443. ಸಾಹಸ ಸಿಂಹ (1982)


ಸಾಹಸ ಸಿಂಹ ಚಿತ್ರದ ಹಾಡುಗಳು 
  1. ಮರೆಯದ ನೆನಪನು ಎದೆಯಲ್ಲಿ ತಂದೇ ನೀನೂ 
  2. ಹೇಗಿದ್ದರೂ ನೀನೇ ಚೆನ್ನಾ 
  3. ಬಿಟ್ಟರೇ ಸಿಗಲಾರ ಇಂಥ ಸುಕುಮಾರ 
  4. ಇನ್ನು ಎಂದೂ ನನ್ನ ಬಿಟ್ಟು 
ಸಾಹಸ ಸಿಂಹ (1982) - ಮರೆಯದಾ ನೆನಪನು ಎದೆಯಲ್ಲಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್  ಸಂಗೀತ: ಸತ್ಯಂ  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ.


ಹೂಂಹೂಂಹೂಂಹುಂ  ಲಾಲಾಲಾ ಲಾಲಾಲಾ
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೇ...
ಹೇ... ನಿನಗಾಗಿ ಅರಸಿ ಬಂದೇ ನೀನೆಲ್ಲೋ ಅಲ್ಲೇ ನಾನೂ
(ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ  ಲಾಲಾಲ್ಲಲ್ಲಲ್ಲಲ್ಲ  )

ಕನಸಲ್ಲು ನಿನ್ನಾ ರೂಪಾ ಈ ಮನದಲ್ಲಿ ತರಲು ತಾಪಾ
ಕಣ್ಣಲ್ಲಿ ಮುಚ್ಚಿ ನಿನ್ನಾ ನಾ ಕರೆದೊಯ್ವ ಆಸೆ ಚಿನ್ನಾ
ನಗುವೆಂಬ ಬಲೆಯ ಬೀಸೀ ನಾ ನುಡಿಯಲ್ಲಿ ಜೇನ ಸೂಸೀ
ಸೆರೆಹಿಡಿವೆ ಬಿಡದೆ ನಿನ್ನಾ....
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

(ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ  ಲಾಲಾಲ್ಲಲ್ಲಲ್ಲಲ್ಲ  )
ಮಿಂಚಂತೆ ಸುಳಿದು ನೀನು ಮರೆಯಾಗೆ ಹೋದರೇನೂ
ಸುಳಿವನ್ನು ತಿಳಿಯಬಲ್ಲಾ ಹೊಸ ಮೋಡಿ ಬಲ್ಲೇ ನಾನೂ
ಬಾಳಲ್ಲಿ ಬಿಡಿಸದಂತಾ ಎಂದೆಂದು ಮುಗಿಯದಂತಾ
ಬಂಧನದೆ ಹಿಡಿವೆ ನಿನ್ನಾ....
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೇ... 
ಹೇ ಹೇ... ನಿನಗಾಗಿ ಅರಸಿ ಬಂದೇ ನೀನೆಲ್ಲೋ ಅಲ್ಲೇ ನಾನೂ
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಲ್ಲಲ್ಲಲ್ಲಲ್ಲ ಲಾಲ್ಲಲ್ಲಲ್ಲಲ್ಲ  
-----------------------------------------------------------------------------------------------------------------------

ಸಾಹಸ ಸಿಂಹ (1982) - ಹೇಗಿದ್ದರೂ ನೀನೇ ಚೆನ್ನ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ ಗಾಯನ: ವಿಷ್ಣುವರ್ಧನ, ರೇಣುಕಾ 


ಗಂಡು : ಹೇಹೇ.. ಹ್ಹಾಹ್ಹಾ..
           ಹೇಹೇ ಹೇಗಿದ್ದರೂ ನೀನೇ ಚೆನ್ನಾ ನನ್ನಾಣೆ ನೀ ನಂಬು ನನ್ನ 
           ಆ ರಂಭೆ ನಾಚಬೇಕು ನಿನ್ನಂದ ನೋಡಿ ಚಿನ್ನ 
           ಹೇಗಿದ್ದರೂ(ಹ್ಹಾಂ ) ನೀನೇ ಚೆನ್ನಾ ನನ್ನಾಣೆ ನೀ (ಹೂಂ ) ನಂಬು ನನ್ನ 
           ಆ ರಂಭೆ ನಾಚಬೇಕು ನಿನ್ನಂದ ನೋಡಿ ಚಿನ್ನ 
           ಹೇಗಿದ್ದರೂ(ಹ್ಹಾಂ ) ನೀನೇ ಚೆನ್ನಾ 

ಗಂಡು : ಅಹ್ಹಹ್ಹಾ.. ಅಹ್ಹ.. ಅಹ್ಹ.. 
           ಹೇಹೇ ತಾವರೇ ಹೂವಂತ ಕಣ್ಣಿಲ್ಲ (ಏನೋ)
            ಸಂಪಿಗೆ ಹೂವಂತ ಮೂಗಿಲ್ಲಾ (ಅಹಾ ಹಾ)
            ಹವಳದ ತುಟಿಯಂತೇ ತುಟಿಯಿಲ್ಲ (ಆಯ್ ಸಿ )
            ಹುಣ್ಣಿಮೆ ಶಶಿಯಂತೇ ಮೊಗವಿಲ್ಲಾ (ವಾಟ್)
            ಲತೆಯಂತೆ ನಡುವೂ (ಹೊಯ್) ನವಿಲಂತೆ ನಡೆಯೂ (ಯೂ )
            ನನ್ನಾಣೆ ನಿನಗಿಲ್ಲಾ ಅಹ್ಹ ಅಹ್ಹ ಅಹ್ಹ
           ಹೇಗಿದ್ದರೂ ನೀನೇ ಚೆನ್ನಾ ನನ್ನಾಣೆ ನೀ ನಂಬು ನನ್ನ 
           ಆ ರಂಭೆ ನಾಚಬೇಕು ನಿನ್ನಂದ ನೋಡಿ ಚಿನ್ನ 
           ಹೇಗಿದ್ದರೂ(ಹ್ಹಾಂ ) ನೀನೇ ಚೆನ್ನಾ 

ಗಂಡು : ಸಾವಿತ್ರೆಯಂತೆ ಬಿಳುಪಲ್ಲಾ (ಸಾಕೂ ಸಾಕು )
           ಗಾಯಿತ್ರಿಯಂತೇ ಕೆಂಪಲ್ಲ (ಯು ಹ್ಯಾವ್ ನಾಟೀ )
          ಕಾವೇರಿಯಷ್ಟು ಕಪ್ಪಲ್ಲ (ಹೂಂ )
         ನಿನ್ನಂದ ಹೇಳೋಕೆ ಟೈಮಿಲ್ಲ (ಹೌದು ಹೌದು )
         ದನಿಯಲ್ಲಿ ಇಂಪಿಲ್ಲ ಮಾತಲ್ಲಿ ಸೊಗಸಿಲ್ಲಾ ನಿನ್ನಾಣೆ ಸುಳ್ಳಲ್ಲಾ
        ಆಹ್ಹ.. ಹೇಗಿದ್ದರೂ(ಹ್ಹಾಂ ) ನೀನೇ ಚೆನ್ನಾ ನನ್ನಾಣೆ ನೀ (ಪ್ಲೀಸ್ ) ನಂಬು ನನ್ನ
        ಆ ರಂಭೆ ನಾಚಬೇಕು ನಿನ್ನಂದ ನೋಡಿ ಚಿನ್ನ
       ಹೇಗಿದ್ದರೂ(ಹ್ಹಾಂ ) ನೀನೇ ಚೆನ್ನಾ ಹ್ಹಹ್ಹಹ್ಹ ಹಹ್ಹಹ್ಹಹ್ಹ (ಹ್ಹ) ಹ್ಹಹ್ಹಹ್ಹ
-----------------------------------------------------------------------------------------------------------------------

ಸಾಹಸ ಸಿಂಹ (1982) - ಬಿಟ್ಟರೇ ಸೀಗಲಾರ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.

ಹೇ.. ಓಡಿ ಹೋದರೇ ಬಿಡುವೇನೇ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ
 ಓಡಿ ಹೋದರೇ ಬಿಡುವೇನೇ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ...  ಹ್ಹಾಂ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ...  ಹ್ಹಾಂ  

ಪ್ರಾಣದಂತೆ ಇವನೂ ನಿನ್ನ ಪ್ರೀತಿಸುವಾ
ಪ್ರೇಮದಿಂದ ತಂಗಿ ನಿನ್ನ ಮುದ್ದಿಸುವಾ
ಅರೇ.. ಪ್ರಾಣದಂತೆ ಇವನೂ ನಿನ್ನ ಪ್ರೀತಿಸುವಾ
ಪ್ರೇಮದಿಂದ ತಂಗಿ ನಿನ್ನ ಮುದ್ದಿಸುವಾ
ನಿನ್ನ ಕೊರಳಿಗೇ ತಾಳಿಯ ಕಟ್ಟಿ ವರುಷದೊಳಂದು ತೊಟ್ಟಿಲ ಕಟ್ಟೀ
ಜೋ ಜೋ ಎಂದೂ ಜೋಗುಳವನ್ನೂ ಹಾಡಿಸುವಾ
ಒಳೊಳಲಾಯಿ  ಒಳೊಳಲಾಯಿ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ... ಹ್ಹಾಂ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ... ಹ್ಹಾಂ
ಅರೇ.. ಓಡಿ ಹೋದರೇ ಬಿಡುವೇನೇ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ... ಅಹಹ್ಹ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ... ಹ್ಹಾಂ

ಅಣ್ಣನಾದ ನಾನು ಲೈಸೆನ್ಸ್ ಕೊಟ್ಟಿರುವೇ
ಮೀಸೆ ಹೊತ್ತ ಮಗನೇ ಏಕೋ ಹೆದರಿರುವೇ
ಅಣ್ಣನಾದ ನಾನು ಲೈಸೆನ್ಸ್ ಕೊಟ್ಟಿರುವೇ
ಮೀಸೆ ಹೊತ್ತ ಮಗನೇ ಏಕೋ ಹೆದರಿರುವೇ
ತೊಳಲಿ ಅವಳ ಸೊಂಟವ ಬಳಸು
ಕೆನ್ನೆಯ ಮೇಲೆ ಮುತ್ತನು ಇರಿಸೂ
ಗಂಡು ನೀನು ಎಂಬುದನೇಕೇ ಮರೆತಿರುವೇ.. ಹೋಗೂ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ...
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ...
ಅರೇ.. ಓಡಿ ಹೋದರೇ ಬಿಡುವೇನೇ ನಾನು ನಿನ್ನ
ನೋಡು ಈತನ ನಡಿಗೆಯೂ ಎಂಥ ಚೆನ್ನ
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ...
ಬಿಟ್ಟರೇ ಸೀಗಲಾರ ತಂಗಿ ಇಂಥ ಸುಕುಮಾರ... ಹ್ಹಾಂ.. ಹ್ಹ
-----------------------------------------------------------------------------------------------------------------------
ಸಾಹಸ ಸಿಂಹ (1982) - ಇನ್ನೂ ಎಂದೂ ನನ್ನ ಬಿಟ್ಟು
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ., ಎಸ್ ಜಾನಕೀ  

ಹೆಣ್ಣು : ಇನ್ನೂ ಎಂದೂ ನನ್ನ ಬಿಟ್ಟೂ ದೂರ ಹೋಗಲಾರೇ ನೀನೂ ಗೊತ್ತೇನೂ ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ..  ಸಮಜೀ.. ಪಗಲೀ
ಹೆಣ್ಣು : ನಿನ್ನೆಗಿಂತ ಇಂದೇ ಚೆನ್ನ ನಾಳೆ ನಮಗೇ ಇನ್ನೂ ಚೆನ್ನ ಗೊತ್ತೇನೂ ಹೇ ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ..

ಹೆಣ್ಣು : ಸಂತೋಷ ಹೆಚ್ಚಾಗಿ ನಾನಿಂದೂ ಹುಚ್ಚಾಗಿ ನಿನಗಾಗಿ ಹುಡುಕಾಡಿದೇ
          ಏನೇನೋ ಹೇಳೋಕೇ ನಾನಲ್ಲಿ ಬಂದಾಗ ಆನಂದ ತಡೆಯಾಗಿದೇ
ಗಂಡು : ಸಂತೋಷ ಹೆಚ್ಚಾಗಿ ಸಂಗೀತ ಹಾಡೋದು ನನಗಿಂದೂ ಹೊಸದಾಗಿದೆ
            ಹೆಣ್ಣಾದ ನೀ ಹೀಗೇ ಸಂಕೋಚ ಮರೆತಾಗ ನನಗೇಕೋ ಭಯವಾಗಿದೇ.... ಹೇಹೇಹೇ
ಹೆಣ್ಣು : ಭಯವೇಕೇ ನಾನಿಲ್ಲಿ ಜೊತೆಯಾಗಿ ಇಲ್ಲವೇ
          ಇನ್ನೂ ಎಂದೂ ನನ್ನ ಬಿಟ್ಟೂ ದೂರ ಹೋಗಲಾರೇ ನೀನೂ ಗೊತ್ತೇನೂ ಹೇ.. ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ..

ಗಂಡು : ಬಿಸಿಲಲ್ಲಿ ಓಡೋಡಿ ಈ ಕೆನ್ನೇ ಕೆಂಪಾಯಿತು ನೆರಳಲ್ಲಿ ನಿಲ್ಲಬಾರದೇ
           ಬಳುಕುತ್ತ ಕುಣಿವಾಗ ಉಳುಕಿತ್ತು ನಡು ಹೆಣ್ಣೇ ನೀ ಸುಮ್ಮನಿರಬಾರದೇ
ಹೆಣ್ಣು : ಬಿಸಿಲೇನೂ ಮಳೆಯೇನೂ ಗುಡುಗೇನೂ ಸಿಡಿಲೇನೂ ಜೊತೆಯಲ್ಲಿ ನೀನಿಲ್ಲವೇ
          ಹಿತವನ್ನೂ ತುಂಬೋಕೆ ಸುಖವನ್ನೂ ನೀಡೋಕೇ  ಒಲವೆಂಬ ಸುಧೆಯಿಲ್ಲವೇ
ಗಂಡು : ನಿಜವನ್ನೂ ಹೇಳೋಕೇ ಇದು ಕಾಲವಲ್ಲವೇ
ಹೆಣ್ಣು : ಇನ್ನೂ ಎಂದೂ ನನ್ನ ಬಿಟ್ಟೂ ದೂರ ಹೋಗಲಾರೇ ನೀನೂ ಗೊತ್ತೇನೂ ಹೇ.. ಗೊತ್ತೇನೂ
ಗಂಡು : ನಾನೆಲ್ಲೂ ನೀನಲ್ಲೇ ನೀನೆಲ್ಲೋ ನಾನೆಲ್ಲೇ ಇನ್ನೇನ್ನೂ..
-----------------------------------------------------------------------------------------------------------------------

No comments:

Post a Comment