ಈಗ ಜೋಡಿ ಬೇಕಾಯ್ತು.. ಅಹ್ಹಹ್ಹಹ್ಹಾ ...
          ಒಂಟಿ ಬಾಳು ಸಾಕಾಯ್ತು... ಈಗ ಜೋಡಿ ಬೇಕಾಯ್ತು
          ಪ್ರತಿ ಇರುಳೂ.. (ಆಆ ) ಹೊಸ ಇರುಳೂ (ಆಆ ) ಜೊತೆ ಇರಲೂ (ಆಆ )  ನಂದೂ ನನ್ನನ್ನೂ
          ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ ( ತಂದನನ ತಾನಿತಂದಾನ )
          ಅರೇ .. ನನ್ನಂಥ ಸಂಗಾತಿ ನಿನಗೆಲ್ಲೋ ಸಿಕ್ಕಲ್ಲಾ ತಾನಿ ತಂದಾನ ( ತಂದನನ ತಾನಿತಂದಾನ )
          ನಿನ್ನ ಅಂದ ಕಂಡಾಯ್ತು  ಆಆ .. ಈಗ ಆಸೇ ಬಂದಾಯ್ತು
          ನಿನ್ನ ಅಂದ ಕಂಡಾಯ್ತು  ಈಗ ಆಸೇ ಬಂದಾಯ್ತು
          ಬಳಿ ಬರದೇ (ಆಆ ) ನಲ್ಲ ಎನ್ನದೇ (ಆಆ ) ತುಟಿ ಕೊಡದೇ (ಆಆ ) ಈಗ ನಿನ್ನನ್ನೂ
          ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ
          ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ
          ನಿನ್ನಂಥ ಮುದ್ದಾದ ಹೆಣ್ಣನ್ನೂ ಕಂಡಿಲ್ಲಾ ತಾನಿ ತಂದಾನ
--------------------------------------------------------------------------------------------------------------------------

ಕಥಾನಾಯಕ (೧೯೮೬) - ನೋಯುತಿದೆ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಉಮಾ ರಾಮನ, ಕೋರಸ್ 

ಹೆಣ್ಣು :  ಆಆಆ... ಆಆಆ.... ಆಆಆ... ಆಆಆ...
ಕೋರಸ್ :  ಓಓಓಓಓಓ... ಓಓಓಓಓ  ಓಓಓಓಓಓ... ಓಓಓಓಓ
ಹೆಣ್ಣು : ನೋಯುತಿದೇ ಕೈಗಳು ಪಾಪ ಮಿಂಚುತಿದೇ ಕಣ್ಣಿನ ಕೋಪ
          ಒಬ್ಬಳೇ ಒಂಟೀ ಕಣ್ಣೀರೂ ಕಂಡರೇ ಅಯ್ಯೋ ಪಾಪ ಏಕೇ ಹೇಗಾಯ್ತೇ...
ಕೋರಸ್ : ನೋಯುತಿದೇ ಕೈಗಳು ಪಾಪ ಮಿಂಚುತಿದೇ ಕಣ್ಣಿನ ಕೋಪ
          ಒಬ್ಬಳೇ ಒಂಟೀ ಕಣ್ಣೀರೂ ಕಂಡರೇ ಅಯ್ಯೋ ಪಾಪ ಏಕೇ ಹೇಗಾಯ್ತೇ...

ಕೋರಸ್ : ಬಪ್ಪರೇ ಬಪ್ಪಾ ಬಪ್ಪರೇ ಬಪ್ಪಾ ಬಪ್ಪರೇ ಬಪ್ಪಾ
ಹೆಣ್ಣು : ಲಲಾಲಾ ಲಲಲಲಾ ಲಲಾಲಾ ಲಲಲಲಾ ನೀ ಇಲ್ಲಿ ಎಂಕಾಂಗಿಯೂ
ಕೋರಸ್ : ಹಸಿವೂ ದಾಹದಿಂದ ಬಳಲು ಪರದೇಸೀಯೂ
ಹೆಣ್ಣು : ಓಓಓಓಓ ... ನೀ ಎಂಥಾ ಸಂಗಾತಿಯೂ
ಕೋರಸ್ : ಹಿಂದೆ ಮುಂದೆ ಧೈರ್ಯ ತಂದ ಸನ್ಯಾಸಿಯೂ
ಹೆಣ್ಣು : ಮಂದಿ ನಮ್ಮ ಜೊತೆ ಈ ರೋಡಿನಂತೇ ಹಿಂದೆ ಹೋಗೋ ಜೋತೆ ನೀ ಮುಳ್ಳಿನಂತೇ
ಕೋರಸ್ : ಮುಖ ಗಂಟಾಗಿದೆ ನವಿಲೂ ಕೂಗ್ತಾಯಿದೇ
ಹೆಣ್ಣು : ಸದಾ ಅಂಜಿಕೆಯೇ ನಾಚಿಕೆಯೇ ಮಧುಮಗಳಂತೇ...
ಕೋರಸ್ : ಅಯ್ಯೋ... ಅಯ್ಯಯ್ಯೋ...
ಹೆಣ್ಣು : ನೋಯುತಿದೇ (ಕೈಗಳು ಪಾಪ)  ಮಿಂಚುತಿದೇ( ಕಣ್ಣಲಿ ಕೋಪ )
ಕೋರಸ್ : ಒಬ್ಬಳೇ ಒಂಟೀ ಕಣ್ಣೀರೂ ಕಂಡರೇ ಅಯ್ಯೋ ಪಾಪ ಏಕೇ ಹೇಗಾಯ್ತೇ...

ಹೆಣ್ಣು : ಮೈಯ್ಯಿ ಬೆವತು ಬಾಯಾರಿತೇ
ಕೋರಸ್ : ತಂಪು ಮಾಡಿ ನೀರು ಬಯಕೇ ನಾ ಬೇಡುವೇ
ಹೆಣ್ಣು : ಆಆಆ ... ಈ ಆಟ ಸಾಕಾಯಿತೇ
ಕೋರಸ್ : ಆಟ ವಯಸು ಇಷ್ಟು ಬೇಗ ಆಯಾಸವೇ
ಹೆಣ್ಣು : ಗಂಡಿನ ಛಲವೆಲ್ಲಾ ಹೋಯ್ತೆ ಮರೆಯಾಗಿ ಮೀಸೆಗೂ ಬೆಲೆ ಹೋಯ್ತು ಅನ್ಯಾಯವಾಗಿ
ಕೋರಸ್ :ಹೆಣ್ಣು ಕಂಡಾಗಲೇ ಚಳಿ ಬಂದಂತಿದೇ           
ಹೆಣ್ಣು : ಭಲೇ ಹೇಡಿಗಳ ಹೆಣ್ಣಿಗರ ನಾಯಕ ನೀನೇ...
ಕೋರಸ್ : ಅಯ್ಯೋ... ಅಯ್ಯಯ್ಯೋ...
ಎಲ್ಲರು : ನೋಯುತಿದೇ ಕೈಗಳು ಪಾಪ  ಮಿಂಚುತಿದೇ ಕಣ್ಣಲಿ ಕೋಪ
             ಒಬ್ಬಳೇ ಒಂಟೀ ಕಣ್ಣೀರೂ ಕಂಡರೇ ಅಯ್ಯೋ ಪಾಪ ಏಕೇ ಹೇಗಾಯ್ತೇ...
             ಅಯ್ಯೋ ಪಾಪ ಏಕೇ ಹೇಗಾಯ್ತೇ... ಅಯ್ಯೋ ಪಾಪ ಏಕೇ ಹೇಗಾಯ್ತೇ...
--------------------------------------------------------------------------------------------------------------------------

No comments:

Post a Comment